ಅಪಘಾತ ಪ್ರಕರಣ: ೦2
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಕಾರ್ತೀಕ್ (19), ತಂದೆ: ಯಶವಂತ, ವಾಸ: 1-182/3 ಬೆಂಜನಪದವು ಮನೆ, ಅಮ್ಮುಂಜೆ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ: 30-11-2022 ರಂದು ಕೆಎ 19 HJ 1829 ನೇ ಮೋಟಾರು ಸೈಕಲ್‌ನಲ್ಲಿ ಸಹಸವಾರನ್ನಾಗಿ ಕುಳಿತುಕೊಂಡು ಸವಾರನಾಗಿ ನಯನ್‌ಕುಮಾರ್‌ರವರು ಮೋಟಾರು ಸೈಕಲ್‌ನ್ನು ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವ ಸಮಯ ಸುಮಾರು ಸಂಜೆ 4.30 ಗಂಟೆಗೆ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸ್ಬಾ ಗ್ರಾಮದ ಬೆಳ್ತಂಗಡಿ ಭಾರತ್ ಪೆಟ್ರೋಲ್ ಪಂಪ್ ಬಳಿ ತಲುಪುತ್ತಿದ್ದಂತೆ ಅವರ ವಿರುದ್ದ ಧಿಕ್ಕಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಉಜಿರೆ ಕಡೆಗೆ ಕೆಎ 21 M 8431 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಎಡ ಕೈಯ ಕೋಲು ಕೈಗೆ ಗುದ್ದಿದ ಗಾಯ, ಬಲ ಕೈ ಬೆರಳಿಗೆ ತರಚಿದ ಗಾಯ, ಎಡಕಾಲಿನ ಮಂಡಿಗೆ ಗುದ್ದಿದ ಗಾಯವಾಗಿರುತ್ತದೆ, ಮೋಟಾರು ಸೈಕಲ್ ಸವಾರ ನಯನ್‌ಕುಮಾರ್‌ರವರಿಗೆ ಎಡಕಾಲಿನ ಮೊಣಗಂಟಿನ ಕೆಳಗೆ ಗುದ್ದಿದ ಗಾಯ, ಎಡ ಕೈ ಬೆರಳಿಗೆ ತರಚಿದ ಗಾಯವಾಗಿರುತ್ತದೆ, ಪಿರ್ಯಾದಿದಾರರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಹಾಗೂ ನಯನ್ ಕುಮಾರ್‌ರವರು ಮಂಗಳೂರು ಫಾದರ್‌ಮುಲ್ಲಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 153/2022 ಕಲಂ; 279 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಕೂಸಪ್ಪ ಪೂಜಾರಿ (70) ತಂದೆ:ಉಮಪ್ಪ ಪೂಜಾರಿ ವಾಸ:ಕಲ್ಲಾಜೆ ಮನೆ, ಕೆದಿಲ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:30-11-2022 ರಂದು ಕೆಲಸದ ನಿಮಿತ್ತ ತನ್ನ ಮನೆಯಿಂದ ಉಡುಪಿಗೆ ಹೋಗಿ ಕೆಲಸ ಮುಗಿಸಿ ವಾಪಾಸು ತನ್ನ ಮನೆಗೆ ಬರುವರೇ ಖಾಸಗಿ ಬಸ್ಸೊಂದರಲ್ಲಿ ಹತ್ತಿ ಸಮಯ ಸುಮಾರು ರಾತ್ರಿ 8.30 ಗಂಟೆಗೆ ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ಪರ್ಲೊಟ್ಟು ತಲುಪಿ ಬಸ್ಸಿನಿಂದ ಇಳಿದು ತನ್ನ ಮನೆಗೆ ನಡೆದುಕೊಂಡು ಹೋಗುವರೇ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ದಾಟುವಾಗ ಮಾಣಿ ಕಡೆಯಿಂದ ಪುತ್ತೂರು ಕಡೆಗೆ KA-05-MG-0705ನಂಬ್ರನ ಬಿಳಿಬಣ್ಣದ ವ್ಯಾಗ್ನರ ಕಾರನ್ನು ಅದರ ಚಾಲಕ ಶಿತಿನ್ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರಿಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಪಿರ್ಯಾಧಿದಾರರು ರಸ್ತೆಗೆ ಬಿದ್ದು ಬಲಕಾಲಿಗೆ ಗುದ್ದಿದ ಗಾಯ ಎಡ ಮತ್ತು ಬಲ ಮೊಣ ಕೈಗೆ ತರಚಿದ ಗಾಯ ,ತಲೆ ಹಿಂಭಾಗಕ್ಕೆ ರಕ್ತಗಾಯವಾಗಿದ್ದವರನ್ನು ಅಪಘಾತ ನೋಡಿದ ಆಸುಪಾಸಿನ ಪರಿಚಯದ ರಶೀದ್ ಮತ್ತು ಹಂಝ ಚಿಕಿತ್ಸೆ ಬಗ್ಗೆ ವಾಹನವೊಂದರಲ್ಲಿ ಪುತ್ತೂರು ಪ್ರಗತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದಂತೆ ಅಂಬುಲೆನ್ಸ ವಾಹನದಲ್ಲಿ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಗಾಯಾಳುವನ್ನು ಪರೀಕ್ಸಿಸಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 187/2022 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜೆಸಿಂತಾ ವಿಲ್ಮಾ ರೋಡ್ರಿಗಸ್ ಪ್ರಾಯ 45 ವರ್ಷ ಗಂಡ: ಅಜಿತ್ ರೋಡ್ರಿಗಸ್ ವಾಸ: ನಂದಾಕೆ ನತಾನಿಲ್ ಕಂಪೌಂಡ್ ಕುಕ್ಕಳ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಅತ್ತೆ ಮೇರಿ ಪ್ರಾಯ 76 ವರ್ಷ ಎಂಬವರು ಬೆಳ್ತಂಗಡಿ ತಾಲೂಕು ಕುಕ್ಕಳ ಗ್ರಾಮದ ಬಸವನಗುಡಿ 5 ಸೆಂಟ್ಸ್ ಕಾಲೋನಿಯಲ್ಲಿ ವಾಸವಾಗಿದ್ದು, ಅವರ ಯೋಗಕ್ಷೇಮ ನೋಡಿಕೊಳ್ಳುವರೇ ಹಾಗೂ ಮನೆ ಕೆಲಸವನ್ನು ಮಾಡುವರೇ ಆಶಾಲತಾ ಎಂಬವರನ್ನು ನೇಮಿಸಿ ಮೇರಿಯವರ ಮನೆಗೆ ಹೊಂದಿಕೊಂಡಂತೆ ಇರುವ ಮೇರಿಯವರ ಬಾಬ್ತು ಬಾಡಿಗೆ ಮನೆಯನ್ನು ಆಶಾಲತಾರವರಿಗೆ ನೀಡಿರುತ್ತಾರೆ. ಪಿರ್ಯಾದಿದಾರರ ಅತ್ತೆ ಮೇರಿಯರು ಅಸೌಖ್ಯದಿಂದ ಬಳಲುತ್ತಿರುವ ಕಾರಣ ಅವರ ಮಗ ನವೀನ ಎಂಬವರು ಮನೆಗೆ ಬಂದು ದಿನಾಂಕ:11.11.2022 ರಂದು ಮನೆಗೆ ಬೀಗ ಹಾಕಿ ಮೇರಿಯವರನ್ನು ಮುಂಬಾಯಿಗೆ ಕರೆದುಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ ಮುಂಬಾಯಿಯ ಆಸ್ಪತ್ರೆಯೊಂದರಲ್ಲಿ ಒಳರೋಗಿಯನ್ನಾಗಿ ದಾಖಲಿಸಿದ್ದು, ಮನೆಯನ್ನು ನೋಡಿಕೊಳ್ಳುವರೇ ಮೇರಿಯವರ ಸಂಬಂಧಿ ಲೂಸಿಯವರಲ್ಲಿ ಹೇಳಿ ಹೋಗಿದ್ದರು. ಮೇರಿಯವರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಆಶಾಲತಾ ಹಾಗೂ ಲೂಸಿಯವರು ದಿನಾಂಕ: 15.11.2022 ರಂದು ಮನೆಯನ್ನು ಚೆಕ್ ಮಾಡಿ ಹೋದವರು ದಿನಾಂಕ: 27.11.2022 ರಂದು ಆಶಾಲತಾ ರವರು ಬಾಡಿಗೆ ಮನೆಗೆ ಬಂದು ದಿನಾಂಕ: 28.11.2022 ರಂದು ಅವರ ಮಗಳ ಮದುವೆಯ ತಯಾರಿಯ ಬಗ್ಗೆ ಮರಳಿ ಹೋಗುವ ಸಮಯ ಮೇರಿಯವರ ಮನೆಗೆ ಹಾಕಿದ್ದ ಬೀಗವನ್ನು ಪರಿಶೀಲಿಸಿದಾಗ ಸರಿ ಇದ್ದು, ದಿನಾಂಕ: 01.12.2022 ರಂದು ಮದ್ಯಾಹ್ನ 2.00 ಗಂಟೆಗೆ ಆಶಾಲತಾರವರು ಬಾಡಿಗೆ ಮನೆಗೆ ಬಂದ ಸಮಯ ಮೇರಿಯವರ ಮನೆಯ ಬಾಗಿಲನ್ನು ನೋಡಿದಾಗ ಮೇರಿಯವರ ಮನೆಯ ಮುಂಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ತುಂಡರಿಸಿ ಬಾಗಿಲನ್ನು ಯಾವುದೋ ಸಾಧನದಿಂದ ಮೀಟಿ ತೆರೆದು ಒಳ ಪ್ರವೇಶಿಸಿ ರುವುದು ಕಂಡು ಬಂದಿರುವುದನ್ನು ಆಶಾಲತಾರವರು ಪಿರ್ಯಾದಿದಾರರಿಗೆ ತಿಳಿಸಿದ್ದು, ಪಿರ್ಯಾದಿದಾರರು ಅತ್ತೆ ಮೇರಿಯವರ ಮನೆಗೆ ಹೋಗಿ ಪರಿಶೀಲಿಸಿದಾಗ ಯಾರೋ ಕಳ್ಳರು ಅತ್ತೆಯ ಮನೆಯ ಮುಂಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ತೆಗೆದು ಬಾಗಿಲನ್ನು ತೆರೆದು ಒಳಪ್ರವೇಶಿಸಿ ಪಿರ್ಯಾದಿದಾರರು ತಿಳಿದುಕೊಂಡಂತೆ ಕಳ್ಳರು ಪಿರ್ಯಾದಿದಾರರ ಅತ್ತೆ ಬ್ಯಾಂಕಿನಿಂದ ಡ್ರಾ ಮಾಡಿಕೊಂಡು ಬಂದಿದ್ದ 60000 ರೂ ಹಣ ಮತ್ತು ಸುಮಾರು 60000 ರೂ ಮೌಲ್ಯದ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 93/2022 ಕಲಂ: 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವ ಬೆದರಿಕೆ ಪ್ರಕರಣ: ೦2
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಉಮೇಶ್ ಗಾಣಿಗಾ, 57 ವರ್ಷ, ತಂದೆ: ಕೂಸಪ್ಪ ಗಾಣಿಗಾ, ವಾಸ: ಕುಮ್ಡೇಲು ಮನೆ, ಪುದು ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 30-11-2022 ರಂದು ರಾತ್ರಿ ತನ್ನ ಮನೆಯಲ್ಲಿ ಮಲಗಿಕೊಂಡಿರುವಾಗ ಯಾರೋ ಅಪರಿಚಿತ ವ್ಯಕ್ತಿಗಳು ಮನೆಯ ಅಂಗಳದಲ್ಲಿ ನಿಂತುಕೊಂಡು ಬೈದಿದ್ದು ಈ ಬಗ್ಗೆ ತನ್ನ ಪಕ್ಕದ ಮನೆಯ ನಿವಾಸಿಗಳಾದ ರವಿ ಹಾಗೂ ಆತನ ಮಗನಾದ ನೀತು @ ನಿತೇಶ್ ಎಂಬುವವರೇ ಆಗಿರಬಹುದೆಂದು ಅನುಮಾನದಿಂದ ಪೊಲೀಸ್ ಠಾಣೆಗೆ ಬಂದು ಅವರಿಬ್ಬರ ವಿರುದ್ಧ ದೂರು ನೀಡಿ ಬಳಿಕ ಮಧ್ಯಾಹ್ನ ಸುಮಾರು 3:00 ಗಂಟೆಗೆ ಪಿರ್ಯಾದಿದಾರರ ಮನೆಯ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ಪಿರ್ಯಾದಿದಾರರು ನಡೆದುಕೊಂಡು ಹೋಗುತ್ತಿರುವಾಗ ಪಿರ್ಯಾದಿದಾರರ ಪಕ್ಕದ ಮನೆಯ ನಿವಾಸಿ ನೀತು ಯಾನೆ ನಿತೇಶ್ ಎಂಬಾತನು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ “ನನ್ನ ಮತ್ತು ನನ್ನ ಅಪ್ಪನ ವಿರುದ್ಧ ದೂರು ನೀಡುತ್ತೀಯಾ ” ನಿನ್ನನ್ನು ಒಂದು ತಿಂಗಳೊಳಗೆ ಮುಗಿಸುತ್ತೇನೆಂದು ಬೆದರಿಕೆಯೊಡ್ಡಿ ಪಕ್ಕದಲ್ಲಿಯೇ ಇದ್ದ ಮರದ ಸೊಂಟೆಯನ್ನು ತೆಗೆದುಕೊಂಡು ಪಿರ್ಯಾದಿದಾರರ ತಲೆಗೆ ಹೊಡೆದ ಪರಿಣಾಮ ರಕ್ತಗಾಯವಾಗಿದ್ದು, ಬಳಿಕ ಕೈಯಿಂದ ಮುಖಕ್ಕೆ ಗುದ್ದಿದ ಪರಿಣಾಮ ಬಾಯಿ ಮತ್ತು ಮೂಗಿನಲ್ಲಿ ರಕ್ತ ಬಂದಿದ್ದು ಅಲ್ಲದೇ ಬಾಯಿಯ ಕೆಳಬದಿಯ ಒಂದು ಹಲ್ಲು ಮುರಿದು ಹೋಗಿರುತ್ತದೆ. ಇದನ್ನು ನೋಡಿದ ನೀತು ಯಾನೆ ನಿತೇಶನ ತಂದೆ ರವಿ ಎಂಬಾತನು ಅಲ್ಲಿಗೆ ಬಂದು ಪಿರ್ಯಾದಿದಾರರನ್ನು ದೂಡಿದ ಪರಿಣಾಮ ಪಿರ್ಯಾದಿದಾರರು ಕೆಳಗೆ ಬಿದ್ದು ಇವರ ಎರಡೂ ಮಂಡಿಗಳಿಗೆ ತರಚಿದ ರಕ್ತಗಾಯ ವಾಗಿರುತ್ತದೆ. ಬಳಿಕ ಪಿರ್ಯಾದಿದಾರರು ಬೊಬ್ಬೆ ಹೊಡೆದಾಗ ಬೊಬ್ಬೆಯ ಶಬ್ದ ಕೇಳಿ ಪವನ್ ಮತ್ತು ಪ್ರವೀಣ್ ರವರು ಅಲ್ಲಿಗೆ ಬಂದು ನೀತು ಯಾನೆ ನಿತೇಶ್ ಹಾಗೂ ಆತನ ತಂದೆ ರವಿ ರವರನ್ನು ಕರೆದುಕೊಂಡು ಹೋಗಿರುವುದಾಗಿದೆ. ಬಳಿಕ ಪಿರ್ಯಾದಿದಾರರನ್ನು ದಾಮೋದರ ಹಾಗೂ ಸತೀಶ್ ರವರು ಚಿಕಿತ್ಸೆಯ ಬಗ್ಗೆ ಒಂದು ವಾಹನದಲ್ಲಿ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 89/2022 ಕಲಂ 341,504,506,323,324,325 r/w 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಮನ್ಸೂರು ಪ್ರಾಯ (30) ತಂದೆ: ಇಬ್ರಾಹಿಂ ವಾಸ: ಮನೆ.ನಂ: 1-72ಎ ಕುಂಡಡ್ಕ ಶೆಡ್ಡು ಮನೆ ವಿಟ್ಲ ಮುಡ್ನೂರು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:30.11.2022 ರಂದು ಸಮಯ ಮಧ್ಯಾಹ್ನ 3.30 ಗಂಟೆಗೆ ಸ್ನೇಹಿತ ನೌಷದ್‌ನ ಜೊತೆ ಆತನ ಕಾರು ನಂಬ್ರ:ಕೆಎ.19.ಎಂ.ಕೆ7169 ನೇದರಲ್ಲಿ ಕಾರಿನಲ್ಲಿ ವಿಟ್ಲದಿಂದ ಮಂಗಳೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ಸಮಯ ರಾತ್ರಿ 08.45 ಗಂಟೆಗೆ ಮಂಗಳೂರಿನಿಂದ ವಿಟ್ಲಕ್ಕೆ ಹೋಗುವರೇ ಹೊರಟು ಸಮಯ ಸುಮಾರು ರಾತ್ರಿ 9.30 ಗಂಟೆಗೆ ಕಲ್ಲಡ್ಕ ಮಾರ್ಗವಾಗಿ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ವೀರಕಂಭ ಪಂಚಾಯತ್‌ನ ಸ್ವಲ್ಪ ಮುಂದೆ ತಲುಪಿದಾಗ ರಸ್ತೆ ಬದಿಯಲ್ಲಿ ಒಂದು ಕಾರನ್ನು ಪಾರ್ಕ್ ಲೈಟ್ ಹಾಕಿ ನಿಲ್ಲಿಸಿದ್ದು ಮತ್ತೊಂದು ಕಾರನ್ನು ರಸ್ತೆಯಲ್ಲಿ ಬರುವ ಪಿರ್ಯಾಧಿಯ ಕಾರಿಗೆ ಏಕಾಏಕಿ ಅಡ್ಡ ನಿಲ್ಲಿಸಿದ್ದು ಆಗ ಚಾಲಕ ನೌಷದ್ ಕಾರನ್ನು ನಿಲ್ಲಿಸಿದ ಸಮಯ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನಿಂದ ಒಬ್ಬ ವ್ಯಕ್ತಿ ಇಳಿದು ಪಿರ್ಯಾಧಿಯ ಕಾರಿನ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ರಾಡ್‌ನಿಂದ ಕಾರಿನ ಹಿಂಬದಿಯ ಗ್ಲಾಸ್‌ಗೆ ಹೊಡೆದಿದ್ದು ಕಾರಿನ ಗ್ಲಾಸ್ ಜಖಂಗೊಂಡು ಸುಮಾರು ರೂಪಾಯಿ 15000 ನಷ್ಟವಾಗಿದ್ದು. ಆಗ ಕಾರಿನ ಚಾಲಕ ನೌಷದ್ ಅಪಾಯದ ಸೂಚನೆ ತಿಳಿದು ಕಾರನ್ನು ಗಾಬರಿಯಿಂದ ಬಲಕ್ಕೆ ತಿರುಗಿಸಿ ವಿಟ್ಲ ಕಡೆಗೆ ಚಲಾಯಿಸಿಕೊಂಡು ಬಂದಾಗ ಹಿಂದಿನಿಂದ ಒಂದು ಕಾರಿನಲ್ಲಿ 4ಜನ ಇನ್ನೊಂದು ಆಲ್ಟೋ ಕಾರಿನಲ್ಲಿ 2 ಜನ ಇದ್ದ ಎರಡು ಕಾರುಗಳು ಹಿಂಬಾಲಿಸಿಕೊಂಡು ಬಂದಿದ್ದು ವೀರಕಂಭ ಗ್ರಾಮದ ಕೆಲಿಂಜ ಕಟ್ಟೆ ಬಳಿ ತಲುಪಿದಾಗ ಆಲ್ಟೋ ಕಾರೊಂದು ಪಿರ್ಯಾಧಿದಾರರ ಕಾರನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದ್ದು ಪಿರ್ಯಾದಿಯ ಕಾರಿನ ಚಾಲಕ ಬಿಡದೇ ಇದ್ದಾಗ ಆಲ್ಟೋ ಕಾರಿನ ಎಡ ಬದಿಯ ಸೀಟ್‌ನಲ್ಲಿ ಕುಳಿತಿದ್ದ ವ್ಯಕ್ತಿ ಆತನ ಕೈಯಲ್ಲಿದ್ದ ರಾಡ್‌ನಿಂದ ಪಿರ್ಯಾಧಿದಾರರು ಪ್ರಯಾಣಿಸುತ್ತಿದ್ದ ಕಾರಿನ ಎದುರಿನ ಗ್ಲಾಸ್‌ಗೆ ಹೊಡೆದಾಗ ರಾಡ್ ತಾಗಿ ಎದುರು ಗ್ಲಾಸ್ ಒಡೆದಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 186/2022 ಕಲಂ:341,427,504,506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಕೊಲೆ ಪ್ರಕರಣ: ೦1
ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ , ರಮೇಶ (23) ತಂದೆ: ಯಲಪ್ಪ ವಾಸ: ದೇವಿಹೊಸೂರು ಗ್ರಾಮ ಹಾವೇರಿ ತಾಲೂಕು ಮತ್ತು ಜಿಲ್ಲೆ ಹಾಲಿ ವಾಸ: ನ್ಯೂಲೈಫ್ ಪೆಲೋಶಿಪ್ ಚರ್ಚ್ ಬಳಿ ಮುಕ್ರಂಪ್ಪಾಡಿ, , ಕೆಮ್ಮಿಂಜೆ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ತನ್ನ ಊರಿನವರೇ ಆದ ಶೇಖರಯ್ಯ ಎಂಬವರ ಜೊತೆ ,ತನ್ನ ಊರಿನವರಾದ ಲಿಂಗಪ್ಪ, ಮಹದೇವ ಮತ್ತು ವಿರೂಪಾಕ್ಷರವರು ಸೂರಜ್ ನಾಯರ್ ಎಂಬವರ ಬಾಬ್ತು ಪುತ್ತೂರು ತಾಲೂಕು, ಕೆಮ್ಮಿಂಜೆ ಗ್ರಾಮದ, ಮುಕ್ರಂಪ್ಪಾಡಿ ಬಳಿಯ ನ್ಯೂಲೈಫ್ ಪೆಲೋಶಿಪ್ ಚರ್ಚ್ ಬಳಿ ಇರುವ ಸೈಟ್‌ನಲ್ಲಿ ಗಾರೆ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ: 01.12.2022 ರಂದು ಪಿರ್ಯಾದುದಾರರು ಹಾಗೂ ಲಿಂಗಪ್ಪ, ಮಹದೇವ, ವಿರೂಪಾಕ್ಷರವರು ಬೆಳಿಗ್ಗೆ ಎಂದಿನಂತೆ ಕೆಲಸ ಮಾಡಿ, ಕೆಲಸ ಮುಗಿದ ನಂತರ ಪುತ್ತೂರು ಪೇಟೆಗೆ ಹೋಗಿ ಬಳಿಕ ಅವೆಲ್ಲರೂ ತಾವುಗಳು ಸೈಟ್ ಬಳಿ ಇರುವ ಉಳಕೊಳ್ಳುವ ಶೇಡ್ ಗೆ ಬಂದು ಬಳಿಕ ಶೇಡ್‌ನಲ್ಲಿ ಅವೆಲ್ಲರೂ ಸೇರಿ ಮಾತುಕತೆ ನಡೆಸುತ್ತಿದ್ದ ಸಮಯ ರಾತ್ರಿ ಸುಮಾರು 8.15 ಗಂಟೆಗೆ ಅಣ್ಣ ತಮ್ಮದಿದಾರ ಲಿಂಗಪ್ಪ ಮತ್ತು ಮಹದೇವ ಅವರೊಳಗೆ ಹಣಕಾಸಿನ ವಿಚಾರವಾಗಿ ಮಾತಿಗೆ ಮಾತಾಗಿದ್ದು ಆ ಸಮಯ ಮಹದೇವನು ತನ್ನ ಅಣ್ಣ ಲಿಂಗಪ್ಪನಿಗೆ ಕೈಯಿಂದ ಬೆನ್ನಿಗೆ ಹೊಡೆದನು, ನಂತರ ಲಿಂಗಪ್ಪನು ಅಲ್ಲಿಂದ ಎದ್ದು ಹೊರಗಡೆ ಹೋದನು, ನಂತರ ಇತರರು ಅಲ್ಲಿಯೇ ಮಾತನಾಡುತ್ತಿದ್ದ ಸಮಯ ಆರೋಪಿ ಲಿಂಗಪ್ಪನು ತಾನು ಕೆಲಸ ಮಾಡುತ್ತಿದ್ದ ಸ್ಥಳದಿಂದ ಒಂದು ಕಬ್ಬಿಣದ ರಾಡನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಏಕಾಏಕಿಯಾಗಿ ತನ್ನ ತಮ್ಮ ಮಹದೇವನ ತಲೆಯ ಹಿಂಬದಿಗೆ ಹೊಡೆದು ರಕ್ತ ಗಾಯಗೊಳಿಸಿದನು. ನಂತರ ಅದೇ ರಾಡ್‌ನಿಂದ ದೇಹದ ಇತರ ಭಾಗಗಳಿಗೂ ಹಲ್ಲೆ ನಡೆಸಿದಾಗ ಪಿರ್ಯಾದುದಾರರು ಹಾಗೂ ವಿರೂಪಾಕ್ಷ ಸೇರಿ ರಾಡನ್ನು ಆರೋಪಿ ಲಿಂಗಪ್ಪನ ಕೈಯಿಂದ ಎಳೆದು ತೆಗೆಕೊಂಡು ಹಲ್ಲೆ ನಡೆಸುವುದನ್ನು ತಡೆದಿರುತ್ತಾರೆ. ಆಗ ಆರೋಪಿ ಲಿಂಗಪ್ಪನು ಅಲ್ಲಿಂದ ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾನೆ. ನಂತರ ಪಿರ್ಯಾದುದಾರರು ತನ್ನ ಜೊತೆ ಕೆಲಸ ಮಾಡುವ ಕೃಷ್ಣ ಎಂಬವರಿಗೆ ಫೋನ್ ಕರೆಮಾಡಿ ಆತನನ್ನು ಅಲ್ಲಿಗೆ ಕರೆಯಿಸಿಕೊಂಡು ಹಲ್ಲೆಯಿಂದ ಗಾಯಗೊಂಡ ಮಹದೇವನನ್ನು ಚಿಕಿತ್ಸೆಯ ಬಗ್ಗೆ ಅಂಬುಲೆನ್ಸ್ ವಾಹನ ಒಂದರಲ್ಲಿ ಪಿರ್ಯಾದುದಾರರು, ವಿರೂಪಾಕ್ಷ ಮತ್ತು ಕೃಷ್ಣ ಸೇರಿಕೊಂಡು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಪರೀಕ್ಷಿಸಿ ಹಲ್ಲೆಯಿಂದ ಗಾಯಗೊಂಡ ಮಹದೇವನು ದಿನಾಂಕ: 01.12.2012 ರಂದು ರಾತ್ರಿ 10.00 ಗಂಟೆಗೆ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 97/2022 ಕಲಂ: 302 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦1
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಶೋಭಾ ಪ್ರಾಯ 36 ವರ್ಷ, ಗಂಡ: ಮಹೇಶ್, ವಾಸ: ಅಂತರ ಅಳಕೆ ಮನೆ, ತಣ್ಣೀರುಪಂಥ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ, ಗಂಡ ಮಹೇಶ್ ಎಂಬವರು ದಿನಾಂಕ: 30.11.202 ರಂದು ಬೆಳಿಗ್ಗೆ 7.00 ಗಂಟೆಗೆ ಗಂಡನ ದೂರದ ಸಂಬಂಧಿ ಚಿಕ್ಕಮಂಗಳೂರು ಸಂಸೆ ನಿವಾಸಿ ಶುಭಕರ ಎಂಬವನನ್ನು ಗುರುವಾಯನಕೆರೆಗೆ ಬಿಟ್ಟು ಬರುವುದಾಗಿ ತಿಳಿಸಿ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಅಂತರ ಎಂಬಲ್ಲಿರುವ ತನ್ನ ಮನೆಯಿಂದ ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ18 ವೈ0870 ನೇದರಲ್ಲಿ ಶುಭಕರನನ್ನು ಕುಳ್ಳಿರಿಸಿಕೊಂಡು ಗುರುವಾಯನಕೆರೆಗೆ ಹೋದವರು ರಾತ್ರಿಯಾದರೂ ಮನೆಗೆ ಬಾರದಿದ್ದುದ್ದನ್ನು ಗಮನಿಸಿ ಪಿರ್ಯಾದಿದಾರರು ಗಂಡ ಮಹೇಶ್ ನ ಮೊಬೈಲ್ ಗೆ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸಿದೇ ಇದ್ದು, ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ಶುಭಕರ ಎಂಬಾತನನ್ನು ವಿಚಾರಿಸಿದಾಗಲೂ ಆತನ ಒಟ್ಟಿಗೂ ಇಲ್ಲದೇ ಇರುವುದರಿಂದ, ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 92/2022 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.