ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಆನಂದ, ಪ್ರಾಯ: 30 ತಂದೆ: ಶೀನ ಪೂಜಾರಿ ವಾಸ: #2-26/1 ಪನ್ನಂಗಿಲ ಮನೆ, ಬಂಟ್ವಾಳ ಕಸ್ಬಾ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 31.10.2022 ರಂದು ಅವರ ಬಾಬ್ತು ಸ್ಕೂಟರಿನಲ್ಲಿ ಮಂಡಾಡಿಗೆ ಹಾಲು ಸೊಸೈಟಿಗೆ ಹೋಗುತ್ತಿರುವಾಗ ಬಂಟ್ವಾಳ ತಾಲೂಕು ಬಂಟ್ವಾಳ ಕಸ್ಬಾ ಗ್ರಾಮದ ಎಸ್.ವಿ.ಎಸ್‌ ಕಾಲೇಜು ಬಳಿ ತಲುಪಿದಾಗ ಮೂಡಬಿದ್ರೆ ಕಡೆಯಿಂದ KA-19-AB-1326 ನೇ ಆಟೋರಿಕ್ಷಾವನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷನದಿಂದ ಚಲಾಯಿಸಿಕೊಂಡು ಬಂದು ಬಿ.ಸಿ. ರೋಡ್‌ ಕಡೆಯಿಂದ ಅಗ್ರಾರ್‌ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-HE-2135 ನೇ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ  ಸ್ಕೂಟರ್‌ ಸವಾರರು ಸ್ಕೂಟರ್‌ ಸಮೇತಾ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಅಟೊ ರಿಕ್ಷಾ ಕೂಡ ಮಗುಚಿಬಿದ್ದಿದ್ದು, ಸ್ಕೂಟರ್ ಸವಾರ ಎಡ್ವರ್ಡ್‌  ಡಿ ಸೋಜಾ ರವರಿಗೆ ಎಡ ಕೋಲು ಕೈಗೆ ಹಾಗೂ ಎಡ ಮೊಣಕಾಲಿಗೆ ಗುದ್ದಿ ರಕ್ತಗಾಯವಾಗಿದ್ದು ಹಾಗೂ ತರಚಿದ ಗಾಯಾಗಳಾಗಿದ್ದು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ  ಅ.ಕ್ರ 133/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಸುಮಂತ್‌ ಕೆ.ಸ್‌  ಪ್ರಾಯ 30 ವರ್ಷ, ತಂದೆ: ಸೋಮಯ್ಯ ಗೌಡ, ವಾಸ:  ಕೆರೋಡಿ ಗ್ರಾಮ, ಕುಂಬ್ರಳ್ಳಿ ಅಂಚೆ, ಸಕಲೇಶಪುರ ತಾಲೂಕು, ಎಂಬವರ ದೂರಿನಂತೆ  ದಿನಾಂಕ 30-10-2022 ರಂದು 23:30 ಗಂಟೆಗೆ ಆರೋಪಿ ಖಾಸಗಿ ಬಸ್ಸು ಚಾಲಕ  ಅಬೂಬಕ್ಕರ್‌ ಇಲ್ಯಾಸ್‌ ಎಂಬವರು  KA-19-AB-4892 ನೇ ನೋಂದಣಿ ನಂಬ್ರದ ಬಸ್ಸನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಪೂರ್ತಿ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಕಿಶೋರ್‌ ಬಿ.ಎಂ. ರವರು ಚಾಲಕರಾಗಿ, ಪಿರ್ಯಾದುದಾರರಾದ ಸುಮಂತ್‌ ಕೆ.ಎಸ್‌, ಸುನಿಲ್‌ .ಕೆ.ಹೆಚ್‌ ಮತ್ತು ಅಜಿತ್‌ ರವರು ಪ್ರಯಾಣಿಕರಾಗಿ ಸಕಲೇಶಪುರ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-53-MA-6657 ನೇ ನೋಂದಣಿ ನಂಬ್ರದ ಕಾರಿಗೆ ಅಪಘಾತವಾಗಿ, ಕಾರು ಸಂಪೂರ್ಣ ಜಖಂಗೊಂಡು, ಪಿರ್ಯಾದುದಾರರಿಗೆ ಬಲಕೈಗೆ ಗುದ್ದಿದ ಮತ್ತು ಬಲಕಾಲಿಗೆ ರಕ್ತ ಗಾಯ,  ಕಿಶೋರ್‌ ರವರಿಗೆ ತಲೆಯ ಹಿಂಭಾಗ ಹಾಗೂ ಬಲ ಕಣ್ಣಿನ ಬಳಿ ರಕ್ತ ಗಾಯ,  ಸುನಿಲ್‌ ರವರಿಗೆ ಹಣೆ ಹಾಗೂ ತಲೆಯಲ್ಲಿ ರಕ್ತಗಾಯ ಮತ್ತು ಅಜಿತ್‌ರವರಿಗೆ ಹಣೆಗೆ ರಕ್ತಗಾಯವಾಗಿರುತ್ತದೆ. ಗಾಯಾಳುಗಳನ್ನು ಮಂಗಳೂರಿನ ಎಜೆ. ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ166/2022 ಕಲಂ: 279, 337  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವ ಬೆದರಿಕೆ ಪ್ರಕರಣ: ೦2

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸತ್ಯದಾಸ್‌ ಪ್ರಾಯ: 44 ವರ್ಷ ತಂದೆ: ತೋಮಸ್‌ ಎಮ್‌ ಎಮ್‌ ವಾಸ: ಕೋಡಿ ಮನೆ ಕೊಕ್ಕಡ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಕೋಡಿ ಎಂಬಲ್ಲಿ ಪಿರ್ಯಾದಿ ಹಾಗೂ ಪಿರ್ಯಾದಿದಾರರ ಹೆಂಡತಿ ಹೆಸರಿನಲ್ಲಿ ಸರ್ವೆ ನಂ 37/6 ರಲ್ಲಿ 6.7 ಎಕ್ರೆ ಜಮೀನು ಹೊಂದಿದ್ದು ಸದ್ರಿ ಜಮೀನು ವಿಚಾರದಲ್ಲಿ ಪಿರ್ಯಾದಿದಾರರಿಗೆ ಹಾಗೂ ಆರೋಪಿ ಬಿಬಿನ್‌ ಎಂಬವರುಗಳಿಗೆ ತಕರಾರು ಇದ್ದು ಈ ಬಗ್ಗೆ ಮಾನ್ಯ ಬೆಳ್ತಂಗಡಿ ಸಿವಿಲ್‌ ನ್ಯಾಯಲಯದಲ್ಲಿ ದಾವೆ  ಹೂಡಿದ್ದು  ಮಾನ್ಯ ನ್ಯಾಯಾಲಯವು ಕೋರ್ಟ್‌ ಕಮಿಷನರ್‌ ಮೂಲಕ ನಕ್ಷೆಯನ್ನು ತಯಾರಿಸಿ ದಿನಾಂಕ: 15-07-2022 ರಂದು ಪಿರ್ಯಾದಿದಾರರಿಗೆ ಸದ್ರಿ ಜಮೀನನ್ನು ಗಡಿ ಗುರುತು ಮಾಡಿಸಿಕೊಟ್ಟಿದ್ದು. ದಿನಾಂಕ:31-10-2022 ರಂದು ಮದ್ಯಾಹ್ನ 12:00 ಗಂಟೆಗೆ ಆರೋಪಿ ಬಿಬಿನ್‌ ಹಿಟಾಚಿಯನ್ನು ತರಿಸಿ ಪಿರ್ಯಾದಿದಾರರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಸದ್ರಿ ಜಾಗದಲ್ಲಿ ಇದ್ದ ಬೇಲಿಯನ್ನು ಹಾಗೂ ಸರ್ವೆ ಕಲ್ಲನ್ನು ಕಿತ್ತು ಹಾಕಿರುವುದನ್ನು ನೋಡಿ ಮೊಬೈಲ್‌ ಹಿಡಿದುಕೊಂಡು ನಿಂತಿರುವುದನ್ನು ನೋಡಿದ ಆರೋಪಿಯಾದ  ಬಿಬಿನ್‌ ಕೈಯಲ್ಲಿ ತಲವಾರು ಹಿಡಿದುಕೊಂಡು ಹಿಟಾಚಿಯ ಮಾಲಕ ಪ್ರವೀಣ್‌ ಎಂಬಾತನು ಕೈಯಲ್ಲಿ ಕಬ್ಬಿಣದ ರಾಡನ್ನು ಹಿಡಿದುಕೊಂಡು ಆರೋಪಿ ಬಿಬಿನ್‌ ಪತ್ನಿ ಪ್ರೀತಿ ಎಂಬವರೊಂದಿಗೆ ಬಂದು ಪಿರ್ಯಾದಿದಾರರ ಕೈಯಲ್ಲಿದ್ದ ಮೊಬೈಲ್‌ ಅನ್ನು ಕಸಿದು ನೆಲಕ್ಕೆ ಹೊಡೆದು ಹುಡಿ ಮಾಡಿ ನಂತರ ತಲವಾರಿನಿಂದ ಕಡಿಯಲು ಬಂದಾಗ ಪಿರ್ಯಾದಿದಾರರು ಎಡಕೈಯಿಂದ ತಡೆಯಲು ಪ್ರಯತ್ನಿಸಿದಾಗ ತಲವಾರು ಎಡಭುಜದ ಹಿಂಬದಿ ತಾಗಿ ರಕ್ತಗಾಯವಾಗಿರುತ್ತದೆ. ಅಷ್ಟರಲ್ಲಿ ಹಿಟಾಚಿಯ ಮಾಲಕ ಪ್ರವೀಣ್‌ ಎಂಬಾತನು ಪಿರ್ಯಾದಿದಾರರನ್ನು ಕೈಯಿಂದ ದೂಡಿ ಹಾಕಿ ಕೆಳಗೆ ಬಿದ್ದಲ್ಲಿಗೆ ಆತನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿದ್ದು ಎಡಕೈಯ ಮೊಣಗಂಟಿಗೆ ಹಲ್ಲೆ ನಡೆಸಿದ್ದು ಆಗ ಅಲ್ಲೆ ಇದ್ದ ಪ್ರೀತಿ ಎಂಬವರು ಅವಾಚ್ಯ ಶಬ್ದದಿಂದ ಬೈದು ಆತನಿಗೆ ಸರಿ ಹೊಡೆಯಿರಿ ಎಂದು ಹೇಳಿದಾಗ ನೋವು ತಾಳಲಾರದೆ ಪಿರ್ಯಾದಿದಾರರು ಬೊಬ್ಬೆ ಹಾಕುವುದನ್ನು ಕೇಳಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಆಶ್ರಫ್‌  ಮತ್ತು ರಜಾಕ್‌ ಎಂಬವರುಗಳು ಅಲ್ಲಿಗೆ ಬರುವುದನ್ನು ನೋಡಿದ ಆರೋಪಿಗಳು ಅವಾಚ್ಯ ಶಬ್ದದಿಂದ ಮಲೆಯಾಳಿ ಭಾಷೆಯಲ್ಲಿ ಬೈದು ಪೊಲೀಸ್‌ ದೂರು ನೀಡಿದರೆ ನಿನ್ನ ಮನೆಗೆ ಬಂದು ನಿನ್ನನ್ನು ಗುಂಡು ಹಾರಿಸಿ ಸಾಯಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಅ.ಕ್ರ 77/2022 ಕಲಂ447, 323, 324, 504, 506, 427 ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: ೦2

 

ಸುಳ್ಯ ಪೊಲೀಸ್ ಠಾಣೆ : ಪೊಲೀಸ್‌ ಉಪನಿರೀಕ್ಷಕರು ಸುಳ್ಯ ಪೊಲೀಸ್ ಠಾಣೆರವರು ದಿನಾಂಕ: 31.10.2022 ರಂದು ಠಾಣಾ ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯ ದಲ್ಲಿರುವ ಸಮಯ ಸುಳ್ಯ ತಾಲೂಕು ಜಾಲ್ಸೂರು‌ ಗ್ರಾಮದ ಜಾಲ್ಸೂರ್‌‌ ಜಂಕ್ಷನ್‌ಗೆ ತಲುಪಿದಾಗ ಪಾರೆಸ್ಟ್‌ ಗೇಟ್‌‌ ಬಳಿಯಲ್ಲಿನ ಪಾಸ್ಟ್‌‌ ಪುಡ್‌ ಅಂಗಡಿಯ ಎದುರು ಒಬ್ಬ ವ್ಯಕ್ತಿಯು ಪ್ಲಾಸ್ಟೀಕ್‌‌ ಲೋಟವನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಮದ್ಯದ ಟೆಟ್ರಾ ಪ್ಯಾಕೆಟ್‌‌ನಿಂದ ಮದ್ಯವನ್ನು ಹಾಕಿ ಬಳಿಕ ಅಲ್ಲೆ ಇದ್ದ ನೀರಿನ ಬಾಟ್ಲಿಯಿಂದ ನೀರನ್ನು ಲೋಟಕ್ಕೆ ಹಾಕಿ ಸೇವಿಸುತ್ತಿರುವುದು ಕಂಡು ಬಂದಿದ್ದು, ಆತನ ಬಳಿಗೆ ಹೋಗಿ ನೋಡಲಾಗಿ ತನ್ನ ಕೈಯಲ್ಲಿ ಮೈಸೂರ್ ಲ್ಯಾನ್ಸರ್‌‌ ಕಂಪನಿಯ ಟೆಟ್ರಾ ಪ್ಯಾಕೇಟ್‌‌ ಮದ್ಯ ಸೇವನೆ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು, ಸದ್ರಿ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಹರೀಶ್‌ ‌(40) ಎಂಬುದಾಗಿ ತಿಳಿಸಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ.ಕ್ರ 127/2022 ಕಲಂ 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಉಪನಿರೀಕ್ಷಕರು ಉಪ್ಪಿನಂಗಡಿ ಪೊಲೀಸ್ ಠಾಣೆ ರವರು ದಿನಾಂಕ: 31-10-2022 ರಂದು ಹಿರೇಬಂಡಾಡಿ ನೂಜಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಅಟೋರಿಕ್ಷಾ ಕೆಎ-19-ಎಬಿ-7424 ನೇದರಲ್ಲಿ ಅಕ್ರಮವಾಗಿ ಕರುವನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದಾರೆ ಎಂಬುದಾಗಿ ಬಂದ ವರ್ತಮಾನದ ಮೇರೆಗೆ ಸಿಬ್ಬಂದಿಗಳೊಂದಿಗೆ ಹೊರಟು ಹಿರೇಬಂಡಾಡಿ ಕ್ರಾಸ್ ಆಗಿ ರಾಮನಗರಕ್ಕೆ ತಲುಪಿ ನೂಜಿ ಕಡೆಯಿಂದ ಬರುತ್ತಿದ್ದ ಅಟೋರಿಕ್ಷಾ ನಂಬ್ರವನ್ನು ಪರಿಶೀಲಿಸಿಲಾಗಿ ಕೆಎ-19-ಎಬಿ-7424 ನೇದ್ದಾಗಿದ್ದು, ಇದರ ಪ್ರಯಾಣಿಕರ ಸೀಟಿನ ಬದಿಯ ಟರ್ಪಲ್ ನ್ನು ಸರಿಸಿ ನೋಡಿದಾಗ ಒಂದು ದನದ ಕರುವನ್ನು ಹಗ್ಗದಲ್ಲಿ ಕುತ್ತಿಗೆಗೆ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿರುವುದು ಕಂಡುಬಂದಿರುತ್ತದೆ. ಈ  ಬಗ್ಗೆ  ಹೆಚ್ಚಿನ ವಿಚಾರಣೆ ನಡೆಸಿದಾಗ ಆತನು ದನದ ಮಾಂಸಕ್ಕಾಗಿ ಕರುವನ್ನು ವಧೆ ಮಾಡಲು ಸಾಗಾಟ ಮಾಡುತ್ತಿರುವುದಾಗಿ ತಿಳಿಯಪಡಿಸಿದ್ದು, ಈ ಬಗ್ಗೆ ಸಾಗಾಟಕ್ಕೆ ಹಾಗೂ ದನದ ಕರುವಿನ ಬಗ್ಗೆ ದಾಖಲಾತಿಯ ಬಗ್ಗೆ ವಿಚಾರಿಸಿದಾಗ ಯಾವುದೇ ದಾಖಲಾತಿ ಇಲ್ಲವಾಗಿ ತಿಳಿಸಿದ್ದು, ನಂತರ ಅಟೋರಿಕ್ಷಾ ಚಾಲಕನ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು ಅಬ್ದುಲ್ ರಹಿಮಾನ್ ಪ್ರಾಯ 40 ವರ್ಷ, ತಂದೆ: ಮಹಮ್ಮದ್. ಯು, ವಾಸ: ಮನೆ,ನಂ: 7-297/01 ನಿನ್ನಿಕ್ಲಲ್ಲು ಮನೆ, ಉಪ್ಪಿನಂಗಡಿ ಗ್ರಾಮ ಪುತ್ತೂರು ತಾಲೂಕು ಎಂಬುದಾಗಿ ತಿಳಿಸಿದವನನ್ನು ವಶಕ್ಕೆ ಪಡೆದುಕೊಂಡು  ನಂತರ ದನದ ಕರುವನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಳ್ಳಲಾಯಿತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ   ಅ.ಕ್ರ 116/2022 ಕಲಂ: 5 7 12 (2) KARNATAKA PREVENTION OF SLAUGHTER AND PRESERVATION OF CATTLE ACT-2020, 11 (1) (D) PREVENTION OF CRUELTY TO ANIMALS ACT And U/s 66(1), R/w 192 (A) IMV Actಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: ೦4

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಬೀತುರು ಪ್ರಾಯ: 75 ವರ್ಷ,ಗಂಡ: ದಿ ನಿಟ್ಟೋಣಿ ವಾಸ: ಕಾಯರ್ತ್ತಡ್ಕ ಮನೆ, ಮುರುಳ್ಯ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರ ಮಗ ವಿಶ್ವನಾಥನು ಹಿಂದಿನಿಂದಲೇ ಟಿ ಬಿ ಮತ್ತು ಅಪಸ್ಮಾರ ಖಾಯಿಲೆಯಿಂದ ಬಳಲುತ್ತಿದ್ದು, ಸದ್ರಿ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲದೇ ವಿಪರೀತ ಮದ್ಯ ಸೇವನೆ ಮಾಡುವ ಅಭ್ಯಾಸವನ್ನು ಹೊಂದಿರುತ್ತಾನೆ. ಆತನು ಕೆಲಸಕ್ಕೆ ಹೋದ ಸ್ಥಳಗಳಲ್ಲಿ ಕೆಲವೊಮ್ಮೆ ಅಪಸ್ಮಾರ ಖಾಯಿಲೆ ಉಲ್ಬಣಿಸಿ ಬಿದ್ದು, ಮನೆಗೆ ಬರುತ್ತಿದ್ದ ವಿಚಾರ ತಿಳಿದಿರುತ್ತದೆ. ದಿನಾಂಕ 31.10.2022 ರಂದು ನೆರೆಮನೆಯ ಕೂಲಿ ಕೆಲಸದ ಮೇಸ್ತ್ರಿ ಮಾಧವ ಎಂಬವರ ಜೊತೆ ವಸಂತ ನಡುವೈಲು ಎಂಬವರ ಮನೆಗೆ ವಿಶ್ವನಾಥನು ಕೆಲಸಕ್ಕೆ ಹೋಗಿದ್ದು, ವಸಂತ ನಡುಬೈಲು ರವರ ಜಮೀನಿನಲ್ಲಿ ತೋಟಕ್ಕೆ ಸೊಪ್ಪು ಕಡಿಯುವ ವೇಳೆ ಆಕಸ್ಮಿಕವಾಗಿ ಮರದಿಂದ ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ವಿಚಾರ ಪಿರ್ಯಾದಿದಾರರಿಗೆ ಮಾಧವರವರು ತಿಳಿಸಿರುತ್ತಾರೆ. ಪಿರ್ಯಾದಿದಾರರು ಬಳಿಕ ತಿಳಿಯಲಾಗಿ ವಿಶ್ವನಾಥನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದ ವೇಳೆ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ, ಹೋಗುತ್ತಿರುವಾಗ ಮಾಣಿ ಬಳಿ ತಲುಪಿದಾಗ ವಿಶ್ವನಾಥನು  ಮೃತಪಟ್ಟಿರುವುದಾಗಿ 108 ಅಂಬುಲೆನ್ಸ್ ವಾಹನದಲ್ಲಿದ್ದ ಸಿಬ್ಬಂದಿಯವರು ತಿಳಿಸಿ ಅಲ್ಲಿಂದ ಪುನಃ ಪುತ್ತೂರು ಸರಕಾರಿ ಆಸ್ಪತ್ರೆಗೆ ಬಂದಿದ್ದು, ಆ ವೇಳೆ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರು ವಿಶ್ವನಾಥನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಧೃಡಪಡಿಸಿ ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್  30/2022 ಕಲಂ 174  ಸಿಆರ್ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪದ್ಮಾವತಿ ಯು,ಟಿ (38) ಗಂಡ: ತೀರ್ಥಪ್ರಸಾದ್ ವಾಸ: ಉಳುವಾರು ಮನೆ, ಬಂಟೋಡಿ ಅರಂತೋಡು ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ  ಪಿರ್ಯಾದುದಾರರ ಗಂಡ ತೀರ್ಥಪ್ರಾಸದ್ (40) ಎಂಬಾತನು ಅಸೌಖ್ಯದಿಂದ ಬಳಲುತ್ತಿದ್ದು ಕಳೆದ 2 ವರ್ಷಗಳಿಂದ ಆಹಾರವನ್ನು ಸೇವಿಸಲು ಆಗದೆ ಮಿಕ್ಸಿಯಲ್ಲಿ ಆಹಾರವನ್ನು ರುಬ್ಬಿಸಿ ಆಹಾರವನ್ನು ಸೇವನೆ ಮಾಡುತ್ತಿದ್ದು, ಪಿರ್ಯಾದುದಾರರು ದಿನಾಂಕ 31.10.2022 ರಂದು 16:30 ಗಂಟೆಗೆ ಔಷದಿ ಮಾತ್ರೆಗಳು ತರಲು ಹೋಗಿದ್ದು ನಂತರ 18:00 ಗಂಟೆಗೆ ಮನೆಗೆ ಬಂದು ನೋಡಿದಲ್ಲಿ ತೀರ್ಥಪ್ರಾಸದ್ ಮನೆಯಲ್ಲಿ ಇಲ್ಲದೇ ಇದ್ದು, ಮನೆಯ ಹಿಂಬದಿ ನೋಡಿದಾಗ ಗೇರು ಮರದ ಕೊಂಬೆಗೆ ತೀರ್ಥಪ್ರಾಸದ್  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ UDR NO: 45/2022 Sec: 174 Crpc ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಲೂಸಿ ಮಸ್ಕರೇನಸ್ (63 ವರ್ಷ) ಗಂಡ: ತೋಮಸ್‌ ಬ್ಯಾಪ್ಟಿಸ್ಟ್ ಮಸ್ಕರೇನಸ್ , ವಾಸ:ನಂದಿಲ ಮನೆ ಪುತ್ತೂರು ಕಸಬಾ ಗ್ರಾಮ ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ತೋಮಸ್‌ ಬ್ಯಾಪ್ಟಿಸ್ಟ್ ಮಸ್ಕರೇನಸ್ ( 73 ವರ್ಷ) ರವರಿಗೆ ಹಲವು ಸಮಯದಿಂದ ಸೊಂಟ ನೋವು ಇದ್ದು, ಇದಕ್ಕೆ ಮಂಗಳೂರು ಆಸ್ಪತ್ರೆಯಿಂದ ಔಷಧಿ ಪಡೆದುಕೊಂಡಿದ್ದು,  ಆದರೂ ಸೊಂಟ ನೋವು ಕಡಿಮೆ ಆಗದೇ ಇದ್ದು ಸುಮಾರು 20 ದಿನಗಳ ಹಿಂದೆ ಮಂಗಳೂರಿಗೆ ಮಗಳ ಮನೆಗೆ ಹೋದವರು ಅಲ್ಲಿ ಫಿಸಿಯೋಥೆರಫಿ ಔಷಧಿ ಪಡೆದುಕೊಂಡಿದ್ದು,  ದಿನಾಂಕ 30.10.2022 ರಂದು ಬೆಳಿಗ್ಗೆ ಮಂಗಳೂರಿನಿಂದ ಮನೆಗೆ ಬಂದಿರುತ್ತಾರೆ. ದಿನಾಂಕ 31.10.2022 ರಂದು ಬೆಳಗ್ಗಿನ ಜಾವ ಸುಮಾರು 3 ಗಂಟೆಗೆ ನೋಡಿದಾಗ ಪಿರ್ಯಾದಿದಾರರ ಗಂಡನು ಪಿರ್ಯಾದಿದಾರರ ಬೆಡ್‌ನ ಪಕ್ಕದ ಬೆಡ್‌ನಲ್ಲಿ ಮಲಗಿಕೊಂಡಿದ್ದು, ಬಳಿಕ ಸುಮಾರು 6.00 ಗಂಟೆಗೆ ಎಚ್ಚರಗೊಂಡು ನೋಡಿದಾಗ ಬೆಡ್‌ನಲ್ಲಿ ಇಲ್ಲದೇ ಇದ್ದಾಗ ಮನೆಯೊಳಗಡೆ ಹುಡುಕಾಡಿ ಮನೆಯ ಪಕ್ಕದಲ್ಲಿದ್ದ ಶೆಡ್‌ನ ಅಡ್ಡಕ್ಕೆ ನೈಲಾನ್‌ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬರುತ್ತದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆ ಯುಡಿಆರ್‌ :31/2022  ಕಲಂ: 174 ಸಿ .ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಅಮೀದಾ ಪ್ರಾಯ 60 ಗಂಡ: ದಿ ಜೆ ಮಹಮ್ಮದ ಉಸ್ಮಾನ್ ವಾಸ: ಬಂಗ್ಲೆಗುಡ್ಡೆ ಮನೆ  ಮೂಳೂರು ಗ್ರಾಮ ಮಂಗಳೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರ ಮಗಳಾದ ಅನಿಷಾ ಳನ್ನು ಸುಮಾರು 7 ವರ್ಷಗಳ ಹಿಂದೆ ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮದ ನಂದಾವರದ ಎನ್ ಎ ಅಬ್ದುಲ್ ಜಬ್ಬಾರ್ ಎಂಬುವರಿಗೆ ಮದುವೆ ಮಾಡಿಕೊಟ್ಟಿರುವುದಾಗಿದೆ. ಪಿರ್ಯಾದಿದಾರರ ಮಗಳು ಪ್ರಸುತ್ತ 5 ತಿಂಗಳ ಗರ್ಭಿಣಿಯಾಗಿರುತ್ತಾರೆ. ದಿನಾಂಕ 30-10-2022 ರಂದು ಸಂಜೆ 5:30 ಗಂಟೆಗೆ ಅಳಿಯ ಅಬ್ದುಲ್ ಜಬ್ಬಾರ್ ಪಿರ್ಯಾದಿದಾರರಿಗೆ ಕರೆ ಮಾಡಿ ಹೆಂಡತಿ ಅನಿಷಾ ವಾಂತಿ ಮಾಡಿಕೊಂಡು ಅಸೌಖ್ಯಗೊಂಡಿರುತ್ತಾಳೆ ಈ ಬಗ್ಗೆ ಚಿಕಿತ್ಸೆಗೆ ತುಂಬೆ ಫಾದರ ಮುಲ್ಲರ್ ಆಸ್ವತ್ರೆಗೆ  ಕರೆದುಕೊಂಡು ಬಂದಿರುವುದಾಗಿ ತಿಳಿಸಿರುತ್ತಾನೆ. ಅದರಂತೆ ಫಿರ್ಯಾದಿದಾರರು ದಿನಾಂಕ 31-10-2022 ರಂದು 00.30 ಗಂಟೆಗೆ ತುಂಬೆ ಫಾದರ್ ಮುಲ್ಲರ್ ಆಸ್ವತ್ರೆಗೆ ಬಂದು ವಿಚಾರಿಸಿದಾಗ ಮಗಳು ಅನಿಷಾ ದಿನಾಂಕ 30-10-2022 ರಂದು ರಾತ್ರಿ 21.28 ಗಂಟೆಗೆ  ತುಂಬೆ ಫಾದರ್ ಮುಲ್ಲರ್ ಆಸ್ವತ್ರೆಯ ವೈದ್ಯರು ಪರೀಕ್ಷಿಸಿ ಅನಿಷಾಳು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆ UDR NO:- 38/2022  ಕಲಂ: 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-11-2022 12:13 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080