ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಸುಜಾತ (48) ಗಂಡ: ಸುಧಾಕರ ಪೂಜಾರಿ, ವಾಸ: ಮುಕ್ಕಾದ ಮನೆ,ಪಂಜಿಕಲ್ಲು ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ: 31.03.2021 ರಂದು  ತನ್ನ ಮಗಳಾದ ಸ್ವಾತಿಯವರೊಂದಿಗೆ ಬಂಡಶಾಲೆಯಿಂದ  ಬಿ.ಸಿ.ರೋಡ್  ಕಡೆಗೆ KA-19-AC-9829 ನೇ ಜಯರಾಜ್ ಹೆಸರಿನ  ಖಾಸಗಿ  ಬಸ್ಸಿನಲ್ಲಿ ಪ್ರಯಾಣಿಸುತ್ತಾ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಎಸ್.ವಿ.ಎಸ್ ಕಾಲೇಜು ಬಳಿ ತಲುಪಿದಾಗ ಬಸ್ಸಿನ ಚಾಲಕ ತಿರುವು ಹಾಗೂ ಇಳಿಜಾರು ರಸ್ತೆಯಲ್ಲಿ ಅತೀ ವೇಗ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಸಿದ ಪರಿಣಾಮ ಬಸ್ ಚಾಲಕನ ಹತೋಟಿ ತಪ್ಪಿ ರಸ್ತೆಯ ಎಡಬದಿಯಲ್ಲಿರುವ ಮೋರಿಗೆ ಡಿಕ್ಕಿಯಾಗಿ  ಹೊಂಡಕ್ಕೆ ಬಿದ್ದು, ಅಪಘಾತವಾಗಿರುತ್ತದೆ. ಅಪಘಾತದಲ್ಲಿ ಪಿರ್ಯಾದಿದಾರರ ಮುಖಕ್ಕೆ, ಮೂಗಿಗೆ, ಬಾಯಿಗೆ ಬಲಭುಜಕ್ಕೆ ಗುದ್ದಿದ ಗಾಯವಾಗಿರುತ್ತದೆ. ಪಿರ್ಯಾದಿಯ ಮಗಳು ಸ್ವಾತಿ ರವರ  ಮುಖಕ್ಕೆ, ಕೆನ್ನೆಗೆ ಗುದ್ದಿದ ಗಾಯವಾಗಿರುವುದಲ್ಲದೆ ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರಿಗೂ  ಕೂಡ ಗುದ್ದಿದ ಹಾಗೂ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 35/2021 ಕಲಂ 279, 337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಶ್ರಫ್ (34) ತಂದೆ: ಇಸ್ಮಾಯಿಲ್, ವಾಸ: ಸುಜೀರು ಮಲ್ಲಿ ಮನೆ, ಪುದು ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ: 30.03.2021 ರಂದು ಆಟೋ ರಿಕ್ಷಾದಲ್ಲಿ ಬಾಡಿಗೆ ನಿಮಿತ್ತ ಸುಜೀರು ಕಡೆಗೆ ಹೋಗಿ ವಾಪಾಸು ಮಾರಿಪಳ್ಳ ಕಡೆಗೆ ಬರುತ್ತಾ ಬಂಟ್ವಾಳ ತಾಲೂಕು ಪುದು ಗ್ರಾಮದ ಮಾರಿಪಳ್ಳ ಎಂಬಲ್ಲಿಗೆ ತಲುಪಿದಾಗ ಬಿ.ಸಿ.ರೋಡ್ ಕಡೆಯಿಂದ KA-21-P-6149 ನೇ ಇನ್ನೋವಾ ಕಾರನ್ನು ಅತೀ ವೇಗ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮುಂದಿನಿಂದ ಹೋಗುತ್ತಿದ್ದ KA-19-AB-9967 ನೇ ಆಟೋ ರಿಕ್ಷಾಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾವು ಬಲ ಮಗ್ಗುಲಾಗಿ ಮಗುಚಿ ಬಿದ್ದು, ಅಪಘಾತವಾಗಿದ್ದು, ಅಪಘಾತದಲ್ಲಿ KA-19-AB-9967 ನೇ ಆಟೋ ರಿಕ್ಷಾ ಚಾಲಕ ಮುನೀರ್ ರವರ ತಲೆಗೆ, ಬೆನ್ನಿಗೆ, ಬಲಕೈಗೆ, ಬಲಕಾಲಿಗೆ ಗುದ್ದಿದ ಹಾಗೂ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ಗಾಯಾಳು ಪಡೀಲ್ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 36/2021 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 2

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀನಿವಾಸ ಎಂ. ಪ್ರಾಯ: 30 ವರ್ಷ ತಂದೆ: ಐತಪ್ಪ ವಾಸ: ಮಹಾವಿಷ್ಣು ದೇವಸ್ಥಾನದ ಬಳಿ, ಮಂಡೆಕೋಲು ಗ್ರಾಮ, ಸುಳ್ಯ ತಾಲೂಕು ರವರು ಮತ್ತು ಅವರ ಸಂಬಂಧಿಕರಾದ  ಈಶ್ವರ  ಎಂಬವರು ದಿನಾಂಕ 30-03-2021 ರಂದು  ಸಂಜೆ ವೇಳೆ  ಬೆಳ್ಳಾರೆ ಪೇಟೆಯಲ್ಲಿ ಭೇಟಿಯಾಗಿ  ಜೊತೆಯಲ್ಲಿ ಮದ್ಯ ಸೇವನೆ ಮಾಡಿ  ಬಳಿಕ ಬೆಳ್ಳಾರೆ ಗ್ರಾಮದ ಉಮಿಕ್ಕಳ ಎಂಬಲ್ಲಿರುವ ಪಿರ್ಯಾದಿದಾರರು ವಾಸವಿರುವ  ಬಾಡಿಗೆ ಕೊಠಡಿಯಲ್ಲಿ ರಾತ್ರಿ ಇಬ್ಬರೂ ಊಟ ಮಾಡುತ್ತಿರುವಾಗ ಪಿರ್ಯಾದಿದಾರರು ಅವರ ಹೆಂಡತಿ  ಶೋಭಾಳಿಗೆ  ಸರಿಯಾಗಿ ಊಟ ಬಡಿಸು, ಎಂದು ಬೈದಾಗ ಆರೋಪಿ ಈಶ್ವರನು ಅವಳಿಗೆ ಯಾಕೆ ಬೈಯುತ್ತಿ, ಎಂದು  ಹೇಳಿದ್ದು ಆಗ ಪಿರ್ಯಾದಿದಾರರಿಗೂ ಈಶ್ವರನಿಗೂ ಮಾತಿನ ಜಗಳ ಉಂಟಾಗಿ ಈಶ್ವರನು ಊಟ ಮಾಡುತ್ತಿದ್ದಲಿಂದ ಒಮ್ಮೆಲೆ ಎದ್ದು ಹೋಗಿ ನಿನಗೆ ಬುದ್ದಿ ಕಲಿಸುತ್ತೇನೆ ಎನ್ನುತ್ತಾ ಅಲ್ಲೆ ಇದ್ದ ಕತ್ತಿಯೊಂದನ್ನು ತಂದು  ಪಿರ್ಯದಿದಾರರ ಎಡಕೈಗೆ ಹಾಗೂ ಕುತ್ತಿಗೆಯ ಎಡಭಾಗಕ್ಕೆ  ಕಡಿದು  ಸಾಮಾನ್ಯ ಹಾಗೂ  ತೀವ್ರ ರೀತಿಯ ಗಾಯಗಳನ್ನುಂಟು ಮಾಡಿ ಇನ್ನು ಮುಂದಕ್ಕೆ ನನ್ನ ವಿಚಾರದಲ್ಲಿ ನೀನು ಮಾತನಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿ ಹೋಗಿರುವುದಾಗಿದೆ ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. ಅ.ಕ್ರ 13/2021 ಕಲಂ  504,324,326,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸಿಲ್ವಿ ಮಾರ್ಟೀಸ್ ಗಂಡ ಜೋನ್ ಡಿ ಸೋಜಾ ನೋಳ ಮನೆ ಮಂಚಿ  ಗ್ರಾಮ , ಬಂಟ್ವಾಳ ತಾಲೂಕು ರವರು ದಿನಾಂಕ28.03.2021 ರಂದು ಅವರ ಗಂಡನ ಮನೆಗೆ ಹೋಗಿದ್ದು ಆ ಸಮಯದಲ್ಲಿ ಪಿರ್ಯಾದುದಾರರ ಗಂಡ ಜೋನ್ ಡಿ ಸೋಜಾ ಗಂಡನ ಸಹೋದರ ಲಾರೆನ್ಸ್  ಡಿ ಸೋಜಾ ಅತ್ತಿಗೆ ನೆನ್ಸಿ ಡಿ ಸೋಜಾ ಮತ್ತು ಮತ್ತೋರ್ವ ಸಹೋದರ ಆಲ್ಫಾನ್ಸ್ ಡಿ ಸೋಜಾ ರವರು ಪಿರ್ಯಾದುದಾರರಿಗೆ ಹಲ್ಲೆ ನಡೆಸಿದ್ದು ಪಿರ್ಯಾದುದಾರರ ಗಂಡನವರು ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದು ಪಿರಯಾದುದಾರರ ಗಂಡನ ಸಹೋದರರು ಮತ್ತು ಅವರ ಪತ್ನಿಯರು  ಮರದ ರೀಪಿನಿಂದ ಪಿರ್ಯಾದುದಾರರ ಕಾಲಿಗೆ ಮತ್ತು ಭುಜಕ್ಕೆ ಹೊಡೆದಿದ್ದು ನಂತರ ಪಿರ್ಯಾದುದಾರರನ್ನು  ಹೊರಗೆ ದೂಡಿ ಹಾಕಿದ್ದು ,ಕಟ್ಟಿ ಹಾಕಿದ್ದ ನಾಯಿಯನ್ನು ಬಿಟ್ಟು ಪಿರ್ಯಾದುದಾರರಿಗೆ ಕಚ್ಚುವಂತೆ ಪ್ರಚೋದಿಸಿದ್ದು  ತದನಂತರ ದಿನಾಂಕ 29.03.2021 ರ ರಾತ್ರಿ ಪಿರ್ಯಾದುದಾರರ ಗಂಡ ಮತ್ತು ಗಂಡನ ಸಹೋದರರು ಪಿರ್ಯಾದುದಾರರ ಮನೆಗೆ ಬಂದು ಅವಾಚ್ಯ ಶಬ್ದದಿಂದ ಬೈದು  ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ. ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ . ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 39/2021 ಕಲಂ:    323 324 504 506 34   ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತರೆ ಪ್ರಕರಣ: 1

 

ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರ ಪತಿಯು ಪಿರ್ಯಾದಿದಾರರಿಗೆ ಹಾಗೂ ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದುದಲ್ಲದೇ ಕಳೆದ 2020 ನೇ ಮೇ ಹಾಗೂ ಜೂನ್‌ ತಿಂಗಳಲ್ಲಿ ಆರೋಪಿಯು ತನ್ನ ಹಿರಿಯ ಮಗಳು ಮನೆಯಲ್ಲಿ ರಾತ್ರಿ ಹೊತ್ತು ಮಲಗಿದ್ದ  ಸಮಯ ಲೈಂಗಿಕ ಕಿರುಕುಳ ನೀಡಿದ್ದು ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕಲಂ: 498(A), 354(A)(1)(i), 354 (D) ಐಪಿಸಿ ಮತ್ತು ಕಲಂ 8 ಮತ್ತು 12  ಪೋಕ್ಸೋ ಆಕ್ಟ್ -2012 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹರ್ಷವರ್ಧನ (50) ತಂದೆ: ಸುಗುಣ ಗೌಡ ವಾಸ: ಮಿತ್ತಮಜಲು ಮನೆ, ಸೋಣಗೇರೆ ಅಂಚೆ, ಜಾಲ್ಸೂರು ಗ್ರಾಮ,ಸುಳ್ಯ ತಾಲೂಕು ರವರ ತಮ್ಮ ವಿಷ್ಣುವರ್ಧನ (46) ಎಂಬವನು ದಿನಾಂಕ: 30.03.2021 ರಂದು ತಮ್ಮ ಮನೆಯಾದ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಮಿತ್ತಮಜಲು ಎಂಬಲ್ಲಿ ಎದೆನೋವಿನಿಂದ ಬಳಲುತ್ತಿದ್ದು ಪಿರ್ಯಾದುದಾರರು ಸುಳ್ಯ ಕೆ,ವಿ,ಜಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ವಿಷ್ಣುವರ್ಧನ ಹೃದಯಘಾತ ದಿಂದ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಯುಡಿಅರ್‌ ನಂಬ್ರ 15/20201 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-04-2021 01:44 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080