ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಆಸಿಫ್‌, ಪ್ರಾಯ 23 ವರ್ಷ, ತಂದೆ: ಇಸ್ಮಾಯಿಲ್‌, ವಾಸ:  ಅಲ್ಫೀಯಾ ಮಂಝಿಲ್‌ ಬಳಿ, ಓಲ್ಡ್‌ ಮಾರ್ಕೆಟ್‌ ರಸ್ತೆ, ಆನಂದಪುರ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ. ರವರು ನೀಡಿದ ದೂರಿನಂತೆ ದಿನಾಂಕ 30-08-2021 ರಂದು ಆರೋಪಿ ಪಿಕಪ್ ಚಾಲಕ ಅಹ್ಮದ್ ಜಾಬೀರ್ ಎಂಬವರು KA-70-1027 ನೇ ನೋಂದಣಿ ನಂಬ್ರದ ಪಿಕಪ್ ವಾಹನವನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಇಳಿಜಾರು ರಸ್ತೆಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ಪೂರ್ತಿ ರಾಂಗ್ ಸೈಡ್ಗೆ ಚಲಾಯಿಸಿದ ಪರಿಣಾಮ, ಸದ್ರಿ ಸ್ಥಳದಲ್ಲಿ ಪಿರ್ಯಾದುದಾರರು ಚಾಲಕರಾಗಿದ್ದ KA-51-AB-2933 ನೇ ನೋಂದಣಿ ನಂಬ್ರದ ಲಾರಿಯು ಕೆಟ್ಟು ಹೋಗಿ, ಹೆದ್ದಾರಿ ಬದಿಯಲ್ಲಿ ನಿಲ್ಲಿಸಿರುವುದನ್ನು ಮೆಕ್ಯಾನಿಕ್‌ ಗಳಾದ ಮಹಮ್ಮದ್ ಅಫ್ಜಲ್ ಮತ್ತು ರಹಮಾನ್ ಹಾಗೂ ಅವರ ಜೊತೆಯಲ್ಲಿದ್ದ ಮಧುಸೂದನ್ ಎಂಬವರು ಪಿರ್ಯಾದುದಾರರೊಂದಿಗೆ ದುರಸ್ಥಿ ಮಾಡುತ್ತಿದ್ದ ಸಂದರ್ಭದಲ್ಲಿ ಮಹಮ್ಮದ್ ಅಫ್ಜಲ್, ರಹಮಾನ್, ಮಧುಸೂದನ್ ಮತ್ತು ಲಾರಿಗೆ ಪಿಕಪ್ ವಾಹನವು ಬಲವಾಗಿ ಅಪಘಾತವಾಗಿ ರಹಮಾನ್, ಮಧುಸೂದನ್ ರವರು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತ ಹೊಂದಿರುತ್ತಾರೆ. ಗಂಭೀರ ಗಾಯಗೊಂಡ ಮಹಮ್ಮದ್ ಅಫ್ಜಲ್ ರವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಗೆ ತಲುಪಿದಾಗ ಮೃತ ಹೊಂದಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  108/2021 ಕಲಂ: 279,304 (ಎ)  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಗಂಗಪ್ಪ ರಾಮು ತಿಗಣಿ ಪ್ರಾಯ 56,ತಂದೆ: ರಾಮು, ವಾಸ: ಕುಂಬಾರಗುತ್ತಿ ಮನೆ, ಹನುಮಾಪುರ ಅಂಚೆ,ಅಥಣಿ ತಾಲೂಕು ಬೆಳಗಾಂ ಜಿಲ್ಲೆ. ರವರು ದಿನಾಂಕ: 30-08-2021 ರಂದು ತನ್ನ ಬಾಬ್ತು ಕೆಎ 23 ಎಮ್‌ 7662ನೇ ಕಾರಿನಲ್ಲಿ ಕಾರು ಚಾಲಕ ಸಂಜಯ್‌ ಎಂಬುವರೋಂದಿಗೆ ಉಜಿರೆ-ಗುರುವಾಯನಕೆರೆ ರಸ್ತೆಯಲ್ಲಿ ಪ್ರಯಾಣಿಸುತ್ತಾ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಮೂರು ಮಾರ್ಗ ಜಂಕ್ಷನ್‌ ಬಳಿ ತಲುಪುತಿದ್ದಂತೆ  ಪಿರಯಾದಿದಾರರ ಎದುರಿನಿಂದ  ಅಂದರೆ ಗುರುವಾಯನ ಕೆರೆ ಕಡೆಯಿಂದ KL 05 AS 6353 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿ ಪಿರ್ಯಾದಿದಾರರು ಪ್ರಯಾಣಿಸುತಿದ್ದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲ ಕಾಲಿಗೆ ಗುದ್ದಿದ ಗಾಯವಾಗಿದ್ದು, ಪಿರ್ಯಾದಿದಾರರ ಪತ್ನಿ ಅನ್ನಪೂರ್ಣರವರಿಗೆ ಬಲ ಕೋಲು ಕಾಲಿಗೆ ಗುದ್ದಿದ ಗಾಯ,ಕಾರುಚಾಲಕ ಸಂಜಯ್‌ ರವರಿಗೆ ಯಾವುದೇ ಗಾಯವಾಗಿರುವುದಿಲ್ಲ, ಹಾಗೂ ಅಪಘಾತ ಪಡಿಸಿದ ಕಾರು ಚಾಲಕ ಶಾಜಿ ರವರಿಗೆ ಗಾಯವಾಗಿದ್ದು ಅವರನ್ನು ಚಿಕಿತ್ಸೆಯ ಬಗ್ಗೆ  ಮಂಗಳೂರು ಕಡೆಗೆ ಕರೆದುಕೊಂಡು ಹೊಗಿರುತ್ತಾರೆ ಹಾಗೂ ಪಿರ್ಯಾದುದಾರರು  ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಧಾಖಲಾಗಿರುತ್ತಾರೆ  ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 66/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 2

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಬಾಲರಾಜ್ (26) ತಂದೆ ಆನಂದ  ವಾಸ ಆರಂಬೋಡೊ ಮನೆ, ಸಂಗಬೆಟ್ಟು ಗ್ರಾಮ, ಬಂಟ್ವಾಳ ತಾಲೂಕು  ರವರು ದಿನಾಂಕ 30.08.2021 ರಂದು ಕುಟ್ಟಿ ಶೆಟ್ಟಿ ಯಾನೆ ಯಶೋಧರ ರವರ ಜೊತೆ ಸಿದ್ದಕಟ್ಟೆಯಲ್ಲಿರುವ ನವರಂಗ್ ವೈನ್ ಶಾಪ್ ಗೆ ಬಿಯರ್ ಕುಡಿಯಲೆಂದು ಹೋಗಿ  ಬಿಯರ್ ಕುಡಿಯುತ್ತಿರುವ ಸಮಯ ಆರೋಪಿಗಳಾದ ಗಣೇಶ ಸೆಲೂನ್, ನಾಮ ಸಂತು ಹಾಗೂ ವೈನ್ ಶಾಪ್ ನ ಮಾಲಿಕ ಭೋಜ ಶೆಟ್ಟಿ ರವರು ಪಿರ್ಯಾದುದಾರರ ಬಳಿ ಬಂದು ಅವಾಚ್ಯ ಶಬ್ದದಿಂದ ಬೈದು  ನೀವು ಬಾರಿ  ಕುಡಿಯುತ್ತೀರಾ ಎಂದು ಹೇಳಿ ಸೆಲೂನ್ ಗಣೇಶನು ಬಿಯರ್ ಬಾಟಲಿಯಿಂದ ಪಿರ್ಯಾದುದಾರರ ತಲೆಗೆ ಮತ್ತು ಬಲಕೈಗೆ ಹೊಡೆದನು ಆಗ ಸಂತು ಕೈಯಿಂದ ಪಿರ್ಯಾದುದಾರರ ಕೆನ್ನೆಗೆ ಹೊಡೆದನು ಆ ಸಮಯ ಜನ ಸೇರುವುದನ್ನು ಕಂಡು ಆರೋಪಿಗಳು ಪಿರ್ಯಾದುದಾರರಿಗೆ ನಿಮಗೆ ಬುದ್ದಿ  ಕಲಿಸುತ್ತೇವೆ ಎಂದು ಹೇಳಿ ಅಲ್ಲಿಂದ ಹೋಗಿರುತ್ತಾರೆ. ಪಿರ್ಯಾದುದಾರರು ಹೆಚ್ಚಾಗಿ ಪಕ್ಕದಲ್ಲಿರುವ ರೇಷ್ಮಾ ಬಾರ್ ಗೆ ಕುಡಿಯಲು ಹೋಗುತ್ತಿದ್ದು ಅದೇ ದ್ವೇಷದಿಂದ ಆರೋಪಿಗಳು ಪಿರ್ಯದುದಾರರ ಮೇಲೆ  ಹಲ್ಲೆ ನಡೆಸಿರುವುದಾಗಿದೆ  ಈ ಹಲ್ಲೆಯಿಂದ ಪಿರ್ಯಾದುದಾರರಿಗೆ ಬಲಗೈ ತಟ್ಟಿಗೆ ಮತ್ತು ಎಡಕಿವಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 99-2021 ಕಲಂ 504,323,324,506, ಜೊತೆಗೆ34  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ನವೀನ್ (27) ತಂದೆ ವಾಮನ್ ನಾಯಕ್ ವಿಳಾಸ: ಸುಜೀರು ಬದಿಗುಡ್ಡೆ ಮನೆ, ಮಾರಿಪಳ್ಳ , ಪುದು  ಗ್ರಾಮ, ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 30.08.2021 ರಂಧು ರಾತ್ರಿ ಸುಮಾರು 10.00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರು ತನ್ನ ಸ್ನೇಹಿತ ಕಾರ್ತಿಕ್ ನ ಆಟೋ ರಿಕ್ಷಾದಲ್ಲಿ ಅಗತ್ಯ ಸಾಮಾನು ಖರೀದಿಮಾಡಿಕೊಂಡು ವಾಪಾಸು ಮನೆಗೆ ಬರುತ್ತಾ ರಾತ್ರಿ 10.45 ಗಂಟೆಗೆ ಸುಜೀರ್ ಬದಿಗುಡ್ಡೆ ಎಂಬಲ್ಲಿಗೆ ತಲುಪಿದಾಗ ರಸ್ತೆಯಲ್ಲಿ ಇಬ್ಬರು ನಿಂತುಕೊಂಡಿದ್ದು  ಪಿರ್ಯಾದಿದಾರರು ಹಾರ್ನ್ ಹಾಕಿ ಮುಂದೆ ಹೋಗುತ್ತಿದ್ದಂತೆ ರಸ್ತೆಯಲ್ಲಿ ಇದ್ದ ನಾಸೀರ್ ನಿಗೆ ಆಟೋ ರೀಕ್ಷಾವು ಸ್ವಲ್ಪತಾಗಿರುತ್ತದೆ ಆಟೋ ರೀಕ್ಷಾ ನಿಲ್ಲಿಸಿ ಪಿರಯಾದುದಾರರು ನಾಸೀರ್ ನಲ್ಲಿ ಕ್ಷಮಾಪಣೆ ಕೇಳಿದ್ದು ಆಗ ನಾಸೀರ್ ಪಿರ್ಯಾದಿದಾರರನ್ನು ಉದ್ದೇಶಿಸಿ ನಿನಗೆ ಕಣ್ಣು ಕಾಣುವುದಿಲ್ವಾ? ರಸ್ತೆಯಲ್ಲಿ ನಿಧಾನವಾಗಿ ಆಟೋವನ್ನು ಚಾಲನೆ ಮಾಡಿಕೊಂಡು ಹೋಗಲು ಆಗುವುದಿಲ್ವಾ? ಎಂದು ಬೈಯುತ್ತಿದ್ದಾಗ ಅಲ್ಲಿಗೆ ನಾಸೀರ್ ನ ಸ್ನೇಹಿತ ಆಸ್ಕರ್ ಕೂಡ ಬಂದಿದ್ದು  ಜೋರಾಗಿ ಮಾತನಾಡಿಕೊಂಡಿದ್ದ ಸಮಯ ಪಿರ್ಯಾದಿದಾರರ ಸ್ನೇಹಿತರಾದ ಕಾರ್ತಿಕ್ ಮತ್ತು ಗಣೇಶ್ ರವರು ಬಂದಿದ್ದು ಅವರೊಳಗೆ ಮಾತಿನ ಜಗಳವಾಗಿ , ನಾಸೀರ್ ನು ಆತನ ಕೈ ಮುಷ್ಠಿಯಿಂದ ಪಿರ್ಯಾದಿದಾರರ ಮುಖಕ್ಕೆ ಹೊಡೆದಿದ್ದು , ಆಸ್ಕರ್  ಮತ್ತು ನಾಲ್ಕೈದು ಜನರು ಅಲ್ಲಿಂದ ಸ್ವಲ್ಪ ಮುಂದೆ ಹೋಗಿ  ಬಾಟಲಿ, ಕಲ್ಲು ಮತ್ತು ತಲವಾರುಗಳನ್ನು ಬಿಸಾಡಿದ್ದು , ಬಾಟಲಿಯು ಕಾರ್ತಿಕನ ಬಲ ತಲೆಯ ಭಾಗಕ್ಕೆ ಬಿದ್ದು ರಕ್ತವಾಗಿದ್ದು , ಗಣೇಶರವರಿಗೂ ಕೂಡ ಗಾಯವಾಗಿರುತ್ತದೆ ಆದರೆ ಗಣೇಶ ರವರು ಅಲ್ಲಿಂದ ಹೋಗಿರುತ್ತಾರೆ ಆಗ ಅಲ್ಲಿ ಜನ ಸೇರುವುದನ್ನು ಕಂಡ ಅವರೆಲ್ಲರು ಅವಾಚ್ಯ ಶಬ್ದದಿಂದ ಬೈದು ರಸ್ತೆಯಲ್ಲಿ ಸರಿಯಾಗಿ ರೀಕ್ಷಾ ಓಡಿಸಿ ಇಲ್ಲವಾದರೆ ಮನೆಯಲ್ಲಿಯೇ ಇರು . ಯಾರ್ಯರಿಗೆ ರೀಕ್ಷಾವನ್ನು ತಾಗಿಸಿಕೊಂಡು ಹೋದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ   100/2021    ಕಲಂ 143,147,148,323,324,504,506  ಜೊತೆಗೆ 149  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತ್ತೀಚಿನ ನವೀಕರಣ​ : 31-08-2021 11:10 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080