Feedback / Suggestions

ಅಪಘಾತ ಪ್ರಕರಣ: 6

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ದಿವಾಕರ ಎಂ., ಪ್ರಾಯ 28 ವರ್ಷ, ತಂದೆ: ಐತಪ್ಪ ನಾಯ್ಕ್ ವಾಸ:1-7 F, ಆಂಡೇನ್ ಮನೆ, ತಣ್ಣಿರುಪಂತ ಅಂಚೆ & ಗ್ರಾಮ ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 28-12-2021 ರಂದು ಆರೋಪಿ ಮೋಟಾರ್ ಸೈಕಲ್ ಸವಾರ ಚಂದ್ರ  ಎಂಬವರು KA-19-EJ-7087 ನೇ ನೋಂದಣಿ ನಂಬ್ರದ  ಮೋಟಾರ್ ಸೈಕಲ್ ನ್ನು ಗುರುವಾಯನ ಕೆರೆ ಕಡೆಯಿಂದ-ಉಪ್ಪಿನಂಗಡಿ ಕಡೆಗೆ ರಾಜ್ಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಪೆದಮಲೆ ಎಂಬಲ್ಲಿ  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡ್ ಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-Y-5881 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲ್ ಗೆ ಅಪಘಾತವಾಗಿ, ಪಿರ್ಯಾದುದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು , ಎಡ ಭುಜಕ್ಕೆ ಗುದ್ದಿದ ಒಳನೋವು ಹಾಗೂ ಬಲ ಕಾಲಿನ ಪಾದದ ಹಿಮ್ಮಡಿಗೆ  ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರು ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  162/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸೀತಾರಾಮ ಗೌಡ ಪ್ರಾಯ 49 ವರ್ಷ, ತಂದೆ: ದಿ. ಕೊರಗಪ್ಪ ಗೌಡ ವಾಸ:ದರ್ಬೆ-ಪರ್ಲಡ್ಕ ರಸ್ತೆ, ಮಕ್ಕಳ ಮಂಟಪ ಸಮೀಪ, ದರ್ಬೆ ಅಂಚೆ, ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 28-12-2021 ರಂದು ಆರೋಪಿ ಕಾರು ಚಾಲಕ ಮಹಮ್ಮದ್ ಹಾರೀಸ್  ಎಂಬವರು KA-21-N-4916 ನೇ ನೋಂದಣಿ ನಂಬ್ರದ  ಕಾರನ್ನು ದರ್ಬೆ-ಪುತ್ತೂರು-ಬೊಳುವಾರು ಮುಖ್ಯ ಸಾರ್ವಜನಿಕ ದ್ವಿಪಥ ಡಾಮಾರು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಧನ್ವಂತ್ರಿ ಆಸ್ಪತ್ರೆಯ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಪಿರ್ಯಾದುದಾರರು ದರ್ಬೆ ಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-Q-7420 ನೇ ನೋಂದಣಿ ನಂಬ್ರದ ಸ್ಕೂಟರ್ ಗೆ ಹಿಂದಿನಿಂದ  ಅಪಘಾತವಾಗಿ, ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು , ಬೆನ್ನಿಗೆ ಗುದ್ದಿದ ಗಾಯ, ಬಲಕೈಯ ಮಣಿಗಂಟಿನ ಬಳಿ ತರಚಿದ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರನ್ನು ಪುತ್ತೂರು ಧನ್ವಂತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ, ನಂತ್ರ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ, ಕಾರು  ಪಿರ್ಯಾದಿದಾರ ಸ್ಕೂಟರ್ ಗೆ ಡಿಕ್ಕಿಯಾದ ರಭಸಕ್ಕೆ ಕಾರು ಹಿಮ್ಮುಖವಾಗಿ ಚಲಿಸಿ ಕಾರಿನ ಹಿಂದಿನಿಂದ ಬರುತ್ತಿದ್ದ KA-21-V-0466 ನೇ ಸ್ಕೂಟರ್ ಗೆ ಡಿಕ್ಕಿಯಾಗಿ ಸ್ಕೂಟರ್  ಜಖಂ ಗೊಂಡಿರುತ್ತದೆ. ಸ್ಕೂಟರ್ ಸವಾರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ, ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  163/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹಮೀದ್ ಕೆ. ಎ. ಪ್ರಾಯ: 49 ವರ್ಷ, ತಂದೆ: ದಿ| ಅಬ್ದುಲ್ ರಹಿಮಾನ್, ವಾಸ: ಕುಕ್ಕಾಜೆ ಮನೆ, ಬಡಗನ್ನೂರು ಗ್ರಾಮ, ಪುತ್ತೂರು ತಾಲೂಕು ರವರು ದಿನಾಂಕ: 29.12.2021ರಂದು ತನ್ನ ಬಾಬ್ತು ಕೆಎ-21-ಬಿ-2147 ನೇ ಆಟೋರಿಕ್ಷಾವನ್ನು ಈಶ್ವರ ಮಂಗಳ ದಿಂದ ಕರ್ನೂರು ಕಡೆಗೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ, ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಬೆಳ್ಳಿಚಡವು ಎಂಬಲ್ಲಿಗೆ ಮಧ್ಯಾಹ್ನ ಸಮಯ ಸುಮಾರು 12.00 ಗಂಟೆಗೆ  ತಲುಪಿದಾಗ, ಫಿರ್ಯಾದಿದಾರರ ಎದುರು ದಿಕ್ಕಿನಿಂದ ಅಂದರೆ ಕರ್ನೂರು ಕಡೆಯಿಂದ ಈಶ್ವರಮಂಗಳ ಕಡೆಗೆ ಒಂದು ಕಾರನ್ನು ಅದರ ಚಾಲಕನು ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಹೋಗಿ ಫಿರ್ಯಾದಿದಾರರು ಚಲಾಯಿಸುತ್ತಿದ್ದ ಆಟೋರಿಕ್ಷಾಕ್ಕೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಬಾಬ್ತು ಆಟೋರಿಕ್ಷಾ ಹತೋಟಿ ತಪ್ಪಿ ರಸ್ತೆಯ ಎಡ ಬದಿಗೆ ಮಗುಚಿ ಬಿದ್ದಿದ್ದು, ಈ ಪರಿಣಾಮ ಆಟೋರಿಕ್ಷಾವು ಸಂಪೂರ್ಣ ಜಖಂಗೊಂಡಿದಲ್ಲದೇ ಫಿರ್ಯಾದಿದಾರರ ಹಣೆಗೆ ರಕ್ತಗಾಯವಾಗಿರುತ್ತದೆ. ಕೂಡಲೇ ಹಿಂದಿನಿಂದ ಬರುತ್ತಿದ್ದ ರಿಕ್ಷಾ ಚಾಲಕರಾದ ಪ್ರವೀಣರವರು ಫಿರ್ಯಾದಿಯನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಪುತ್ತೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಹೊರರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ. ಫಿರ್ಯಾದಿದಾರರ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದ ಕಾರಿನ ನಂ: ಕೆಎ-19-ಝೆಡ್-6497 ಆಗಿದ್ದು, ಅದರ ಚಾಲಕನ ಹೆಸರು ಮಹಮ್ಮದ್ ಶಾಲಿಹ್ ಎಂದು ನಂತರ ತಿಳಿದು ಬಂದಿರುತ್ತದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅಕ್ರ  113/2021 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಾಘವೇಂದ್ರ ಸರಳಾಯ ಪ್ರಾಯ 50 ವರ್ಷ ತಂದೆ: ಪಿ ಸುಂದರ ಸರಳಾಯ ವಾಸ: 9/88 ರಾಂ ನಿಲಯ ಶ್ರೀರಾಮ ಪೇಟೆ ಸುಳ್ಯ ಕಸಬ ಗ್ರಾಮ ಸುಳ್ಯ ರವರು ದಿನಾಂಕ 28.12.2021 ರಂದು ಮಧ್ಯಾಹ್ನ  ತನ್ನ ಬಾಬ್ತು ಮೋಟಾರ್ ಸೈಕಲಿನಲ್ಲಿ ಜಾಲ್ಸೂರು ಕಡೆಗೆ ಹೋಗುತ್ತಿದ್ದ ಸಮಯ ಸುಮಾರು 15.45 ಗಂಟೆಗೆ ಜಾಲ್ಸೂರು ಗ್ರಾಮದ ಬೊಳುಬೈಲು ಗೋಪಿಕರವರ ಮನೆ ಎದುರು ಹೋಗುತ್ತಿದ್ದಂತೆ ಪಿರ್ಯಾದಿದಾರರ ಎದುರು ಮೋಟಾರ್ ಸೈಕಲ್ ನ್ನು ಅದರ ಅವಾರ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗಿ ರಸ್ತೆಯ ತೀರಾ ಬಲಬದಿಗೆ ಹೋಗಿ ಮಣ್ಣು ರಸ್ತೆಯನ್ನು ದಾಟಿ ನೀರು ಹೋಗುವ ಚರಂಡಿಗೆ ಬಿದ್ದವರನ್ನು ಕೂಡಲೇ ಪಿರ್ಯಾದಿದಾರರು ಹಾಗೂ ಅಲ್ಲಿ ಸೇರಿದ ಇತರರು ಉಪಚರಿಸಿ ನೋಡಲಾಗಿ ಅವತ ತಲೆಗೆ ಎಡ ಕೈಗೆ ಹಾಗೂ ಅಲ್ಲಲ್ಲಿ ಗುದ್ದಿದ ಹಾಗೂ ತರಚಿದೆ ಗಾಯವಾಗಿದ್ದು, ಸ್ಮೃತಿ ಇರದೇ ಇದ್ದು ಅಲ್ಲಿಯೇ ಬರುತ್ತಿದ್ದ ಒಂದು ವಾಹನದಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಪಘಾತ ಉಂಟು ಮಾಡಿದ ಮೋಟಾರ್ ಸೈಕಲ್ ಸವಾರನ ಹೆಸರು ರಾಘವೇಂದ್ರ ಎಂಬುದಾಗಿದ್ದು, ಮೋಟಾರ್ ಸೈಕಲ್ ನಂಬ್ರ ಕೆಎ-41ಈಎಂ-6743  ಆಗಿದ್ದು, ಈ ಅಪಘಾತಕ್ಕೆ ಮೋಟಾರ್ ಸೈಕಲನ್ನು ಅದರ ಸವಾರ ರಾಘವೇಂದ್ರ ಎಂಬವರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದ ಚಲಾಯಿಸಿದ್ದೇ  ಕಾರಣವಾಗಿರುತ್ತದೆ ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಅ ಅ.ಕ್ರ 105/21 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಗುರುರಾಜ್ ಡಿ   ಪ್ರಾಯ :32  ವರ್ಷ ತಂದೆ: ಸುಬ್ರಹ್ನಣ್ಯ ಭಟ್  ವಾಸ: ಚಾಕೋಟೆ ಮನೆ, ಕೋಡಿಂಬಾಳ ಗ್ರಾಮ ಕಡಬ ತಾಲೂಕು ಎಂಬವರು ದಿನಾಂಕ:28.12.2021 ರಂದು  ಕಡಬ ಪೇಟೆಯಲ್ಲಿರುವ ಸಮಯ ಪಿರ್ಯಾದುದಾರರ ಸ್ನೇಹಿತ ಕೃಷ್ಣರಾಜ್‌ ಎಂಬವರು ಪಿರ್ಯಾದುದಾರರಿಗೆ ಮೊಬೈಲ್‌ ಕರೆ ಮಾಡಿ ನಿಮ್ಮ ಅಣ್ಣ ಶಿವರಂಜನ್‌ ಎಂಬಾತನಿಗೆ ಆಲಂಕಾರು ಬಳಿ ಅಪಘಾತವಾಗಿರುವುದಾಗಿ ತಿಳಿಸಿದಂತೆ ಪಿರ್ಯಾದುದಾರರು ತಕ್ಷಣ ಅಪಘಾತವಾದ ಸ್ಥಳವಾದ ಕಡಬ ತಾಲೂಕು ಪೆರಾಬೆ ಗ್ರಾಮದ ಮಾಯಿಲಗ ಎಂಬಲ್ಲಿಗೆ ತಲುಪಿದಾಗ ಅಪಘಾತದಲ್ಲಿ ಗಾಯಗೊಂಡ ಪಿರ್ಯಾದಿಯ ಅಣ್ಣನಾದ ಶಿವರಂಜನ್‌ ಎಂಬಾತನು ಅಪಘಾತಗೊಂಡು ರಸ್ತೆಯಲ್ಲಿ ಬಿದ್ದುಕೊಂಡಿದ್ದು ನಂತರ ಅಲ್ಲಿರುವ ಸಾರ್ವಜನಿಕರು ಉಪಚರಿಸುತ್ತಿರುತ್ತಾರೆ ನಂತರ ಪಿರ್ಯಾದುದಾರರು ತನ್ನ ಅಣ್ಣನನ್ನು ವಿಚಾರಿಸಿದಾಗ ಮದ್ಯಾಹ್ನ 03.30 ಗಂಟೆಗೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಕಡೆಯಿಂದ ಕಡಬ ಕಡೆಗೆ KA-21EA-4926 ನೇ ಮೊಟಾರ್‌ ಸೈಕಲ್‌ನಲ್ಲಿ ಬರುತ್ತಿದ್ದಾಗ ಎದುರುಗಡೆಯಿಂದ ಅಂದರೆ ಕಡಬ ಕಡೆಯಿಂದ ಬರುತ್ತಿದ್ದ KA-03 NC 3636 ನೇ ಇನ್ನೋವಾ ಕಾರು ವಾಹನದ ಚಾಲಕನಾದ ಆರೋಪಿ ಶೇಖರ್‌ ಎಂಬಾತನು ರಸ್ತೆಯಲ್ಲಿ ತೀರ ಬಲಬದಿಗೆ ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅಪಘಾತವನ್ನುಂಟು ಮಾಡಿರುವುದಾಗಿ ತಿಳಿಸಿರುತ್ತಾರೆ. ಅಪಘಾತದಲ್ಲಿ ಮೋಟಾರ್‌ ಸೈಕಲ್‌ ಸವಾರನಾದ ಪಿರ್ಯಾದುದಾರರ ಅಣ್ಣ ಶಿವರಂಜನ್‌ ಎಂಬಾತನಿಗೆ ಮೊಣಕಾಲಿನ ರಕ್ತಗಾಯ ,ಬಲ ಕೈಗೆ ಉಂಗುರ ಬೆರಳು, ಕಿರುಬೆರಳಿಗೆ ಹಾಗೂ ಇತರ ದೇಹದ ಬಾಗಗಳಿಗೆ ತರಚಿದ ಗಾಯವಾಗಿರುತ್ತದೆ. ನಂತರ ಗಾಯಾಳುವನ್ನು 108 ಅಂಬ್ಯುಲೆನ್ಸ್ ವಾಹನದಲ್ಲಿ  ಪುತ್ತೂರು ದನ್ವಂತರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಓಳರೋಗಿಯಾಗಿ ದಾಖಲು ಮಾಡಿರುವುದಾಗಿರುತ್ತದೆ ಈ ಬಗ್ಗೆ ಕಡಬ ಠಾಣಾ ಅ.ಕ್ರ 110/2021 ಕಲಂ: 279,337 ಐ ಫಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಉತ್ತಮನ್ .ಇ ಎಮ್ . ಪ್ರಾಯ: 51 ವರ್ಷ ತಂದೆ: ಮಾಧವ ವಾಸ: ಎಲ್ಕಜೆ ಮನೆ, ಪಡಂಗಡಿ ಗ್ರಾಮ, ಮತ್ತು ಅಂಚೆ ಬೆಳ್ತಂಗಡಿ ತಾಲೂಕು ರವರು ದಿನಾಂಕ: 28-12-2021 ರಂದು ತನ್ನ ಬಾಬ್ತು ಕೆಎ 21W 6907   ನೇ ಮೋಟಾರ್ ಸೈಕಲ್ ನಲ್ಲಿ ಗುರುವಾಯನ ಕೆರೆ ವೇಣೂರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ  ಸುಮಾರು ಸಂಜೆ 06.45 ಗಂಟೆಗೆ ಬೆಳ್ತಂಗಡಿ ತಾಲೂಕು ಕುವೆಟ್ಟು  ಗ್ರಾಮದ ಗುರುವಾಯನ ಕೆರೆ ಬಳಿ ಇರುವ   ಶೆಣೈ ಹೋಟೇಲ್ ಬಳಿ ತಲುಪುತ್ತಿದಂತೆ ಪಿರ್ಯಾದಿದಾರರ ಮುಂದೆ ರಸ್ತೆಯ ಎಡ ಬದಿಯ ಮಣ್ಣು ರಸ್ತೆಯಲ್ಲಿ ನಿಲ್ಲಿಸಿದ್ದ ನೋಂದಣಿಯಾಗದ ಒಂದು ಹೋಂಡಾ ಅ್ಯಕ್ಟಿವಾ ವಾಹನವನ್ನು   ಅದರ ಸವಾರನು ಯಾವೂದೇ ಸೂಚನೆ ನೀಡದೇ ಒಮ್ಮಲೇ ದುಡುಕುತನದಿಂದ ಬಲ  ಬದಿಗೆ ತಿರುಗಿಸಿ  ಪಿರ್ಯಾದಿದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ’, ಬಲ ಕೈಯ ಕೋಲು ಕೈಗೆ ರಕ್ತ ಗಾಯ ಹಾಗೂ ಬಲ ಕೈಯ ಮಂಗೈ ಗೆ ತ್ರಚಿದ ಗಾಯ , ಎಡ  ಕೈಯ ಮಂಗೈಗೆ ತರಚಿದ ಗಾಯ , ಹಾಗೂ ಬಲ ಕಾಲಿನ ಮಂಡಿಗೆ ರಕ್ತ ಗಾಯ ಹಾಗೂ ಸೊಂಟಕ್ಕಿ ಗುದ್ದಿದ ರೀತಿಯ ಗಾಯಗಳಾಗಿರುತ್ತದೆ.ಹಾಗೂ ಅಪಘಾತ ನಡೆಸಿದ ದ್ವಿಚಕ್ರ ವಾಹನ ಸವಾರನಿಗೂ ಗಾಯಗಳಗಿದ್ದು ,ಗಾಯಾಳುಗಳು ಚಿಕಿತ್ಸೆ ಬಗ್ಗೆ ಗುರುವಾಯನಕೆರೆ ಅಭಯ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 101/2021, ಕಲಂ; 279,337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 2

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನಾರಾಯಣ.ಬಿ, ಪ್ರಾಯ 54 ವರ್ಷ, ತಂದೆ: ದಿ|| ನೀಲಪ್ಪ ಗೌಡ, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಸವಣೂರು ಗ್ರಾಮ ಪಂಚಾಯತು, ಕಡಬ ತಾಲೂಕು ರವರು ನೀಡಿದ ದೂರಿನಂತೆ ಸವಣೂರು ಗ್ರಾಮ ಪಂಚಾಯತು ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಸಾರಡ್ಕ, ಅಸಂತಡ್ಕ, ಉಪ್ಪೊಳಿಗೆ, ಪಾದೆಮೇಲು ಎಂಬ ಸ್ಥಳಗಳಲ್ಲಿ ರಸ್ತೆ ಬದಿ 15ನೇ ಹಣಕಾಸು ಅನುದಾನದಲ್ಲಿ ಸೋಲಾರ್ ದೀಪವನ್ನು 2021-22 ನೇ ಸಾಲಿನಲ್ಲಿ ಅಳವಡಿಸಲಾಗಿದ್ದು ದಿನಾಂಕ 27-12-2021 ರಂದು ರಾತ್ರಿ ಯಿಂದ ದಿನಾಂಕ 28-12-2021 ರಂದು ಬೆಳಗ್ಗಿನ ಮಧ್ಯೆ ಮೇಲ್ಕಂಡ ಸ್ಥಳಗಳಲ್ಲಿ ಅಳವಡಿಸಲಾದ ಸೋಲಾರ್ ದೀಪದ ಕಂಬಗಳಿಗೆ ಹಾನಿ ಮಾಡಿ ಪ್ಯಾನಲ್ ಗಳು ಹಾಗೂ ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ. ಕಳವಾದ ನಾಲ್ಕು ಸೋಲಾರ್ ದೀಪದ ಪ್ಯಾನಲ್ ಗಳು ಹಾಗೂ ಬ್ಯಾಟರಿಗಳ ಮೌಲ್ಯ ರೂ 1,00,000 ಆಗಬಹುದು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 69/2021 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಕೆ ಎನ್‌ ಸದಾನಂದ ಪ್ರಾಯ 46 ವರ್ಷ ತಂದೆ ನಾರಾಯಣ ಸುವರ್ಣ ವಾಸ: ಶ್ರೀ ಹರಿ ನಿಲಯ ಮನೆ 34ನೇ ನೆಕ್ಕಿಲಾಡಿ ಗ್ರಾಮ  ಪುತ್ತೂರು ತಾಲೂಕು ರವರು ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದಲ್ಲಿ  ಕಾರ್‌ ಕ್ಲಬ್‌ ಎಂಬ ಗ್ಯಾರೇಜನ್ನು ನಡೆಸುತ್ತಿದ್ದು  ದಿನಾಂಕ:29-12-2021 ರಂದು ಅಪರಾತ್ರಿ 02.00 ಗಂಟೆಯಿಂದ  ಬೆಳಿಗ್ಗೆ  05-45 ಗಂಟೆಯ ಮದ್ಯದ ಅವಧಿಯಲ್ಲಿ  ಪಿರ್ಯಾದಿದಾರರ ಬಾಬ್ತು ಗ್ಯಾರೇಜ್‌ನ  ಹೊರಗಡೆ ಶೆಡ್‌ನಲ್ಲಿ ನಿಲ್ಲಿಸಿದ್ದ KA03-MV1873 TOYOTA CAR  HEAD LIGHT RELAY  VALUE 1000/- 2)  KA03MB 9614(Wagonr Car)ರ ಪೆಟ್ರೋಲ್ ಪೈಪ್ ಮತ್ತು ಬ್ರೇಜೇಲ್ ಪೇಪು ಬೆಲೆ ರೂ 1,200/-, 3)KA19P5495(Alto Car) ರ ಟೈರ್ ಮತ್ತು ಸ್ಟೇಫಿನ್ ಬೆಲೆ ರೂ 1,500/-, 4) KA05MA600 (Hundai Accent Car) ರ Amron ಬ್ಯಾಟರಿ ಬೆಲೆ ರೂ 7,939/-5)KA03MH9608(Swift Car) ರ ಪ್ರಂಟ್ ಶೋಕ್ ಅಬ್ ಸರ್ ಮತ್ತು ರಿಯಾರ್ ಶೋಕ್ ಅಬ್ ಸರ್ ಒಟ್ಟು ಬೆಲೆ ರೂ 3,800/- 6)KA05MN9108(Alto Car) ರ ಪ್ರಂಟ್ ಶೋಕ್ ಅಬ್ ಸರ್ ಬೆಲೆ ರೂ 3,800/- 7)ಬೆಂಟ್ ತೆಗೆಯುವ ಕಬ್ಬಿಣದ ಉಪಕರಣ(ಬಾಡಿ ಜಾಕ್) ಬೆಲೆ ರೂ 5000/- 8) len key set ಬೆಲೆ ರೂ 1000/- 9) ರೀಪೇರಿಗೆ ಬಂದ ವಾಹನಗಳ ಬಿಡಿಭಾಗಗಳು ಬೆಲೆ ರೂ 25,000/- 10)ವಾಹನಗಳನ್ನು ಎಳೆಯುವ ಚೈನ್ ಬೆಲೆ ರೂ 3500/- 11)  Spener set ಬೆಲೆ ರೂ 3000/- 12) Tools Box ಬೆಲೆ ರೂ 2500 13) Ring Spener ಬೆಲೆ ರೂ 1200/- ಮುಂತಾದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತುಗಳ  ಒಟ್ಟು ಮೌಲ್ಯ ರೂ 60,349/-ಆಗಿರುತ್ತದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ170 /2021 ಕಲಂ:379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜಾನಕಿ, 48 ವರ್ಷ, ಕೋಂ: ಉಕ್ರ, ವಾಸ: ಅಂಕಜಾಲು ಮನೆ, ಕಾಯಿಮಣ ಗ್ರಾಮ, ಕಡಬ ತಾಲೂಕು ರವರ ಗಂಡ ಉಕ್ರ, 64 ವರ್ಷ ರವರು ಸುಮಾರು 2 ವರ್ಷಗಳಿಂದ ಪಾರ್ಶ್ವವಾಯು ಹಾಗೂ ಅಧಿಕ ರಕ್ತದೊತ್ತಡ ಖಾಯಿಲೆಗೆ ಒಳಗಾಗಿ ಮನೆಯಲ್ಲಿಯೇ ವಿಶ್ರಾಂತಿಯಲ್ಲಿದ್ದು, ದಿನಾಂಕ 28-12-2021 ರಂದು ಪಿರ್ಯಾದಿದಾರರು ಪಡಿತರ ಅಕ್ಕಿ ತರಲು ಬೆಳಂದೂರು ಸೊಸೈಟಿಗೆ ಹೋದವರು 12-30 ಗಂಟೆಗೆ ಮರಳಿ ಮನೆಗೆ ಬಂದಾಗ ಉಕ್ರರವರು ತೀವ್ರ ಅಸ್ವಸ್ಥಗೊಂಡಿರುವುದನ್ನು ನೋಡಿ ಅವರಿಗೆ ಗಂಜಿ ನೀರು ಕುಡಿಸಿದ ವೇಳೆ ಉಕ್ರರವರು ವಾಂತಿ ಮಾಡಿದ್ದು, ಆ ವೇಳೆ ಯಾವುದೋ ವಿಷ ಪದಾರ್ಥವನ್ನು ಸೇವಿಸಿದಂತೆ ಘಾಟು ವಾಸನೆ ಬಂದಿದ್ದು, ಸಂಶಯಗೊಂಡ ಪಿರ್ಯಾದುದಾರರು ಕೂಲಿ ಕೆಲಸಕ್ಕೆ ಹೋಗಿದ್ದ ಮಕ್ಕಳಿಗೆ ವಿಚಾರ ತಿಳಿಸಿ, ಮಕ್ಕಳಾದ ಸತೀಶ ಹಾಗೂ ಗಿರೀಶ ರವರು ಅಳಿಯ ರಮೇಶನ ಜೊತೆ ಮನೆಗೆ ಬಂದು ಉಕ್ರರವರನ್ನು ಚಿಕಿತ್ಸೆಯ ಬಗ್ಗೆ ಅಟೋ ರಿಕ್ಷಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಸಂಜೆಯ ವೇಳೆಗೆ ಉಕ್ರರವರು ಚೇತರಿಸಿಕೊಳ್ಳದೇ ಇದ್ದುದರಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ರಾತ್ರಿ 11-38 ಗಂಟೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಉಕ್ರರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ 37/2021   ಕಲಂ 174 ಸಿಆರ್ ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಜಯಪ್ರಸಾದ್ ಪ್ರಾಯ: 35ವರ್ಷ, ತಂದೆ: ಹೊನ್ನಪ್ಪ ನಾಯ್ಕ್ ವಾಸ: ಪುಡಿಕೆ ಮಜಲು ಮನೆ,  ನಿಡ್ಪಳ್ಳಿ ಗ್ರಾಮ, ಪುತ್ತೂರು   ತಾಲೂಕು ರವರ ತಂದೆಯವರಾದ ಹೊನ್ನಪ್ಪ ನಾಯ್ಕರವರು ದಿನನಿತ್ಯ ವಿಪರೀತ ಅಮಲು ಪದಾರ್ಥ ಸೇವನೆ ಮಾಡುತ್ತಿದ್ದು ದಿನಾಂಕ 28.12.2021ರಂದು ಸಾಯಂಕಾಲ ರೆಂಜಕ್ಕೆ ಅಮಲು ಪದಾರ್ಥ ಸೇವನೆಗೆ ಹೋಗಿದ್ದು ಅಮಲು ಪದಾರ್ಥ ಸೇವನೆ  ಮಾಡಿಕೊಂಡು ರೆಂಜ ದಿಂದ ರಸ್ತೆಬದಿಯಲ್ಲಿ ಮನೆಗೆ ಬರುವವರೇ ಸಮಯ ಸುಮಾರು 17:30 ಗಂಟೆಗೆ ನಿಡ್ಪಳ್ಳಿ ಗ್ರಾಮದ ಕುಕ್ಕು ಪುಣಿ  ಎಂಬಲ್ಲಿಗೆ ತಲುಪಿದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದು ಅವರನ್ನು ಸಾರ್ವಜನಿಕರು ಎಬ್ಬಿಸಿ ಉಪಚರಿಸಿ ಶರಿಪ್ ಎಂಬುವರು ಫೋನ್ ಮಾಡಿ ನಿಮ್ಮ ತಂದೆಯವರು ಆಕಸ್ಮಿಕವಾಗಿ ಕಾಲುಜಾರಿ ರಸ್ತೆಗೆ ಬಿದ್ದಿರುವುದಾಗಿ ತಿಳಿಸಿದ ಕೂಡಲೇ ಮನೆಯಿಂದ ಕುಕ್ಕು ಪುಣಿ ಬಂದು ನೋಡಿದಾಗ ತಂದೆಯವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ತಂದೆಯವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆತಂದು ಇಲ್ಲಿನ ವೈದ್ಯಾಧಿಕಾರಿಗಳು ಅವರನ್ನು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ  ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಇಲ್ಲಿನ ವೈದ್ಯಾಧಿಕಾರಿ ಯವರು ಪರೀಕ್ಷಿಸಿ ಒಳ ರೋಗಿ ಆಗಿ ದಾಖಲು ಮಾಡಿಕೊಂಡರು ದಿನಾಂಕ 29.11.2021 ರಂದು ಸಮಯ 16:15 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ 43/21  ಕಲಂ 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 30-12-2021 12:08 PM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080