ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಭರತ್ ಕೆ ಎಂ (16) ತಂದೆ:ಮೋನಪ್ಪ ವಾಸ:ಕಿದಿನಾರು ಮನೆ, ಅನಂತಾಡಿ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರು ಮಾಣಿಯಲ್ಲಿರುವ ಮಾದರಿ ಪ್ರೌಡ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದು ಎಂದಿನಂತೆ ದಿನಾಂಕ:27-11-2021 ರಂದು ಶಾಲೆಗೆ ಹೋಗಿ ವಾಪಾಸು ಶಾಲೆಯಿಂದ ಮನೆಗೆ ಹೋಗುವರೇ ಮಾಣಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಎಡ ಬದಿಯ ಕಚ್ಚಾ ರಸ್ತೆಯ ಮೇಲೆ ನಡೆದುಕೊಂಡು ಮಾಣಿ ಕಡೆಗೆ ಬಂರುವ ಸಮಯ 14.50 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಎಂಬಲ್ಲಿ ತಲುಪಿದಾಗ ಕಲ್ಲಡ್ಕ ಕಡೆಯಿಂದ ಉಪ್ಪಿನಂಗಡಿ ಕಡೆಗೆ KA-21-P-5865ನೇದರ ಕಾರಿನ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿಗೆ ಎದುರಿನಿಂದ ಡಿಕ್ಕಿಪಡಿಸಿದ್ದು ಪಿರ್ಯಾಧಿದಾರರು ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಬಲಬದಿಯ ತಲೆಗೆ  ರಕ್ತಗಾಯ, ಬಲಭುಜಕ್ಕೆ ಹಾಗೂ ಬಲಕೋಲು ಕೈಗೆ ಗುದ್ದಿದ ಗಾಯವಾಗಿರುತ್ತದೆ. ನಂತರ ಅಪಘಾತಪಡಿಸಿದ ಕಾರಿನ ಚಾಲಕಿಯ ಹೆಸರು ತಿಳಿಯಲಾಗಿ ಮಾದವಿ ಶೆಟ್ಟಿ ಡಿ ಎಂದು ತಿಳಿದಿರುತ್ತದೆ. ಗಾಯಗೊಂಡವರನ್ನು ಒಂದು ವಾಹನದಲ್ಲಿ ಮಾಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರಿಕ್ಷೀಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಗಾಯಾಳುವನ್ನು ಮಂಗಳೂರು ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 154/2021  ಕಲಂ:279, 337 ಬಾಧಂಸಂ    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸದಾನಂದ ಪೂಜಾರಿ ಪ್ರಾಯ:47 ವರ್ಷ ತಂದೆ: ದಿ|| ಪೆರ್ನು ಪೂಜಾರಿ, ವಾಸ: ಶಾಲೆ ಮನೆ , ಬುಡೋಳಿ ಗ್ರಾಮ, ದಂಡೆಗೋಳಿ ಅಂಚೆ ,ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 27.11.2021 ರಂದು ಅಗತ್ಯ ಕೆಲಸದ ನಿಮಿತ್ತ ತನ್ನ ಬಾಬ್ತು KA 70 E 1041 ನೇ ಸ್ಕೂಟರ್ ನಲ್ಲಿ  ಬಂಟ್ವಾಳ  ಪೇಟೆಗೆ ಬಂದು ವಾಪಾಸ್ಸು  ಮನೆ ಕಡೆಗೆ ಸ್ಕೂಟರನ್ನು ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು 16:00 ಗಂಟೆಗೆ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಜಕ್ರಿಬೆಟ್ಟು  ಎಂಬಲ್ಲಿ  ಬಿ.ಸಿ.ರೋಡ್ – ಕಡೂರು ಮುಖ್ಯ ರಸ್ತೆಗೆ ತಲುಪುತ್ತಿದ್ದಂತೆ  ಬೆಳ್ತಂಗಡಿ ಕಡೆಯಿಂದ KA 19 EH 1194 ನೇ ಮೋಟರ್ ಸೈಕಲ್ ನ್ನು ಅದರ ಸವಾರ ಶರತ್ ಕುಮಾರ್ ರವರು  ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅಪಘಾತವಾಗಿದ್ದು, ಅಪಘಾತದಲ್ಲಿ ಪಿರ್ಯಾದಿದಾರರ  ಮೂಗಿಗೆ , ಬಲಕೋಲು ಕೈಗೆ  ಗುದ್ದಿದ ರಕ್ತ ಗಾಯ, ಬಲಕಾಲಿನ ಮೊಣಗಂಟಿಗೆ ಗುದ್ದಿದ ನೋವು ಹಾಗೂ ಗೀರಿದ ಗಾಯ , ಎದೆಗೆ ಹಾಗೂ ತಲೆಗೆ  ಗುದ್ದಿದ ನೋವು ಆಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 128/2021  ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶಂಕರನಾರಾಯಣ ಭಟ್ ಪ್ರಾಯ 55 ವರ್ಷ ತಂದೆ: ದಿ. ತಿರುಮಲೇಶ್ವರ ಭಟ್ ವಾಸ: ಕೋಡಿಮಜಲು ಮನೆ ನರಿಕೊಂಬು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ಎಂದಿನಂತೆ 28-11-2021 ರಂದು ಬೆಳಿಗ್ಗೆ 7.30 ಗಂಟೆಗೆ ನರಿಕೊಂಬು  ಗ್ರಾಮದ ಕೋಡಿಮಜಲು ಎಂಬಲ್ಲಿರುವ ತೋಟಕ್ಕೆ ಹೋಗಿ ಅಡಿಕೆ ಹೆಕ್ಕುವಾಗ, ಪಿರ್ಯಾಧಿದಾರರ ನಾದಿನಿಯಾದ ಗುಣವತಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾಧಿದಾರರನ್ನು ಹಾಗೂ ಅವರ ಪತ್ನಿಯನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ನಿಮ್ಮಬ್ಬರನ್ನು ಕೊಲ್ಲದೆ ಬಿಡುವುದಿಲ್ಲ ನಮ್ಮ ಜಾಗವನ್ನು ನಾನು ವಶ ಮಾಡದೆ ಬಿಡುವುದಿಲ್ಲ  ಎಂದು ಬೈಯುತ್ತಾ ಕಲ್ಲಗಳನ್ನು ಬಿಸಾಡಿದ್ದು, ಪಿರ್ಯಾಧಿದಾರರಿಗೆ ಕಲ್ಲು ತಾಗಿ ಮೊಣಕಾಲಿಗೆ ಗಾಯವಾಗಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 139/2021  ಕಲಂ: 447, 504, 506, 324 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹರ್ಷಿತ್ ಜಿ ಬಿ, ಪ್ರಾಯ: 35 ವರ್ಷ, ತಂದೆ: ಗಿರೀಶ್ ಕೆ ಪಿ ,   ವಾಸ: ಕೊರಂಬಟ ಮನೆ, ನಾಲ್ಕೂರು ಗ್ರಾಮ,   ಸುಳ್ಯ  ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಮಧು ಬಾರ್ ಆ್ಯಂಡ್ ರೆಸ್ಟೊರೆಂಟ್ ನ ಮಾಲಿಕರಾಗಿದ್ದು, ದಿನಾಂಕ: 27-11-2021 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ಸದ್ರಿ ರೆಸ್ಟೊರೆಂಟ್ ಕ್ಯಾಶ್ ಕೌಂಟರ್ ನಲ್ಲಿ ಇದ್ದಾಗ ಆರೋಪಿಗಳಾದ ವರ್ಷಿತ್, ಹರ್ಷಿತ್ ಹಾಗೂ ಸಚಿನ್ ಎಂಬುವವರು ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ನಂತರ ದಿನೇಶ್ ಮತ್ತು ರಕ್ಷಿತ್ ಎಂಬುವವರು ಕೈಯಿಂದ ಕೆನ್ನೆಗೆ, ತಲೆ ಭಾಗಕ್ಕೆ ಹೊಡೆದಿದ್ದು, ಅಷ್ಟರಲ್ಲಿ ವರ್ಷಿತ್ ಮತ್ತು ಹರ್ಷಿತ್ ಎಂಬುವವರು ಸೋಡಾ ಬಾಟಲಿಯನ್ನು ಒಡೆದು ಪಿರ್ಯಾದಿದಾರರ ಭುಜಕ್ಕೆ ಹೊಡೆದಿದ್ದು, ನಂತರ ಪಿರ್ಯಾದಿದಾರರನ್ನು ಉದ್ದೇಶಿಸಿ ಕೊಲೆ ಮಾಡದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿರುವುದಾಗಿದೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್‌ ಠಾಣೆಯಲ್ಲಿ ಅ.ಕ್ರ ನಂಬ್ರ  : 87-2021 ಕಲಂ: 504,323,324, 506 ಜೊತೆಗೆ 149 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಇತರೆ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ: 28-11-2021 ರಂದು   ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ. 140/2021  ಕಲಂ: 447, 323, 354, 427 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶಾಫಿ ಇಸ್ಮಾಯಿಲ್ , ಪ್ರಾಯ;55 ವರ್ಷ ತಂದೆ; ದಿ||ಫಕ್ರುದ್ದೀನ್ , ವಾಸ; ಫಾತಿಮಾ   ಮಹಲ್ ಮನೆ,    ಶಿಬೆಟ್ಟು ಲಾಯಿಲಾ ಗ್ರಾಮ   ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಮೂರನೇ  ಮಗನಾದ ಮೊಹಮ್ಮದ್ ನಭಾಹಾನ್ ಇಸ್ಮಾಯಿಲ್ 19 ವರ್ಷ ಈತನು ಹಾಗೂ ಆತನ ಸ್ನೇಹಿತನಾದ ಸಿದ್ದಿಕ್ ಮತ್ತು ಜೈನುಲ್ ರವರೊಂದಿಗೆ ಈ ದಿನ ದಿನಾಂಕ 28/11/2021 ರಂದು ಮಧ್ಯಾಹ್ನ  ಸಮಯ ಬೆಳ್ತಂಗಡಿ ತಾಲೂಕು ನಡ ಗ್ರಾಮದ ಕುತ್ರೋಟ್ಟು ಸನ್ ರಾಕ್ ಹಿಂಬದಿಯ ಸೋಮಾವತಿ ನದಿ ನೀರಿನಲ್ಲಿ ಸ್ನಾನ ಮಾಡುತ್ತಿರುವ ಸಮಯ ಸುಮಾರು 2.30 ಗಂಟೆಗೆ ನದಿ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿದ್ದವನನ್ನು ನೀರಿನಿಂದ ಮೇಲೆಕ್ಕೆತ್ತಿ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದ ಸಮಯ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ   ಯುಡಿಆರ್ ನಂಬ್ರ 37/2021, ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಿ ಅಬ್ದುಲ್ ರಜಾಕ್ (34) ತಂದೆ: ಎಂ ಇಬ್ರಾಹೀಂ ವಾಸ: ಕಲ್ಲುಚರ್ಪೆ ಮನೆ, ಆಲೆಟ್ಟಿ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಖಾಸಗಿ ಆ್ಯಂಬುಲೆನ್ಸ್ ನ ಚಾಲಕರಾಗಿದ್ದು, ದಿನಾಂಕ 27.11.2021 ರಂದು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ರಸ್ತೆಯ ಬದಿಯಲ್ಲಿ ಅಪರಿಚಿತ 65 ವರ್ಷದ ಗಂಡಸು ವ್ಯಕ್ತಿಯು ಆಸ್ವಸ್ಥರಾಗಿ ಆನಾರೋಗ್ಯದಿಂದ  ಮಲಗಿದ್ದವರನ್ನು ಪಿರ್ಯಾದುದಾರಾರು ಚಿಕಿತ್ಸೆಯ ಬಗ್ಗೆ 108 ಆ್ಯಂಬುಲೇನ್ಸ್ ಗೆ ಕರೆಮಾಡಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದುದಾಗಿ ನಂತರ 28.11.2021 ರಂದು ಅಲ್ಲಿನ ವೈದ್ಯಾಧಿಕಾರಿಗಳು ಸಮಯ ಸುಮಾರು ಬೆಳಿಗ್ಗೆ 06: 45 ಗಂಟೆಗೆ ಸದ್ರಿ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ ನಂಬರ್ 51/2021 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-11-2021 10:27 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080