ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಡಾ.ಸೀಮಾ ಅಜಿತ್. ಕೆ, ಪ್ರಾಯ 45 ವರ್ಷ, ಗಂಡ: ಡಾ. ಅಜಿತ್. ಕೆ ವಾಸ: 1-1684/4, ಛವಿ ಮನೆ, ಮುಕ್ರಂಪಾಡಿ ಜೆ.ಕೆ ಪೆಟ್ರೋಲ್‌ ಪಂಪ ಬಳಿ, ಕೆಮ್ಮಿಂಜೆ ಗ್ರಾಮ, ದರ್ಬೆ ಅಂಚೆ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 01-08-2022 ರಂದು 10.30 ಗಂಟೆಗೆ ಆರೋಪಿ ಕಾರು ಚಾಲಕ ಅಬ್ದುಲ್‌ ಲತೀಫ್‌ ಎಂಬವರು KA-21-P-8556ನೇ ನೋಂದಣಿ ನಂಬ್ರದ ಕಾರನ್ನು ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಸವಣೂರು-ಪುತ್ತೂರು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ  ಗ್ರಾಮದ ದರ್ಬೆ ಸರ್ಕಲ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಡಾ. ಸೀಮಾ ಅಜಿತ್‌. ಕೆ ರವರು ಸವಾರರಾಗಿ ಮುಕ್ರಂಪಾಡಿ ಕಡೆಯಿಂದ  ಪುತ್ತೂರು ಹಿತಾ ಆಸ್ಪತ್ರೆ ಕಡೆಗೆ ಸುಳ್ಯ-ಪುತ್ತೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ KA-21-EC-3030ನೇ ನೋಂದಣಿ ನಂಬ್ರದ ಸ್ಕೂಟರಿಗೆ ಕಾರು ಅಪಘಾತವಾಗಿ, ಪಿರ್ಯಾದುದಾರರು ಸ್ಕೂಟರ್‌ ಸಮೇತ ರಸ್ತೆಗೆ  ಬಿದ್ದು, ಪಿರ್ಯಾದುದಾರರ ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯವಾಗಿ,  ಪುತ್ತೂರು ಹಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  126/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶಶಿಧರ ಎಸ್ ಪ್ರಾಯ 40 ವರ್ಷ ಶಾಖಾ ಪ್ರಬಂಧಕರು ಕರ್ನಾಟಕ ಬ್ಯಾಂಕ್ ಕಬಕ ಶಾಖೆ  ತಾಲೂಕು ಎಂಬವರ ದೂರಿನಂತೆ ತಾನು ಕಬಕ ಗ್ರಾಮದಲ್ಲಿರುವ ಕರ್ನಾಟಕ ಬ್ಯಾಂಕ್ ಶಾಖೆಯ ಮ್ಯಾನೇಜರ್ ಆಗಿದ್ದು ಆರೋಪಿ 1ನೇ ಅಬ್ದುಲ್ ನಝೀರ್ 2 ನೇ ಪೌಝಿಯಾ ಹಾಗೂ  3ನೇ ಆರೋಪಿ ಮಹಮ್ಮದ್ ರಫೀಕ್ ರವರು ಕರ್ನಾಟಕ ಬ್ಯಾಂಕಿನಿಂದ  ಸಾಲ ಪಡೆದು ವಂಚಿಸುವ ಸಮಾನ ಉದ್ದೇಶದಿಂದ ಒಟ್ಟು ಸೇರಿ ದಿನಾಂಕ;- 14.11.2019ರಂದು ಆರೋಪಿ 1 ಮತ್ತು 2ನೇಯವರು ಸ್ದಿರಾಸ್ತಿ ಹಾಗೂ ಮನೆ ಖರೀದಿಯ ಬಗ್ಗೆ ರೂ 19 ಲಕ್ಷ ಸಾಲವನ್ನು ಪಿರ್ಯಾದುದಾರರ ಬ್ಯಾಂಕ್ನಲ್ಲಿ  ಕೇಳಿದ್ದು, ಆ ಸಮಯ ಆರೋಪಿ 3ನೇಯವರನ್ನು ಜಾಮೀನುದಾರರೆಂದು ಕಾಣಿಸಿ  ಆರೋಪಿ 1ಮತ್ತು 2ನೇಯವರು ಬ್ಯಾಂಕ್ನಿಂದ ಸಾಲ ಪಡೆಯುವ ಸಮಯ ಬೇರೊಬ್ಬರು ನಿರ್ಮಿಸಿದ ಮನೆಯನ್ನು ತೋರಿಸಿ ನಕಲಿ ದಾಖಲೆಗಳನ್ನು ಅಸಲಿ ಎಂದು ಬಿಂಬಿಸಿ ಹಾಜರುಪಡಿಸಿ ಪಿರ್ಯಾದುದಾರರ ಬ್ಯಾಂಕಿನಿಂದ ರೂ 19 ಲಕ್ಷವನ್ನು ಸಾಲವಾಗಿ ಪಡೆದು ಸಾಲವನ್ನು ಮರು ಪಾವತಿಸದೇ ಇದ್ದು ಬಳಿಕ ಬ್ಯಾಂಕ್ನ ಅಧಿಕಾರಿ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ ಆರೋಪಿ 1 ಮತ್ತು 2ನೇಯವರು ತಮ್ಮದಲ್ಲದ ನಿವೇಶನ ಹಾಗೂ ಕಟ್ಟಡವನ್ನು ತೋರಿಸಿ ನಕಲಿ ದಾಖಲೆಗಳನ್ನು ತಯಾರಿಸಿ ಅಸಲಿ ಎಂದು ಹಾಜರು ಪಡಿಸಿ ವಂಚಿಸಿದ ಬಗ್ಗೆ ಬ್ಯಾಂಕಿನ ಗಮನಕ್ಕೆ ಬಂದಿದ್ದು ಆರೋಪಿಗಳು ಬ್ಯಾಂಕಿನ ಸಾಲದ ಕಂತನ್ನು ಸರಿಯಾಗಿ ಮರು ಪಾವತಿಸದೇ  ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ:66/2022 ಕಲಂ: 406, 465, 468, 471, 420,ಜೊತೆಗೆ 34 ಐ.ಪಿ.ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅವಿನಾಶ್  (25)ತಂದೆ: ಸಂಜೀವ ಪೂಜಾರಿ ವಾಸ: ಹಿಪ್ಪ ತಾರೆಗುಂಡಿ   ಮನೆ , ಬೆಳಾಲು  ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಅವರ ತಂದೆ ಮೃತ ಸಂಜೀವ ಪೂಜಾರಿ , ಪ್ರಾಯ: 60 ವರ್ಷ ಎಂಬವರು ವಿಪರೀತ ಮದ್ಯ ಸೇವನೆ ಮಾಡುವ ಚಟಹೊಂದಿದ್ದವರು ಪ್ರಸ್ತುತ 6 ತಿಂಗಳಿನಿಂದ ಮದ್ಯ ಸೇವನೆ ಮಾಡುವ ಅಭ್ಯಾಸವನ್ನು ಬಿಟ್ಟಿದ್ದು, ಆ ಬಳಿಕ ಯಾರೊಂದಿಗೂ ಬೇರೆಯದೇ ಖಿನ್ನತೆ ಒಳಗಾಗಿದ್ದವರು ದಿನಾಂಕ: 31.07.2022 ರಂದು ರಾತ್ರಿ 10.00 ಗಂಟೆಗೆ ಊಟ ಮಾಡಿ ಮಲಗಿದ್ದವರು ದಿನಾಂಕ: 01.08.2022 ರಂದು ಬೆಳಿಗ್ಗೆ 07.00 ಗಂಟೆಯ  ಮಧ್ಯದ ಅವಧಿಯಲ್ಲಿ ತನ್ನ ಮನೆಯಾದ ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಹಿಪ್ಪತಾರೆಗಂಡಿ ಎಂಬಲ್ಲಿ ಮನೆಯ ಸಮೀಪ ಇರುವ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣಾ ಯು ಡಿ ಆರ್ 44/2022 ಕಲಂ: 174 ಸಿಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-08-2022 11:53 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080