ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಹಮ್ಮದ್‌ ಸಫ್ವಾನ್‌ ಪ್ರಾಯ 29 ವರ್ಷ ತಂದೆ:ಅಬೂಬಕ್ಕರ್‌ ವಾಸ:ಮಡಿಯಾಳ ಮನೆ,  ಅಳಿಕೆ ಗ್ರಾಮ ಬಂಟ್ವಾಳ ತಾಲೂಕು ರವರ ಅಕ್ಕನ ಮಗ ಕು||ಮಹಮ್ಮದ್‌ ಅಜ್ಮಲ್‌ ಎಂಬಾತನು ದಿನಾಂಕ:29-01-2022 ರಂದು ಮಂಗಳಪದವು ಎಂಬಲ್ಲಿರುವ ಮದರಸಕ್ಕೆ ವಿದ್ಯಾಬ್ಯಾಸ ಮಾಡುವರೇ ಕೊಡಪದವು-ಮಂಗಳಪದವು ರಸ್ತೆಯಲ್ಲಿ ಎಡ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಬಾಬುಕಟ್ಟೆ ಎಂಬಲ್ಲಿಗೆ ತಲುಪಿದಾಗ ಮಹಮ್ಮದ್‌ ಅಜ್ಮಲ್‌ನ ಹಿಂದುಗಡೆಯಿಂದ ಅಂದರೆ ಕೊಡಪದವು ಕಡೆಯಿಂದ ವಿಟ್ಲ ಕಡೆಗೆ ಕೆಎ-19-ಹೆಚ್‌ಎಫ್‌-2285 ಆಕ್ಟಿವಾ ದ್ವಿಚಕ್ರ ವಾಹನವನ್ನು ಅದರ ಸವಾರ ಜನಾರ್ದನ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಅಜ್ಮಲನಿಗೆ ಹಿಂದಿನಿಂದ ಡಿಕ್ಕಿ ಹೊಡೆದನು ಡಿಕ್ಕಿ ಹೊಡೆದ ಪರಿಣಾಮ ಅಜ್ಮಲನು ಮಣ್ಣು ರಸ್ತೆಗೆ ಬಿದ್ದು ಆತನ ಎಡ ಕಾಲಿನ ಕೋಲು ಕಾಲಿಗೆ ರಕ್ತಗಾಯವಾಗಿರುತ್ತದೆ. ಗಾಯಾಳು ಮಹಮ್ಮದ್‌ ಅಜ್ಮಲ್‌ ಚಿಕಿತ್ಸೆಯ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 19/2022  ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸಂತೋಷ ಕುಮಾರ್ ಬಿ.ಯು ಪ್ರಾಯ 39 ವರ್ಷ, ತಂದೆ: ಉಮೇಶ ವಾಸ: ಬೊಡುಪನ್ನೆ ಮನೆ, ಸುಳ್ಯ ಕಸಬಾ ಗ್ರಾಮ, ಸುಳ್ಯ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 30-01-2022 ರಂದು ಆರೋಪಿ ಕಂಟೈನರ್ ಲಾರಿ ಚಾಲಕ ಹರ್ಷಿತ್ ಎಂಬವರು MH-46-BF-2552ನೇ ನೋಂದಣಿ ನಂಬ್ರದ ಕಂಟೈನರ್ ಲಾರಿಯನ್ನು  ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ , ಪುತ್ತೂರು ತಾಲೂಕು ಕಬಕ ಗ್ರಾಮದ ಪೊಳ್ಯ ಎಂಬಲ್ಲಿ ತಿರುವು ರಸ್ತೆಯಲ್ಲಿ  ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಸಂತೋಷ ಕುಮಾರ್ ಬಿ.ಯು ರವರು ಚಾಲಕರಾಗಿ ಅವರ ತಂದೆ ಉಮೇಶ್ ಮತ್ತು ಅವರ ಪತ್ನಿ ಜ್ಯೋತಿರವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-Z-1757ನೇ ನೋಂದಣಿ ನಂಬ್ರದ ಕಾರಿನ ಬಲಭಾಗಕ್ಕೆ ಅಪಘಾತವಾಗಿ, ಕಂಟೈನರ್ ಲಾರಿ ಮುಗುಚಿ ಬಿದ್ದು ಪಿರ್ಯಾದುದಾರರಿಗೆ ಎದೆಗೆ ಮತ್ತು ಕುತ್ತಿಗೆಗೆ ಗುದ್ದಿದ ನೋವು, ಉಮೇಶ್ ರವರಿಗೆ ಬಲಭುಜಕ್ಕೆ ತರಚಿದ, ಹೊಟ್ಟೆ ಮತ್ತು ಎದೆಗೆ ಗುದ್ದಿದ ನೋವು, ಜ್ಯೋತಿರವರ ಮೇಲ್ ದವಡೆಯ ಎರಡೂ ಹಲ್ಲುಗಳು ಕಿತ್ತು ಹೋಗಿ ರಕ್ತಗಾಯಗಳಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  17/2022 ಕಲಂ: 279,337,338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸುಂದರ ಭಿ  ಪ್ರಾಯ 38ವರ್ಷ, ತಂದೆ: ದಿ|| ಗೋಜಾ ವಾಸ: ಬಡೆಕ್ಕರ  ಮನೆ, ಕೊಕ್ಕಡ  ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ  ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 30-01-2022 ರಂದು ಆರೋಪಿ ಕಾರು ಚಾಲಕ KL-14-M-5164ನೇ ನೋಂದಣಿ ನಂಬ್ರದ ಕಾರನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಉಪ್ಪಿನಂಗಡಿ ಕಡೆಯಿಂದ ನೆಲ್ಯಾಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಕಡಬ ತಾಲೂಕು ಗೋಳಿತೋಟ್ಟು ಗ್ರಾಮದ ಗೋಳಿತೋಟ್ಟು ಸೇತುವೆಯ ಬಳಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಸುಂದರ ಬಿ ರವರು ಗೋಳಿತೊಟ್ಟು ಕಡೆಯಿಂದ ನೆಲ್ಯಾಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-Y-9084ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಹಿಂದಿನಿಂದ ಅಪಘಾವಾಗಿ, ಪಿರ್ಯಾದುದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಎರಡು ಕಾಲಿನ ಮಣಿಗಂಟಿಗೆ, ತಲೆಯ ಮುಂಬಾಗಕ್ಕೆ, ಬಲ ಕೆನ್ನೆಗೆ, ಬಲಕೈಯ ಅಂಗೈಯ ಮೇಲ್ಬಾಗಕ್ಕೆ ತರಚಿದ ಗಾಯ ಹಾಗೂ ಎಡ ಕೈ ಮಣಿಗಂಟಿಗೆ ಗುದ್ದಿದ ನೋವಾದವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  18/2022 ಕಲಂ: 279,337 ಐಪಿಸಿ & 134(A)&(B) IMV ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮನೋಜ್ ಸುಜಿತ್ ಹಿಲಾರಿ ಪಾಯಸ್ ಪ್ರಾಯ 50 ವರ್ಷ ತಂದೆ: ದಿ. ಮೈಕಲ್ ಪಾಯಸ್ ವಾಸ: 101 ರಿಜೆಂಟ್ ಪಾರ್ಕ್ ಅಪಾರ್ಟ್ ಮೆಂಟ್ ವೆಲೆನ್ಸಿಯಾ ರಿಟ್ರೇಟ್ ನ ಹಿಂಬದಿ ಮನೆ  ಮಂಗಳೂರು ರವರು ದಿನಾಂಕ: 29.01.2022 ರಂದು ತಮ್ಮ ಸುಧೀರ್ ಪಾಯಸ್ ನೊಂದಿಗೆ ತನ್ನ ಸ್ನೇಹಿತ ಅಜಿತ್ ಕುವೆಲ್ಲೋರವರ ತಂದೆಯ ಮರಣದ ಕಾರ್ಯಕ್ರಮಕ್ಕೆ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಏಳ್ಮುಡಿಯಲ್ಲಿರುವ ರುದ್ರ ಭೂಮಿಗೆ ಬಂದಿದ್ದು, ನಂತರ ಮರಣದ ಕಾರ್ಯಕ್ರಮದ ವಿಧಿವಿಧಾನಗಳನ್ನು ಮುಗಿಸಿದ ಬಳಿಕ ಸಂಜೆ 5.30 ಗಂಟೆ ಸಮಯಕ್ಕೆ ಫಿರ್ಯಾದಿದಾರರು ತನ್ನ  ತಂದೆ ತಾಯಿಯ ಸಮಾಧಿಯ ಬಳಿ ಬಂದು ಪ್ರಾರ್ಥನೆ ಮಾಡುತ್ತಿರುವಾಗ ಫಿರ್ಯಾದಿದಾರರ ತಮ್ಮಂದಿರಾದ ರಿತೇಶ್ ಪಾಯಸ್ ಮತ್ತು ವಿನೋದ್ ಪಾಯಸ್ ರವರು ಸಮಾಧಿಯ ಬಳಿ ಬಂದು ಏಕಾಏಕಿಯಾಗಿ ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ರಿತೇಶ್ ಪಾಯಸ್ ನು ಒಮ್ಮೆಲೆ ತನ್ನ ಕೈಯನ್ನು  ಫಿರ್ಯಾದಿದಾರರ ಮುಖಕ್ಕೆ ಒತ್ತಿ ಹಿಡಿದು ಕೈಯಿಂದ ಹಲ್ಲೆ ಮಾಡಿದ ಪರಿಣಾಮ ಉರುಡಾಟವಾಗಿ ಫಿರ್ಯಾದಿದಾರರು ನೆಲಕ್ಕೆ ಬಿದ್ದಿದ್ದು, ಆ ಸಮಯ ಜೊತೆಯಲ್ಲಿದ್ದ ತಮ್ಮ ಸುಧೀರ್ ಪಾಯಸ್ ಜಗಳವನ್ನು ಬಿಡಿಸಲು ಬಂದನು. ಬಳಿಕ ವಿನೋದ್ ಪಾಯಸ್ ನು ಫಿರ್ಯಾದಿದಾರರಿಗೆ ಪುತ್ತೂರಿಗೆ ಬಂದರೆ ನಿನ್ನ ಕೈಕಾಲು ಮುರಿಯುತ್ತೇನೆ,  ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಒಡ್ಡಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅಕ್ರ: 05/2022 ಕಲಂ:341,504, 323,506 ಜೊ 34 ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ವಿಟ್ಲ ಪೊಲೀಸ್‌ ಠಾಣೆಯಲ್ಲಿ ಕಲಂ:376 ಐಪಿಸಿ 4 ಫೋಕ್ಸೊ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಎಂ ಚಂದ್ರಕಾಂತ ಭಟ್ ಪ್ರಾಯ 55 ವರ್ಷ ತಂದೆ: ದಿ. ಎಂ ಕೇಶವ ಭಟ್ ವಾಸ: ಸಿಟಿ ಆಸ್ಪತ್ರೆಯ ಹತ್ತಿರ ಕೇಶವ ಕೃಪಾ ಮನೆ ಪುತ್ತೂರು ಕಸಬಾ ಗ್ರಾಮ ಪುತ್ತೂರು ತಾಲೂಕು ರವರು ಹೋಂ ನರ್ಸಿಂಗ್ ಏಜೆನ್ಸಿ ಕೆಲಸವನ್ನು ಮಾಡಿಕೊಂಡಿದ್ದು, ಅವರ ಬಳಿ ವಿಲಿಯಂ ಜಯಕರ ಆನಂದ ಪ್ರಾಯ 70 ವರ್ಷ ಎಂಬವರು ಕಳೆದ 1 ವರ್ಷದಿಂದ ಹೋಂ ನರ್ಸಿಂಗ್ ಕೆಲಸ ಮಾಡಿಕೊಂಡು ಫಿರ್ಯಾದಿದಾರರ ಮನೆಯ ಪಕ್ಕದ ಒಂದು ರೂಂನಲ್ಲಿ ಉಳಿದುಕೊಳ್ಳುತ್ತಿದ್ದರು. ವಿಲಿಯಂ ಜಯಕರ ಆನಂದರವರಿಗೆ ಹಿಂದಿನಿಂದಲೂ ಹಲ್ಲು ಮತ್ತು ಕಾಲುನೋವು ಇದ್ದುದರಿಂದ ಮಂಗಳೂರಿನಿಂದ ಚಿಕಿತ್ಸೆ ಪಡೆಯುತ್ತಿದ್ದು ದಿನಾಂಕ: 29.01.2022 ರಂದು ಮಂಗಳೂರಿಗೆ ಚಿಕಿತ್ಸೆ ಬಗ್ಗೆ ಹೋದವರು ರಾತ್ರಿ 7.00 ಗಂಟೆಗೆ ಮನೆಗೆ ಬಂದಿರುತ್ತಾರೆ. ಫಿರ್ಯಾದಿದಾರರ ಪತ್ನಿ ರಾತ್ರಿ ಸುಮಾರು 8.30 ಗಂಟೆಗೆ ವಿಲಿಯಂ ಜಯಕರ ಆನಂದರವರಿಗೆ ಊಟ ಕೊಡಲು ಅವರ ರೂಮ್ ನ ಬಳಿಗೆ ಹೋಗಿ ಬಾಗಿಲು ಬಡಿದಾಗ ಬಾಗಿಲನ್ನು ತೆಗೆಯದೇ ಇದ್ದುದರಿಂದ ಫಿರ್ಯಾದಿದಾರರು ಬಾಗಿಲನ್ನು ದೂಡಿದಾಗ ಚಿಲಕ ಹಾಕದೇ ಇದ್ದು, ವಿಲಿಯಂ ಜಯಕರ ಆನಂದರವರು ರೂಮಿನಲ್ಲಿರುವ ಮರದ ಪಕ್ಕಾಸಿಗೆ ಅಳವಡಿಸಿರುವ ಸೀಲಿಂಗ್ ಫ್ಯಾನ್ ಗೆ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ವಿಲಿಯಂ ಜಯಕರ ಆನಂದರವರನ್ನು ಮುಟ್ಟಿ ನೋಡಿದಾಗ ಮೃತಪಟ್ಟಿರುವುದಾಗಿದೆ. ವಿಲಿಯಂ ಜಯಕರ ಆನಂದರವರು ಆಗಾಗ ಅಮಲು ಪದಾರ್ಥ ಸೇವಿಸುತ್ತಿದ್ದು, ಹಾಗೂ ಹಲ್ಲು ಮತ್ತು ಕಾಲು ನೋವು ಇರುವ ಬಗ್ಗೆ ಆಗಾಗ ಚಿಕಿತ್ಸೆ ಪಡೆಯುತ್ತಿದ್ದರು. ವಿಲಿಯಂ ಜಯಕರ ಆನಂದರವರು ಇದೇ ವಿಚಾರದಲ್ಲಿಯೋ ಅಥವಾ ಬೇರೆ ಯಾವುದೋ ವಿಚಾರದಲ್ಲಿಯೋ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಈ ಬಗ್ಗೆ ಪುತ್ತೂರು ನಗರ  ಪೊಲೀಸ್ ಠಾಣೆ ಯು.ಡಿ.ಆರ್  04/2022 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 31-01-2022 11:00 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080