ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಾಜು (49) ವರ್ಷ. ತಂದೆ: ದಿ|| ಜೋಗಿ ವಾಸ: ಮದ್ವ ದರ್ಖಾಸು ಮನೆ, ಕಾವಳಪಡೂರು ಗ್ರಾಮ, ಕಾರಿಂಜ ಬಂಟ್ವಾಳ ರವರು 28-07-2022 ರಂದು ಅಗತ್ಯ ಕೆಲಸದ ನಿಮಿತ್ತ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಮಧ್ವ ಎಂಬಲ್ಲಿಗೆ ತಲುಪಿ ಮನೆಗೆ ಹೋಗುವರೇ ಮಂಗಳೂರು-ಕಡೂರು ಸಾರ್ವಜನಿಕ ಡಾಮಾರು ರಸ್ತೆ ದಾಟುತ್ತಿದ್ದ ಸಮಯ ಬಿ.ಸಿರೋಡ್ ಕಡೆಯಿಂದ KA-70-J-0605 ನೇ ಮೋಟಾರ್ ಸೈಕಲನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟು ಮೋಟಾರ್ ಸೈಕಲ್ ಸವಾರರು ಕೂಡಾ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದರು. ಪರಿಣಾಮ ಪಿರ್ಯಾದಿದಾರರ ಎಡಕೋಲು ಕಾಲಿಗೆ ರಕ್ತಗಾಯ, ಬಲಭಾಗ ಸೊಂಟಕ್ಕೆ ಗುದ್ದಿದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 82/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಜಗನ್ನಾಥ ರೈ (48) ತಂದೆ:ದಿ|| ನಾರಾಯಣ ರೈ ವಾಸ:ನೆಕ್ಕಿತಡ್ಕ್ ಮನೆ 102ನೇ ನೆಕ್ಕಿಲಾಡಿ ಗ್ರಾಮ ಕಡಬ ತಾಲೂಕು ರವರು ದಿನಾಂಕ: 28-07-2022 ರಂದು ಮನೆಯಿಂದ ಬಾಡಿಗೆ ನೆಲೆಯಲ್ಲಿ ಗುಂಡ್ಯಕ್ಕೆ ಹೋಗಿದ್ದು, ಮೋಟಾರು ಸೈಕಲ್ ನಂ: ಕೆ.ಎ-21-ಇಎ-0351 ನೇದರಲ್ಲಿ ಕರ್ತವ್ಯದ ನಿಮಿತ್ತ ಸಕಲೇಶಪುರ ಕಡೆಗೆ ಹೋಗುತ್ತಿದ್ದಂತೆ  ಕಡಬ ತಾಲೂಕು, ಶಿರಾಡಿ ಗ್ರಾಮದ ಗುಂಡ್ಯ ಪೇಟೆಗೆ ತಲುಪುತ್ತಿದ್ದಂತೆ ಕಾರು ನಂಬ್ರ: ಕೆ.ಎ-02 ಎಂ.ಎಂ-3322 ನೇ ಕಾರನ್ನು ಅದರ ಚಾಲಕನು ರಸ್ತೆಯಲ್ಲಿ ನಿಲ್ಲಿಸಿ ನಿರ್ಲಕ್ಷತನ ಹಾಗೂ ಅಜಾಗರುಕತೆಯಿಂದ ಹಿಂದುಗಡೆಯಿಂದ ಬರುವ ಯಾವುದೇ ವಾಹನವನ್ನು ಲೆಕ್ಕಿಸದೇ ಏಕಾಏಕಿಯಾಗಿ ಯಾವುದೇ ಮುನ್ಸೂಚನೆ ನೀಡದೇ  ಕಾರಿನ ಡೋರನ್ನು  ತರೆದ ಪರಿಣಾಮ ಮೋಟಾರು ವಾಹನ ಸವಾರನು ಕಾರಿನ ಡೋರಿಗೆ  ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದಿರುತ್ತಾರೆ. ಗಾಯಾಳನ್ನು  ಉಪಚರಿಸಿ ಬಳಿಕ ಚಿಕಿತ್ಸೆಯ ಬಗ್ಗೆ 108 ಆಂಬ್ಯುಲೆನ್ಸ್ ನಲ್ಲಿ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೇಲ್ದರ್ಜೆಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಕೂಡಲೇ ಖಾಸಗಿ ವಾಹನದಲ್ಲಿ ಪುತ್ತೂರು ಹಿತ ಆಸ್ಪತ್ರೆಗೆ ಕರದುಕೊಂಡು ಹೋದಲ್ಲಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 82/2022 ಕಲಂ: 279,337  ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶರಣಪ್ಪ ಭಂಗಿ (30) ತಂದೆ: ದೇವೆಂದ್ರಪ್ಪ ವಾಸ: ಅಡರಗಟ್ಟಿ ಗ್ರಾಮ, ಶಿರಹಟ್ಟಿ ತಾಲೂಕು, ಗದಗ ಜಿಲ್ಲೆ ರವರು ದಿನಾಂಕ 29.07.2022 ರಂದು ಕೆಎ 21 ಎಕ್ಸ್ 6189 ನೇ ಬೈಕ್ ನ್ನು ಪಿರ್ಯಾದುದಾರರು ಸವಾರಿ ಮಾಡುತ್ತಾ ಸಹ ಸವಾರ ಹಮೀದ್ ಎಂಬಾತನನ್ನು ಕುಳ್ಳಿರಿಸಿಕೊಂಡು ಕೆಲಸದ ನಿಮಿತ್ತ ಸುಳ್ಯದ ಪೈಚಾರಿನಿಂದ ಸುಬ್ರಹ್ಮಣ್ಯಕ್ಕೆ ಹೋಗುತ್ತಿರುವರೇ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಕಂದಡ್ಕ ಸೇತುವೆ ಬಳಿಯಲ್ಲಿ ತಲುಪುತ್ತಿದಂತೆ ಎದುರಿನಿಂದ ಅಂದರೆ ಸುಬ್ರಹ್ಮಣ್ಯ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಅಶೋಕ ಲೈಲ್ಯಾಂಡ್ ಪಿಕಪ್ ಕೆಎ 13 ಡಿ 0956 ನೇದರ ಚಾಲಕ ವೆಂಕಟೇಶ್ ಎಂಬಾತನು  ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಆತನ ತೀರಾ ಬಲಬದಿಗೆ ಪಿಕಪ್ ನ್ನು ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ಸಹ ಸವಾರ  ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಸಹ ಸವಾರನಿಗೆ ಯಾವುದೇ ಗಾಯವಾಗಿರದೇ, ಪಿರ್ಯಾದುದಾರರಿಗೆ ಬಲಕೈ ಮೊನಗಂಟಿಗೆ, ಬಲಕೈ ಭುಜಕ್ಕೆ, ಬಲಕಾಲಿಗೆ ರಕ್ತಗಾಯ ಮತ್ತು ಶರೀರದ ಇತರ ಭಾಗಗಳಿಗೆ ತರಚಿದ ಗಾಯವಾಗಿದ್ದವನನ್ನು, ಅಲೇ ಇದ್ದ ಸ್ಥಳಿಯರು ಉಪಚರಿಸಿ ಆಟೋ ರಿಕ್ಷಾವೊಂದರಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ , ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 87/2022 ಕಲಂ: 279.337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚೇತನ್ ಪ್ರಾಯ 18 ವರ್ಷ,  ತಂದೆ: ವಿಶ್ವನಾಥ ಗುಂಡಡ್ಕ ಮನೆ, ನಾಲ್ಕೂರು ಗ್ರಾಮ, ಸುಳ್ಯ ತಾಲೂಕು ರವರು ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಪದವೀ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಯಲ್ಲಿ ಕಲಿಯುತ್ತಿದ್ದು, ದಿನಾಂಕ 30-07-2022 ರಂದು ಅವರ ತಮ್ಮಂದಿರರಾದ ಸವಿನ್, ಪ್ರಾಯ:17 ವರ್ಷ ಮತ್ತು ರಚನ್ ಪ್ರಾಯ: 15 ವರ್ಷ ಹಾಗೂ ನೆರೆ ಮನೆಯವನಾದ ಯತೀನ್ ಕಾಲೇಜಿನಲ್ಲಿ ಕಬಡ್ಡಿ ತರಬೇತಿ ಮುಗಿಸಿಕೊಂಡು ಮನೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ಗುತ್ತಿಗಾರು ಗ್ರಾಮದ ಚಿಲ್ತಡ್ಕ ಎಂಬಲ್ಲಿ ಗೆ ಸಂಜೆ 04-00 ಗಂಟೆಗೆ  ತಲುಪಿದಾಗ ಎದುರುಗಡೆಯಿಂದ ಅಂದರೆ ನಡುಗಲ್ಲು ಕಡೆಯಿಂದ ಒಂದು ಕಾರನ್ನು ಅದರ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಜೊತೆಯಲ್ಲಿದ್ದ ಅವರ ತಮ್ಮಂದಿರರಾದ ಸವಿನ್ ಮತ್ತು ರಚನ್ ಗೆ ಡಿಕ್ಕಿ ಹೊಡೆದಿದ್ದು, ಆಗ ಪಿರ್ಯಾದಿದಾರರ ತಮ್ಮಂದಿರು ರಸ್ತೆಗೆ ಬಿದ್ದ ಪರಿಣಾಮ ಸವಿನ್ ಗೆ  ಹಣೆಯ ಮುಂಭಾಗ  ಮತ್ತು ಗಲ್ಲಕ್ಕೆ ಹಾಗೂ ರಚನ್ ಗೆ  ತಲೆಯ ಮುಂಭಾಗ  ಹಾಗೂ  ಬಲ ಗಡೆ ಬಾಯಿಯ ಬಳಿ  ರಕ್ತ ಗಾಯವಾಗಿದ್ದು, ಆ ಸಮಯ ಪಿರ್ಯಾದಿದಾರರು,  ಹತ್ತಿರದ ಮನೆಯ ಸುದೀರ್ ಹಾಗೂ ಯತೀನ್ ಸೇರಿ ಅವರನ್ನು ಉಪಚರಿಸಿ, ಅಪಘಾತಪಡಿಸಿದ ಕಾರಿನ ನಂಬ್ರ ನೋಡಲಾಗಿ ಕೆಎಲ್ 12 ಡಿ 9510 ನೇ ಮಾರುತಿ ಕಾರು ಎಂಬುದಾಗಿ ಕಂಡು ಬಂದಿರುತ್ತದೆ.  ಈ ಬಗ್ಗೆ  ಸುಬ್ರಹ್ಮಣ್ಯ ಪೊಲೀಸ್‌ ಠಾಣಾ ಅ.ಕ್ರ   ನಂಬ್ರ  : 78/2022 ಕಲಂ  279, 337, 338 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಾಘವೇಂದ್ರ ಭಟ್ ಪ್ರಾಯ:60 ವರ್ಷ ತಂದೆ; ದಿ/ ಅನಂತ ಭಟ್ ವಾಸ: ಮುಂಡೂರು ಶ್ರಿದುರ್ಗಾ ಪರಮೇಶ್ವರಿ ದೇವಸ್ಥಾನದ ಬಳಿ ಮನೆ ಮೇಲಂತಬೆಟ್ಟು ಅಂಚೆಮುಂಡೂರು ಗ್ರಾಮ ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ಬೆಳ್ತಂಗಡಿ ತಾಲೂಕು ಮುಂಡೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದಿನಾಂಕ;29-07-2022 ರಂದು ರಾತ್ರಿ ಸುಮಾರು 9.30 ಗಂಟೆಯಿಂದ ದಿನಾಂಕ:30-07-2022 ರಂದು ಬೆಳಿಗ್ಗೆ ಸುಮಾರು 6.30 ಗಂಟೆಯ ಮದ್ಯಾವಧಿಯಲ್ಲಿ  ಯಾರೋ ಕಳ್ಳರು ದೇವಸ್ಥಾನದ ಗರ್ಭಗುಡಿಯ ಬೀಗ ಒಡೆದು  ಒಳ ಪ್ರವೇಶಿಸಿ ಅಲಂಕಾರ ದೇವಿಯ 1) ಸುಮಾರು 24 ಗ್ರಾಂ ತೂಕದ  ಚಿನ್ನದ ದೃಷ್ಠಿ -1   ಅಂದಾಜು ಮೌಲ್ಯ  ರೂ 96,000  2) ಚಿನ್ನದ ತಾಳಿ ಇರುವ ಬೆಳ್ಳಿಯ ಕರಿಮಣಿ ಸರ -2 ಅಂದಾಜು ಮೌಲ್ಯ 22 ,000 3) ಬೆಳ್ಳಿಯ ವಿಗ್ರಹ ಕವಚ-1 ಅಂದಾಜು ಮೌಲ್ಯ 157,000  4) ಮದ್ಯದಲ್ಲಿ ಕೆಂಪು ಕಲ್ಲು  ಇರುವ ಬೆಳ್ಳಿಯ ಕಿರೀಟ –1  ಅಂದಾಜು ಮೌಲ್ಯ 45,000 5)  ಬೆಳ್ಳಿಯ ಕವಚ  ಇರುವ ಶಂಖ -1 ಅಂದಾಜು ಮೌಲ್ಯ 8,000 ಸಾವಿರ  ಹಾಗೂ ಒಟ್ಟು ಮೌಲ್ಯ ಸುಮಾರು 328,000/- ರೂ ಆಗಬಹುದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್  ಠಾಣೆ 50-2022 ಕಲಂ;457,380 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅನ್ನಮ್ಮ ಪ್ರಾನ್ಸಿಸ್ (57) ಗಂಡ- ಪ್ರಾನ್ಸಿಸ್ ವಿಳಾಸ- ಮಿಯಲಾಜೆ ಮನೆ, ಬಜಿರೆ ಗ್ರಾಮ ಬೆಳ್ತಂಗಡಿ ತಾಲೂಕು ರವರು ಮತ್ತು ನರೆಮನೆಯ ಜಲಜ ಎಂಬವರಿಗೂ ಜಮೀನು ವಿಚಾರದಲ್ಲಿ ತಕರಾರು ಇದ್ದು  ದಿನಾಂಕ 28.07.2022 ರಂದು ಪಿರ್ಯಾದಿದಾರರು ಅವರಿಗೆ ಸೇರಿದ ರಬ್ಬರ್ ತೋಟದಲ್ಲಿದ್ದ ಪೊದರುಗಳನ್ನು ಕಡಿಯುತ್ತಿದ್ದ ಸಮಯ ನೆರೆಮನೆಯ  ಜಲಜ ಮತ್ತು ಅವಳ ಸೊಸೆ ಶೋಭಾರವರು ಬಂದು ಅಲ್ಲೇ ಸ್ವಲ್ಪ ದೂರದಲ್ಲಿ ನಿಂತುಕೊಂಡು ನಮಗೆ  ಸೇರಿದ ಜಮೀನಿನ ಪೊದರನ್ನು ನೀನು ಯಾಕೆ ಕಡಿಯುತ್ತಿದ್ದಿ ಎಂದು ಹೇಳಿ ಇಬ್ಬರು ಅಲ್ಲೇ ಇದ್ದ ತುಂಡು ಕಲ್ಲನ್ನು ತೆಗೆದು ಬಿಸಾಡಿದ್ದು ಅದು ಪಿರ್ಯಾದಿದಾರರ  ತಲೆಗೆ ಬಿದ್ದು  ರಕ್ತಗಾಯವಾಗಿದ್ದು ಪಿರ್ಯಾದಿದಾರರಿಗೆ ಅವರ ಮಗ ರಾಜುರವರು ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಯನ್ನು ಕೊಡಿಸಿ ದೂರು ನೀಡಿರುವುದಾಗಿದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ:46-2022 ಕಲಂ:504, ,324  ಜೊತೆಗೆ 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 3

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹನುಮಂತ ಪ್ರಾಯ 35 ವರ್ಷ ತಂದೆ: ದಿ. ರಾಮಪ್ಪ ವಾಸ: ಕೊದ್ದಿಲ್ ನೀಮಗಾಪೂರ ತಾಲೂಕು ಕುಕುನೂರು ಕೊಪ್ಪಳ ರವರ ಅಣ್ಣನ ಮಗನಾದ ಹನುಮಂತಪ್ಪ ಬಿ ಮೂಡ ಗ್ರಾಮದ ಬಿ ಸಿ ರೋಡಿನಲ್ಲಿ ಸಮೀರ ಜೊತೆ ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 27-07-2022 ರಂದು ಸಂಜೆ 6.30 ಗಂಟೆಗೆ ಸಮೀರ ಎಂಬುವನು ಫಿರ್ಯಾದಿದಾರರಿಗೆ ಕರೆ ಮಾಡಿ ಹನುಮಂತನಿಗೆ ಜ್ವರವಿದ್ದು ಆಸ್ವತ್ರೆಗೆ ದಾಖಲಿಸಿದ್ದಾಗಿ ತಿಳಿಸಿದಂತೆ ಪಿರ್ಯಾಧಿದಾರರು ಮಂಗಳೂರಿಗೆ ಬರುತ್ತಿರುವ ಸಮಯ ರಾತ್ರಿ 11.00 ಗಂಟೆಗೆ ಸಮೀರನು ಕರೆ ಮಾಡಿ  ಹನುಮಂತ ಕೊಡ್ಲಿ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ವತ್ರಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿರುವುದಾಗಿ ತಿಳಿಸಿದ್ದು, ಪಿರ್ಯಾಧಿದಾರರು ಆಸ್ವತ್ರೆಗೆ ಹೋಗಿ ಮೃತದೇಹವನ್ನು ನೋಡಿದ್ದು, ಹನುಮಂತ ಕೊಡ್ಲಿಯು ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಖಾಸಗಿ ವೈಧ್ಯರ ಬಳಿ ಔಷದಿಯನ್ನು ಪಡೆದುಕೊಂಡು ಪಲ್ಲಮಜಲು ಬಿಡಾರದಲ್ಲಿ ವಿಶ್ರಾಂತಿಯಲಿದ್ದು, ಸಂಜೆಯ ವೇಳೆ ಜ್ವರ ಉಲ್ಬಣಗೊಂಡು ಬಂಟ್ವಾಳ ಸರಕಾರಿ ಆಸ್ವತ್ರೆಗೆ ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ವತ್ರಯಲ್ಲಿ ದಾಖಲಿಸಿದ್ದು ದಿನಾಂಕ 27-07-2022 ರಂದು ರಾತ್ರಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 31/2022 ಕಲಂ: 174 ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಭವಿತ್  ಪ್ರಾಯ:20 ವರ್ಷ ತಂದೆ: ಸುಂದರೆ ಗೌಡ, ವಾಸ: ಗೋಳಿದಡಿ ಮನೆ, ಬೆದ್ರಬೆಟ್ಟು, ಇಂದಬೆಟ್ಟು  ಗ್ರಾಮ, ಬೆಳ್ತಂಗಡಿ ತಾಲೂಕು ರವರ ತಂದೆಯವರು ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ:27.07.2022 ರಂದು ತನ್ನ ಕೆಲಸಕ್ಕೆ ರಜೆ ಹಾಕಿ ಮನೆಯಲ್ಲಿದ್ದವರು ಬೆಳಿಗ್ಗೆ 8.30 ಗಂಟೆಗೆ ಬೆದ್ರಬೆಟ್ಟುವಿಗೆ ಹೋಗಿ ಸಾಮಾನು ತರುತ್ತೇನೆಂದು ಹೇಳಿ ಹೋದವರು ಸಂಜೆ 6.00 ಗಂಟೆಯವರೆಗೂ ಮನೆಗ ಬಾರದೇ ಇದ್ದು ಈ ಬಗ್ಗೆ ಅವರನ್ನು ಹುಡುಕಾಡಲಾಗಿ ಅವರು ಬೆದ್ರಬೆಟ್ಟುವಿನ ಸಣ್ಣ ನದಿಯಲ್ಲಿ ಬಿದ್ದುಕೊಂಡಿದ್ದವರನ್ನು ಮೇಲಕ್ಕೆ ಎತ್ತಿ ಉಪಚರಿಸಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಠಾಣಾ ಯುಡಿಆರ್ ನಂ:  32/2022   ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಲಕ್ಷ್ಮೀಶ್  ಕಾಮತ್  (38)ತಂದೆ: ಸದಾನಂದ ಕಾಮತ್ ವಾಸ: ಕಾನದ ಕೋಡಿ  ಮನೆ , ಮೂಡುಪೆರಾರ್ ಗ್ರಾಮ ಮತ್ತು ಅಂಚೆ, ಮಂಗಳೂರು  ತಾಲೂಕು ರವರು ಹಾಗೂ ಅವರ ತಮ್ಮ , ಅಕ್ಕ, ಶರ್ಮಿಳಾ ರವರು ತಂದೆ ತಾಯಿಯವರಿಗೆ 3 ಜನ ಮಕ್ಕಳಿದ್ದು ಸುಮಾರು 8 ವರ್ಷಗಳಿಂದ ಪಿರ್ಯಾದಿದಾರರ ತಂದೆ ಮುಂಡಾಜೆ ಗ್ರಾಮದ ನಿಡಿಗಲ್ ಎಂಬಲ್ಲಿ ವಾಸವಿದ್ದು ಪಿರ್ಯಾದಿದಾರರು ಅವರು  ತಮ್ಮ ಹಾಗೂ ತಾಯಿಯೊಂದಿಗೆ  ಮಂಗಳೂರು ತಾಲೂಕಿನ ಕಾನದ ಕೋಡಿ  ಎಂಬಲ್ಲಿ ವಾಸವಿರುವುದಾಗಿದೆ.  ಸದಾನಂದ ಕಾಮತ್ ರವರು ಸುಮಾರು 5 ವರ್ಷಗಳಿಂದ ಹೃದಯ ಸಂಬಂದಿ ಖಾಯಿಲೆ , ಬಿಪಿ , ಶುಗರ್ ಮತ್ತು ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದು ತನ್ನ ಮಕ್ಖಳಿದ್ದಲ್ಲಿಗೆ ಯಾವಾಗಲಾದರೂ  ಒಮ್ಮೆ ಹೋಗಿ ಬರುತ್ತಿದ್ದು ಪಿರ್ಯಾದಿದಾರರ ತಾಯಿ ಸಹ ಮುಂಡಾಜೆ ನಿಡಿಗಲ್ಲಿಗೆ ಬಂದು ಹೋಗುತ್ತಿದ್ದು  ದಿನಾಂಕ:30-07-2022 ರಂದು ಪಿರ್ಯಾದಿದಾರರ ಚಿಕ್ಕಪ್ಪ ರಮೇಶ್ ಕಾಮತ್ ರವರು   ಮೊಬೈಲ್ ಗೆ ಕರೆ ಮಾಡಿ ನಿನ್ನ ತಂದೆಯವರು ಕಾಣಿಸುತ್ತಿಲ್ಲ ಎಂದು ತಿಳಿಸಿದಂತೆ ಪಿರ್ಯಾದಿ ಅವರ ತಮ್ಮ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ನಿಡಿಗಲ್ ಎಂಬಲ್ಲಿರುವ ತಂದೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲುಗಳನ್ನು ಒಳಗಡೆಯಿಂದ ಚಿಲಕ ಹಾಕಿದ್ದರಿಂದ ಕಿಟಕಿಯಲ್ಲಿ ನೋಡಿದಾಗ ಎದುರಿನ ಹಾಲ್ ನಲ್ಲಿ ಪಿರ್ಯಾದಿದಾರರ ತಂದೆ  ಕವುಚಿ ಬಿದ್ದುಕೊಂಡಿರುವುದನ್ನು ಕಂಡು ಸಂಬಂದಿಕರ ಸಹಾಯದಿಂದ ಹಿಂಬದಿ ಬಾಗಿಲನ್ನು ಮೀಟಿ ಒಳಗಡೆಯ ಚಿಲಕವನ್ನು ಜಾರಿಸಿ ಒಳಗಡೆ ಹೋಗಿ ನೋಡಲಾಗಿ ಪಿರ್ಯಾದಿದಾರರ ತಂದೆ ಕುರ್ಚಿಯಲ್ಲಿ ಕುಳಿತವರು ನೆಲಕ್ಕೆ ಬಿದ್ದು ಮುಖವು  ನೆಲಕ್ಕೆ ಬಡಿದು ರಕ್ತ ಬಂದು 2 ದಿವಸಗಳ ಹಿಂದೆ ಮೃತಪಟ್ಟಂತೆ ಕಂಡುಬಂದಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಯು ಡಿ ಆರ್ 43/2022 ಕಲಂ: 174 ಸಿಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 31-07-2022 11:59 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080