ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸರಪುದ್ದೀನ್‌ ಎ, ಪ್ರಾಯ 32 ವರ್ಷ,   ತಂದೆ: ಇಲಿಯಾಸ್‌,   ವಾಸ: ಅರ್ಲಾಮೆ ಮನೆ, ಕುಟ್ರುಪಾಡಿ  ಅಂಚೆ ಮತ್ತು ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 27-09-2021 ರಂದು ಆರೋಪಿ ಲಾರಿ ಚಾಲಕ ರಫೀಕ್ ಎಂಬವರು KA-08-A-0936 ನೇ ನೋಂದಣಿ ನಂಬ್ರದ ಲಾರಿಯನ್ನು ಪೆದಮಲೆ-ಅಜಿಲಮೊಗರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪೆದಮಲೆ ಕಡೆಯಿಂದ ಅಜಿಲಮೊಗರು ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಕುಟ್ಟಿಕಲ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡ್ಗೆ ಚಲಾಯಿಸಿದ ಪರಿಣಾಮ, ಪಿರ್ಯಾದಿದಾರರು, ಇಸ್ಮಾಯಿಲ್‌ ಕೆ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬಾಜಾರು ಕಡೆಯಿಂದ ಪೆದಮಲೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-X-0433 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲ್ಗೆ ಅಪಘಾತವಾಗಿ, ಸವಾರರಿಬ್ಬರೂ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕೈ ಬೆರಳಿಗೆ ಬಲಕಾಲಿನ ಪಾದಕ್ಕೆ ಗುದ್ದಿದ ಹಾಗೂ ರಕ್ತಗಾಯ ಮತ್ತು ಇಸ್ಮಾಯಿಲ್ ರವರಿಗೆ ಬಲಕಾಲಿನ ಪಾದ, ಬಲಕಾಲಿನ ಮೊಣಗಂಟು, ಎದೆಯ ಭಾಗಕ್ಕೆ ಗುದ್ದಿದ ಹಾಗೂ ರಕ್ತಗಾಯವಾಗಿದ್ದು, ಉಪ್ಪಿನಂಗಡಿ ಕೆ.ಜಿ.ಭಟ್ ಕ್ಲಿನಿಕ್ ನಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ  ಪುತ್ತೂರು ಹಿತ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  120/2021  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 4

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಗೋಡ್ವಿನ್ ರೋಡ್ರಿಗಸ್, ತಂದೆ: ಲಿಯೋ ರೋಡ್ರಿಗಸ್ ವಾಸ: ಪುಲ್ಲಾಜೆ ಮನೆ, ಕುರಿಯಾಳ ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ, ಪಿರ್ಯಾದಿದಾರರ ಅಜ್ಜ ಬೊನಿಫಾಸ್ ಕಾರ್ಲೋ ರವರು ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಕಮಲ್ ಕಟ್ಟೆ ಎಂಬಲ್ಲಿ  ಕಳೆದ ಎಂಟು ವರ್ಷಗಳಿಂದ ಅಜ್ಜಿಯು ತೀರಿದ ಬಳಿಕ ಒಬ್ಬರೇ ವಾಸವಾಗಿದ್ದು, 75 ವರ್ಷದ ಪ್ರಾಯಸ್ಥರಾಗಿರುತ್ತಾರೆ. ಇವರು ಹೋಟೆಲ್ ನಲ್ಲಿ ಊಟ ಮಾಡಿ ಅಮಲು ಪದಾರ್ಥ ಸೇವಿಸುವ ಚಟವನ್ನು ಹೊಂದಿದ್ದರು. ಕಳೆದ ಎಂಟು ದಿನಗಳ ಹಿಂದೆ ಬೊನಿಫಾಸ್ ಕಾರ್ಲೋ ರವರು ಯಾವುದೋ ಕಾರಣಕ್ಕೆ ಮನೆಯ ಪಕ್ಕದ ವಾಸಿ ಪಾಸ್ಕಲ್ ರೋಡ್ರಿಗಸ್ ರವರ ಜಮೀನಿಗೆ ಬಂದವರು ಕೆಳಗೆ ಬಿದ್ದು ಶರೀರದ ಭಾಗಗಳಿಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದು, ಈ ವಿಚಾರ ಯಾರಿಗೂ ತಿಳಿಯದೆ ಇದ್ದುದರಿಂದ ಕಾಡು ಪ್ರಾಣಿಗಳು ಮೃತದೇಹವನ್ನು 50 ಅಡಿ ದೂರಕ್ಕೆ ಎಳೆದುಕೊಂಡು ಹೋಗಿದ್ದು, ಸದ್ರಿ ಮೃತದೇಹವು ಅಸ್ತಿಪಂಜರ ಬನಿಯನ್, ಚಡ್ಡಿ ಹೊಂದಿರುತ್ತದೆ. ಸ್ಥಳದಲ್ಲಿ ಬೊನಿಫಾಸ್ ಕಾರ್ಲೋ ರವರ ಬಾಬ್ತು ಮೊಬೈಲ್ ಮತ್ತು ಲುಂಗಿ ಕಂಡು ಬರುತ್ತದೆ.  ಅವರ ಮರಣದಲ್ಲಿ ಬೇರೆ ಯಾವುದೇ ಕಾರಣ ಇರುವುದಿಲ್ಲ. ಮೃತದೇಹದ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ಮೃತದೇಹವನ್ನು ಮುಂದಿನ ಅಂತ್ಯಕ್ರಿಯೆ ಬಗ್ಗೆ ಬಿಟ್ಟುಕೊಡುವರೇ ಕೋರಿಕೆ ಎಂಬಿತ್ಯಾದಿಯಾಗಿರುತ್ತದೆ ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 33/2021 ಕಲಂ:  174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಜಯರಾಮ್ ಪ್ರಾಯ 44 ವರ್ಷ ತಂದೆ ತ್ಯಾಂಪಣ್ಣ ರೈ ವಾಸ ಉಳಾಯಿಬೆಟ್ಟು ಮನೆ  , ಉಳಾಯಿಬೆಟ್ಟು ಗ್ರಾಮ ಮಂಗಳೂರು  ತಾಲೂಕು ರವರ ತಂಗಿ ಮಮತಾಳು ದಿನಾಂಕ 22.09.2021 ರಂದು  ಸಾಯಂಕಾಲ 4.00 ಗಂಟೆಯ ಸಮಯಕ್ಕೆ ಮನೆಯ ಪಕ್ಕದಲ್ಲಿದ್ದ ತೋಟಕ್ಕೆ ಹೋದವಳಿಗೆ ಯಾವುದೋ ವಿಷ ಜಂತು ಎಡ ಕೋಲು ಕಾಲಿಗೆ ಕಚ್ಚಿದ್ದು ನಂತರ ನೋವು ಕಾಣಿಸಿಕೊಂಡು ಜ್ವರ ಬಂದವಳನ್ನು ಚಿಕಿತ್ಸೆ ಬಗ್ಗೆ  ತುಂಬೆ ಫಾದರ್  ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು  ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೇಲ್ದರ್ಜೆ  ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದಂತೆ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕರೆತಂದು ಅಲ್ಲಿ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದವಳು ಚಿಕಿತ್ಸೆ  ಪಲಕಾರಿಯಾಗದೇ  ದಿನಾಂಕ 28.09.2021 ರಂದು ಮದ್ಯಾಹ್ನ 03.25 ಗಂಟೆಗೆ ಮೃತಪಟ್ಟಿರುವುದಾಗಿದೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯು ಡಿ ಆರ್ 41/2021 ಕಲಂ 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಬಾಲಕೃಷ್ಣ (60), ತಂದೆ: ಕಾಂತಪ್ಪ, ವಾಸ: ಕರಿಯಮುಲೆ ಮನೆ, ಅಜ್ಜಾವರ ಗ್ರಾಮ, ಸುಳ್ಯ ತಾಲೂಕು ರವರ ಮಗ ನವೀನ,  ಪ್ರಾಯ: 27 ವರ್ಷ, ತಂದೆ: ಬಾಲಕೃಷ್ಣ ಎಂಬವರು ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದವರಾಗಿರುತ್ತಾರೆ. ಅಲ್ಲದೇ ಹೊಟ್ಟೆನೋವಿನಿಂದ ಬಳಲುತ್ತಿದ್ದವರು ಒಂದು ವಾರದ ಹಿಂದೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೂ ಹೋಟ್ಟೆನೋವು ಎಂದು ಹೇಳಿಕೊಂಡಿದ್ದು ದಿನಾಂಕ: 27.09.2021 ರಂದು ಪಿರ್ಯಾದಿದಾರರ ಅಳಿಯ ಚಂದ್ರಶೇಖರರ ಮನೆಯಿಂದ  ರಾತ್ರಿ 9:30 ಗಂಟೆಗೆ  ಪಿರ್ಯಾದಿದಾರರ ಮನೆಗೆಂದು ಹೊರಟು ಬಂದವರು ಮನೆಗೆ ಬಾರದೇ ಇದ್ದು, ದಿನಾಂಕ: 28.09.2021 ರಂದು 15:00 ಗಂಟೆಗೆ ಕಲ್ಲಗದ್ದೆ ಎಂಬಲ್ಲಿ ಬಿದ್ದುಕೊಂಡಿದ್ದು, ನೋಡಿದಲ್ಲಿ ಆತನು ಕುತ್ತಿಗೆಯಲ್ಲಿ ಬೈರಾಸು ಸುತ್ತಿಕೊಂಡಿರುವುದು ಕಂಡು ಬಂದಿರುತ್ತದೆ. ನವೀನನು ತನಗಿದ್ದ ಹೊಟ್ಟೆ ನೋವು ಹಾಗೂ ತನ್ನ ವಿಪರೀತ ಮಧ್ಯ ಸೇವನೆಯ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ 40/2021 ಕಲಂ:  174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸಂಜೀವ ಶೆಟ್ಟಿ  ಪ್ರಾಯ;60 ವರ್ಷ, ತಂದೆ;ರಾಮಣ್ಣ ಶೆಟ್ಟಿ, ವಾಸ;ಹುಣ್ಸೆಕಟ್ಟೆ  ಮನೆ ಬೆಳ್ತಂಗಡಿ ಕಸಬಾ  ಗ್ರಾಮ ಮತ್ತು ಅಂಚೆ  ಬೆಳ್ತಂಗಡಿ ತಾಲೂಕು ರವರ ಮಗಳು  ಕುಮಾರಿ ದೀಕ್ಷಿತಾಳು ಸುಮಾರು  ಒಂದು ತಿಂಗಳಿನಿಂದ ಸರಿಯಾಗಿ ಓದಲು ಮನಸ್ಸು ಬರುತ್ತಿಲ್ಲ ರಾತ್ರಿ ನಿದ್ರೆಯಲ್ಲಿ ಕೆಟ್ಟ ಕೆಟ್ಟ ಕನಸುಗಳು ಬರುತ್ತದೆ ಎಂದು ಹೇಳಿಕೊಂಡು ಮಾನಸಿಕವಾಗಿ ವರ್ತಿಸುತ್ತಿದ್ದವಳನ್ನು ದಿನಾಂಕ 27.09.2021ರಂದು ಮಂಗಳೂರು ಮನಸ್ವಿನಿ ಚಿಕಿತ್ಸಾ ಕೇಂದ್ರದಿಂದ ಔಷದಿಯನ್ನು ಪಡೆದುಕೊಂಡಿದ್ದು ದಿನಾಂಕ 28.09.2021ರಂದು ಕಾಲೇಜಿಗೆ ಹೋಗದೇ ಮನೆಯಲ್ಲಿಯೇ ಇದ್ದವಳು. ಸಂಜೆ 05.30 ಗಂಟೆಯಿಂದ 06.00 ಗಂಟೆ ಮದ್ಯ ಸಮಯದಲ್ಲಿ ತನ್ನ ಬೆಡ್ ರೋಮ್ ನ ಅಡ್ಡಕ್ಕೆ  ನೈಲನ್ ಸೀರೆಯನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಯುಡಿಆರ್ ನಂ: 33/2021  ಕಲಂ: 174 CrPC  ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 29-09-2021 11:23 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080