ಅಪಘಾತ ಪ್ರಕರಣ: ೦2
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಂಕರ್ ರಾವ್, ಪ್ರಾಯ 55 ವರ್ಷ, ತಂದೆ: ನಾರಾಯಣ ರಾವ್, ವಾಸ: 1017, 18 ನೇ ಅಡ್ಡರಸ್ತೆ, ಚಂದ್ರಾ ಬಡಾವಣೆ, ೧ ನೇ ಹಂತ, ಬೆಂಗಳೂರು ಎಂಬವರ ದೂರಿನಂತೆ ದಿನಾಂಕ 28-03-2021 ರಂದು 11-15 ಗಂಟೆಗೆ ಆರೋಪಿ ಸ್ಕೂಟರ್ ಸವಾರ ಇಸ್ಮಾಯಿಲ್ ಎಂಬವರು KA-21-X-1013 ನೇ ನೋಂದಣಿ ನಂಬ್ರದ ಸ್ಕೂಟರ್ನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಉಪ್ಪಿನಂಗಡಿ ಜಂಕ್ಷನ್ ನಲ್ಲಿ ಯಾವುದೇ ಸೂಚನೆ ನೀಡದೇ ಹೆದ್ದಾರಿಯಲ್ಲಿ ಬರುವ ವಾಹನಗಳನ್ನು ಗಮನಿಸದೇ ಒಮ್ಮೆಲೇ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಬಲಕ್ಕೆ ತಿರುಗಿಸಿ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಹೆದ್ದಾರಿಯಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-41-N-1939 ನೇ ನೋಂದಣಿ ನಂಬ್ರದ ಕಾರಿಗೆ ಅಪಘಾತವಾಗಿ ಸ್ಕೂಟರ್ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 55/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಂಕರ್ ರಾವ್, ಪ್ರಾಯ 55 ವರ್ಷ, ತಂದೆ: ನಾರಾಯಣ ರಾವ್, ವಾಸ: 1017, 18 ನೇ ಅಡ್ಡರಸ್ತೆ, ಚಂದ್ರಾ ಬಡಾವಣೆ, ೧ ನೇ ಹಂತ, ಬೆಂಗಳೂರು ಎಂಬವರ ದೂರಿನಂತೆ ದಿನಾಂಕ 28-03-2021 ರಂದು 11-15 ಗಂಟೆಗೆ ಆರೋಪಿ ಸ್ಕೂಟರ್ ಸವಾರ ಇಸ್ಮಾಯಿಲ್ ಎಂಬವರು KA-21-X-1013 ನೇ ನೋಂದಣಿ ನಂಬ್ರದ ಸ್ಕೂಟರ್ನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಉಪ್ಪಿನಂಗಡಿ ಜಂಕ್ಷನ್ ನಲ್ಲಿ ಯಾವುದೇ ಸೂಚನೆ ನೀಡದೇ ಹೆದ್ದಾರಿಯಲ್ಲಿ ಬರುವ ವಾಹನಗಳನ್ನು ಗಮನಿಸದೇ ಒಮ್ಮೆಲೇ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಬಲಕ್ಕೆ ತಿರುಗಿಸಿ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಹೆದ್ದಾರಿಯಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-41-N-1939 ನೇ ನೋಂದಣಿ ನಂಬ್ರದ ಕಾರಿಗೆ ಅಪಘಾತವಾಗಿ ಸ್ಕೂಟರ್ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 55/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦5
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್ ಹನೀಫ್, ಪ್ರಾಯ: 46 ವರ್ಷ, ತಂದೆ:ಮೊಯಿದು, ವಾಸ: ತೋಟತ್ತಡಿ ಮನೆ, ತೋಟತ್ತಾಡಿ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಮಹಿಳಾ ಸಂಘದಲ್ಲಿ ದಿನಾಂಕ:26-03-2021 ರಂದು 16-00 ಗಂಟೆಗೆ ಕೌಟುಂಬಿಕ ಕಲಹದ ಬಗ್ಗೆ ಗಂಡ ಹೆಂಡತಿಯರನ್ನು ಮಾತುಕತೆಗೆ ಮಹಿಳಾ ಸಂಘ ದವರು ಕರೆದಿದ್ದು, ಮಾತು ಕತೆಯ ಸಂದರ್ಭ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಪಿರ್ಯಾದಿದಾರರಿಗೆ ಎದ್ರಿಗಳಾದ ಶರೀಫ್, ಆರೀಫ್, ರಮ್ಲಾನ್, ಮುನೀರ್, ಹಾಗೂ ಸಿದ್ದೀಕ್ ಎಂಬವರು ಅಕ್ರಮ ಕೂಟ ಸೇರಿಕೊಂಡು ಸಮಾನ ಉದ್ದೇಶದಿಂದ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 31/2021, ಕಲಂ: 143,147,341,504,506, ಜೊತೆಗೆ 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ : ದಿನಾಂಕ: 28.03.2021 ರಂದು ಬೆಳಿಗ್ಗೆ 11.00 ಗಂಟೆಯ ಸಮಯಕ್ಕೆ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ತಮ್ಮ ಸಿಬ್ಬಂದಿಗಳೊಂದಿಗೆ ಕೊಲ್ಲಪದವಿನ ದೀರಜ್ ಎಂಬವರ ಅಂಗಡಿಗೆ ಧಾಳಿ ನಡೆಸಿ ಗೂಡಂಗಡಿಯ ಹಿಂಬದಿಯಲ್ಲಿ ಪರಿಶೀಲನೆ ಮಾಡಿದಾಗ ಪಾಲಿಥೀನ್ ಚೀಲದ್ ಒಳಗಿದ್ದ ಮದ್ಯ ತುಂಬಿದ 1. ಮೈಸೂರು ಲ್ಯಾನ್ಸರ್ ಕಂಪನಿಯ 180 ಎಂ ಎಲ್‌ನ ಟೆಟ್ರಾ ಪ್ಯಾಕೇಟ್‌ಗಳು-24. 2.ಮೈಸೂರು ಲ್ಯಾನ್ಸರ್ ಕಂಪನಿಯ 90 ಎಂ ಎಲ್‌ನ ಟೆಟ್ರಾ ಪ್ಯಾಕೇಟ್‌ಗಳು-48 ಪತ್ತೆ ಆಗಿರುವುದಾಗಿದೆ. ಇವುಗಳ ಒಟ್ಟು ಅಂದಾಜು ಮೌಲ್ಯ-3366/-ರೂಪಾಯಿ ಆಗಬಹುದು. ವಶಪಡಿಸಿಕೊಂಡ ಮದ್ಯವು 8.65 ಲೀಟರ್ ಇರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 44/2021 ಕಲಂ: 14 ಜೊತೆಗೆ 32(1),ಕಲಂ 15 ಜೊತೆಗೆ 32(2) (ಎ) ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ 28.03.2021 ರಂದು ಸಂಜೆ ಸಮಯ ಸುಮಾರು 7 ಗಂಟೆಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಾಡಿ ಎಂಬಲ್ಲಿ ಮನೆಯೊಂದಕ್ಕೆ ಧಾಳಿ ನಡೆಸಿ ಅಲ್ಲಿ ಗಿರಾಕಿಗಳನ್ನು ಮತ್ತು ಮಹಿಳೆಯರನ್ನು ಕರೆಯಿಸಿಕೊಂಡು ವೇಶ್ಯಾವಾಟಿಕೆ ನಡೆಸಿ ಹಣವನ್ನು ಸಂಗ್ರಹಿಸುತ್ತಿದ್ದ ಬಂಟ್ವಾಳ ಮೂಡನಡುಗೋಡು ನಿವಾಸಿ ಸತೀಶ್ ಕುಮಾರ್ (36) ಎಂಬಾತನನ್ನು ಬಂಧಿಸಿದ್ದು, ಸದರಿ ಮನೆಯನ್ನು ತಪಾಸಣೆ ನಡೆಸಲಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಮಹಿಳೆಯರು ಕಂಡುಬಂದಿದ್ದು, ಸದ್ರಿಯವರಿಂದ ವೇಶ್ಯಾವಾಟಿಕೆಯಿಂದ ಸಂಗ್ರಹವಾದ 6,000/-ನಗದು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 03.04.05 (D) ಅನೈತಿಕ ವ್ಯವಹಾರ ಪ್ರತಿಭಂದಕ ಅಧಿನಿಯಮ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
ವಿಟ್ಲ ಪೊಲೀಸ್ ಠಾಣೆ : ದಿನಾಂಕ:27.03.2021 ರಂದು ರಾತ್ರಿ ಸಮಯ ಸುಮಾರು 10:30 ಗಂಟೆಗೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ಇಡ್ಕಿದು ಎಂಬಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದಕ್ಕೆ ತನ್ನ ಹೆತ್ತವರೊಂದಿಗೆ ತೆರಳಿದ್ದ ಅಪ್ರಾಪ್ತ ಪ್ರಾಯದ ಸಂತ್ರಸ್ಥ ಬಾಲಕನನ್ನು ಆರೋಪಿ ಕಬಕ ನಿವಾಸಿ ಹಮೀದ್ ಮೌಲಾ ಎಂಬಾತನು ಪುಸಲಾಯಿಸಿ ಕಾರ್ಯಕ್ರಮವಾಗುತ್ತಿದ್ದ ಸ್ಥಳದ ಬಳಿ ಇದ್ದ ಮನೆಯೊಂದರ ಬಳಿಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದು, ಈ ವೇಳೆ ಬಾಲಕನು ಅಲ್ಲಿಂದ ತಪ್ಪಿಸಿಕೊಂಡು ಬಂದಿರುವುದಾಗಿದೆ. ಈ ಬಗ್ಗೆ ಸಂತ್ರಸ್ಥ ಬಾಲಕನ ತಂದೆ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದಿನಾಂಕ 28.03.2021 ರಂದು ಕಲಂ: 7,8 ಫೋಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿಯನ್ನು ಬಂಧಿಸಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 28.03.2021 ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 25/21 ಕಲಂ; 323, 504 506, ಜೊತೆಗೆ 34 ಐಪಿಸಿ ಕಲಂ; 3(i)(r), 3 (2)(va) ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ 2015 ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦2
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ರಮ್ಲತ್ ಗಂಡ: ಅಬ್ದುಲ್ ರಜಾಕ್ ,ವಾಸ: ಹುಪ್ಪ ಮನೆ ಪಾರೆಂಕಿ ಗ್ರಾಮ ಮಾಲಾಡಿ ಅಂಚೆ ಎಂಬವರ ದೂರಿನಂತೆ ಪಿರ್ಯಾದಿರವರ ಗಂಡ ಅಬ್ದುಲ್ ರಜಾಕ್ ಎಂಬವರು ದಿನಾಂಕ: 27.03.2021 ರಂದು ತನ್ನ ಬಾಡಿಗೆ ಮನೆಯಾದ ಕಸಬಾ ಬೆಂಗ್ರೆ ಮಂಗಳೂರು ಎಂಬಲ್ಲಿಂದ ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಕೆಲಸ ಮುಗಿಸಿ ಮಡಂತ್ಯಾರುವಿಗೆ ಹೋಗಿ ಅಲ್ಲಿ ಎರಡು ದಿನ ಇದ್ದು ಬರುತ್ತೇನೆ ಎಂದು ಹೇಳಿ ಹೊರಟಿದ್ದು ದಿನಾಂಕ: 28.03.2021 ರಂದು ಬೆಳಿಗ್ಗೆ 04:00 ಗಂಟೆಗೆ ಸಂಬಂಧಿಯೊರ್ವರು ಪಿರ್ಯಾದಿದಾರರಿಗೆ ಕರೆ ಮಾಡಿ ಪಿರ್ಯಾದಿದಾರರ ಗಂಡನಿಗೆ ಎದೆ ನೋವು ಕಾಣಿಸಿಕೊಂಡಿರುವುದಾಗಿ ತಿಳಿಸಿದ್ದು ನಂತರ ಪಿರ್ಯಾದಿದಾರರು ಗಂಡನ ಮೊಬೈಲ್ ಗೆ ಕರೆ ಮಾಡಿದಾಗ ಪಿರ್ಯಾದಿದಾರರ ಮೈದುನ ಬಶೀರ್ ಎಂಬವರು ಕರೆ ಸ್ವೀಕರಿಸಿ ಅಣ್ಣ ನಿನ್ನೆ ರಾತ್ರಿ ಕೊಲ್ಪೆದಬೈಲು ಐಸಮ್ಮ ಎಂಬವರ ಮನೆಗೆ ಹೋಗಿದ್ದು ಅಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಐಸಮ್ಮರವರ ಮಗ ಮಹಮ್ಮದ್ ಸಲೀಂ ಆಟೋ ರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಅಬ್ದುಲ್ ರಜಾಕ್ ನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆ. UDR NO 04/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀ ಕೆ .ಹೆಚ್. ಯಲ್ಲಪ್ಪ ಪ್ರಾಯ 36 ವರ್ಷ, ತಂದೆ: ದಿ| ಹನುಮಂತಪ್ಪ , ವಾಸ: ಉಚ್ಚಂಗಿಪುರ ಮನೆ & ಗ್ರಾಮ, ದಿದ್ದಿಗೆ ಅಂಚೆ, ಜಗಳೂರು ತಾಲೂಕು, ದಾವಣಗೆರೆ ಎಂಬವರ ದೂರಿನಂತೆ ಪಿರ್ಯಾದಿದಾರರ ಅಣ್ಣ ಕೆ ಹೆಚ್ ಸಿದ್ದಪ್ಪ ಪ್ರಾಯ 40 ವರ್ಷ ಎಂಬವರು ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಅಲೆಕ್ಕಾಡಿ ಎಂಬಲ್ಲಿ ಎಮ್ ಎಲ್ ಚಂದ್ರಶೇಖರ ಎಂಬವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಇದ್ದವರು ದಿನಾಂಕ 28-03-2021 ರಂದು ಮನೆಯಲ್ಲಿ ಮಲಗಿದ್ದವರು ಸಮಯ ಸುಮಾರು ಬೆಳಿಗ್ಗೆ 05-00 ಗಂಟೆಯಿಂದ 06-30 ಗಂಟೆಯ ಮಧ್ಯೆ ಮನೆಯ ಮಾಡಿನ ಪಕ್ಕಾಸಿಗೆ ಚೂಡಿದಾರದ ವೇಲನ್ನು ಕುತ್ತಿಗೆಗೆ ನೇಣಾಗಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ 09/2021 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ