ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಬಿ. ಲಕ್ಷ್ಮೀ ನಾರಾಯಣ ಕಿಣಿ(50) ತಂದೆ: ಜನಾರ್ಧನಾ ಕಿಣಿ, ವಾಸ: ಕಾಶೀಮಠ ರಸ್ತೆ, ಬಂಟ್ವಾಳ ತಾಲೂಕು ರವರು ದಿನಾಂಕ: 27.04.2021 ರಂದು ಅಗತ್ಯ ಕೆಲಸದ ನಿಮಿತ್ತ  ತನ್ನ ಬಾಬ್ತು KA-70-M-0707 ನೇ ಕಾರಿನಲ್ಲಿ ಬಿ.ಸಿ.ರೋಡ್ ಕಡೆಗೆ  ಹೋಗುತ್ತಾ ಬಂಟ್ವಾಳ ತಾಲೂಕು ಬಂಟ್ವಾಳ ಕಸಬಾ ಗ್ರಾಮದ ಬಸ್ತಿಪಡ್ಪು ಸಾಲುಮರ ಎಂಬಲ್ಲಿಗೆ  ತಲುಪಿದಾಗ ಬಂಟ್ವಾಳ ಕಡೆಯಿಂದ KA-70-0851 ನೇ ಆಟೋ ರಿಕ್ಷಾವನ್ನು ಅದರ ಚಾಲಕ ಅತೀ ವೇಗ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ  ಬಳಿಕ ಆಟೋ ರಿಕ್ಷಾವನ್ನು ಚಾಲಕ ಬಲಕ್ಕೆ ತಿರುಗಿಸಿ ಬಿ.ಸಿ.ರೋಡ್ ಕಡೆಯಿಂದ ಬರುತ್ತಿದ್ದ KA-70-429 ನೇ ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿ ಅಪಘಾತವಾಗಿರುತ್ತದೆ. ಅಪಘಾತದಲ್ಲಿ  KA-70-429 ನೇ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಕಮಲಾಕ್ಷಿಯವರಿಗೂ, ಅಪಘಾತಪಡಿಸಿದ KA-70-0851ನೇ ಆಟೋ ರಿಕ್ಷಾ ಚಾಲಕ ಉಮ್ಮರಬ್ಬರವರು ಕೂಡಾ  ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 46/2021  ಕಲಂ 279, 337  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚಂದ್ರಶೇಖರ ಪ್ರಾಯ 38 ವರ್ಷ ತಂದೆ: ಪದ್ಮನಾಭ ರೈ ವಾಸ: ರಾಗಿದ ಕುಮೇರು ಮನೆ ಚಿಕ್ಕ ಮಡ್ನೂರು ಗ್ರಾಮ ಪುತ್ತೂರು ರವರ ತಮ್ಮನಾದ ನಿರಂಜನ ರೈ ವಿದೇಶದಲ್ಲಿ ಕೆಲಸಮಾಡಿಕೊಂಡಿದ್ದು ಕಳೆದ 8 ತಿಂಗಳ ಹಿಂದೆ ವಿದೇಶದಿಂದ ಬಂದು ಮನೆಯಲ್ಲಿ ಇದ್ದು ದಿನಾಂಕ: 28-04-2021 ರಂದು ರಾತ್ರಿ ಎಲ್ಲರೂ ಊಟ ಮಾಡಿದ ನಂತರ ಪಿರ್ಯಾಧಿದಾರರ ತಮ್ಮ ಹೊಟ್ಟೆ ನೋವು ಎಂದು ಮನೆ ಹಾಲ್ ನಲ್ಲಿರುವ ಸೋಪಾದ ಮೇಲೆ ಮಲಗಿಕೊಂಡಿದ್ದನು ಪಿರ್ಯಾಧಿದಾರರ ತಾಯಿಯವರಲ್ಲಿ ಹೊಟ್ಟೆ ನೋವು ಬರುತ್ತಿದೆ ವೈದ್ಯರಲ್ಲಿ ತೋರಿಸುತ್ತೇನೆ ಎಂದು ಹೇಳಿ ಮನೆಯಿಂದ ಬೈಕಿನಲ್ಲಿ ಹೋದವರು ದಿನಾಂಕ 29/4/2021 ರ ಬೆಳಿಗ್ಗೆ 06.00 ಗಂಟೆ ಆದರೂ ಮನೆಗೆ ಬಂದಿರುವುದಿಲ್ಲ, ನಂತರ ನೆರೆಕೆರೆ ಹಾಗೂ ಆಸ್ವತ್ರೆಗಳಲ್ಲಿ ಹುಡುಕಾಡಿದಾಗ ಮಧ್ಯಾಹ್ನ ಬಂಟ್ವಾಳದ ಗೂಡಿನಬಳಿಯ ನೇತ್ರಾವತಿ ನದಿಯಲ್ಲಿ ತಮ್ಮನ ಮೃತದೇಹ ಇರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಬಂದು ನೋಡಲಾಗಿ ತಮ್ಮನ ಮೃತ ದೇಹವಾಗಿರುತ್ತದೆ. ಯಾವುದೋ ವಿಷಯದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ನದಿಗೆ ಹಾರಿ ಮೃತಪಟ್ಟಿರುವುದಾಗಿದೆ ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 17-2021 ಕಲಂ  174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶೋಭಾ ಪ್ರಾಯ 32 ವರ್ಷ ಗಂಡ: ಪ್ರಶಾಂತ ವಾಸ: ಪಲ್ಲಮಜಲು ಮನೆ ಬಿ ಮೂಡ ಗ್ರಾಮ ಬಂಟ್ವಾಳ ತಾಲೂಕು ರವರ ಅಣ್ಣನಾದ ದೇವದಾಸನು ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಕಳೆದ 2 ತಿಂಗಳಿನಿಂದ ಜಾಂಡೀಸ್ ಕಾಯಿಲೆಗೆ ಔಷಧಿಯನ್ನು ಮಾಡುತ್ತಿದ್ದನು. ದಿನಾಂಕ 29/04/2021 ರಂದು ಸಂಜೆ 5.50 ಗಂಟೆಗೆ ಪಿರ್ಯಾಧಿದಾರರ ಅಣ್ಣ ಮನೆಯಲ್ಲಿದ್ದು ಆತನಿಗಿರುವ ಖಾಯಿಲೆ ಉಲ್ಭಣಗೊಂಡು ಉಸಿರಾಟದ ತೊಂದರೆಯಾಗಿದ್ದು ಕೊಡಲೇ 108 ಅಂಬುಲೆನ್ಸ್ ನಲ್ಲಿ ಬಂಟ್ವಾಳ ಸರಕಾರಿ ಆಸ್ವತ್ರೆಗೆ ತಂದಾಗ  ಅಲ್ಲಿ ವೈದ್ಯರು ದೇವದಾಸನನ್ನು ಪರೀಕ್ಷಿಸಿ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 18-2021 ಕಲಂ  174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-04-2021 01:02 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080