ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಘು ಪೊಜಾರಿ (46), ತಂದೆ: ದೇಜಪ್ಪ ಪುಜಾರಿ, ವಾಸ:ಶಾಂತಿ ನಗರ ಮನೆ, ಬೆಳಾಲು ಗ್ರಾಮ, ಮತ್ತು ಅಂಚೆ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ:30-12-2022 ರಂದು ತನ್ನ ಮನೆಯಾದ ಶಾಂತಿನಗರಕ್ಕೆ ಬೆಳಾಲು ಕಡೆಯಿಂದ ಕೊಯ್ಯೂರು ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದು ಕೊಂಡುಹೊಗುತ್ತಿರುವ ಸಮಯ ಸುಮಾರು ಮದ್ಯಾಹ್ನ 1.15 ಗಂಟೆಗೆ ಬೆಳ್ತಂಗಡಿ ತಾಲೂಕು, ಬೆಳಾಲು ಗ್ರಾಮದ ದೊಂಪದಪಳಿಕೆ ಎಂಬಲ್ಲಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಕೊಯ್ಯೂರು ಕಡೆಯಿಂದ ಬೆಳಾಲುಕಡೆಗೆ ಕೆಎ 70 ಇ 3814 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರ ದುಡುಕುತನ ದಿಂದ ಸವಾರಿಮಾಡಿಕೊಂಡು ಹೋಗಿ ಪಿರ್ಯಾದುದಾರಿಗೆ ಢಿಕ್ಕಿ ಹೊಡೆದನು, ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಬಲಕಾಲಿನ ಮಣಿಗಂಟಿಗೆ ,ಬಲಕೊಲುಕಾಲಿಗೆ ಗುದ್ದಿದ ಗಾಯ,ಎದೆಗೆ ಗುದ್ದಿದ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಉಜಿರೆ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 175/2022 ಕಲಂ; 279,  337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಐವನ್ ಮೊಂತಾರೋ ಪ್ರಾಯ 53 ವರ್ಷ ತಂದೆ: ಲೊರೆನ್ಸ್ ಮೊಂತಾರೋ ವಾಸ:  ತೊಡಂಬಿಲ್ ಮನೆ ಕಳ್ಳಿಗೆ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರ ತಮ್ಮನ ಮನೆ ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಕಲ್ಪನೆ ಎಂಬಲ್ಲಿ ಮನೆ ಇದ್ದು, ಕೆಲಸದ ಬಗ್ಗೆ ಫಿರ್ಯಾಧಿದಾರರ ತಮ್ಮನು ವಿದೇಶದಲ್ಲಿ ಇರುವುದಾಗಿದೆ, ಸದ್ರಿ ಮನೆಯನ್ನು ಫಿರ್ಯಾದಿದಾರರು ವಾರಕ್ಕೆ ಒಂದು ಸಲ ಬಂದು ನೋಡಿ ಕೊಂಡು ಹೋಗುತ್ತಿರುವುದಾಗಿದೆ. ದಿನಾಂಕ 24-12-2022 ರಂದು ಸದ್ರಿ ಮನೆಗೆ ಫಿರ್ಯಾದಿದಾರರು ಬಂದು ಸಂಜೆ 5.00 ಗಂಟೆಗೆ ವಾಪಾಸ್ಸು ಹೋಗಿರುತ್ತಾರೆ. ದಿನಾಂಕ 31-12-2022 ರಂದು ಬೆಳಿಗ್ಗೆ 8.45 ಗಂಟೆಗೆ ಕೆಲಸಕ್ಕೆಂದು ಕೆಲಸಗಾರ ಉಮೇಶನು ತಮ್ಮನ ಮನೆಗೆ ಬಂದಾಗ ಸದ್ರಿ ಮನೆಯ ಎದುರಿನ ಬಾಗಿಲು ತೆರದಿರುವ ಬಗ್ಗೆ ಕರೆ ಮಾಡಿ ತಿಳಿಸಿರುತ್ತಾನೆ. ಅದರಂತೆ ಪಿರ್ಯಾಧಿದಾರರು ಮನೆಗೆ ಬಂದು ನೋಡಲಾಗಿ ಮನೆಯಲ್ಲಿನ ಟಿ ವಿ ಯನ್ನು ಕಳವು ಮಾಡಿದ ಬಗ್ಗೆ ತಿಳಿದು ಬಂದಿರುತ್ತದೆ. ದಿನಾಂಕ 24-12-2022 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 31-12-2022 ರಂದು ಬೆಳಿಗ್ಗೆ 8.45 ಗಂಟೆಯ ಮಧ್ಯಾವದಿಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲಯನ್ನು ಮುರಿದು ಮನೆಯೊಳಗೆ ಪ್ರವೇಶಿಸಿ ಮನೆಯಲ್ಲಿನ 20,000/- ರೂ ಮೌಲ್ಯದ ಟಿ ವಿ ಯನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ: 125/2022 ಕಲಂ: 454, 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ (40) ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಎಂಬವರ ದೂರಿನಂತೆ ಫಿರ್ಯಾಧಿದಾರರು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿದ್ದು ದಿನಾಂಕ:24-11-2022 ರ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯ ನಿರ್ಣಯದಂತೆ  ದಿನಾಂಕ:31-12-2022 ರಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್ ತೆರವು ಮಾಡುವಂತೆ ಪಂಚಾಯತ್ ಕಛೇರಿ ಸಿಬ್ಬಂದಿಯವರಿಗೆ ಫಿರ್ಯಾಧಿದಾರರು ನೀಡಿದ ಸೂಚನೆಯಂತೆ ಸಿಬ್ಬಂದಿಗಳು ಮದ್ಯಾನ್ಹ 3-15 ಗಂಟೆಗೆ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ನೆಡ್ಚಿಲ್ ಎಂಬಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಬ್ಯಾನರನ್ನು ತೆರವುಗೊಳಿಸಲು ಹೋದಾಗ ಬ್ಯಾನರ್ ತೆರವುಗೊಳಿಸದಂತೆ ಅಲ್ಲಿದ್ದವರು ತಡೆದಿದ್ದು ಪಂಚಾಯತ್ ಸಿಬ್ಬಂದಿಗಳು ಫಿರ್ಯಾಧಿದಾರರಿಗೆ ಕರೆಮಾಡಿ ವಿಷಯ ತಿಳಿಸಿದಾಗ ಫಿರ್ಯಾಧಿದಾರರು 3-45 ಗಂಟೆಗೆ ಸ್ಥಳಕ್ಕೆ ತೆರಳಿ ಬ್ಯಾನರ್ ತೆರವುಗೊಳಿಸಲು ಮುಂದಾದಾಗ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಅತ್ರಮಜಲು,ರಮೇಶ್ ಭಂಢಾರಿ ಮತ್ತು ರೋಹಿತ್ ಹಾಗೂ ಇತರರು ಬ್ಯಾನರ್ ತೆಗೆಯದಂತೆ ತಡೆಯೊಡ್ಡಿ ಫಿರ್ಯಾಧಿದಾರರ ಮೇಲೆ ಹಲ್ಲೆಗೆ ಮುಂದಾಗಿರುತ್ತಾರೆ ಹಾಗೂ ಗ್ರಾಮ ಪಂಚಾಯತ್ ವಾಹನದ ಕೀಯನ್ನು ತೆಗೆದಿಟ್ಟು ಫಿರ್ಯಾಧಿದಾರರ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 134/2022 ಕಲಂ:353, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಎಂಬವರ ದೂರಿನಂತೆ ಫಿರ್ಯಾದಿದಾರರ ಅಣ್ಣ ಸಂಜೀವ ಪೂಜಾರಿಯವರ ಮಗನಾದ ಪ್ರಭಾಕರ (41 ವರ್ಷ)  ಎಂಬವರು ವಿಪರೀತ ಅಮಲು ಪದಾರ್ಥ ಸೇವನೆ ಮಾಡುತ್ತಿದ್ದವರನ್ನು ಮಂಗಳೂರು ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಮಧ್ಯಪಾನ ಮಾಡುವ ಚಟವನ್ನು ಬಿಡಿಸುವ ಸಲುವಾಗಿ ಚಿಕಿತ್ಸೆಗೆ ದಾಖಲಿಸಿ 07 ದಿನಗಳ ಕಾಲ ಚಿಕಿತ್ಸೆಯನ್ನು ನೀಡಿ ನಿನ್ನೆ ದಿ:30.12.2022ರಂದು ಆಸ್ಪತ್ರೆಯಿಂದ ಬಿಡುಗಡೆ ಗೊಳಿಸಿ ಮನೆಗೆ ಕರೆದುಕೊಂಡು ಬಂದು ಮನೆಯಲ್ಲಿದ್ದವರು ವಿಪರೀತ ಮದ್ಯ ಸೇವಿಸುವ ಚಟವನ್ನು ಹೊಂದಿದ್ದವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:31.12.2022 ರಂದು ಬೆಳಿಗ್ಗೆ 11.30 ಗಂಟೆಗೆ ತಾನು ಮಲಗುತ್ತೇನೆಂದು ಹೇಳಿ ಆತನ ರೂಮಿಗೆ ಹೋದವರು ರೂಮಿನ ಫ್ಯಾನಿಗೆ ಬಟ್ಟೆಯ ಶಾಲಿನಿಂದ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರನ್ನು ಚಿಕಿತ್ಸೆಯ ಬಗ್ಗೆ ಉಜಿರೆ ಬೆನಕಾ ಆಸ್ಪತ್ರೆಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವ ಸಮಯ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಯುಡಿಆರ್‌ ನಂ:59/2022 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಂದೀಪ್ ತಂದೆ ಶೇಖರ ಪೂಜಾರಿ, ಸೂರ ಮನೆ, ನಾವೂರು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು  ತಾಯಿ ತಂಗಿ, ಅಕ್ಕ ಬಾವ ರವರೊಂದಿಗೆ ವಾಸವಾಗಿದ್ದು ,ಕೃಷಿ ಕೆಲಸ  ಮಾಡಿಕೊಂಡಿರುವುದಾಗಿದೆ. ದಿನಾಂಕ 31-12-2022 ರಂದು ಬೆಳಿಗ್ಗೆ  9.30 ಗಂಟೆಗೆ ಕೃಷಿ ಕೂಲಿ ಕೆಲಸಕ್ಕೆಂದು ಹೋಗಿದ್ದು  ಬೆಳಿಗ್ಗೆ 10.30 ಗಂಟೆಗೆ  ನಾವೂರ ಸುಜಿತ್ ಜೈನ್ ರವರು ನನಗೆ ಮೊಬೈಲ್ ಗೆ ಕರೆ ಮಾಡಿ  ಮಾಡಿ ನಿನ್ನ ಬಾವ ನಾವೂರ ಅದರ್ಕಳ  ವಸಂತ ನವರ ತೋಟದಲ್ಲಿ ತೆಂಗಿನ ಮರದಿಂದ ತೆಂಗಿನ ಕಾಯಿ ಕೀಳುತ್ತಿದ್ದ ಸಮಯ ಆಕಸ್ಮಿ ಕವಾಗಿ ಕೆಳಗೆ ಬಿದ್ದಿದ್ದು ಅವರನ್ನು ನಾನು ಮತ್ತು ವಸಂತ ರವರು  ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಬಂಟ್ವಾಳ  ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಅಲ್ಲಿಂದ  ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮದ್ಯಾಹ್ನ 12.15 ಗಂಟೆಗೆ  ದಾರಿ ಮದ್ಯೆ ಮೃತ ಪಟ್ಟಿರುವುದಾಗಿ ವೆನ್ಲಾಕ್‌ ಅಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ. ಪಿರ್ಯಾದಿಯ ಬಾವ ತೆಂಗಿನಕಾಯಿ, ಅಡಿಕೆ ತೆಗೆಯುವ ಕೃಷಿ ಕೆಲಸ ಮಾಡಿಕೊಂಡಿದ್ದವರು ಈ ದಿನ ಕೂಡ  ಬೆಳಿಗ್ಗೆ  ತೆಂಗಿನ ಕಾಯಿ ತೆಗೆಯಲು ಹೋಗಿದ್ದು ನಾವೂರ ಅದರ್ಕಳ  ವಸಂತರವರ ತೋಟದ ತೆಂಗಿನ ಕಾಯಿಯನ್ನು ಕೇಳಲು ತೆಂಗಿನ ಮರವನ್ನು ಹತ್ತಿದ  ಸಮಯ ಆಕಸ್ಮಿಕವಾಗಿ ಕೈ ತಪ್ಪಿ ಕೆಳಗೆ ಬಿದ್ದು ಆದ  ಒಳಗಾಯದಿಂದ ಮೃತ ಪಟ್ಟಿದ್ದು.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ: 69-2022  ಕಲಂ: 174 ಸಿಆರ್ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-01-2023 12:26 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080