ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮೊನಪ್ಪ ಪ್ರಾಯ:51 ವರ್ಷ ತಂದೆ:ಬಾಬು ಸಪಲ್ಯ  ವಾಸ:ತಾಳಿ ತನುಜಿ ಕೊಳ್ನಾಡು ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 29.12.2022 ರಂದು ಕೆಲಸದ ನಿಮಿತ್ತ ಅಳಿಯ ಜಯಶಂಕರವರೊಂದಿಗೆ ತಾಲೂಕು ಕಛೇರಿಗೆ ಹೋಗುವರೆ ಅಳಿಯನ ದ್ವಿಚಕ್ರ ವಾಹನ KA-19-HA-3977 ರಲ್ಲಿ  ಪಿರ್ಯಾದಿ ಸಹ ಸವಾರನಾಗಿ ಅಳಿಯ ಜಯಶಂಕರ ರವರು ಸವಾರನಾಗಿ  ದ್ವಿಚಕ್ರ ವಾಹನ ಸವಾರಿ ಮಾಡಿಕೊಂಡು ಕಲ್ಲಡ್ಕ-ಬಿ ಸಿ ರೋಡ್ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ 75 ರಲ್ಲಿ ಹೋಗುತ್ತಿರುವ ಸಮಯ ಸುಮಾರು ಬೆ. 10:45 ಗಂಟೆಗೆ ಪಾಣೆಮಂಗಳೂರು ಗ್ರಾಮದ ನೇತ್ರಾವತಿ ಬ್ರಿಡ್ಜ್ ಬಳಿ ತಲುಪಿದಾಗ ಹಿಂದಿನಿಂದ  KA-19-MK-6676 ನೇ ಕಾರು ನ್ನು  ಚಾಲಕ ಶಂಕರ ಶೆಟ್ಟಿ ಯವರು ನಿರ್ಲಕ್ಷತನ ಹಾಗೂ ಅಜಾರೂಗರುಕತೆಯಿಂದ ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನ KA-19-HA-3977 ನೇದಕ್ಕೆ  ಹಿಂದಿನಿಂದ  ಡಿಕ್ಕಿಯಾಗಿ  ಪಿರ್ಯಾದಿ ಹಾಗೂ ಜಯಶಂಕರ ರವರಿಗೆ ಸಾದ ಸ್ವರೂಪದ ಗಾಯವಾಗಿ ಚಿಕಿತ್ಸೆ ಬಗ್ಗೆ ಬಂಟ್ವಾಳ ಸೋಮಯಾಜಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 160/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀಮತಿ ವಿದ್ಯಾ ಪ್ರಾಯ 46 ವರ್ಷ  ಗಂಡ: ದಿ|| ಅರುಣ್ ಕುಮಾರ್ ವಾಸ:ದೇವಿ ನಗರ ಮನೆ, ನೇರಳ ಕಟ್ಟೆ ಅಂಚೆ, ನೆಟ್ಲ ಮುಡ್ನೂರು ಗ್ರಾಮ ಬಂಟ್ವಾಳ ತಾಲೂಕು ರವರು ತಂಗಿ ಪವಿತ್ರಳೊಂದಿಗೆ ದಿನಾಂಕ: 28-12-2022 ರಂದು ಮಂಗಳೂರಿಗೆ ಹೋದವರು  ವಾಪಾಸ್ಸು  ಮಾಣಿ ಜಂಕ್ಷನ್ ನಿಂದ ಪರಿಚಯದ ಕೂಸಪ್ಪ ಪೂಜಾರಿ ರವರ KA-70-3121ನೇ ನಂಬ್ರದ ಆಟೋರೀಕ್ಷಾವನ್ನು ಬಾಡಿಗೆ ಮಾಡಿಕೊಂಡು ಮನೆಗೆ ಬರುತ್ತಿರುವ  ಸಮಯ  ಸಂಜೆ 4.15 ಗಂಟೆಗೆ ಬಂಟ್ವಾಳ ತಾಲೂಕು  ಮಾಣಿ ಗ್ರಾಮದ ಕೊಡಾಜೆ ಮಸೀದಿ ಬಳಿ ತಲುಪಿದಾಗ ಮಾಣಿ ಕಡೆಯಿಂದ KA-20-MC-8000 ನೇ ನಂಬ್ರ   ಕಾರನ್ನು ಅದರ ಚಾಲಕ  ಅಬ್ದುಲ್ ರಾಝೀ ಎಂಬವರು  ಅಜಾಗರೂಕತೆ ದುಡುಕುತನದಿಂದ ಚಲಾಯಿಸಿಕೊಂಡು ರಿಕ್ಷಾದ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಪರಿಣಾಮ ರಿಕ್ಷಾ ಮಗುಚಿ ಬಿದ್ದಿದ್ದು ಅಲ್ಲಿ ಸೇರಿದ ಸಾರ್ವಜನಿಕರು ಗಾಯಾಳುಗಳನ್ನು ಉಪಚರಿಸಿದ್ದು  ಪಿರ್ಯಾದಿದಾರರಿಗೆ ಎಡ ಕೈಗೆ ರಕ್ತಗಾಯ ಹಾಗೂ ಸೊಂಟ, ಬೆನ್ನು, ಮೈಕೈಗೆ ಗುದ್ದಿದ ನೋವು ಗಾಯವಾಗಿರುತ್ತದೆ. ಪಿರ್ಯಾದಿದಾರರ ತಂಗಿ ಪವಿತ್ರರವರಿಗೆ ತಲೆ ಮೈಕೈಗೆ ಗುದ್ದಿದ ನೋವುಂಟಾಗಿರುತ್ತದೆ. ರಿಕ್ಷಾ ಚಾಲಕ ಕೂಸಪ್ಪ ಪೂಜಾರಿಯವರಿಗೆ ತಲೆಗೆ, ಮುಖಕ್ಕೆ, ಎಡಕೈಗೆ, ಕಾಲಿಗೆ ರಕ್ತಗಾಯ ಹಾಗೂ ಮೈ ಕೈಗೆ ಗುದ್ದಿದ ನೋವುಂಟಾಗಿರುತ್ತದೆ.  ಈ ಬಗ್ಗೆ ವಿಟ್ಲ ಠಾಣಾ ಅಕ್ರ  ನಂಬ್ರ 206/2022  ಕಲಂ 279,337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಗಂಡಸು ಕಾಣೆ ಪ್ರಕರಣ: 1

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಾಜೇಶ್ ಭೈರ ಪ್ರಾಯ: 33 ವರ್ಷ ರಂದೆ: ನಾರಾಯಣ ಭೈರ ವಾಸ: ಪಚ್ಚಿನಡ್ಕ ತೊಡಂಬಿಲ ಮನೆ ಕಳ್ಳಿಗೆ ಗ್ರಾಮ ಬಂಟ್ವಾಳ ತಾಲೂಕು ರವರ ತಂದೆ ನಾರಾಯಣ ಭೈರ ಪ್ರಾಯ ಪ್ರಸ್ತುತ ಕೃಷಿ ಕೆಲಸ ಮಾಡುತ್ತಿದ್ದು ದಿನಾಂಕ; 28.12.2022 ರಂದು 14.30 ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದು ತನ್ನ ಮೊಬೈಲ್ ಪೋನನನ್ನು ಬಿಟ್ಟು ಹೋಗಿರುತ್ತಾರೆ. ರಾತ್ರಿಯಾದರೂ ಮನೆಗೆ ಬಾರದೇ ಇದ್ದು, ಸಂಬಂಧಿಕರಲ್ಲಿ ಹಾಗೂ ಎಲ್ಲಾ   ಕಡೆ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಕಾಣೆಯಾದ ಪಿರ್ಯಾದಿದಾರರ ತಂದೆ ನಾರಾಯಣ ಬೈರ ಪ್ರಾಯ 62, ಎತ್ತರ: 5 ಅಡಿ, ಬಣ್ಣ: ಕಪ್ಪು ಮೈಬಣ್ಣ ಎರಡು ಕೈಕಾಲುಗಳು ಚರ್ಮ ರೋಗವಾಗಿರುತ್ತದೆ. ಬಟ್ಟೆ: ಅರ್ಧ ತೋಳಿನ ಶರ್ಟು, ಕಾಫಿ ಬಣ್ಣದ ಗೆರೆಗಳಿದ್ದು ನೀಲಿ ಬಣ್ಣದ ಲುಂಗಿ ಧರಿಸಿರುತ್ತಾರೆ. ಭಾಷೆ: ಕನ್ನಡ, ತುಳು, ಹಿಂದಿ ತಿಳಿದಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ: 123/2022 ಕಲಂ: ಗಂಡಸು ಕಾಣೆ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಪ್ರಾಯ: 50 ವರ್ಷ,ಗಂಡ: ಚಂದ್ರಶೇಖರ ಗೌಡ ವಾಸ: ಕೊರಂಬಡ್ಕ ದೊಡ್ಡ ಮನೆ, ಕೊಳ್ತಿಗೆ  ಗ್ರಾಮ, ಪುತ್ತೂರು  ತಾಲೂಕು ರವರ ಗಂಡ ಚಂದ್ರಶೇಖರವರು ಕೃಷಿ ಮತ್ತು ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 29.12.2022 ರಂದು  ಪಿರ್ಯಾದಿದಾರರು ಹಾಗೂ ಗಂಡ ತಮ್ಮ ಬಾಬ್ತು  ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಕೊರಂಬಡ್ಕ ದೊಡ್ಡಮನೆ ತೋಟದಲ್ಲಿ ಅಡಿಕೆ ಮರದಿಂದ ಅಡಿಕೆ ತೆಗೆಯಲು ಬೆಳಿಗ್ಗೆ 10:00  ಹೋಗಿದ್ದು, ಗಂಡ ಚಂದ್ರಶೇಖರವರು ಅಡಿಕೆ ಮರಕ್ಕೆ ಹತ್ತಿ ಅಡಿಕೆ ತೆಗೆಯುತ್ತಿದ್ದು, ಅಡಿಕೆ ಮರಕ್ಕೆ ಅಲ್ಯೂಮಿನಿಯಂ  ಏಣಿಯಲ್ಲಿ ಹತ್ತಿ  ಅಡಿಕೆ ಮರದಿಂದ ದೋಂಟಿ  ಬಳಸಿ ಅಡಿಕೆ ಗೊನೆ ಕೊಯ್ಯುತ್ತಿರುವ ವೇಳೆ ಸುಮಾರು 30 ಅಡಿ ಮೇಲಿನಿಂದ ಆಕಸ್ಮಿಕವಾಗಿ ಅಡಿಕೆ ಮರ ಮುರಿದು ಪಿರ್ಯಾದಿದಾರರ ಗಂಡ ಕೆಳಗೆ ಬಿದ್ದು ಗಂಭೀರಗಾಯಗೊಂಡು ಸ್ಥಳದಲ್ಲಿ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್  33/2022  ಕಲಂ 174  ಸಿಆರ್ ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರಮೀಳಾ ಕೆ, ಪ್ರಾಯ 28 ವರ್ಷ ಗಂಡ: ರಮೇಶ್‌ ಕುಂಬಾರ ಪಾರಡ್ಕ ಮನೆ ಇಳಂತಿಲ ಗ್ರಾಮ ಬೆಳ್ತಂಗಡಿ ತಾಲೂಕ ರವರು ನೀಡಿದ ದೂರಿನಂತೆ ದಿನಾಂಕ: 27.12.2022 ರಂದು ಪಿರ್ಯಾದುದಾರರ ತಂದೆ ಜಿನ್ನಪ್ಪ ಕುಂಬಾರ  ಕೆಲಸಕ್ಕೆ ಹೋದವರು ಮರಳಿ ಸಂಜೆ 5.00 ಗಂಟೆಗೆ ಬಂದಿದ್ದು, ಪಿರ್ಯಾದುದಾರರ ಅಣ್ಣ ಸಹ ಕೆಲಸಕ್ಕೆ ಹೋದವರು ಮರಳಿ ಸಂಜೆ ಮನೆಗೆ ಬಂದು ನೋಡುವಾಗ ಪಿರ್ಯಾಧಿದಾರರ ತಂದೆ ಕೋಣೆಯಯಲ್ಲಿ ಮಲಗಿಕೊಂಡೇ ಇದ್ದು ಅವರ ಪಕ್ಕದಲ್ಲಿ ವಿಷದ ಬಾಟಲಿ ಇರುವುದಲ್ಲದೇ ವಿಷದ ವಾಸನೆ ಬರುತ್ತಿರುವುದರಿಂದ ಸಂಶಯಗೊಂಡ ಪಿರ್ಯಾದುದಾರರ ಅಣ್ಣ ತಂದೆಯವರಾದ ಜಿನ್ನಪ್ಪ ಕುಂಬಾರ(63) ಎಂಬುವರಲ್ಲಿ ವಿಚಾರಿಸಿದಾಗ ನಾನು ಲೀವರ್‌ ಸಮಸ್ಯೆಯಿಂದ ಬಳಲುತ್ತಿರುವುದರಿಂದ ವಿಷವನ್ನು ಸೇವಿಸಿರುವುದಾಗಿ , ಈಗ ಹೊಟ್ಟೆ ನೋವಾಗಿರುವುದಾಗಿ ತಿಳಿಸಿರುವುದಾಗಿ, ಆಗ ಪಿರ್ಯಾದುದಾರರ ಅಣ್ಣ ಕೂಡಲೇ ಪಿರ್ಯಾದುದಾರರ ತಂದೆಯವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ದಿನಾಂಕ:28.12.2022 ರಂದು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿರುತ್ತಾರೆ ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ 38/2022 ಕಲಂ:174 CRPC. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-12-2022 12:37 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080