ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಗಿರಿಧರ ಡಿ. ಪ್ರಾಯ 23 ವರ್ಷ, ತಂದೆ: ಹರೀಶ ಡಿ. ವಾಸ: ಎಟ್ಯಡ್ಕ ಮನೆ. ಕೆಯ್ಯೂರು ಗ್ರಾಮ, ಪುತ್ತೂರು ತಾಲೂಕು  ರವರು ದಿನಾಂಕ: 29-01-2022 ರಂದು ಆಟೋ ರಿಕ್ಷಾ ನಂಬ್ರ: ಕೆಎ-21-ಬಿ-6693 ನೇದರಲ್ಲಿ ನೆಟ್ಟಾಳ ಕ್ರಾಸ್ ನಿಂದ ಪರಿಚಯದ ಪ್ರಯಾಣಿಕರಾದ ಗುರುಪ್ರಸಾದ್, ಪ್ರವೀಣ್ ದೇರ್ಲ, ಹರ್ಷಿತ್, ಲೀಲಾವತಿ, ಲಕ್ಷ್ಮೀ ಎಂಬವರನ್ನು ಕುಳ್ಳಿರಿಸಿಕೊಂಡು ಮಾಡಾವು ಬೊಳಿಕ್ಕಲ ಎಂಬಲ್ಲಿಗೆ ದೇವಿನಗರ- ನೆಟ್ಟಾಳ ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಾ ಕೆಯ್ಯೂರು ಗ್ರಾಮದ ಪೊಯ್ಯಳೆ ಕೊರಗಪ್ಪ ಮೂಲ್ಯ ರವರ ಮನೆಯ ಬಳಿ ತಲುಪಿದಾಗ ಎದುರುಗಡೆಯಿಂದ ಅಂದರೆ ದೇವಿನಗರ ಕಡೆಯಿಂದ ನೆಟ್ಟಳ ಕಡೆಗೆ ಜೀಪೊಂದನ್ನು ಅದರ ಚಾಲಕ ಅಜಾಕರೂಕತೆ ನೀರ್ಲಕ್ಷತನದಿಂದ ರಸ್ತೆಯ ತೀರ ಬಲಬದಿಗೆ ಚಲಾಯಿಸಿ, ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು, ಆಟೋ ರಿಕ್ಷಾವು ರಸ್ತೆಗೆ ಮಗುಚಿ ಬಿದ್ದು, ಪಿರ್ಯಾದಿದಾರರು ಮತ್ತು ಪ್ರಯಾಣಿಕರು ಆಟೋ ರಿಕ್ಷಾದ ಅಡಿಯಲ್ಲಿ ಸಿಲುಕಿಕೊಂಡವರನ್ನು ಡಿಕ್ಕಿ ಹೊಡೆದ ಜೀಪಿನ ಚಾಲಕ ಚಂದ್ರಶೇಖರ, ಜೀಪಿನಲ್ಲಿದ್ದ ಶ್ರೀನಿವಾಸ ಮತ್ತು ಅಲ್ಲಿ ಸೇರಿದ ಸಚಿನ್ ಹಾಗೂ ಇತರ ಸಾರ್ವಜನಿಕರು ಸೇರಿ ಆಟೋ ರಿಕ್ಷಾವನ್ನು ಮೇಲೆತ್ತಿ, ಅದರಡಿಯಲ್ಲಿ ಸಿಲುಕಿಕೊಂಡಿದ್ದವರನ್ನು ಉಪಚರಿಸಿ ನೋಡಲಾಗಿ ಪಿರ್ಯಾದಿದಾರರಿಗೆ ಎಡಕೈ ಅಂಗೈಗೆ, ಕಿವಿಗೆ ತರಚಿದ ರೀತಿಯ ನೋವು ಮತ್ತು ಪ್ರಯಾಣಿಕರಾದ ಗುರುಪ್ರಸಾದ್ ರವರ ತಲೆಗೆ ರಕ್ತಗಾಯ, ಪ್ರವೀಣ್ ರವರಿಗೆ ತಲೆಗೆ ಗಂಬೀರ ರೀತಿಯ ರಕ್ತಗಾಯ, ಲೀಲಾವತಿಯವರಿಗೆ ಎಡ ಮೊಣಕೈಗೆ ತರಚಿದ ಗಾಯ, ಲಕ್ಷ್ಮೀ ರವರಿಗೆ ಬಲ ಬದಿ ಭುಜಕ್ಕೆ ಗುದ್ದಿದ ಮತ್ತು ರಕ್ತಗಾಯ ಹಾಗೂ ಹರ್ಷಿತ್ ರವರಿಗೆ ಬಲ ಕೆನ್ನೆಯ ಬಳಿ ತರಚಿದ ಗಾಯ ಮತ್ತು ಬಲಕಾಲಿಗೆ ಗುದ್ದಿದ ರೀತಿಯ ಗಾಯವಾಗಿದ್ದು, ಆಟೋ ರಿಕ್ಷಾವು ಮುಂಬಾಗ ಸಂಪೂರ್ಣ ಜಖಂಗೊಂಡಿರುತ್ತದೆ. ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಜೀಪು ಚಾಲಕರು ಚಂದ್ರಶೇಖರ ರವರಾಗಿದ್ದು, ಜೀಪು ನಂಬ್ರ: ಕೆಎ-19-ಎಂ-7131 ಆಗಿರುತ್ತದೆ. ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿದ್ದ ಗಾಯಾಳು ಪ್ರವೀಣ್ ದೇರ್ಲ, ಪ್ರಾಯ: 40, ತಂದೆ: ಚೋಮ, ವಾಸ: 4-131, ದೇರ್ಲ ಮನೆ, ಮಾಡಾವು ಅಂಚೆ, ಕೆಯ್ಯೂರು ಗ್ರಾಮ, ಪುತ್ತೂರು ತಾಲೂಕು ಎಂಬವರು  ಚಿಕಿತ್ಸೆಗೆ ಸ್ಪಂದಿಸದೇ  ದಿನಾಂಕ;- 29.01.2022 ರಂದು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅಕ್ರ: 17/2022  ಕಲo: 279, 337, 338, 304(ಎ)  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಬ್ದುಲ್ ರಹಿಮಾನ್ ಯು, ಪ್ರಾಯ 50 ವರ್ಷ, ತಂದೆ: ಅಬ್ದುಲ್ ಹಮೀದ್ ಯು, ವಾಸ: ಬೊಳಂತಿಲ ಮನೆ, 34 ನೇ ನೆಕ್ಕಿಲಾಡಿ ಗ್ರಾಮ  ಮತ್ತು ಅಂಚೆ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 28-01-2022 ರಂದು 14-45 ಗಂಟೆಗೆ ಆರೋಪಿ ಕಾರು ಚಾಲಕ ಲಕ್ಷ್ಮೀಶ್ ರಾವ್ ಎಂಬವರು KA-21-Z-2122 ನೇ ನೋಂದಣಿ ನಂಬ್ರದ ಕಾರನ್ನು ಉಪ್ಪಿನಂಗಡಿ-ಪುತ್ತೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪುತ್ತೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕಿನ 34 ನೇ ನೆಕ್ಕಿಲಾಡಿ ಗ್ರಾಮದ ಆದರ್ಶನಗರ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಶಹಾಬುದ್ದೀನ್ ಲಸ್ಕರ್ ಎಂಬವರು ಪ್ರಯಾಣಿಕರಾಗಿ, ಪಿರ್ಯಾದುದಾರರ ತಮ್ಮ ಖಲಂದರ್ ಶಾಫಿ ಎಂಬವರು ಚಾಲಕರಾಗಿ, ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ  ಚಲಾಯಿಸಿಕೊಂಡು ಹೋಗುತ್ತಿದ್ದ KA-21-C-1416 ನೇ ನೋಂದಣಿ ನಂಬ್ರದ ಅಟೋರಿಕ್ಷಾಕ್ಕೆ ಅಪಘಾತವಾಗಿ, ಅಟೋರಿಕ್ಷಾ ಪಲ್ಟಿಯಾಗಿ ರಸ್ತೆಗೆ ಬಿದ್ದು, ಖಲಂದರ್ ಶಾಫಿಯವರಿಗೆ ತಲೆಗೆ, ದವಡೆಗೆ ಗುದ್ದಿದ ಹಾಗೂ ರಕ್ತಗಾಯ ಮತ್ತು ಶಹಾಬುದ್ದೀನ್ ಲಸ್ಕರ್ ರವರಿಗೆ ಮುಖಕ್ಕೆ, ಬಲಕಾಲಿನ ಕೋಲು ಕಾಲಿಗೆ ಗುದ್ದಿದ ಮತ್ತು ರಕ್ತಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  15/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಗಂಗಾಧರ, ಪ್ರಾಯ 46 ವರ್ಷ, ತಂದೆ: ದಿ|| ಬಾಬು ಪೂಜಾರಿ, ವಾಸ: ಆನೆಮಜಲು ಮನೆ, ಬನ್ನೂರು ಅಂಚೆ ಮತ್ತು ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 28-01-2022 ರಂದು ಆರೋಪಿ ಬೊಲೆರೋ ವಾಹನ ಚಾಲಕ ಉದಯ ಕುಮಾರ್‌ ಎಂಬವರು KA-19-MH-9634  ನೇ ನೋಂದಣಿ ನಂಬ್ರದ ಬೊಲೆರೋ ವಾಹನವನ್ನು  ಪುತ್ತೂರು-ಎಪಿಎಂಸಿ-ಪಡೀಲ್ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪಡೀಲ್ ಕಡೆಯಿಂದ ಎಪಿಎಂಸಿ ಕಡೆಗೆ ಚಲಾಯಿಸಿಕೊಂಡು ಹೋಗಿ , ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೊಟೇಚಾ ಹಾಲ್ ಬಳಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಮರೀಲ್ ಕಡೆಯಿಂದ ಆನೆಮಜಲು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-J-0121 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಬೊಲೆರೋ ವಾಹನದ ಹಿಂಭಾಗದ ಬಲಭಾಗದ ಬಾಡಿಯು ಅಪಘಾತವಾಗಿ, ಪಿರ್ಯಾದುದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಬಲಕಣ್ಣಿನ ಬಳಿ ತರಚಿದ ಗಾಯ ಹಾಗೂ ಬಲಕೈಯ ಅಂಗೈಯ ಮೇಲ್ಭಾಗ, ಬಲಭುಜಕ್ಕೆ ಹಾಗೂ ಹಣೆಯ ಬಲಬದಿಗೆ ಗುದ್ದಿದ ನೋವಾಗಿದ್ದವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ  ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  16/2022 ಕಲಂ: 279,337 ಐಪಿಸಿ  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮೋಹನ್ ಕುಮಾರ್ ಪ್ರಾಯ 39 ವರ್ಷ ತಂದೆ: ಅಣ್ಣಪ್ಪ ಗೌಡ ವಾಸ: ಮೇಲಿನ ಹಿತ್ತಿಲು ಮನೆ ಕೋಡಿಂಬಾಡಿ ಗ್ರಾಮ ಪುತ್ತೂರು ತಾಲೂಕು ಎಂಬವರು ತಮ್ಮ ತೋಟದಲ್ಲಿ ಆದ ಅಡಿಕೆಯನ್ನು ಎಂದಿನಂತೆ ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದು, ದಿನಾಂಕ: 28.01.2022 ರಂದು ರಾತ್ರಿ 12.00 ಗಂಟೆಯ ಸಮಯಕ್ಕೆ ಫಿರ್ಯಾದಿದಾರರ ಬಾವ ದೀಕ್ಷಿತ್ ರವರು ಫ್ಲೆಕ್ಸ್ ಅಳವಡಿಕೆಯ ಕೆಲಸ ಮುಗಿಸಿ ಫಿರ್ಯಾದಿದಾರರ ಮನೆಯ ಗೇಟಿನ ಪಕ್ಕ ನಿಂತಿದ್ದ ಕೆಎ 21 ವೈ 8893 ಬಜಾಜ್ ಸಿಟಿ 100 ಮೋಟಾರ್ ಸೈಕಲ್ ನ್ನು ಪಾರ್ಕ್ ಮಾಡಿರುವುದನ್ನು ಕಂಡು ಅನುಮಾನಗೊಂಡು ಅಂಗಳದ ಬಳಿ ಹೋದಾಗ ಮೂರು ಜನ ವ್ಯಕ್ತಿಗಳು ಗೋಣಿಚೀಲದಲ್ಲಿ ಅಡಿಕೆಯನ್ನು ಕಳವು ಮಾಡುತ್ತಿದ್ದು,  ಫಿರ್ಯಾದಿದಾರರ ಬಾವ ದೀಕ್ಷಿತ್ ನನ್ನು ಕಂಡು ಮೂರು ಜನ ವ್ಯಕ್ತಿಗಳು ಅಂಗಳದಲ್ಲಿ ಅರೆ ಬರೆ  ತುಂಬಿಸಿದ ಅಡಿಕೆ ಚೀಲವನ್ನು ಬಿಟ್ಟು ಪರಾರಿಯಾಗಿರುತ್ತಾರೆ. ಈ ಸಮಯ ಒಬ್ಬನು ಹೊತ್ತುಕೊಂಡಿದ್ದ ಒಂದು ಚೀಲ ಅಡಿಕೆಯನ್ನು ದಾರಿ ಮಧ್ಯೆ ಎಸೆದು ಓಡಿ ಹೋಗಿರುತ್ತಾನೆ. ದಿನಾಂಕ: 29.01.2022 ರಂದು ಬೆಳಿಗ್ಗೆ ಸಮಾರು 8.00 ಗಂಟೆಗೆ ಓಡಿ ಹೋದ ಆರೋಪಿ ಸಚಿನ್ ಎಂಬಾತನು ಎಸೆದು ಹೋದ ಅಡಿಕೆ ಚವೀಲವನ್ನು ತೆಗೆದುಕೊಂಡು ಬಹೋಗಲು ಬಂಬದವನ್ನು ಫಿರ್ಯಾದಿದಾರರು ಹಿಡಿದು ವಿಚಾರಿಸಿದಾಗ ಕಡೇಶಿವಾಲಯ ನಿವಾಸಿ ಸಚಿನ್ ಎಂದು ತಿಳಿಸಿದ್ದು, ಆರೋಪಿ ಸಚಿನ್ ಹಾಗೂ ಇತರ ಇಬ್ಬರು ಪಿರ್ಯಾದಿದಾರರ ಅಂಗಳದಿಂದ ಒಂದು ಚೀಲ ಅಡಿಕೆಯನ್ನು ಕಳ್ಳತನ ಮಾಡಿದ್ದು, ಕಳವಾದ ಅಡಿಕೆಯ ಮೌಲದಯ ರೂ 2000/- ಆಗಬಹುದು  ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅಕ್ರ: 04/2022 ಕಲಂ: 379 ಜೊ 34 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ:504, 506, 353 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ : ಪೊಲೀಸ್‌ ಉಪನಿರೀಕ್ಷಕರು (ಕಾ&ಸು) ವಿಟ್ಲ ಪೊಲೀಸ್‌ ಠಾಣೆ ರವರು ದಿನಾಂಕ :29-01-2022 ರಂದು ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಗೋಳಿಕಟ್ಟೆಯ ಸಮಾಧಾನ ರಾಜೇಶ್‌ ಕೆ ಎಂಬವರ ಅಂಗಡಿಯ ಮುಂದೆ ಸಾರ್ವಜನಿಕರಿಂದ  ಹಣ ಸಂಗ್ರಹಿಸಿ ಮಟ್ಕಾ ಆಡುತ್ತಿದ್ದಾರೆ ಎಂದು ಮಾಹಿತಿ ಮೇರೆಗೆ ಪಿರ್ಯಾದುದಾರರು ಮತ್ತು ಸಿಬ್ಬಂದಿಗಳು ಪಂಚರ ಸಮಕ್ಷಮ ದಾಳಿ ಸಡೆಸಿ ಆರೋಪಿ ರಾಜೇಶ್‌ ರವರನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಸಾರ್ವಜನಿಕರಿಂದ ಮಟ್ಕಾ ಜೂಜಿಗಾಗಿ ಹಣ ಸಂಗ್ರಹಿಸುವುದಾಗಿ ತಿಳಿಸಿದ್ದು. ದಾಳಿ ನಡೆಸಿ ಆರೋಪಿನನ್ನು ವಶಕ್ಕೆ ಪಡೆದುಕೊಂಡು- ಪಂಚರ ಸಮಕ್ಷಮ ಮಹಜರನ್ನು ತಯಾರಿಸಿ ಮಟ್ಕಾ ಜೂಜಾಟಕ್ಕೆ ಬಳಸಿದ ರೂ 1780/-. ಮಟ್ಕಾ ನಂಬ್ರ ಬರೆದ ಚೀಟಿಗಳು- 2,  ಪೆನ್-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 18/2022  ಕಲಂ: 78(3) ಕೆಪಿ ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 3

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸಂದೇಶ ಪ್ರಾಯ 38 ವರ್ಷ ತಂದೆ: ದೇವಪ್ಪ ಮಡಿವಾಳ ವಾಸ: ಮಡಿವಾಳ ಪಡ್ಪು ಮನೆ ಸಜಿಪ ಮುನ್ನೂರು ಗ್ರಾಮ ಬಂಟ್ವಾಳ ತಾಲೂಕು ರವರ ತಂದೆಯಾದ ದೇವಪ್ಪ ಪ್ರಾಯ 67 ವರ್ಷ ಕಳೆದ 5 ವರ್ಷಗಳಿಂದ ಡಯಾಬಿಟಿಸ್ ಹಾಗೂ ಹಲ್ಲು ನೋವಿನಿಂದ ಬಳಲುತ್ತಿದ್ದು, ಇತ್ತೀಚಿಗೆ ಆರೋಗ್ಯದ ಬಗ್ಗೆ ತುಂಬಾ ಚಿಂತೆ ಮಾಡುತ್ತಿದ್ದರು. ದಿನಾಂಕ 29-01-2022 ರಂದು ಬೆಳಿಗ್ಗೆ 10.30 ಗಂಟೆಗೆ ಯೋಗೀಶ ಕಂದೂರು ರವರು ಪಿರ್ಯಾಧಿದಾರರಿಗೆ ಕರೆ ಮಾಡಿ ರಿಕ್ಷಾ ಚಲಾಯಿಸಿಕೊಂಡು ನಂದಾವರದಿಂದ ಪಾಣೆಮಂಗಳೂರಿಗೆ ಹೋಗುತ್ತಿದ್ದ ಸಮಯ ನಿನ್ನ ತಂದೆಯವರು ಸಜಿಪ ಮುನ್ನೂರು ಗ್ರಾಮದ ನಂದಾವರದ ಶಾರದಾ ಹೈಸ್ಕೂಲ್ ಸಮೀಪದ ಸೇತುವೆಯಿಂದ ನೀರಿಗೆ ಹಾರಿದನ್ನು ನೋಡಿದ್ದು, ಆ ಕೂಡಲೇ ಸ್ಥಳಿಯ ಯುವಕರು ರಕ್ಷಿಸಲು ಪ್ರಯತ್ನಿನಿಸಿದ್ದು, ಆದರೆ ನಿಮ್ಮ ತಂದೆಯವರು ನೀರಿನಲ್ಲಿ ಮುಳಗಿ ಮೃತಪಟ್ಟಿರುವುದಾಗಿಯೂ, ಮೃತದೇಹವನ್ನು ಪಕ್ಕದ ಮೈದಾನದಲ್ಲಿ ಅಂಗಾತನೇ ಮಲಗಿಸಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 10-2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ದಿನೇಶ್ ಪ್ರಾಯ 46  ತಂದೆ: ಜತ್ತಪ್ಪ ಗೌಡ  ವಾಸ: ಕಳುವಾಜೆ ಮನೆ, ವಿಟ್ಲ ಮುಡ್ನೂರು ಗ್ರಾಮ ಬಂಟ್ವಾಳ ತಾಲೂಕು ರವರ ಚಿಕ್ಕ ತಂದೆ ಮೇದಪ್ಪ ಗೌಡ ಯಾನೆ ಮೋಹನ್ ಪ್ರಾಯ 71 ವರ್ಷ ಎಂಬವರು ಬೊಂಬಾಯಿಯಲ್ಲಿ ಕೆಲಸ ಮಾಡಿಕೊಂಡಿದ್ದದವರು 1 ½ ವರ್ಷದಿಂದ ಪಿರ್ಯಾಧಿದಾರರ ಜೊತೆಯಲ್ಲಿದ್ದವರು  ದಿನಾಂಕ: 24-01-2022 ರಂದು ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ಕಳುವಾಜೆ ಎಂಬಲ್ಲಿರುವ ಪಿರ್ಯಾಧಿದಾರರ ಮನೆಯಿಂದ ಹೊರಗೆ ಹೋದವರು ವಾಪಾಸು ಸಂಜೆ ಸುಮಾರು 5.00 ಗಂಟೆಗೆ ಅವರು ಮನೆಗೆ ಬಂದಾಗ ಯಾವುದೋ ಕಾರಣದಿಂದ ಅಥವಾ ಯಾವುದೋ ಸಮಸ್ಯೆಯಿಂದ ಯಾವುದೋ ವಿಷ ಪದಾರ್ಥ ಸೇವಿಸಿದ ವಿಚಾರ ಪಿರ್ಯಾಧಿದಾರರಿಗೆ ತಿಳಿದಿದ್ದು ಸದ್ರಿಯವರನ್ನು ಒಂದು ಅಂಬ್ಯುಲೆನ್ಸ್ ನಲ್ಲಿ ಕುಳ್ಳಿರಿಸಿ ಚಿಕಿತ್ಸೆಯ ಬಗ್ಗೆ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ  ಅಲ್ಲಿ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ, ಅಲ್ಲಿನ ವೈದ್ಯರು ಪರೀಕ್ಷಿಸಿ  ಒಳರೋಗಿಯಾಗಿ ತೀವ್ರ ನಿಗಾ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರು. ಮೇದಪ್ಪ ಗೌಡ ಯಾನೆ ಮೋಹನ್ ಗೌಡ ರವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 28-01-2022 ರಂದು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಈ ಬಗ್ಗೆ ವಿಟ್ಲ ಠಾಣಾ  ಯು ಡಿ ಅರ್ ನಂಬ್ರ 04/2022  ಕಲಂ 174  ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ  ಲ್ಯಾನ್ಸಿ  ಪೊನ್ಸೇಕಾ ತಂದೆ ವಲೇರಿಯನ್ ಪೊನ್ಸೆಕಾ, ಪುರ್ಸಶಿಕ್ ಮನೆ ಕುರಿಯಾಳ  ಗ್ರಾಮ ಬಂಟ್ವಾಳ ತಾಲೂಕು ರವರ ಅಣ್ಣ ಸಿರಿಲ್ ಪೊನ್ಸೇಕಾ ರವರು ಮದುವೆಯಾಗದೆ  ಪಿರ್ಯಾದಿದಾರರ ಮನೆಯಲ್ಲಿ ಇದ್ದು ಕೃಷಿ ಮತ್ತು ಕೂಲಿ ಕೆಲಸ ಮಾಡಿಕೊಂಡಿದ್ದರು.  ಪಿರ್ಯಾದಿದಾರರ  ಮನೆಯಲ್ಲಿ  ದನಗಳು ಇದ್ದು  ದನಗಳ ಹಾಲನ್ನು  ಸೊರ್ನಾಡ್  ಹಾಲು ಉಪ್ದಾದಕರ ಸೊಸೈಟಿಗೆ  ಕೊಡುತ್ತಿದ್ದು ಅದನ್ನು ಪಿರ್ಯಾದಿದಾರರ ಅಣ್ಣ  ಸಿರಿಲ್ ಪೊನ್ಸೇಕಾ ರವರು   ಕೊಂಡು ಹೋಗುತ್ತಿದ್ದು ಬೆಳಿಗ್ಗೆ  7.00 ಗಂಟೆಗೆ  ಹಾಲು ಕೊಂಡು ಹೋದವರು ಕೂಲಿ ಕೆಲಸ ಮಾಡಿಕೊಂಡು  ಸಂಜೆ ಬರುವುದಾಗಿದೆ.  ಅವರಿಗೆ ರಕ್ತದ ಒತ್ತಡ ಮತ್ತು ಹೃದಯ ಸಂಬಂದಿ ಕಾಯಿಲೆ ಇತ್ತು.  ದಿನಾಂಕ 29-01-2022  ರಂದು ಬೆಳಿಗ್ಗೆ 7.00 ಗಂಟೆಗೆ ಪಿರ್ಯಾದಿದಾರರ ಅಣ್ಣ ಸಿರಿಲ್ ಪೊನ್ಸೇಕ ರವರು ಮನೆಯಿಂದ ಸೊರ್ನಾಡು ಹಾಲು ಉತ್ಪಾದಕರ ಸಂಘಕ್ಕೆ ಹಾಲು ಕೊಂಡು ಹೋಗಿ ಅಲ್ಲಿಂದಲೇ ಕೂಲಿ ಕೆಲಸಕ್ಕೆ  ಹೋಗಿದ್ದು  ಮದ್ಯಾಹ್ಮ ಸುಮಾರು 2.00 ಗಂಟೆಗೆ ಪಿರ್ಯಾದಿದಾರರ ಪರಿಚಯದ ಅಟೋ ರಿಕ್ಷಾ ಚಾಲಕರಾದ ವಲೇರಿಯನ್  ಪಿಂಟೋ ರವರು ಅವರ ಅಟೋ ರಿಕ್ಷಾದಲ್ಲಿ ಪಿರ್ಯಾದಿದಾರರ ಮನೆಗೆ ಕರೆದುಕೊಂಡು ಬಂದು  ಸೊರ್ನಾಡಿನಲ್ಲಿದ್ದ  ಸಿರಿಲ್ ರವರು   ನನ್ನಲ್ಲಿ ಬಿ.ಪಿ ಮತ್ತು ರಕ್ತದ ಒತ್ತಡ  ಜಾಸಿಯಾಗಿದ್ದು  ನನ್ನನ್ನು ಮನೆಗೆ ಕರೆದುಕೊಂಡು ಹೋಗುವಂತೆ  ಹೇಳಿದ್ದು ನಾನು ಕರೆದುಕೊಂಡು ಬಂದಿರುವುದಾಗಿ ತಿಳಿಸಿರುತ್ತಾರೆ. ನಂತರ ಪಿರ್ಯಾದಿದಾರರು ಮನೆಯಲ್ಲಿ ಅವರನ್ನು ಅರೈಕೆ ಮಾಡಿ  ಮನೆಯಲ್ಲಿ ಮಲಗಿಸಿದ್ದು ನಂತರ ಅವರ ಆರೋಗ್ಯ  ಮತ್ತಷ್ಟು  ಹದಗೆಟ್ಟಿದ್ದುದರಿಂದ ಪಿರ್ಯಾದಿದಾರರು  ಅವರನ್ನು ಒಂದು ಆಂಬುಲೆನ್ಸಿನಲ್ಲಿ  ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಸಂಜೆ 5.30 ಗಂಟೆಗೆ ವೈದ್ಯರು ಪರೀಕ್ಷಿಸಿ  ದಾರಿ ಮದ್ಯೆ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ 07-2022 ಕಲಂ 174 ಸಿ ಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 30-01-2022 01:12 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080