ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚಂದ್ರನಾಥ ಎಂ, ಪ್ರಾಯ 32 ವರ್ಷ, ತಂದೆ: ದಿವಂಗತ ಕೃಷ್ಣಪ್ಪ ಪುರುಷ ವಾಸ:ಮುಗೇರಡ್ಕ ಮನೆ, ಮುಕ್ವೆ, ನರಿಮೊಗರು ಗ್ರಾಮ & ಅಂಚೆ, ಪುತ್ತೂರು  ತಾಲೂಕು ರವರು ದಿನಾಂಕ 29-12-2021 ರಂದು 21-30 ಗಂಟೆಗೆ ಆರೋಪಿ ಮುನೀರ್  ಎಂಬವರು  KA-19-R-6435 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಪುತ್ತೂರು-ಎಪಿಎಂಸಿ-ಸಾಲ್ಮರ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಸಾಲ್ಮರ ಕಡೆಯಿಂದ ಎಪಿಎಂಸಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಎಪಿಎಂಸಿ ರಸ್ತೆಯ ಆದರ್ಶ್ ಆಸ್ಪತ್ರೆಯ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಪುತ್ತೂರು ಕಡೆಯಿಂದ ಎಪಿಎಂಸಿ ರಸ್ತೆಯಾಗಿ ಸಾಲ್ಮರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-A-8886 ನೇ ನೋಂದಣಿ ನಂಬ್ರದ ಅಟೋರಿಕ್ಷಾಕದ ಎಡಭಾಗಕ್ಕೆ ಅಪಘಾತವಾಗಿ, ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಸವಾರನ ಎಡಕಾಲಿನ ಮೊಣಗಂಟಿಗೆ ರಕ್ತಗಾಯ ಹಾಗೂ ಎಡಕೈಯ ತಟ್ಟಿಗೆ ಗುದ್ದಿದ ಗಾಯವಾಗಿದ್ದು,  ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  164/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ದಾಮೋದರ್ ಆಚಾರ್ಯ, ಪ್ರಾಯ: 52 ವರ್ಷ, ತಂದೆ: ದಿವಂಗತ/ ಬಾಬು ಆಚಾರ್ಯ, ವಾಸ: 1-88/3 ಮಾವಿನಕಟ್ಟೆ ಮನೆ, ವಾಮದಪದವು  ಅಂಚೆ, ಚೆನ್ನಯಿತೋಡಿ ಗ್ರಾಮ, ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 29-12-2021 ರಂದು 12-05 ಗಂಟೆಗೆ ಆರೋಪಿ ರಾಜೇಶ.ಬಿ  ಎಂಬವರು  KA-20-P-5933ನೇ ನೋಂದಣಿ ನಂಬ್ರದ ಕಾರನ್ನು ವಿಟ್ಲ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಕಬಕ ಗ್ರಾಮದ ಕಬಕ ಜಂಕ್ಷನ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಸೂಚನೆಯನ್ನು ನೀಡದೆ ಏಕಾಎಕಿಯಾಗಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಖ್ಯ ರಸ್ತೆಗೆ ಚಲಾಯಿಸಿದ ಪರಿಣಾಮ ಪಿರ್ಯಾದುದಾರರು ಸವಾರರಾಗಿ, ಪತ್ನಿ ಸುನಂದರವರನ್ನು ಹಿಂಬದಿ ಸವಾರೆಯಾಗಿ ಕುಳ್ಳಿರಿಸಿಕೊಂಡು  ಸಂಪ್ಯ ಕಡೆಯಿಂದ ಬಂಟ್ವಾಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-EK-639 ನೇ ನಂಬ್ರದ ಮೋಟಾರ್‌ ಸೈಕಲಿಗೆ ಅಪಘಾತವಾಗಿ ಪಿರ್ಯಾದಿದಾರರು ಹಾಗು ಹಿಂಬದಿ ಸವಾರೆ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಎಡಕಾಲಿನ ಕೋಲುಕಾಲಿಗೆ ತರಚಿದ ಗಾಯ, ಸುನಂದರವರಿಗೆ ತಲೆಗೆ,ಬೆನ್ನಿಗೆ,ಎಡಕೈ ಮಣಿಗಂಟಿಗೆ ,ಬಲಕಾಲಿನ ಕೋಲು ಕಾಲಿಗೆ ಗುದ್ದಿದ ಗಾಯವಾಗಿ, ಪಿರ್ಯಾದಿದಾರರು ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದು, ಹಿಂಬದಿ ಸವಾರೆ ಸುನಂದರವರು ಚಿಕಿತ್ಸೆಯ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  165/2021 ಕಲಂ: 279,337 ಐಪಿಸಿ  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸೋಮಪ್ಪ ಪೂಜಾರಿ (64), ತಂದದೆ: ಅಣ್ಣಪ್ಪ ಪೂಜಾರಿ, ವಾಸ: ಕೆಮ್ಮಡೆ ಮನೆ, ಶಿರ್ಲಾಲು ಗ್ರಾಮ, ಬೆಳ್ತಂಗಡಿ ತಾಲೂಕು ರವ ಮಗಳ  ಮಗಳಾದ  ಯಶಸ್ವಿರವರನ್ನು  ದಿನಾಂಕ  30-12-2021 ರಂದು  ಬೆಳಿಗ್ಗೆ  07:30 ಗಂಟೆಗೆ  ಶಿರ್ಲಾಲಿಗೆ  ಬಸ್ಸಿಗೆ  ಬಿಡಲು ನೆರೆಕರೆಯ  ಸುರೇಶ್  ಎಂಬವರ  ಬಾಬ್ತು  ಕೆ ಎ 21 ಎ 9681 ನೇ  ಆಟೋ ರಿಕ್ಷಾದಲ್ಲಿ ಹೊರಟು  ಬೆಳ್ತಂಗಡಿ  ತಾಲೂಕು  ಶಿರ್ಲಾಲು  ಗ್ರಾಮದ ಉಂರ್ಬಿದೊಟ್ಟು  ಎಂಬಲ್ಲಿಗೆ ಸಮಯ ಸುಮಾರು 07:40 ಗಂಟೆಗೆ  ತಲುಪುವಾಗ  ಆಟೋ  ರಿಕ್ಷಾ ಚಾಲಕ  ಅತೀ   ವೇಗ  ಮತ್ತು  ಅಜಾಕರೂಕತೆಯಿಂದ  ಚಲಾಯಿಸಿದ  ಪರಿಣಾಮ  ರಿಕ್ಷಾವು  ಚಾಲಕನ ನಿಯಂತ್ರಣ  ತಪ್ಪಿ  ರಸ್ತೆಯ ಪಕ್ಕದಲ್ಲಿರುವ  15 ಅಡಿ ಆಳದ  ಗುಂಡಿಗೆ ಬಿದ್ದಿದ್ದು, ,ಇದರ  ಪರಿಣಾಮವಾಗಿ ಪಿರ್ಯಾದಿದಾರರ  ಎದೆಯ  ಎಡ ಭಾಗ , ಎಡ ಭುಜ , ಎಡ ಮೊಣಕೈ ,ಮತ್ತು  ಎಡ ಕೈಯ  ಮಣಿಗಂಟಿಗೆ  ಗುದ್ದಿದ ಗಾಯವಾಗಿದ್ದು, , ಯಶಸ್ವಿಗೆ ಎಡ ಕಾಲಿನ ತೊಡೆಗೆ  ಗುದ್ದಿದ  ಗಾಯವಾಗಿರುತ್ತದೆ. ಹಾಗೂ ಆಟೋ  ಚಾಲಕನಿಗೆ ಸೊಂಟಕ್ಕೆ ತರಚಿದ ಗಾಯವಾಗಿರುತ್ತದೆ, ಪಿರ್ಯಾದಿದಾರರು  ಮತ್ತು  ಅವರ ಮೊಮ್ಮಗಳಾದ  ಯಶಸ್ವಿ  ಉಜಿರೆಯ  ಎಸ್  ಡಿ  ಎಂ  ಆಸ್ಪತ್ರೆಯಲ್ಲಿ  ಒಳರೋಗಿಯಾಗಿ  ದಾಖಲಾಗಿದ್ದು, ಆಟೋ  ಚಾಲಕ ಆದೇ  ಆಸ್ಪತ್ರೆಯಲ್ಲಿ  ಹೊರ ರೋಗಿಯಾಗಿ  ಚಿಕಿತ್ಸೆ ಪಡೆದು ಹೋಗಿರುತ್ತಾರೆ, ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 86-2021 ಕಲಂ:279,337, ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸೀತಾರಾಮ ಎ ಪ್ರಾಯ 51 ವರ್ಷ ತಂದೆ : ದಿ|| ಶೇಷಪ್ಪ ಗೌಡ, ವಾಸ : ಅನ್ಯಾಡಿ  ಮನೆ, ಕುದ್ಮಾರು ಗ್ರಾಮ, ಕಡಬ ತಾಲೂಕು  ರವರು ದಿನಾಂಕ 30-12-2021 ರಂದು  ಸವಣೂರು  ಪೇಟೆಯಲ್ಲಿ ದಿನಸಿ ಸಾಮಾನು ಖರೀದಿಸಿ ಅಲ್ಲಿಂದ ಸರ್ವಿಸ್ ವಾಹನವೊಂದರಲ್ಲಿ ಬಂದು ಕುದ್ಮಾರು ಜಂಕ್ಷನ್ನಲ್ಲಿ ಇಳಿದು  ಕುದ್ಮಾರು- ಅಲಂಗಾರು ಡಾಂಬಾರು  ರಸ್ತೆಯಲ್ಲಿ  ತನ್ನ ಮನೆ ಕಡೆಗೆ  ನಡೆದುಕೊಂಡು ಹೋಗುತ್ತಾ ಕಡಬ ತಾಲೂಕು ಕುದ್ಮಾರು ಗ್ರಾಮದ ಕೂರತ್ ಎಂಬಲ್ಲಿಗೆ ಸಂಜೆ 7.15 ಗಂಟೆಗೆ ತಲುಪಿದಾಗ ಅಲಂಗಾರು ಕಡೆಯಿಂದ ಕುದ್ಮಾರು ಕಡೆಗೆ ಬರುತ್ತಿದ್ದ ಪಿಕಪ್ ವಾಹನ KA 21 B 0172 ನೇದನ್ನು ಅದರ ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲ ಬದಿಗೆ ಬಂದು ಕುದ್ಮಾರು ಕಡೆಯಿಂದ ಅಲಂಗಾರು ಕಡೆಗೆ KA 19 EN 6491  ನೇ HONDA ACTIVA ಮೊಟಾರ್ ಸೈಕಲ್ನ್ನು ಚಲಾಯಿಸಿಕೊಂಡು ಬರುತ್ತಿದ್ದ   ಪಿರ್ಯಾದಿದಾರರ ಅಣ್ಣನ ಮಗ ನವೀನ ಪಿ ಆರ್ ಪ್ರಾಯ 28 ವರ್ಷ, ತಂದೆ : ರಾಧಾಕೃಷ್ಣ ಗೌಡ, ವಾಸ : ಪಾಲ್ತೂರು ಮನೆ, ಕುದ್ಮಾರು ಗ್ರಾಮ, ಕಡಬ ತಾಲೂಕು ಎಂಬುವರಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ  ಡಾಂಬಾರು ರಸ್ತೆಗೆ ಬಿದ್ದು ಮುಖಕ್ಕೆ ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದು ಪಿಕಪ್ ಚಾಲಕನು ಅಪಘಾತದ  ಬಳಿಕ  ಅಪಘಾತದ ಬಗ್ಗೆ ಪೋಲೀಸರಿಗೂ ಮಾಹಿತಿ ನೀಡದೇ ಗಾಯಾಳುವಿಗೂ ಚಿಕಿತ್ಸೆಯ ಬಗ್ಗೆ ವ್ಯವಸ್ಥೆ ಮಾಡದೇ ವಾಹನ ಸಮೇತ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ 71/2021 ಕಲಂ 279,338 ಐಪಿಸಿ ಮತ್ತು 134 (a) & (b) ಐ.ಎಂ.ವಿ ಕಾಯ್ದೆ 1988 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 2

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುಮತಿ ಪ್ರಾಯ 58 ವರ್ಷ ಗಂಡ:ಬಾಬು ನಾಯ್ಕ್ ವಾಸ:ಮುದಲ್ಮೆ ಮನೆ ಮಚ್ಚಿನ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರು ದಿನಾಂಕ: 27-12-2021 ರಂದು ತನ್ನ ಅಕ್ಕ ಚಂದ್ರಾವತಿಯ ಮನೆ ದಾಸಕೋಡಿ ಎಂಬಲ್ಲಿಗೆ ಮದುವೆ ಕಾರ್ಯಕ್ರಮಕ್ಕೆಂದು ಹೋಗುವಾಗ ಪಿರ್ಯಾದಿಯು ತನ್ನ ಬಾಬ್ತು  28 ಗ್ರಾಂ  ತೂಕದ ಲಕ್ಷ್ನೀ ಪೆಂಡೆಂಟ್‌ ಇರುವ ಕನಕ ಮಾಲೆ-1  ಸುಮಾರು  18 ಗ್ರಾಂ ತೂಕದ ಕೊತ್ತಂಬರಿ ಚೈನ್‌ ಹಾಗೂ ಸುಮಾರು 2 ಗ್ರಾಂ ತೂಕದ ಉಂಗುರವನ್ನು ಧರಿಸಿಕೊಂಡು ಹೋಗಿದ್ದು,  ದಿನಾಂಕ 28-12-2021ರಂದು ಬೆಳಿಗ್ಗೆ  ಧರಿಸಿದ್ದ ಚಿನ್ನಾಭರಣಗಳನ್ನು ಹಾಗೂ ನಗದು ರೂ. 2000/-ವನ್ನು ಕೆಂಪು ಬಣ್ಣದ ಪರ್ಸ್‌ನಲ್ಲಿರಿಸಿ ವ್ಯಾನಿಟಿ ಬ್ಯಾಗ್‌ನಲ್ಲಿಟ್ಟುಕೊಂಡು ಬ್ಯಾಗ್‌ನ್ನು ಹಿಡಿದುಕೊಂಡು ಪಿರ್ಯಾದಿಯು ಅಕ್ಕನ ಮನೆಯಿಂದ ಸುಮಾರು 11.45 ಗಂಟೆಗೆ ಉಪ್ಪಿನಂಗಡಿ ಬಸ್ಸು ನಿಲ್ದಾಣಕ್ಕೆ ಬಂದು ಪಕ್ಕದಲ್ಲಿರುವ ಅಂಗಡಿಯಲ್ಲಿ ತಿಂಡಿ ತಿನಿಸುಗಳನ್ನು ತೆಗೆದುಕೊಂಡಿದ್ದು ಈ ಸಮಯ ಬ್ಯಾಗ್‌ನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಇಟ್ಟ ಪರ್ಸ್‌ ಯಥಾ ಸ್ಥಿತಿಯಲ್ಲಿಯಲ್ಲಿರುವುದನ್ನು ನೋಡಿಕೊಂಡಿದ್ದು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದು ಸಮಯ ಸುಮಾರು 12.15 ಗಂಟೆಗೆ ವರುಣ್‌ ಬಸ್ಸಿಗೆ ಹತ್ತಿ ಬಸ್ಸಿನಲ್ಲಿ ಕುಳಿತುಕೊಂಡು ಬಸ್ಸಿಗೆ ಟಿಕೆಟ್‌ ನೀಡಲು ಹಣ ತೆಗೆಯಲು ಹೋದಾಗ ಪಿರ್ಯಾದಿಯ  ಬ್ಯಾಗ್‌ನ ಜಿಪ್‌ ಅರ್ಧ ತೆರೆದ ಸ್ಥಿತಿಯಲ್ಲಿದ್ದು  ಬ್ಯಾಗಿನೊಳಗೆ ನೋಡಲಾಗಿ ಚಿನ್ನದ ಸರವನ್ನಿಟ್ಟಿದ್ದ ಪರ್ಸ್‌ ಇಲ್ಲದೆ ಇದ್ದು ಯಾರೋ ಕಳ್ಳರು 11.45 ಗಂಟೆಯಿಂದ 12.15 ಗಂಟೆಯ ತನಕ ಉಪ್ಪಿನಂಗಡಿ  ಬಸ್ಸು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಪಿರ್ಯಾದಿಗೆ ತಿಳಿಯದಂತೆ ಬ್ಯಾಗ್‌ ನಲ್ಲಿಟ್ಟಿದ್ದ ಚಿನ್ನದ ಸರವಿದ್ದ ಪರ್ಸ್‌ ನ್ನು ಕಳವು ಮಾಡಿಕೊಂಡು  ಹೋಗಿರುವುದಾಗಿದೆ. ಕಳವಾದ ಚಿನ್ನಾಭರಣಗಳ ಹಾಗೂ ನಗದಿನ ಒಟ್ಟು ಮೌಲ್ಯ ರೂ. 1,82,000/- ಆಗಿರುತ್ತದೆ,  ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 171 /2021 ಕಲಂ:379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಕೃಷ್ಣಮೂರ್ತಿ ಪ್ರಾಯ: 43 ವರ್ಷ, ತಂದೆ: ರಾಜಶೇಖರ್ ವಾಸ: ಪುತ್ಯೆ ಮನೆ, ಕೌಕ್ರಾಡಿ ಗ್ರಾಮ , ಕಡಬ ತಾಲೂಕು (ಮುಖ್ಯ ಶಿಕ್ಷಕರು, ಸ.ಉ.ಹಿ.ಪ್ರಾ.ಶಾಲೆ ಪಟ್ರಮೆ)  ರವರು ಸ.ಉ.ಹಿ.ಪ್ರಾ.ಶಾಲೆ ಪಟ್ರಮೆ ಎಂಬಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ; 20-12-2021 ರಂದು ಸಂಜೆ 4.30 ಘಂಟೆಗೆ ಶಾಲಾ ಚಟುವಟಿಕೆ ಮುಗಿಸಿ ಶಾಲೆಗೆ ಬೀಗ ಹಾಕಿ ಮನೆಗೆ ಹೋಗಿರುತ್ತಾರೆ. ದಿನಾಂಕ: 21-12-2021 ರಂದು ಬೆಳಿಗ್ಗೆ 9.00 ಗಂಟೆಗೆ ಶಾಲೆಗೆ ಬಂದಾಗ ಶಾಲಾ ಕೊಳವೆ ಬಾವಿ ಪೈಪ್‌ಗಳನ್ನು, ಶಾಲಾ ಸೂಚನಾ ಫಲಕವನ್ನು, ನೀರಿನ ನಳ್ಳಿಗಳನ್ನು, ಹೂತೋಟದ ಕಬ್ಬಿಣದ ಬೇಲಿಯನ್ನು ಯಾರೋ ಕಿಡಿಗೇಡಿಗಳು ಹಾಳು ಮಾಡಿರುವುದು ಕಂಡು ಬಂದಿದ್ದು, ಹಾಗೂ ಬಾವಿಯ ರಾಟೆ, ಹಗ್ಗ ಮತ್ತು ಕುಡಿಯುವ ನೀರಿನ ಟ್ಯಾಂಕ್ ನ ಮುಚ್ಚಳವನ್ನು ಕಳ್ಳತನ ಮಾಡಿರುವುದು ಗಮನಕ್ಕೆ ಬಂದಿರುತ್ತದೆ. ಕಳವಾದ  ಮತ್ತು ಹಾನಿಗೊಳಿಸಲಾದ ಸೊತ್ತುಗಳ ಅಂದಾಜು ಮೊತ್ತ ರೂ 25.000/- ಆಗಬಹುದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 90/2021 ಕಲಂ: 427,379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 3

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅರುಣ್ ಸ್ಟೀವನ್ ಮಿನೇಜಸ್ (43) ತಂದೆ: ದಿ| ಪೌಲ್ ಮಿನೇಜಸ್ ವಾಸ: ಮಹಲ್ ತೋಟ ಮನೆ, ಅಮ್ಟಾಡಿ ಗ್ರಾಮ ಲೊರೆಟ್ಟೊ ಅಂಚೆ ಬಂಟ್ವಾಳ ತಾಲೂಕು ರವರ ಅಣ್ಣ ಜೊಸ್ಸಿ ಐವನ್ ಮಿನೇಜಸ್ ರವರ ಮಗ ಜೋಯನಲ್ ನೊಂದಿಗೆ ವಾಸವಾಗಿದ್ದು, ಅಣ್ಣನ ಪತ್ನಿ ಎಮಿಲಿಯಾರವರು ವಿದೇಶದಲ್ಲಿದ್ದು, ಮಗಳು ಜರ್ಮನಿಯಲ್ಲಿರುವುದಾಗಿದೆ. ಅಣ್ಣನ ಪತ್ನಿಯು ಒಂದು ತಿಂಗಳ ಹಿಂದೆ ಊರಿಗೆ ಬಂದಿದ್ದು, ಒಟ್ಟಿಗೆ ವಾಸ್ತವ್ಯ ಇದ್ದರು. ಅಣ್ಣನನ್ನು ಕೂಡ ವಿದೇಶಕ್ಕೆ ಕರೆದುಕೊಂಡು ಹೋಗುವ ಆಲೋಚನೆಯಲ್ಲಿದ್ದರು. ದಿನಾಂಕ:24-12-2021 ರಂದು ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ರಾತ್ರಿ ವಿಶೇಷ ಪೂಜೆಯನ್ನು ಮುಗಿಸಿ ವಾಪಾಸು ಮನೆಗೆ ಬಂದಿದ್ದರು. ಹೀಗಿರುತ್ತಾ ರಾತ್ರಿ 11.30 ಗಂಟೆಗೆ ಪಿರ್ಯಾದಿದಾರರ ಅತ್ತಿಗೆಯು ಜೋರಾಗಿ ಬೊಬ್ಬೆ ಹೊಡೆಯುವುದನ್ನು ಕೇಳಿ ಪಿರ್ಯಾದಿದಾರರು ಮನೆಗೆ ಹೋದಾಗ ಜೊಸ್ಸಿ ಐವನ್ ಮಿನೇಜಸ್ ಹುಲ್ಲು ಸಾಯಿಸಲು ತಂದಿದ್ದ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥನಾಗಿದ್ದು, ಕೂಡಲೇ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಅಲ್ಲಿಂದ ಶ್ರೀನಿವಾಸ ಆಸ್ಪತ್ರೆ ಮುಕ್ಕ ಸುರತ್ಕಲ್ ಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ದಿನಾಂಕ:29-12-2021 ರಂದು ಸಂಜೆ 6.40 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 47-2021 ಕಲಂ: 174 ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ರಾಮನಾಥ ಪ್ರಭು .ಬಿ (37 ವರ್ಷ) ತಂದೆ: ದಿ. ತೀರ್ಥರಾಮ ಪ್ರಭು, ವಾಸ: ಹೊಸ ಕಟೀರ ಮಾರ್ನಬೈಲು ಸಜಿಪ ಮುನ್ನೂರು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ಚಿಕ್ಕಪ್ಪ ಮನೋಹರ ಪ್ರಭು ( 51 ವರ್ಷ) ಎಂಬವರು ಅವರ ಸಂಸಾರದೊಂದಿಗೆ ವಾಸವಾಗಿದ್ದು ಹಲವು ರೀತಿಯ ವ್ಯವಹಾರ ನಡೆಸುತ್ತಿದ್ದು, ದಿನಾಂಕ 30.12.2021 ರಂದು ಬೆಳಿಗ್ಗೆ ಮನೆಯಿಂದ ಕಾಣೆಯಾದ ಬಗ್ಗೆ ಅವರ ಪತ್ನಿಯಿಂದ ಮಾಹಿತಿ ತಿಳಿದು ಫಿರ್ಯಾದಿದಾರರು ಪುತ್ತೂರಿಗೆ ಬಂದು  ಹುಡುಕುತ್ತಿರುವ ಸಮಯ ಪಿರ್ಯಾದಿದಾರರ ಚಿಕ್ಕಪ್ಪ ಉಪಯೋಗಿಸುತ್ತಿದ್ದ ಸ್ಕೂಟರ್‌ ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿರುವ ಕೆರೆಯ ಬಳಿ ಕಂಡು ಬಂದು ಕೂಡಲೇ ಅಘ್ನಿಶಾಮಕ ದಳದವರಿಗೆ ಮಾಹಿತಿ ನೀಡಿ ಅವರು ಬಂದು ಕೆರೆಯ ನೀರಿನಲ್ಲಿ ಹುಡುಕುತ್ತಿರುವಾಗ ಮನೋಹರ ಪ್ರಭು ರವರ ಮೃತದೇಹ ದೊರೆತಿರುತ್ತದೆ. ಫಿರ್ಯಾದಾರರ ಚಿಕ್ಕಪ್ಪ ತನ್ನ ವ್ಯವಹಾರದಲ್ಲಿ ಆರ್ಥಿಕ ತೊಂದರೆ ಉಂಟಾಗಿ ಕೆರೆಯ ನೀರಿಗೆ ಹಾರಿ ಆತ್ಮತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಯು.ಡಿ.ಆರ್ ನಂ: 35/2021 ಕಲಂ: 174 ಸಿ.ಆರ್.ಪಿ.ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುಂದರ ಪೂಜಾರಿ, 66 ವರ್ಷ, ಬಿನ್: ದಿ|| ಚೆನ್ನಪ್ಪ ಪೂಜಾರಿ, ವಾಸ: ಬೇಂಗಡ್ಕ ಮನೆ, ಬೊಬ್ಬೆಕೇರಿ ಅಂಚೆ, ಕಾಣಿಯೂರು ಗ್ರಾಮ, ಕಡಬ ತಾಲೂಕು ರವರ ಮಗ ಹರೀಶ.ಬಿ, 29 ವರ್ಷರವರು ದಿನಾಂಕ 29.12.2021 ರಂದು ರಾತ್ರಿ 10-00 ಗಂಟೆಗೆ ಊಟ ಮಾಡಿ ಮಲಗಿದವರು ಬಳಿಕ ಎಂದಿನಂತೆ ತೋಟಕ್ಕೆ ಸ್ಪಿಂಕ್ಲೇರ್ ಹಾಕಲು ಹೋಗಿದ್ದು ದಿನಾಂಕ 30-12-2021 ರಂದು ಬೆಳಗ್ಗೆ 06-00 ಗಂಟೆಯ ವರೆಗೆ ವಾಪಾಸ್ಸು ಬಾರದೇ ಇದ್ದುದರಿಂದ ಪಿರ್ಯಾದಿದಾರರು ಹಾಗೂ ಇತರರು ಹುಡುಕಿದಾಗ ಪಿರ್ಯಾದಿದಾರರ ತೋಟಕ್ಕೆ ಹೋಗುವ ಕಾಲುದಾರಿಯ ಸಮೀಪ ಜನಾರ್ಧನ ಪೂಜಾರಿಯವರ ಬಾಬ್ತು ಜಮೀನಿನಲ್ಲಿರುವ ಕೆರೆಯ ಬದಿಯಲ್ಲಿ ಜಾರಿಬಿದ್ದ ಗುರುತು, ಹಾಗೂ ಸ್ಲಿಪ್ಪರ್ ಚಪ್ಪಲಿಗಳನ್ನು ನೋಡಿ ಸಂಶಯಗೊಂಡು ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಈಜುಗಾರರನ್ನು ಕರೆಸಿ ಕೆರೆಯ ನೀರಿನ ಆಳದಲ್ಲಿ ಮುಳುಗಿದ್ದ ಹರೀಶನನ್ನು ಮೇಲೆ ಎತ್ತಿ ಉಪಚರಿಸಿ ನೋಡಲಾಗಿ ಹರೀಶನು ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಹರೀಶನು ದಿನಾಂಕ 29-12-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 30-12-2021 ರಂದು ಬೆಳಗ್ಗೆ 06-00 ಗಂಟೆಯ ಮಧ್ಯೆ ಅವಧಿಯಲ್ಲಿ ತೋಟಕ್ಕೆ ನೀರು ಬಿಡಲು ಸ್ಪಿಂಕ್ಲೇರ್ ಅಳವಡಿಸಲು ಜನಾರ್ಧನ ಪೂಜಾರಿಯವರ ಜಮೀನಿನ ಬದಿಯಿಂದಾಗಿ ಹಾದು ಹೋಗುವ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಜನಾರ್ಧನ ಪೂಜಾರಿಯವರ ಬಾಬ್ತು ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ 37/2021  ಕಲಂ 174 ಸಿಆರ್ ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 31-12-2021 01:29 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080