ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಚಂದ್ರಶೇಖರ್‌ ಪ್ರಾಯ 28 ವರ್ಷ ತಂದೆ:ಸೀನಪ್ಪ ವಾಸ:12-29/1(1) ಗೊಪ್ಪಿದ ,ಬಿಮೂಡ ಗ್ರಾಮ ಕುಲಾಲ ಮಠ ,ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ21-12-2021 ರಂದು ಪಿರ್ಯಾದುದಾರರು ಉಪ್ಪಿನಂಗಡಿ ಕಡೆಯಿಂದ ಮಾಣಿ ಕಡೆಗೆ ತನ್ನ ಕೆಲಸದ ಮೇಲೆ ತನ್ನ ಬಾಬ್ತು ಮೋಟಾರ್ ಸೈಕಲ್ ಕೆಎ-53-ಇಝಡ್-4690 ನೇದರಲ್ಲಿ ಚಲಾಯಿಸುತ್ತಿರುವಾಗ ಮದ್ಯಾಹ್ನ 15.30 ಗಂಟೆಗೆ ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಬುಡೋಳಿ ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ ಆಟೋ ರಿಕ್ಷಾ ನಂಬರ್ ಕೆಎ-70-3449 ನೇಯದರ ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಡಿಕ್ಕಿ ಉಂಟು ಮಾಡಿ ಆಟೋ ರಿಕ್ಷಾವನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ನಂತರ ಪಿರ್ಯಾದಿದಾರರನ್ನು ಅಲ್ಲಿದ್ದ ಸಾರ್ವಜನಿಕರು ಅಂಬ್ಯುಲೆನ್ಸ್ ನಲ್ಲಿ  ಮಂಗಳೂರಿನ  ಕೆಎಸ್ ಹೆಗ್ಡೆ  ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುತ್ತಾರೆ. ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿದ ಸಮಯ ಪಿರ್ಯಾದಿದಾರರ  ಎಡ ಕೈ ಮತ್ತು ಎಡ ಕಾಲಿನ ತೋಡೆಯ ಮೂಲೆಗಳು ಮುರಿದಿರುವುದು ತಿಳಿದು ಬಂದಿರುತ್ತದೆ. ಪಿರ್ಯಾದಿದಾರರು ದಿನಾಂಕ:03-01-2022 ರ ತನಕ ಚಿಕಿತ್ಸೆ ಪಡೆದು  ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ಪಿರ್ಯಾದಿದಾರರಿಗೆ ಇನ್ನು ಸುಮಾರು 6 ತಿಂಗಳ ಕಾಲ ಚಿಕಿತ್ಸೆಯಲ್ಲಿರುವುದಾಗಿ ವೈದ್ಯರು ತಿಳಿಸಿರುತ್ತಾರೆ,.ಈ ಬಗ್ಗೆ ಬಂಟ್ವಾಳ ಸಂಚಾರ ಠಾಣೆಯಲ್ಲಿ ಅ,ಕ್ರ 65/2022 ಕಲಂ: ಕಲಂ: 279,337 ಬಾಧಂಸಂ ಮತ್ತು 134 ಎ&ಬಿ ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಮನುಷ್ಯ ಕಾಣೆ ಪ್ರಕರಣ: 1

  • ಕಡಬ ಪೊಲೀಸ್ ಠಾಣೆ : ಪಿರ್ಯಾದುದಾರರಾದ ರಂಜಿತಾ ಎನ್ ಪ್ರಾಯ: 24 ವರ್ಷ ತಂದೆ: ರಾಜೀವ ಶೆಟ್ಟಿ  ವಾಸ:ನೈಲ ಮನೆ,ರೆಂಜಿಲಾಡಿ ಗ್ರಾಮ ,ಕಡಬ ತಾಲೂಕು ಎಂಬವರು ನೀಡಿದ ದೂರಿನಂತೆ  ಪಿರ್ಯಾದುದಾರು ಪೆರಡ್ಕದಲ್ಲಿ ಹಾಲಿನ ಸೊಸೈಟಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 29-04-2022 ಬೆಳಗ್ಗೆ 06-30 ಗಂಟೆಗೆ ಎದಿನಂತೆ ಪಿರ್ಯಾದುದಾರರು ಕೆಲಸಕ್ಕೆಂದು ಪೆರಡ್ಕದ ಹಾಲಿನ ಸೊಸೈಟಿಗೆಂದು ತೆರಳಿದ್ದು ಮನೆಯಲ್ಲಿ ತಂದೆ ಮತ್ತು ತಾಯಿ ಇಬ್ಬರು ಇದ್ದರು ನಂತರ ಪಿರ್ಯಾದುದಾರರು ಕೆಲಸದಲ್ಲಿ ಇರುವ ಸುಮಾರು 11-30 ಗಂಟೆಗೆ ಪಿರ್ಯಾದುದಾರರ ತಾಯಿಯವರು ಕರೆ ಮಾಡಿ ನಿನ್ನ ತಂದೆಯವರು ಬೆಳಗ್ಗೆ 08-00 ಗಂಟೆಗೆ ಕಡಬ ಆಸ್ವತ್ರೆಗೆ ಎಂದು ಹೋದವರು ಮರಳಿ ಮನೆಗೆ ಬಂದಿರುವುದಿಲ್ಲ ಎಂದು ತಿಳಿಸಿದ ಮೇರೆಗೆ ಪಿರ್ಯಾದುದಾರರು ತಕ್ಷಣ ಕಡಬಕ್ಕೆ ಬಂದು ಅಟೋ ಚಾಲಕರು ಹಾಗೂ ಇತರ ಕಡೆಗಳಲ್ಲಿ ವಿಕರಿಸಲಾಗಿ  ಸಿಗದೇ ಇದ್ದು ನಂತರ ಮನೆಗೆ ಬಂದು ಪಿರ್ಯಾದುದಾರರು ತನ್ನ ಸಂಬಂದಿಕರು ಮತ್ತು ನೆರೆಕರೆಯಲ್ಲಿ ವಿಚಾರಿಸಿದಾಗ ತನ್ನ ತಂದೆಯವರು  ಎಲ್ಲೂ ಇಲ್ಲದಿರುವ ಬಗ್ಗೆ ಕಂಡು ಬಂದಿರುವುದಿಲ್ಲ. ಈ ಬಗ್ಗೆ ಕಡಬ ಠಾಣಾ ಅ.ಕ್ರ 39/2022 ಕಲಂ. .ಮನುಷ್ಯ ಕಾಣೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬ್ದುಲ್ ಸಮದ್ ಎನ್ ಪ್ರಾಯ: 38 ವರ್ಷ ತಂದೆ: ಇಬ್ರಾಹಿಂ ಹಾಜಿ ವಾಸ: ನೆಕ್ಕರೆ ಮನೆ ಕುರಿಯ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿರವರು ಕಾಲೇಜು ಉಪನ್ಯಾಸಕನಾಗಿ ಕೆಲಸ ಮಾಡಿಕೊಂಡಿದ್ದು  ಇತ್ತೀಚೆಗೆ ಮೊಬೈಲ್ ಆ್ಯಫ್ ನಲ್ಲಿ ಅಹಮ್ಮದ್ ಪಯಾಜುದ್ದೀನ್ ಕರ್ಮಲ ಎಂಬಾತನು ಪೋನ್ ಪೇ ಮುಖಾಂತರ ರೂ 8000 ವನ್ನು ಹಾಕಿದರೆ ಪ್ರತಿ ದಿನ 1000 ರಂತೆ 11 ದಿನಗಳ ಕಾಲ ರೂ ಕೊಡುತ್ತೇನೆ ಎಂದು ಹಣ ವಸೂಲಿ ಮಾಡುತ್ತಿದ್ದು , ಪಿರ್ಯಾದಿದಾರರ ಸ್ನೇಹಿತ ಇಬ್ರಾಹಿಂ ಎಂಬವರು ಸದ್ರಿ ಆ್ಯಪ್ ಗೆ ಪೋನ್ ಪೇ ಮುಖಾಂತರ 50,000/- ರಷ್ಟು ಹಣ ಹಾಕಿದ್ದು ಪಯಾಜುದ್ದೀನ್ 20,000/- ದಷ್ಟು ವಾಪಾಸ್ಸು ಕೊಟ್ಟಿದ್ದು ಉಳಿದ ಹಣವನ್ನು ಕೊಡದೇ ಸತಾಯಿಸುತ್ತಿದ್ದು,  ದಿನಾಂಕ: 29-04-2022 ರಂದು ಪಿರ್ಯಾದಿದಾರರು ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿ ಮಂಗಳೂರಿನಿಂದ ಪುತ್ತೂರು ಕಡೆಗೆ ಬರುತ್ತಾ ಮುರ ಎಂಬಲ್ಲಿ ಹಣ್ಣು ಹಂಪಲು ಖರೀದಿಸಲು ಕಾರು ನಿಲ್ಲಿಸಿ ಕಾರಿನಿಂದ ಇಳಿದಿದ್ದು ಆ ಸಮಯ ಅಹಮ್ಮದ್ ಫಯಾಜ್ ನು ಇನ್ನೊಬ್ಬನ ಜೊತೆಯಲ್ಲಿ ಒಂದು ಸ್ಕೂಟಿಯಲ್ಲಿ ಬಂದು ಮುರದಲ್ಲಿ ಸ್ಕೂಟಿಯನ್ನು ನಿಲ್ಲಿಸಿದನು. ಆಗ ಪಿರ್ಯಾದಿದಾರರು  ಆತನ ಬಳಿಗೆ ಹೋಗಿ ಪಿರ್ಯಾದಿದಾರರ ಸ್ನೇಹಿತ ಇಬ್ರಾಹಿಂ ಗೆ  ದುಡ್ಡು ಕೊಡಲು ಬಾಕಿಯಿದ್ದ ದುಡ್ಡನ್ನು ವಾಪಾಸ್ಸು ಕೊಡುವಂತೆ ಕೇಳಿದಾಗ ಮಹಮ್ಮದ್ ಪಯಾಜ್ ನು ಪಿರ್ಯಾದಿದಾರರನ್ನು ಹಣ ಕೊಡುತ್ತೇನೆ ಬಾ ಎಂದು ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ  ಪಯಾಜ್ ಮತ್ತು ಆತನೊಂದಿಗಿದ್ದ ಇನ್ನೊಬ್ಬ ಪಿರ್ಯಾದಿದಾರರನ್ನುದ್ದೇಶಿಸಿ ಅವ್ಯಾಚ ಶಬ್ಧಗಳಿಂದ ಬೈದು ಆತನ ಕೈಯಲ್ಲಿದ್ದ ಹೆಲ್ಮೆಟ್ ನಿಂದ ಪಿರ್ಯಾದಿದಾರರ ತಲೆಗೆ ಹೊಡೆದು ರಕ್ತಗಾಯಗೊಳಿಸಿರುತ್ತಾನೆ. ಆತನೊಂದಿಗಿದ್ದ ಇನ್ನೊರ್ವ ಕೈಯಿಂದ ಹೊಡೆದಿರುತ್ತಾನೆ. ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದಾಗ ಪಿರ್ಯಾದಿದಾರರ ಸ್ನೇಹಿತ ಇಬ್ರಾಹಿಂ ಬಂದು ಜಗಳ ಬಿಡಿಸಲು ಪ್ರಯತ್ನಿಸಿದಾಗ ಇಬ್ರಾಹಿಂಗೂ  ಇಬ್ಬರೂ ಕೈಗಳಿಂದ ಹೊಡೆದಿರುತ್ತಾರೆ ,ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ  ಅ.ಕ್ರ: 27/2022 ಕಲಂ: 504, 323, 324, 506 ಜೊತೆಗೆ 34 ಐ.ಪಿ.ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 3

  • ವಿಟ್ಲ ಪೊಲೀಸ್ ಠಾಣೆ : ದಿನಾಂಕ:30-04-2022 ರಂದು ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 64/2022 ಕಲಂ: 498A,324 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವೇಣೂರು ಪೊಲೀಸ್ ಠಾಣೆ : ದಿನಾಂಕ 30.04.2022 ರಂದು ವೇಣೂರು ಠಾಣಾ ಅ.ಕ್ರ ನಂಬ್ರ 26-2022 ಕಲಂ:447,504,324,506ಐಪಿಸಿ ಮತ್ತು  3(1)(S),3(2)(5a)SC&ST Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ:27-04-2022ರಂದು ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 54/2022 ಕಲಂ:   341 323 324 354 ಜೊತೆಗೆ 34 ಐ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪುಟ್ಟಸ್ವಾಮಿ ಪಂಚಾಯತ್‌ ಅಭೀವೃದ್ದಿ ಆದಿಕಾರಿ ತಣ್ಣೀರು ಪಂತ ಗ್ರಾಮ ಪಂಚಾಯತ್‌ ಕಲ್ಲೇರಿ  ಎಂಬವರ ದೂರಿನಂತೆ ಪಿರ್ಯಾದಿದಾರರು  ತಣ್ಣೀರು  ಗ್ರಾಮ ಪಂಚಾಯತ್‌ ನ ಪಂಚಾಯತ್‌ ಅಭೀವೃದ್ದಿ ಆದಿಕಾರಿಯಾಗಿದ್ದು ದಿನಾಂಕ:  29-04-2022ರಂದು ರಾತ್ರಿ ವೇಳೆಯಿಂದ ದಿನಾಂಕ: 30-04-2022ರ ಬೆಳಿಗ್ಗೆ 10.00ಗಂಟೆಯ ಮದ್ಯದ ಅವಧಿಯಲ್ಲಿ   ಪಿರ್ಯಾದಿದಾರರ ಗ್ರಾಮ ಪಂಚಾಯತ್‌ ವ್ಯಾಪ್ತಿಯ  ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕಲ್ಲೇರಿ  ಬಸ್ಸು ತಂಗುದಾಣದಲ್ಲಿ ಸುಮಾರು  35 ರಿಂದ  40 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯು  ಆತನಿಗಿದ್ದ  ಯಾವುದೊ ಅನಾರೋಗ್ಯದಿಂದ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದು ಸದ್ರಿ ಮೃತ ವ್ಯಕ್ತಿಯು  ಗುಲಾಬಿ ಬಣ್ಣದ  ಉದ್ದ ತೋಳಿನ ಶರ್ಟ್‌ಮತ್ತು ಬೂದು ಬಣ್ಣದ ಪ್ಯಾಂಟ್‌ ಧರಿಸಿದ್ದು  ಗೋದಿ ಮೈಬಣ್ಣವನ್ನು ಹೊಂದಿರುತ್ತಾರೆ.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 07/2022 ಕಲಂ:174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-05-2022 09:21 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080