ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕಿಶೋರ್ . ಬಿ .ಪ್ರಾಯ:46 ವರ್ಷ ತಂದೆ: ಕುಶಾಲಪ್ಪ ಗೌಡ  ವಾಸ: ಬಾರೆಮೇಲು ಮನೆ , ಕರಿಕಳ ಅಂಚೆ, ಐವತೋಕ್ಲು ಗ್ರಾಮ, ಸುಳ್ಯ ತಾಲೂಕು ರವರು ಸೈಂಟ್ ಜಾರ್ಜ್ ಅನುದಾನಿತ ಪ್ರೌಡಶಾಲೆ ಕುಂತೂರುಪದವುನಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದು, ದಿನಾಂಕ 30-03-2022 ರಂದು ಶ್ರೀ ರಾಮಕುಂಜೇಶ್ವರ ಪ್ರೌಡಶಾಲೆ ರಾಮಕುಂಜದಲ್ಲಿ SSLC ಪರೀಕ್ಷಾ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಿ ತನ್ನ ತಂಗಿಯ ಮನೆಯಾದ ಬಿ ಸಿ ರೋಡು ಕೈಕಂಬಕ್ಕೆ ಕಾರಿನಲ್ಲಿ ಬಂದು ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಮಿತ್ತಬೈಲು ಎಂಬಲ್ಲಿ ಕಾರನ್ನು ನಿಲ್ಲಿಸಿ  ಬೇಕರಿಗೆ ಹೋಗಲು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಕೈಕಂಬ ಕಡೆಯಿಂದ ಒಂದು ಸ್ಕೂಟರನ್ನು ಅದರ ಸವಾರ ಏಕಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಿರ್ಯಾದಿಯು ಎಸೆಯಲ್ಪಟ್ಟು ರಸ್ತೆಗೆ ಬಿದ್ದುದಲ್ಲದೇ ಸ್ಕೂಟರ್ ಸವಾರ ಸ್ಕೂಟರ್ ಸಮೇತಾ ರಸ್ತೆಗೆ ಬಿದ್ದಿದ್ದು, ಅಪಘಾತದಲ್ಲಿ ಪಿರ್ಯಾದಿದಾರರಿಗೆ  ಎಡ ಸೊಂಟಕ್ಕೆ ಗುದ್ದಿದ ಗಾಯ, ಎಡಕಾಲಿನ ಲಿಗಮೆಂಟಲ್ ಜಾಯಿಂಟ್ ಬಿಟ್ಟಿರುವ ಗಾಯವಾಗಿದ್ದು, ಗಾಯಗೊಂಡ ಪಿರ್ಯಾದಿಯು ಬಿ ಸಿ ರೋಡ್ ಸೋಮಯಾಜಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 37/2022 ಕಲಂ 279,337 ಐಪಿಸಿ ಮತ್ತು 134(ಎ&ಬಿ) 187 ಮೋ ವಾ ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಬಾಬು ಮಣಿಯಾಣಿ, ಪ್ರಾಯ: 68 ವರ್ಷ, ತಂದೆ: ದಿ.ಕೃಷ್ಣ ಮಣಿಯಾಣಿ, ವಾಸ: ಸಾಂತ್ಯ ಮನೆ, ನೆಟ್ಟಣಿಗೆ ಮುಡ್ನೂರು ಗ್ರಾಮ, ಪುತ್ತೂರು  ರವರು ದಿನಾಂಕ 30.03.2022 ರಂದು ಸಾಂತ್ಯದ ಮಾಯಿಲನಾಥ ಶೆಟ್ಟಿರವರ ಮನೆಗೆ ಕೂಲಿ ಕೆಲಸಕ್ಕೆ ಹೋಗಲೆಂದು ಸಾಂತ್ಯಕ್ಕೆ ಬಂದು ಬೆಳಿಗ್ಗೆ ಸಮಯ ಸುಮಾರು 07.45 ಗಂಟೆಗೆ ರಸ್ತೆ ದಾಟಲು ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಸಾಂತ್ಯ ಬಸ್ ನಿಲ್ದಾಣದ ಎದುರು ಮಣ್ಣು ರಸ್ತೆಯಲ್ಲಿ ನಿಂತುಕೊಂಡಿದ್ದ ಸಮಯ ಈಶ್ವರಮಂಗಲ ಕಡೆಯಿಂದ ಕಾವು ಕಡೆಗೆ ಕೆಎ-21-ವಿ-6186 ನೇ ಸ್ಕೂಟರನ್ನು ಅದರ ಸವಾರನು ಸಂದೀಪ್ ಅರಿಯಡ್ಕರವರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡ ಬದಿಗೆ ಸವಾರಿ ಮಾಡಿಕೊಂಡು ಬಂದು ಫಿರ್ಯಾಧಿದಾರರಿಗೆ ಢಿಕ್ಕಿ ಹೊಡೆದಾಗ ಫಿರ್ಯಧಿದಾರರು ಮಣ್ಣು ರಸ್ತೆಗೆ ಬಿದ್ದಿದ್ದು ಘಟನೆಯನ್ನು ನೋಡಿ ಅದೇ ರಸ್ತೆಯಲ್ಲಿ ಬರುತ್ತಿದ್ದ ಇತರ ವಾಹನದವರು ಮತ್ತು ಸಾರ್ವಜನಿಕರು ಫಿರ್ಯಾದಿದಾರರನ್ನು ಆರೈಕೆ ಮಾಡಿ ನೋಢಿದಾಗ ಸದ್ರಿಯವರ ಎಡ ಕೋಲು ಕಾಲಿಗೆ ಗುದ್ದಿದ ಗಾಯವಾಗಿದ್ದು, ಬಳಿಕ ಫಿರ್ಯಾದಿದಾರರ ತಮ್ಮನ ಮಗ ಲೋಹಿತಾಶ್ವ ಎಂಬವರು ಬಂದು ಫಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಆಟೋ ರಿಕ್ಷಾವೊಂದರಲ್ಲಿ ಪುತ್ತೂರಿನ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಅ.ಕ್ರ 43/2022  ಕಲಂ 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚಿದಾನಂದ ರೈ ಎನ್ , ಪ್ರಾಯ  50 ವರ್ಷ ಬಿನ್ ಕಿಟ್ಟಣ್ಣ ರೈ  ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಮುರುಳ್ಯ -ಎಣ್ಮೂರು ಕೃಷಿ ಪತ್ತಿನ ಸಹಕಾರಿ ಸಂಘ ಮಿಯಮಿತ ಅಲೆಕ್ಕಾಡಿ ರವರು ನೀಡಿದ ದೂರಿನಂತೆ ದಿನಾಂಕ  18-03-2022 ರಿಂದ ದಿನಾಂಕ 30-03-2022 ರಂದು 10.00 ಗಂಟೆಯ ಮಧ್ಯೆ ಅವಧಿಯಲ್ಲಿ ತಾಲೂಕು ಮುರುಳ್ಯ ಗ್ರಾಮದ ಮುರುಳ್ಯ -ಎಣ್ಮೂರು ಕೃಷಿ ಪತ್ತಿನ ಸಹಕಾರಿ ಸಂಘ ಮಿಯಮಿತ ಅಲೆಕ್ಕಾಡಿ  ಇದರ ಹೊಸ ಕಟ್ಟಡಕ್ಕೆ ಸಂಘದ ವ್ಯವಹಾರಗಳನ್ನು ಲೆಕ್ಕ ಇರಿಸಿಕೊಳ್ಳಲು ತಂದು ಕಟ್ಟಡದಲ್ಲಿ ಇಡಲಾಗಿದ್ದ  Moniter -02 ,Desktop -01 ,    ಹಾಗೂ LED Smart T V   ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು  ಹೋಗಿದ್ದು ಕಳುವಾದ ಒಟ್ಟು ಸೊತ್ತಗಳು ಅಂದಾಜು ಮೌಲ್ಯ 1,52,500/-  ಆಗಿರುತ್ತದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. ಅಪರಾಧ ಕ್ರಮಾಂಕ 27/2022 ಕಲಂ : 454,457,380 ಐಪಿಸಿ.  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹಮ್ಮದ್ ಪ್ರಾಯ 54 ವರ್ಷ  ವಾಸ ಅಮ್ಮೆಮಾರು ಪುದು ಗ್ರಾಮ ಬಂಟ್ವಾಳ ತಾಲೂಕು ರವರಿಗೆ ಬಂಟ್ವಾಳ ತಾಲೂಕು ಪುದು ಗ್ರಾಮದ ಸರ್ವೆ ಜಿ ನಂ -23/11ಪಿ6ರಲ್ಲಿ 0.15 ಸೆಂಟ್ಸ್ ವಿಸ್ತೀರ್ಣದ ಸ್ಥಿರಾಸ್ತಿಯು ಸ್ವಾಧೀನಾನುಭವದಲ್ಲಿದ್ದು ಸದ್ರಿ ಸ್ಥಿರಾಸ್ತಿಯ ಒಂದು ಬದಿಯಲ್ಲಿ  ಆರೋಪಿಗಳು ಅಕ್ರಮವಾಗಿ ರಸ್ತೆಯನ್ನು ನಿರ್ಮಿಸಲು ಯತ್ನಿಸಿದಾಗ ಪಿರ್ಯಾದುದಾರರು ಬಂಟ್ವಾಳ ನ್ಯಾಯಾಲಯದಿಂದ O.S NO 91/2022 DATE.17.03.2022 ರಂದು ತಡೆಯಾಜ್ಞೆ ಪಡೆದುಕೊಂಡಿದ್ದು, ದಿನಾಂಕ 30.03.2022 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದುದಾರರು ತನ್ನ ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿರುವಾಗ ಆರೋಪಿಗಳು ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದುದಾರರಿಗೆ  ಕೆಟ್ಟ ಶಬ್ದಗಳಿಂದ ಬೈದು  ನೀನು ಕೋರ್ಟ್ ನಿಂದ  ಬಾರೀ ತಡೆಯಾಜ್ಞೆ  ತರುತ್ತೀಯಾ ನೀನು ನಮ್ಮಷ್ಟು ದೊಡ್ಡ ಜನವಾ? ನಾವು ಕೋರ್ಟ್ ಸ್ಟೇಷನ್ ಲೆಕ್ಕ ಮಾಡುವುದಿಲ್ಲ ನಿನಗೆ ಹೆದರುತ್ತಿವಾ?ಇನ್ನು ನೀನು ಏನಾದರು ಕೋರ್ಟ್ ಗೆ ಹೋದರೆ  ನಿನ್ನ ಜೀವ ಸಹಿತ ಬಿಡುವುದಿಲ್ಲ, ನಿನ್ನ ಜೀವ ಇದ್ದರೆ ತಾನೆ ಕೋರ್ಟ್ ಗೆ ಹೋಗುವುದು ಎಂದು ಹೇಳುತ್ತಿರುವಾಗ ಪಿರ್ಯಾದುದಾರರ ಮಗಳು ರುಬೀನಾಳು  ಗಲಾಟೆ ಮಾಡುತ್ತಿರುವುದನ್ನು  ಮೊಬೈಲ್ ನಿಂದ ವಿಡೀಯೋ ಮಾಡುತ್ತಿರುವಾಗ ಇಜ್ಜು ಎಂಬುವವನು ಅವಳ ಕೈಗೆ ಹೊಡೆದು ಅವಳ ಮೊಬೈಲನ್ನು ಕೆಳಗೆ ಹಾಕಿ  ಮಣ್ಣು ಹಾಕಿರುವುದಾಗಿದ್ದು ನೀನು ಹೆಣ್ಣು ಅಂತನು ನೋಡುವುದಿಲ್ಲ. ನಿನ್ನ ಸೊಂಟ ಮುರಿದು ಹಾಕುತ್ತೇವೆ.ನೀನು ಬಾರೀ ಸಾಕ್ಷಿ ರೆಡಿ ಮಾಡುತ್ತೀಯಾ ಇನ್ನು ಈ ರೀತಿ ಏನಾದರು ಮಾಡಿದರೆ ತುಂಡರಿಸುತ್ತೇವೆ ಎಂದು ಬೆದರಿಕೆ ಒಡ್ಡಿರುತ್ತಾರೆ .ಹೀಗೆ ಪಿರ್ಯಾದುದಾರರ  ಹೆಂಡತಿ ಮಕ್ಕಳಿಗೆ  ಕೆಟ್ಟ ಶಬ್ದಗಳಿಂದ ಬೈದು  ಕೊಲೆ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ  30/2022  ಕಲಂ 143,147,447,323,504,506,149 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ದ.ಕ ಮಹಿಳಾ ಪೊಲೀಸ್ ಪೊಲೀಸ್ ಠಾಣೆ : ಪಿರ್ಯಾದಿದಾರರ ಮಗ 5 ನೇ ತರಗತಿ ಕಲಿಯುತ್ತಿದ್ದು, ದಿನಾಂಕ : 29-03-2022 ರಂದು ಪಿರ್ಯಾದುದಾರರು ತನ್ನ ಆಟೋ ರಿಕ್ಷಾದಲ್ಲಿ ಮಗನನ್ನು ಬೆಳಿಗ್ಗೆ 9:15 ಗಂಟೆಗೆ ಶಾಲೆಗೆ ಬಿಟ್ಟು ಬಂದಿದ್ದು, ಬಳಿಕ ಸಾಯಂಕಾಲ 4:30 ಗಂಟೆಗೆ  ಶಾಲೆಯಿಂದ ಕರೆದುಕೊಂಡು ಮನೆಗೆ ಬಂದಾಗ ಪಿರ್ಯಾದುದಾರರ ಪತ್ನಿ ಆತನಿಗೆ ಊಟ ಬಡಿಸಿದ್ದು, ಈ ವೇಳೆ ಎಡದ ಕೈಯಲ್ಲಿ ಊಟ ಮಾಡುವುದನ್ನು  ಕಂಡ ಪಿರ್ಯಾದುದಾರರು ಆತನಲ್ಲಿ ವಿಚಾರಿಸಿದಾಗ ಈ ದಿನ ನಾನು ಶಾಲೆಯಲ್ಲಿದ್ದ ಸಮಯ ತನಗೆ ಶಾಲೆಯಲ್ಲಿ ಹೊಟ್ಟೆ ನೋವು ಕಾಣಿಸಿದ್ದು, ಆ ವೇಳೆ ಗಣಿತ ಪಾಠ ಮಾಡುತ್ತಿದ್ದ ಟೀಚರ್ ಬಳಿ ತಿಳಿಸಿದಾಗ, ಟೀಚರ್ ರವರು ನಾಟಕ ಮಾಡುತ್ತಿದ್ದೀಯಾ? ಎಂಬುದಾಗಿ ಹೇಳಿ ಅವರ  ಕೈಯಲ್ಲಿದ್ದ ಮರದ ಅಡಿಕೋಲು ನಿಂದ ಬಲಕೈಯ  ಮುಂಗೈಗೆ ಒಂದು  ಏಟು ಹಾಗೂ ಅದೇ ಕೈಯ ಅಂಗೈಗೆ ಎರಡು ಏಟು ಹೊಡೆದಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾನೆ. ಬಳಿಕ ಪಿರ್ಯಾದುದಾರರು ಗಾಯಗೊಂಡ ಮಗನನ್ನು ಆಸ್ಪತ್ರೆಗೆ  ಚಿಕಿತ್ಸೆಯ ಬಗ್ಗೆ  ಕರೆದುಕೊಂಡು ಬಂದಲ್ಲಿ  ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿರುತ್ತಾರೆ. ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕಲಂ: 324 ಬಾದಂಸಂ 75 JJ Act   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಬಿ. ಶ್ರೀನಿವಾಸ ರಾವ್ ಪ್ರಾಯ 60 ವರ್ಷ ತಂದೆ: ದಿ|| ಬಿ. ಮುತ್ತಣ್ಣ ಹಳೆಗೇಟು ಮನೆ, ಛತ್ರಪತಿ ನಗರ ಸುಳ್ಯ ಕಸಬಾ ಗ್ರಾಮ ಸುಳ್ಯ ತಾಲೂಕು ರವರ ಪತ್ನಿ ಗಾಯತ್ರಿ ರವರಿಗೆ ದಿನಾಂಕ 27.03.2022 ರಂದು ಜ್ವರ ಬಂದ ಕಾರಣ ಸ್ಥಳೀಯ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ದಿನಾಂಕ 29.03.2022 ರಂದು ರಾತ್ರಿ 9.30 ಗಂಟೆಗೆ ಗಾಯತ್ರಿರವರು ಎದೆನೋವು ಎಂದು ಹೇಳಿದ ಕಾರಣ ಚಿಕಿತ್ಸೆ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ರಾತ್ರಿ 10.15 ಗಂಟೆಗೆ ಕರೆದುಕೊಂಡು ಬಂದಾಗ ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದು, ಗಾಯತ್ರಿರವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಯುಡಿಅರ್ ನಂಬ್ರ 13/2022 ಕಲಂ 174 ಸಿಅರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಅಭಿಷೇಕ್ ಎಸ್.ಎಸ್ ಪ್ರಾಯ 22 ವರ್ಷ ತಂದೆ: ಶ್ರೀಧರ ಆಚಾರ್ಯ ವಾಸ: ಶಿವಕೃಪಾ ಮನೆ ಸಾಮೆತ್ತಡ್ಕ ಪುತ್ತೂರು ಕಸಬಾ ಗ್ರಾಮ ಪುತ್ತೂರು ತಾಲೂಕು ಎಂಬವರ ತಂದೆ ಶ್ರೀಧರ ಆಚಾರ್ಯ ಎಂಬವರು ಕಳೆದ 2 ವರ್ಷಗಳ ಹಿಂದೆ ಮೆದುಳಿಗೆ ಸಂಬಂಧಿಸಿದ ಖಾಯಿಲೆಯಿಂದ ಬಳಲಿ ಅದರಿಂದ ಗುಣ ಮುಖರಾಗಿದ್ದರು. ಫಿರ್ಯಾದಿದಾರರ ತಂದೆಯವರು ಬಿ.ಪಿ ಹಾಗೂ ಶುಗರ್ ನಿಂದ ಬಳಲುತ್ತಿದ್ದು, ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಿನಾಂಕ: 26.03.2022 ರಂದು ಫಿರ್ಯಾದಿದಾರರ ತಂದೆ ಬಿ.ಪಿ ಮತ್ತು ಶುಗರ್ ಅಧಿಕವಾಗಿದ್ದರಿಂದ ಮಂಗಳೂರಿನ ಅಥೇನ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಕೊಡಿಸಿ ದಿನಾಂಕ: 29.03.2022 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಕರೆದುಕೊಂಡು ಬಂದಿದ್ದು, ಅದೇ ದಿನ ರಾತ್ರಿ ಸುಮಾರು 11.30 ಗಂಟೆಗೆ ಫಿರ್ಯಾದಿದಾರರ ತಂದೆಯವರಿಗೆ ವಾಂತಿ ಬಂದಿದ್ದುದರಿಂದ ನೆರೆಕರೆಯವರಾದ ರಾಜೇಶ್ ಎಂಬವರ ರೊಂದಿಗೆ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ದಿನಾಂಕ: 30.03.2022 ರಂದು ಬೆಳಿಗ್ಗೆ 12.05 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಠಾಣಾ  ಯುಡಿಆರ್‌:      09/2022 ಕಲಂ: 174 ಸಿ.ಆರ್.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 31-03-2022 11:31 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080