ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸಂದೇಶ್ ಕುಮಾರ್ ಪ್ರಾಯ: 30 ವರ್ಷ ತಂದೆ: ಕೃಷ್ಣಪ್ಪ ಪೂಜಾರಿ ವಾಸ: ಬಜಲೋಡಿ ಮನೆ, ರಾಯಿ ಅಂಚೆ ಮತ್ತು ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ: 29-07-2021 ರಂದು ತನ್ನ ಮಾವ ರಮೇಶ್ ರವರನ್ನು KA-19-EE-5228  ನೇ  ಮೋಟರ್ ಸೈಕಲಿನಲ್ಲಿ ಸಹಸವಾರ ನಾಗಿ ಕುಳ್ಳಿರಿಸಿಕೊಂಡು ರಾಯಿ ಕಡೆಯಿಂದ ಬಂಡಸಾಲೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಬಂಟ್ವಾಳ ತಾಲೂಕು ಕೊಯಿಲ ಗ್ರಾಮದ ಕೊಯಿಲ ಮಾವಂತೂರು ಮಹಾಗಣಪತಿ ದೇವಸ್ಥಾನದ ಬಳಿ ತಲುಪಿದಾಗ ಬಂಟ್ವಾಳ ಕಡೆಯಿಂದ KA-09-MC-4751 ನೇ ಕಾರನ್ನು ಅದರ ಚಾಲಕ ಮಹಮ್ಮದ್ ಮುಬೀನ್ ರವರು ಅತೀ ವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ  ಸಹಸವಾರ ರಮೇಶ್ ರವರು ಮೋಟರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 70/2021  ಕಲಂ 279, 337, ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀಮತಿ ಸಫಿಯಾ ಪ್ರಾಯ: 62 ವರ್ಷ ಗಂಡ: ದಿ||  ಬಿ ಇಬ್ರಾಹಿಂ ವಾಸ: 3-40/1 ಉಪ್ಪುಗುಡ್ಡೆ ಮನೆ ನರಿಕೊಂಬು ಗ್ರಾಮ ಪಾಣೆಮಂಗಳೂರು ಅಂಚೆ  ಬಂಟ್ವಾಳ ತಾಲೂಕು ರವರು  ದಿನಾಂಕ: 28-07-2021 ರಂದು   ತನ್ನ  ಪರಿಚಯದ ಮೊಹಮ್ಮದ್ ಅನ್ಸಾರ್ ರವರ  ಬಾಬ್ತು KA 19 C 3757 ನೇ ಆಟೋರಿಕ್ಷಾದಲ್ಲಿ ಕುಳಿತುಕೊಂಡು ಗುಡ್ಡೆಯಂಗಡಿ ಕಡೆಯಿಂದ ತನ್ನ ಮನೆ ಕಡೆಗೆ  ಪ್ರಯಾಣಿಸುತ್ತಾ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ  ಆಲಡ್ಕ ಎಂಬಲ್ಲಿಗೆ ತಲುಪುತ್ತಿದ್ದಂತೆ ರಿಕ್ಷಾವನ್ನು ಚಾಲಕ ಮೊಹಮ್ಮದ್ ಅನ್ಸಾರ್ ರವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಆಟೋರಿಕ್ಷಾವು ಚಾಲಕನ ನಿಯಂತ್ರಣ ತಪ್ಪಿ  ರಸ್ತೆ ಬದಿಯಲ್ಲಿರುವ ಅಂಗಡಿ ಕಟ್ಟಡದ ಮೆಟ್ಟಿಲಿಗೆ ಡಿಕ್ಕಿ ಹೊಡೆದು  ಅಪಘಾತವಾಗಿದ್ದು . ಪಿರ್ಯಾದಿದಾರರು ರಿಕ್ಷಾದಿಂದ  ಹೊರಗೆ ಎಸೆಯಲ್ಪಟ್ಟು ಎಡಬದಿಯ ಸೊಂಟಕ್ಕೆ ಗಾಯವಾಗಿದ್ದು ಗಾಯಾಳು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ  ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 71/2021  ಕಲಂ 279, 337, ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಆಶಾ ಪ್ರಾಯ 39 ವರ್ಷ ಗಂಡ ಶಶಿಕುಮಾರ್‌ ಪಿಳ್ಳೆ, ವಾಸ: ಶಬರಿಗಿರಿ ಪಾರ್ಮ್ ಕಟ್ಟೆಚ್ಚಾರು, ಇಳಂತಿಲ ಗ್ರಾಮ  ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 15-04-2021 ರಂದು ಬೆಳ್ತಂಗಡಿ ತಾಲೂಕು  ಇಳಂತಿಲ ಗ್ರಾಮದ ಶಬರಿಗಿರಿ ಎಂಬಲ್ಲಿರುವ ಪಿರ್ಯಾದಿದಾರರ ಬಾಬ್ತು ರಬ್ಬರ್‌ ತೋಟದಲ್ಲಿನ  ಟ್ಯಾಪಿಂಗ್‌ ಗೆರಟೆಗಳನ್ನು ಸಂಗ್ರಹಿಸಲು  ಹೋದಾಗ  ಜಯಕುಮಾರ್‌ ಪೂಜಾರಿ ಎಂಬವರು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರನ್ನುದ್ದೇಶಿಸಿ ಅವ್ಯಾಚ್ಯವಾಗಿ ಬೈಯುತ್ತಾ ಪಿರ್ಯಾದಿದಾರರ ಕಡೆಗೆ ಕಲ್ಲನ್ನು ಎಸೆದು ಸದ್ರಿ ಕಲ್ಲು ಪಿರ್ಯಾದಿದಾರರ ಎಡಕಣ್ಣಿಗೆ ಬಿದ್ದು ಗಾಯವಾಗಿರುವುದಲ್ಲದೆ ಪಿರ್ಯಾದಿದಾರರನ್ನುದ್ದೇಶಿಸಿ  “ಇನ್ನು ಮುಂದಕ್ಕೆ ನಮ್ಮ ಜಾಗಕ್ಕೆ ಬಂದರೆ ಕಾಲು ಕಡಿಯುತ್ತೇನೆ“ ಎಂದು ಹೇಳಿ ಜೀವಬೆದರಿಕೆಯೊಡ್ಡಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 73/2021 ಕಲಂ: 447 504 324 506  ಭಾ.ದಂ.ಸಂ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ   ರಾಜನ್ ಜಿ  ತಂದೆ ಗೋಪಾಲಕೃಷ್ಣ ನಾಯರ್ ಪೆಟ್ರೋನೆಟ್ ಮಂ.ಹಾ.ಬೆಂ. ನಿಯಮಿತ ಮಂಗಳೂರು ರವರು ಎಂ ಹೆಚ್ ಬಿ ಲಿಮಿಟೆಡ್ ನ ಸ್ಟೇಷನ್ ಇನ್ ಚಾರ್ಜ್ ಆಫೀಸರ್ ಆಗಿದ್ದು ಭಾರತ ಸರಕಾರದ ಸ್ವಾಮ್ಯಕ್ಕೆ ಒಳಪಟ್ಟ ಆಯಿಲ್ ಮತ್ತು ನ್ಯಾಚುರಲ್ ಲಿಮಿಟಿಡ್  ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಮಾಲಿಕತ್ವದ ಸಾರ್ವಜನಿಕ ಸ್ವಾಮ್ಯಕ್ಕೆ ಒಳಪಟ್ಟ ಉದ್ಯಮವಾಗಿದ್ದು ಮಂಗಳೂರಿನಿಂದ ಬೆಂಗಳೂರುಗೆ  ಹಾಸನದ ಮೂಲಕ ಹಾದು ಹೋಗುವ ಕೊಳವೆ ಮಾರ್ಗವಾಗಿ ಕಾರ್ಯ ನಿರ್ವಹಿಸುತ್ತಿದೆ. ದಿನಾಂಕ 11.07.2021 ರಂದು ಬೆಳಿಗ್ಗೆ 7.00 ಗಂಟೆಯಿಂದ ದಿನಾಂಕ 30.07.2021 ರಂದು ಸಂಜೆ 5.00  ಗಂಟೆಯವರೆಗೆ ಪೆಟ್ರೋಲಿಯಂ ಹರಿವಿನಲ್ಲಿ ವ್ಯತ್ಯಾಸ ಕಂಡು ಬಂದಿದ್ದು  ಪೈಪ್ ಲೈನ್ ನಲ್ಲಿ ಕೋಟಿಂಗ್ ಡ್ಯಾಮ್ಯಾಜ್ ಆಗಿರಬಹುದು ಎಂದು ಪಿರ್ಯಾದುದಾರರು ಸರ್ವೆ ನಡೆಸಿದಾಗ ಸರ್ವೆ ಸಮಯ CH 23.5KM ಎಂಬಲ್ಲಿ ಹರಿವು ಸೋರಿಕೆ ಆಗುತ್ತಿರುವುದು ಕಂಡು ಬಂದಿದ್ದು ಸದ್ರಿ ಸ್ಥಳದಲ್ಲಿ ಭೂಮಿಯನ್ನು ಅಗೆದು ನೋಡಲಾಗಿ PMHBL ಪೈಪ್ ಲೈನ್ ಗೆ  1.5 ಇಂಚಿನ ಪೈಪ್ ಮತ್ತು ವಾಲ್ ಅಳವಡಿಸಿರುವ ಎಂಎಸ್ ಪ್ಲೇಟನ್ನು  ವೆಲ್ಡ್ ಮಾಡಿ 55 ಮೀ ಉದ್ದದ  ಪ್ಲೆಕ್ಷಿಬಲ್ ಪೈಪನ್ನು  ಅಳವಡಿಸಿ  1.5 ಇಂಚು ವ್ಯಾಸ ಹೊಂದಿರುವ 3 ವಾಲ್ ಗಳನ್ನು ಅಳವಡಿಸಿದ  ಪೆಟ್ರೋಲಿಂ ಉತ್ಪನ್ನವನ್ನು ಕಳವು ಮಾಡುತ್ತಿರುವುದು  ಕಂಡು ಬಂದಿದ್ದು ಸದ್ರಿ ಪೈಪ್ ನ್ನು ಅಳವಡಿಸಿರುವ ಜಾಗವು ಐವನ್ ಎಂಬುವರಿಗೆ ಸೇರಿದ  ಜಾಗವಾಗಿದ್ದು ಸದ್ರಿ ಕೃತ್ಯದಲ್ಲಿ ಐವನ್ ರವರು ಭಾಗಿಯಾಗಿರುವುದು ಅನುಮಾನವಿರುತ್ತದೆ. ಅಲ್ಲದೆ ಹಾನಿಯಾಗಿರುವ ಪೈಪ್ ಲೈನ್ ಮೊತ್ತ 90,000/- ರೂ  ಆಗಿದ್ದು ಪೈಪ್ ಲೈನ್ ನಿಂದ ಕಳ್ಳತನ ಆಗಿರುವ ಪೆಟ್ಟ್ರೋಲಿಯಂ ಉತ್ಪನ್ನವನ್ನು ಇನ್ನಷ್ಟೆ ವಿಶ್ಲೇಷಣೆ ಮಾಡಬೇಕಾಗಿದ್ದು  ಕಳ್ಳತನ ಆಗಿರುವ ಪೆಟ್ರೋಲಿಯಂ ಉತ್ಪನ್ನದ ಪ್ರಮಾಣ ಮತ್ತು ಮೊತ್ತವನ್ನು ಮುಂದಿನ ಹಂತದಲ್ಲಿ ಒದಗಿಸುತ್ತೇವೆ ಎಂದು ಪಿರ್ಯಾದುದಾರರು ತಿಳಿಸಿರುತ್ತಾರೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 86 ಕಲಂ   427, 285 and 379   ಐಪಿಸಿ  Petroleum & Minerals Pipeline Act, 1962 and Amendment Act, 2011- Sec 15(2).ಮತ್ತು  Prevention of Damage to Public Property Act, 1984- Sec 3(2)  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಂಗಸ್ವಾಮಿ, (55) ತಂದೆ: ರಾಮಸ್ವಾಮಿ, ವಾಸ: ನಿಡುಬೆ, ಸಿಆರ್ ಸಿ ಕಾಲೋನಿ, ಐರ್ವನಾಡು ಗ್ರಾಮ, ಸುಳ್ಯ ತಾಲೂಕು  ರವರ ಅಣ್ಣನ ಮಗ ಉಮೇಶ ಜಿ (31) ಎಂಬಾತನು ದಿನಾಂಕ 25.07.2021 ರಂದು ಸಮಯ ಸುಮಾರು 17.00 ಗಂಟೆಗೆ ತಾವು ವಾಸವಾಗಿರುವ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಅಂಬೇಟಡ್ಕ ಎಂಬಲ್ಲಿರುವ ಕೆಎಫ್ ಡಿಸಿ ಕ್ವಾಟ್ರಸ್ ನಲ್ಲಿ ಕೌಟುಂಬಿಕ ಹಿನ್ನೆಯ ಕಾರಣದಿಂದ ಮನನೊಂದು ಯಾವುದೋ ವಿಷಪದಾರ್ಥವನ್ನು ಸೇವಿಸಿದವನನ್ನು ಚಿಕಿತ್ಸೆಯ ಬಗ್ಗೆ  ಆತನ ಹೆಂಡತಿ ಭಾಗೀರಥಿ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ  ಎ,ಜೆ ಆಸ್ಪತ್ರೆಗೆ ದಾಖಲಿಸಿ, ದಿನಾಂಕ 27.07.2021 ರಂದು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ, ತದನಂತರ ದಿನಾಂಕ 28.07.2021 ರಂದು ಬೆಂಗಳೂರಿನ ಎಸ್ಟೇರ್ ಆರ್ ವಿ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು, ದಿನಾಂಕ 30.07.2021 ರಂದು 10:50 ಗಂಟೆಗೆ ಉಮೇಶ್ ನು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ. UDR No 31/2021 Sec: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹೇಶ್ , ಪ್ರಾಯ: 35 ವರ್ಷ,  ,ತಂದೆ: ರಾಘವ ಗೌಡ   ವಾಸ: ಮೆತ್ತಡ್ಕ ಮನೆ ,ದೇವಚಳ್ಳ ಗ್ರಾಮ ಸುಳ್ಯ ತಾಲೂಕು ರವರು ತಮ್ಮ ಸಂಸಾರದೊಂದಿಗೆ ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಮೆತ್ತಡ್ಕ ಮನೆ ಎಂಬಲ್ಲಿ ವಾಸವಾಗಿದ್ದು, ದಿನಾಂಕ: 22-07-2021 ರಂದು ಮನೆಯಲ್ಲಿ ಎಲ್ಲರೂ ರಾತ್ರಿ ಊಟ ಮಾಡಿ ಮಲಗಿದ್ದು, ದಿನಾಂಕ: 23-07-2021 ರಂದು ಬೆಳಿಗ್ಗೆ 5:00 ಗಂಟೆಗೆ ಎದ್ದು ನೋಡಿದಾಗ ಪಿರ್ಯಾದಿದಾರರ ತಾಯಿ ವೀರಮ್ಮ, ಪ್ರಾಯ: 64 ವರ್ಷ ಎಂಬವರು ಮಲಗಿದಲ್ಲೇ ಇದ್ದು ಉಸಿರಾಡಲು ಕಷ್ಟವಾಗಿದ್ದರಿಂದ ಅವರನ್ನು ಕೂಡಲೇ ಪಿರ್ಯಾದಿದಾರರು ಮತ್ತು ಅವರ ಅಣ್ಣ ಹಾಗೂ ಅವರ ತಂದೆಯವರು ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಹೋಗುವಂತೆ ತಿಳಿಸಿದ ಮೇರೆಗೆ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಪಿರ್ಯಾದದಾರರ ತಾಯಿ ವೀರಮ್ಮರವರು ಯಾವುದೋ ಎಸಿಡ್ ಮಾದರಿಯ ವಿಷ ಸೇವಿಸಿರುವುದಾಗಿ ತಿಳಿಸಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಬಗ್ಗೆ ಇಡಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 30-07-2021 ರಂದು ಬೆಳಿಗ್ಗೆ 7:30 ಗಂಟೆಗೆ ಮೃತಪಟ್ಟಿರುತ್ತಾರೆ. ಮೃತ ವೀರಮ್ಮರವರಿಗೆ ವಿಷ ಜಂತು ಕಚ್ಚಿದ ಬಳಿಕ ಕೆಲಸ ಮಾಡುವರೇ ಆಗದಿದ್ದುದರಿಂದ ಇದೇ ವಿಷಯದಲ್ಲಿ ಬೇಸರದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ತಂದಿರಿಸಿದ್ದ ರಬ್ಬರ್ ಹಾಲಿಗೆ ಬೆರಸುವ ಆ್ಯಸಿಡ್ ಅಥವಾ ಕೃಷಿಗೆ ಸಿಂಪಡಿಸಲು ತಂದಿರಿಸಿದ್ದ ವಿಷವನ್ನು ಸೇವಿಸಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ ಈ ಬಗ್ಗೆ. ಸುಬ್ರಹ್ಮಣ್ಯ ಪೊಲೀಸ್‌ ಠಾಣಾ ಯು.ಡಿ.ಆರ್ : 11-2021 ಕಲಂ: 174 ಸಿಆರ್ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 31-07-2021 04:51 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080