ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಎಮ್‌ ಅಬ್ಬಾಸ್‌ (63), ತಂದೆ: ಇಸ್ಮಾಯಿಲ್‌, ವಾಸ: ಮಾಶಾ ಮನ್‌ಜಿಲ್‌, ಅಜಿತ್‌ ನಗರ, ಉಜಿರೆ ಗ್ರಾಮ, ಬೆಳ್ತಂಗಡಿ ತಾಲೂಕು ರವರು ದಿನಾಂಕ: 28-03-2022 ರಂದು ತನ್ನ ಬಾಬ್ತು ಕೆಎ 21 ಕೆ 3821 ನೇ ಮೋಟಾರು ಸೈಕಲ್‌ನ್ನು ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವ ಸಮಯ ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾಮದ ಕಕ್ಕೇನ ಚರ್ಚ್‌  ಬಳಿ ತಲುಪುತ್ತಿದ್ದಂತೆ ಅವರ ವಿರುದ್ದ ಧಿಕ್ಕಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಉಜಿರೆ ಕಡೆಗೆ ಕೆಎ 19 ಹೆಚ್‌ ಎ 2589 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಪಾದಕ್ಕೆ, ಬಲಕಾಲು ಮೊಣಗಂಟಿಗೆ, ಬಲಕೈ ಉಂಗುರ ಬೆರಳಿಗೆ ಗುದ್ದಿದ ಮತ್ತು ತರಚಿದ ರಕ್ತ ಗಾಯವಾಗಿರುತ್ತದೆ, ಗಾಯಾಳು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 48/2022 ಕಲಂ; 279,337 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಬೂಬಕ್ಕರ್ ಸಿದ್ದಿಕ್  ಪ್ರಾಯ: 29 ವರ್ಷ  ತಂದೆ: ಅಬ್ದುಲ್ ರಹಿಮಾನ್  ವಾಸ: 1-375 ಕೊಲ್ಲೆಜಾಲ್  ಮನೆ, ಹೀರೆಬಂಡಾಡಿ ಅಂಚೆ ಮತ್ತು  ಗ್ರಾಮ ಪುತ್ತೂರು  ತಾಲೂಕು ರವರು ದಿನಾಂಕ: 26.03.2022 ರಂದು  ತನ್ನ ಸ್ನೇಹಿತ ಅಬ್ದುಲ್ ಹಮೀದ್  ರವರ ಬಾಬ್ತು KA 21 Y 8567 ನೇ ಮೋಟರ್ ಸೈಕಲ್ ನಲ್ಲಿ ಅಬ್ದುಲ್ ಹಮೀದ್ ರವರನ್ನು ಸಹಸವಾರರಾಗಿ ಹಿಂಬದಿ ಕುಳ್ಳಿರಿಸಿಕೊಂಡು ಫರಂಗಿಫೇಟೆಯಿಂದ ಪೆರಿಮಾರ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಬಂಟ್ವಾಳ ತಾಲೂಕು ಪುದು ಗ್ರಾಮದ 10ನೇ ಮೈಲಿಕಲ್ಲು ಅಮ್ಮೆಮಾರ್ ಕ್ರಾಸ್ ಬಳಿ ತಲುಪಿದಾಗ ಪಿರ್ಯಾದಿದಾರರ ಎದುರಿನಿಂದ ಹೋಗುತ್ತಿದ್ದ KA 18  A 9747  ನೇ ಪಿಕಪ್ ವಾಹನವನ್ನು ಅದರ ಚಾಲಕ ಇಝಾಝ್ ರವರು ಯಾವುದೇ ಸೂಚನೆ ನೀಡದೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮಲೇ  ಅಮ್ಮೆಮಾರ್ ಕ್ರಾಸ್ ಕಡೆಗೆ ಚಲಾಯಿಸಿ ಮೋಟರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರ ಮೋಟರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅಪಘಾತವಾಗಿದ್ದು, ಅಪಘಾತದಲ್ಲಿ ಪಿರ್ಯಾದಿದಾರರ  ಕುತ್ತಿಗೆಗೆ , ಮೈ-ಕೈಗೆ ಗುದ್ದಿದ ಹಾಗೂ ಬಲ ಮೊಣಕಾಲಿಗೆ ತರಚಿದ ಗಾಯವಾಗಿದ್ದು, ಸಹಸವಾರ ಅಬ್ದುಲ್ ಹಮೀದ್ ರವರಿಗೆ ತಲೆ,ಮುಖ,ಕೈಗೆ, ಮೊಣಕಾಲಿಗೆ  ರಕ್ತಗಾಯವಾಗಿದ್ದು ಪಿರ್ಯಾದಿದಾರರು  ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು. ಸಹಸವಾರ ಅಬ್ದುಲ್ ಹಮೀದ್ ರವರು ಮಂಗಳೂರಿನ ಇಂಡಿಯಾನ್ ಆಸ್ಪತ್ರೆಯಲ್ಲಿ  ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 36/2022 ಕಲಂ 279,337 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ  ರೇವತಿ ಪ್ರಾಯ:78 ವರ್ಷ ಗಂಡ: ದಿ| ಶ್ರೀಪಾಲ ಶೆಟ್ಟಿ  ವಾಸ: ಮಾಲೇಶ್ವರ ಮನೆ, ಕೋಡಿಂಬಾಳ ಗ್ರಾಮ ,ಕಡಬ ತಾಲೂಕು ರವರಿಗೆ 3 ಜನ ಗಂಡು ಮಕ್ಕಳು ಒಬ್ಬಳು ಮಗಳಿದ್ದು ಎಲ್ಲರಿಗೂ ವಿವಾಹವಾಗಿರುತ್ತದೆ. ಪಿರ್ಯಾದುದಾರರ ಕಿರಿಯ ಮಗನಾದ ಆರೋಪಿತ ವಿಜಯ ಜೈನ್‌ ಎಂಬಾತನಿಗೂ ವಿವಾಹವಾಗಿದ್ದು  ಆತನು ವಿವಾಹವಾದ ಒಂದು ತಿಂಗಳಲ್ಲೆ ಕುಡಿದು ಗಲಾಟೆ ಮಾಡಿ ಪತ್ನಿಯನ್ನು ಬಿಟ್ಟಿರುತ್ತಾನೆ. ಹಾಗೂ ತನ್ನ ತಾಯಿಯೊಂದಿಗೆ ವಾಸವಾಗಿರುತ್ತಾನೆ ಆರೋಪಿತನು ಕುಡಿತದ ಚಟವುಳ್ಳವನಾಗಿದ್ದು ಪ್ರತಿದಿನ ಕುಡಿದು ಬಂದು  ಪಿರ್ಯಾದುದಾರರೊಂದಿಗೆ ಅನಾವಶ್ಯಕವಾಗಿ ಗಲಾಟೆ ಮಾಡುತ್ತಿರುತ್ತಾನೆ ಅದರಂತೆ ದಿನಾಂಕ:28.03.2022 ರಂದು ಆರೋಪಿತನು ಕುಡಿದು ಮನೆಗೆ ಬಂದು ಪಿರ್ಯಾದುದಾರರ ಮನೆಯಲ್ಲಿದ್ದ ವಸ್ತುಗಳನ್ನು ಒಡೆದು ಹಾಕುತ್ತಿದ್ದಾಗ  ಪಿರ್ಯಾದುದಾರರು ಯಾಕೆ ಈ ರೀತಿ ಮಾಡುತ್ತೀಯಾ ಎಂದು ಕೇಳಿದಾಗ ಆರೋಪಿತನು ಏಕಾಏಕಿ ಪಿರ್ಯಾದುದಾರರಿಗೆ ಮನೆಯಲ್ಲಿದ್ದ ದೊಣ್ಣೆಯಿಂದ ತಲೆಗೆ ಹೊಡೆದ ಪರಿಣಾಮ ತಲೆಯಲ್ಲಿ ರಕ್ತಗಾಯವಾಗಿರುತ್ತದೆ. ನಂತರ ಆರೋಪಿತನು ಪಿರ್ಯಾದುದಾರರಿಗೆ ಕೈಯಿಂದ  ಮೈ ಕೈಗೆ ಗುದ್ದಿ  ಕುತ್ತಿಗೆಯನ್ನು ಹಿಡಿದು ದೂಡಿ ಹಾಕಿ ಬಳಿಕ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 29/2022 ಕಲಂ. 324. 323. 506 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 

ವಿಟ್ಲ ಪೊಲೀಸ್ ಠಾಣೆ : ಪೊಲೀಸ್‌ ಉಪನಿರೀಕ್ಷಕರು (ಕಾ&ಸು) ವಿಟ್ಲ ಪೊಲೀಸ್‌ ಠಾಣೆ ರವರು ದಿನಾಂಕ; 27-03-2022 ರಂದು ರೌಂಡ್ಸ ಕರ್ತವ್ಯದಲ್ಲಿರುವಾಗ ಬಂಟ್ವಾಳ ತಾಲೂಕು ಕೇಪು ಗ್ರಾಮದ ಕುದ್ದುಪದವು ಏರಟೆಲ್ ಟವರ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಇಸ್ಪಿಟ್‌ ಎಲೆಗಳಿಂದ ಉಲಾಯಿ-ಪಿದಾಯಿ ಜುಗಾರಿ ಅಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ದಾಳಿ ನಡೆಸಿ ಜುಗಾರಿ ಆಟವಾಡುತ್ತಿದ್ದ 1]ಕೆ ಪಿ ಹನೀಫ್‌ 2] ಅಬೂಬಕ್ಕರ್‌ ಸಿದ್ದೀಕ್‌ 3] ಸಿರಾಜುದ್ದೀನ್‌ 4] ಮುನೀರ್‌ ಕೆ. ಎಂ 5] ಮಹಮ್ಮದ್‌ ಇಬ್ರಾಹಿಂ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದು, ಜುಗಾರಿ ಆಟಕ್ಕೆ ಉಪಯೋಗಿಸಿದ ಒಟ್ಟು ಹಣ 5150/-ರೂ ಹಾಗೂ ವಿವಿಧ ಜಾತಿಯ ಇಸ್ಫಿಟ್‌ ಎಲೆಗಳು -52 ಇವುಗಳನ್ನು ವಶಪಡಿಸಿಕೊಂಡು ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 52/2022 ಕಲಂ:87 ಕೆ ಪಿ ಆಕ್ಟ್‌ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

 

ದ.ಕ ಮಹಿಳಾ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ನೊಂದ ಮಹಿಳೆಯ ರವರ ಪರಿಚಯದ ವ್ಯಕ್ತಿಯು ದಿನಾಂಕ 26.03.2022 ರಂದು ಪಿರ್ಯಾದಿದಾರರ ಮನೆ ಬಳಿ ಬಂದು ಮಾತನಾಡಲು ಇದೆ ಎಂದು ಪಿರ್ಯಾದಿದಾರರನ್ನು ಆತನ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಬಂದು ದರ್ಬೆ ಹರ್ಷ ಇಲೆಕ್ಟ್ರಾನಿಕ್ಸ್ ಬಳಿ ತಲುಪಿ ಪಿರ್ಯಾದಿದಾರರ ಕುತ್ತಿಗೆ ಹಿಡಿದು, ಬಳಿಕ ಪಿರ್ಯಾದಿದಾರರನ್ನು ಮಾನಭಂಗ ಮಾಡುವ ಉದ್ದೇಶದಿಂದ ದೇಹಕ್ಕೆ ಕೈ ಹಾಕಿ, ತಲೆಯ ಹಿಂಭಾಗ ಹಾಗೂ ಎಡಕೈಗೆ ಕೈಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದದಿಂದ ಬೈದು, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿ, ಪಿರ್ಯಾದಿದಾರರನ್ನು ಅಲ್ಲೇ ಬಿಟ್ಟು ಹೋಗಿರುತ್ತಾನೆ. ಈ ಬಗ್ಗೆ ದ.ಕ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕಲಂ: 354, 323, 504, 506  ಭಾ.ದಂ.ಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಚೈತ್ರ ಪ್ರಾಯ 28 ವರ್ಷ ಗಂಡ: ಗಣೇಶ ಕೆ ವಾಸ: ಬೋಳಂಗಡಿ ಮನೆ, ಪಾಣೆಮಂಗಳೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರು ದಿನಾಂಕ 14.02.2022 ರಂದು ಮಂಗಳೂರಿನ ಸರಕಾರಿ ಲೇಡಿಗೋಶನ್  ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಗಂಡು ಮಗುವಿಗೆ  ಜನ್ಮ ನೀಡಿದ್ದು, ಮಗು ಆರೋಗ್ಯವಾಗಿರುತ್ತದೆ. ಮಗುವಿಗೆ 10 ದಿನಗಳ ಹಿಂದೆ ಕೆಮ್ಮು ಕಾಣಿಸಿಕೊಂಡಿರುವುದರಿಂದ  ಚಿಕಿತ್ಸೆಗಾಗಿ ದಿನಾಂಕ 24.03.2022 ರಂದು ಮಗುವನ್ನು ಪುತ್ತೂರು ಚೇತನಾ ಆಸ್ಪತ್ರೆಗೆ ಬಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ , ಕೆಮ್ಮು ಮತ್ತು ಕಫ ಜಾಸ್ತಿ ಇದ್ದಲ್ಲಿ ಮಗುವನ್ನು ಎಡ್ಮಿಡ್‌ ಮಾಡಬೇಕೆಂದು ತಿಳಿಸಿರುತ್ತಾರೆ. ನಂತರವೂ ಮಗುವಿಗೆ ಕೆಮ್ಮು ಕಡಿಮೆಯಾಗದೇ ಇರುವುದರಿಂದ ವಾಪಸು ದಿನಾಂಕ 26.03.2022 ರಂದು ಮಗುವನ್ನು ಕರೆದುಕೊಂಡು ಚಿಕಿತ್ಸೆಯ  ಬಗ್ಗೆ  ಪುತ್ತೂರು ಚೇತನಾ ಆಸ್ಪತ್ರೆಯಲ್ಲಿ ವೈದ್ಯರ ಸಲಹೆಯಂತೆ ಎಡ್ಮಿಟ್ ಮಾಡಿರುವುದುದಾಗಿದೆ ದಿನಾಂಕ 27.03-2022 ರಂದು ಮಧ್ಯಾಹ್ನ ವೈದ್ಯರು ಬಂದು ಮಗುವನ್ನು ಪರೀಕ್ಷಿಸಿ ಮಗು ಆರೋಗ್ಯವಾಗಿದೆ ಎಂದು ತಿಳಿಸಿರುತ್ತಾರೆ. ಬಳಿಕ ಮಗುವಿನ ಚಿಕಿತ್ಸೆ  ಮಾಡುತ್ತಿದ್ದ ದಾದಿ ಚೇತನಾರವರು ಸಂಜೆ ಸುಮಾರು 6.00 ಗಂಟೆಗೆ ಮಗುವಿಗೆ ಮೂರು ಸಲ ಇಂಜೆಕ್ಷನ್‌ ನೀಡಿದ್ದು ಮಗು ಕೂಗುವಾಗಲೇ ಆಕ್ಸಿಜನ್‌ ನೀಡಿದ್ದು , ಆ ಸಮಯ ಮಗು ಕೂಗುವುದನ್ನು ನಿಲ್ಲಿಸಿದ್ದು , ಸಂಜೆ ಸುಮಾರು 6.14 ಗಂಟೆಗೆ ದಾದಿಯವರು ಮಗು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ ಮಗುವಿನ ಆರೈಕೆ ನೋಡಿಕೊಳ್ಳುತ್ತಿದ್ದ ದಾದಿ ಚೇತನಾರವರು ಮಗುವುಗೆ ಸರಿಯಾಗಿ ಚಿಕಿತ್ಸೆ ನೀಡದೇ ನಿರ್ಲಕ್ಷಿಸಿರುವುದರಿಂದಲೇ ಮಗು ಮೃತಪಟ್ಟಿರುವುದಾಗಿದೆ. ಈ ಬಗ್ಗೆ  ಪುತ್ತೂರು ನಗರ ಠಾಣಾ  ಯುಡಿಆರ್: 08//2022 ಕಲಂ: 174 (3) & (4) ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-03-2022 12:01 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080