ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀಮತಿ ಪುಷ್ಟ ಪ್ರಾಯ 48 ಗಂಡ: ಸಂಜೀವ ಗೌಡ ವಾಸ: ಬೆರ್ಕೊಡಿ ಮನೆ ಇಡ್ಕಿದು ಗ್ರಾ, ಬಂಟ್ವಾಳ ತಾಲೂಕು ರವರು ದಿನಾಂಕ 29-06-2021 ರಂದು ತನ್ನ ಮಗನ ಬಾಬ್ತು  ಸ್ಕೂಟರ್ ಕೆಎ 19ಹೆಚ್ ಸಿ 9088 ನೇ ದರಲ್ಲಿ ಹಿಂಬದಿ ಸವಾರಳಾಗಿ ಕುಳಿತುಕೊಂಡು ಮಿತ್ತೂರು ಪೇಟೆಗೆ ತಲುಪಿದಾಗ ಸವಾರ ಜಯರಾಮನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ರೈಲ್ವೇ ಸ್ಟೇಶನ್ ಬಳಿ ಸೂರ್ಯ ಮಿತ್ತೂರು ಡಾಮಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಫಿರ್ಯಾದುದಾರರ ಬಲಕೋಲಿಗೆ ಗುದ್ದಿದ ನೋವು ಆದವರನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಮತ್ತೊಬ್ಬ ಮಗನಾದ ಚೇತನನು ಪುತ್ತೂರು ಹಿತ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 88/2021  ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಬೂಬಕ್ಕರ್ ಸಿದ್ದಿಕ್. ಪ್ರಾಯ:35 ವರ್ಷ, ತಂದೆ:ಇಬ್ರಾಹಿಂ, ವಾಸ: ನೀರಾಜೆ ಮನೆ, ರಾಮಕುಂಜ ಗ್ರಾಮ, ಕಡಬ ತಾಲೂಕು ಎಂಬವರು ಆಟೋ ರಿಕ್ಷಾ ಚಾಲಕ ವೃತ್ತಿ ಮಾಡಿಕೊಂಡಿದ್ದು ದಿನಾಂಕ:29.06.2021 ರಂದು ಆಟೋ ರಿಕ್ಷಾ ವಾಹನದಲ್ಲಿ ಬಾಡಿಗೆಗಾಗಿ ಕೊಯಿಲಾ ಗ್ರಾಮದಿಂದ ಗೋಳಿತ್ತಡಿ ಎಂಬಲ್ಲಿಗೆ ಕಡಬ ಉಪ್ಪಿನಂಗಡಿ ರಾಜ್ಯ ರಸ್ತೆಯಲ್ಲಿ ಹೋಗುತ್ತಿರುವಾಗ  ಕಡಬ ತಾಲೂಕು ರಾಮಕುಂಜ ಗ್ರಾಮದ ಆತೂರು ಮುಖ್ಯ ಜಂಕ್ಷನ್‌ ಬಳಿಗೆ ಸಮಯ ಬೆಳಗ್ಗೆ 11.45 ಗಂಟೆಗೆ ತಲುಪಿದಾಗ ಆತೂರು ಮುಖ್ಯ ಜಂಕ್ಷನ್‌ ಬಳಿ ಕಡಬ ಪೊಲೀಸರು ಚೆಕ್‌ ಪೋಸ್ಟ್‌ ಹಾಕಿದ ತಾತ್ಕಾಲಿಕ ಶೆಡ್‌ ಕಡೆಯಿಂದ ಆತೂರು ಜಂಕ್ಷನ್‌ನಲ್ಲಿರುವ ಅಂಚೆ ಕಚೇರಿ ಕಡೆಗೆ ವ್ಯಕ್ತಿಯೊಬ್ಬನು ರಸ್ತೆ ದಾಟಿ ರಸ್ತೆಯ ಅಂಚಿಗೆ ತಲುಪುವಷ್ಟರಲ್ಲಿ ಕೊಯಿಲಾ ಕಡೆಯಿಂದ ಕೆ.ಎ-21 ಬಿ-6482 ನೇ ಟಾಟಾ ಏಸ್‌ ಟಾಟಾ ಏಸ್‌ ಟೆಂಪೋ ವಾಹನದ ಆರೋಪಿತ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆತೂರು ಚೆಕ್‌ ಪೋಸ್ಟ್‌ ದಾಟಿ ಮುಂದೆ  ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ರಸ್ತೆ ದಾಟುತಿದ್ದ ವ್ಯಕ್ತಿ ಡಾಮಾರು ರಸ್ತೆಗೆ ಬಿದ್ದಿದ್ದು ನಂತರ ಗಾಯಗೊಂಡವನನ್ನು ಸ್ಥಳದಲ್ಲಿ ಚೆಕ್‌ ಪಾಯಿಂಟ್ ಕರ್ತವ್ಯದಲ್ಲಿದ್ದ ಪೊಲೀಸರು ಹಾಗೂ ಪಿರ್ಯಾದುದಾರರು  ಕಡಬ ಪೊಲೀಸು ಇಲಾಖಾ ಜೀಪಿನಲ್ಲಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿ ಸರ್ಕಾರಿ ಆಸ್ಪತ್ರೆಗೆ ಕೊಂಡು ಹೋದಲ್ಲಿ ವೈದ್ಯರು ಗಾಯಾಳು ಹ್ಯಾರೀಸ್‌ ಎಂಬಾತನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 49/2021  ಕಲಂ 279 304 (A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚಿದಾನಂದ ಪ್ರಾಯ 35 ವರ್ಷ, ತಂದೆ: ನಾಗಪ್ಪ ಗೌಡ, ವಾಸ: ಕಲುಂಗುಡಿ ಮನೆ, ಬಳ್ಪ ಗ್ರಾಮ ಮತ್ತು ಅಂಚೆ, ಕಡಬ ತಾಲೂಕು, ರವರು ದಿನಾಂಕ 28-06-2021 ರಂದು ಬಜಾಜ್ ಪಲ್ಸರ್ ಮೋಟಾರು ಸೈಕಲ್ ನಂಬ್ರ ಕೆಎ-21-ಎಸ್-4818 ನೇಯದರಲ್ಲಿ ಪತ್ನಿ ಮಮತರವರನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ದೊಡ್ಡತೋಟ-ಅಯ್ಯನಕಟ್ಟೆ ರಸ್ತೆಯಲ್ಲಿ ದೊಡ್ಡತೋಟ ಕಡೆಯಿಂದ ಸವಾರಿ ಮಾಡಿಕೊಂಡು ಬಂದು ಸುಳ್ಯ ತಾಲೂಕು ಅಮರಪಡ್ನೂರು ಗ್ರಾಮದ ಜೋಗಿಯಡ್ಕ ಎಂಬಲ್ಲಿಗೆ ತಲುಪಿದಾಗ ತಿರುವಿನಲ್ಲಿ ಎದುರುಗಡೆಯಿಂದ ಮಾರುತಿ ರಿಟ್ಸ್ ಕಾರು ನಂಬ್ರ ಕೆಎ-05-ಎಂ.ಎಲ್ -3267 ನೇಯದರ ಚಾಲಕ ಸುಬ್ರಹ್ಮಣ್ಯ ಭಟ್ ರವರು ಅಜಗಾರೂಕತೆ ಮತ್ತು ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಮತ್ತು ಸಹಸವಾರೆ ಮಮತ ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಫಿರ್ಯಾದಿದಾರರ ಮುಖದಲ್ಲಿ ಎಡಕಣ್ಣು ಮತ್ತು ಎಡಕಣ್ಣಿನ ಬಳಿ ರಕ್ತ ಗಾಯ ಮತ್ತು ಎಡಕೆನ್ನೆಗೆ ತುಟಿಗೆ ರಕ್ತ ಗಾಯ, ಬಲಕಾಲಿನ ಮೊಣಗಂಟಿನ ಬಳಿ ಗುದ್ದಿದ ರಕ್ತ ಗಾಯ, ಹಾಗೂ ಪಾದಕ್ಕೆ ಗುದ್ದಿದ ಗಾಯ, ಸೊಂಟದ ಎಡಬದಿ ತರಚಿದ ಗಾಯ ಹಾಗೂ ಮಮತರವರಿಗೆ ಬಲಕಾಲಿನ ಮೊಣಗಂಟಿನ ಬಳಿ ಗುದ್ದಿದ ನಮೂನೆಯ ಗಾಯ ಮತ್ತು ಹೆಬ್ಬೆರಳಿನ ಬಳಿ ಗುದ್ದಿದ ಗಾಯ ಹಾಗೂ ಎಡಕಿವಿಯ ಬಳಿ ಗುದ್ದಿದ ನಮೂನೆಯ ಹಾಗೂ ಬಲಕೈಯ ಬೆರಳುಗಳಿಗೆ ಗುದ್ದಿದ ನಮೂನೆಯ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುವುದಾಗಿದೆ ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಅ.ಕ್ರ 34/2021 ಕಲಂ 279, 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಬ್ದುಲ್ ಹಮೀದ ಪ್ರಾಯ 52 ವರ್ಷ ತಂದೆ: ಇಸುಬು ಬ್ಯಾರಿ ವಾಸ: ಪಾತ್ರ ತೋಟ ಮನೆ ವಿರ ಕಂಬ ಗ್ರಾಮ ಬಂಟ್ವಾಳ ರವರು ದಿನಾಂಕ: 29-06-2021 ರಂದು ಗೋಳ್ತಮಜಲು ಗ್ರಾಮದ ಕೆ ಸಿ ರೋಡಿನ ರುಕಿಯಾ ರವರ ಹೆಚ್ ಆರ್ ರೆಸಿಡೆನ್ಸಿ ಕಂಪೌಂಡ ಗೋಡೆಯ ಬದಿಗೆ ಮಣ್ಣು ಹಾಕುತ್ತಿರುವ ಸಮಯ ಹಮೀದ್ ಎಂಬುವನು ವಿಚಾರದೇ ಏಕಾಏಕಿಯಾಗಿ ಪಿರ್ಯಾಧಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಅಲ್ಲೇ ಇದ್ದ ಹಾರೆಯ ಹಿಡಿಯಲ್ಲಿ ಪಿರ್ಯಾಧಿದಾರರ ಬಲಕೈಯ ರಟ್ಟೆಗೆ ಹಾಗೂ ಸೋಂಟಕ್ಕೆ ಹೊಡೆದಿದ್ದು ಹಾಗೂ ಜೊತೆಯಲ್ಲಿದ್ದ ಮಹಮ್ಮದವರ ಬಲಕೈ ಹಾಗೂ ಮೊಣಕಾಲು ಗಂಟಿಗೆ ಗುದ್ದಿ ರಕ್ತಗಾಯ ಉಂಟು ಮಾಡಿರುತ್ತಾನೆ ಆಗ ಪಿರ್ಯಾಧಿದಾರರು ಬೊಬ್ಬೆ ಹಾಕುವ ಸಮಯ ಆರೋಪಿತನು ಓಡಿ ಹೋಗಿರುತ್ತಾನೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅಕ್ರ: 75/2021 ಕಲಂ: 324, 504 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 4

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಲೀನಾ ಬ್ರಿಟ್ಟೋ ಮುಖ್ಯಾಧಿಕಾರಿ ಪುರಸಭಾ ಕಾರ್ಯಾಲಯ ಬಂಟ್ವಾಳ ರವರು ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ದಿನಾಂಕ 27-06-2021 ರಂದು ಬಿ ಮೂಡ ಗ್ರಾಮದ ಗೂಡಿನ ಬಳಿಯ ಲಯನ್ಸ್ ಕ್ಲಬ್ ಎದುರು ಗುರುಪುರ-ಕೈಕಂಬ ಗ್ರಾಮ ಪಂಚಾಯತ್ ಗೆ ಸಂಬಂಧಪಟ್ಟ ಘನತ್ಯಾಜ್ಯ ವಸ್ತುಗಳನ್ನು  ಕೆ ಎ 19 ಎಬಿ 1189 ನೇದರ ವಾಹನದ ಮೂಲಕ ಸದ್ರಿ ಸ್ಥಳದಲ್ಲಿ ತಂದು ಹಾಕುತ್ತಿದ್ದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅಕ್ರ: 73/2021 ಕಲಂ: 269, 278 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪೊಲೀಸ್‌ ಉಪ ನಿರೀಕ್ಷಕರು, ಪುಂಜಾಲಕಟ್ಟೆ ಪೊಲೀಸ್‌ ಠಾಣೆ ರವರು ದಿನಾಂಕ: 29.06.2021 ರಂದು ಸಿಬ್ಬಂದಿಗಳೊಂದಿಗೆ ಕೋವಿಡ್‌ -19 ರೋಗದ ಮುನ್ನೆಚ್ಚರಿಕಾ ಕ್ರಮವಾಗಿ ಠಾಣಾ ವ್ಯಾಪ್ತಿಯಲ್ಲಿ  ರೌಂಡ್ಸ್‌ ಕರ್ತವ್ಯದಲ್ಲಿರುವ ಸಮಯ ಬಂಟ್ವಾಳ ತಾಲೂಕು ಕುಕ್ಕಿಪ್ಪಾಡಿ ಗ್ರಾಮದ ಎಲ್ಪೇಲು ಎಂಬಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನಲೆಯಲ್ಲಿ ಸರಕಾರವು ಹೊರಡಿಸಿರುವ ಮಾರ್ಗಸೂಚಿಯನ್ನು ಉಲ್ಲಂಘಿಸಿ ಸರಕಾರಿ ಗುಡ್ಡ ಪ್ರದೇಶದಲ್ಲಿ ಆಪಾದಿತರುಗಳು ಅಕ್ರಮವಾಗಿ  ಉಲಾಯಿ-ಪಿದಾಯಿ (ಅಂದರ್‌-ಬಾಹರ್‌) ಎಂಬ ಅದೃಷ್ಟದ ಇಸ್ಪಿಟ್‌ ಜೂಜಾಟವಾಡುತ್ತಿರುವ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ 11 ಮಂದಿ ಆರೋಪಿಗಳನ್ನು ಮತ್ತು ಆಟಕ್ಕೆ ಉಪಯೋಗಿಸಿದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದು, ಪುಂಜಾಲಕಟ್ಟೆ ಠಾಣಾ ಅ.ಕ್ರ 38/2021 ಕಲಂ: 87 ಕರ್ನಾಟಕ ಪೊಲೀಸ್‌ ಕಾಯ್ದೆ, ಕಲಂ: 269, 270 ಜೊತೆಗೆ 34 ಭಾ.ದಂ.ಸಂ ಮತ್ತು ಕಲಂ: 5(1), 5(4) ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ-2020  ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ : ಪೊಲೀಸ್‌ ಹೆಡ್‌ ಕಾನ್ಸ್ಟೇಬಲ್ ಕಡಬ ಪೊಲೀಸು ಠಾಣೆರವರು ದಿನಾಂಕ:29.06.2021 ರಂದು ಕೋವಿಡ್‌ -19 ಸಂಬಂದಿಸಿದಂತೆ ಲಾಕ್‌ಡೌನ್‌ ನಿಮಿತ್ತ ರಾಮಕುಂಜ ಆತೂರು ಚೆಕ್‌ಪೋಸ್ಟ್‌ ಕರ್ತವ್ಯ ನಿರ್ವಹಿಸುತ್ತಿರುವ ಸಮಯ ಕಡಬ ಪೊಲೀಸು ಉಪನಿರೀಕ್ಷಕರೂ ಕೂಡ ಚೆಕ್‌ಪೋಸ್ಟ್ ಬಳಿಗೆ ಬಂದಿದ್ದು ಉಪ್ಪಿನಂಗಡಿ ಕಡೆಯಿಂದ ಕಡಬ ಕಡೆಗೆ ಕೆ.ಎ-21 ಬಿ-6482 ನೇ ಟಾಟಾ ಏಸ್‌ ವಾಹನ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದು ಆತೂರು ಚೆಕ್‌ಪೋಸ್ಟ್‌ ದಾಟಿ ಮುಂದೆ ಹೋಗಿ ರಸ್ತೆ ದಾಟುತ್ತಿದ್ದ ಹ್ಯಾರೀಸ್‌ ಎಂಬ ವ್ಯಕ್ತಿಗೆ ಡಿಕ್ಕಿಹೊಡೆದ ಪರಿಣಾಮ ಆತನು ರಸ್ತೆಗೆ ಬಿದ್ದು ತಲೆಗೆ ಗಂಬೀರ ಗಾಯಗೊಂಡವನನ್ನು ಸ್ಥಳದಲ್ಲಿದ್ದ ಕಡಬ ಪೊಲೀಸು ಉಪನಿರೀಕ್ಷಕರವರು ಇಲಾಖಾ ಜೀಪಿನಲ್ಲಿ ಸಾರ್ವಜನಿಕರೊಂದಿಗೆ ಗಾಯಾಳುವನ್ನು ಕರೆದುಕೊಂಡು ಚಿಕಿತ್ಸೆ ಬಗ್ಗೆ ಉಪ್ಪಿನಂಗಡಿ ಕಡೆಗೆ ಹೋಗಿದ್ದು ಚೆಕ್‌ಪೋಸ್ಟ್‌ ಬಳಿ ಅಪಘಾತವಾದ ಸುದ್ದಿ ಕೇಳಿ ಚೆಕ್‌ಪೋಸ್ಟ್‌ ಬಳಿ ಬಂದ ಸಾರ್ವಜನಿಕರ ಪೈಕಿ ಸುಮಾರು 50-60 ಮಂದಿ ಸೇರಿದ್ದು ಅವರ ಪೈಕಿ ಸುಮಾರು 10-15 ಜನ ಕಿಡಿಗೇಡಿಗಳು ಪಿರ್ಯಾದುದಾರರನ್ನು ಉದ್ದೇಶಿಸಿ ಇಲ್ಲಿ ರಸ್ತೆಗೆ ಬ್ಯಾರಿಕೇಡ್‌ ಹಾಕಿ ವಾಹನಗಳನ್ನು ಚೆಕ್‌ ಮಾಡಿದರೇ ನಮಗೆ ಬಾರಿ ತೊಂದರೆ ಆಗುತ್ತದೆ ಅದಕ್ಕೆ ಇಲ್ಲಿ ಚೆಕ್‌ಪೋಸ್ಟ್ ಬೇಡ ಎಂದು ಹೇಳಿ ರಸ್ತೆಗೆ ಹಾಕಿದ್ದ ಬ್ಯಾರಿಕೇಡ್‌ನ್ನು ಎಳೆದು ಹಾಕಿ ನಂತರ ವಾಗ್ವಾದ ಮಾಡಿ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ಪಿರ್ಯಾದುದಾರರಿಗೆ ಹಾಗೂ ಸಿಬ್ಬಂದಿಯವರ ಕರ್ತವ್ಯಕ್ಕೆ ಅಡ್ಡಿಪಡಿಸಿ ನಂತರ ಸ್ಥಳದಲ್ಲಿ ಸಾರ್ವಜನಿಕರು ತಾತ್ಕಾಲಿಕವಾಗಿ ನಿರ್ಮಿಸಿದ್ದ ಪೊಲೀಸು ಚೆಕ್‌ಪೋಸ್ಟ್‌ ಶೆಡ್‌ನ್ನು ದ್ವಂಸ ಮಾಡಿ ಮತ್ತು ಪೊಲೀಸರು ಕುಳಿತುಕೊಳ್ಳುವ ಮೂರು ಪ್ಲಾಸ್ಟೀಕ್‌ ಕುರ್ಚಿಗಳನ್ನು ಪುಡಿಮಾಡಿ ಬಿಸಾಡಿ ದ್ವಂಸ ಮಾಡಿರುತ್ತಾರೆ ನಂತರ ಆರೋಪಿತರು ಪಿರ್ಯಾದುದಾರರನ್ನು ಉದ್ದೇಶಿಸಿ ಇಲ್ಲಿ ಚೆಕ್‌ಪೋಸ್ಟ್‌ ಹಾಕಿದರೆ ನಿಮ್ಮನ್ನು ಮತ್ತು ಇಲಾಖಾ ಸಿಬ್ಬಂದಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಸ್ಥಳದಿಂದ ಓಡಿ ಹೋಗಿರುತ್ತಾರೆ .ಈ ಬಗ್ಗೆ ಕಡಬ ಠಾಣಾ ಅ.ಕ್ರ 50/2021   ಕಲಂ 143.147.353.427.506. R/W 149 IPC ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ : 29.06.2021 ರಂದು ಪುತ್ತೂರು ಉಪ ವಿಭಾಗ ಪೊಲೀಸ್ ಉಪಾಧೀಕ್ಷಕರವರಿಗೆ ದೊರೆತ ಮಾಹಿತಿಯಂತೆ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ತಾರಸಿ ಮನೆಯ ಹಿಂಭಾಗದಲ್ಲಿ ಅಕ್ರಮವಾಗಿ ಟ್ಯಾಂಕರ್ ಗಳಿಂದ ಫರ್ನೇಸ್ ಆಯಿಲ್ ಗಳನ್ನು  ಕಳ್ಳತನ ಮಾಡಿ ದಾಸ್ತಾನು ಮಾಡಿರುವ ಸ್ಥಳಕ್ಕೆ ಇತರ ಇಳಾಖೆಯ ಅಧಿಕಾರಿಗಳೊಂದಿಗೆ ಧಾಳಿ ನಡೆಸಿದಾಗ ಟ್ಯಾಂಕರ್ ಗಳಾದ TN  12 U 4279 ಮತ್ತು CAA 9394  ನಂಬ್ರದ ಎರಡೂ ಟ್ಯಾಂಕರ್ ಗಳು ನಿಂತುಕೊಂಡಿದ್ದು , ಜೊತೆಗೆ 4 ಜನರು ಟ್ಯಾಂಕರ್ ನಿಂದ ಪಂಪು ಮೂಲಕ ಟ್ಯಾಂಕರ್ ಗೆ ಮತ್ತು ನೆಲ ಟಾಂಕ್ ಗಳಿಂದ  ಪಂಪು ಮೂಲಕ ಟ್ಯಾಂಕರ್ ಗೆ ಫರ್ನೇಸ್ ಆಯಿಲನ್ನು ಲೋಡ್ ಅನ್ ಲೋಡ್  ಮಾಡುತ್ತಿದ್ದು,  ಮುತ್ತು ಪಾಂಡಿ ಮತ್ತು ರಘುನಾಥನ್ ರವರು ಫರ್ನೆಸ್ ಆಯಿಲ್ ಟ್ಯಾಂಕರ್ ಗಳ ಚಾಲಕರೊಂದಿಗೆ  ಹಣಕ್ಕಾಗಿ ಒಪ್ಪಂದ ಮಾಡಿಕೊಂಡು ಟ್ಯಾಂಕರ್ ಗಳನ್ನು ತಮ್ಮ ಸ್ವ ಸ್ಥಳಕ್ಕೆ ಕರೆಯಿಸಿಕೊಂಡು ಅವುಗಳಿಂದ  ಸುಮಾರು 50 ರಿಂದ 200 ಲೀಟರ್ ವರೆಗೆ ಆಯಿಲನ್ನು ಕಳ್ಳತನ ಮಾಡಿ ಅವರ ಸ್ಥಳದಲ್ಲಿರುವ ಭೂಗತ ಟ್ಯಾಂಕ್ ಗಳಲ್ಲಿ ಸಂಗ್ರಹಿಸಿ ಹೆಚ್ಚು ಸಂಗ್ರಹಣೆ ಆದ ನಂತರ ಮಾಲಿಕರ ಖಾಲಿ ಟ್ಯಾಂಕರ್ ಗಳಲ್ಲಿ  ತುಂಬಿಸಿ ಇತರೇ ಸ್ಥಳಗಳಿಗೆ ಸೂಕ್ತ ದಾಖಲಾತಿಗಳಿಲ್ಲದೆ ಅಕ್ರಮವಾಗಿ ಸಾಗಿಸಿ ಮಾರಾಟ ಮಾಡುತ್ತಿರುವುದಾಗಿ ಮಾಲಿಕರಿಗೆ ವಂಚಿಸಿ ನಷ್ಟವನ್ನುಂಟು ಮಾಡಿರುವುದಲ್ಲದೇ, ಆರೋಪಿಗಳಾದ 1] ಎಸ್.ದಾಸ್  2] ಸಿಂಗರಾಜ್ 3] ಎಸ್.ಕಾರ್ತಿ   ಮತ್ತು 4] ಸೆಲ್ವ ರಾಜ್  ಎಂಬವರುಗಳನ್ನು  ವಶಕ್ಕೆ ಪಡೆದುಕೊಂಡು ದಸ್ತಗಿರಿ ಮಾಡಿ ನೆಲದ ಒಳಗೆ ನಿರ್ಮಿಸಿದ 2 ಟಾಂಕುಗಳ  04 ಕಂಪಾರ್ಟ ಮೆಂಟ್ ನಿಂದ ಸುಮಾರು 10,500 ಲೀಟರ್ ದಾಸ್ತಾನು ಇರಿಸಿದ ಫರ್ನಿಶ್ ಆಯಿಲನ್ನು ಸ್ವಾಧೀನಪಡಿಸಿಕೊಳ್ಳುವ  ಬಗ್ಗೆ ಖಾಲಿ ಟ್ಯಾಂಕರ್  ಲಾರಿ CAA 9394 ನೇಯದ್ದಕ್ಕೆ  ತುಂಬಿಸಿ ನಂತರ   ಟ್ಯಾಂಕರ್ TN12-U-4279ನೇದಕ್ಕೆ ಕೂಡ ಪೂರ್ಣ ಪ್ರಮಾಣದಲ್ಲಿ ತುಂಬಿಸಿ ಟ್ಯಾಂಕರ್ ವಾಹನಗಳೆರಡನ್ನು ಸ್ವಾಧೀನಪಡಿಸಿಕೊಂಡಿರುವುದಲ್ಲದೇ, ಕೃತ್ಯಕ್ಕೆ ಬಳಸಿದ ಫೀಲ್ಡ್ ಮಾರ್ಷಲ್ ಡೀಸೆಲ್ ಪಂಪು ಸೆಟ್, Prime ಕಂಪನಿಯ ವಿದ್ಯುತ್ ಚಾಲಿತ ಪಂಪ್ ಸೆಟ್ ಆಯಿಲ್ ಮಿಶ್ರಣ ಮಾಡಲು ಉಪಯೋಗಿಸುವ ಸಲಕರಣೆಗಳು -2 , 25 ಲೀಟರ್ ತಗಡಿನ ಕ್ಯಾನ್ -2 , ಅಳತೆ ಗೇಜ್ ರಾಡ್ -1, ಮೋಟಾರ್ ಸೈಕಲ್ ಕೆಎ 12 ಹೆಚ್ 2489 ನೇ ನಂಬ್ರದ ಮೋಟಾರ್ ಸೈಕಲ್ , ನಗದು ಹಣ ರೂ. 24,000/- , ಮತ್ತು ಇತರ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದು ಎಲ್ಲಾ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 35,21,400/- ಆಗಿರುತ್ತದೆ.  ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 60/2021 ಕಲಂ:379,417,420,287 IPC ಮತ್ತು ಕಲಂ:23 ಪೆಟ್ರೋಲಿಯಮ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೃಷ್ಣಪ್ಪ ಕೆ 38 ವರ್ಷ ತಂದೆ: ರಾಮ ಕೆ ವಾಸ: ಕಲಾಯಿ ಮನೆ ಕೊಳ್ತಿಗೆ ಗ್ರಾಮ ಪುತ್ತೂರು ತಾಲೂಕು ರವರ ಅಣ್ಣ ವಿಶ್ವನಾಥ್‌ರವರ ಅಣ್ಣ ವಿಶ್ವನಾಥ್‌ ಎಂಬವರು ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲ ಎಂಬಲ್ಲಿರುವ ಅಡಿಕೆ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಅದೇ ತೋಟದಲ್ಲಿರುವ ಮನೆಯೊಂದರಲ್ಲಿ ಉಳಕೊಂಡಿದ್ದು,, ವಿಶ್ವನಾಥ್‌ನು 9 ವರ್ಷಗಳ ಹಿಂದೆ ಬೇಬಿ ಎಂಬವರನ್ನು ಮದುವೆಯಾಗಿದ್ದು 5 ವರ್ಷಗಳಿಂದ ಬೇಬಿ ಆತನನ್ನು ಬಿಟ್ಟು ತಾಯಿ ಮನೆಯಲ್ಲಿ ಇದ್ದು ಪ್ರಸ್ತುತ ಯಾವುದೇ ಸಂಪರ್ಕವನ್ನು ಹೊಂದಿಲ್ಲದೇ ಇರುವುದರಿಂದ ಈ ಬಗ್ಗೆ ವಿಶ್ವನಾಥನು ಮಾನಸಿಕವಾಗಿ ನೊಂದುಕೊಂಡಿದ್ದು ದಿನಾಂಕ 29.06.2021 ರಂದು ವಿಶ್ವನಾಥನು ಕೆಲಸ ಮಾಡಿಕೊಂಡಿದ್ದ ತೋಟದ ಮಾಲಿಕರಾದ ಅರುಣ್ ಕುಮಾರ್‌ರವರು ಪಿರ್ಯಾದಿದಾರರ ನೆರೆಮನೆಯ ಸಂದೇಶ್ ಎಂಬವರಿಗೆ ಕರೆ ಮಾಡಿ ವಿಶ್ವನಾಥನು ತೋಟದಲ್ಲಿರುವ ಮನೆಯಲ್ಲಿ ಅಸ್ವಸ್ಥನಾಗಿ ಬಿದ್ದುಕೊಂಡಿರುವುದಾಗಿ ತಿಳಿಸುವಂತೆ ಹೇಳಿರುವ ವಿಚಾರವನ್ನು ಸಂದೇಶರವರು ತಿಳಿಸಿದ ಕೋಡಲೇ ಪಿರ್ಯಾದಿದಾರರು ಸಂದೇಶ್‌ರವರೊಂದಿಗೆ ತಲುಪಿ ನೋಡಲಾಗಿ ಸದ್ರಿ ಮನೆಯ ಅಡುಗೆ ಕೋಣೆಯಲ್ಲಿ ವಿಶ್ವನಾಥನ ಮುಖವು ಕೆಳಭಾಗದಲ್ಲಿರುವಂತೆ ಕೌಚಿ ಮಲಗಿದ್ದ ಸ್ಥಿತಿಯಲ್ಲಿ ಇದ್ದು ದೇಹದಲ್ಲಿ ಯಾವುದೇ ಚಲನೆ ಇಲ್ಲದೇ ಇದ್ದು ವಿಶ್ವನಾಥನನ್ನು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆ ಯುಡಿಅರ್ ನಂಬ್ರ 25/21  ಕಲo: 174 ಸಿಅರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-06-2021 07:29 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080