ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುಜಾತ, ಪ್ರಾಯ 47 ವರ್ಷ, ಗಂಡ: ಪುರುಷೋತ್ತಮ ಆಚಾರ್ಯ, ವಾಸ: ನೈತಾಡಿ ಮನೆ, ಕೆಮ್ಮಿಂಜೆ   ಅಂಚೆ & ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 01-07-2022 ರಂದು 13-00 ಗಂಟೆಗೆ ಆರೋಪಿ ಕಾರು ಚಾಲಕ ಮಹಮ್ಮದ್‌ ಷರೀಫ್‌ ಎಂಬವರು KA-20-Z-7580 ನೇ ನೋಂದಣಿ ನಂಬ್ರದ ಕಾರನ್ನು ಮುಕ್ರಂಪಾಡಿ-ಮುಂಡೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ  ಮುಂಡೂರು ಕಡೆಯಿಂದ ಮುಕ್ರಂಪಾಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಕೋಲಾಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಸುಜಾತ, ಪುರುಷೋತ್ತಮ ಆಚಾರ್ಯ ಮತ್ತು ಜೀವನ್‌ ರವರು ಪ್ರಯಾಣಿಕರಾಗಿ, ಮುರಳಿ ಪಿ ರವರು ಚಾಲಕರಾಗಿ ನೈತಾಡಿ ಕಡೆಯಿಂದ ಪಂಜಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-M-9403 ನೇ ನೋಂದಣಿ ನಂಬ್ರದ ಓಮ್ನಿ ಕಾರಿಗೆ ಅಪಘಾತವಾಗಿ ಓಮ್ನಿ ಕಾರು ರಸ್ತೆ ಬದಿಯ ಗುಂಡಿಗೆ ಬಿದ್ದಿರುತ್ತದೆ. ಈ ಅಪಘಾತದಿಂದ ಪಿರ್ಯಾದುದಾರರಿಗೆ ಬಲಕೈಯ ತಟ್ಟಿಗೆ ರಕ್ತಗಾಯ ಮತ್ತು ದೇಹಕ್ಕೆ ಗುದ್ದಿದ ನೋವು, ಜೀವನ್‌ರವರಿಗೆ ಬಲಭುಜಕ್ಕೆ ಮತ್ತು ದೇಹಕ್ಕೆ ಗುದ್ದಿದ ನೋವಾಗಿ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ. ಪುರುಷೋತ್ತಮ ಆಚಾರ್ಯ ರವರಿಗೆ ಎಡಕಾಲು ಮತ್ತು ಬಲಕಾಲ ಮೊಣಗಂಟಿಗೆ ಗುದ್ದಿದ ರಕ್ತಗಾಯ, ಸೊಂಟಕ್ಕೆ, ಬಲಕೈ ಅಂಗೈಗೆ ಗುದ್ದಿದ ನೋವು ಮತ್ತು ಮುರಳಿ ಪಿ ರವರಿಗೆ ಎರಡು ಕಾಲುಗಳಿಗೆ ಮತ್ತು ದೇಹಕ್ಕೆ, ತಲೆಗೆ ರಕ್ತಗಾಯವಾಗಿದ್ದು, ಅವರಿಗೆ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕತ್ಸೆ ಬಗ್ಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಆರೋಪಿ ಚಾಲಕನಿಗೂ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಎರಡೂ ವಾಹನಗಳು ಜಖಂಗೊಂಡಿರುತ್ತವೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  120/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹಸೈನಾರ್ ಪ್ರಾಯ: 49 ವರ್ಷ ತಂದೆ: ದಿ|| ಮಹಮ್ಮದ್ ವಾಸ: ಗಂಡಿ ಮನೆ, ಸವಣಾಲು ಅಂಚೆ, ಬೆಳ್ತಂಗಡಿ  ಎಂಬವರ ದೂರಿನಂತೆ ದಿನಾಂಕ 30-06-2022 ರಂದು ಪಿರ್ಯಾದಿದಾರರು ಕೆಲಸ ಬಿಟ್ಟು ಮನೆ ಕಡೆಗೆ ಹೋಗುವರೇ 19:50  ಗಂಟೆಗೆ ಬಂಟ್ವಾಳ ತಾಲೂಕು ಪುದು ಗ್ರಾಮದ ಫರಂಗೀಪೇಟೆ ಎಂಬಲ್ಲಿ ರಸ್ತೆ ಬದಿ ನಿಂತುಕೊಂಡಿದ್ದ ಸಮಯ ಬಿ.ಸಿ.ರೋಡ್ ಕಡೆಯಿಂದ KA-19-HB-3769 ನೇ ಮೋಟಾರ್ ಸೈಕಲನ್ನು ಅದರ ಸವಾರ ಮಹಮ್ಮದ್ ಮುಕ್ತಾರ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಮೋಟಾರ್ ಸೈಕಲ್ ಸಮೇತ ಸವಾರನು ರಸ್ತೆಗೆ ಬಿದ್ದು. ಪಿರ್ಯಾದಿದಾರರ ಎಡಕಾಲಿಗೆ ಹಾಗೂ ಎಡಹಣೆಗೆ ರಕ್ತ ಗಾಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಮೋಟಾರ್ ಸೈಕಲ್ ಸವಾರನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು .ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 73/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

 • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಂಜುನಾಥ ಪೂಜಾರಿ ಪ್ರಾಯ 26 ವರ್ಷ ತಂದೆ:ದಿ|| ಜರ್ನಾಧನ ಪೂಜಾರಿ ವಾಸ:ಎನ್ಮಾಡಿ ಮನೆ ಇಳಂತಿಲ ಗ್ರಾಮ ಕಡಬ ತಾಲೂಕು  ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ: 30-06-2022 ರಂದು ತನ್ನ ಬಾಬ್ತು ಮೋಟಾರು ಸೈಕಲ್ ನಲ್ಲಿ ಸಾಮಾನು ಖರೀದಿಸುವರೇ ಉಪ್ಪಿನಂಗಡಿ ಪೇಟೆಗೆ ಬಂದು ರಾತ್ರಿ ಮನೆ ಕಡೆಗೆ ಹೋಗುತ್ತಾ, 22.30 ಗಂಟೆಯ ಸಮಯಕ್ಕೆ ಬೆಳ್ತಂಗಡಿ ತಾಲೂಕು, ಇಳಂತಿಲ ಗ್ರಾಮದ ಇಳಂತಿಲ ಕ್ರಾಸ್ ಬಳಿ ತಲುಪುತ್ತಿದ್ದಂತೆ ಪರಿಚಯದ ಸ್ವಸ್ತಿಕ್, ವಿಶ್ವನಾಥ ಹಾಗೂ ಇನ್ನಿಬ್ಬರು ಪಿರ್ಯಾದುದಾರರು ಬರುತ್ತಿದ್ದ ಮೋಟಾರು ಸೈಕಲನ್ನು  ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ  ಬೈದು ಸ್ವಸ್ಥಿಕ್ ನು ಕತ್ತಿಯಿಂದ ಪಿರ್ಯಾದುದಾರರ ಎಡಕೈ ಹೆಬ್ಬೆರಳಿಗೆ ಕಡಿದನು. ವಿಶ್ವನಾಥನು ದೊಣ್ಣೆಯಿಂದ ಬಲಕಾಲ ಪಾದಕ್ಕೆ ಹೊಡೆದನು. ಇನ್ನಿಬ್ಬರಲ್ಲಿ ಓರ್ವನು ಕೈಯಿಂದ ಬೆನ್ನಿಗೆ ಗುದ್ದಿದನು. ಇನ್ನೋರ್ವನು ಕಾಲಿನಿಂದ ತೊಡೆಗೆ ತುಳಿದಿರುತ್ತಾನೆ. ಪಿರ್ಯಾದುದಾರರು ನೋವಿನಿಂದ ಬೊಬ್ಬೆ ಹಾಕಿದಾಗಿ ಆರೋಪಿಗಳು ನೀನು ಬೇರೆ ಯಾರಿಗಾದರೂ ಹೇಳಿದರೆ ಜೀವ ಸಹಿತ ಬಿಡುವುದಲ್ಲ ಎಂಬುದಾಗಿ ಬೆದರಿಕೆ ಹಾಕಿ ದೊಣೆನೆಯನ್ನು ಅಲ್ಲಿಯೇ ಬಿಸಾಡಿ ಕತ್ತಿಯನ್ನು ಅವರು ಹಿಡಿದುಕೊಂಡು ಹೋಗಿರುತ್ತಾರೆ. ಹಲ್ಲೆಯಿಂದ ಪಿರ್ಯಾದುದಾರರ ಎಡಕೈ ಹೆಬ್ಬೆರಳಿಗೆ ರಕ್ತಗಾಯ, ಬಲಕಾಲಿನ ಪಾದಕ್ಕೆ ಕಣಿದ ಗಾಯ, ಬೆನ್ನಿಗೆ ಹಾಗೂ ತೊಡೆಗೆ ಗುದ್ದಿದ ಗಾಯವಾಗಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 76/2022 ಕಲಂ:341,323,504,324,506 ಜೊತೆಗೆ 34  ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸ್ವಸ್ತಿಕ್ ಪ್ರಾಯ 23 ವರ್ಷ ತಂದೆ:ವಾಸು ಪೂಜಾರಿ ವಾಸ:ಸುಭಾಷ ನಗರ ಮನೆ 34ನೇ ನೆಕ್ಕಿಲಾಡಿ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಅವರ ಸ್ನೇಹಿತ ವಿಶ್ವನಾಥ ಎಂಬವರೊಂದಿಗೆ  ದಿನಾಂಕ: 30-06-2022 ರಂದು ರಾತ್ರಿ ಪರಿಚಯದ ಸಂದೀಪ್ ಪುಜಾರಿ ಎಂಬವರ  ಮನೆಗೆ ಹೋಗಿದ್ದು, ವಾಪಾಸು ಮೋಟಾರು ಸೈಕಲಿನಲ್ಲಿ  ಬರುತ್ತಾ 22.30 ಗಂಟೆಯ ಸಮಯಕ್ಕೆ ಬೆಳ್ತಂಗಡಿ ತಾಲೂಕು, ಇಳಂತಿಲ ಗ್ರಾಮದ, ಇಳಂತಿಲ ಕ್ರಾಸ್ ಬಳಿ ತಲುಪುತ್ತಿದ್ದಂತೆ ಪರಿಚಯದ ಮಂಜುನಾಥ, ಪ್ರವೀಣ ಮತ್ತು ಯೊಗೀಶ್ ಎಂಬವರು ಪಿರ್ಯಾದುದಾರರು ಬರುತ್ತಿರುವ  ಮೋಟಾರು ಸೈಕಲನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಮಂಜುನಾಥನು ದೊಣ್ಣೆಯಿಂದ ಎಡ ತೋಳಿಗೆ , ಪ್ರವೀಣ  ಕೈಯಿಂದ ಬೆನ್ನಿಗೆ ಗುದ್ದಿರುತ್ತಾನೆ. ಯೊಗೀಶ್ ಕಾಲಿನಿಂದ ತೊಡೆಗೆ ತುಳಿದಿರುತ್ತಾನೆ. ನೋವಿನಿಂದ ಬೊಬ್ಬೆ ಹಾಕಿದಾಗ ನೀನು ಈ ವಿಚಾರವನ್ನು ಬೇರೆ ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ. ಎಂಬುದಾಗಿ ಬೆದರಿಕೆ ಹಾಕಿ ದೊಣ್ಣೆಯನ್ನು ಅಲ್ಲಿಯೇ ಬಿಸಾಡಿ ಅಲ್ಲಿಂದ ಅವರು ಹೋಗಿರುತ್ತಾರೆ. ಹಲ್ಲೆಯಿಂದ ಎಡ ತೋಳಿಗೆ ಗುದ್ದಿದ ಗಾಯ, ಬೆನ್ನಿಗೆ ಹಾಗೂ ತೊಡೆಗೆ ನೋವುಂಟು ಮಾಡುವ ಗಾಯವಾಗಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 77/2022 ಕಲಂ:341,323,504,324,506 ಜೊತೆಗೆ 34  ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಇತರೆ ಪ್ರಕರಣ: 1

 • ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ: 01.07.2022  ರಂದು ಸಮಯ 06.30 ಗಂಟೆಗೆ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಮದಕ ಎಂಬಲ್ಲಿ ಅಕ್ರಮವಾಗಿ ಗೋವಧೆ ಮಾಡಿ ಮಾಂಸವನ್ನು ಗಿರಕಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯಂತೆ, ಸದರಿ ಸ್ಥಳಕ್ಕೆ ಅವಿನಾಶ್ ಎಚ್ ಗೌಡ ಪೊಲೀಸ್ ಉಪನಿರೀಕ್ಷಕರು (ಕಾ&ಸು) ಬಂಟ್ವಾಳ ನಗರ ಪೊಲೀಸ್ ಠಾಣೆರವರು ತಮ್ಮ ಠಾಣಾ ಸಿಬ್ಬಂದಿ ಗಳೊಂದಿಗೆ ಧಾಳಿ ನಡೆಸಿ 1) ಮಹಮ್ಮದ್ ಇಸ್ಮಾಯಿಲ್ ಪ್ರಾಯ: 47 ವರ್ಷ ತಂದೆ: ದಿ|| ಅಬ್ದುಲ್ ಖಾದರ್, ವಾಸ: ಮದಕ ಮನೆ, ಗೋಳ್ತಮಜಲು ಗ್ರಾಮ, ಬಂಟ್ವಾಳ ತಾಲೂಕು, 2) ಸಾಬಿತ್ ಹುಸೈನ್ ಪ್ರಾಯ: 18 ವರ್ಷ ತಂದೆ: ಮಹಮ್ಮದ್ ಇಸ್ಮಾಯಿಲ್, ಮದಕ ಮನೆ, ಗೋಳ್ತಮಜಲು ಗ್ರಾಮ, ಬಂಟ್ವಾಳ ತಾಲೂಕು ಎಂಬವರುಗಳನ್ನು ಬಂಧಿಸಿ ಅಂದಾಜು 21,000/- ಮೌಲ್ಯದ ಮಾಂಸ, ನಗದು 4500/- ರೂ.  ಮತ್ತು ಕೃತ್ಯಕ್ಕೆ ಬಳಸಿದ ಇತರೆ ಸಲಕರಣೆಗಳನ್ನು ವಶಕ್ಕೆ ಪಡೆದು, ಸದರಿಗಳ ವಿರುದ್ದ ಬಂಟ್ವಾಳ ನಗರ ಠಾಣಾ ಅ.ಕ್ರ. 65/2022  ಕಲಂ:  4.12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಂಧಕ ಕಾಯ್ದೆ.ಮತ್ತು ಸಂರಕ್ಷಣಾ ಅಧಿನಿಯಮ 2020 ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-07-2022 10:35 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080