ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅರುಣಾ, ಪ್ರಾಯ 48 ವರ್ಷ, ಗಂಡ: ದಿ.ಗಣೇಶ್, ವಾಸ: ಕಟ್ಟೆಚ್ಚಾರು ಮನೆ, ಇಳಂತಿಲ ಅಂಚೆ & ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 30-05-2022 ರಂದು ಆರೋಪಿ ಕಾರು ಚಾಲಕ ಸದಾನಂದ ಪೂಜಾರಿ ಎಂಬವರು KA-03-MK-8296ನೇ ನೋಂದಣಿ ನಂಬ್ರದ ಕಾರನ್ನು ಮೊಗ್ರು-ಇಳಂತಿಲ-ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮೊಗ್ರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಗ್ರಾಮದ ಕಟ್ಟೆಚಾರು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರ ಬದಿಗೆ ಚಲಾಯಿಸಿದ ಪರಿಣಾಮ, ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಾದ ಅರುಣಾ ರವರಿಗೆ ಕಾರು ಹಿಂದಿನಿಂದ ಅಪಘಾತವಾಗಿ, ಪಿರ್ಯಾದುದಾರರು ರಸ್ತೆಗೆ ಬಿದ್ದು, ಹಣೆಯ ಬಲ ಭಾಗ, ಬಲ ಸೊಂಟಕ್ಕೆ ಗುದ್ದಿದ ಒಳನೋವು, ಬಲ ಮೊಣ ಕಾಲಿಗೆ ಹಾಗೂ ಹಲ್ಲಿಗೆ ರಕ್ತಗಾಯಗಳಾಗಿ,  ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  99/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಉಮ್ಮರ್ ಪ್ರಾಯ:50 ವರ್ಷ ತಂದೆ:ಅಹಮ್ಮದ್ ಕುಂಞ ವಾಸ: ಬಡ್ಡಮೆ ಮನೆ,ಕೊಯಿಲಾ ಗ್ರಾಮ ಕಡಬ ತಾಲೂಕು ರವರು ದಿನಾಂಕ 30.05.2022 ರಂದು ಬೆಳೆಗ್ಗೆ ಕೂಲಿ ಕೆಲಸಕ್ಕೆಂದು ಹೋಗುವರೇ ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಕಡಬ ತಾಲೂಕು ಕ್ಯೋಲ ಗ್ರಾಮದ ಕೆಮ್ಮಾರ ಎಂಬಲ್ಲಿ  ಹೋಗುತ್ತಿದ್ದಾಗ ಸಮಯ ಸುಮಾರು 08.15 ಗಂಟೆಗೆ ರಸ್ತೆಯ ಎಡಬದಿಯಲ್ಲಿ ಮದರಸ ಶಾಲೆ ಮುಗಿಸಿ ಮನೆ ಕಡೆಗೆ ರಿಝಾ ಪಾತಿಮಾ (7)  ಮಗುವೊಂದು ನಡೆದು ಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ಉಪ್ಪಿನಂಗಡಿ ಕಡೆಯಿಂದ ಕೆಎ-18 ಎನ್ 4720ನೇ ಸ್ಕಾರ್ಪಿಯೊ ವಾಹನವೊಂದರ ಚಾಲಕ ಶಿವಕುಮಾರ್ ಎಂಬಾತನು ಸದ್ರಿ ವಾಹನವನ್ನು ತೀರ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ ಮಗುವಿಗೆ ಹಿಂದಿನಿಂದ ಬಂದು ಡಿಕ್ಕಿ ಉಂಟುಮಾಡಿದ ಪರಿಣಾಮ ಮಗುವಿನ ತಲೆಗೆ ಮತ್ತು ಮುಖಕ್ಕೆ ರಕ್ತಗಾಯವಾಗಿದ್ದು ಪಿರ್ಯಾದಿದಾರರು ಹಾಗೂ ಇತರರು  ಉಪಚರಿಸಿ  ಸ್ಥಳದಲ್ಲಿದ್ದ ಮೋಟಾರು ಸೈಕಲ್‌ನಲ್ಲಿ ಯಾಕುಬ್ ಮತ್ತು ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಉಪ್ಪಿನಂಗಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ವೈಧ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ತಿಳಿಸಿದಂತೆ ಆಸ್ಪತ್ರೆಗೆ ಬಂದ ಮಗುವಿನ ತಂದೆ ಮುಸಾನ್ ಎಂಬುವರು ಮಗುವನ್ನು ಮಂಗಳೂರಿನ ಇಂಡಿಯಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 52/2022 ಕಲಂ. .279.337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಜಯಂತಕುಮಾರ ಪ್ರಾಯ:38 ವರ್ಷ ತಂದೆ:ದಿ.ಶೀನಪ್ಪ ಪೂಜಾರಿ ವಾಸ: ಕಜೆ ಮನೆ ಆಲಂಕಾರು ಗ್ರಾಮ ಕಡಬ ತಾಲೂಕು ರವರು  ಅಲಂಕಾರು ಆಟೋರಿಕ್ಷಾ ನಿಲ್ದಾಣದಲ್ಲಿ  ಆಟೋರಿಕ್ಷಾ ಇಟ್ಟುಕೊಂಡು ಬಾಡಿಗೆ ನಡೆಸುತ್ತಿದ್ದು, ದಿನಾಂಕ: 29.05.2022 ರಂದು  ಬಾಡಿಗೆ  ನಿಮಿತ್ತ ಅಲಂಕಾರಿನಿಂದ –ಕುಂಡಾಜೆ ಕಡೆ ಪ್ರಯಾಣಿಕರನ್ನು  ಕುಳ್ಳಿರಿಸಿಕೊಂಡು ಕಡಬ-ಉಪ್ಪಿನಂಗಡಿ ರಾಜ್ಯ ರಸ್ತೆಯಲ್ಲಿ  ಹೋಗುತ್ತಾ ಕಡಬ ತಾಲೂಕು ಅಲಂಕಾರು ಗ್ರಾಮದ ನೆಕ್ಕರೆ  ಎಂಬಲ್ಲಿಗೆ ತಲುಪಿದಾಗ ಸಮಯ ಸುಮಾರು ಮಧ್ಯಾಹ್ನ 12.00 ಗಂಟೆಗೆ ಪಿರ್ಯಾದಿದಾರರ  ಎದುರಿನಿಂದ ಅಂದರೆ ಆಲಂಕಾರು ಕಡೆಯಿಂದ ಉಪ್ಪಿನಂಗಡಿ  ಕಡೆಗೆ  ಒಂದು ಮೋಟಾರ್ ಸೈಕಲನ್ನು  ಅದರ  ಸವಾರನು  ಸಹ-ಸವಾರರನ್ನು  ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ  ಮೋಟಾರ್  ಸೈಕಲ್ ಸವಾರನು ಅವರ ವಿರುದ್ದ ದಿಕ್ಕಿನಿಂದ  ವಾಹನವೊಂದು  ಇನ್ನೊಂದು ವಾಹನವನ್ನು  ಓವರ್ ಟೇಕ್  ಮಾಡಿ  ತೀರಾ ಬಲಬದಿಗೆ ಬಂದದನ್ನು  ನೋಡಿದ  ಮೋಟಾರ್ ಸೈಕಲ್ ಸವಾರನು  ಒಮ್ಮೆಲೆ  ತನ್ನ ಮೋಟಾರು ಸೈಕಲ್ ಬ್ರೇಕ್  ಹಾಕಿದಾಗ ಹಿಂಬದಿಯಲ್ಲಿ  ಕುಳಿತ್ತಿದ್ದ ಮಹಿಳೆಯು ಆಯತಪ್ಪಿ  ಡಾಮಾರು ರಸ್ತೆಯ  ಅಂಚಿಗೆ ಬಿದ್ದವರನ್ನು, ಕೂಡಲೇ ಪಿರ್ಯಾದಿದಾರರು ಆಟೋರಿಕ್ಷಾವನ್ನು  ನಿಲ್ಲಿಸಿ  ಅಪಘಾತ  ಸ್ಥಳಕ್ಕೆ ಪಿರ್ಯಾದಿದಾರರ ಆಟೋರಿಕ್ಷಾದಲ್ಲಿದ್ದ ವೆಂಕಪ್ಪ ಪೂಜಾರಿ, ಮನೋಹರ ರವರೊಂದಿಗೆ ಸೇರಿಕೊಂಡು ಕೆಳಗೆ ಬಿದ್ದ ಮಹಿಳೆಯವರನ್ನು ಮೇಲಕ್ಕೆ ಎತ್ತಿ ಉಪಚರಿಸಿ ನೋಡಲಾಗಿ ಅವರ ಎಡಭುಜಕ್ಕೆ ಗುದ್ದಿದ ನೋವಾಗಿದ್ದು ಅವರನ್ನು ವಿಚಾರಿಸಿ ಹೆಸರು ಕೇಳಲಾಗಿ ಶ್ರೀಮತಿ ಭವಾನಿ ಎಂಬುದಾಗಿ ತಿಳಿಸಿದ್ದು ನಂತರ ಅಪಘಾತ ಪಡಿಸಿದ  ಟಿವಿಎಸ್ ಕಂಪೆನಿಯ ಮೋಟಾರು ಸೈಕಲ್ ನೋದಣಿ ನಂಬ್ರ KA-70 E-6443 ಆಗಿರುತ್ತದೆ. ಸವಾರನ ಹೆಸರು ಕೇಳಲಾಗಿ ನಾರಾಯಣ ಅಮಿನ್ ಎಂಬುದಾಗಿ ತಿಳಿಸಿದ್ದು ಗಾಯಗೊಂಡ ಮಹಿಳೆ ಶ್ರೀಮತಿ ಭವಾನಿಯವರನ್ನು ಚಿಕಿತ್ಸೆಯ ಬಗ್ಗೆ 108 ಅಂಬುಲೇನ್ಸನಲ್ಲಿ ಪುತ್ತೂರಿನ ಹಿತಾ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಅಲ್ಲಿನ ವೈಧ್ಯರು ಪರೀಕ್ಷಿಸಿ ಗಾಯಾಳುವನ್ನು ಒಳರೋಗಿಯನ್ನಾಗಿ ದಾಖಲುಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 53/2022 ಕಲಂ. .279.337 IPC ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಆನಂದ ಪ್ರಾಯ 30 ವರ್ಷ ತಂದೆ:ಕುಂಞ ಮೂಲ್ಯ ವಾಸ:ಮಲೆಂಗಲ್ ಮನೆ ಕಣಿಯೂರು ಗ್ರಾಮ ಬೆಳ್ತಂಗಡಿ ತಾಲೂಕು ರವರು ದಿನಾಂಕ: 16-05-2022 ರಂದು ಅವರ ಪತ್ನಿ ಸಂಧ್ಯಾ ಮತ್ತು ಮಗುವನ್ನು ಜೊತೆಯಲ್ಲಿ ಕರೆದುಕೊಂಡು ಸ್ಟುಡಿಯೋಗೆ ಹೋಗಿದ್ದು. ಪಿರ್ಯಾದಿದಾರರ ತಂದೆ ಮತ್ತು ತಾಯಿ ಕೆಲಸಕ್ಕೆ ಹೋಗಿದ್ದರು. ಪಿರ್ಯಾದಿದಾರರು ಸ್ಟುಡಿಯೋದಲ್ಲಿ ಇರುವಾಗ ಮದ್ಯಾಹ್ನ ಸುಮಾರು 12.15 ಗಂಟೆಗೆ ಅವರ ಪರಿಚಯದ ಅಟೋ ರಿಕ್ಷಾ ಚಾಲಕ ಹರೀಶ ಎಂಬಾತನು ನಿಮ್ಮ ಮನೆಗೆ ಬೆಂಕಿ ಬಿದ್ದಿದೆ. ನಾನು ಹಾಗೂ ನೆರೆಕರೆಯವರು ಸೇರಿ ಬೆಂಕಿ ನಂದಿಸುತ್ತಾ ಇದ್ದೇವೆ. ಎಂದು ಹೇಳಿದರು. ಪಿರ್ಯಾದಿದಾರರು ಕೂಡಲೇ ಅಲ್ಲಿಗೆ ಹೋಗಿ ನೋಡಲಾಗಿ ಅವರ ಕೋಣೆಯಲ್ಲಿದ್ದ ಬಟ್ಟೆ ಬರೆ, ಕ್ಯಾಮರದ ಪರಿಕರಣಗಳು ಸುಟ್ಟು ಹೋಗಿದ್ದು.  ಅಲ್ಲದೇ ಕಪಾಟಿನಲ್ಲಿದ್ದ ಚಿನ್ನ ಇಡುವ ಬಾಕ್ಸ್ ಮತ್ತು ದಾಖಲೆ ಪತ್ರಗಳು ಹಾಗೆ ಇದ್ದು, ಪಿರ್ಯಾದಿದಾರರು ಚಿನ್ನ ಇಡುವ ಬಾಕ್ಸನ್ನು ಸರಿಯಾಗಿ ಗಡಿಬಿಡಿಯಲ್ಲಿ  ಪರೀಕ್ಷಿಸಿರುವುದಿಲ್ಲ. ನಂತರ ಸುಟ್ಟು ಹೋದ ಕೋಣೆ ಮತ್ತು ಮನೆಯನ್ನು ಸ್ವಚ್ಚ ಮಾಡುತ್ತಾ ದಿನಾಂಕ: 30-05-2022 ರಂದು  ಬೆಳಿಗ್ಗೆ 11.30 ಗಂಟೆಗೆ ಚಿನ್ನದ ಬಾಕ್ಸನ್ನು ನೋಡಿದಾಗ ಅದರಲ್ಲಿ  ಇಟ್ಟಿದ್ದ ಮಗುವಿನ ಉಂಗುರ-02, ಮಗುವಿನ ಬ್ರಾಸ್ ಲೈಟ್-02. ಪೆಂಡೆಂಟ್ ಇರುವ ಮಗುವಿನ ಸರ-01, ಪದಕ ಇರುವ ಜೋಮಾಲೆ-01, ಉಂಗುರ-2 ಈ ಚಿನ್ನಾಭರಣಗಳು ಕಳವಾಗಿದ್ದು, ಕಳವಾದ ಚಿನ್ನಾಭರಣಗಳ ಅಂದಾಜು ಮೌಲ್ಯ ರೂ 2,50,000/- ಆಗಬಹುದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 64/2022 ಕಲಂ:454 457 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪೋಕ್ಸೋ ಪ್ರಕರಣ: 1

 • ವಿಟ್ಲ ಪೊಲೀಸ್ ಠಾಣೆ : ಫಿರ್ಯಾದಿದಾರರು ಅಪ್ರಾಪ್ತ ಬಾಲಕಿಯಾಗಿದ್ದು 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವುದಾಗಿದೆ.  ಫಿರ್ಯಾದಿದಾರರು ದಿನಾಂಕ;27.03.2022 ರಂದು ಬಸ್ಸು ಪ್ರಯಾಣಿಕರ ತಂಗುದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ಆರೋಪಿ ಸಫ್ವಾನ್ ಎಂಬಾತನು ಆತನ ಆಟೋರಿಕ್ಷಾದಲ್ಲಿ ಬಂದು ಸದ್ರಿ ಬಸ್ಸು ಪ್ರಯಾಣಿಕರ ತಂಗುದಾಣದ ಬಳಿಯಲ್ಲಿ ನಿಲ್ಲಿಸಿ ಫಿರ್ಯಾದಿದಾರರ ಬಳಿಗೆ ಬಂದು ಅವರನ್ನುದ್ದೇಶಿಸಿ, ಅನುಚಿತವಾಗಿ ವರ್ತಿಸಿ ಕೈ ಹಿಡಿದು ಎಳೆದನು. ಆ ಸಮಯಕ್ಕೆ ಅದೇ ರಸ್ತೆಯಿಂದಾಗಿ ಹೋಗುತ್ತಿದ್ದ ವಾಹನಗಳನ್ನು ಕಂಡು ಅಲ್ಲಿಂದ ಆತನು ಹೊರಟು ಹೋಗುತ್ತ ಈ ವಿಷಯವನ್ನು ನೀನು ನಿನ್ನ ಅಮ್ಮನಲ್ಲಿ ಹೇಳಿದ್ದಲ್ಲಿ “ನಿನ್ನನ್ನು ಕೊಂದು ಹಾಕುವುದಾಗಿ” ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಕಲಂ: 11, 12 ಪೋಕ್ಸೊ ಆಕ್ಟ್ ಮತ್ತು 354 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

 • ಉಪ್ಪಿನಂಗಡಿ ಪೊಲೀಸ್ ಠಾಣೆ : ಪೊಲೀಸ್ ಉಪನಿರೀಕ್ಷಕರು  ಉಪ್ಪಿನಂಗಡಿ ಪೊಲೀಸ್ ಠಾಣೆಯವರಿಗೆ ದಿನಾಂಕ: 30-05-2022  ರಂದು ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಪಿಲಿಗೂಡು ಎಂಬಲ್ಲಿರುವ ಸಾರ್ವಜನಿಕ ಬಸ್ಸು ತಂಗುದಾಣದ ಬಳಿ ಯಾರೋ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ ತಲುಪಿದಾಗ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯ  ಮಾರಾಟ ಮಾಡುತ್ತಿದ್ದ ಪುರಂದರ, ಪ್ರಾಯ:52 ವರ್ಷ, ವಾಸ: ಪಿಲಿಗೂಡ್ ಮನೆ, ಬಾರ್ಯ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು  ಆತನ ವಶದಲ್ಲಿದ್ದ MYSORE LANCER WHISKY ಎಂದು ಬರೆದಿರುವ 90 ಎಂ.ಎಲ್ ನ ಟೆಟ್ರಾ ಪ್ಯಾಕೇಟ್-29 ನ್ನು ಸ್ವಾದೀನಪಡಿಸಿಕೊಳ್ಳಲಾಯಿತು ಸ್ವಾಧೀನಪಡಿಸಿಕೊಂಡ ಒಟ್ಟು ಮದ್ಯದ ಅಂದಾಜು ಮೌಲ್ಯ 1018.77 ರೂ ಆಗಬಹುದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 65/2022 ಕಲಂ: 32,34 ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 4

 • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರದೀಪ್ ಪ್ರಾಯ 40 ವರ್ಷ ತಂದೆ ವಿಠಲ ಪೂಜಾರಿ  ಜಾರ್ಕಳ ಮನೆ ಎರ್ಲಪಾಡಿ ಗ್ರಾಮ ಕಾರ್ಕಳ ತಾಲೂಕು ರವರು ಬುಡೋಳಿ ಗ್ರಾಮದ ದಂಡೆಗೋಳಿ ಎಂಬಲ್ಲಿ ಸಂಸಾರದೊಂದಿಗೆ ವಾಸವಾಗಿದ್ದು ದೂರುದಾರರ ಮನೆಯ ಸಮೀಪದಲ್ಲಿ ದೂರುದಾರರ ಪತ್ನಿ ದಿವ್ಯ ರವರ ತಂದೆಯ ಅಕ್ಕ ಅಪ್ಪಿ ಎಂಬುವವರು ವಾಸವಾಗಿದ್ದು ಅವರಿಗೆ ಮಕ್ಕಳಿರುವುದಿಲ್ಲ ಅಪ್ಪಿ ರವರ ಗಂಡ ಸುಮಾರು 30 ವರ್ಷಗಳ ಹಿಂದೆ ಮರಣ ಹೊಂದಿದ್ದು ಒಬ್ಬರೆ ವಾಸವಾಗಿರುತ್ತಾರೆ. ಸದ್ರಿರವರು ಕಡಿಮೆ ರಕ್ತದ ಒತ್ತಡದಿಂದ ಬಳಲುತ್ತಿದ್ದು  ಸುಮಾರು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದು ದಿನಾಂಕ 29.05.2022 ರಂದು ಮಧ್ಯಾಹ್ನ 13.00 ಗಂಟೆಗೆ ದೂರುದಾರರ ಪತ್ನಿ ದಿವ್ಯ ರವರು ಮನೆಯಲ್ಲಿರುತ್ತಾ ದೊಡ್ಡಮ್ಮ ಅಪ್ಪಿರವರು ಮನೆಯಲ್ಲಿ ಅಸ್ವಸ್ಥಗೊಂಡು ನರಳಾಡಿದ ಬೊಬ್ಬೆ ಕೇಳಿ ಅವರ ಬಳಿಗೆ ಹೋದಾಗ ಅಪ್ಪಿರವರಿಗೆ ರಕ್ತದ ಒತ್ತಡ ಕಡಿಮೆಯಾಗಿ ನರಳಾಡುವುದನ್ನು ಕಂಡು ಅವರನ್ನು ಆಟೋರಿಕ್ಷಾದಲ್ಲಿ ವಾಮದಪದವು PHC ಗೆ ಕರೆದುಕೊಂಡು ಬಂದು ವೈದ್ಯರ ಸಲಹೆಯಂತೆ  ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು  ಮಂಗಳುರು ವೆನ್ ಲಾಕ್ ಆಸ್ಪತ್ರೆಗೆ  ಕರೆದುಕೊಂಡು ಹೋಗುವಂತೆ  ತಿಳಿಸಿದ ಮೇರೆಗೆ  ಆಂಬುಲೆನ್ಸ್ ನಲ್ಲಿ  ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 33-2022  ಕಲಂ 174  ಸಿ ಆರ್ ಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ವಸಂತ ಪ್ರಾಯ 38 ವರ್ಷ ತಂದೆ; ನೀಲಪ್ಪ ಪೂಜಾರಿ ವಾಸ; ಕೂಡಿ ಬೈಲ್ ಮನೆ ನಾವೂರು ಗ್ರಾಮ ರವರು ಸಂಸಾರದೊಂದಿಗೆ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ, ಪಿರ್ಯಾದುದಾರರ ತಂದೆ ಕೂಡ ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 29-05-2022 ರಂದು ನೆರೆ ಕರೆಯ ಅಚುತ ರವರ ಮನೆಯಲ್ಲಿ  ದೈವದ ಕಾರ್ಯಕ್ರಮ ಇದ್ದುದರಿಂದ ಸಂಜೆ 6.45 ಗಂಟೆಗೆ ಮನೆಯಿಂದ  ಹೋಗಿರುತ್ತಾರೆ ಸಂಜೆ ಸುಮಾರು 7.00 ಗಂಟೆಯ ಸಮಯಕ್ಕೆ ನೆರೆಯ ನಾರಾಯಣರವರು ಪಿರ್ಯಾದುದಾರರ ಮನೆಗೆ ಬಂದು ನಾನು ಮನೆಗೆ ಹೋಗುತ್ತಿದ್ದ ಸಮಯ ದಾರಿಯಲ್ಲಿ ನೀಲಪ್ಪ ಪೂಜಾರಿರವರು ನನಗೆ ಕಾಣಸಿಕ್ಕಿ ನಾನು ಮತ್ತು ನೀಲಪ್ಪ  ಪೂಜಾರಿ ನಡೆದುಕೊಂಡು ಹೋಗುತ್ತಿದ್ದ ಸಮಯ ಕೂಡಿಬೈಲ್ ಎಂಬಲ್ಲಿಗೆ ತಲುಪಿದಾಗ   ನೀಲಪ್ಪ ಪೂಜಾರಿರವರು ಆಕಸ್ಮಿಕವಾಗಿ  ಕಾಲು ಜಾರಿ ಉಸ್ಮಾನ್   ರವರ ತೋಟದಲ್ಲಿದ್ದ ಬಾವಿಗೆ ಬಿದ್ದರು  ನಾನು ಅವರನ್ನು ಎತ್ತಲು ಪ್ರಯತ್ನಿಸಿದರೂ  ಅವರು  ಬಾವಿಯಲ್ಲಿ ಮುಳುಗಿರುತ್ತಾರೆ ಎಂದು  ದೂರುದಾರರ ಮನೆಗೆ ಬಂದು ತಿಳಿಸಿದ್ದು ಪಿರ್ಯಾದುದಾರರ  ಮನೆಯವರು ಮತ್ತು ನೆರೆಕರೆಯವರು  ಹೋಗಿ ನೋಡಿದಾಗ  ಬಾವಿಯಲ್ಲಿ ಕಾಣದೇ ಇದ್ದು  ನಂತರ  ಅಗ್ನಿ ಶಾಮಕ ದಳದರಿಗೆ ಕರೆ ಮಾಡಿ ಅವರು ಬಂದು ಕೆರೆಯಲ್ಲಿ ಹುಡುಕಾಡಿದಲ್ಲಿ ರಾತ್ರಿ 10.40 ಗಂಟೆಗೆ  ಮೃತ ದೇಹವನ್ನು  ಕೆರೆಯಿಂದ  ತೆಗೆದಿದ್ದು ಪಿರ್ಯಾದುದಾರರ ತಂದೆ ಮೃತ ಪಟ್ಟಿರುತ್ತಾರೆ, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 34-2022  ಕಲಂ 174  ಸಿ ಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚಂದ್ರಕಾಂತ್ (28) ತಂದೆ: ಉಮೇಶ್ ನಾಯ್ಕ ವಾಸ: ಅಜೆಕಲ್ ಮನೆ, ಲಾಯಿಲ ಗ್ರಾಮ ಬೆಳ್ತಂಗಡಿ ತಾಲೂಕು ರವರ ತಂದೆ ಉಮೇಶ್ ನಾಯ್ಕ ಪ್ರಾಯ: 56 ವರ್ಷ ರವರು ಬಾಯಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ KMC ಆಸ್ಪತ್ರೆ ಮಂಗಳೂರಿನಲ್ಲಿ ಚಿಕಿತ್ಸೆ ಪಡೆದು, ನಂತರ ಕೊಡಗು ಜಿಲ್ಲೆಯ ಕೊಡ್ಲಿಪೇಟೆ ಎಂಬಲ್ಲಿ ಪಂಡಿತರಿಂದ ನಾಟಿ ಔಷದಿ ಪಡೆಯುತ್ತಾ ಗುಣಮುಖರಾಗುತ್ತಿದ್ದವರು ಮದ್ಯಪಾನ ಸೇವಿಸಲು ಆರಂಭಿಸಿ ಇದರಿಂದ ಖಾಯಿಲೆಯು ಉಲ್ಬಣಗೊಂಡು ನೋವು ತಾಳಲಾರದೆ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 29.05.2022 ರಂದು ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಅಜೆಕಲ್ ಎಂಬಲ್ಲಿ ಮನೆಯಲ್ಲಿದ್ದವರು ಸಮಯ ಸುಮಾರು 7.30 ಗಂಟೆಗೆ ಯಾವುದೋ ವಿಷ ಪಧಾರ್ಥ ಸೇವಿಸಿ ಅಸ್ವಸ್ಥಗೊಂಡವರನ್ನು ನೋಡಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ಅಲ್ಲಿಯ ವೈಧ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಂಗಂಳೂರು ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾ ದಿನಾಂಕ 30.05.2022 ರಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿದೆ ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಯು ಡಿ ಆರ್ ನಂ. 23/2022 ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 • ವೇಣೂರು ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶೇಖರ  ನಾಯ್ಕ್ , ಪ್ರಾಯ  50 ವರ್ಷ ತಂದೆ: ದೂಮ  ನಾಯ್ಕ್ ವಾಸ:  ನಾರಲ್ಕೆ ಮನೆ, ಉರುವಾಲು  ಗ್ರಾಮ, ಬೆಳ್ತಂಗಡಿ ತಾಲೂಕು ರವರ ತಂದೆ ದೂಮ  ನಾಯ್ಕ್  (72)  ಬೆಳ್ತಂಗಡಿ  ತಾಲೂಕು ಶಿರ್ಲಾಲು ಗ್ರಾಮದ ಕುರೆವೂರು ಎಂಬಲ್ಲಿ  ವಾಸವಾಗಿದ್ದು, ದಿನಾಂಕ:  30-05-2022 ರಂದು  ಬೆಳಿಗ್ಗೆ 11:30 ಗಂಟೆಗೆ   ತಮ್ಮ  ಮನೆಯ  ಮಾಡಿಗೆ  ತಾಗುವ ಹಲಸಿನ  ಮರದ  ಗೆಲ್ಲು  ಕಡಿಯಲು  ಮರಕ್ಕೆ  ಹತ್ತಿ  ಗೆಲ್ಲು  ಕಡಿಯುವ  ಸಮಯ  ಆಕಸ್ಮಿಕವಾಗಿ  ಮರದಿಂದ ಬಿದ್ದು  ತಲೆಗೆ  ಗಾಯಗೊಂಡವರನ್ನು   ಚಿಕಿತ್ಸೆಯ  ಬಗ್ಗೆ   ಆಟೋರಿಕ್ಷಾದಲ್ಲಿ  ಆಳದಂಗಡಿ  ಡಾ| ತುಳುಪುಳೆ  ಎಂಬವರ  ಕ್ಲಿನಿಕ್  ಗೆ  ಕರೆತಂದು ಅಲ್ಲಿಂದ ಹೆಚ್ಚಿನ  ಚಿಕಿತ್ಸೆಯ  ಬಗ್ಗೆ ಬೆಳ್ತಂಗಡಿ  ಸರಕಾರಿ ಆಸ್ಪತ್ರೆಗೆ ಮದ್ಯಾಹ್ನ ಸುಮಾರು  1:50 ಗಂಟೆಗೆ  ಕರೆತಂದಾಗ  ಅಲ್ಲಿನ   ವೈದ್ಯರು  ಪರೀಕ್ಷಿಸಿ  ಮೃತ ಪಟ್ಟಿರುವುದಾಗಿ  ತಿಳಿಸಿರುವುದಾಗಿದೆ ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 14-2022 ಕಲಂ:174 ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತ್ತೀಚಿನ ನವೀಕರಣ​ : 31-05-2022 11:38 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080