ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ವೇಣು ಕೆ.ಎಸ್ (52) ತಂದೆ:ಸುಬ್ರಮನ್ಸುನ್ ವಾಸ:ಕೂಟುಂಗತ ಮನೆ ಶಿರಾಡಿ ಗ್ರಾಮ ಕಡಬ ತಾಲೂಕು ರವರು ದಿನಾಂಕ: 28.09.2021 ರಂದು ಪಿರ್ಯಾದಿದಾರರ  ಬಾಬ್ತು ಮೋಟಾರ್ ಸೈಕಲ್ ನಲ್ಲಿ ನೆಲ್ಯಾಡಿ ಪೇಟೆಯಿಂದ ಸಾಮಾಗ್ರಿಗಳನ್ನು ಖರೀದಿ ಮಾಡಿ ಮನೆಯ ಕಡೆಗೆ ಅಂದರೆ ಮಂಗಳೂರು ಕಡೆಯಿಂದ ಹಾಸನ ಕಡೆಗೆ ರಾ.ಹೆ 75 ರಲ್ಲಿ ಹೋಗುತ್ತಿರುವ ಸಮಯ ಪಿರ್ಯಾದುದಾರರ ಎದುರುಗಡೆಯಿಂದ ಒಂದು ಹೋಂಡಾ ಡಿಯೋ ಸ್ಕೂಟರ್ ಹೋಗುತ್ತಿದ್ದು ಆ ಸಮಯ ಪಿರ್ಯಾದುದಾರರ ಮೊಟಾರು ಸೈಕಲನ್ನು ಒಂದು ಕಂಟೈನರ್ ಲಾರಿ ಓವರ್ ಟೇಕ್ ಮಾಡಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದುದಾರರ ಎದುರಗಡೆಯಿಂದ ಹೋಗುತ್ತಿದ್ದ ಡಿಯೋ ಸ್ಕೂಟರ್ ಗೆ ಡಿಕ್ಕಿ ಹೊಡೆಯಿಸಿದ ಪರಿಣಾಮ ಡಿಯೋ ಸ್ಕೂಟರ್ ಸವಾರೆ ಸ್ಕೂಟರ್ ಸಮೇತ ರಸ್ತೆಗೆ ಎಸೆಯಲ್ಪಟ್ಟಳು ಕೂಡಲೇ ಪಿರ್ಯಾದುದಾರರ ಬಾಬ್ತು ಮೊಟಾರು ಸೈಕಲನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಪಿರ್ಯಾದುದಾರರು ಹಾಗೂ ಇತರರು  ಸೇರಿಕೊಂಡು ಆಕೆಯನ್ನು  ಉಪಚರಿಸಿ ನೋಡಲಾಗಿ ಆಕೆ ನಿಶ್ಮಿತಾ  ಎಂಬವಳಾಗಿದ್ದು ಆಕೆಯ ಬಲ ಭುಜ ಹಾಗೂ ಬಲ ಕಾಲಿಗೆ  ಗಾಯವಾಗಿದ್ದವಳನ್ನು ಪಿರ್ಯಾದುದಾರರು ಹಾಗೂ ಇತರರು ಒಂದು ಅಂಬ್ಯುಲೆನ್ಸ್ ಮೂಲಕ ಮಂಗಳೂರು ವಿನಯ ಹಾಸ್ಪಿಟಲ್  ಗೆ ಕಳುಹಿಸಿಕೊಟ್ಟಿರುವುದಾಗಿದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 96/2021 ಕಲಂ:279 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪದ್ಮಶೇಖರ್ ಪ್ರಾಯ 65 ವರ್ಷ ನಾವೂರು ಬೀದಿ ಮನೆ ನಾವೂರು ಗ್ರಾಮ ಬಂಟ್ವಾಳ  ತಾಲೂಕು ರವರತ ಕೃಷಿ ಮಾಡಿಕೊಂಡಿದ್ದು ಮನೆಯಲ್ಲಿ ದನ ಸಾಕಾಣೆ ಮಾಡುತ್ತಿದ್ದು ಗಬ್ಬದ ದನವನ್ನು  ಮನೆಯ  ಹಟ್ಟಿಯಲ್ಲಿ ಕಟ್ಟುತ್ತಿದ್ದು ದಿನಾಂಕ 24.09.2021 ರಂದು  ದನವನ್ನು ಗುಡ್ಡಕ್ಕೆ ಮೇಯ್ಯಲು ಬಿಟ್ಟಿದ್ದು ಸಂಜೆಯಾದರು ಹಟ್ಟಿಗೆ ಬಂದಿರುವುದಿಲ್ಲ ಸಂಜೆ ಸುತ್ತ ಮುತ್ತ ಹುಡುಕಾಡಿದರು ಪತ್ತೆಯಾಗದೇ ನೆರೆಕೆರೆಯವರಲ್ಲಿ ಕೇಳಲಾಗಿ  ರಾತ್ರಿ ಸುಮಾರು  11.00 ಗಂಟೆಗೆ ಮನೆಯ ಪಕ್ಕದ ನಾವೂರು  ಬೀದಿ ಗೋಪಲಾಕೃಷ್ಣ  ದೇವಸ್ಥಾನದ ಬದಿ ಮಲಗಿರುವುದನ್ನು ಕಂಡಿರುವುದಾಗಿ  ನೆರೆಕೆರೆಯವರು ತಿಳಿಸಿದ್ದು ಪಿರ್ಯಾದುದಾರರು ದೇವಸ್ಥಾನದ ಬಳಿ ಹೋದಾಗ ದನವು ಇಲ್ಲದೇ ಇದ್ದು ಅಲ್ಲೆ ಇದ್ದ ಪಕ್ಕದ ಮನೆಯವರಲ್ಲಿ ವಿಚಾರಿಸಿದಾಗಿ ಸುಮಾರು 12.00 ಗಂಟೆ  ಸಮಯಕ್ಕೆ ಯಾವುದೋ ಒಂದು  ವಾಹನ ದೇವಸ್ಥಾನದ ಬಳಿ  ನಿಂತುಕೊಂಡಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದುದಾರರು ಬೆಳಿಗ್ಗೆ ಸುತ್ತಮುತ್ತ ಹುಡುಕಾಡಿ  ನೆರೆಕೆರಯವರಲ್ಲಿ ವಿಚಾರಿಸಿದ್ದಲ್ಲಿ ಮತ್ತೆರೆಡು ದನಗಳು ಕಾಣೆಯಾಗಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದುದಾರರ ದನ ಮತ್ತು ನೆರೆಕೆರಯವರ ದನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ   113 /2021 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 3

 

ಬೆಳ್ತಂಗಡಿ ಪೊಲೀಸ್ ಠಾಣೆ : ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಕಲಂ: 5,6 ಫೋಕ್ಸೋ ಕಾಯ್ದೆ 2012 & ಕಲಂ: 376 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದುದಾರರಾದ ಆದಂ (38) ತಂದೆ:ಅಬೂಬಕ್ಕರ್ ವಾಸ:ಪಾಡ್ಯಾರು ಮಜಲು ಮನೆ, ಕುವೆಟ್ಟು ಗ್ರಾಮ, ಗುರುವಾಯನಕೆರೆ ಅಂಚೆ, ಬೆಳ್ತಂಗಡಿ ತಾಲೂಕು ರವರ ಹೆಂಡತಿ ಅಸ್ಮ ಎಂಬವಳು ದಿನಾಂಕ: 08.09.2021 ರಂದು ತನ್ನ ಮನೆಯಾದ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಕುಂಟಿನಿ ಎಂಬಲ್ಲಿರುವ ಮನೆಯಲ್ಲಿ ವಿಷ ಪದಾರ್ಥ ಸೇವಿಸಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ದಿ:09.09.2021 ರಂದು ಮಧ್ಯಾಹ್ನ 2.15 ಗಂಟೆಯ ವೇಳೆಗೆ ಮೃತಪಟ್ಟಿದ್ದು ಆರೋಪಿತನಾದ ಶರೀಫ್ ಎಂಬಾತನ ಕಿರುಕುಳ ಹಾಗೂ ದುಷ್ಟ್ರೇರಣೆಯಿಂದ ಫಿರ್ಯಾದಿದಾರರ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿರುವುದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಅ.ಕ್ರ  81/2021 ಕಲಂ: 306 IPC ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕಡಬ ಠಾಣಾ ಹೆಡ್‌ ಕಾನ್ಸ್ಟೇಬಲ್‌ ರವರು  ದಿನಾಂಕ :28.09.2021 ರಂದು ರಾತ್ರಿ ಕರ್ತವ್ಯದಲ್ಲಿ ಕಡಬ ಪೇಟೆಯಲ್ಲಿರುವ ಸಮಯ ಕಡಬ ತಾಲೂಕು ಐತೂರು ಗ್ರಾಮದ ಸುಂಕದಕಟ್ಟೆ ಎಂಬಲ್ಲಿ ಅಕ್ರಮವಾಗಿ ಪಿಕಪ್‌ ವಾಹನದಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಂತೆ ಪಿರ್ಯಾದುದಾರರು ಸುಂಕದಕಟ್ಟೆ ಮೂಜೂರು ಕ್ರಾಸ್ ಎಂಬಲ್ಲಿಗೆ ತಲುಪಿದಾಗ ಪಿಕಪ್‌ ವಾಹನದಲ್ಲಿ ದನದ ಕರುಗಳನ್ನು ತುಂಬಿಸಿಕೊಂಡು  ಹೋಗುತ್ತಿದ್ದು ಪಿಕಪ್‌ ವಾಹನವನ್ನು  ನಿಲ್ಲಿಸಿ ನೋಡಲಾಗಿ ಸದ್ರಿ ಪಿಕಪ್‌ ವಾಹನದಲ್ಲಿ 3 ದನದ ಕರುಗಳು ಕಂಡು ಬಂದಿದ್ದು ದಾಖಲಾತಿ ಇಲ್ಲದೇ ಇರುವುದು ಕಂಡು ಬಂದಿರುವುದರಿಂದ  ಆರೋಪಿಗಳನ್ನು  ಮುಂದಿನ ಕ್ರಮಕ್ಕಾಗಿ ಕಡಬ ಠಾಣೆಗೆ ಕರೆತಂದು ಕಡಬ ಠಾಣಾ ಅ.ಕ್ರ 80/2021 ಕಲಂ.4, 5 ಕರ್ನಾಟಕ ಜಾನುವಾರು ಹತ್ಯ ಪ್ರತಿಬಂಧಕ ಮತ್ತು ಸಂರಕ್ಷಣಾ ಅದ್ಯಾದೇಶ 2020 ಹಾಗೂ ಕಲಂ: 66(1) ಜೊತೆಗೆ 192(ಎ) ಐಎಂವಿ ಕಾಯ್ದೆ -1988 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಉಮಾನಾಥ ಶೆಟ್ಟಿ ತಂದೆ:ದಿ|| ಕುಂಞಣ್ಣ ಶೆಟ್ಟಿ ವಾಸ:ಸಂಪಿಗೆ ಕೋಡಿ ಮನೆ ಬಿಳಿಯೂರು ಗ್ರಾಮ ಬಂಟ್ವಾಳ ತಾಲೂಕು ರವರ ಹೆಂಡತಿಯ ತಾಯಿ  ಶ್ರೀಮತಿ ಪದ್ಮಾವತಿ  ಪ್ರಾಯ 78 ವರ್ಷ ಗಂಡ ಸೀತಾರಾಮ ಶೆಟ್ಟಿ ಎಂಬವರು ಪಿರ್ಯಾದಿದಾರರ  ವಾಸದ ಮನೆಯಲ್ಲಿ ಸುಮಾರು 4 ವರ್ಷಗಳಿಂದ ವಾಸವಾಗಿದ್ದು, ಇತ್ತೀಚಿನ ದಿನಗಳಲ್ಲಿ ತನಗೆ ಅನಾರೋಗ್ಯದ ಕಾರಣದಿಂದ ಇನ್ನೊಬ್ಬರನ್ನು ಅವಲಂಬಿಸಿ ಬದುಕ ಬೇಕಾಯಿತಲ್ಲ ಎಂಬ ಕೊರಗಿನಲ್ಲಿ ಇದ್ದವರು, ಪ್ರತಿದಿನ ಮನೆಯಲ್ಲಿ ಈ ವಿಚಾರವನ್ನು ಹೇಳುತ್ತಿದ್ದವರು  ದಿನಾಂಕ 26.09.2021 ರಂದು ಸಂಜೆ ಸಮಯ ಸುಮಾರು 16.00 ಗಂಟೆಗೆ ಮನೆಗೆ ಹುಲ್ಲು ಕೊಯ್ಯುವ ಮಿಷಿನ್ ನ ಉಪಯೋಗಕ್ಕಾಗಿ ತಂದಿತ್ತಿದ್ದ ಪೆಟ್ರೋಲನ್ನು ಕುಡಿದು ಅಸ್ವಸ್ಥಗೊಂಡವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿ  ಚಿಕಿತ್ಸೆಯಲ್ಲಿರುತ್ತಾ, ಚಿಕಿತ್ಸೆ  ಫಲಕಾರಿಯಾಗದೇ ದಿನಾಂಕ 29.09.2021 ರಂದು ಬೆಳಿಗ್ಗೆ  04.30 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಠಾಣಾ ಯುಡಿಆರ್ ನಂಬ್ರ:31/2021 ಕಲಂ:174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-09-2021 10:54 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080