ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಗಿರೀಶ್ ಪ್ರಾಯ : 30 ವರ್ಷ ತಂದೆ: ದಿ|| ರಾಮ ಎಸ್.ವಾಸ: ಸರ್ ಕುತ್ತಿ ಮನೆ,  ಬಾಯಾರು ಅಂಚೆ ಬಾಯಾರು ಗ್ರಾಮ, ಕಾಸರಗೋಡು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ : 29-08-2021 ರಂದು ತನ್ನ ಬಾಬ್ತು KA 19 ES 9408 ನೇ ಮೋಟರ್ ಸೈಕಲಿನಲ್ಲಿ ಮಾಣಿಯಿಂದ ಮಂಗಳೂರಿಗೆ ಹೋಗುತ್ತಾ ಸಮಯ ಸುಮಾರು 14:30 ಗಂಟೆಗೆ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ನರಹರಿ ಬೆಟ್ಟ ಎಂಬಲ್ಲಿಗೆ ತಲುಪುತ್ತಿದಂತೆ ಬಿ.ಸಿ.ರೋಡ್ ಕಡೆಯಿಂದ KA 03 MB 1213 ಕಾರನ್ನು ಅದರ ಚಾಲಕ ರಕ್ಷಿತ್  ರವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು  ಬಂದು ಪಿರ್ಯಾದಿಯ ಮೋಟರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಿರ್ಯಾದಿಯ ತಲೆಗೆ, ಎಡ ಕೈಗೆ, ಎಡ ಕಾಲಿಗೆ, ಗಾಯವಾಗಿ ಬಿ.ಸಿ.ರೋಡ್ ಸೋಮಾಯಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 83/2021  ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶರತ್ ಕೆ,ಜೆ (36) ತಂದೆ: ಜಯರಾಮ ವಾಸ: ಕಿಲಾರು ಮನೆ, ಸಂಪಾಜೆ ಗ್ರಾಮ,ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 27.08.2021 ರಂದು 20:20 ಗಂಟೆಗೆ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗಡಿಕಲ್ಲು ಚೌಕಿ ಎಂಬಲ್ಲಿ. ನಿಂತುಕೊಂಡಿರುವ ಸಮಯ ಸುಳ್ಯ ಕಡೆಯಿಂದ ಸಂಪಾಜೆ ಕಡೆಗೆ ಕೆಎ 21 ಇಬಿ 1838 ನೇದರ ಸ್ಕೂಟರ್ ಸವಾರ ಕ್ಷೇಮ್ ಕೆ,ಎಂ ಎಂಬಾತನು ಸವಾರಿ ಮಾಡಿಕೊಂಡು ಬರುತ್ತಿದ್ದು, ಆತನ ಹಿಂಬದಿಯಲ್ಲಿ ಕೆಎ 05 ಇಯು 3483 ನೇದರ ಮೋಟಾರ್ ಸೈಕಲ್ ಸವಾರ ಶರತ್ ಎಂಬಾತನು, ಸಹ ಸವಾರ ಮಹದೇವಪ್ರಸಾದ್, ಎಂಬಾತನನ್ನು ಕುಳ್ಳಿರಿಸಿಕೊಂಡು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಸ್ಕೂಟಿಗೆ, ಡಿಕ್ಕಿವುಂಡು ಮಾಡಿ ಸ್ಟೂಟರ್ ಮತ್ತು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ, ಸ್ಕೂಟರ್ ಸವಾರನಿಗೆ ತಲೆಯ ಬಲಬದಿ,ಬಲಕಾಲಿನ ಪಾದಕ್ಕೆ,ಸೊಂಟದ ಬಳಿ ಹಾಗೂ ಮೋಟಾರ್ ಸೈಕಲ್ ಸವಾರನಿಗೆ ಬಲಬುಜ, ಎಡಕಾಲು ಮಂಡಿಯ ಬಳಿ, ಸಹಸವಾರನಿಗೆ ಮುಖಕ್ಕೆ, ಹೊಟ್ಟೆಯ ಬಳಿ,ಎಡಕಾಲು ಮಣಿಗಂಟಿನ ಬಳಿ, ರಕ್ತಗಾಯವಾಗಿದ್ದವರನ್ನು ಪಿರ್ಯಾದುದಾರರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಕಾರು ಒಂದರಲ್ಲಿ ಸುಳ್ಯ ಆಸ್ಪತ್ರೆಗೆ ಕಳುಹಿಸಿರುವುದಾಗಿದೆ . ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ,ಕ್ರ 64/2021 ಕಲಂ 279.337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ವಿಟ್ಲ ಪೊಲೀಸ್ ಠಾಣೆ : ದಿನಾಂಕ:29-08-2021 ರಂದು ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 116/2021 ಕಲಂ:341,506 ಭಾಧಂಸಂ  ಮತ್ತು  ಕಲಂ:-3(1) (y), 3(2)(va) The SC & ST Amendment Act 2015 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 29.08.2021 ರಂದು ಉದಯರವಿ ಎಂ.ವೈ. ಪೊಲೀಸ್ ಉಪ-ನಿರೀಕ್ಷಕರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆರವರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ  ಪುತ್ತೂರು ತಾಲೂಕು  ಪಾಣಾಜೆ  ಗ್ರಾಮದ ಆರ್ಲಪದವು  ಪ್ರಯಾಣಿಕರ  ತಂಗುದಾಣದ ಬಳಿಗೆ  13.30 ಗಂಟೆಗೆ ಧಾಳಿ ನಡೆಸಿ ಅಕ್ರಮವಾಗಿ ಮಧ್ಯ ಮಾರಾಟ ನಡೆಸುತ್ತಿದ್ದ ಆರೋಪಿ ಕೃಷ್ಣ ನಾಯ್ಕ, ಪ್ರಾಯ-50 ವರ್ಷ, ತಂದೆ- ದಿ.ಕೊರಗ ನಾಯ್ಕ,  ವಾಸ- ಪೆರ್ಲತ್ತಡ್ಕ  ಮನೆ,  ಎಣ್ಮಕಜೆ   ಗ್ರಾಮ, ಮಂಜೇಶ್ವರ   ತಾಲೂಕು ಕಾಸರಗೋಡು ಜಿಲ್ಲೆ ಎಂಬಾತನನ್ನು ಬಂಧಿಸಿದ್ದು, ಆತನಿಂದ ಮಧ್ಯ ತುಂಬಿದ 16 ಸ್ಯಾಚೆಟ್‌ಗಳು  ಹಾಗೂ ಮದ್ಯ  ಮಾರಾಟ ಮಾಡಿ ಬಂದ  ಒಟ್ಟು ರೂಪಾಯಿ 1450/- ಗಳನ್ನು ವಶಕ್ಕೆ ಪಡೆದು ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅಕ್ರ  78/2021 u/s 15, 32, 34  KE Act ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-08-2021 10:25 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080