ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 7

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಜಯಂತ ಪ್ರಾಯ 38 ವರ್ಷ  ತಂದೆ:ಶಿವಪ್ಪ ಬಂಗೇರ  ವಾಸ:ಕಾಯರಡ್ಕ ಮನೆ, ಮಾಣಿ ಗ್ರಾಮ ಬಂಟ್ವಾಳ ತಾಲೂಕು ರವರ ಸಂಬಂಧಿ ಶ್ರೀಧರ ಪೂಜಾರಿರವರು ದಿನಾಂಕ:27-12-2021 ರಂದು ಮಾಣಿ ಗ್ರಾಮದ ಕಾಯರಡ್ಕ ಎಂಬಲ್ಲಿರುವ ರವಳನಾಥ ದೇವಸ್ಥಾನದಲ್ಲಿಯ ಕೊಲ ಕಾರ್ಯಕ್ರಮ ಮುಗಿಸಿಕೊಂಡು ತನ್ನ ಮನೆಗೆ ಹೋಗುವರೇ ಸೂರಿಕುಮೇರು-ಬರಿಮಾರು ಸಾರ್ವಜನಿಕ ರಸ್ತೆಯ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಕಾಯರಡ್ಕ ಎಂಬಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೆಎ-19-ಇಡಬ್ಲೂ-8965ನೇ ಮೋಟಾರ್ ಬೈಕನ್‌ ಸವಾರ ಮನೋಜ್‌ಕುಮಾರ್‌ ಎಂಬವರು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಸವಾರಿಮಾಡಿಕೊಂಡು ಬಂದು ಶ್ರೀಧರ ಪೂಜಾರಿರವರಿಗೆ ಡಿಕ್ಕಿ ಪಡಿಸಿರುತ್ತಾನೆ. ಶ್ರೀಧರ ಪೂಜಾರಿರವರು ಡಾಮಾರು ರಸ್ತೆಗೆ ಬಿದ್ದ ಪರಿಣಾಮ ತಲೆಯ ಹಿಂಭಾಗಕ್ಕೆ ಭಾಗಕ್ಕೆ ರಕ್ತಗಾಯವಾಗಿದ್ದು ಹಾಗೂ ಕಿವಿಯಲ್ಲಿ ರಕ್ತ ಬಂದಿರುತ್ತದೆ, ಗಾಯಾಳು ಚಿಕಿತ್ಸೆಯ ಬಗ್ಗೆ ಮಂಗಳೂರು ಜ್ಯೋತಿಯ ಕೆಎಂಸಿ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 170/2021 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸೃಜನ್ ಪ್ರಾಯ: 22 ವರ್ಷ ತಂದೆ: ಷಣ್ಮುಗ ನಂಬಿಯಾರ್, ವಾಸ: ಪಿಜತ್ತಡ್ಕ ಮನೆ, ದೊಂಡೋಲೆ,ಧರ್ಮಸ್ಥಳ ಗ್ರಾಮ, ಬೆಳ್ತಂಗಡಿ ತಾಲೂಕು  ರವರು ದಿನಾಂಕ: 27-12-2021 ರಂದು ತನ್ನ ಬಾಬ್ತು ಕೆಎ 21ಎಕ್ಸ್ 0063 ನೇ ಮೋಟಾರ್ ಸೈಕಲ್ ನಲ್ಲಿ ಸವಾರನಾಗಿ ತನ್ನ ಸ್ನೇಹಿತ  ಪ್ರವೀಣ್ ಹಾಗೂ ಪಿರ್ಯಾದಿದಾರರು ಸಹ ಸವಾರನಾಗಿ  ಕಳಿತುಕೊಂಡು ಉಜಿರೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿರುವ ಸಮಯ ಬೆಳ್ತಂಗಡಿ ತಲೂಕು ಧರ್ಮಸ್ಥಳ ಗ್ರಾಮದ ನೆತ್ರಾವತಿ ನದಿಯಬಳಿ ತಲುಪುತ್ತಿದ್ದಂತೆ ಆಶಯ ಲಾಡ್ಜ್ ಕಡೆಗೆ ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ  ಕೆಎ 21ಎ 8916 ನೇ ಆಟೋ ರಿಕ್ಷಾ ದುಡುಕುತನದಿಂದ ವೇಗವಾಗಿ ಬಲಕ್ಕೆ ತಿರುಗಿಸಿದ್ದ ಪರಿಣಾಮ ಆಟೋ ರಿಕ್ಷಾಕ್ಕೆ  ಮೋಟಾರು ಸೈಕಲ್ ಢಿಕ್ಕಿ ಹೊಡೆಯಿತು, ಮೋಟಾರು ಸೈಕಲ್ ಸವಾರ ಹಾಗೂ ಸಹ ಸವಾರ  ಬೈಕ್ ಸಮೇತ ರಸ್ತೆಗೆ ಮಗುಚಿ ಬಿದ್ದು ಬೈಕ್ ಸವಾರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ, ಗಾಯಾಳು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಿಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 100/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಬಿ. ರಜಾಕ್, ಪ್ರಾಯ: 48 ವರ್ಷ, ತಂದೆ: ದಿ. ಮಹಮ್ಮದ್ ಬ್ಯಾರಿ, ವಾಸ: ಬಡೆಕೋಡಿ ಮನೆ, ಸರ್ವೆ ಗ್ರಾಮ, ಪುತ್ತೂರು ತಾಲೂಕು ರವರು ದಿನಾಂಕ 27.12.2021 ರಂದು ಸಂಪ್ಯದಿಂದ ಬಡೆಕೋಡಿಗೆ ಹೋಗುವರೇ ಅವರ ಬಾಬ್ತು ಕೆಎ-21-ಎ-588 ನೇ ಆಟೋ ರಿಕ್ಷಾದಲ್ಲಿ ಅವರ ಪತ್ನಿ ಶ್ರೀಮತಿ ಬಿ.ಅನ್ನತ್ ಹಾಗೂ ಮಗಳು ಫಾತಿಮತ್ ಮಹರೂಫ ರವರನ್ನು ಕುಳ್ಳಿರಿಸಿಕೊಂಡು, ಪುತ್ತೂರು – ಕಾಣಿಯೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಹೋಗುತ್ತಾ ಪುತ್ತೂರು ತಾಲೂಕು ಮುಂಡೂರು ಗ್ರಾಮದ ಕಾಳಿಂಗಹಿತ್ತಿಲು ಎಂಬಲ್ಲಿಗೆ ತಲುಪಿದಾಗ ಫಿರ್ಯಾದಿದಾರರ ಎದುರುಗಡೆಯಿಂದ ಅಂದರೆ ಕಾಣಿಯೂರು ಕಡೆಯಿಂದ ಪುತ್ತೂರು ಕಡೆಯಿಂದ ಸ್ಕೂಟರೊಂದನ್ನು ಅದರ ಸವಾರನು ರಸ್ತೆಯ ತೀರಾ ಬಲಬದಿಗೆ ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಕೂಟರ್ ಸಮೇತ ರಸ್ತೆಗೆ ಉರುಳಿ ಬಿದ್ದು, ಫಿರ್ಯಾದಿದಾರರು ಚಲಾಯಿಸುತ್ತಿದ್ದ ಆಟೋ ರಿಕ್ಷಾದಿಂದ ಫಿರ್ಯಾದಿದಾರರು ಹೊರಗೆ ಉರುಳಿ ಬಿದ್ದು, ಅವರ ಮೇಲೆ ಆಟೋ ರಿಕ್ಷಾ ಕೂಡಾ ಮಗುಚಿ ಬಿದ್ದಾಗ ಅಲ್ಲಿದ್ದ ಸಾರ್ವಜನಿಕರು ಬಂದು ಎಬ್ಬಿಸಿ ಉಪಚಿರಿಸಿ ನೋಡಿದಾಗ ಫಿರ್ಯಾದಿದಾರರ ಬಲ ಕಾಲಿನ ಪಾದಕ್ಕೆ ರಕ್ತ ಗಾಯ, ಮುಖಕ್ಕೆ, ತುಟಿಗೆ, ಹಣೆಗೆ ಮತ್ತು ಮೂಗಿಗೆ ಗುದ್ದಿದ ಗಾಯವಾಗಿದ್ದು, ಅನ್ನತ್ ರವರ ಹಣೆಗೆ ಗುದ್ದಿದ ಗಾಯ  ಹಾಗೂ ಫಾತಿಮತ್ ಮೆಹರೂಫ ರವರ ಹಣೆಗೆ ಗುದ್ದಿದ ಗಾಯವಾಗಿದ್ದವರನ್ನು ಸಂಬಂಧಿ ಬಾತಿಶ್ ಎಂಬವರು ಒಂದು ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಫಿರ್ಯಾದಿದಾರರನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡಿದ್ದು, ಫಿರ್ಯಾದಿದಾರರ ಪತ್ನಿ ಮತ್ತು ಮಗಳಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿದ್ದು, ಅಪಘಾತವುಂಟು ಮಾಡಿದ ಸ್ಕೂಟರ್ ಸವಾರನಿಗೂ ರಕ್ತ ಗಾಯವಾಗಿದ್ದು, ಸದ್ರಿಯವರನ್ನು ಸಾರ್ವಜನಿಕರು ಚಿಕಿತ್ಸೆಗೆ ಪುತ್ತೂರು ಕಡೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅಕ್ರ: 112/2021  ಕಲo: 279, 337   ಐಪಿಸಿ  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸಚಿನ್ ಕುಮಾರ್, ಪ್ರಾಯ 29 ವರ್ಷ, ತಂದೆ: ವಿಶ್ವನಾಥ ರೈ ವಾಸ:ಕಲ್ಲಿಮಾರು ಮನೆ, ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 27-12-2021 ರಂದು 16-00 ಗಂಟೆಗೆ ಆರೋಪಿ ಸ್ಕೂಟರ್  ಸವಾರ ಮಂಜುನಾಥ್ ಎಸ್  ಎಂಬವರು KA-21-Y-6676 ನೇ ನೋಂದಣಿ ನಂಬ್ರದ  ಸ್ಕೂಟರನ್ನು ಕೊಂಬೆಟ್ಟು-ಹಾರಾಡಿ ಏಕಮುಖ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಹಾರಾಡಿ ಕಡೆಯಿಂದ ಕೊಂಬೆಟ್ಟು ಕಡೆಗೆ ಏಕಮುಖ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಕೊಂಬೆಟ್ಟು ಎಂಬಲ್ಲಿ  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಕೊಂಬೆಟ್ಟು ಕಡೆಯಿಂದ ಹಾರಾಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-P-4234 ನೇ ನೋಂದಣಿ ನಂಬ್ರದ ಕಾರಿಗೆ ಅಪಘಾತವಾಗಿ, ವಾಹನದ ಬಲಭಾಗ ಜಖಂಗೊಂಡಿರುತ್ತದೆ. ಅಪಘಾತದಿಂದ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ. ಅಪಘಾತದ ಬಳಿಕ ಸ್ಕೂಟರ್ ಸವಾರ ಸ್ಕೂಟರ್ ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  159/2021 ಕಲಂ: 279ಐಪಿಸಿ &ಕಲಂ:134(B), 218 r/w177 IMV Act. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವೆಂಕಟೇಶ್ ಪ್ರಾಯ:50 ತಂದೆ: ಸಿ.ಎನ್.ಸಾಲ್ಯಾನ್ ವಾಸ:ರಮಣಿಮನೆ, ಕೃಷ್ಣಾಪುರ,7-252/ಎ/1,7 ನೇ ಬ್ಲಾಕ್,ಸೂರತ್ಕಲ್ ಅಂಚೆ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 27-12-2021 ರಂದು 22-45 ಗಂಟೆಗೆ ಆರೋಪಿ ಲಾರಿ ಚಾಲಕ ನಂದನ್ ಕುಮಾರ್ ಎಂಬವರು KA-04-AB-6001 ನೇ ನೋಂದಣಿ ನಂಬ್ರದ ಲಾರಿಯಲ್ಲಿ ಪಾಮ್ ಆಯಿಲ್ ಟಿನ್ ಹಾಗೂ ಪ್ಯಾಕೆಟ್ ಬಾಕ್ಸ್  ಗಳನ್ನು ಹೇರಿಕೊಂಡು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ  ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ತಿರುವು ರಸ್ತೆಯಲ್ಲಿ  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಲಾರಿ ಚಾಲಕನ ಹತೋಟಿ ತಪ್ಪಿ ರಸ್ತೆಯ ಎಡ ಬದಿಗೆ ಮಗುಚಿ ಬಿದ್ದು, ಲಾರಿ ಚಾಲಕನಿಗೆ ಗಾಯವಾಗಿ ಪುತ್ತೂರು ಮಹಾವೀರ ಅಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಅಪಘಾತದಿಂದ ಲಾರಿ ಮತ್ತು ಲಾರಿಯಲ್ಲಿದ್ದ ಪಾಮ್ ಆಯಲ್ ಜಖಂಗೊಂಡಿರುತ್ತದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  160/2021 ಕಲಂ: 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹಾಲಿಂಗೇಶ್ವರ ಭಟ್ ಪ್ರಾಯ:54 ವರ್ಷ, ತಂದೆ: ನಾರಾಯಣ ಭಟ್ ವಾಸ: ಬಿರಾವು ಮನೆ, ನೆಹರುನಗರ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 19-12-2021 ರಂದು 13-00 ಗಂಟೆಗೆ ಆರೋಪಿತೆ ಮಾಧುರಿ ಎಂಬವರು  KA-21- P-8774 ನೇ ನೋಂದಣಿ ನಂಬ್ರದ ಕಾರನ್ನು ಪುತ್ತೂರು-ಕೊಡಿಪ್ಪಾಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ  ಪುತ್ತೂರು ತಾಲೂಕು ಕಬಕ ಗ್ರಾಮದ ಕಾರ್ಜಾಲು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಏಕಾಏಕಿಯಾಗಿ ಮುಖ್ಯ ರಸ್ತೆಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಪುತ್ತೂರು ಕಡೆಯಿಂದ ಬಿರಾವು ಮನೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-X-6560 ನೇ ನೋಂದಣಿ ನಂಬ್ರದ ಸ್ಕೂಟರಿಗೆ ಅಪಘಾತವಾಗಿ, ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಬಲಕೈಯ ಮೊಣಗಂಟು, ಮುಂಗೈಗೆ ಎಲುಬು ಮುರಿತದ ಗಾಯ ಹಾಗೂ ಎದೆಗೆ, ಎಡಕಾಲಿಗೆ ಮತ್ತು ಮುಖಕ್ಕೆ ರಕ್ತಗಾಯವಾಗಿ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  161/2021 ಕಲಂ: 279,338ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ತರೆ ಪ್ರಕರಣ: 1

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪೊಲೀಸ್ ಉಪನಿರೀಕ್ಷಕರು, ಸುಳ್ಯ ಪೊಲೀಸ್ ಠಾಣೆ ರವರು ದಿನಾಂಕ: 28.12.2021 ರಂದು ಸಿಬ್ಬಂದಿಗಳೊಂದಿಗೆ ಸುಳ್ಯ ಕಸಬಾ ಗ್ರಾಮದ ಜ್ಯೋತಿ ಸರ್ಕಲ್ ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಒಂದು ಜೀಪ್ ನಲ್ಲಿ ಸುಳ್ಯ  ಜ್ಯೂನಿಯರ್ ಕಾಲೇಜ್ ರಸ್ತೆ ಕಡೆಯಿಂದ ಸುಳ್ಯದ ಶ್ರೀರಾಂ ಪೇಟೆಯ ಕಡೆಗೆ ಮೂರು ಜನ ವ್ಯಕ್ತಿಗಳು ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿರುವುದಾಗಿ ಬಂದ ವರ್ತಮಾನದ ಮೇರೆಗೆ ಪಿರ್ಯಾದುದಾರರು ಸದ್ರಿ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಶ್ರೀರಾಂ ಪೇಟೆ ಕಡೆಯಿಂದ ಜ್ಯೂನಿಯರ್ ಕಾಲೇಜು ಸೇರುವ ರಸ್ತೆಯಲ್ಲಿ ಹೋಗುತ್ತಾ ಇರುವಾಗ ಶ್ರೀಕೃಷ್ಣ ಭಟ್ ರವರ ಮನೆಯ ಬಳಿಗೆ ಸಮಯ 12.00 ಗಂಟೆಗೆ  ತಲುಪುತ್ತಿದ್ದಂತೆ  ಜ್ಯೂನಿಯರ್ ಕಾಲೇಜು ರಸ್ತೆಯ ಕಡೆಯಿಂದ ಜೀಪ್ ನಂಬ್ರ KL06 9306 ಬರುತ್ತಿದ್ದು, ಸದ್ರಿ ಜೀಪನ್ನು ನಿಲ್ಲಿಸಿ ಪರಿಶೀಲಿಸಿದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಮಧ್ಯದ ಸ್ಯಾಚೇಟ್ ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದು, ಸದ್ರಿ ಜೀಪಿನ ಚಾಲಕ ಜ್ಞಾನ ಪ್ರಕಾಶ್ ಯಾನೆ ಸಲಾಂ, ಆತನ ಹೆಂಡತಿ ಡಯಾನ ಓಡಿಹೋಗಿದ್ದು, ಜೀಪಿನ ಎದುರು ಕುಳಿತುಕೊಂಡಿದ್ದು ಡಿನೋಯಿ ಪ್ರಾಯ 39 ವರ್ಷ ತಂದೆ: ದೇವಸ್ಯ, ನಡುಬೈಲು ಅಂಚೆ, ಸರಕಾರಿ ಆಸ್ಪತ್ರೆ ಹತ್ತಿರ, ಸುಳ್ಯ ಕಸಬಾ ಗ್ರಾಮ ಸುಳ್ಯ ತಾಲೂಕು ಎಂಬುವವನನ್ನು ಮತ್ತು ಜೀಪಿನಲ್ಲಿದ್ದ, DK DOUBLE KICK FINE WHISKY  ಎಂದು ಬರೆದಿರುವ 180 ಎಂ.ಎಲ್ ನ   48  ಸ್ಯಾಚೆಟ್ ಗಳಿದ್ದು,  ಒಟ್ಟು 20 ಬಾಕ್ಸ್ ಗಳಲ್ಲಿ ಓಟ್ಟು  960 ಸ್ಯಾಚೆಟ್ ಗಳಿದ್ದು ಅದರಲ್ಲಿ  ಒಟ್ಟು 172 ಲೀಟರ್ 800 ಎಂಎಲ್ ಮದ್ಯವನ್ನು ಹಾಗೂ ಜೀಪನ್ನು ಪಂಚರ ಸಮಕ್ಷಮ ಮಹಜರು ನಡೆಸಿ ವಶಕ್ಕೆ ಪಡೆದುಕೊಂಡುಕೊಂಡಿರುವುದಾಗಿ ಮತ್ತು ಮಧ್ಯದ ಅಂದಾಜು ಮೌಲ್ಯ 53,731.20 ಹಾಗೂ ಜೀಪಿನ ಅಂದಾಜು ಮೌಲ್ಯ 2,00,000 ಆಗಿರುತ್ತದೆ. ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಅ.ಕ್ರ 104/2021 ಕಲಂ: 32,34, 43 ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-12-2021 11:16 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080