ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಗುರುಪ್ರಸಾದ್ ಪ್ರಾಯ 34 ವರ್ಷ ತಂದೆ: ಬೊಮ್ಮ ಗೌಡ ವಾಸ: ಮಾಚಾರು ಪಲ್ಲದಳಿಕೆ ಮನೆ, ಉಜಿರೆ ಗ್ರಾಮ ಬೆಳ್ತಂಗಡಿ ತಾಲೂಕು ರವರು ದಿನಾಂಕ: 29-03-2022 ರಂದು ತನ್ನ ಬಾಬ್ತು ಓಮ್ನಿ ಕಾರಿನಲ್ಲಿ ಸಹ ಪ್ರಯಾಣಿಕರಾಗಿ ಶ್ರೀಮತಿ ಅಕ್ಷಯ ಮಡಿವಾಳ ಎಂಬವರನ್ನು ಕುಳ್ಳಿರಿಸಿಕೊಂಡು ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಉಜಿರೆ ಪಿ.ಜಿ ಕಾಲೇಜಿನ ಬಳಿ ತಲುಪುತ್ತಿದ್ದಂತೆ ಅಜೀತ್‌ ನಗರ ಒಳ ರಸ್ತೆಯಿಂದ ಉಜಿರೆ ಕಡೆಗೆ KL 60 ಕ್ಯೂ 0365 ನೇ ಸಿಫ್ಟ್‌  ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ಓಮ್ನಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನ ಜಖಂ ಆಗಿರುತ್ತದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 50/2022 ಕಲಂ; 279  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪ್ರವೀಣ , ಪ್ರಾಯ  27  ವರ್ಷ ತಂದೆ: ದಿ| ವೆಂಕಪ್ಪ ನಾಯ್ಕವಾಸ:; ಕರಿಂಕ ಮನೆ,ಅನಂತಾಡಿ ಗ್ರಾಮ.ಬಂಟ್ವಾಳ ತಾಲೂಕು ರವರು ದಿನಾಂಕ: 29-03-2022 ರಂದು ತನ್ನ ಮೋಟಾರ್ ಸೈಕಲ್ನಲ್ಲಿ ಅನಂತಾಡಿಯಿಂದ ಮಾಣಿ ಕಡೆಗೆ ಖಾಸಗಿ ಕೆಲಸದ ನಿಮಿತ್ತ ಮಾಣಿ–ಮೈಸೂರು ಸಾರ್ವಜನಿಕ ಡಾಮಾರು  ರಸ್ತೆಯಲ್ಲಿ  ಹೋಗುತ್ತಿರುವಾಗ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಕೊಡಾಜೆಯ ಗಡಿಸ್ಥಳ ಎಂಬಲ್ಲಿಗೆ ತಲುಪಿದಾಗ ಪಿರ್ಯಾಧಿಯ ಮುಂದಿನಿಂದ ಹೋಗುತ್ತಿದ್ದ ಮೋಟಾರ್ ಸೈಕಲ್ ಸವಾರ ಸಹಸವಾರೆಯನ್ನು ಕುಳ್ಳಿರಿಸಿಕೊಂಡು ಮಾಣಿ ಕಡೆಗೆ ಹೋಗುತ್ತಿದ್ದ ಸಮಯ ಮಾಣಿ ಕಡೆಯಿಂದ ಬಸ್ಸು KA-19–ED-0254ನೇದನ್ನು ಅದರ ಚಾಲಕ ವಿಜಯ ಪೂಜಾರಿ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಬಸ್ಸಿನ ಮುಂಭಾಗದಲ್ಲಿ ಬರುತ್ತಿದ್ದ ವಾಹನವೊಂದನ್ನು ಓವರ್ ಟೇಕ್ ಮಾಡಿ ತೀರಾ ತಪ್ಪು ಬದಿಗೆ ಬಂದು KA-19-EN-2308ನೇ ಹೊಂಡಾ ಯುನಿಕಾರ್ನ್ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದನು. ಪರಿಣಾಮ ಮೋಟಾರ್ ಸೈಕಲ್ ಸವಾರ ಹಾಗೂ ಸಹ ಸವಾರ ರಸ್ತೆಯ ಬದಿಗೆ ಮಗುಚಿ ಬಿದ್ದರು. ಇದನ್ನು ನೋಡಿದ ಪಿರ್ಯಾಧಿ ತನ್ನ ಮೋಟಾರ್ ಸೈಕಲನ್ನು ಬದಿಗೆ ನಿಲ್ಲಿಸಿ ತಾನು ಮತ್ತು ಇತರರು ಮೋಟಾರ್ ಸೈಕಲ್  ಸವಾರ ಮತ್ತು ಸಹಸವಾರೆ ಯನ್ನು ಮೇಲಕ್ಕೆ ಎತ್ತಿ ಆರೈಕೆ ಮಾಡಿ ನೋಡಲಾಗಿ ಮೋಟಾರ್ ಸೈಕಲ್ ಸವಾರ ಪಿರ್ಯಾಧಿ ಪರಿಚಯದ ಧರ್ಣಪ್ಪ ಗೌಡ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಹೆಚ್ ಸಿ 399 ರವರು ಆಗಿದ್ದು. ಅವರಿಗೆ ಬಲಕಾಲಿನ ಮಣಿ ಗಂಟಿನ ಬಳಿ ಗುದ್ದಿದ ಹಾಗೂ ಬಲ ಪಾದದ ಮೇಲೆ ಮುರಿತದ ನೋವು, ಬಲಕೈ ಬೆರಳಿಗೆ ರಕ್ತ ಗಾಯ, ಎಡ ಎದೆಗೆ ಗುದ್ದಿದ ನಮೂನೆಯ ಗಾಯ ಆಗಿದ್ದು. ಹಾಗೂ ಸಹಸವಾರೆ ಅವರ ಮಗಳು ಶ್ರೇಯಾರವರಿಗೆ ಬಲಕಾಲಿನ ಪಾದಕ್ಕೆ ಗುದ್ದಿದ ನೋವು, ಹಾಗೂ ಬಲ ಮುಖಕ್ಕೆ ತರಚಿದ ರಕ್ತ ಗಾಯ ಆಗಿರುತ್ತದೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 53/2022 ಕಲಂ:279, 337, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅರ್ಜುನನ್, 22 ವರ್ಷ, ತಂದೆ: ಮೋಹನನ್ ಪಿಳ್ಳೆ, ವಾಸ: ಪುದಿಯ ವೀಟಿಲ್ ಹೌಸ್, ಬಾಬ್ಲುಬೆಟ್ಟು, ಪಂಬೆತ್ತಾಡಿ ಗ್ರಾಮ, ಸುಳ್ಯ ತಾಲೂಕು ರವರು ದಿನಾಂಕ 28-03-2022 ರಂದು ಅವರ ಅಣ್ಣನ ಬಾಬ್ತು ಮೋಟಾರು ಸೈಕಲ್ ನಂ KA 21 EA 8686 ನೇಯದ್ದನ್ನು ಅವರ ಮನೆಯಿಂದ ಸುಬ್ರಹ್ಮಣ್ಯ–ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಸವಾರಿ ಮಾಡಿಕೊಂಡು ಉಪ್ಪಿನಂಗಡಿ ಕಡೆಗೆ ಹೋಗುತ್ತಾ ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಅಲೆಕ್ಕಾಡಿ ಎಂಬಲ್ಲಿಗೆ ತಲಪಿದಾಗ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್ ನಂ KA 19 EM 7530 ನೇಯದ್ದನ್ನು ಅದರ ಸವಾರ ಮಾಯಿಲಪ್ಪ ಎಂಬವರು ನಿರ್ಲಕ್ಷ್ಯತನದಿಂದ ಒಮ್ಮೆಲೇ ರಸ್ತೆಗೆ ಅಡ್ಡಲಾಗಿ ಅಂದರೆ ಬಲಗಡೆಗೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ ಉಂಟಾಗಿ ಮೋಟಾರು ಸೈಕಲ್ ಹಾಗೂ ಸ್ಕೂಟರ್  ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಬಲ ಕಾಲಿನ ಮೊಣಗಂಟು, ಸೊಂಟದ ಹಿಂಭಾಗ, ಬಲ ಕೈ, ಎಡ ಕೈಯ ಮಣಿಗಂಟು, ಮೊಣಗಂಟುವಿನಲ್ಲಿ ತರಚಿದ ಗಾಯ ಹಾಗೂ ಬಲ ಭುಜದಲ್ಲಿ ಬಲ ಕೈ ಡಿಸ್ ಲೊಕೇಶನ್ ಆಗಿದ್ದು, ಆರೋಪಿ ಸ್ಕೂಟರ್ ಸವಾರರಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಉಪಚರಿಸಿ ಸ್ಥಳೀಯ ಕ್ಲಿನಿಕ್ ನಲ್ಲಿ ಪ್ರಥಮ ಚಿಕಿತ್ಸೆಕೊಡಿಸಿದ್ದು, ಆ ಬಳಿಕ ಪಿರ್ಯಾದುದಾರರನ್ನು ಅವರ ಅಣ್ಣ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 26/2022  L¦¹ ಕಲಂ 279,337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹರೀಶ್ ಸುವರ್ಣ (41), ತಂದೆ: ಚೆಲುವಯ್ಯ ಪೂಜಾರಿ, ವಾಸ: ಸುವರ್ಣ ನಿಲಯ, ಕನ್ಯಾಡಿ -2, ಧರ್ಮಸ್ಥಳ ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 29-03-2022 ರಂದು ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕನ್ಯಾಡಿ ಶ್ರೀ ರಾಮ ರೆಸಿಡೆನ್ಸಿ ಬಳಿ ಪಾದಚಾರಿ ಬಾಲಕ ವಿಘ್ನೇಶ್‌ ಎಂಬವರು  ರಸ್ತೆ ದಾಟುತ್ತಿರುವಾಗ ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆಗೆ ಕೆಎ 21 ಬಿ 2884 ನೇ ತೂಪನ್‌ ವಾಹನವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ವಿಘ್ನೇಶ್‌ರವರಿಗೆ ಢಿಕ್ಕಿ ಹೊಡೆದ  ಪರಿಣಾಮ ಅವರು ಅಲ್ಲಿಯೇ ರಸ್ತೆಗೆ ಬಿದ್ದು ಬಲಕಾಲಿನ ಪಾದಕ್ಕೆ, ಬಲಕಾಲಿನ ಪಾದದ ಕಿರು ಬೆರಳಿಗೆ ಗುದ್ದಿದ ರಕ್ತಗಾಯಗೊಂಡು ಉಜಿರೆ ಎಸ್‌ಡಿಎಮ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕಡೆ ಆಸ್ಪತ್ರೆಗೆ ಕೊಂಡು ಹೋಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 49/2022 ಕಲಂ; 279,337 ಭಾ ದಂ ಸಂ.  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 2

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚಂದ್ರಹಾಸ ಪ್ರಾಯ 31 ವರ್ಷ ತಂದೆ ಲೇ|| ಚಲ್ಲಪ್ಪ ವಾಸ ಪಡ್ರಾಯಿ ಮನೆ ರಾಯಿ ಗ್ರಾಮ ಬಂಟ್ವಾಳ ತಾಲೂಕು ರವರು ಸಂಸಾರದ ಜೊತೆಯಲ್ಲಿ ವಾಸವಾಗಿದ್ದು ಗಾರೆ ಕೆಲಸ ಮಾಡಿಕೊಂಡಿರುವುದಾಗಿದೆ, ಪಿರ್ಯಾದುದಾರರ ಮನೆಯ ಸ್ವಲ್ಪ ದೂರದಲ್ಲಿ ಲೋಕಯ್ಯ ಎಂಬುವವರ ಮನೆ ಇದ್ದು ಅವರ ಮನೆಯ ಎದುರಿನಲ್ಲಿ ಪಡ್ರಾಯಿಂದ ರಾಯಿ ಕಡೆಗೆ ಹೋಗುವ ಪಂಚಾಯತ್ ರಸ್ತೆ ಹಾದು ಹೋಗುತ್ತದೆ.ಲೋಕಯ್ಯ ರವರ ಮನೆಯ ಎದುರುಗಡೆ ಹಾದು ಹೋಗುವ ರಸ್ತೆಯಲ್ಲಿ ಯಾರೂ ನಡೆದುಕೊಂಡು ಹೋಗಬಾರದು ಎಂಬುದಾಗಿ ಆಗಾಗ ತಗಾದೆ ತೆಗೆಯುತ್ತಿದ್ದು ದಿನಾಂಕ 28.03.2022 ರಂದು ಪಿರ್ಯಾದುದಾರರು ಅಕ್ಕನ ಮನೆಗೆ ಬಂದಿದ್ದು ವಾಪಸ್ಸು ರಾತ್ರಿ 9.00 ಗಂಟೆಗೆ ಪಿರ್ಯಾದುದಾರರು ಅಕ್ಕನ ಮನೆಯಿಂದ ಪಿರ್ಯಾದುದಾರರ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ  ಲೋಕಯ್ಯರವರ ಮನೆಯ ಎದುರಿನ ರಸ್ತೆಯಲ್ಲಿ  ತಲುಪಿದಾಗ ಹಿಂದಿನಿಂದ ಈ ರಸ್ತೆಯಲ್ಲಿ ಹೋಗಬಾರದು ಎಂದು ಹೇಳಿದರು ಕೂಡ ಭಾಷೆ ಅರ್ಥವಾಗುವುದಿಲ್ಲವ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಲೋಕಯ್ಯ ರವರ ಕೈಯ್ಯಲ್ಲಿದ್ದ  ಕತ್ತಿಯಿಂದ  ಪಿರ್ಯಾದುದಾರರ ಎಡ ಕೋಲು ಕಾಲಿನ ಹಿಂಬದಿಗೆ ಕಡಿದಿದ್ದು  ಕೂಡಲೇ ಪಿರ್ಯಾದುದಾರರು ಬೊಬ್ಬೆ ಹಾಕಿದಾಗ  ಪಿರ್ಯಾದುದಾರರ ಅಕ್ಕ ಲಲಿತಾ ರತ್ನ ಸಂಬಂಧಿ ಆನಂದ ಮತ್ತು ಮುರಳಿ ಹಾಗೂ ಪ್ರಶಾಂತ್ ರವರು ಓಡಿ ಬರುವುದನ್ನು ಕಂಡ ಲೋಕಯ್ಯ ರವರು ಇನ್ನು ಈ ದಾರಿಯಲ್ಲಿ ಬಂದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ. ನಂತರ ಪಿರ್ಯಾದುದಾರರನ್ನು ಸಂಬಂದಿಕರು ಉಪಚರಿಸಿ ಚಿಕಿತ್ಸೆಗಾಗಿ  ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬಂದು ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ  ವೆನ್ಲಾಕ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ  29/2022 ಕಲಂ 504 324,506 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಅಂಗಾರ, ಪ್ರಾಯ: 55 ವರ್ಷ, ತಂದೆ: ಬೇಡು ಮುಗೇರ, ವಾಸ:   ಕೊಳಗೆ ಮನೆ, ಕೊಲ್ಲ ಗ್ರಾಮ ,ಸುಳ್ಯ ತಾಲೂಕು, ದ.ಕ ಜಿಲ್ಲೆ ರವರು ಸುಮಾರು 3 ವರ್ಷದ ಹಿಂದೆ ಅವರ ಹೆಂಡತಿಯ ತಮ್ಮ ನಾರಾಯಣ ಎಂಬವರಿಗೆ 1200/-ರೂ ಹಣವನ್ನು ಕೊಟ್ಟಿದ್ದು, ದಿನಾಂಕ:25.03.2022 ರಂದು ಅವರಿಗೆ ಆರೋಗ್ಯ ಸರಿ ಇಲ್ಲದೇ ರಾತ್ರಿ ಸುಮಾರು 8:00 ಗಂಟೆಗೆ ಹಣವನ್ನು ವಾಪಸ್ಸು ಕೇಳಲು ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ವಾಲ್ತಾಜೆ ಎಂಬಲ್ಲಿಗೆ ಹೋಗಿದ್ದು, ನಾರಾಯಣನಿಂದ ಹಣವನ್ನು ಪಡಕೊಂಡು ವಾಪಸ್ಸು ಬರುವಾಗ ನಾರಾಯಣನು ಪಿರ್ಯಾದಿದಾರರಿಗೆ “ನೀನು ಯಾಕೆ ಹಣ ಕೇಳುತ್ತೀಯಾ” ಎಂದು ಹೇಳಿ ಒಂದು ಕತ್ತಿಯನ್ನು ಪಿರ್ಯಾದಿದಾರರಿಗೆ ಬೀಸಿದಾಗ ಪಿರ್ಯಾದಿದಾರರ ಎಡಭುಜಕ್ಕೆ ರಕ್ತಗಾಯವಾಗಿದ್ದು, ಆಗ ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದಿದ್ದು, ಅವರ ಅತ್ತೆ ದೇವಕಿ ಮತ್ತು ಅತ್ತಿಗೆ ಸತ್ಯವತಿ ರವರು ಅಲ್ಲಿಗೆ ಬಂದಾಗ ನಾರಾಯಣನು “ನಿನ್ನನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಹೋಗಿದ್ದು, ಬಳಿಕ ಪಿರ್ಯಾದಿದಾರರು ಸುಳ್ಯ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣಾ ಅ.ಕ್ರ ನಂಬ್ರ  : 39-2022  ಕಲಂ: 324, 504, 506    ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತರೆ ಪ್ರಕರಣ: 2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪೊಲೀಸ್ ಉಪ ನಿರೀಕ್ಷಕರು ಬಂಟ್ವಾಳ ನಗರ ಪೊಲೀಸ್ ಠಾಣೆ ರವರಿಗೆ ದೊರೆತ ಮಾಹಿತಿಯಂತೆ ದಿನಾಂಕ: 29.03.2022  ರಂದು ಬೆಂಕ್ಯ ಜಂಕ್ಷನ್, ಹತ್ತಿರ ಬರ್ಕೆ ಎಂಬಲ್ಲಿಗೆ  ತಲಪಿದಾಗ ರಸ್ತೆ ಬದಿಯಲ್ಲಿದ್ದ ರಿಕ್ಷಾದಿಂದ ಆಸಾಮಿಯೊಬ್ಬ ಓಡಲು  ತೊಡಗಿದವನನ್ನು ಸುತ್ತುವರಿದು ಆತನ ರಿಕ್ಷಾದ ದಾಖಲಾತಿಗಳನ್ನು ಕೇಳಿದಾಗ ಆತನು ತಡವರಿಸುತ್ತಾ ರಿಕ್ಷಾದ ಬಳಿ ಬಂದು ರಿಕ್ಷಾದ ಸೀಟನ್ನು ಎತ್ತಿ ಒಳಗಡೆ ಇದ್ದ ಪಿಂಕ್ ಬಣ್ಣದ ಪ್ಲಾಸ್ಟಿಕ್ ಕಟ್ಟನ್ನು ಬದಿಗೆ ಸರಿಸಿದ್ದು ಆ ವೇಳೆ ಆತನಲ್ಲಿ ಸದ್ರಿ ಕಟ್ಟಿನ ಬಗ್ಗೆ ವಿಚಾರಿಸಿದಾಗ ಆತನು ಗಾಂಜ ಎಂದು ತಿಳಿಸಿದ್ದು ಸದ್ರಿ ಕಟ್ಟನ್ನು ತೆರೆದಾಗ ಅದರಲ್ಲಿ ಗಾಂಜ ಮತ್ತು 5 ಪ್ಲಾಸ್ಟಿಕ್ ಖಾಲಿ ಪ್ಯಾಕೇಟ್ ಕವರುಗಳು ಮತ್ತು 2 ಒ ಬಿ ಸಿ ಸ್ಲೀಮ್ ಎಂಬ ಗಾಂಜ ಸೇದಲು ಉಪಯೋಗಿಸುವ ಕಾಗದದ ಪ್ಯಾಕೇಟ್ ಇದ್ದು ಒಟ್ಟು 199 ಗ್ರಾಂ ತೂಕದ ಗಾಂಜ ಇದ್ದು ಅಲ್ಲದೇ ಮಾದಕ ವಸ್ತು ಗಾಂಜ ಮಾರಾಟ ಮಾಡಿ ಬಂದ ಹಣವಾದ ವಿವಿಧ ಮೊತ್ತದ ನೋಟುಗಳನ್ನು ಎಣಿಕೆ ಮಾಡಲಾಗಿ ಒಟ್ಟು 1,260/- ರೂ. ಇದ್ದು ಸದ್ರಿ ಗಾಂಜ ಸೊತ್ತಿಗೆ ರೂ. 2,000/- ಇದ್ದು ಮಾರಾಟಕ್ಕೆ ಉಪಯೋಗಿಸಿದ ಕೆ ಎ 70 3385ನೇ ಆಟೋರಿಕ್ಷಾವನ್ನು ಮುಂದಿನ ಮುಂದಿನ ಕ್ರಮದ ಬಗ್ಗೆ ಸ್ವಾಧೀನಕ್ಕೆ ಪಡೆಯಲಾಯ್ತ. ಸದ್ರಿ ರಿಕ್ಷಾಕ್ಕೆ ರೂ. 60,000/- ಮೌಲ್ಯ ಇರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 37/2022  ಕಲಂ: 8(c), 20 (B)(ii)(a) NDPS Act. ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

 

ಬೆಳ್ತಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಮಹೇಶ್  ಜೆ , ತಹಶಿಲ್ದಾರರು,  ಬೆಳ್ತಂಗಡಿ  ತಾಲೂಕು ರವರು ನೀಡಿದ ದೂರಿನಂತೆ ಮಾನ್ಯ ಜಿಲ್ಲಾಧಿಕಾರಿಯವರು ಮತ್ತು ಜಿಲ್ಲಾ  ದಂಢಾಧಿಕಾರಿಯವರ ಆದೇಶ ಸಂಖ್ಯೆ ಎಂಎಜಿ(2) ಸಿಆರ್78/2022/171474/ಸಿ4 ದಿನಾಂಕ: 19-03-2022 ರಂತೆ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ಹಾಗೂ  ಮುಂಜಾಗೃತ ಕ್ರಮವಾಗಿ ಭಾರತೀಯ ದಂಡ ಪ್ರಕೀಯಾ ಸಂಹಿತೆ 1973 ರ ಕಲಂ: 144 ರನ್ವಯ ನಿಷೇದಾಜ್ಞೆ ಇದ್ದರೂ ಕೂಡ   ಸದ್ರಿ ನಿಷೇದಾಜ್ಞೆಯನ್ನು  ಉಲ್ಲಂಘಿಸಿ ದಿನಾಂಕ: 29-03-2022 ರಂದು ಬೆಳಿಗ್ಗೆ 10-00 ಗಂಟೆಗೆ   ಆರೋಪಿಗಳಾದ ಎಸ್.ಡಿ.ಪಿ.ಐ ಮುಖಂಡರು ಹಾಗೂ ಕಾರ್ಯಕರ್ತರು  ಪಿರ್ಯಾದಿದಾರರು ಕಾರ್ಯವ್ಯಾಪ್ತಿಯನ್ನು ಹೊಂದಿರುವ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಬೆಳ್ತಂಗಡಿ ಬಸ್ಸು ನಿಲ್ದಾಣದ ಬಳಿ ವಿಧಿ ವಿರುದ್ದ  ಕೂಟ ಸೇರಿ ಪಿಕಪ್ ವಾಹನದಲ್ಲಿ ಧ್ವನಿವರ್ಧಕ ಉಪಯೋಗಿಸಿ, ಪಾದಯಾತ್ರೆ ಮುಖೇನ  ಮೆರವಣಿಗೆ ನಡೆಸಿ ಕಾನೂನನ್ನು ಉಲ್ಲಂಘಿಸಿದವರ ವಿರುದ್ದ ಬೆಳ್ತಂಗಡಿ ಠಾಣಾ ಅ.ಕ್ರ  21/2022 ಕಲಂ: 143,188, ಜೊತೆಗೆ 149  ಐ.ಪಿ,ಸಿ & 34,36,107,109 KP Act ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 30-03-2022 11:25 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080