ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 • ಬೆಳ್ಳಾರೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಘುನಾಥ ಕೆ ಪ್ರಾಯ 39 ವರ್ಷ,ತಂದೆ: ಮೊಡೆಂಕಿಲ,ವಾಸ: ಕಾಪುತ್ತಡ್ಕ ಮನೆ,ಕೆಯ್ಯೂರು ಗ್ರಾಮ,ಪುತ್ತೂರು ತಾಲೂಕು, ದ.ಕ. ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 29.01.2023 ರಂದು ಅಗತ್ಯ ಸಾಮಾನು ಖರೀದಿಗೆಂದು ಅಂಕತ್ತಡ್ಕ ಎಂಬಲ್ಲಿರುವ ನೆಬಿಸಾ ರವರ ಅಂಗಡಿಗೆ ಹೋಗಿ  ಅಂಗಡಿ ಎದುರು ನಿಂತಿದ್ದ ಸಮಯ ಸುಮಾರು ಸಂಜೆ 4-45 ಗಂಟೆಗೆ ಕುಂಬ್ರ-ಬೆಳ್ಳಾರೆ ರಸ್ತೆಯಲ್ಲಿ ಅಂಕತ್ತಡ್ಕ ಕಡೆಯಿಂದ ಕೆಯ್ಯೂರು ಕಡೆಗೆ ಆಟೋ ರಿಕ್ಷಾವೊಂದನ್ನು ಅದರ ಚಾಲಕನು ಅಜಗಾರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿದ್ದ ಹಾವೊಂದನ್ನು ತಪ್ಪಿಸಲು ರಸ್ತೆಯ ಬಲಗಡೆಗೆ ಚಲಾಯಿಸಿದ ಪರಿಣಾಮ ಆಟೋ ರಿಕ್ಷಾವು ಚಾಲಕನ ಹತೋಟಿ ತಪ್ಪಿ ಮಗುಚಿ ಬಿತ್ತು. ಕೂಡಲೇ ಪಿರ್ಯಾದಿದಾರರು  ಮತ್ತು ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಇತರರು ಹೋಗಿ ಆಟೋ ರಿಕ್ಷಾದಲ್ಲಿದ್ದವರನ್ನು ಎಬ್ಬಿಸಿ ನೋಡಲಾಗಿ ಆಟೋ ರಿಕ್ಷಾದ ಹಿಂಬದಿಯಲ್ಲಿ ಕುಳಿತಿದ್ದವರು ಪಿರ್ಯಾದಿದಾರರ ಸಂಬಂಧಿಕ ಮಾವ ಚನಿಯ ಎಂಬವರಾಗಿದ್ದು, ಅವರ ಎಡಕಾಲಿಗೆ ಗುದ್ದಿದ ನಮೂನೆಯ ರಕ್ತ ಗಾಯ ಮತ್ತು ಬಲ ಕಾಲಿಗೆ ತರಚಿದ ನಮೂನೆಯ ಗಾಯಗಳಾಗಿತ್ತು. ಆಟೋ ರಿಕ್ಷಾ ಚಾಲಕ ಪಿರ್ಯಾದಿದಾರರ  ಪರಿಚಯದ ದೇವಪ್ಪರವರ ಎಡಕಾಲಿಗೆ ಸಣ್ಣ ತರಚಿದ ನಮೂನೆಯ ಗಾಯವಾಗಿತ್ತು. ಅಪಘಾತಕ್ಕೋಳಗಾದ ಆಟೋ ರಿಕ್ಷಾ ನಂಬ್ರ ನೋಡಲಾಗಿ ಕೆಎ-21-ಎ-8421 ಆಗಿದ್ದು, ಜಖಂಗೊಂಡಿರುತ್ತದೆ. ಗಾಯಾಳು ಚನಿಯ ರವರನ್ನು ಅದೇ ರಸ್ತೆಯಲ್ಲಿ ಬರುತ್ತಿದ್ದ ಆಟೋ ರಿಕ್ಷಾವೊಂದರಲ್ಲಿ ಪಿರ್ಯಾದಿದಾರರು ಮತ್ತು ಆಟೋ ಚಾಲಕ ದೇವಪ್ಪ ರವರು ಚಿಕಿತ್ಸೆಯ ಬಗ್ಗೆ  ಪುತ್ತೂರಿನ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದು ಅಲ್ಲಿಂದ ನಾವು ಅಂಬ್ಯುಲೆನ್ಸ್‌ ನಲ್ಲಿ ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಚನಿಯರವರನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಆಟೋ ಚಾಲಕ ದೇವಪ್ಪ ರವರಿಗೆ ಸಣ್ಣ ಪುಟ್ಟ ತರಚಿದ ನಮೂನೆಯ ಗಾಯವಾಗಿರುವುದರಿಂದ ಅವರು ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ ಅಕ್ರ:03/2023 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಜೋತ್‌, ಪ್ರಾಯ 21 ವರ್ಷ ತಂದೆ: ಶ್ರೀಧರ ಪೂಜಾರಿ ವಾಸ: ಅಳಕ್ಕೆ-ಬಟ್ಟಂಡ ಮನೆ, ತಣ್ಣೀರುಪಂಥ  ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ  ದಿನಾಂಕ 30-01-2023 ರಂದು 17:45 ಗಂಟೆಗೆ ಆರೋಪಿ ಒಮ್ನಿ ಕಾರು ಚಾಲಕ ಸತೀಶ ಗೌಡ ಎಂಬವರು KA-21-Z-0249 ನೇ ನೋಂದಣಿ ನಂಬ್ರದ ಓಮ್ನಿ ಕಾರಿನಲ್ಲಿ ಧರ್ಣಪ್ಪ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿ – ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ನೇಜಿಕಾರು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ, ಓಮ್ನಿ ಕಾರು ಸ್ಕೀಡ್‌ ಆಗಿ ಪಲ್ಟಿಯಾಗಿ ರಸ್ತೆ ಬದಿಯ ಗುಂಡಿಗೆ ಬಿದ್ದು, ಪ್ರಯಾಣಿಕರಾದ ಧರ್ಣಪ್ಪ ರವರಿಗೆ ಸೊಂಟಕ್ಕೆ, ಮೂಗಿಗೆ, ಹೊಟ್ಟೆಗೆ ಗುದ್ದಿದ ಹಾಗೂ ರಕ್ತಗಾಯಗಳಾಗಿದ್ದು ಪಿರ್ಯಾದುದಾರರು ಅಂಬುಲೆನ್ಸ್‌ ನಲ್ಲಿ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ  ಚಿಕಿತ್ಸೆ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಆರೋಪಿ ಓಮ್ನಿ ಕಾರು ಚಾಲಕರಿಗೂ ಸಣ್ಣ ಪುಟ್ಟ ಗುದ್ದಿದ ಗಾಯವಾಗಿದ್ದು.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ19/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜೆ, ಅಬ್ದುಲ್ ಹನೀಫ್ (37) ತಂದೆ: ಮಹಮ್ಮದ್ ವಾಸ: ಜಯನಗರ ಮನೆ, ಸುಳ್ಯ ಕಸಬಾ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಸುಳ್ಯ ಕೆ.ವಿ.ಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಂಬ್ಯುಲೇನ್ಸ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಈ ದಿನ ದಿನಾಂಕ 31.01.2023 ರಂದು ಕೆಎ 21 ಬಿ 1971 ನೇ ಅಂಬ್ಯುಲೇನ್ಸ್ ನಲ್ಲಿ  ಆಸ್ಪತ್ರೆಯಿಂದ ರೋಗಿಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿರುವರೇ ಸಮಯ ಸುಮಾರು 17:10 ಗಂಟೆಗೆ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಅರಂಬೂರು ಪಾಲಡ್ಕ (ಮಾಣಿ- ಮೈಸೂರು ಹೆದ್ದಾರಿ) ಎಂಬಲ್ಲಿ ತಲುಪುತ್ತಿದ್ದಂತೆ ಸಂಪಾಜೆ ಕಡೆಯಿಂದ ಸುಳ್ಯ ಕಡೆಗೆ ಕೆಎ 01 ಎಫ್ 9197 ನೇ ದರ ಕೆ.ಎಸ್.ಆರ್.ಟಿ.ಸಿ ಐರಾವತ ಬಸ್ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಲಾರಿಯೊಂದನ್ನು ಓವರ್ ಟೇಕ್ ಮಾಡಿ ಆತನ ತಪ್ಪು ಬದಿಯಾದ ಬಲಬದಿಗೆ ಬಸ್ ನ್ನು ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಚಲಾಯಿಸುತ್ತಿದ್ದ ಆಂಬ್ಯುಲೇನ್ಸ್ ನ ಎಡಬದಿಗೆ ಡಿಕ್ಕಿವುಂಟುಮಾಡಿದ ಪರಿಣಾಮ ಅಂಬ್ಯಲೇನ್ಸ್ ನ ಎಡಬದಿ ಜಖಂ ಆಗಿದ್ದು, ಎಡಬದಿ ಸೀಟಿನಲ್ಲಿ ಕುಳಿತ್ತಿದ್ದ ಸ್ವಸ್ತಿಕ್ (23) ಎಂಬಾತನಿಗೆ ಎಡಕಾಲಿನ ಮೊಣಗಂಟಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ,ಕ್ರ   ನಂ: 12/2023 ಕಲಂ: 279,337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನಾಗೇಶ್‌, ಪ್ರಾಯ: 37 ವರ್ಷ, ತಂದೆ: ದಿ| ಅಣ್ಣು ಪೂಜಾರಿ, ವಾಸ: ಕುಲಾಲ್‌ ದರ್ಖಾಸ್‌ ಮನೆ, ಇರ್ವತ್ತೂರು ಗ್ರಾಮ, ನೈನಾಡು ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ಫಿರ್ಯಾದಿದಾರರು ಬಂಟ್ವಾಳ ತಾಲೂಕು ಮೂಡುಪಡುಕೋಡಿ ಗ್ರಾಮದ ನೇರಳಕಟ್ಟೆ ಎಂಬಲ್ಲಿ ಜಿತೇಶ್‌ ವುಡ್‌ ವರ್ಕ್ಸ್‌ ಹೆಸರಿನ ಪೀಠೋಪಕರಣಗಳನ್ನು ತಯಾರಿಸುವ ಅಂಗಡಿಯನ್ನು ಹೊಂದಿದ್ದು, ಸದ್ರಿ ಅಂಗಡಿಯಲ್ಲಿ ಸುಮಾರು 6 ವರ್ಷಗಳಿಂದ ಪುರುಷೋತ್ತಮ ಆಚಾರ್ಯ ಎಂಬವರು ಕೆಲಸ ಮಾಡಿಕೊಂಡಿದ್ದು, ದಿನಾಂಕ: 31-01-2023 ರಂದು ಮದ್ಯಾಹ್ನ ಸಮಯ ಫಿರ್ಯಾದಿದಾರರು ಹಾಗೂ ಮೋಹನ ಶೆಟ್ಟಿಗಾರ ಎಂಬವರು ಅಂಗಡಿಯ ಒಂದು ಮೂಲೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಇನ್ನೊಂದು ಮೂಲೆಯಲ್ಲಿ ಪುರುಷೋತ್ತಮ ಆಚಾರ್ಯ ರವರು ಕೆಲಸ ಮಾಡಿಕೊಂಡಿದ್ದ ಸಮಯ ಮದ್ಯಾಹ್ನ 2.40 ಗಂಟೆಗೆ ಫಿರ್ಯಾದಿದಾರರು ಪುರುಷೋತ್ತಮ ಆಚಾರ್ಯರವರು ಕೆಲಸ ಮಾಡುತ್ತಿದ್ದಲ್ಲಿಗೆ ಹೋದಾಗ ಪುರುಷೋತ್ತಮ ಆಚಾರ್ಯರವರು ನೆಲದಲ್ಲಿ ಬಿದ್ದುಕೊಂಡಿದ್ದು, ಫಿರ್ಯಾದಿದಾರರು ಮೋಹನ್‌ ಶೆಟ್ಟಿಗಾರ್‌ ರವರೊಂದಿಗೆ ಪುರುಷೋತ್ತಮ ಆಚಾರ್ಯರವರನ್ನು ಮೇಲಕ್ಕೆತ್ತಿ ಉಪಚರಿಸಿ ಆರೈಕೆ ಮಾಡಿದಾಗ ಅವರು ಪ್ರಜ್ಞಾಹೀನರಾಗಿದ್ದು, ಕೂಡಲೇ ಫಿರ್ಯಾದಿದಾರರು  ಪುರುಷೋತ್ತಮ ಆಚಾರ್ಯರವರ ಮನೆಯವರಿಗೆ ವಿಚಾರವನ್ನು ತಿಳಿಸಿ ಅಂಗಡಿಯಲ್ಲಿದ್ದ ಇತರ ಕೆಲಸಗಾರರೊಂದಿಗೆ  108 ಆಂಬ್ಯುಲೆನ್ಸ್‌ ನಲ್ಲಿ  ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಪುರುಷೋತ್ತಮ ಆಚಾರ್ಯರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ UDR NO: 01/2023  ಕಲಂ: 174 ಸಿಆರ್‌ಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-02-2023 12:44 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080