ಅಪಘಾತ ಪ್ರಕರಣ: ೦6
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಅಬೂಬಕ್ಕರ್ , ಪ್ರಾಯ: 42 ವರ್ಷ ತಂದೆ: ದಿ|| ಅಬ್ದುಲ್ ಖಾದರ್ ವಾಸ: ಚಂಡ್ತಿಮಾರ್ ಮನೆ, ಫಾರೆಸ್ಟ್ ಗೇಟ್ ಹತ್ತಿರ, ಬಂಟ್ವಾಳ ಕಸಬಾ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 25-01-2022 ರಂದು ಫಿರ್ಯಾದಿದಾರರ ಮಗಳು ಬೀಬಿ ಫಾತಿಮಾಳು(14) ಶಾಲೆಗೆ ಹೋಗಲು ಬಸ್ ಸ್ಟಾಂಡ್ ಗೆ ನಡೆದುಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 9:30 ಗಂಟೆಗೆ ಬಂಟ್ವಾಳ ತಾಲೂಕು, ಬಂಟ್ವಾಳ ಕಸಬಾ ಗ್ರಾಮದ ಚಂಡ್ತಿಮಾರ್ ಎಂಬಲ್ಲಿಗೆ ತಲುಪಿದಾಗ ವಗ್ಗ ಕಡೆಯಿಂದ KA 19 EG 4404 ನೇ ಮೋಟಾರ್ ಸೈಕಲ್ ಸವಾರ ಸೂರ್ಯ ನಾರಾಯಣ ಕಾಮತ್ ತನ್ನ ಮಗನನ್ನು ಹಿಂಬದಿ ಸಹಸವಾರನಿಗೆ ಕುಳ್ಳಿರಿಸಿಕೊಂಡು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬೀಬಿ ಫಾತಿಮಾರವರಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಹಾಗೂ ಸಹ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ತರಚಿದ ಗಾಯವಾಗಿರುತ್ತದೆ ಮತ್ತು ಫಿರ್ಯಾದಿದಾರರ ಮಗಳಿಗೆ ಬಲಕಾಲಿನ ತೊಡೆಗೆ ಗುದ್ದಿದ ಗಾಯಗೊಂಡವರು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 14/2022 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಜನಾರ್ಧನ ಗೌಡ ಪ್ರಾಯ 27 ವರ್ಷ ತಂದೆ:ಕೊರಗಪ್ಪ ಗೌಡ ವಾಸ:ಪಡುಬೆಟ್ಟು ಮನೆ ನೆಲ್ಯಾಡಿ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ 31.01.2022 ರಂದು ತನ್ನ ಮನೆಪಡುಬೆಟ್ಟು ನಿಂದ ಮೋಟಾರು ಸೈಕಲ್ ನಂ ಕೆ.ಎ 21 ಇ.ಬಿ 5022 ನೇದಕ್ಕೆ ಪೆಟ್ರೋಲ್ ತುಂಬಿಸಲು ನೆಲ್ಯಾಡಿ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಸಮಯ ರಾತ್ರಿ 10.30 ಗಂಟೆಗೆ ರಾ ಹೆ 75 ರಲ್ಲಿ ಕಡಬ ತಾಲೂಕು ನೆಲ್ಯಾಡಿ ಗ್ರಾಮದ ನೆಲ್ಯಾಡಿ ಸೈಂಟ್ ಜೋಸೆಫ್ ಕಾಲೇಜ್ ಬಳಿಯ ಕೊಪ್ಪ ಮಾದೇರಿ ಕ್ರಾಸ್ ಬಳಿ ತಲುಪಿದಾಗ ಪಿರ್ಯಾಧುದಾರರ ಎದುಗಡೆಯಿಂದ ಅಂದರೆ ರಾ ಹೆ 75 ರಲ್ಲಿ ಉಪ್ಪಿನಂಗಡಿ ಕಡೆಯಿಂದ ನೆಲ್ಯಾಡಿ ಕಡೆಗೆ ಬರುತ್ತಿದ್ದ ಮಾರುತಿ ಓಮ್ನಿ ಕಾರು ನಂ ಕೆ ಎ 21 ಎಂ 8417 ನೇ ದನ್ನು ಅದರ ಚಾಲಕನು ಯಾವುದೇ ಸೂಚನೆ ನೀಡದೇ ಅಜಾಗರೂಕತೆಯಿಂದ ಏಕಾ ಏಕಿ ಕೊಪ್ಪ ಮಾದೇರಿ ರಸ್ತೆ ಕಡೆಗೆ ತಿರುಗಿಸಿದ ಪರಿಣಾಮ ಮಾರುತಿ ಒಮ್ನಿ ಕಾರು ಪಿರ್ಯಾದುದಾರರ ಮೊಟಾರು ಸೈಕಲ್ ಗೆ ಢಿಕ್ಕಿ ಹೊಡೆದು ಪಿರ್ಯಾದುದಾರರು ಮೊಟಾರು ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಪಿರ್ಯಾದುದಾರರಿಗೆ ತಲೆ,ಮುಖ ಮತ್ತು ಬೆನ್ನಿನ ಭಾಗಕ್ಕೆ ಗುದ್ದಿದ ಹಾಗೂ ತರಚಿದ ಗಾಯವುಂಟಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 22/2022 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಶ್ರೀಧರ ಕೆ ಎಲ್, ಪ್ರಾಯ 32 ವರ್ಷ, ತಂದೆ: ಲಕ್ಷ್ಮೀಪತಿ ವಾಸ: ಕುಂದೂರು-ತಿಪಟೂರು ತಾಲೂಕು, ತುಮಕೂರು ಜಿಲ್ಲೆ ಎಂಬವರ ದೂರಿನಂತೆ ದಿನಾಂಕ 01-02-2022 ರಂದು 14-25 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ಅಶೋಕ್ ಕಾರವಾರ್ ಎಂಬವರು KA-19-EH-1034ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿನಲ್ಲಿ ಮೋಹನಸಿಂಗ್ ಎಂಬವರನ್ನು ಸಹಸವಾರನ್ನಾಗಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಕಡವಿನಬಾಗಿಲು ಕ್ರಾಸ್ ಬಳಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಶ್ರೀಧರ್ ಕೆ.ಎಲ್ ರವರು ಚಾಲಕರಾಗಿ ಧರ್ಮಸ್ಥಳ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-F-3324ನೇ ನೋಂದಣಿ ನಂಬ್ರದ KSRTC ಬಸ್ಸಿನ ಮುಂಭಾಗದ ಬಲಬದಿಗೆ ಅಪಘಾತವಾಗಿ, ಆರೋಪಿ ಮೋಟಾರ್ ಸೈಕಲ್ ಸವಾರ ಮತ್ತು ಸಹಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ರಕ್ತ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 19/2022 ಕಲಂ: 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವೇಣೂರು ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಜಿ ಎನ್ ನವೀನ್ (30) ತಂದೆ: ನಾಗರಾಜ್ ವಾಸ: ಗಂಡ್ಲ ಹಳ್ಳಿ ಮನೆ ಗಂಗಾರೆ ಕಾಲುವೆ ಅಂಚೆ ,ಚಿಕ್ಕಬಳ್ಳಾಪುರ ತಾಲೂಕು ಎಂಬವರ ದೂರಿನಂತೆ ದಿನಾಂಕ:01-02-2022 ರಂದು ಚೈತನ್ಯ ಕೋಲ್ಡ್ ಸ್ಟೋರೇಜ್ ಕಂಪನಿಯ ಬಾಬ್ತು ಆಶೋಕ್ ಲೈಲ್ಯಾಂಡ್ ದೋಸ್ತ್ ವಾಹನದಲ್ಲಿ ಉಡುಪಿ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದು, ಅದೇ ಕಂಪನಿಯ ಆಶೋಕ್ ಲೈಲ್ಯಾಂಡ್ ದೋಸ್ತ್ ವಾಹನ ನಂ ಕೆ ಎ 02 ಎ ಹೆಚ್ 4456 ನೇ ದನ್ನು ಪಿರ್ಯಾದಿದಾರರ ಪರಿಚಯದ ದೇವರಾಜ್ ಎಂಬವರು ಚಲಾಯಿಸಿಕೊಂಡು ಹೋಗುತ್ತಾ, ಬೆಳ್ತಂಗಡಿ ತಾಲೂಕು ಬಡಗಕಾರಂದೂರು ಗ್ರಾಮ ಕೆದ್ದು ಎಂಬಲ್ಲಿಗೆ ತಲುಪುವಾಗ ಮದ್ಯಾಹ್ನ 02:05 ಗಂಟೆಗೆ ಪಿರ್ಯಾದಿದಾರರ ಎದುರಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಲಾರಿ ಚಾಲಕನು ತನ್ನ ಬಾಬ್ತು ಲಾರಿಯನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ತೀರ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಎದುರಿನಿಂದ ಚಲಾಯಿಸಿಕೊಂಡು ಹೋಗುತ್ತಿದ್ದ ಕೆ ಎ 02 ಎ ಹೆಚ್ 4456 ಆಶೋಕ್ ಲೈಲ್ಯಾಂಡ್ ದೋಸ್ತ್ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು ದೋಸ್ತ್ ವಾಹನ ಜಖಂ ಗೊಂಡಿದ್ದು, ಆಶೋಕ್ ಲೈಲ್ಯಾಂಡ್ ದೋಸ್ತ್ ವಾಹನದ ಚಾಲಕನಿಗೆ ಬಲ ಭಾಗದ ಕೋಲು ಕಾಲು, ಬಲ ಭಾಗದ ಕೈ ತೋಳು, ಹಾಗೂ ಬಲ ಕಿವಿಗೆ ರಕ್ತ ಗಾಯವಾಗಿದ್ದು, ಪಿರ್ಯಾದಿದಾರರು ಹಾಗೂ ಲಾರಿ ಚಾಲಕ ಸೇರಿ ಎತ್ತಿ ಉಪಚರಿಸಿ ನಂತರ ಆತನನ್ನು ಚಿಕಿತ್ಸೆಯ ಬಗ್ಗೆ ಆಂಬ್ಯುಲೆನ್ಸ್ ನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುವುದಾಗಿದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 07-2022 ಕಲಂ :279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಸಂಜೀವ ಪ್ರಾಯ 57 ವರ್ಷ ತಂದೆ:ದೇವಪ್ಪ ವಾಸ:ಆನಾಜೆ ಮನೆ, ಕೋಡಿಪ್ಪಾಡಿ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:31-01-2022 ರಂದು ಸಮಯ 19-45 ಗಂಟೆಗೆ ಪಿರ್ಯಾಧಿದಾರರು ತನ್ನ ಬಾಬ್ತು ವಾಹನ ಸಂಖ್ಯೆ ಟಿವಿಎಸ್ ಜುಪಿಟರ್ ಕೆಎ-21-ಯು-3769 ನೇ ಸ್ಕೂಟರನ್ನು ಸವಾರಿ ಮಾಡಿಕೊಂಡು ಸುಕುಮಾರನನ್ನು ಸಹ ಸವಾರನ್ನಾಗಿ ಕುಳ್ಳಿರಿಸಿಕೊಂಡು ಕಬಕ-ವಿಟ್ಲ ಡಾಮಾರು ರಸ್ತೆಯಲ್ಲಿ ಬರುತ್ತಾ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಎಸ್ ಆರ್ ಎಸ್ ಪೆಟ್ರೋಲ್ ಬಂಕ್ ಬಳಿ ವಿಟ್ಲ ಕಡೆಯಿಂದ ಕೆಎ -70-1637 ನೇ ಆಟೋ ರಿಕ್ಷಾವನ್ನು ಅದರ ಚಾಲಕ ಶೇಖ್ ಅಬ್ದುಲ್ ಕರೀಂ ರವರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಫಿರ್ಯಾದುದಾರರ ಸ್ಕೂಟರ್ ಗೆ ಢಿಕ್ಕಿ ಹೊಡೆದು ಸವಾರ ಮತ್ತು ಸಹ ಸವಾರ ಸ್ಕೂಟರ್ ನೊಂದಿಗೆ ರಸ್ತೆಗೆ ಬಿದ್ದು ಫಿರ್ಯಾದಿದಾರರ ಎಡ ಕಾಲಿನಪಾದಕ್ಕೆ, ಮೊಣ ಗಂಟಿಗೆ,ಬಲಕೈ ಕಿರುಬೆರಳು ಮತ್ತು ತೋರು ಬೆರಳಿಗೆ ರಕ್ತ ಗಾಯ ಮತ್ತು ಸಹಸವಾರ ಸುಕುಮಾರರವರಿಗೆ(55) ಬಲಕಾಲಿಗೆ , ಪಾದಕ್ಕೆ ಮತ್ತು ಬೆರಳಿಗೆ ಬಲ ಭುಜ ಮತ್ತು ಬಲ ಕತ್ತಿನ ಬಳಿ, ಹಣೆಗೆ ರಕ್ತ ಗಾಯ ಹಾಗೂ ಗುದ್ದಿದ ನಮೂನೆಯ ನೋವಾಗಿದ್ದು ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 21/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವೆಂಕಟೇಶ್ ಪ್ರಾಯ 33 ವರ್ಷ ತಂದೆ . ಬಾಲು ವಾಸ:ಸುಬ್ರಾಯ ಸ್ಟ್ರೀಟ್ ಕುಮಾರ ಸ್ವಾಮಿ ಪೇಟೆ ಮನೆ, ಧರ್ಮಪುರಿ ಜಿಲ್ಲೆ ತಮಿಳುನಾಡು ಎಂಬವರ ದೂರಿನಂತೆ ತನ್ನ ಬಾಬ್ತು ಲಾರಿ ನಂ ಕೆ.ಎ 01 ಎಹೆಚ್ 8595 ನೇದರಲ್ಲಿ ಸಿಮೆಂಟು ಲೋಡು ಮಾಡಿಕೊಂಡು ಮಂಗಳೂರಿನ ಮಾಣಿಯ ರಾಂಕ್ಮೋ ಗೋಡನಿಗೆ ಸಿಮೇಂಟನ್ನು ಹಾಕುವ ಬಗ್ಗೆ ತಮಿಳುನಾಡಿನಿಂದ ದಿನಾಂಕ:30-01-2022 ರಂದು ಬೆಳಿಗ್ಗೆ 11.00 ಗಂಟೆಗೆ ಹೊರಟು ದಿನಾಂಕ 31-01-2022 ರಂದು ಮದ್ಯಾಹ್ನ 01.30 ಗಂಟೆಗೆ ರಾ ಹೆ 75 ರಲ್ಲಿ ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಲಾವತ್ತಡ್ಕ ಎಂಬಲ್ಲಿಗೆ ತಲುಪಿದಾಗ ಪಿರ್ಯಾಧುದಾರರ ಎದುರುಗಡೆಯಿಂದ ಅಂದರೆ ರಾ.ಹೆ 75 ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಇನ್ನೋವಾ ಕಾರು ನಂ ಕೆ.ಎ 20 ಪಿ0114 ನೇದನ್ನು ಅದರ ಚಾಲಕನು ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಪಿರ್ಯಾದುದಾರರ ಲಾರಿಗೆ ಢಿಕ್ಕಿ ಹೊಡೆದು ಪಿರ್ಯಾದುದಾರರ ಲಾರಿ ಹಾಗೂ ಇನ್ನೋವಾ ಕಾರು ಜಖಂ ಆಗಿದ್ದು ಪಿರ್ಯಾದುದಾರರಿಗೆ ಹಾಗೂ ಇನ್ನೋವಾ ಕಾರಿನ ಚಾಲಕನಿಗೆ ಯಾವುದೇ ಗಾಯವಾಗಿರುವುದಿಲ್ಲ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 23/2022 ಕಲಂ:279 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚಾಕೋ ಮಥಾಯಿ 43 ವರ್ಷ ತಂದೆ: ಮಥಾಯಿ ವಾಸ: ಬಿಟಿಕೆ ಮನೆ ಏಡೆಲ್ಲುರು ಪೋಸ್ಟ್ ತೋಡುಬುಳ ತಾ ಇಡುಕಿ ಜಿಲ್ಲೆ ಕೇರಳ ಎಂಬವರ ದೂರಿನಂತೆ ಪಿರ್ಯಾದಿದಾರರು ಮತ್ತು ಪ್ರಭಾಕರನ್ರವರು ಒಂದು ವಾರದಿಂದ ಸುಳ್ಯ ತಾಲೂಕು ಕನಕ ಮಜಲು ಗ್ರಾಮದ ಕುತ್ತಿಕಾರು ರಬ್ಬರ್ ಎಸ್ಟೇಟ್ ಮಾಲಿಕರಾದ ಲಿಸ್ಟಿ ಚಾಕೋರವರ ತೋಟದಲ್ಲಿ ಕೆಲಸ ಮಾಡಿಕೊಂಡು ತೋಟದಲ್ಲಿರುವ ಮನೆಯಲ್ಲಿ ವಾಸಮಾಡಿಕೊಂಡಿದ್ದು, ದಿನಾಂಕ 31.01.2022 ರಂದು ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಸಮಯ ಸಂಜೆ 4.00 ಗಂಟೆಗೆ ಪ್ರಭಾಕರನ್ರವರು ಎದೆನೋವು ಎಂದು ಕುಸಿದು ಬಿದ್ದಿದ್ದು ಪಿರ್ಯಾದಿದಾರರು ತೋಟದ ಬದಿಯಲ್ಲಿದ್ದ ಸೂರ್ಯ ಭಟ್ರವರಿಗೆ ವಿಚಾರ ತಿಳಿಸಿ ಕೂಡಲೇ ಪಿರ್ಯಾದಿದಾರರು ಮತ್ತು ಸೂರ್ಯ ಭಟ್ರವರು ಚಿಕಿತ್ಸೆ ಬಗ್ಗೆ ಒಂದು ಜೀಪಿನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು. ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಯುಡಿಅರ್ ನಂಬ್ರ 05/22 ಕಲಂ 174 ಸಿಅರ್ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.