ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನವೀನ್‌ ಮೋನಿಸ್‌ (43) ತಂದೆ; ಸಿಲ್ವೆಸ್ಟರ್‌ ಮೋನಿಸ್‌ ವಾಸ;ಸೇಕ್ರೆಡ್‌ ಹಾರ್ಟ   ಮನೆ, ನಂದಿಬೆಟ್ಟ, ಗರ್ಡಾಡಿ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 01-01-2023 ರಂದು ಕೆಎ 19 MF 5625 ನೇ ಕಾರನ್ನು ಅದರ ಚಾಲಕ ಮಹಮ್ಮದ್‌ ಮುಶ್ರಫ್‌ ಎಂಬವರು ಸಹ ಪ್ರಯಾಣಿಕನನ್ನಾಗಿ ಅಬ್ದುಲ್‌ ಹಮೀದ್‌ ಯಾನೆ ನೌಶದ್‌ ಹಾಜಿ ಎಂಬವರನ್ನು ಕುಳ್ಳಿರಿಸಿಕೊಂಡು ವೇಣೂರು ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿಕೊಂಡು ಬರುತ್ತಾ  ಸಮಯ ಸುಮಾರು ಬೆಳಿಗ್ಗೆ 09.20 ಗಂಟೆಗೆ  ಬೆಳ್ತಂಗಡಿ ತಾಲೂಕು ,ಗರ್ಡಾಡಿ ಗ್ರಾಮದ ಮುಗೇರಡ್ಕ ಎಂಬಲ್ಲಿ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿ ವಿರುದ್ದ ದಿಕ್ಕಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ವೇಣೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕೆಎ 19 C 5619 ನೇ ಖಾಸಗಿ ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನ ಜಖಂ ಆಗಿ ಕಾರಿನಲ್ಲಿದ್ದ ಕಾರು ಚಾಲಕ ಮಹಮ್ಮದ್‌ ಮುಶ್ರಫ್‌ ರವರು ತಲೆಗೆ, ಮೈಕೈಗಳಿಗೆ ತೀವ್ರ ರಕ್ತಗಾಯ, ಅಬ್ದುಲ್‌ ಹಮೀದ್‌ ಯಾನೆ ನೌಶದ್‌ ಹಾಜಿ ರವರು ತಲೆಗೆ, ಹೊಟ್ಟೆಗೆ, ಮೈ ಕೈಗಳಿಗೆ ತೀವ್ರ ರಕ್ತಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಲ್ಲಿ ಇಲ್ಲಿನ ವೈದ್ಯರು ಪರೀಕ್ಷಿಸಿ ಇಬ್ಬರೂ ಗಾಯಾಳುಗಳನ್ನು ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಸಾಗಿಸುತ್ತಿರುವಾಗಲೇ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಬಸ್ಸಿನಲ್ಲಿದ್ದ ಚಾಲಕ ಮತ್ತು ಸಹ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗೊಂಡಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 01/2023 ಕಲಂ: 279, 304(A) ಭಾ ದಂ ಸಂ, ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹರೀಶ್‌ ಬಂಗೇರ ಪ್ರಾಯ 37 ವರ್ಷ ತಂದೆ: ವಸಂತ ಬಂಗೇರ ವಾಸ:ಮೈಂದಾಳ ಮನೆ ನಾವೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:01-01-2023 ರಂದು ತನ್ನ ಬಾಬ್ತು ಕಾರು ನಂಬ್ರ PB-15-U-1035 ನೇದನ್ನು ಮಾಣಿ –ಮೈಸೂರು ರಸ್ತೆಯಲ್ಲಿ ಮಾಣಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಬೆಳಿಗ್ಗೆ 07.45 ಗಂಟೆಗೆ ಬಂಟ್ವಾಳ ತಾಲೂಕು ನೇಟ್ಲಮುಡ್ನೂರು ಗ್ರಾಮದ ಪರ್ಲೋಟ್ಟು ಎಂಬಲ್ಲಿ ತಲುಪಿ ತನ್ನ ಕಾರನ್ನು ರಸ್ತೆಯ ಎಡಬದಿಯ ಕಚ್ಚಾ ಡಾಮಾರು ರೋಡಿನಲ್ಲಿ ಪಾರ್ಕಿಂಗ್ ಮಾಡಿ ಸತೀಶ್‌ ರವರಿಗೆ ಕಾಯುತ್ತಿರುವಾಗ ಹಿಂದಿನಿಂದ ಅಂದರೆ ಮಾಣಿ ಕಡೆಯಿಂದ ಪುತ್ತೂರು ಕಡೆಗೆ KL-14-AA-4125 ನೇ ಬೊಲೆರೋ ಪಿಕಪ್ ವಾಹನವನ್ನು ಅದರ ಚಾಲಕ ಮಹಮ್ಮದ್ ಶಮೀರ್ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ತೀರಾ ಎಡ ಬದಿಗೆ ಬಂದು ಪಿರ್ಯಾಧಿದಾರರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಬಲಬದಿಯ ಹಿಂದಿನಿಂದ ಮುಂದಿನವರೆಗೆ ,ಹಿಂದಿನ ಇಂಡಿಕೇಟರ್ ಲೈಟ್ ,ಬಲಭಾಗದ ಬಾಗಿಲು,ಮುಂದಿನ ಬಲಬಾಗಿಲು, ಹಿಂದಿನ ಬಾಡಿ ಜಖಂ ಆಗಿರುತ್ತದೆ. ಅಪಘಾತಪಡಿಸಿದ ಬೊಲೆರೋ ವಾಹನದ ಮುಂದಿನ ಬಲ ಚಕ್ರದ ಬಳಿ ಮತ್ತು ಹಿಂದಿನ ಬಾಡಿ ಶೇಫ್ ಜಖಂಗೊಂಡಿರುತ್ತದೆ.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 01/2023  ಕಲಂ: 279 ಬಾಧಂಸಂ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬೂಬಕ್ಕರ್ ಕೆ ಪ್ರಾಯ:38 ವರ್ಷ ತಂದೆ:ಮಹಮ್ಮದ್  ವಾಸ: ಶಿವಾಜಿನಗರ  ಮನೆ,ಮರ್ಧಾಳ ಅಂಚೆ ಐತ್ತೂರು ಗ್ರಾಮ ಕಡಬ ಎಂಬವರ ದೂರಿನಂತೆ ದಿನಾಂಕ:30.12.2022 ರಂದು ಪಿರ್ಯಾದುದಾರರ ಮಗಳು ಕು||ಆಲ್ಬಿಯಾ ರವರು ಕಾಲೇಜುಗೆ ಹೋಗಿ ವಾಪಾಸ್ಸು ಸಂಜೆ 03.30 ಗಂಟೆಗೆ ಕಾಲೇಜುನಿಂದ ಅಡ್ಡಗದ್ದೆ ರಸ್ತೆಯಲ್ಲಿ ಕಡಬ ಪೇಟೆ ಕಡೆಗೆ ಕಚ್ಚಾ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಹಿಂದಿನಿಂದ ಸ್ಕೂಟರ್ ಸವಾರನೊಬ್ಬನು ತೀರಾ ನಿರ್ಲಕ್ಷತನ ಹಾಗೂ ಅಜಾಗೂರುಕತೆಯಿಂದ ಸ್ಕೂಟರ್ ನ್ನು ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮಗಳು ಕು||ಆಲ್ಬಿಯಾ ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ  ಮಗಳು ನೆಲಕ್ಕೆ ಬಿದ್ದು ಗಾಯಗೊಂಡಿರುವ ವಿಷಯ ತಿಳಿದು ಅಪಘಾತವಾದ ಸ್ಥಳಕ್ಕೆ ಪಿರ್ಯಾದುದಾರರು ಹೋಗಿ ನೋಡಲಾಗಿ ಹಾಗೂ ಅಲ್ಲಿ ಸೇರಿದ್ದ ರಫೀಕ್, ಹೈದರ್ ರವರು ಪಿರ್ಯಾದುದಾರರ ಮಗಳನ್ನು ಉಪಚರಿಸಿ ಅಪಘಾತವನ್ನುಂಟು ಮಾಡಿದ ಸ್ಕೂಟರ್ ನೋಡಲಾಗಿ ಡಿಯೊ ಸ್ಕೂಟರ್ ಆಗಿದ್ದು ಅದರ ನಂಬ್ರ KA21 EA1761 ಆಗಿದ್ದು ಹಾಗೆ ಅದನ್ನು ಚಲಾಯಿಸಿದವರ ಹೆಸರು ಹರ್ಷಿತ್ ಎಂಬುದಾಗಿ ತಿಳಿಯಿತು ಪಿರ್ಯಾದುದಾರರ ಮಗಳಿಗೆ ಎಡಕಾಲಿನ ಮಂಡಿಗೆ ಗುದ್ದಿದ ನೋವು ಹಾಗೂ ತರಚಿದ ಗಾಯಗಳಾಗಿದ್ದು ಚಿಕಿತ್ಸೆ ಬಗ್ಗೆ ಕಡಬ ಜೆಎಮ್ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಯ ವೈದ್ಯರು ಸಲಹೆಯಂತೆ ಎಕ್ಸರೇ ಮಾಡಿಸಿ ಮನೆಗೆ ಕರೆದುಕೊಂಡು ಹೋಗಿರುತ್ತಾರೆ  ಸದ್ರಿ ಅಪಘಾತದ ವಿಚಾರವನ್ನು ಪಿರ್ಯಾದುದಾರರು ಮತ್ತು ಆರೋಪಿ ಹರ್ಷಿತ್ ರಾಜಿಯಲ್ಲಿ ಇತ್ಯರ್ಥಪಡಿಸಿಕೊಳ್ಳುವ ಎಂದು ಮಾತನಾಡಿಕೊಂಡಿದ್ದು ದಿನಾಂಕ:31.12.2022 ರಂದು ಪಿರ್ಯಾದುದಾರರ ಮಗಳ ಎಡಕಾಲು ಮಂಡಿಯಲ್ಲಿ ತೀವ್ರ ಊತ ಕಾಣಿಸಿಕೊಂಡಿದ್ದು ನಂತರ ಪಿರ್ಯಾದುದಾರರು ಚಿಕಿತ್ಸೆಯ ಬಗ್ಗೆ ಪುತ್ತೂರು ಹಿತಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಯ ವೈದ್ಯರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲು ಮಾಡಿಕೊಂಡಿರುತ್ತಾರೆ.ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 01/2023 ಕಲಂ: ಕಲಂ:279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿಶ್ವನಾಥ, ಪ್ರಾಯ-36 ವರ್ಷ, ತಂದೆ-ಸಾಂತಪ್ಪ ಗೌಡ, ವಾಸ- ಕನ್ನಯ ದರ್ಭೆ ಮನೆ,  ಅರಿಯಡ್ಕ ಗ್ರಾಮ, ಪುತ್ತೂರು ಎಂಬವರ ದೂರಿನಂತೆ ಫಿರ್ಯಾದುದಾರರು ಪುತ್ತೂರು ತಾಲೂಕು ಅರಿಯಡ್ಕ   ಗ್ರಾಮದ  ಕೌಡಿಚ್ಚಾರ್   ಎಂಬಲ್ಲಿ ದೇವಿಕೃಪಾ ಜೆರಾಕ್ಸ್ ಎಂಬ ಹೆಸರಿನ ಅಂಗಡಿಯನ್ನು  ಹೊಂದಿರುತ್ತಾರೆ. ದಿನಾಂಕ:-31.12.2022ರಂದು ರಾತ್ರಿ ಸುಮಾರು 8.30 ಗಂಟೆಗೆ ಫಿರ್ಯಾದುದಾರರು ಸದ್ರಿ ಅಂಗಡಿಗೆ ಬೀಗ ಹಾಕಿ  ತನ್ನ  ಮನೆಗೆ ಹೋಗಿದ್ದು,  ಆ ವೇಳೆ ಅಂಗಡಿಯೊಳಗಿದ್ದ 1 ಮೇಜಿನ ಡ್ರಾವರ್ನಲ್ಲಿ  ರೂಪಾಯಿ 10,000/- ಮತ್ತು ಇನ್ನೊಂದು ಮೇಜಿನ ಡ್ರಾವರ್ನಲ್ಲಿ  ರೂಪಾಯಿ 4,000/- ನಗದು ಹಣ ಮತ್ತು ಸುಮಾರು ರೂಪಾಯಿ 3,000 ಮೌಲ್ಯದ ವಿವೋ ಕಂಪೆನಿಯ  ಟಚ್ ಸ್ಕ್ರೀನ್ ಮೊಬೈಲ್ ಫೋನನ್ನು ಇಟ್ಟು ಮೇಜಿನ ಡ್ರಾವರಿನ ಬೀಗವನ್ನು ಭದ್ರಪಡಿಸಿರುತ್ತಾರೆ. ದಿನಾಂಕ:- 01.01.2023ರಂದು ಬೆಳಿಗ್ಗೆ ಸುಮಾರು 7.45 ಗಂಟೆಗೆ ಫಿರ್ಯಾದುದಾರರು ಕೌಡಿಚ್ಚಾರಿನಲ್ಲಿರುವ ಸದ್ರಿ ಅಂಗಡಿಗೆ ತೆರಳಿ ನೋಡಿದಾಗ ಸದ್ರಿ ಅಂಗಡಿಯ ಮುಂಬದಿಯ ಬಾಗಿಲಿಗೆ ಹಾಕಿದ್ದ 2 ಬೀಗವನ್ನು  ಯಾರೋ ಮುರಿದಿರುವುದು ಕಂಡು ಬಂದಿದ್ದು, ಬಳಿಕ ಫಿರ್ಯಾದುದಾರರು ಅಂಗಡಿಯ ಒಳಗೆ ಹೋಗಿ ನೋಡಲಾಗಿ  ಸದ್ರಿ ಅಂಗಡಿಯ ಒಳಗಿದ್ದ ಎರಡೂ ಮೇಜುಗಳ ಬೀಗ ಹಾಕಿದ್ದ ಡ್ರಾವರನ್ನು ಯಾವುದೋ ಸಾಧನದಿಂದ ಬಲವಾಗಿ ಮೀಟಿ ತೆರೆದಿರುವುದು ಕಂಡು ಬಂದಿದ್ದು, ಸದ್ರಿ ಡ್ರಾವರ್ಗಳ ಒಳಗಿದ್ದ ಒಟ್ಟು ರೂಪಾಯಿ 14,000/- ನಗದು ಹಣ ಮತ್ತು ಸುಮಾರು ರೂಪಾಯಿ 3,000 ಮೌಲ್ಯದ ವಿವೋ ಕಂಪೆನಿಯ ಟಚ್ ಸ್ಕ್ರೀನ್ ಮೊಬೈಲ್ ಫೋನ್ನ್ನು ಯಾರೋ  ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 17,000/-ಆಗಬಹುದು.  ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ CR.NO 01-2023 ಕಲಂ:457, 454,380  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಸುಲಿಗೆ ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಐರಿನ್ ಸಿಕ್ವೇರಾ, 42 ವರ್ಷ, ಗಂಡ: ಸ್ಟ್ಯಾನಿ ಸಿಕ್ವೇರಾ ವಾಸ: ಕುದ್ಕೋಳಿ ಮನೆ, ಕುಕ್ಕಿಪಾಡಿ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 31-12-2022 ರಂದು ಸಿದ್ದಕಟ್ಟೆ ಚರ್ಚಿನಲ್ಲಿ ಹೊಸ ವರ್ಷ ಪ್ರಯುಕ್ತ ವಿಶೇಷ ಪ್ರಾರ್ಥನೆ ಇದ್ದುದರಿಂದ ರಾತ್ರಿ 7:30 ಗಂಟೆಗೆ ಮನೆಯಿಂದ ಹೋಗಿದ್ದು ಪ್ರಾರ್ಥನೆ ಮುಗಿದ್ದು ರಾತ್ರಿ 10:15 ಗಂಟೆಗೆ ವಾಪಾಸು ಮನೆಗೆ ಪರಿಚಯದ ಆಟೋರಿಕ್ಷಾದಲ್ಲಿ ಕುದ್ಕೋಳಿ ಕ್ರಾಸ್ ವರೆಗೆ ಬಂದು ರಿಕ್ಷಾದಿಂದ ಇಳಿದು ಮನೆ ಕಡೆಗೆ ತೋಟದ ದಾರಿಯಲ್ಲಿ ಟಾರ್ಚ್ ಬೆಳಕು ಉರಿಸಿಕೊಂಡು ಹೋಗುತ್ತಿದ್ದ ಸಮಯ ರಾಯಿ ಗ್ರಾಮದ ಮೇಗಿನ ಕುದ್ಕೋಳಿ ದೇಜಪ್ಪ ಪೂಜಾರಿಯವರಿಗೆ ಸೇರಿದ ತೋಟದ ಜಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯ ರಾತ್ರಿ 10:30 ಗಂಟೆಗೆ ದಾರಿಯ ಬದಿಯಲ್ಲಿ ನಿಂತಿದ್ದ ಇಬ್ಬರು ಗಂಡಸರು ಏಕಾಏಕಿಯಾಗಿ ಪಿರ್ಯಾದಿದಾರರ ಬಾಯಿಗೆ ಬೊಬ್ಬೆ ಹೊಡೆಯದಂತೆ ಕೈ ಹಿಡಿದು ನೆಲಕ್ಕೆ ಬೀಳಿಸಿ ಆಗ ಒಬ್ಬನು ಪಿರ್ಯಾದಿದಾರರ ಕೈಯನ್ನು ಗಟ್ಟಿಯಾಗಿ ಹಿಡಿದು ಆತನ ಕೈಯಲ್ಲಿದ್ದ ಚೂರಿಯನ್ನು ತೋರಿಸಿ ಬೊಬ್ಬೆ ಹೊಡೆದರೆ ಕೊಲ್ಲುವುದಾಗಿ ಬೆದರಿಸಿ ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಸುಮಾರು 5 ಪವನ್ನ ತೂಕದ ಕರಿಮಣಿ ಸರ, 4 1/2 ಪವನ್ ತೂಕದ ಚಿನ್ನದ ಸರ, 21/2 ಪವನ್ ತೂಕದ ಚಿನ್ನದ ಸರವನ್ನು ಬಲವಾಗಿ ಎಳೆದು ಆಗ ಪಿರ್ಯಾದಿದಾರರು ಉರುಡಾಡಿ ಕೈ ಬಿಡಿಸಿ ಚಿನ್ನದ ಚೈನನ್ನು ಹಿಡಿದುಕೊಂಡು 21/2 ಪವನ್ ಚಿನ್ನದ ಚೈನಿನ ಅರ್ಧ ತುಂಡು ಪಿರ್ಯಾದಿದಾರರ ಕೈಯಲ್ಲಿ ಬಂದಿದ್ದು ಆಗ ಅವರಿಬ್ಬರು ಪುನಃ ಪಿರ್ಯಾದಿದಾರರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಪಿರ್ಯಾದಿದಾರರ ಬಲ ಕೈಯಲ್ಲಿದ್ದ ಸುಮಾರು 4 1/2 ಪವನ್ ತೂಕದ 3 ಚಿನ್ನದ ಬಳೆಗಳು, ಎಡಕೈಯಲ್ಲಿದ್ದ ಟೈಟಾನ್ ಕಂಪೆನಿಯ ಹಳೆಯ ವಾಚು, ಪರ್ಸಿನಲ್ಲಿದ್ದ ನಗದು ರೂ.1,500/- ಎಳೆದುಕೊಂಡಿದ್ದು ಆಗ ಪಿರ್ಯಾದಿದಾರರ ಬೊಬ್ಬೆ ಹಾಕಲು ಪ್ರಯತ್ನಿಸಿದಾಗ ಪಿರ್ಯಾದಿದಾರರ ಬಾಯಿಗೆ ಮಣ್ಣನ್ನು ತುರುಕಿಸಿ ಪುನಃ ಚೂರಿಯನ್ನು ತೋರಿಸಿದಾಗ ಪಿರ್ಯಾದಿದಾರರು ಚೂರಿಯನ್ನು ಹಿಡಿದುಕೊಂಡಾಗ ಚೂರಿ ತುಂಡಾಗಿ ಅದರ ಹಿಡಿ ಪಿರ್ಯಾದಿದಾರರ ಕೈಯಲ್ಲಿ ಉಳಿದಿದ್ದು ಆಗ ಅವರಿಬ್ಬರು ಅಲ್ಲಿಂದ ಓಡಿ ಹೋಗಿರುತ್ತಾರೆ. ಚಿನ್ನಾಭರಣಗಳ ಅಂದಾಜು ತೂಕ 16 ಪವನ್ ಆಗಿದ್ದು, ಒಟ್ಟು ಅಂದಾಜು ಮೌಲ್ಯ 5,00,000/-ಆಗಿದ್ದು,  ವಾಚಿನ ಅಂದಾಜು ಮೌಲ್ಯ 300/- ಆಗಬಹುದು .ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ  ಅ.ಕ್ರ  01/2023 ಕಲಂ 394 r/w 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಯಾನಂದ.ಪಿ. ಪ್ರಾಯ: 22 ವರ್ಷ ತಂದೆ: ಪದ್ಮನಾಭ ವಾಸ: ಜನತಾ ಕಾಲೋನಿ ಮನೆ, ಶಿರಾಡಿ ಗ್ರಾಮ ಮತ್ತು ಅಂಚೆ, ಕಡಬ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರಾದ ಜಯಾನಂದ ರವರು ಹಾಗೂ ಅವರ ಮಾವ ತಿಮ್ಮಪ್ಪ ಮತ್ತು ಅವರ ಮಗ ಶಾರೂನ್ ಕುಮಾರ್ ರವರು ದಿನಾಂಕ 31-12-2022 ರಂದು ಕಡಬ ತಾಲೂಕು ಶಿರಾಡಿ ಎಂಬಲ್ಲಿರುವ ರಾಜೇಶ್.ಕೆ.ಎ ಎಂಬವರಲ್ಲಿಗೆ ತೋಟದ ಕೆಲಸಕ್ಕೆ ಹೋದವರು  ಕೆಲಸ ಮುಗಿಸಿ ಅವರ ಮನೆಯಲ್ಲಿ ಸಂಜೆ ಉಪಾಹಾರ ಸೇವಿಸಿ ಹೊರಡುತ್ತಿರುವಾಗ ಸಮಯ ಸುಮಾರು 6:45 ಗಂಟೆಗೆ ರಾಜೇಶ್ .ಕೆ.ಎ ರವರು ನೀವು ಹೋಗುವಾಗ ಪಂಪು ಶೆಡ್ ನಲ್ಲಿ ಪಂಪಿನ ಸ್ವಿಚ್ಛ್ ಆನ್ ಮಾಡಿ ಹೋಗಿ ಎಂದು ತಿಳಿಸಿದಂತೆ ತೋಟದ ಸಮೀಪ ಇರುವ ಪಂಪು ಶೆಡ್ ನ ಬಳಿ ಹೋದಾಗ ಪಂಪು ಶೆಡ್ ನ ಹಿಂಬದಿ ಕಾಡಾನೆಯೊಂದಿದ್ದು ಗಮನಕ್ಕೆ ಬಾರದೆ ತಿಮ್ಮಪ್ಪ ರವರು ಪಂಪಿನ ಸ್ವಿಚ್ಛ್ ಆನ್ ಮಾಡಲು ಹೋದಾಗ ಕಾಡಾನೆಯು ತಿಮ್ಮಪ್ಪರವರ ಮೇಲೆ ದಾಳಿ ಮಾಡಿದ್ದು, ಆಗ ಅವರ ಮಗ ಶರೂನ್ ಕುಮಾರನು ತಿಮ್ಮಪ್ಪರನ್ನು ರಕ್ಷಿಸಲೆಂದು ಅವರ ಬಳಿ ಹೋದಾಗ ಅವನಿಗೂ ಕಾಡಾನೆಯು ತಿವಿದು ಗಾಯಗೊಳಿಸಿದ್ದು, ಇದನ್ನು ಕಂಡ ಫಿರ್ಯಾದಿದಾರರು ಹೆದರಿ ಸ್ಥಳದಿಂದ ಬೊಬ್ಬೆ ಹಾಕುತ್ತಾ ಓಡಿ ರಾಜೇಶ್ .ಕೆ.ಎ.ರವರ ಮನೆಗೆ ಹೋಗಿ ವಿಚಾರ ತಿಳಿಸಿ ಅಲ್ಲಿದ್ದವರೊಂದಿಗೆ ಘಟನಾ ಸ್ಥಳಕ್ಕೆ ಬಂದು ನೋಡಿದಾಗ ತಿಮ್ಮಪ್ಪ ಮತ್ತು ಶರೂನ್ ಕುಮಾರ್ ರವರು ಗಾಯಗೊಂಡು ಬಿದ್ದಿದ್ದು, ಅವರನ್ನು ಎಬ್ಬಿಸಿ ಉಪಚರಿಸಿ ಚಿಕಿತ್ಸೆಯ ಬಗ್ಗೆ ಅಂಬ್ಯುಲೆನ್ಸ್‌‌ನಲ್ಲಿ ನೆಲ್ಯಾಡಿ ಆಶ್ವಿನಿ ಆಸ್ಪತ್ರೆಗೆ  ಕರೆ ತಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದಂತೆ ಗಾಯಾಳುಗಳಿಬ್ಬರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ತಿಮ್ಮಪ್ಪರವರು ಮೃತಪಟ್ಟಿರುವುದಾಗಿ ತಿಳಿಸಿ ತೀವ್ರ ಗಾಯಗೊಂಡ ಶರೂನ್ ಕುಮಾರನಿಗೆ ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 01/2023 ಕಲಂ:174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-01-2023 04:49 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080