ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹಾಮಿದ್ ಹುವೈಸ್ ಪ್ರಾಯ:26 ವರ್ಷ ತಂದೆ:ಪಿ ಮಹಮ್ಮದ್ ಕುಂಞ ವಾಸ:ಜಿಸ್ತಿ ಮಂಝಿಲ್  ಕೋಡಿಜಾಲ್ ಪರ್ಲಡ್ಕ ಮನೆ ಪುತ್ತೂರು ಕಸಬಾ ಗ್ರಾಮ ಮತ್ತು ಅಂಚೆ ಪುತ್ತೂರು ಎಂಬವರ ದೂರಿನಂತೆ ದಿನಾಂಕ 30-05-2022 ರಂದು  ತನ್ನ ಬಾಬ್ತು ಕಾರ್ ನಲ್ಲಿ ಪುತ್ತೂರಿನಿಂದ ಬೆಳಿಗ್ಗೆ 10.00 ಗಂಟೆಗೆ ಹೊರಟು ದರ್ಬೆ ಸವಣೂರು ರಸ್ತೆಯಲ್ಲಿ ಹೋಗುತ್ತಾ ಪುತ್ತೂರು ತಾಲೂಕು ಮುಂಡೂರು ಗ್ರಾಮದ ಕಾಡಬಾಗಿಲು ಎಂಬಲ್ಲಿಗೆ ಸಮಯ ಸುಮಾರು 10.30 ಗಂಟೆಗೆ  ತಲುಪಿದಾಗ  ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ ಸ್ಕೂಟರ್ ಒಂದರಲ್ಲಿ ಹಿಂಬದಿ ಸವಾರರನ್ನು ಕುಳ್ಳಿರಿಸಿಕೊಂಡು ಅದರ ಸವಾರನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಸ್ಕೂಟರ್ ಸವಾರ ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ ರಸ್ತೆಯ ಎಡಬದಿಗೆ ಮಗುಚಿ ಬಿದ್ದಲ್ಲಿಗೆ ಪಿರ್ಯಾದುದಾರರು ತನ್ನ ಕಾರನ್ನು ನಿಲ್ಲಿಸಿ ನೋಡಲಾಗಿ ಸ್ಕೂಟರ್ ಸವಾರರು ಪಿರ್ಯಾದುದಾರರ ಪರಿಚಯದ ಮಹಮ್ಮದ್ ಹಿಬ್ಬತ್ ಹಾಗೂ ಸಹ ಸವಾರ ಮಹಮ್ಮದ್ ಅಲಿ ಎಂಬವರಾಗಿದ್ದು ಅಪಘಾತದಿಂದ ಹಿಂಬದಿ ಸವಾರ ಮಹಮ್ಮದ್ ಅಲಿ ಎಂಬವರ  ಎಡ ಕಾಲಿನ ಮಣಿ ಗಂಟಿಗೆ ಗುದ್ದಿದ ಗಾಯವಾಗಿದ್ದು ಸ್ಕೂಟರ್ ಸವಾರ ಮಹಮ್ಮದ್ ಹಿಬ್ಬತ್ ಎಂಬವರಿಗೆ ಸೊಂಟಕ್ಕೆ ಗುದ್ದಿದ ಗಾಯವಾಗಿರುತ್ತದೆ ಅಪಘಾತಪಡಿಸಿದ ಸ್ಕೂಟರ್ ನಂ ಕೆ.ಎ 19 ಇ.ಎಸ್ 3048 ಆಗಿದ್ದು ನಂತರ ಪಿರ್ಯಾದುದಾರರ ಪರಿಚಯದ ಆಸಿಫ್ ಎಂಬವರು ಗಾಯಾಳುಗಳನ್ನು ಉಪಚರಿಸಿ ಪಿರ್ಯಾದುದಾರರ ಕಾರಿನಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅಕ್ರ: 64/2022  ಕಲo: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್‌ ಅರೂಫ್‌, ಪ್ರಾಯ 18 ವರ್ಷ, ತಂದೆ: ಅಬ್ದುಲ್ಲಾ ಡಿ, ವಾಸ: ಮಧುರ ಮನೆ, ಮರೀಲ್‌ ಕೆಮ್ಮಿಂಜೆ ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 30-05-2022 ರಂದು 21-00 ಗಂಟೆಗೆ ಆರೋಪಿ ಲಾವಣ್ಯ ಎಂಬವರು KA-21-Z-1151 ನೇ ನೋಂದಣಿ ನಂಬ್ರದ ಕಾರನ್ನು ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸುಬ್ರಹ್ಮಣ್ಯ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮರೀಲ್‌ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಮತ್ತು ಮಹಮ್ಮದ್‌ ಮುಹಾಸ್‌ ರವರು ಸಹಸವಾರರಾಗಿ, ಮಹಮ್ಮದ್‌ ಮರ್ಝಕ್‌ ರವರು ಸವಾರರಾಗಿ ಕೂರ್ನಡ್ಕ ಕಡೆಯಿಂದ ಮುಕ್ವೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ನೋಂದಣಿಯಾಗದ ಹೊಸ ಸ್ಕೂಟರಿಗೆ ಕಾರು ಅಪಘಾತವಾಗಿ, ಸ್ಕೂಟರ್‌ ಸಮೇತ ಮೂವರೂ  ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ  ಬಲಕೋಲು ಕಾಲಿಗೆ ಚರ್ಮ ಕಿತ್ತು ಹೋದ ಗಾಯವಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಮಹಮ್ಮದ್‌ ಮುಹಾಸ್‌ ರವರಿಗೆ ಕಾಲಿಗೆ ಗುದ್ದಿದ ನೋವಾಗಿ ಔಷಧಿ ಪಡೆದುಕೊಂಡಿರುತ್ತಾರೆ.  ಮಹಮ್ಮದ್‌ ಮರ್ಝಕ್‌ ರವರಿಗೆ  ಬಲತೊಡೆಗೆ ಗುದ್ದಿದ ಒಳನೋವಿರುವ ಗಾಯವಾಗಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು,  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಹೈ ಲ್ಯಾಂಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  100/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

  • ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ 31.05.2022 ರಂದು ಅವಿನಾಶ್.ಹೆಚ್.ಗೌಡ.  ಪೊಲೀಸ್‌ ಉಪ ನಿರೀಕ್ಷಕರ (ಕಾ.ಸು) ಬಂಟ್ವಾಳ ನಗರ ಪೊಲೀಸ್‌ ಠಾಣೆ ರವರು ಠಾಣಾ ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ನೀರಪಾದೆ ಎಂಬಲ್ಲಿಗೆ ತೆರಳಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅನಿಲ್ ಡಿ ಸೋಜ ಪ್ರಾಯ 45 ವರ್ಷ.ತಂದೆ: ಮಾನ್ವೆಲ್ ಡಿ ಸೋಜ ವಾಸ. ಬರಿಮಾರ್ ಮನೆ. ಕಾಗೆಕಾನ ಅಂಚೆ ಬರಿಮಾರ್ ಗ್ರಾಮ ಬಂಟ್ವಾಳ ತಾಲೂಕು. ಎಂಬಾತನನ್ನು ಬಂಧಿಸಿ ಆತನ ಬಳಿಯಿದ್ದ 90 ಎಂ ಎಲ್ ನ ಒಟ್ಟು 20 ಸ್ಯಾಜೆಟ್  ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದು , ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ. 56/2022  ಕಲಂ: 15(A), 32(3) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 31.05.2022 ರಂದು ಹರೀಶ್ ಎಂ ಆರ್, ಪಿ ಎಸ್ ಐ ಬಂಟ್ವಾಳ ಗ್ರಾಮಾಂತರ ಠಾಣೆ ರವರು ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಕಾಗೆಕಾನ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ನಾರಾಯಣ ಪೂಜಾರಿ ಮತ್ತು ನವೀನ್ ಪೂಜಾರಿ ಎಂಬವರುಗಳನ್ನು ವಶಕ್ಕೆ ಪಡೆದು ಅವರುಗಳ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ,ಕ್ರ  38/2022 ಕಲಂ 15(ಎ) ಮತ್ತು 32(3) ಕರ್ನಾಟಕ ಅಬಕಾರಿ ಕಾಯ್ದೆಯ ಅಡಿ  ಪ್ರಕರಣ ದಾಖಲಿಸಿರುತ್ತಾರೆ.

ಇತ್ತೀಚಿನ ನವೀಕರಣ​ : 01-06-2022 10:48 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080