ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 6

ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಿತಿನ್ ಜೇಕಬ್   ಪ್ರಾಯ:30  ವರ್ಷ ತಂದೆ: ಜೇಕಬ್ ಜೋನ್ ವಾಸ: ವಿಷ್ಣಡ್ಕ ಮನೆ,ಮರ್ದಾಳ ಅಂಚೆ ಬಂಟ್ರ ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದಿರವರು ದಿನಾಂಕ:26.12.2021 ರಂದು ತನ್ನ ಮೋಟಾರ್‌ ಸೈಕಲ್‌ನಲ್ಲಿ ಕಡಬಕ್ಕೆ ಬಂದು ನಂತರ ಮನೆಗೆ ಹೋಗುವರೇ ಧರ್ಮಸ್ಥಳ–ಮರ್ದಾಳ-ಸುಬ್ರಹ್ಮಣ್ಯ ರಾಜ್ಯ ರಸ್ತೆಯಯಲ್ಲಿ ಹೋಗುತ್ತಿರುವಾಗ ಕಡಬ ತಾಲೂಕು ಬಂಟ್ರ ಗ್ರಾಮದ ಚಾಕೋಟೆಕೆರೆ ಎಂಬಲ್ಲಿಗೆ ಸಮಯ ಸಂಜೆ 17.15 ಗಂಟೆಗೆ ತಲುಪಿದಾಗ ಪಿರ್ಯಾದುದಾರರ ಎದುರುಗಡೆಯಿಂದ KA-21 Y-8601 ನೇ ಮೋಟಾರ್‌ ಸೈಕಲ್‌ ಸವಾರನೊಬ್ಬನು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದು ಅದೇ ಸಮಯಕ್ಕೆ ಇಚಿಲಂಪಾಡಿ ಕಡೆಯಿಂದ KA-05 AE-8035 ನೇ ಕಾರೊಂದರ ಸವಾರನು ತೀರಾ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿಕೊಂಡು ಬಂದು ಆತನ ಎದುರು ಬರುತ್ತಿದ್ದ ಆಟೋ ರಿಕ್ಷಾವನ್ನು ಹಿಂದಿಕ್ಕುವ ಬರದಲ್ಲಿ ವೇಗವಾಗಿ ರಸ್ತೆಯ ತೀರ ಬಲಬದಿಗೆ ಬಂದು ಎದುರಿನಿಂದ ಬರುತಿದ್ದ  KA-21 Y-8601 ನೇ ಮೋಟಾರ್‌ ಸೈಕಲ್‌ಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಸದ್ರಿ ಮೊಟಾರ್‌ ಸೈಕಲ್‌ ಸವಾರನಿಗೆ, ಬಲಬದಿಯ ಕೈಗೆ ರಕ್ತಗಾಯವಾಗಿರುತ್ತದೆ ಹಾಗೂ  ಮತ್ತು  ಬಲ ಕಾಲಿಗೆ ಹಾಗೂ ಇತರ ಮೈಮೇಲೆ ತರಚಿದ ಗಾಯವಾಗಿರುತ್ತದೆ. ತಕ್ಷಣ ಪಿರ್ಯಾದುದಾರರು  ಮತ್ತು  ಸಾರ್ವಜನಿಕರು ಉಪಚರಿಸಿದ್ದು ನಂತರ ಗಾಯಗೊಂಡ ಮೋಟಾರ್‌ ಸೈಕಲ್  ಸವಾರ  ಜರೋಮ್‌ ಬಾಬು ಎಂಬಾತನನ್ನು  ಪಿರ್ಯಾದುದಾರರು  ಮತ್ತು ಆತನ ಸ್ನೇಹಿತನಾದ ಶರತ್‌ ಎಂಬವರು ಖಾಸಗಿ ವಾಹನದಲ್ಲಿ ಗಾಯಾಳುವನ್ನು ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಮಾಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಸೂಚಿಸಿದಂತೆ 108 ಅಂಬ್ಯುಲೆನ್ಸ್ ವಾಹನದಲ್ಲಿ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 109/2021 ಕಲಂ: 279,337 ಐ ಫಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಮೇಶ್ ಎಂ ಜೆ. ಪ್ರಾಯ: 30 ವರ್ಷ ತಂದೆ: ಜಾರಪ್ಪ ಪೂಜಾರಿ, ವಾಸ:ಮತ್ತಿಕಟ್ಟೆ ಮನೆ, ಮತ್ತಿಕಟ್ಟೆ ಅಂಚೆ, ಮೂಡಿಗೆರೆ ತಾಲೂಕು ಚಿಕ್ಕಮಗಳೂರು ಎಂಬವರ ದೂರಿನಂತೆ ದಿನಾಂಕ: 26-12-2021 ರಂದು ಪಿರ್ಯಾದಿದಾರರು ಕೆ ಎ 03 ಎಂ ಎ 7659 ನೇ ಕಾರಿನಲ್ಲಿ ಬಣಕಲ್ ಗೆ ಹೋಗುವರೇ ಚಾರ್ಮಾಡಿ –ಕೊಟ್ಟಿಗೆಹಾರ ರಸ್ತೆಯಲ್ಲಿ ಕಾರನ್ನು ಚಲಾಯಿಸುತ್ತಾ ಸಮಯ ಸುಮಾರು ಸಂಜೆ 6:00 ಗಂಟೆಗೆ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಅಡಕ್ಕೆತ್ತೂರು ತಿರುವು ಬಳಿ ತಲುಪಿದಾಗ ಅವರ ವಿರುದ್ದ ದಿಕ್ಕಿನಿಂದ ಅಂದರೆ ಕೊಟ್ಟಿಗೆಹಾರ ಕಡೆಯಿಂದ ಚಾರ್ಮಾಡಿ ಕಡೆಗೆ  ಕೆ ಎ 48 ಎನ್ 2376 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿಗೆ ಹಾಗೂ ಕಾರಿನಲ್ಲಿದ್ದ ರಾಜೇಶ್, ಮುರಳಿ, ಸುನಿಲ್, ಸಚಿನ್ ರವರಿಗೆ ಗುದ್ದಿದ ಗಾಯಗಳಾಗಿದ್ದುದ್ದಲ್ಲದೆ, ಅಪಘಾತ ನಡೆಸಿದ  ಕಾರಿನ ಚಾಲಕ ಲಕ್ಷ್ಮಣ ಮತ್ತು ಅದರಲ್ಲಿದ್ದ ಬಸಪ್ಪ, ಸಿದ್ದಪ್ಪ, ಶೇಖವ್ವ ರವರಿಗೂ ಗುದ್ದಿದ ಗಾಯಗಳಾಗಿದ್ದು, ಅಲ್ಲಿ ಸೇರಿದ್ದ ಸಂತೋಷ್ ಹಾಗೂ ಇತರ ಸಾರ್ವಜನಿಕರು ಉಪಚರಿಸಿ ಅಂಬುಲೆನ್ಸ್ ಒಂದರಲ್ಲಿ ಚಿಕಿತ್ಸೆಯ ಬಗ್ಗೆ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಿಸಿದ್ದು, ಇವರ ಪೈಕಿ ಗಾಯಾಳುಗಳಾದ ರಾಜೇಶ್ ಮತ್ತು ಸಚಿನ್ ಎಂಬವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 98/2021, ಕಲಂ; 279,337ಭಾದಂ.ಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬೂಬಕ್ಕರ್ ಪ್ರಾಯ: 48 ವರ್ಷ ತಂದೆ: ಜಿ..ಹಕೀಂ ವಾಸ: ಗೂಡಿನಬಳಿ ಮನೆ, ಬಿ-ಮೂಡ ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 26-12-2021 ರಂದು ಪಿರ್ಯಾದಿದಾರರು ತನ್ನ ಬಾಬ್ತು  KA-19AC-1863  ನೇ ಆಟೋರಿಕ್ಷಾದಲ್ಲಿ ಬಾಡಿಗೆ ನಿಮಿತ್ತ ಫರಂಗಿಪೇಟೆಗೆ ಹೋಗಿ ವಾಪಾಸ್ಸು ಬಿ.ಸಿ.ರೋಡ್ ಗೆ  ಆಟೋರಿಕ್ಷಾವನ್ನು  ಚಲಾಯಿಸಿಕೊಂಡು  ಬರುತ್ತಾ ಸಮಯ ಸುಮಾರು ಬೆಳಿಗ್ಗೆ 10:00 ಗಂಟೆಗೆ  ಬಂಟ್ವಾಳ ತಾಲೂಕು ತುಂಬೆ ಗ್ರಾಮದ  ಕೆಳಗಿನ ತುಂಬೆ ಎಂಬಲ್ಲಿಗೆ  ತಲುಪಿದಾಗ  ಪಿರ್ಯಾದಿದಾರರ ಹಿಂದಿನಿಂದ  ಅಂದರೆ  ಫರಂಗಿಪೇಟೆ ಕಡೆಯಿಂದ  KA-19MB-7889 ನೇ ಕಾರನ್ನು ಅದರ ಚಾಲಕ ಸಂತೋಷ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಓವರ್ ಟೇಕ್ ಮಾಡಿ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರು ಚಲಾಯಿಸುತ್ತಿದ್ದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾವು ಮಗುಚಿ ಬಿದ್ದು ಅಪಘಾತವಾಗಿದ್ದು ಅಪಘಾತದಲ್ಲಿ ಪಿರ್ಯಾದಿದಾರರ  ಬಲಕೈ ಮಣಿಗಂಟಿಗೆ ತಟ್ಟಿದ ಗುದ್ದಿದ ಗಾಯವಾಗಿದ್ದವರು ಚಿಕಿತ್ಸೆಯ ಬಗ್ಗೆ ಕೊಲಸೊ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 147/2021  ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಿವರಾಜ್‌ ಗೌಡ ಯಾನೆ ಎಸ್‌ ಎಸ್‌ ನೀಲನ ಗೌಡ   ಪ್ರಾಯ 35 ತಂದೆ: ಶಂಕರ ಗೌಡ ವಾಸ: ಮಾರುತಿ ನಗರ   3ನೇ ಕ್ರಾಸ್ ಇಜಾರಿ ಲಕ್ಮಪುರ,  ಹಾವೇರಿ ತಾಲೂಕು ಹಾವೇರಿ ಜಿಲ್ಲೆ  ಎಂಬವರ ದೂರಿನಂತೆ ಪಿರ್ಯಾದಿರವರು ತನ್ನ ಬಾಬ್ತು ಕೆಎ 27 ಬಿ 5189 ನೆ ತೂಫಾನ್‌ ವಾಹನದಲ್ಲಿ ತನ್ನ ಊರಿನ ಬಸವರಾಜ್‌, ಚಂದ್ರು,  ಎಮ್‌ ಬಾರ್ಕಿ ಮತ್ತು ಇತರರೊಂದಿಗೆ ಧರ್ಮಸ್ಥಳಕ್ಕೆ ಬಂದು ಪೂಜೆ ಮುಗಿಸಿ ಈ ದಿನ 27.12.2021 ರಮದು ಧರ್ಮಸ್ಥಳದಿಂದ 12.45 ಗಂಟೆಗೆ ಹಾವೇರಿಗೆ ಹೊರಟು ಹೋಗುತ್ತಾ ಮದ್ಯಾಹ್ಯ ಸುಮಾರು 14.30 ಗಂಟೆಗೆ ಬೆಳ್ತಂಗಡಿ  - ಕಾರ್ಕಳ ಸಾರ್ವಜನಿಕ ಡಾಮರು ರಸ್ತೆಯ ನಾರವಿ ಗ್ರಾಮದ ಮಂಜುನಗರ  ಎಂಬಲ್ಲಿಗೆ ತಲುಪಿದಾಗ ತನ್ನ ಎದುರಿನಿಂದ ಅಂದರೆ  ಕಾರ್ಕಳ ಕಡೆಯಿಂದ ಕೆಎ 51 ಎಮ್‌ ಆರ್‌ 1595 ನೇ ಕಿಯಾ ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಬಲ ಬದಿಗೆ ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ತೂಫಾನ್‌ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಎರಡು ವಾಹನಗಳು ಜಖಂಗೊಂಡಿರುವುದಲ್ಲದೇ ಕೀಯಾ ಕಾರಿನಲ್ಲಿದ್ದ ಚಾಲಕ ಶ್ರೀಕಾಂತ್‌ , ದಿವ್ಯಾ ರೆಡ್ಡಿ, ಸಾಯಿ ರೆಡ್ಡಿ ಸಂದ್ಯಾ ರಾಣಿ ಮತ್ತು ಇಬ್ಬರು ಮಕ್ಕಳಿದ್ದು ಅವರಲ್ಲಿ ಕೆಲವರಿಗೆ ಗಾಯವಾಗಿದ್ದು ಅವರನ್ನು  ಅಲ್ಲಿ ಸೇರಿದ ವಸಂತ ಮತ್ತು ಪದ್ಮ ಪ್ರಸಾದ್‌ ಜೈನ್‌ ಎಂಬವರು ಬೆಳ್ತಂಗಡಿ ಕಡೆಗೆ ಹೋಗುವ ವಾಹನದಲ್ಲಿ ಕಳುಹಿಸಿಕೊಟ್ಟಿರುತ್ತಾರೆ.  ಕೀಯ ಕಾರಿನಲ್ಲಿದ್ದ ಸಂದ್ಯಾ ರಣಿ ಹಾಗೂ ಮಕ್ಕಳಾದ ಬಾಕಿತ್‌ ಮತ್ತು ಜಾಸ್ಮಿತಾ ರವರು ಎಸ್‌ ಡಿ ಎಮ್‌ ಅಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 84-2021 ಕಲಂ:279,337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪಿರ್ಯಾದಿದಾರರ ಹೆಸರು:ರಂಜಿತ್ (20),S/o ಬೊಮ್ಮೇಶ್ ಗೌಡ R/o ಗುತ್ತು ಮನೆ,ಶಿಶಿಲ ಗ್ರಾಮ, ಬೆಳ್ತಂಗಡಿ ತಾಲೂಕು.ಎಂಬವರ ದೂರಿನಂತೆ ದಿನಾಂಕ: 26-12-2021 ರಂದು ಪಿರ್ಯಾದಿದಾರರು ತನ್ನ ಬಾಬ್ತು ಕೆಎ 21 ಇಬಿ 9675  ನೇ ಮೋಟಾರ್‌ ಸೈಕಲ್‌ ನಲ್ಲಿ ಶಿಶಿಲಕ್ಕೆ ಹೋಗುವರೇ ತನ್ನ ಮನೆಯಿಂದ ಹೊರಟು ಓಟ್ಲ-ಶಿಶಿಲ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಮದ್ಯಾಹ್ನ 12:45 ಗಂಟೆಗೆ ಶಿಶಿಲ  ದೇವಸ್ಥಾನ ಬಳಿ ತಲುಪುತ್ತಿದ್ದಂತೆ ಅವರ ವಿರುದ್ದ ದಿಕ್ಕಿನಿಂದ ಅಂದರೆ ಶಿಶಿಲ ಕಡೆಯಿಂದ ಓಟ್ಲ ಕಡೆಗೆ ಕೆಎ 20 ಎಂ 0429 ನೇ ಜೀಪನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿಯ ಮೋಟಾರ್‌ ಸೈಕಲ್‌ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಪಿರ್ಯಾದಿ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಬಲ ಕಾಲಿನ ಕೋಲು ಕಾಲಿಗೆ ಗುದ್ದಿದ  ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 99/2021, ಕಲಂ; 279,337ಭಾದಂ.ಸಂ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪಿರ್ಯಾದಿದಾರರು: ಲೋಕಯ್ಯ ನಾಯ್ಕ(35) ತಂದೆ: ಅಣ್ಣು ನಾಯ್ಕ, ವಾಸ: ಮೂರ್ಜೆ ಮನೆ ಪಿಲಾತಬೆಟ್ಟು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಹಾಗೂ ಗಾಯಾಳು ಸತೀಶ್ ಎಂಬವರು ಒಟ್ಟಿಗೆ ಕೆಲಸ ಮಾಡಿಕೊಂಡಿದ್ದು ದಿನಾಂಕ: 26.12.2021 ರಂದು ಇಬ್ಬರು ಪುಂಜಾಲಕಟ್ಟೆ ಪೇಟೆಗೆ ಬಂದಿದ್ದು ಸುಮಾರು 19.15 ಗಂಟೆಯವರೆಗೆ ಒಟ್ಟಿಗೆ ಪೇಟೆಯಲ್ಲಿದ್ದು ಆ ಬಳಿಕ ಸತೀಶ್ ಎಂಬವರು ತನ್ನ ಬಾಬ್ತು ಸ್ಕೂಟರ್ ಕೆಎ19 ಇಇ 0804 ನೇದರಲ್ಲಿ ಹಾಗೂ ಪಿರ್ಯಾದಿದಾರರು ಅವರ ಬಾಬ್ತು ಸ್ಕೂಟರ್ ನಲ್ಲಿ ಮನೆ ಕಡೆಗೆ ಹೊರಟ್ಟಿದ್ದು  ಸತೀಶ್ ಎಂಬವರು  ಪಿರ್ಯಾದಿದಾರರಿಂದ  ಮುಂದೆ ತನ್ನ ಬಾಬ್ತು ಸ್ಕೂಟರ್  ರನ್ನು  ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು 19.30 ಗಂಟೆಗೆ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ದೈಕಿನಕಟ್ಟೆಯ  ಸ್ಪಲ್ಪ ಮುಂದೆ ಅಂದರೆ ಸರಕಾರಿ ಪಶು ವೈದ್ಯಕೀಯ ಕೇಂದ್ರದ ಬಳಿ ಬರುತ್ತಿದ್ದಂತೆ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ  ರಸ್ತೆಗೆ ಬಿದ್ದಿದ್ದು ಇದನ್ನು ಕಂಡು ಪಿರ್ಯಾದಿದಾರರು ತನ್ನ ಸ್ಕೂಟರನ್ನು ನಿಲ್ಲಿಸಿ ಸತೀಶ್ ಎಂಬವರನ್ನು ಬಿದ್ದಲ್ಲಿಂದ ಎತ್ತಿ ನೋಡಿದಾಗ  ಸತೀಶ್ ಎಂಬವರ ತಲೆಗೆ ಗಾಯವಾಗಿ  ರಕ್ತ ಬರುತ್ತಿದ್ದು  ಅವರನ್ನು ಇತರರು ಸೇರಿ ಆರೈಕೆ ಮಾಡಿ ಬಳಿಕ 108 ಅಂಬುಲೆನ್ಸ್ ನಲ್ಲಿ ಚಿಕಿತ್ಸೆ ಬಗ್ಗೆ  ಸತೀಶ್ ಸಂಬಂಧಿ ಸುನೀಲ್  ಎಂಬವರು ಪಾಧರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಐಸಿಯು ಘಟಕದಲ್ಲಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 97/2021 ಕಲಂ: 279,  338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿನೋದ (36) ತಂದೆ: ಮಣಿ ಆರ್ ವಾಸ: ಕಲ್ಲುಮುಟ್ಲು ಮನೆ, ಸುಳ್ಯ ಕಸಬಾ ಗ್ರಾಮ,ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರಾದ ವಿನೋದ್ (36) ತಂದೆ: ಮಣಿ, ಆರ್ ವಾಸ: ಕಲ್ಲುಮುಟ್ಲು ಮನೆ, ಸುಳ್ಯ ಕಸಬಾ ಗ್ರಾಮ, ಸುಳ್ಯ ತಾಲೂಕು ಎಂಬುವವರು ದಿನಾಂಕ 27.12.2021 ರಂದು ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಸಾರಾಂಶವೆನೇಂದರೆ ಪಿರ್ಯಾದುದಾರರು ತಮ್ಮ ಬಾಬ್ತು ಓಮಿನಿ ಕಾರಿನಲ್ಲಿ ಹೆಲ್ಮೆಟ್ ವ್ಯಾಪಾರವನ್ನು ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಸೋಣಂಗೇರೆ ಎಂಬಲ್ಲಿ  ರಸ್ತೆ ಬದಿಯಲ್ಲಿ ಮಾಡಿಕೊಂಡಿದ್ದವರು ವ್ಯಾಪಾರ ಮಾಡುತ್ತಿರುವ ಸಮಯ ಸುಮಾರು 14:00 ಗಂಟೆಗೆ ಪೊದೆಗಳ ಕಡೆಯಿಂದ ದುರ್ವಾಸನೆ ಬಂದಂತೆ ಸದ್ರಿ ವಾಸನೆ ಬಂದ ಜಾಗಕ್ಕೆ ಹೋಗಿ ನೋಡಲಾಗಿ ಸುಮಾರು ಅಂದಾಜು 45 ರಿಂದ 55 ವರ್ಷದ ಗಂಡಸಿನ ಶವವು ಸಂಪೂರ್ಣ ಕೊಳೆದ ಸ್ಥಿತಿಯಲ್ಲಿಯಿದ್ದು, ಗುರುತು ಪರಿಚಯ ಸಿಕ್ಕಿರುವುದಿಲ್ಲ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ ನಂ: 57/2021 ಕಲಂ: 174 (3) &(iv) Crpc ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-12-2021 10:20 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080