ಅಪಘಾತ ಪ್ರಕರಣ: ೦3
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಬ್ದುಲ್ ಸತ್ತಾರ್ಪ್ರಾಯ: 37 ವರ್ಷತಂದೆ: ಅಹಮ್ಮದ್ ಕುಂಇ ವಾಸ: #1/22/26 ಪುತ್ತುಮುದಿ ಮನೆ ಮಂಚಿ ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 28.12.2022 ರಂದು ತನ್ನ ಬಾಬ್ತು ಆಟೋರಿಕ್ಷಾದಲ್ಲಿ ಚಾಲಕನಾಗಿ ಮಂಗಳೂರು-ಬಿಸಿ ರೋಡ್ ರಾಷ್ಟೀಯ ಹೆದ್ದಾರಿಯಲ್ಲಿ ತುಂಬೆಯಿಂದ ಬಿ.ಸಿ.ರೋಡ್ ಕಡೆಗೆ ಬರುತ್ತಾ ಸಮಯ ಸುಮಾರು ಮಧ್ಯಾಹ್ನ 02:30 ಗಂಟೆಗೆ ಬಂಟ್ವಾಳ ತಾಲೂಕು, ತುಂಬೆ ಗ್ರಾಮದ, ಪೇರಳಬೈಲು ಎಂಬಲ್ಲಿ ತಲುಪುವಾಗ ಫಿರ್ಯಾದಿದಾರರ ಎದುರಿನಿಂದ KA-19-HF-3324 ನೇ ಮೋಟಾರ್ ಸೈಕಲ್ ನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಆತನ ಎದುರಿನಿಂದ ಹೋಗುತ್ತಿದ್ದ ಬೈಸಿಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆಸಿದ್ದು ಪರಿಣಾಮ ಬೈಸಿಕಲ್ ಸವಾರ ಮಹಮ್ಮದ್ ಬಸೀರ್ ರವರು ಎಸೆಯಲ್ಪಟ್ಟು ರಸ್ತೆಗೆ ಬಿದ್ದು ತಲೆಯ ಮಧ್ಯಭಾಗಕ್ಕೆ, ಹಿಂಬದಿಗೆ, ಎಡಕಣ್ಣಿನ ಬಳಿ ಗುದ್ದಿದ ಹಾಗೂ ತರಚಿದ ಗಾಯಗಳಾಗಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರು ಕಂಕನಾಡಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ, ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 159/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚೇತನ್ ಪ್ರಾಯ (29) ತಂದೆ: ದಿ.ನಾಗೇಶ್ ,ವಾಸ: ಬಾಳೂರು ಗ್ರಾಮ, ಮೂಡಗೆರೆ ತಾಲೂಕು, ಚಿಕ್ಕಮಂಗಳೂರು ಜಿಲ್ಲೆ ರವರು ದಿನಾಂಕ:28-12-2022 ರಂದು ಕೆಎ 70 4441 ನೇ ಆಟೋರಿಕ್ಷಾದಲ್ಲಿ ಪ್ರಯಾಣಿಕರಾಗಿ ತನ್ನ ಸ್ನೇಹಿತ ಸುಹೈಲ್ ರವರೋಂದಿಗೆ ಓಡಿಲ ದಿಂದ ಉಜಿರೆಗೆ ಬರುತ್ತಿರುವ ಸಮಯ ಸುಮಾರು ಸಂಜೆ 6.30 ಗಂಟೆಗೆ ಬೆಳ್ತಂಗಡಿ ತಾಲೂಕು,ಉಜಿರೆ ಗ್ರಾಮದ ಓಡಿಲ ಮಧುರ ನಿವಾಸ ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ವಿರುದ್ದ ದಿಕ್ಕಿನಿಂದ ಅಂದರೆ ಉಜಿರೆ ಕಡೆಯಿಂದ ಬೆಳಾಲು ಕಡೆಗೆ ಕೆ ಎ 21 ಎ 8850 ನೇ ಬೊಲೇರೋ ವಾಹನವನ್ನು ಅದರ ಚಾಲಕ ಓಮ್ಮೇಲೆ ದುಡುಕುತನ ದಿಂದ ಚಲಾಯಿಸಿ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದನು, ಪರಿಣಾಮ ಆಟೋರಿಕ್ಷಾ ಮಗುಚಿ ಬಿದ್ದು ಪಿರ್ಯಾದಿದಾರಿಗೆ ಬಲ ತೋಡೆಗೆ ಗುದ್ದಿದ ಗಾಯ,ಬಲಕಾಲಿನ ಮಂಡಿಗೆ ರಕ್ತಗಾಯ,ಎಡಕಾಲಿ ಮಂಡಿಗೆ ಹಾಗೂ ಕೋಲುಕಾಲಿಗೆ ತರಚಿದ ರಕ್ತ ಗಾಯ, ಸುಹೈಲ್ ರವರಿಗೆ ತಲೆಗೆ, ಬಲ ಕೈ ಮಣಿಗಂಟಿಗೆ ರಕ್ತಗಾಯ, ಹಾಗೂ ಮತ್ತೊಬ್ಬ ಸಹ ಪ್ರಯಾಣಿಕ ರಫೀಕ್ ರವರಿಗೆ ತಲೆಯ ಹಿಂಬದಿಗೆ ರಕ್ತಗಾಯ, ಹಾಗೂ ಆಟೋರಿಕ್ಷಾ ಚಾಲಕ ಪ್ರವೀಣ್ ರವರಿಗೆ ಕುತ್ತಿಗೆಗೆ ಗುದ್ದಿದ ಗಾಯ,ಬಲಕೈ ಮೊಣಗಂಟಿಗೆ,ರಕ್ತ ಗಾಯ,ಬಾಯಿಗೆ,ತುಟಿಗೆ ಗುದ್ದಿದ, ಗಾಯಗಳಾಗಿ ಚಿಕಿತ್ಸೆ ಬಗ್ಗೆ ಉಜಿರ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 172/2022 ಕಲಂ; 279, 337, ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ದಿವಾಕರ, ಪ್ರಾಯ 23 ವರ್ಷ, ತಂದೆ: ಲಿಂಗಪ್ಪ ಪರವ ವಾಸ: ಕಳಸದ ಪಲ್ಕೆ ಮನೆ, ಕಾವಳಮುಂಡೂರು ಗ್ರಾಮ, ಕಾವಳಕಟ್ಟೆ ಅಂಚೆ, ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 27-12-2022 ರಂದು 16:15 ಗಂಟೆಗೆ ಆರೋಪಿ ಕಾರು ಚಾಲಕ ಮಿಥುನ್ ಎಂಬವರು KA-20-P-9838 ನೇ ನೋಂದಣಿ ನಂಬ್ರದ ಕಾರನ್ನು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ರಸ್ತೆಯನ್ನು ದಾಟಿ ರಸ್ತೆ ಬದಿಗೆ ತಲುಪಿದ ಶಾಲಾ ವಿದ್ಯಾರ್ಥಿ ಪುನೀತ್ ( 12ವ) ಎಂಬವರಿಗೆ ಅಪಘತವಾಗಿ, ಅವರಿಗೆ ತಲೆಗೆ ಹಾಗೂ ಕಾಲಿಗೆ ಗಾಯಗಳಾಗಿ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಪಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 198/2022 ಕಲಂ: 279, 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವಬೆದರಿಕೆ ಪ್ರಕರಣ: ೦3
ಧರ್ಮಸ್ತಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರೇಮಾ ಪ್ರಾಯ: 27 ವರ್ಷ, ಗಂಡ: ಲಿಂಗಪ್ಪ ವಾಸ: ಕೋಳಾರ್ ಮನೆ, ರೆಖ್ಯಾ ಗ್ರಾಮ ಬೆಳ್ತಂಗಡಿ ತಾಲೂಕು ರವರು ಹಾಗೂ ಅಣ್ಣ ವಸಂತ , ಮತ್ತು ಅತ್ತಿಗೆ ಲಲಿತ ಎಂಬವರು ನಾಗೇಶ ಎಂಬವರ ಬಾಬ್ತು ತೋಟಕ್ಕೆ ಕೂಲಿ ಕೆಲಸಕ್ಕೆಂದು ಹೋಗಿದ್ದು, ಕೆಲಸ ಮುಗಿಸಿ ವಾಪಸು ಹೊರಟು ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ ಕೋಳಾರ್ ಎಂಬಲ್ಲಿ ಬರುತ್ತಿರುವ ಸಮಯ ಸುಮಾರು 18.00 ಗಂಟೆಗೆ ಪಿರ್ಯಾದಿದಾರರ ಪರಿಚಯದ ನಾರಾಯಣ ಮತ್ತು ರಾಮಪ್ಪ ಎಂಬವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಆರೋಪಿಗಳು ನಿನಗೆ ಬಾರಿ ಅಹಂಕಾರ ಉಂಟು ವಿನಯ ನ ಬಗ್ಗೆ ಬಾರಿ ಅಪಪ್ರಚಾರ ಮಾಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಆರೋಪಿಗಳ ಪೈಕಿ ರಾಮಪ್ಪ ಕೈಯಿಂದ ಎಡಕೆನ್ನೆಗೆ ಹೊಡೆದಿರುವುದಲ್ಲದೇ . ನಾರಾಯಣ ಎಂಬವನು ಕೈಯಿಂದ ದೂಡಿ ಹಾಕಿದ್ದು ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಹಿಂದೆಯೇ ಪಿರ್ಯಾದಿದಾರರ ಅಣ್ಣ ವಸಂತ ಮತ್ತು ಅತ್ತಿಗೆ ಲಲಿತ ನಡೆದುಕೊಂಡು ಬರುತ್ತಿರುವುದನ್ನು ನೋಡಿದ ಆರೋಪಿಗಳು ನೀನು ಈಗ ಬದುಕಿದ್ದಿಯಾ ಇನ್ನು ಮುಂದೆ ವಿನಯನ ಬಗ್ಗೆ ಅಪಪ್ರಚಾರ ಮಾಡಿದರೇ ಮುಂದಕ್ಕೆ ನಿನ್ನ ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ನಂತರ ಪಿರ್ಯಾದಿದಾರರನ್ನು ಅವರ ಅಣ್ಣ ವಸಂತ ಮತ್ತು ಅತ್ತಿಗೆ ಲಲಿತ ಎಂಬವರು ಉಪಚರಿಸಿ ಮನೆಗೆ ಕರೆದುಕೊಂಡು ಮನೆಗೆ ಹೋಗಿದ್ದು ತಡರಾತ್ರಿ ನೋವು ಉಲ್ಬಣಗೊಂಡಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈಧ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡು ಚಿಕಿತ್ಸೆಯಲ್ಲಿರುವುದಾಗಿದೆ ಈ ಬಗ್ಗೆ ಧರ್ಮಸ್ತಳ ಪೊಲೀಸ್ ಠಾಣೆ 93/2022 ಕಲಂ:341,323, 504, 506 ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ಳಾರೆ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಅರುಣ್ ರೈ ,ಪ್ರಾಯ 36 ವರ್ಷ , ತಂದೆ; ತಿಮ್ಮಪ್ಪ ರೈ ಬಲ್ಕಾಡಿ ಮನೆ ,ಎಡಮಂಗ ಗ್ರಾಮ ಕಡಬ ತಾಲೂಕು ರವರು ಟಿಪ್ಪರ್ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದವರು ಪುತ್ತೂರಿನಲ್ಲಿ ಕೆಲಸ ಮಗಿಸಿಕೊಂಡು ದಿನಾಂಕ 27-12-2022 ರಂದು ಕಾಣಿಯೂರು ಮಾರ್ಗವಾಗಿ ತನ್ನ ಬಾಬ್ತು ಮೋಟಾರ್ ಸೈಕಲ್ ನಂ ಕೆಎ 21-ಸಿ-0089 ನೇದರಲ್ಲಿ ಪುಣ್ಚತ್ತಾರಿನಿಂದ ದೋಲ್ಪಾಡಿ ಮಾರ್ಗವಾಗಿ ಹೋಗುತ್ತಿರುವ ವೇಳೆ ಸಮಯ ಸುಮಾರು ರಾತ್ರಿ 7-15 ಗಂಟೆಗೆ ಕಡಬ ತಾಲೂಕು ಕಾಣಿಯೂರು ಗ್ರಾಮದ ಬೀಜತಡ್ಕ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಕೆಎ 16-ಬಿ-7698 ನೇ ತೂಫಾನ್ ಗಾಡಿಯಲ್ಲಿ ಬಂದ ನಳಿಯಾರು ನಿವಾಸಿ ಕುಸುಮಾಧರ ಎನ್ ಟಿ ಎಂಬಾತನು ಆತನ ಗಾಡಿಯನ್ನು ಪಿರ್ಯಾದಿದಾರರ ಮೋಟಾರ್ ಸೈಕಲ್ ನ್ನು ಓವರ್ ಟೇಕ್ ಮಾಡಿ ಅಡ್ಡಲಾಗಿ ಇಟ್ಟು ಅವರನ್ನು ಉದ್ದೇಶಿಸಿ ಅವ್ಯಾಚ್ಯ ಶಬ್ದಗಳಿಂದ ಬೈದುದಲ್ಲದೇ “ ನಿನ್ನನ್ನು ಮುಂದಕ್ಕೆ ಗಾಡಿಯ ಅಡಿಗೆ ಹಾಕಿ ಕೊಲ್ಲತ್ತೇನೆ “ ಎಂಬುದಾಗಿ ಜೀವಬೆದರಿಕೆ ಒಡ್ಡಿ ಹೋಗಿರುತ್ತಾನೆ ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 107/2022 ಕಲಂ 341,504,506 ಭಾ.ಧಂ.ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ
ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಶೋಕ್ ಕುಮಾರ್ ಎಂ (43) ತಂದೆ: ದಿವಾಕರ ನಾಯಕ್ ವಾಸ: ಮುಂಡೋಳಿ ಮೂಲೆ ಮನೆ, ಅಜ್ಜಾವರ ಗ್ರಾಮ, ಸುಳ್ಯ ತಾಲೂಕು ರವರು ತಮ್ಮ ಮನೆಗೆ ತಮ್ಮ ಬಾಬ್ತು ಕಾರಿನಲ್ಲಿ ದಿನಾಂಕ 27.12.2022 ಹೋಗುತ್ತಿರುವ ಸಮಯ ಸುಮಾರು 17:00 ಗಂಟೆಗೆ ತಮ್ಮ ಮನೆಯ ಗೇಟಿನ ಎದುರು ರಸ್ತೆಯಲ್ಲಿ ಆಪಾಧಿತ ಉಮೇಶ್ ನಾಯಕ್ ಗೋರಿಕಲ್ಲು ಎಂಬಾತನು ನಿಂತಿದ್ದು ಪಿರ್ಯಾದುದಾರರು ಕಾರಿನ ಹಾರನ್ ಹೊಡೆದರು ಸಹ ದಾರಿಯನ್ನು ಬಿಡದೆಯಿದ್ದು, ಅಪಾಧಿತನು ಪಿರ್ಯಾದುದಾರರನ್ನು ಉದ್ದೇಶಿಸಿ ನೀನು ಏನು ದೊಡ್ಡ ಜನ ನ, ನೀನು ವಕೀಲನಾದರೆ ನಿನಗೆ ಆಯಿತು ಎಂದು ಕೈಯಲ್ಲಿ ದೊಣ್ಣೆ ಮತ್ತು ಕತ್ತಿಯನ್ನು ಹಿಡಿದುಕೊಂಡು ಪಿರ್ಯಾದುದಾರರ ಮೇಲೆ ಹಲ್ಲೆ ಮಾಡಿ ಶರ್ಟ್ ನ್ನು ಹರಿದು ಹಾಕಿ, ನಿನ್ನ ಕೊಲ್ಲದೇ ಬಿಡುವುದಿಲ್ಲ ವೆಂದು ಜೀವ ಬೆದರಿಕೆ ಹಾಕಿದ್ದು, ಪಿರ್ಯಾದುದಾರರ ಚಿಕ್ಕಪ್ಪ ಕೇಶವ ನಾಯಕ್ ಮತ್ತು ಉಮೆಶ್ ನಾಯಕ್ ಎಂಬವರ ಮದ್ಯೆ ಜಾಗದ ವಿಚಾರದ ಬಗ್ಗೆ ವ್ಯಾಜ್ಯವಿದ್ದು, ಈ ಬಗ್ಗೆ ಮನಸ್ಥಾಪ ಇಟ್ಟುಕೊಂಡು ಪಿರ್ಯಾದುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ದೊಣ್ಣೆಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದು ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ ನಂ: 156/2022 ಕಲಂ:341, 324,504, 506, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಜಾನಕಿ, ಪ್ರಾಯ: 47 ವರ್ಷ, ಗಂಡ: ಅಣ್ಣಿ ಗೌಡ, ವಾಸ: ಪಂಜೋಳಿ ಮಾರು ಮನೆ, ಉಜಿರೆ ಗ್ರಾಮ, ಬೆಳ್ತಂಗಡಿ ತಾಲೂಕು ರವರ ತಮ್ಮ ಹೇಮಂತ(45) ಎಂಬವರು ಅವಿವಾಹಿತರಾಗಿದ್ದು, ಒಬ್ಬಂಟಿಯಾಗಿ ಮನೆಯಲ್ಲಿ ವಾಸ ವಾಗಿದ್ದು, ಜೀವನದಲ್ಲಿ ಜಿಗುಪ್ಸೆ ಗೊಂಡು ದಿನಾಂಕ: 27-11-2022 ರಂದು ಬೆಳಿಗ್ಗೆ 11-00 ಗಂಟೆಯಿಂದ 15-00 ಗಂಟೆಯ ಮದ್ಯದ ಅವಧಿಯಲ್ಲಿ ತನ್ನ ಮನೆಯಾದ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಅರಳಿ ಚಾಕೋಟೆ ಗಂಡಿ ಎಂಬಲ್ಲಿ ಮನೆಯ ಎದುರಿನ ಚಾವಡಿಯ ಅಡ್ಡಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿ ರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 58/2022 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.