ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ  ವಸಂತ ಆಚಾರ್ಯ(59), ತಂದೆ: ಸುಬ್ರಾಯ ಅಚಾರ್ಯ, ವಾಸ: ಬೀಟಿಗೆ ಮನೆ, ಚಾರ್ಮಾಡಿ ಗ್ರಾಮ, ಬೆಳ್ತಂಗಡಿ ತಾಲೂಕು ರವರು ದಿನಾಂಕ: 29-03-2021 ರಂದು ಕಲ್ಮಂಜ ಬಸ್‌ನಿಲ್ದಾಣಕ್ಕೆ ಹೋಗಲು ಸೋಮಂತಡ್ಕ - ಉಜಿರೆ ಡಾಮರು ರಸ್ತೆಯ ಬದಿಯ ಮಣ್ಣು ರಸ್ತೆಯಲ್ಲಿ  ನಡೆದುಕೊಂಡು ಬರುತ್ತಿರುವಾಗ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ನಿಡಿಗಲ್‌ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಸೋಮಂತಡ್ಕ ಕಡೆಯಿಂದ ಉಜಿರೆ ಕಡೆಗೆ ಕೆಎ 70 ಇ 6288 ನೇ ಮೋಟಾರು ಸೈಕಲ್‌ನಲ್ಲಿ ಅದರ ಸವಾರ ಸಹಸವಾರನನ್ನು ಕುಳ್ಳಿರಿಸಿಕೊಂಡು ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಮೋಟಾರು ಸೈಕಲ್‌ ಸವಾರ ಮತ್ತು ಸಹಸವಾರ ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಬೆನ್ನಿಗೆ, ಸೊಂಟಕ್ಕೆ, ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯಗಳಾಗಿದ್ದು ಸವಾರ ಕಾರ್ತೀಕ್‌ ಗೆ  ತುಟಿಗೆ, ಎಡಕೈಯ ಮೊಣಗಂಟಿಗೆ ಗುದ್ದಿದ ಗಾಯವಾಗಿರುತ್ತದೆ, ಸಹಸವಾರ ರಘು ಪೂಜಾರಿರವರಿಗೆ  ಎಡಕೈ ಮೊಣಗಂಟಿಗೆ ಗುದ್ದಿದ ಗಾಯವಾಗಿದ್ದು, ಗಾಯಳುಗಳು ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 29/2021, ಕಲಂ; 279,337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪ್ರತಾಪ್‌ ಎನ್‌, ಪ್ರಾಯ 29 ವರ್ಷ, ತಂದೆ:  ನಾರಾಯಣ ರೆಡ್ಡಿ  ವಾಸ:  ಸಿಪಿಸಿ 2400, ಉಪ್ಪಿನಂಗಡಿ ಠಾಣೆ, ಉಪ್ಪಿನಂಗಡಿ ರವರು ನೀಡಿದ ದೂರಿನಂತೆ ದಿನಾಂಕ 30-03-2021 ರಂದು ಆರೋಪಿ  ಓಮ್ನಿ ಕಾರು ಚಾಲಕ ರಮೇಶ ಎಂಬವರು KA-21-N-2576 ನೇ ನೋಂದಣಿ ನಂಬ್ರದ ಕಾರನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕಿನ 34 ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ಅಪಘಾತವಾಗಿ, ಸದ್ರಿ ಪಾದಾಚಾರಿಯ ತಲೆಗೆ ಹಾಗೂ ದೇಹದ ಇತರ ಭಾಗಗಳಿಗೆ ಗಾಯವಾಗಿ ರಕ್ತಸ್ರಾವವಾಗಿದ್ದು, ಚಿಕಿತ್ಸೆ ಬಗ್ಗೆ 108 ಅಂಬ್ಯುಲೆನ್ಸ್ ನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  58/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಯಕ್ಷಿತ್ ಪಿ ಬಿ ಪ್ರಾಯ: 20 ವರ್ಷ , ತಂದೆ: ಪೂವಣಿ ಗೌಡ , ವಾಸ; ಬೊನ್ಯ ಸಾಗು  ಬರೆಮೇಲು ಮನೆ ನೆಲ್ಯಾಡಿ ಗ್ರಾಮ ಮತ್ತು ಅಂಚೆ ಕಡಬ ತಾಲೂಕು ರವರು ದಿನಾಂಕ 29.03.2021 ರಂದು ತನ್ನ ಬಾಬ್ತು ಕೆಎ 21 ಇಎ 3187 ನೇ ಹೋಂಡಾ ಆಕ್ಟೀವಾ ಮೋಟಾರ್ ಸೈಕಲ್ ನಲ್ಲಿ ನೆಲ್ಯಾಡಿ ಪೇಟೆಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದು ಸಾಮಾನು ಖರೀದಿಸಿ ವಾಪಾಸು ಮನೆಗೆ ಹೋಗುತ್ತಾ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ರಾ.ಹೆ 75 ಎಂಬಲ್ಲಿಗೆ ಸಂಜೆ ಸಮಯ 6:30 ಗಂಟೆಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರುಗಡೆ ಒಂದು ಮೋಟಾರ್ ಸೈಕಲ್ ಹೋಗುತ್ತಿದ್ದು , ಸದ್ರಿ ಮೋಟಾರ್ ಸೈಕಲ್ ನ್ನು ಅದರ ಸವಾರನು ಯಾವುದೇ ಮುನ್ಸೂಚನೆ ನೀಡದೇ ಒಮ್ಮೆಲೇ ತಿರುಗಿಸಿ  ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದನು . ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದರು , ಅಪಘಾತದ ಪರಿಣಾಮ ಪಿರ್ಯಾದಿದಾರರಿಗೆ ಹಣೆ ಮತ್ತು ಮೂಗು , ಎಡಕಾಲಿನ ಮೊಣ ಗಂಟಿಗೆ ರಕ್ತ ಗಾಯವಾಗಿದ್ದು, ಅಪಘಾತ ಪಡಿಸಿದ ಮೋಟಾರ್ ಸೈಕಲ್ ನಂಬ್ರ ನೋಡಲಾಗಿ ಕೆಎ 21 ಇ ಬಿ 4105 ನೇ ಆಗಿದ್ದು, ಸದ್ರಿ ಮೋಟಾರ್ ಸೈಕಲ್ ಸವಾರ ಹಾಗೂ ಸಹ ಸವಾರನಿಗೆ ಕೂಡ ಗಾಯವಾಗಿರುತ್ತದೆ, ಗಾಯಗೊಂಡವರನ್ನು ಒಂದು ಅಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಯ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಕೊಂಡು ಹೋಗಿರುತ್ತಾರೆ, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಅ.ಕ್ರ 28/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮುಸ್ತಾಕ್ (38) ತಂದೆ ಅಬ್ದುಲ್ ರಹಿಮಾನ್  ವಾಸ ಹೈಸ್ಕೂಲ್ ರಸ್ತೆ, ಕಿರಿಮಂಜೇಶ್ವರ ನಾವೂಂದ ಗ್ರಾಮ, ಬೈಂದೂರ್ ತಾಲೂಕು, ಉಡುಪಿ ಜಿಲ್ಲೆ ರವರು ಸುಮಾರು 10 ವರ್ಷಗಳಿಂದ ಪರಂಗಿಪೇಟೆಯ ಪುಂಚಮೆ ಬಿರೂರ್  ವಾಲಿ ಡೈನ್ ಸಲಾಫಿ ಮಸೀದಿಯ ಧಾರ್ಮಿಕ  ಶಿಕ್ಷಕನಾಗಿ ಕೆಲಸ ಮಾಡಿಕೊಂಡಿದ್ದು ಮಸೀದಿಯಲ್ಲೇ ಉಳಕೊಂಡಿರುವುದಾಗಿದೆ. ದಿನಾಂಕ 29.03.2021 ರಂದು ರಾತ್ರಿ ಮಲಗಿದ್ದ ಸಮಯ ಮಸೀದಿಯ ಒಳಗೆ ಶಬ್ದ ಕೇಳಿದ್ದು  ಎಚ್ಚರಗೊಂಡು ನೋಡಿದಾಗ ಕರೆಂಟು ಹೋಗಿದ್ದು ಆಗ ಮೂರು ಜನರು ಅವರ ಮೊಬೈಲ್ ಲೈಟ್ ಹಾಕಿಕೊಂಡು ಬರುತ್ತಿದ್ದು ಅವರಲ್ಲಿ ಒಬ್ಬಾತ ಪಿರ್ಯಾದುದಾರರ  ಹತ್ತಿರ ಬಂದು  ಕುತ್ತಿಗೆಯನ್ನು ಹಿಡಿದಿದ್ದು ಆ ಸಮಯ ಪಿರ್ಯಾದುದಾರರು ಹೆದರಿ ಮಂಚದಿಂದ ಇಳಿದು ಹೊರಗಡೆ ಬಂದಾಗ ಮದರಸದಲ್ಲಿದ್ದ ಬೆಂಚು,ಟೈಲ್ಸ್ ತಾಗಿ ಎಡಕಾಲಿನ ಕೋಲು ಕಾಲಿಗೆ ಮತ್ತು ಹೆಬ್ಬೆರಳಿಗೆ ತಾಗಿ ರಕ್ತ ಗಾಯ ಉಂಟಾಗಿರುವುದಾಗಿದೆ, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 38/2021ಕಲಂ: 448, 323,R/w 34     ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 31-03-2021 01:38 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080