ಅಪಘಾತ ಪ್ರಕರಣ: ೦1
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮುನೀರ್ (30) ತಂದೆ: ಅಜೀಜ್ ವಾಸ: ನೆಲ್ಲಿಗುಡ್ಡೆ ಮನೆ, ನಿಟ್ಟಾಡೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 29-10-2021 ರಂದು ಮಹಮ್ಮದ್ ರಫೀಕ್ ರವರು ತನ್ನ ಬಾಬ್ತು ಕೆ ಎ 21 ಇ ಬಿ 6351 ನೇ ಮೋಟಾರ್ ಸೈಕಲ್ನ್ನು ಉಜಿರೆ ಕಡೆಯಿಂದ ಚಾರ್ಮಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಮುಂಡಾಜೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ವಿರುದ್ದ ದಿಕ್ಕಿನಿಂದ ಅಂದರೆ ಚಾರ್ಮಾಡಿ ಕಡೆಯಿಂದ ಉಜಿರೆ ಕಡೆಗ ಕೆ ಎ 42 ಬಿ 2521 ನೇ ಲಾರಿಯನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರನಿಗೆ ಬಲ ಕಾಲಿಗೆ, ತೊಡೆಗೆ, ಎಡಕಾಲಿಗೆ, ಗುದ್ದಿದ ಗಾಯ ಮತ್ತು ಮುಖಕ್ಕೆ, ತಲೆಗೆ ಗುದ್ದಿದ ತರಚಿದ ಗಾಯವಾಗಿದ್ದು, ಗಾಯಾಳು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಕಡೆಗೆ ಹೋಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 82/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
.
ಕಳವು ಪ್ರಕರಣ: ೦1
ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನೌಶಾದ್ (35) ತಂದೆ:ಉಸ್ಮಾನ್ ಎಸ್ ವಾಸ: ಬದ್ರಿಯ ರೆಸಿಡೆಂನ್ಸ್ ಸರಳೀಕಟ್ಟೆ ಬಾರ್ಯ ಗ್ರಾಮದ ಬೆಳ್ತಂಗಡಿ ತಾಲೂಕು ರವರು ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದು, ಅವರ ತಂದೆಯ ಹೆಸರಿನಲ್ಲಿ ಸುಮಾರು 2-00ಎಕ್ರೆ ಜಮೀನಿನಲ್ಲಿ ಅಡಿಕೆ ,ತೆಂಗಿನ ಹಾಗೂ ಬಾಳೆ ಗಿಡದ ವಾಣಿಜ್ಯ ಕೃಷಿ ಇರುತ್ತದೆ, ಸದ್ರಿಯವರ ತಂದೆಯವರು 2-3 ದಿನಗಳ ಹಿಂದೆ ಅಡಿಕೆ ತೋಟಕ್ಕೆ ಹೋದಾಗ ತೋಟದಲ್ಲಿ ಬಿದ್ದ ಹಣ್ಣಡಿಕೆಯು ಕಾಣೆಯಾಗಿದ್ದು, ಈ ಬಗ್ಗೆ ಮನೆಯಲ್ಲಿ ತಿಳಿಸಿದ್ದು, ಅದರಂತೆ ನಿನ್ನೆ ದಿನ ದಿನಾಂಕ:28-10-2021 ರಂದು ಅಸುಪಾಸಿನ ಆಟೋರಿಕ್ಷಾ ಚಾಲಕ ಹಸೈನಾರ್ ರವರು ಫಿರ್ಯಾಧಿಯ ತಂದೆಗೆ ಫೋನು ಮಾಡಿ ನಿಮ್ಮ ಕೆಲಸಕ್ಕೆ ಬರುತ್ತಿದ್ದ ಕೇಶವ ಎಂಬಾತನು ಗೋಣಿ ಚೀಲದಲ್ಲಿ ಹಣ್ಣಡಿಕೆಯನ್ನು ಕೊಂಡು ಹೋಗಿ ಉಪ್ಪಿನಂಗಡಿಯಲ್ಲಿ ಮಾರಾಟ ಮಾಡಿರುತ್ತಾರೆ. ನೀವು ಅಡಿಕೆಯನ್ನು ಮಾರಾಟ ಮಾಡಲು ಕೊಟ್ಟಿದ್ದೀರಾ ? ಎಂದು ಕೇಳಿದ್ದಕ್ಕೆ ಅವರು ನಾನು ಕೊಟ್ಟಿಲ್ಲಾವೆಂದು, ನಮ್ಮ ಅಡಿಕೆ ತೋಟದಿಂದ 2-3 ದಿನಗಳಿಂದ ಬಿದ್ದ ಹಣ್ಣಡಿಕೆಯು ಇಲ್ಲದೇ ಇದ್ದ ಬಗ್ಗೆ ಹಾಗೂ ಕೇಶವನು ಈ ಹಿಂದೆ ಕೆಲಸಕ್ಕೆ ಬರುತ್ತಿದ್ದ ಈಗ ಬರುವುದಿಲ್ಲವೆಂದು ತಿಳಿಸಿರುತ್ತಾರೆಯಾಗಿಯೂ, ಈ ವಿಚಾರವನ್ನು ನೆರೆಕರೆಯಲ್ಲಿ ತಿಳಿಸಲಾಗಿದೆ, ಎಂದು ತಿಳಿಸಿರುತ್ತಾರೆ, ಅದೇ ರೀತಿ ಈ ದಿನ ತಾರೀಕು: 29-10-2021 ರಂದು ಬೆಳಗ್ಗೆ ಫಿರ್ಯಾಧಿ ಮನೆಯಲ್ಲಿರುವ ಸಮಯ ಫಿರ್ಯಧಿ ತಂದೆಯವರಿಗೆ ನೆರೆಯ ಅಬೂಬಕ್ಕರ್ ಎಂಬವರು ಪೋನ್ ಮಾಡಿ ನಿಮ್ಮ ಅಡಿಕೆ ತೋಟದಲ್ಲಿ ಕೇಶವ ನು ಬಿದ್ದ ಹಣ್ಣಡಿಕೆಯನ್ನು ಹೆಕ್ಕುತ್ತಿರುತ್ತಾನೆ ಎಂದು ತಿಳಿಸಿದ ಕೂಡಲೇ ಫಿರ್ಯಾಧಿ ,ಮನೆಯವರು ಹಾಗೂ ಅಬೂಬಕ್ಕರ್ ರವರು ತೋಟಕ್ಕೆ ಹೋದಾಗ ಕೇಶವನು ತೋಟದಿಂದ ಓಡಿ ಪರಾರಿಯಾಗಲು ಯತ್ನಿಸಿದವನನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಆರೋಪಿತನು ತನಗೆ ಹಣದ ಅವಶ್ಯಕತೆ ಇದ್ದುದ್ದರಿಂದ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದು, ಅಲ್ಲದೇ 2-3 ದಿನಗಳ ಹಿಂದೆ ಕೂಡ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದು, ಆರೋಪಿತನು ತೋಟದಲ್ಲಿ ರಾಶಿ ಹಾಕಿದ ಹಣ್ಣಡಿಕೆ ಕೂಡ ಸುಮಾರು 10 ಕೆ.ಜಿನಷ್ಟು ಇದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 116/2021 ಕಲಂ:379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦2
ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಹಮ್ಮದ್ ಕುಂಞ (70) ತಂದೆ:ದಿ|| ಖಾದ್ರಿ ಬ್ಯಾಎಇ ವಾಸ:ಬರ್ಮುಕೋಡಿ ಮನೆ ಮೊಗ್ರು ಗ್ರಾಮ ಬೆಳ್ತಂಗಡಿ ತಾಲೂಕು ರವರು ದಿನಾಂಕ 27-10-2021 ರಂದು ಬೆಳಿಗ್ಗೆ 10.00 ಗಂಟೆಗೆ ಮನೆಗೆ ಬೀಗ ಹಾಕಿ ತನ್ನ ಮಗನಾದ ಇಲ್ಯಾಸ್ ಎಂಬವರ ಉರುವಾಲು ಪದವಿನ ಮನೆಗೆ ಹೋಗಿದ್ದು ಎರಡು ದಿವಸ ಅಲ್ಲಿದ್ದು ಈ ದಿನ ದಿನಾಂಕ 29-10-2021 ರಂದು ಬೆಳಿಗ್ಗೆ 10.00 ಗಂಟೆಗೆ ತನ್ನ ಬಾಬ್ತು ಮನೆಗೆ ಬಂದು ನೋಡಲಾಗಿ ಮನೆಯ ಹಿಂದಿನ ಬಾಗಿಲನ್ನು ಯಾರೋ ತೆರೆದಿದ್ದು ಆ ಕೂಡಲೇ ಪಿರ್ಯಾದುದಾರರು ಒಳಗೆ ಹೋಗಿ ನೋಡಲಾಗಿ ಗ್ಯಾಸ್ ಸ್ಟವ್ 2 ಸ್ವಿಚ್ ಬೋರ್ಡ್ 3 ಪ್ಲಾಸ್ಟಿಕ್ ಚ್ಯಾರ್ ಹಾಗೂ ಗೋಡೆ ಗಡಿಯಾರವನ್ನು ಯಾರೋ ದುಷ್ಕರ್ಮಿಗಳು ಒಡೆದುಹಾಕಿದ್ದು, ಇವುಗಳ ಒಟ್ಟು ಮೌಲ್ಯ 2000/- ರೂ ಆಗಬಹುದು ಈ ಘಟನೆಯು ದಿನಾಂಕ 27-10-2021 ರ ಬೆಳಿಗ್ಗೆ 10 ಗಂಟೆಯಿಂದ ದಿನಾಂಕ 29-20-2021 ರ ಬೆಳಿಗ್ಗೆ 10 ಗಂಟೆಯ ಮದ್ಯ ಯಾರೋ ದುಷ್ಕರ್ಮಿ ಗಳು ಫಿರ್ಯಾಧಿ ಮನೆಯ ಒಳಗಡೆ ಅಕ್ರಮ ಪ್ರವೇಶ ಮಾಡಿ ಸೊತ್ತುಗಳನ್ನು ಪುಡಿ ಮಾಡಿ ನಷ್ಟು ಉಂಟು ಮಾಡಿದ್ದು, ಈ ಬಗ್ಗೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 117/2021 ಕಲಂ:448, 427 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸೆಲ್ವಿ ಮಾರ್ಟೀಸ್ ಪ್ರಾಯ 48 ವರ್ಷ ಗಂಡ ಜಾನ್ ಡಿ ಸೋಜಾ ನೋಳ ಮನೆ ಮಂಚಿ ಗ್ರಾಮ ರವರು ಕೂಲಿ ಕೆಲಸ ಮಾಡಿಕೊಂಡಿದ್ದು ಪಿರ್ಯಾದುದಾರರ, ಮೈದುನನ ಮನೆಯಲ್ಲಿರುವುದಾಗಿದೆ. ದಿನಾಂಕ 29.10.2021 ರಂದು ಬೆಳಿಗ್ಗೆ 06.30 ಗಂಟೆಗೆ ಹೋಟೆಲ್ ಕೆಲಸಕ್ಕೆಂದು ಮನೆಯಿಂದ ಹೊರಟು ಪಿರ್ಯಾದುದಾರರ ತೋಟದ ಒಳಗಿನಿಂದ ಹೋಗುತ್ತಿರುವಾಗ ಪಿರ್ಯಾದುದಾರರ ಮೈದುನನ ಹೆಂಡತಿ ಸುನಿತಾರವರು ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ “ನೀನು ಈ ತೋಟದ ಒಳಗಿನಿಂದ ಹೋಗಬಾರದು ಎಂದು ಹೇಳಿ ಪಿರ್ಯಾದುದಾರರ ಬಾಯಿಗೆ ಕೈಯಿಂದ ಹೊಡೆದಿದ್ದು ನಂತರ ದೊಣ್ಣೆಯಿಂದ ಕಾಲಿಗೆ ಹಾಗೂ ಕತ್ತಿಯಿಂದ ಕೈಯಿಗೆ ಹಲ್ಲೆ ನಡೆಸಿದ್ದು ಆ ಸಮಯ ಪಿರ್ಯಾದುದಾರರ ಗಂಡ ಜಾನ್ ಡಿ ಸೋಜಾ ,ಮೈದುನ ಆಲ್ಫೋನ್ಸ್ ಡಿ ಸೋಜಾ ಮೈದುನನ ಮಗ ರೂಪೇಶ್ ಕೂಡ ಜೊತೆಯಲ್ಲಿದ್ದು ಎಲ್ಲರೂ ಸೇರಿ ಪಿರ್ಯಾದುದಾರರಿಗೆ ಅವಾಚ್ಯ ಶಬ್ದದಿಂದ ಬೈಯುತ್ತಿದ್ದು ಆ ಸಮಯ ಪಿರ್ಯಾದುದಾರರು ಬೊಬ್ಬೆ ಹೊಡೆದಿದ್ದನ್ನು ಕೇಳಿ ಸದ್ರಿ ಆರೋಪಿತರು ಓಡಿ ಹೋಗಿರುತ್ತಾರೆ. ನಂತರ ಪಿರ್ಯಾದುದಾರರು ಚಿಕಿತ್ಸೆ ಪಡೆಯಲು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸಯಲ್ಲಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 127/2021 ಕಲಂ 341 323 324 504 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಅಸ್ವಾಭಾವಿಕ ಮರಣ ಪ್ರಕರಣ: ೦2
ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಗಣೇಶ್ ಬಿ (36 ವರ್ಷ) ತಂದೆ: ತಿಮ್ಮಪ್ಪ ಗೌಡ, ವಾಸ: ಬೀರಿಗ ಮನೆ ಚಿಕ್ಕಮುಡ್ನೂರು ಗ್ರಾಮ, ಪುತ್ತೂರು ತಾಲೂಕು ಎಂಬವರು ದಿನಾಂಕ 29.10.2021 ರಂದು ಬೆಳಿಗ್ಗೆ ಸುಮಾರು 11.00 ಗಂಟೆಗೆ ಅವರ ಬಾಬ್ತು ಅಂಬುಲೆನ್ಸ್ ಚಲಾಯಿಸಿಕೊಂಡು ಪುತ್ತೂರು ಪೇಟೆಯ ಕಡೆಗೆ ಹೋಗುತ್ತಾ ಪುತ್ತೂರು ಕಸಬಾ ಗ್ರಾಮದ ಸಾಲ್ಮರ ರೈಲ್ವೇ ಗೇಟ್ ಬಳಿಯಿರುವ ಸಾರ್ವಜನಿಕ ಬಾವಿಯ ಬಳಿ ಜನರು ಸೇರಿರುವುದನ್ನು ಕಂಡು ಫಿರ್ಯಾದಿದಾರರು ಹೋಗಿ ನೋಡಿದಾಗ ಬಾವಿಯ ನೀರಿನಲ್ಲಿ ಒಂದು ಗಂಡಸಿನ ಮೃತ ದೇಹ ತೇಲುತ್ತಿರುವುದು ಕಂಡು ಬಂದಿದ್ದು, ಸದ್ರಿ ಗಂಡಸಿನ ಪರಿಚಯ ಇರುವುದಿಲ್ಲ . ಮೃತ ಗಂಡಸು ಸುಮಾರು 45-50 ವರ್ಷ ವಯಸ್ಸಿನವರಾಗಿದ್ದು ಲುಂಗಿ ಹಾಗೂ ಶರ್ಟ್ ಧರಿಸಿರುತ್ತಾರೆ . ಸದ್ರಿ ಅಪರಿಚಿತ ವ್ಯಕ್ತಿ ಬಾವಿಗೆ ಹಾರಿ ಅಥವಾ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದ್ದು, ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಕಂಡು ಬರುತ್ತದೆ ಈ ಬಗ್ಗೆ ಪುತ್ತೂರು ನಗರ ಯು.ಡಿ.ಆರ್ ನಂ: 29/2021 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ನಾರಾಯಣ, ಪ್ರಾಯ:52, ತಂದೆ: ಲಕ್ಷ್ಮಣ, ವಾಸ: ಕುರಿಂಜ ಬಲಿಪ್ಪ ಕೊಚ್ಚಿ ಮನೆ, ಅರಿಯಡ್ಕ ಗ್ರಾಮ, ಪುತ್ತೂರು ತಾಲೂಕು ಫಿರ್ಯಾದುದಾರರಾದ ಎಂಬವರ ತಾಯಿಯಾದ ಸುಮಾರು 73 ವರ್ಷ ಪ್ರಾಯದ ಚಂದ್ರಬಾಗಿ ಎಂಬವರು ದಿನಾಂಕ;-28.10.2021 ರಂದು ರಾತ್ರಿ ಸುಮಾರು 10.00 ಗಂಟೆಗೆ ಫಿರ್ಯಾದುದಾರರ ಮನೆಯ ಹಾಲ್ನಲ್ಲಿ ಮಲಗಿದ್ದವರು ಮರುದಿನ ಬೆಳಿಗ್ಗೆ ಸುಮಾರು 6.00 ಗಂಟೆಗೆ ಫಿರ್ಯಾದುದಾರರ ಮನೆಯಲ್ಲಿ ಕಾಣದೇ ಇದ್ದು ಸದ್ರಿಯವರು ತೋಟಕ್ಕೆ ಹೋಗಿರಬಹುದೆಂದು ತಿಳಿದ ಫಿರ್ಯಾದುದಾರರು ತನ್ನ ಮನೆಯಿಂದ ಹಾಲು ತೆಗೆದುಕೊಂಡು ಕುಂಬ್ರಕ್ಕೆ ತೆರಳಿ ವಾಪಾಸು ಬೆಳಿಗ್ಗೆ ಸುಮಾರು 8.30ಗಂಟೆಗೆ ತನ್ನ ಮನೆಗೆ ಬಂದಾಗಲೂ ಚಂದ್ರಬಾಗಿಯವರು ಮನೆಯಲ್ಲಿ ಇರಲಿಲ್ಲ. ಬಳಿಕ ಫಿರ್ಯಾದುದಾರರು ನೆರೆಮನೆಯಲ್ಲಿ ಚಂದ್ರಬಾಗಿಯವರ ಬಗ್ಗೆ ವಿಚಾರಿಸಿ ತನ್ನ ಮನೆಯವರು ಮತ್ತು ನೆರೆಕರೆಯವರೊಂದಿಗೆ ಚಂದ್ರಬಾಗಿಯವರನ್ನು ಹುಡುಕಿಕೊಂಡು ಬೆಳಿಗ್ಗೆ ಸುಮಾರು 10.00 ಗಂಟೆಗೆ ತನ್ನ ಅಡಿಕೆ ತೋಟದಲ್ಲಿರುವ ಕೆರೆಯ ಬಳಿಗೆ ತೆರಳಿ ನೋಡಲಾಗಿ ಸದ್ರಿ ಕೆರೆಯ ನೀರಿನಲ್ಲಿ ಚಂದ್ರಬಾಗಿಯವರ ಮೃತದೇಹವು ತೇಲಾಡುತ್ತಿರುವುದು ಕಂಡು ಬಂದಿರುತ್ತದೆ. ಚಂದ್ರಬಾಗಿಯವರು ದಿನಾಂಕ;- 28.10.2021ರಂದು ರಾತ್ರಿ ಸುಮಾರು 10.00 ಗಂಟೆಯಿಂದ ದಿನಾಂಕ:- 29.10.2021ರಂದು ಬೆಳಿಗ್ಗೆ 10.00 ಗಂಟೆಯ ಮಧ್ಯೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕುರಿಂಜ ಬಲಿಪ್ಪಕೊಚ್ಚಿ ಎಂಬಲ್ಲಿರುವ ಫಿರ್ಯಾದುದಾರರ ಬಾಬ್ತು ಅಡಿಕೆ ತೋಟದ ಕೆರೆಗೆ ಆಕಸ್ಮಿಕವಾಗಿ ಬಿದ್ದು, ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್ ನಂಬ್ರ 38/2021, U/s: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.