ಅಪಘಾತ ಪ್ರಕರಣ: ೦3
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ತೇಜಸ್ವಿನಿ ಪ್ರಾಯ: 13 ವರ್ಷ ತಂದೆ:ಶೇಖರ ಪೂಜಾರಿ, ವಾಸ: ದರ್ಖಾಸು ಮನೆ, ಮಲವಂತಿಗೆ ಗ್ರಾಮ, ಬೆಳ್ತಂಗಡಿ ತಾಲೂಕು ರವರು ದಿನಾಂಕ: 29-10-2021 ರಂದು ಬೆಳಿಗ್ಗೆ ಶಾಲೆಗೆ ಹೋಗಿ ವಾಪಾಸ್ ಸಂಜೆ ಶಾಲೆಯಿಂದ ಮನೆಗೆ ಹೊರಟು ನಡೆದುಕೊಂಡು ಬರುತ್ತಾ ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಗುಂಡಿರ್ ಎಂಬಲ್ಲಿಗೆ ತಲುಪಿ ರಸ್ತೆ ಬದಿಯಲ್ಲಿ ವಾಹನಕ್ಕಾಗಿ ಕಾಯುತ್ತಿರುವಾಗ ದಿಡುಪೆ ಕಡೆಯಿಂದ ಸೋಮಂತ್ತಡ್ಕ ಕಡೆಗೆ ಕೆ ಎ 19 ಇ ಡಬ್ಲ್ಯು 7139 ನೇ ದ್ವಿ ಚಕ್ರ ವಾಹನವನ್ನು ಅದರ ಚಾಲಕ ದುಡುಕುತನದಿಂದ ರಸ್ತೆಯ ಎಡ ಬದಿಗೆ ಸವಾರಿ ಮಾಡಿಕೊಂಡು ಬಂದು ತೇಜಸ್ವಿನಿಗೆ ಡಿಕ್ಕಿ ಹೊಡೆದ ಪರಿಣಾಮ ಅಲ್ಲೇ ರಸ್ತೆಗೆ ಬಿದ್ದು, ಎಡ ಕಾಲಿನ ಕೋಲು ಕಾಲಿಗೆ ಗುದ್ದಿದ ಗಾಯವಾಗಿದ್ದು, ಗಾಯಾಳು ತೇಜಸ್ವಿನಿಯು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 83/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವೇಣೂರು ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹೆನ್ರಿ ಪಿರೇರಾ (49), ತಂದೆ: ಅಂತೋನಿ ಪಿರೇರಾ, ವಾಸ: 2-44, ವೆಸ್ಟ್ ಈಡನ್ ಪಡುಕುಮೇರು ಕಂಪೌಂಡ್ ಮರೋಡಿ ಗ್ರಾಮ ಬೆಳ್ತಂಗಡಿ ತಾಲೂಕು ಮತ್ತು ಅವರ ಚಿಕ್ಕಮ್ಮನ ಮಗನಾದ ಜಾರ್ಜ್ ಲೋಬೋ ರವರ ಬಾಬ್ತು ರಿಕ್ಷಾ ನಂಬ್ರ ಕೆ ಎ 19 ಎಬಿ 8360 ನೇದರ ರೀಪೇರಿಗೆಂದು ದಿನಾಂಕ: 29.10.2021 ರಂದು ಬೆಳಿಗ್ಗೆ ಬೆಳ್ತಂಗಡಿಗೆ ಹೋಗಿ ವಾಪಾಸು ಬರುವಾಗ ಗುರುವಾಯನೆಕೆರೆ-ಕಾರ್ಕಳ ರಾಜ್ಯ ಹೆದ್ದಾರಿ ಮಾರ್ಗವಾಗಿ ಬರುವಾಗ ಅಂದರೆ ಬೆಳ್ತಂಗಡಿ ತಾಲೂಕು ನಾರಾವಿ ಗ್ರಾಮದ ನಾರಾವಿ ಕೆಳಗಿನ ಪೇಟೆ ಎಂಬಲ್ಲಿ ತಲುಪುವಾಗ ಅವರ ಎದುರಿನಿಂದ ಅಂದರೆ ಹೊಸ್ಮಾರು ಕಡೆಯಿಂದ ನಾರಾವಿ ಪೇಟೆಗೆ ಕಡೆಗೆ ಬರುತ್ತಿದ್ದ ಕೆ ಎ 19 ಎಮ್ ಕೆ 6975 ನೇ ಕಾರವೊಂದು ಅತೀ ವೇಗವಾಗಿ ಚಲಾಯಿಸಿಕೊಂಡು, ರಸ್ತೆಯ ತೀರಾ ಬಲಬದಿಗೆ ಬಂದು ಕೆ ಎ 19 ಎಬಿ 8360 ನೇ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆಯಿತು. ಅದರ ಪರಿಣಾಮ ಜಾರ್ಜ್ ಲೋಬೋರವರ ತಲೆಗೆ ರಕ್ತ ಗಾಯ ಮತ್ತು ಸೊಂಟಕ್ಕೆ ಗುದ್ದಿದ ಗಾಯವಾಗಿದ್ದು, ಕೊಡಲೇ 108 ಅಂಬ್ಯೂಲೇನ್ಸ್ ಗೆ ಕರೆ ಮಾಡಿ, ಜಾರ್ಜ್ ಲೋಬೋರವರನ್ನು ಮಂಗಳೂರು ಕೆ ಎಮ್ ಸಿ ಜ್ಯೋತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿ ವೈದ್ಯರು ಪರೀಕ್ಷಿಸಿ ಐಸಿಯು ಘಟಕದಲ್ಲಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 71-2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕಿರಣ್ ಕೆ, ಪ್ರಾಯ 23 ವರ್ಷ, ತಂದೆ: ಕೃಷ್ಣ ಜಿ, ವಾಸ: ೨ನೇ ಕ್ರಾಸ್, ದೇವಸ್ಥಾನದ ಹತ್ತಿರ, ದರ್ಬೆ ಅಂಚೆ, ಕೆಮ್ಮಿಂಜೆ ಗ್ರಾಮ ,ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 29-10-2021 ರಂದು 22-15 ಗಂಟೆಗೆ ಆರೋಪಿ ಸ್ಕೂಟರ್ ಸವಾರ ಅಬ್ದುಲ್ ಹಮೀದ್ ರವರು ಕೆಎ-21-ವೈ-6221ನೇ ನೋಂದಣಿ ನಂಬ್ರದ ಸ್ಕೂಟರಿನಲ್ಲಿ ಅಜರ್ ಮತ್ತು ಶಬೀರ್ ಎಂಬ ಇಬ್ಬರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರು ಕಡೆಯಿಂದ ಬೊಳ್ವಾರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಸಬ ಗ್ರಾಮದ ಬೊಳ್ವಾರು ಮೆಟ್ರೋಡೈನ್ ಹೊಟೇಲ್ ಬಳಿ ಯಾವುದೇ ಸೂಚನೆಯನ್ನು ನೀಡದೇ, ಇಂಡಿಕೇಟರ್ ಹಾಕದೇ, ರಸ್ತೆಯಲ್ಲಿ ಹೋಗುವ ವಾಹನಗಳನ್ನು ಗಮನಿಸದೇ ಒಮ್ಮೆಲೇ ಮೆಟ್ರೋಡೈನ್ ಹೋಟೇಲ್ ಕಡೆಗೆ ಚಲಾಯಿಸಿದ ಪರಿಣಾಮ, ಶರತ್ ರವರು ಬೊಳ್ವಾರು ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕೆಎ-21-ಇಯು-7953ನೇ ನೋಂದಣಿ ನಂಬ್ರದ ಮೋಟಾರು ಸೈಕಲಿಗೆ ಅಪಘಾತವಾಗಿ, ಮೋಟಾರ್ ಸೈಕಲ್ ಹತೋಟಿ ತಪ್ಪಿ ಸ್ಕಿಡ್ ಆಗಿ ಬಿದ್ದು, ರಸ್ತೆಗೆ ಎಸೆಯಲ್ಪಟ್ಟು, ಶರತ್‌ರವರಿಗೆ ತಲೆಗೆ ರಕ್ತಗಾಯವಾದವರನ್ನು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಪಿರ್ಯಾದುದಾರರು ಗಾಯಾಳುವನ್ನು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 130/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
.
ಕಳವು ಪ್ರಕರಣ: ೦1
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸಿಲ್ವಿ ಮಾರ್ಟಿಸ್ (48) ತಂದೆ ಮಾರ್ಷಲ್ ಮಾಟಿ್ಸ್ ವಾಸ: ನೋಳ ಮನೆ ಮಂಚಿ ಗ್ರಾಮ ಬಂಟ್ವಾಳ ತಾಲೂಕು ರವರು ಮಂಚಿ ಗ್ರಾಮದ ನೋಳ ಮನೆ ಎಂಬಲ್ಲಿ ಒಬ್ಬಂಟಿಯಾಗಿ ವಾಸಮಾಡಿಕೊಂಡಿದ್ದು ಹೋಟೆಲ್ ನಲ್ಲಿ ಕ್ಲೀನಿಂಗ್ ಮತ್ತು ಮನೆಯಲ್ಲಿ ಬೀಡಿಕಟ್ಟುವ ಕೆಲಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದುದಾರರ ಗಂಡ ಜಾನ್ ಡಿ ಸೋಜ ರವರಿಗೆ ಸಂಸಾರದಲ್ಲಿ ಸರಿ ಬಾರದೇ ಅವರ ತಮ್ಮ ಅಲ್ಫೋನ್ಸ್ ಡಿ ಸೋಜ ರವರ ಜೊತೆಯಲ್ಲಿ ವಾಸಮಾಡಿಕೊಂಡಿರುವುದಾಗಿದೆ. ದಿನಾಂಕ 29.10.2021 ರಂದು ಬೆಳಿಗ್ಗೆ 06.30 ಗಂಟೆಗೆ ಪಿರ್ಯಾದುದಾರರು ಕೆಲಸಕ್ಕೆ ಹೋಗುತ್ತಿದ್ದ ಸಮಯ ಸುನೀತಾ ಮತ್ತು ಅಲ್ಫೋನ್ಸ್ ಡಿ ಸೋಜ ಹಾಗೂ ಇತರರು ಪಿರ್ಯಾದುದಾರರಿಗೆ ಹಲ್ಲೆ ನಡೆಸಿದ್ದು . ಪಿರ್ಯಾದುದಾರರು ಈ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ದಿನಾಂಕ 30.10.2021 ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಬೆಳಿಗ್ಗೆ 11.00 ಗಂಟೆಗೆ ಮನೆಯ ಒಳಗೆ ಹೋದಾಗ ಮನೆಯ ಒಳಗಡೆ ಇಟ್ಟಿದ್ದ ಕಪಾಟಿನ ಬೀಗವನ್ನು ಮುರಿದು ಅದರೊಳಗಿದ್ದ ಬಟ್ಟೆ ಬರೆ ,ಬಾವಿ ಹಗ್ಗ ಮತ್ತು ಅಲ್ಯೂಮಿನಿಯಂ ಕೊಡಪಾನವನ್ನು ಸುನೀತಾ ಆಕೆಯ ಗಂಡ ಅಲ್ಫೋನ್ಸ್ ಡಿ ಸೋಜ, ರೂಪೇಶ್ ಮತ್ತು ಪಿರ್ಯಾದುದಾರರ ಗಂಡ ಜಾನ್ ಡಿಸೋಜ ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ 3500/- ಆಗಬಹುದು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 130/2021 ಕಲಂ 454,457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦2
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಿನ್ಸೆಂಟ್ ಪೌಲ್ ಡಿ ಸೋಜಾ (61) ತಂದೆ ದಿ/ ಅಪೊಲಿನಾರ್ ಡಿ ಸೋಜಾ ಕದ ನಂ: 25-2-118/3,101 ಅನ್ವಿತ್ ಅಪಾರ್ಟ್ಮೆಂಟ್ಸ್ ಹಳೆಯ ರಸ್ತೆ ಕಂಕನಾಡಿ ಮಂಗಳೂರು ರವರಿಗೆ ಬಡಗಬೆಳ್ಳೂರು ಗ್ರಾಮದ ಕೊಳ್ತಮಜಲು ಎಂಬಲ್ಲಿ ಜಾಗವಿದ್ದು ಸದ್ರಿ ಜಾಗಕ್ಕೆ ಸುಮಾರು 10 ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಗಿಡಗಳಿಗೆ ನೀರು ಕೊಡಲು ಅಸಾಧ್ಯವಾದ್ದರಿಂದ ಒಂದು ವರ್ಷ ಮುಂಚೆ ಪಿರ್ಯಾದಿದಾರರು ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದು , ಅದು ಮಂಜೂರಾಗಿ ಕಳೆದ 8 ತಿಂಗಳುಗಳಿಂದ ವಿದ್ಯುತ್ ಸಂಪರ್ಕವನ್ನು ನೀಡಲು ಇಲಾಖೆಯವರು ಬರುತ್ತಿದ್ದು, ಪಕ್ಕದ ಮನೆಯವರು ಇಲಾಖೆಯವರಿಗೆ ವಿದ್ಯುತ್ ಸಂಪರ್ಕವನ್ನು ನೀಡಲು ಅವಕಾಶವನ್ನು ಕೊಡುತ್ತಿಲ್ಲ ಹಾಗೂ ಶೆಡ್ ನಿರ್ಮಾಣಕ್ಕೆ ಕೂಡ ಅಡ್ಡಿಪಡಿಸುತ್ತಿದ್ದಾರೆ , ಪಿರ್ಯಾದಿದಾರರ ಫಾರ್ಮ್ ಹೌಸ್ ಗೆ ಅಕ್ರಮ ಪ್ರವೇಶ ಮಾಡಿ ಕೆಲಸವನ್ನು ನಿಲ್ಲಿಸಿರುವುದಲ್ಲದೇ ಅವರನ್ನು ಓಡಿಸಿರುತ್ತಾರೆ ಅದರ ವಿಡಿಯೋ ಸಾಕ್ಷಿಯಾಗಿರುತ್ತದೆ ಅದಲ್ಲದೇ ಶೇಖರ ಪೂಜಾರಿ ಎಂಬ ವ್ಯಕ್ತಿಯು ಪಿರ್ಯಾದಿದಾರರ 15 ಮಂದಿ ಕೆಲಸದವರ ಮುಂದೆ ನಿನ್ನನ್ನೂ ಈಗಲೇ ಕೊಲ್ಲುತ್ತೇನೆ ಎಂದು ಕುತ್ತಿಗೆಯನ್ನು ಹಿಡಿದಿರುವುದಲ್ಲದೇ ಪಿರ್ಯಾದಿದಾರರ ಜಾಗಕ್ಕೆ ಪ್ರವೇಶಿಸಲು ಪ್ರತಿಬಂಧ ಮಾಡಿರುತ್ತಾರೆ ಮುಂದುವರಿದ ಭಾಗವಾಗಿ ದಿನಾಂಕ: 28.10.2021 ರಂದು ಇಲಾಖೆಯವರು ಮತ್ತೆ ವಿದ್ಯತ್ ಸಂಪರ್ಕ ನೀಡುವಾಗ ತಡೆಯೊಡ್ಡಿ ಅದೇ ಪಿರ್ಯಾದಿದಾರರ ಜಮೀನಿನಲ್ಲಿ ನೆಲೆಸಲು ರೌಡಿಗಳನ್ನು ಬಿಟ್ಟು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ ಹಾಗೂ ಪಕ್ಕದ ಮನೆಯವರಾದ ರವಿ ಪೂಜಾರಿ, ಶೇಖರ್ ಪೂಜಾರಿ, ರತ್ನಾಕರ ಪೂಜಾರಿ, ಹಾಗೂ ಮನೆಯ ಹೆಂಗಸರು ಸೇರಿ ದೊಣ್ಣೆ ರಾಡ್ ಗಳನ್ನು ಹಿಡಿದು ನಿನ್ನನ್ನೂ ಕೊಲ್ಲದೇ ಬಿಡುವುದಿಲ್ಲ ಎಂದು ಹೇಳುತ್ತಿದ್ದು ಮತ್ತು ಪಿರ್ಯಾದಿದಾರರ ಜಮೀನಿನಲ್ಲಿ ದನ , ಕೋಳಿಗಳನ್ನು ಬಿಟ್ಟು ಕೃಷಿ ನಾಶ ಮಾಡಿರುತ್ತಾರೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 129/2021 ಕಲಂ 506.447.427 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸಚಿನ್ ಪ್ರಾಯ: 26 ವರ್ಷ, ತಂದೆ: ರಾಘವ ವಾಸ: ಗುರುಕೃಪಾ ನಿಲಯ ಜನತಾ ಕಾಲೋನಿ ಮನೆ, ಬಲ್ನಾಡು ಗ್ರಾಮ, ಪುತ್ತೂರು ತಾಲೂಕು ಎಂಬವರು ಪುತ್ತೂರು ನಗರ ಸಭೆಯ ಕಸ ವಿಲೇವಾರಿ ವಾಹನದಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಸದ್ರಿ ಕೆಲಸಕ್ಕಾಗಿ ಪ್ರತಿ ದಿನ ಬೆಳಿಗ್ಗೆ ಸುಮಾರು 4.45 ಗಂಟೆಗೆ ತನ್ನ ಮನೆಯಿಂದ ಹೊರಡುತ್ತಿರುವುದಾಗಿದೆ. ಈದಿನ ಕೂಡಾ ಫಿರ್ಯಾದುದಾರರು ಎಂದಿನಂತೆ ತನ್ನ ಮನೆಯಿಂದ ಕೆಲಸಕ್ಕಾಗಿ ಪುತ್ತೂರಿಗೆ ತೆರಳುವರೇ ಬೆಳಿಗ್ಗೆ ಸುಮಾರು 4.45 ಗಂಟೆಗೆ ತನ್ನ ಬಾಬ್ತು ಸ್ಕೂಟರನ್ನು ಚಲಾಯಿಸಿಕೊಂಡು ತನ್ನ ಮನೆಯಿಂದ ಹೊರಟು ಮನೆಯಿಂದ ಕೆಲವೇ ಅಡಿಗಳ ದೂರದಲ್ಲಿರುವ ಗೋಳಿಮರದ ಬಳಿಗೆ ತಲುಪಿದಾಗ ಸದ್ರಿ ಮರದ ಬಳಿಯ ಪೊದೆಯೊಳಗೆ ಅಡಗಿ ಕುಳಿತಿದ್ದ ಫಿರ್ಯಾದುದಾರರ ನೆರೆಮನೆಯ ವಿನೋದ್ ಎಂಬವನು ತನ್ನ ಕೈಯಲ್ಲಿ ಕೊಡಲಿಯೊಂದನ್ನು ಹಿಡಿದುಕೊಂಡು ಬಂದು ಸ್ಕೂಟರನ್ನು ಚಲಾಯಿಸುತ್ತಿದ್ದ ಫಿರ್ಯಾದುದಾರರನ್ನು ತಡೆದು ನಿಲ್ಲಿಸಿ “ಈದಿನ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಹೇಳಿ ಏಕಾಏಕಿ ಫಿರ್ಯಾದುದಾರರ ಕುತ್ತಿಗೆಗೆ ಕಡಿಯಲು ಆತನ ಕೈಯಲ್ಲಿದ್ದ ಕೊಡಲಿಯನ್ನು ಬೀಸಿದಾಗ ಫಿರ್ಯಾದುದಾರರು ಕೆಳಗೆ ಬಗ್ಗಿ ಕೊಡಲಿಯ ಏಟನ್ನು ತಪ್ಪಿಸಿಕೊಂಡು ಜೋರಾಗಿ ಬೊಬ್ಬೆ ಹೊಡೆದಿದ್ದು, ಆ ವೇಳೆ ಫಿರ್ಯಾದುದಾರರ ತಾಯಿಯವರು ಸ್ಥಳಕ್ಕೆ ಓಡಿ ಬಂದಿದ್ದಲ್ಲದೇ ಬೊಬ್ಬೆಯನ್ನು ಕೇಳಿದ ನೆರೆಕರೆಯವರು ಕೂಡಾ ಸ್ಥಳಕ್ಕೆ ಓಡಿ ಬಂದಿರುತ್ತಾರೆ. ಸದ್ರಿಯವರು ಬಂದ ಬಳಿಕವೂ ವಿನೋದನು ಫಿರ್ಯಾದುದಾರರಿಗೆ ಕೊಡಲಿಯಿಂದ ಕಡಿಯಲು ಪ್ರಯತ್ನಿಸಿದಾಗ ಫಿರ್ಯಾದುದಾರರ ತಾಯಿ ಮತ್ತು ನೆರೆಕರೆಯವರು ವಿನೋದ್‌ನನ್ನು ತಡೆದು ಆತನ ಕೈಯಲ್ಲಿದ್ದ ಕೊಡಲಿಯನ್ನು ಆತನಿಂದ ಎಳೆದುಕೊಂಡಿರುತ್ತಾರೆ. ಆ ವೇಳೆ ಸದ್ರಿ ವಿನೋದನು ಫಿರ್ಯಾದುದಾರರಿಗೆ ಕೈಯಿಂದ ಹೊಡೆದು, ಫಿರ್ಯಾದುದಾರರ ಕುತ್ತಿಗೆಯನ್ನು ಜೋರಾಗಿ ಒತ್ತಿ ಹಿಡಿದು ಫಿರ್ಯಾದುದಾರರನ್ನು ಕೊಲ್ಲಲು ಪ್ರಯತ್ನಿಸಿದಾಗ ಫಿರ್ಯಾದುದಾರರಿಗೆ ಉಸಿರಾಡಲು ಕಷ್ಟವಾಗಿರುತ್ತದೆ. ಆಗ ಫಿರ್ಯಾದುದಾರರ ತಾಯಿ ಮತ್ತು ಇತರರು ಆತನಿಂದ ಫಿರ್ಯಾದುದಾರರನ್ನು ಬಿಡಿಸಿರುತ್ತಾರೆ. ಬಳಿಕ ವಿನೋದನು ಫಿರ್ಯಾದುದಾರರನ್ನು ಉದ್ದೇಶಿಸಿ “ಇವತ್ತು ನೀನು ಬದುಕಿದೆ. ಇನ್ನು ಮುಂದಕ್ಕಾದರೂ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಅಲ್ಲಿಂದ ತೆರಳಿರುತ್ತಾನೆ. ಸದ್ರಿ ವಿನೋದನು ಫಿರ್ಯಾದುದಾರರ ನೆರೆಮನೆಯಲ್ಲಿ ವಾಸವಾಗಿದ್ದು, ಆಗಾಗ್ಗೆ ಫಿರ್ಯಾದುದಾರರ ಮನೆಯ ಕಂಪೌಂಡ್ ಗೋಡೆಯ ಕಲ್ಲುಗಳನ್ನು ಕಿತ್ತು ತೆಗೆದು ಫಿರ್ಯಾದುದಾರರಿಗೆ ತೊಂದರೆ ನೀಡುತ್ತಿದ್ದು, ಈ ಬಗ್ಗೆ ಕೆಲವು ಸಮಯದ ಹಿಂದೆ ಫಿರ್ಯಾದುದಾರರು ಸದ್ರಿಯವನಲ್ಲಿ ವಿಚಾರಿಸಿದ ಕಾರಣಕ್ಕಾಗಿ ಸದ್ರಿಯವನು ಫಿರ್ಯಾದುದಾರರ ಮೇಲೆ ದ್ವೇಷದಿಂದ ಈದಿನ ಫಿರ್ಯಾದುದಾರರನ್ನು ತಡೆದು ನಿಲ್ಲಿಸಿ, ಕೊಲ್ಲಲು ಪ್ರಯತ್ನಿಸಿ, ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅಕ್ರ: 95/2021, ಕಲo: 341 , 504, 506, 307, 323. ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦2
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಗೀತಾ,ಪ್ರಾಯ: 46 ವರ್ಷ, ಗಂಡ: ಪುರುಷೋತ್ತಮ ಪೂಜಾರಿ, ವಾಸ: ದರ್ಬೆತ್ತಡ್ಕ ಮನೆ, ಒಳಮೊಗ್ರು ಗ್ರಾಮ, ಪುತ್ತೂರು ತಾಲೂಕು ಎಂಬವರ ಗಂಡ ಪುರುಷೋತ್ತಮ ಪೂಜಾರಿ ಎಂಬವರು ದಿನಾಂಕ;- 30.10.2021ರಂದು ರಾತ್ರಿ ಸುಮಾರು 7.00 ಗಂಟೆಗೆ ದೇವರಿಗೆ ದೀಪ ಇಡಲು ತನ್ನ ಮನೆಯ ಹಾಲ್‌ನಲ್ಲಿ ನಿಂತುಕೊಂಡಿದ್ದಾಗ ಜೋರಾಗಿ ಗುಡುಗು ಬಂದು ಮನೆಯ ಬಳಿ ಸಿಡಿಲು ಹೊಡೆದಿದ್ದು, ಆ ಸಮಯ ಸಿಡಿಲಿನ ಹೊಡೆತಕ್ಕೆ ಪುರುಷೋತ್ತಮ ಪೂಜಾರಿಯವರು ಒಮ್ಮೆಲೆ ಬೊಬ್ಬೆ ಹಾಕಿ ಅ್ಲಲಿಯೇ ಕುಸಿದು ನೆಲಕ್ಕೆ ಬಿದ್ದಿದ್ದು, ಅವರ ಬೊಬ್ಬೆ ಕೇಳಿ ಫಿರ್ಯಾದುದಾರರು ಸದ್ರಿಯವರನ್ನು ಕರೆದಾಗ ಅವರು ಮಾತನಾಡದೇ ಇದ್ದು, ಅವರ ದೇಹದಲ್ಲಿ ಯಾವುದೇ ಚಲನವಲನ ಕಂಡು ಬರದೇ ಇದ್ದುದರಿಂದ ಫಿರ್ಯಾದುದಾರರು ತನ್ನ ಅಣ್ಣ ವೆಂಕಪ್ಪರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿ, ವೆಂಕಪ್ಪ ಮತ್ತು ಫಿರ್ಯಾದುದಾರರು ಪುರುಷೋತ್ತಮ ಪೂಜಾರಿಯವರನ್ನು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕೊಂಡು ಹೋದಲ್ಲಿ ರಾತ್ರಿ ಸುಮಾರು 8.45 ಗಂಟೆಗೆ ವೈದ್ಯರು ಪರೀಕ್ಷಿಸಿ, ಪುರುಷೋತ್ತಮ ಪೂಜಾರಿಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಯುಡಿಆರ್ 39/2021 ಕಲಂ 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಪಿರ್ಯಾದಿದಾರರು: ಶ್ರೀಮತಿ ದುರಗವ್ವ ಸಣ್ಣಯಲ್ಲಪ್ಪ ಮಾದರ, (26), ಗಂಡ: ಸಣ್ಣಯಲ್ಲಪ್ಪ ಮಾದರ, ವಾಸ: #133 ಇಡಗಲ್ಲ ಮಾದರ, ರಾಮದುರ್ಗಾ ತಾಲೂಕು, ಬೆಳಗಾವಿ ಜಿಲ್ಲೆ. ಹಾಲಿ ವಿಳಾಸ: ದಿನೇಶ್ ಮೆಂಡೋನ್ಸ್, ಆಲ್ಮ ಕಾಟೇಜ್, ಮಡಂತ್ಯಾರು, ಮಾಲಾಡಿ ಗ್ರಾಮ, ಮಡಂತ್ಯಾರು ಅಂಚೆ, ಬೆಳ್ತಂಗಡಿ ತಾಲೂಕು, ರವರ ಗಂಡ ಸಣ್ಣಯಲ್ಲಪ್ಪ ಮಾದರ ಪ್ರಾಯ: 33 ವರ್ಷ ಎಂಬವರು ಸುಮಾರು 2 ವರ್ಷಗಳಿಂದ ಬೆಳ್ತಂಗಡಿ ತಾಲೂಕು, ಮಾಲಾಡಿ ಗ್ರಾಮದ, ಮಡಂತ್ಯಾರು ಎಂಬಲ್ಲಿ ದಿನೇಶ್ ಮೆಂಡೋನ್ಸ ಎಂಬವರ ಮನೆಯಲ್ಲಿ ತೋಟದ ಕೆಲಸ ಮಾಡಿಕೊಂಡು ಪತ್ನಿ ಮಕ್ಕಳೊಂದಿಗೆ ಅಲ್ಲಿಯೇ ವಾಸವಿರುವುದಾಗಿದೆ. ಫಿರ್ಯಾಧಿದಾರರ ಗಂಡ ವಿಪರೀತ ಅಮಲು ಪದಾರ್ಥ ಸೇವಿಸುವ ಚಟವನ್ನು ಬೆಳೆಸಿಕೊಂಡಿದ್ದು, ಇದೇ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 28.10.2021 ರಂದು ರಾತ್ರಿ 8:30 ಗಂಟೆಗೆ ಅಮಲು ಪದಾರ್ಥ ಸೇವಿಸಿಕೊಂಡು ಮನೆಗೆ ಬಂದವರು ಊರಿಗೆ ಫೋನ್ ಮಾಡುವುದಾಗಿ ಫಿರ್ಯಾಧಿದಾರರಲ್ಲಿ ತಿಳಿಸಿ ಮನೆಯಿಂದ ಹೊರ ಹೋಗಿ ಮನೆಯ ಹಿಂದುಗಡೆ ಯಾವುದೋ ವಿಷ ಪದಾರ್ಥವನ್ನು ಸೇವಿಸಿದ್ದು, ಕೂಡಲೇ ಫಿರ್ಯಾಧಿದಾರರು ಹಾಗೂ ಇತರರು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿದ ಹೆಚ್ಚಿನ ಚಿಕಿತ್ಸೆ ಬಗ್ಗೆ ಜಿಲ್ಲಾ ವೆನ್‌ಲಾಕ್ ಸರಕಾರಿ ಆಸ್ಪತ್ರೆಗೆ ಮಂಗಳೂರಿಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈಧ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಈ ಬಗ್ಗೆ ಪುಂಜಾಲಕಟ್ಟೆ ಠಾಣಾ UDR NO 16/2021 ಕಲಂ: 174 ಸಿಆರ್‌ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.