ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 5

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಉಬೈದುಲ್ಲಾ ಪ್ರಾಯ:51 ವರ್ಷ ತಂದೆ: ದಿ|| ಅಬ್ದುಲ್ ರಹಿಮಾನ್ ವಾಸ: A-N ಪ್ಲಾಟ್ ಅಗ್ರಮೈಲು ರಸ್ತೆ, ಚೊಕ್ಕಬೆಟ್ಟು, ಚೊಕ್ಕಬೆಟ್ಟು ಗ್ರಾಮ, ಸುರತ್ಕಲ್, ಮಂಗಳೂರು ರವರು ದಿನಾಂಕ 29-11-2021 ರಂದು ತನ್ನ ಬಾಬ್ತು KA-19-HF-3268 ನೇ ಸ್ಕೂಟರಿನಲ್ಲಿ ಅಬ್ದುಲ್ ಖಾದರ್ ರವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಚೊಕ್ಕಬೆಟ್ಟುವಿನಿಂದ ಕಕ್ಕಿಂಜೆ ಎಂಬಲ್ಲಿಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸಮಯ ಬಂಟ್ವಾಳ ತಾಲೂಕು ಬಿ-ಕಸಬಾ ಗ್ರಾಮದ ತುಂಬ್ಯಾ ಜಂಕ್ಷನ್ ಎಂಬಲ್ಲಿಗೆ ತಲುಪಿದಾಗ ಮೂಡಬಿದ್ರೆ ಕಡೆಯಿಂದ KA-19-EF-0178 ನೇ ಮೋಟಾರ್ ಸೈಕಲನ್ನು ಅದರ ಸವಾರ ಗೋಪಾಲ ಎಂಬವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರ ಅಬ್ದುಲ್ ಖಾದರ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಮೊಣಗಂಟಿಗೆ ಗುದ್ದಿದ ನೋವು ಉಂಟಾದವರು ಚಿಕಿತ್ಸೆ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 129/2021  ಕಲಂ 279,337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹಸೈನಾರ್‌ ಪ್ರಾಯ 62 ವರ್ಷ ತಂದೆ:ಪುತ್ತು ಬ್ಯಾರಿ ವಾಸ:ಕಡಂಬು ಕ್ವಾಟರ್ಸ ಮನೆ, ವಿಟ್ಲಪಟ್ನೂರು ಗ್ರಾಮ ಬಂಟ್ವಾಳ ತಾಲೂಕು ದ.ಕ  ರವರ ಹೆಂಡತಿ ಶ್ರೀಮತಿ ಅವ್ವಮ್ಮ ಎಂಬವರು ದಿನಾಂಕ:28-11-2021 ರಂದು ಸಂಜೆ ವಿಟ್ಲ ಪೇಟೆಗೆ ಹೊಗಲೆಂದು ಬಂಟ್ವಾಳ ತಾಲೂಕು ವಿಟ್ಲಪಡ್ನೂರು ಗ್ರಾಮದ ಕಡಂಬು ಎಂಬಲ್ಲಿ ಸಾಲೆತ್ತೂರು-ವಿಟ್ಲ ಸಾರ್ವಜನಿಕ ಡಾಮಾರು ರಸ್ತೆಯ ಬದಿಯ ಮಣ್ಣು ರಸ್ತೆಯಲ್ಲಿ ವಿಟ್ಲ ಕಡೆಗೆ ಹೋಗುವ ವಾಹನಕ್ಕಾಗಿ ಕಾಯುತ್ತ ನಿಂತಿರುವಾಗ ಸಾಲೆತ್ತೂರು ಕಡೆಯಿಂದ ಕೆಎ-19-ಇಎಸ್‌-6915ನೇ ಮೋಟಾರ ಸೈಕಲ್‌ನ್ನು ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ಪತ್ನಿಗೆ ಅಪಘಾತಪಡಿಸಿದ ಪರಿಣಾಮ ಅವ್ವಮ್ಮರವರು ರಸ್ತೆಗೆ ಬಿದ್ದು ಬಲಕಾಲಿಗೆ,ತಲೆಗೆ ಹಾಗೂ ಬಲ ಕೈಗೆ ರಕ್ತಗಾಯವಾಗಿದ್ದು. ನಂತರ ಗಾಯಾಳುವನ್ನು ಒಂದು ಅಂಬುಲೆನ್ಸನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಅವರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ  ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 155/2021  ಕಲಂ:279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹಫೀಝ್ ಪ್ರಾಯ 36 ವರ್ಷ, ತಂದೆ: ದಿ. ಆದಂ, ವಾಸ: ಮಠ ಕೆರೆಮೂಲೆ ಮನೆ, ಉಪ್ಪಿನಂಗಡಿಗ್ರಾಮ ಮತ್ತು ಅಂಚೆ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 29-11-2021 ರಂದು ಆರೋಪಿ ಚಾಲಕ KA-35-A-1419ನೇ ನೋಂದಣಿ ನಂಬ್ರದ ಲಾರಿಯನ್ನು ಮಂಗಳೂರು-ಬೆಂಗಳೂರು ರಾಷ್ಟೀಯ ಹೆದ್ದಾರಿಯಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ  ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಮಠ ಮಸೀದಿಯ ಬಳಿಯಲ್ಲಿ ಬೇರೆ ವಾಹನಗಳನ್ನು ಓವರ್ಟೇಕ್ ಮಾಡಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ಪೂರ್ತಿ ರಾಂಗ್ ಸೈಡಿನಲ್ಲಿ ಚಲಾಯಿಸಿ ಉಪ್ಪಿನಂಗಡಿ ಕಡೆಯಿಂದ ಮಠ ಕಡೆಗೆ ರಸ್ತೆಯ ತೀರಾ ಬದಿಯಲ್ಲಿ ಸಿದ್ದೀಕ್ ರವರು ಚಾಲಕರಾಗಿ ಖತೀಜ ಮತ್ತು ಮಹಮ್ಮದ್ ಅಸರಾರ್ ಹಾಗೂ ಮೊಹಮ್ಮದ್ ಅಲ್ತಾಫ್ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ  KA-21-C-1750ನೇ ಅಟೋರಿಕ್ಷಾಕ್ಕೆ ಬಲವಾಗಿ ಅಫಘಾತವಾಗಿ ಅಟೋರಿಕ್ಷಾದಲ್ಲಿದ್ದ ಎಲ್ಲರಿಗೂ ಗಂಭೀರ ಗಾಯವಾಗಿದ್ದು, ಗಾಯಗೊಂಡ ಸಿದ್ದೀಕ್ ಮತ್ತು ಮೊಹಮ್ಮದ್ ಅಲ್ತಾಫ್ರವರನ್ನು ಚಿಕಿತ್ಸೆ ಬಗ್ಗೆ ಫಿರ್ಯಾದಿದಾರರು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಮೊಹಮ್ಮದ್ ಅಲ್ತಾಫ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು, ಸಿದ್ದೀಕ್ರವರಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆ ಮಂಗಳೂರಿಗೆ ಕಳುಹಿಸಿಕೊಟ್ಟಿದ್ದು, ಗಾಯಗೊಂಡ ಮಹಮ್ಮದ್ ಅಸರಾರ್ ಮತ್ತು ಖತೀಜರವರನ್ನು ಚಿಕಿತ್ಸೆ ಬಗ್ಗೆ ಅಫಘಾತ ಸ್ಥಳದಿಂದ ಮಂಗಳೂರಿನ ಎ ಜೆ ಆಸ್ಪತ್ರೆಗೆ ಕಳುಹಿಸಿಕೊಡಲಾಗಿರುತ್ತದೆ   ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  148/2021 ಕಲಂ: 279,338, 304(A) ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಉದಯ ಪ್ರಾಯ 25 ವರ್ಷ ತಂದೆ:ರಾಮ ನಾಯ್ಕ್ ವಾಸ:ಶಾಲೆತ್ತಡ್ಕ್ ಮನೆ ನೆಲ್ಲಿಕಟ್ಟೆ ಗ್ರಾಮ ನೆಕ್ಕರಾಜೆ ಅಂಚೆ ಕಾಸರಗೋಡು ರವರು ನೀಡಿದ ದೂರಿನಂತೆ ದಿನಾಂಕ: ದಿನಾಂಕ:28.11.2021  ರಂದು KL-14-R-8555 ನೇ ಆಲ್ಟೋ 800 ಕಾರಿನಲ್ಲಿ ಕಿರಣ್ ರವಿತೇಜ್ ಮತ್ತು ಪೂರ್ಣೇಶ್ ರವರು ಗುಂಡ್ಯ ಎಂಬಲ್ಲಿಗೆ ಕಬಡ್ಡಿ ಮ್ಯಾಚ್ ನೋಡಲು ಹೋಗಿದ್ದು ಪೂರ್ಣೇಶ್ ರವರು ಚಾಲಕರಾಗಿದ್ದರು. ಮ್ಯಾಚ್ ಇಲ್ಲದೇ ಇದ್ದುರಿಂದ ರಾತ್ರಿ 01-00 ಗಂಟೆಗೆ ವಾಪಸ್ಸು ಊರಿಗೆ ಬರುವರೇ ರಾ.ಹೆ-75 ರಲ್ಲಿ ಉಪ್ಪಿನಂಗಡಿ ಕಡೆಗೆ ಬರುತ್ತಾ ಕಾರನ್ನು ಪೂರ್ಣೇಶನು ಅಜಾಗರೂಕತೆ ಮತ್ತು ದುಡುಕುತನದಿಂದ ಚಲಾಯಿಸಿಕೊಂಡು ಬಂದು ರಾತ್ರಿ 02-00 ಗಂಟೆಗೆ ಕಡಬ ತಾಲೂಕು ಕೊಣಾಲು ಗ್ರಾಮದ ಪೆಟ್ರೋಲ್ ಪಂಪ್ ಬಳಿ ತಲುಪಿದಾಗ ಕಾರು ಎಡಬದಿಗೆ ಹೋಗಿ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಕಿರಣ್ ಹಾಗೂ ಚಾಲಕ ಪೂರ್ಣೇಶ್ ರವರ ಬಲಗಣ್ಣಿನ ಭಾಗಕ್ಕೆ ರಕ್ತ ಮತ್ತು ಗುದ್ದಿದ ಗಾಯವಾಗಿರುತ್ತದೆ. ರವಿತೇಜರವರ ಎದೆಯ ಭಾಗಕ್ಕೆ ತೀವ್ರ ತರಹದ ಗುದ್ದಿದ ಗಾಯವಾಗಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ:146/2021 ಕಲಂ:279, 337,338 ಭಾದಂಸಂ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅರವಿಂದ. ಎಂ, ಪ್ರಾಯ 22 ವರ್ಷ, ತಂದೆ: ಜಯಪ್ರಸಾದ. ಎನ್‌, ವಾಸ: ನಾಟಿಕೇರಿ ಮನೆ, ಐವರ್ನಾಡು ಗ್ರಾಮ, ಸುಳ್ಯ ತಾಲೂಕು ರವರು ತನ್ನ ಮನೆಯಿಂದ ಪುತ್ತೂರಿನಲ್ಲಿರುವ ಅತ್ತೆ ಮನೆಗೆ ಹೋಗುವರೇ ತನ್ನ ಬಾಬ್ತು KA 19 EX 3298 ನೇ ಬಜಾಜ್‌ ಪಲ್ಸರ್‌ ಮೋಟಾರ್‌ ಸೈಕಲ್‌ನಲ್ಲಿ ಬೆಳ್ಳಾರೆ-ಕುಂಬ್ರ-ಪುತ್ತೂರು ಮಾರ್ಗವಾಗಿ ಹೊರಟು ಕಡಬ ತಾಲೂಕು ಪಾಲ್ತಾಡಿ ಗ್ರಾಮದ ತಾರಿಪಡ್ಪು ಎಂಬಲ್ಲಿಗೆ ತಲುಪಿದಾಗ ತನ್ನ ಎದುರುಗಡೆಯಿಂದ ಅಂದರೆ ಪುತ್ತೂರಿನಿಂದ ಬೆಳ್ಳಾರೆ ಮಾರ್ಗವಾಗಿ KA 04 MF 6355 ನೇ ಕಾರನ್ನು ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಏಕಾಏಕಿಯಾಗಿ ರಸ್ತೆಯ ತೀರಾ ಬಲಬದಿಗೆ ಚಾಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್‌ ಸೈಕಲಿನ ಮುಂಬಾಗಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ನ ಮುಂಬಾಗ ಜಖಂ ಆಗಿದ್ದು ಪಿರ್ಯಾದಿದಾರರು ರಸ್ತೆಯ ಬದಿಯ ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಕುತ್ತಿಗೆಯ ಬಲಭಾಗಕ್ಕೆ ಗುದ್ದಿದ ಗಾಯ, ಎರಡೂ ಕಾಲಿನ ತೊಡೆಯ ಭಾಗಕ್ಕೆ ಗುದ್ದಿದ ಗಾಯ ಹಾಗೂ ಎಡಕಾಲಿನ ಮೊಣಗಂಟಿಗೆ ರಕ್ತ ಗಾಯವಾಗಿದ್ದು ನಂತರ ಅಲ್ಲಿ ಸೇರಿದ ಜನರು ಉಪಚರಿಸಿ ಕೆಯ್ಯೂರಿಗೆ ಕರೆದುಕೊಂಡು ಬಂದು ಅಲ್ಲಿಂದ ಒಂದು ಖಾಸಗಿ ಅಂಬುಲೆನ್ಸ್‌ನಲ್ಲಿ ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿರುತ್ತಾರೆ ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಅ.ಕ್ರ 63/2021 ಕಲಂ: 279, 337 IPC. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶಾರದ ಪೂಂಜಾ, ಪ್ರಾಯ-56ವರ್ಷ,ಗಂಡ-ಮಹಾಬಲ ಪೂಂಜಾ ವಾಸ- ಕೆಳಗಿನಮನೆ, ಬುಳೆರಿಕಟ್ಟೆ  ಬಲ್ನಾಡು ಗ್ರಾಮ, ಪುತ್ತೂರು ತಾಲೂಕು ರವರು ತನ್ನ ಮಗಳಾದ ಡಾII ರೋಶನಿ ಪೂಂಜಾರವರ ಮನೆಯಾದ ಉಡುಪಿಗೆ ಹೋದವರು, ದಿನಾಂಕ 27.11.2021ರಂದು ಉಡುಪಿಯಿಂದ ಬೆಳಿಗ್ಗೆ 11.30 ಗಂಟೆಗೆ ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ಹೊರಟು ಮಧ್ಯಾಹ್ನ 3.45 ಕ್ಕೆ ಪುತ್ತೂರಿಗೆ ಬಂದು ಬುಳೇರಿಕಟ್ಟೆ ಮಾರ್ಗವಾಗಿ ವಿಟ್ಲಕ್ಕೆ ಹೋಗುವ ಖಾಸಗಿ ಬಸ್ಸಿನಲ್ಲಿ ಹೊರಟು ಸಂಜೆ ಸಮಯ ಸುಮಾರು 4.30 ಗಂಟೆಗೆ ಫಿರ್ಯಾದಿದಾರರ ತಾಯಿ ಮನೆಯಾದ ಬಲ್ನಾಡು ಗ್ರಾಮದ ಬುಳೇರಿಕಟ್ಟೆಯ ಕೆಳಗಿನ ಮನೆಗೆ ಬಂದು ಮನೆಯ ಒಳಗೆ ಟೇಬಲ್ ನ ಮೇಲೆ ಸದ್ರಿಯವರ ಹ್ಯಾಂಡ್ ಬ್ಯಾಗ್ ಮತ್ತು ರೆಡ್ ಕಲರ್ ನ ಕ್ಯಾರಿ ಬ್ಯಾಗ್ ನ್ನು ಇಟ್ಟಿದ್ದು, ರಾತ್ರಿ ಸಮಯ ಸುಮಾರು 7.30 ಗಂಟೆಗೆ ಫಿರ್ಯಾದಿದಾರರು ಹ್ಯಾಂಡ್ ಬ್ಯಾಗ್‌ ನ್ನು ನೋಡಲಾಗಿ ಹ್ಯಾಂಡ್ ಬ್ಯಾಗ್‌ ನ ಒಳಗೆ ಇಟ್ಟಿದ್ದ 1) 1 ಜೊತೆ ವಜ್ರದ ಬೆಂಡೋಲೆ, 2) 1 ಜೊತೆ 4 ಪವನಿನ ಕೂರ್ಗಿ ಬಳೆ, 3) 4 ಪವನಿನ ಮುತ್ತಿನ ಹಾರ -1, 4) 4 ಪವನಿನ ಹವಳದ ಹಾರ -1, 5) 10 ಗ್ರಾಂ ನ 1 ಜೊತೆ 10 ಗ್ರಾಂ ನ ಬೆಂಡೋಲೆ, 6) 1 ನೀಲಿ ಕಲ್ಲಿನ ½ ಪವನಿನ ಉಂಗುರ ಕಾಣಿಸದೇ ಇದ್ದು, ಸದ್ರಿ ಚಿನ್ನಾಭರಣಗಳನ್ನು ಯಾರೋ ಕಳ್ಳರು ದಿನಾಂಕ 27.11.2021ರಂದು ಬೆಳಿಗ್ಗೆ 11.30 ಗಂಟೆಯಿಂದ ರಾತ್ರಿ 7.30 ಗಂಟೆಯ ಮಧ್ಯೆ ಕಳವು ಮಾಡಿದ್ದು, ಸದ್ರಿ ಕಳವಾದ 14 ಪವನ್‌ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ 2,56,000/- ಆಗಹುದು. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅಕ್ರ: 106/2021 ಕಲo:379,, 380  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವರ್ಷಿತ್‌‌‌ ಪ್ರಾಯ: 22 ವರ್ಷ,ತಂದೆ: ಸಾಂತಪ್ಪ ಗೌಡ ವಾಸ: ಕಡ್ತಲ್‌‌ಕಜೆ ಮನೆ,  ಗುತ್ತಿಗಾರು  ಗ್ರಾಮ, ಸುಳ್ಯ ತಾಲೂಕು ರವರು ದಿನಾಂಕ 27.11.2021 ರಂದು ರಾತ್ರಿ ತನ್ನ ಸ್ನೇಹಿತರಾದ ಹರ್ಷಿತ್‌, ದಿನೇಶ್‌, ಸಚಿನ್, ರಕ್ಷಿತ್‌‌‌ ಎಂಬವರೊಂದಿಗೆ ಗುತ್ತಿಗಾರಿನ ಮಧು ಬಾರ್‌ & ರೆಸ್ಟೋರೆಂಟಿನಲ್ಲಿ ಇದ್ದ ಸಂದಂರ್ಭದಲ್ಲಿ ಬಾರ್‌‌‌ ಮಾಲಿಕರಾದ ಹರ್ಷಿತ್‌‌ ಎಂಬವರು ವಿನಃ ಕಾರಣ ನಮ್ಮನ್ನು ಉದ್ದೇಶಿಸಿ ನೀವು ನಮ್ಮ ಬಾರಿಗೆ ಯಾಕೇ ಬಂದಿರುವುದು ನಿಮ್ಮನ್ನು ಇಲ್ಲಿಗೆ ಬರಹೇಳಿದವರು ಯಾರು ನಿಮಗೆ ಇಲ್ಲಿ ಕುಡಿಯಲು ತಿನ್ನಲು ಕೊಡುವುದಿಲ್ಲ ಇಲ್ಲಿಂದ ನಡೆಯಿರಿ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂಧಿಸಿದ ಸಂದಂರ್ಭ ಪಿರ್ಯಾದಿದಾರರ ಅಣ್ಣ ಹರ್ಷಿತ್‌ ಹಾಗೂ ಸ್ನೇಹಿತ ದಿನೇಶ್‌‌ ರವರುಗಳು ಬಾರ್‌ ಇರುವುದು  ಎಲ್ಲಾರಿಗಲ್ಲವೇ ನಾವು ಕೂಡ ಇಲ್ಲಿ ಬಿಲ್‌‌‌‌ ಕೊಟ್ಟೆ ಕುಡಿಯುವುದು ಎಂದಾಗ ಎದ್ರಿ ಬಾರ್‌‌‌ ಮಾಲಕರಾದ ಹರ್ಷಿತ್‌‌ ಎಂಬವರು ನೀವೆಲ್ಲರೂ ಗೂಂಡಾಗಳು ಇಲ್ಲಿ ಗಲಾಟೆ ಮಾಡಲು ಬಂದಿರುವುದು ಎಂದು ಹೇಳಿ ಅಲ್ಲೇ ಇದ್ದ ಪೂರ್ಣೇಶ್‌‌ ಮತ್ತು ಗೌತಮ್‌ ಹೆಚ್‌‌‌ ಎಂಬ ಎದ್ರಿಗಳೊಂದಿಗೆ ಹೊರದಬ್ಬಲು ಹೇಳಿದಾಗ ಪೂರ್ಣೇಶ್‌‌ ಮತ್ತು ಗೌತಮ್‌ ಹೆಚ್‌ ಕುತ್ತಿಗೆಗೆ ಕೈ ಹಾಕಿ ಹಲ್ಲೆ ನಡೆಸಿದರು, ಇದನ್ನು ಪ್ರತಿಭಟಿಸಿದಾಗ ಎದ್ರಿ ಬಾರ್‌‌‌ ಮಾಲಕರಾದ ಹರ್ಷಿತ್‌‌ ಅವಾಚ್ಯ ಶಬ್ದಗಳಿಂದ ನಿಂದಿಸಿ ಪಿರ್ಯಾದಿದಾರರಿಗೂ ಮತ್ತು ಅವರ ಸ್ನೇಹಿತರಾದ ಹರ್ಷಿತ್‌‌, ದಿನೇಶ್‌‌ ,ಸಚಿನ್‌‌ ಮತ್ತು ರಕ್ಷಿತ್‌‌ ಎಂಬವರಿಗೆ ಅಲ್ಲೇ ಇದ್ದ ಸಲಾಕೆಯಿಂದ ಹಲ್ಲೆ ನಡೆಸಿ ಕಾಲಿನಿಂದ ಒದ್ದು ಹರ್ಷಿತ್‌‌ ನ ಎದೆಗೆ ಕೈಗೆ ,ಕಾಲಿಗೆ ಗುದ್ದಿ ಹಲ್ಲೆ ನಡೆಸಿರುತ್ತಾರೆ ಅಲ್ಲದೇ ಬಾರ್‌‌ ಮಾಲಿಕರಾದ ಹರ್ಷಿತ್‌‌ ರವರು “ಇಂದು ನೀವು ಬದುಕಿದ್ದಿರಿ, ಮುಂದೆ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಕತ್ತಿ ತೋರಿಸಿ ಜೀವ ಬೇದರಿಕೆ ಒಡ್ಡಿರುತ್ತಾರೆ ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣಾ ಅ.ಕ್ರ ನಂಬ್ರ 88-2021 ಕಲಂ: 323, 324, 504, 506 ಜೊತೆಗೆ 149 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರೀತಂ ಪ್ರಾಯ 20 ವರ್ಷ ತಂದೆ: ಸಿ.ಹೆಚ್ ಹೇಮಂತ್ ಕುಮಾರ್ ವಾಸ: ಕೆಮ್ಮಿಂಜೆ ದೇವಸ್ಥಾನದ ಬಳಿ ಕೂರ್ನಡ್ಕ ಕೆಮ್ಮಿಂಜೆ ಗ್ರಾಮ ಪುತ್ತೂರು ತಾಲೂಕು ಎಂಬವರು ಒಎಲ್ಎಕ್ಸ್ ಆ್ಯಪ್ ಮೂಲಕ ಮ್ಯಾಪ್ ಬುಕ್ ಏರ್.ಎಂ ಲ್ಯಾಪ್ ಟಾಪ್ ನ್ನು ಬುಕ್ ಮಾಡಿದ್ದು, ಸದ್ರಿ ಲ್ಯಾಪ್ ಟಾಪ್ ಬುಕ್ ಮಾಡುವ ಸಮಯ ವ್ಯಕ್ತಿಯು 47,000/- ರೂ ಹಣ ಮತ್ತು ಕೋರಿಯರ್ ಚಾರ್ಜ್ ರೂ. 400/- ನ್ನು ಪಾವತಿಸಬೇಕೆಂದು ತಿಳಿಸಿದ ಮೇರೆಗೆ ಫಿರ್ಯಾದಿದಾರರು ದಿನಾಂಕ: 20.11.2021 ರಂದು ಫಿರ್ಯಾದಿದಾರರ ಹೆಸರಿನಲ್ಲಿರುವ ಕರ್ನಾಟಕ ಬ್ಯಾಂಕ್ ಪುತ್ತೂರು ಉಳಿತಾಯ ಖಾತೆಯಿಂದ ಎದ್ರಿಯ ಖಾತೆಗೆ ನೆಫ್ಟ್ ಮುಖಾಂತರ ಟ್ರಾನ್ಸ್ ಫರ್ ಮಾಡಿದ್ದು, ಮೂರು ದಿನಗಳ ಒಳಗಾಗಿ ಲ್ಯಾಪ್ ಟಾಪ್ ಬರುವುದಾಗಿ ನಂಬಿಸಿ ನಂತರದ ದಿನಗಳಲ್ಲಿ  ಲ್ಯಾಪ್ ಟಾಪ್ ಬಾರದೇ ಇದ್ದು, ಎದ್ರಿದಾರರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಬ್ಯುಸಿ ಎಂದು ಬರುತ್ತಿದ್ದು, ಎದ್ರಿಯು ಫಿರ್ಯಾದಿದಾರರ ಜೊತೆಯಲ್ಲಿ ಮೋಸ ಮಾಡುವ ಉದ್ದೇಶದಿಂದ ವ್ಯವಹಾರ ಮಾಡಿರುವುದಾಗಿದೆ ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 101/2021 ಕಲಂ: 420  ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 30-11-2021 10:40 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080