ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಂತೋಷ್ (32) ತಂದೆ:ಗಿರಿಯಪ್ಪ ಪೂಜಾರಿ  ವಾಸ: ಅರಳಿ ಮನೆ, ಉಜಿರೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 01-08-2021 ರಂದು ತನ್ನ ಬಾಬ್ತು ಕೆ.ಎ 21 ವಿ 1539 ನೇ ದ್ವಿಚಕ್ರ ವಾಹನದಲ್ಲಿ ಕಕ್ಕಿಂಜೆಯಿಂದ  ಪಿರ್ಯಾದಿದಾರರ ಮನೆಯಾದ ಉಜಿರೆಗೆ ಚಲಾಯಿಸಿಕೊಂಡು ಬರುತ್ತಿರುವ ಸಮಯ ಸುಮಾರು   ಮದ್ಯಾಹ್ನ 2.30  ಗಂಟೆಗೆ ಬೆಳ್ತಂಗಡಿ ತಾಲೂಕು  ಮುಂಡಾಜೆ ಗ್ರಾಮದ ಶೀಟ್‌ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದರುಗಡೆಯಿಂದ ಅಂದರೆ ಉಜಿರೆ ಕಡೆಯಿಂದ ಕೆ.ಎ 21 ಎಮ್‌ 8824 ನೇ  ಕಾರನ್ನು ಅದರ ಚಾಲಕನು ದುಡುಕುತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಬಲತೊಡೆಗೆ ರಕ್ತ ಗಾಯ ಎಡತೊಡೆಗೆ ಗುದ್ದಿದ ಗಾಯ ಬಲ ಮತ್ತು ಎಡ ಕೈ ಬೆರಳುಗಳಿಗೆ ತರಚಿದ ಗಾಯ  ಹಾಗು ಎಡ ಕಿವಿಗೆ ತರಚಿದ ರಕ್ತ ಗಾಯ ಮತ್ತು ಎಡ ಕಣ್ಣಿನ  ಕೆಳಗೆ ತರಚಿದ ಗಾಯವಾಗಿರುತ್ತದೆ.  ಗಾಯಾಳು ಉಜಿರೆ ಎಸ್.ಡಿ.ಎಮ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 59/2021, ಕಲಂ; 279,337 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ಸಂಚಾರ ಠಾಣೆ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕಿರಣ ಕುಮಾರ ಎಂ, ಪ್ರಾಯ 35 ವರ್ಷ, ತಂದೆ: ವಸಂತ ಕುಮಾರ, ವಾಸ:  C/O ಪದ್ಮನಾಭ ಪಂಡಿತ, ಅಳಕೆಮಜಲು ಮನೆ, ಇಡ್ಕಿದು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 31-07-2021 ರಂದು 16-00 ಗಂಟೆಗೆ ಆರೋಪಿ ಕಾರು ಚಾಲಕ ರಮೇಶ್‌ ರಾವ್‌ ಎಂಬವರು KA-21-N-0468 ನೇ ನೋಂದಣಿ ನಂಬ್ರದ ಕಾರನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಉಪ್ಪಿನಂಗಡಿ ಕಡೆಯಿಂದ ನೆಲ್ಯಾಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ನೆಲ್ಯಾಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದKA-20-EJ-9500 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಅಪಘಾತವಾಗಿ, ಪಿರ್ಯಾದುದಾರರು ರಸ್ತೆಗೆ ಬಿದ್ದು, ಎಡ ಮುಂಗೈಗೆ ರಕ್ತಗಾಯ, ಬಲಪಾದದ ಮೇಲ್ಭಾಗಕ್ಕೆ ಗುದ್ದಿದ ಒಳನೋವಿನ ಗಾಯವಾಗಿದ್ದು,  ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ  ದಾಖಲಿಸಿರುತ್ತಾರೆ. ಕಾರು ಚಾಲಕ ಮತ್ತು ಕಾರಿನಲ್ಲಿದ್ದವರಿಗೆ ಗಾಯಗಳಾಗಿರುವುದಿಲ್ಲ . ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  101/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸೀತಾರಾಮ  ಪ್ರಾಯ 31 ವರ್ಷ ತಂದೆ;ಕುಶಾಲಪ್ಪ ಗೌಡ ವಾಸ ; ಇಡಾಳ ಮನೆ ಪೆರಾಬೆ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು  ದಿನಾಂಕ:28.07.2021 ಬೆಳಿಗ್ಗೆ ಪಿರ್ಯಾದುದಾರರ ತಾಯಿ ಪೇಟೆಗೆ ಹೋಗಿ ಮನೆ ಸಾಮಾಗ್ರಿ ತರಲು ತಿಳಿಸಿದ್ದರಿಂದ ಪಿರ್ಯಾದುದಾರರು ಹಾಗೂ ಪಿರ್ಯಾದುದಾರರ ಅಣ್ಣ ಚಂದ್ರಶೇಖರ್ ಎಂಬುವರು  ಪೇಟೆಗೆ ಹೋಗುವರೇ ಪಿರ್ಯಾದುದಾರರ ಬಾಬ್ತು KA.21.U.2554 ನೇ ಮೋಟಾರ್ ಸೈಕಲ್ ನಲ್ಲಿ ಚಂದ್ರಶೇಖರನು ಸವಾರನಾಗಿ ಹಾಗು ಪಿರ್ಯಾದುದಾರರು ಹಿಂಬದಿ ಸವಾರನಾಗಿ ಮನೆಯಿಂದ ಹೊರಟು ಪೆರಾಬೆ ಗ್ರಾಮಕ್ಕೆ ಹೋಗಿ ಮನೆಯ ಸಾಮಾಗ್ರಿಗಳನ್ನು ತೆಗೆದುಕೊಂಡು ವಾಪಾಸು ಮನೆಗೆ ಬರುತ್ತಿರುವಾಗ ಮನೆಯ ಹತ್ತಿರ ಅಂದರೆ ಕಡಬ ತಾಲೂಕು ಪೆರಾಬೆ ಗ್ರಾಮದ ಇಡಾಳ ಎಂಬಲ್ಲಿಯ ಕಚ್ಚಾ ಮಣ್ಣು ರಸ್ತೆಯಲ್ಲಿ ಸಮಯ ಸುಮಾರು 12-00 ಗಂಟೆಗೆ ಬರುತ್ತಿರುವಾಗ ಚಂದ್ರಶೆಖರನು ಚಲಾಯಿಸುತ್ತಿದ್ದ  ಮೋಟಾರ್ ಸೈಕಲನ್ನು  ಅಜಾಗರೂಕತೆ ಹಾಗೂ  ನಿರ್ಲಕ್ಷತನದಿಂದ  ತಿರುವ ರಸ್ತೆಯಲ್ಲಿ ಚಲಾಯಿಸಿದ  ಪರಿಣಾಮ  ಬೈಕ್ ಸ್ಕಿಡ್ ಆಗಿ  ಕಚ್ಚಾ ಮಣ್ಣು  ರಸ್ತೆಯಲ್ಲಿ  ಬಿದ್ದಿದ್ದು,  ಬೈಕ್ ಸ್ಕಿಡ್ ಆಗಿ  ಬಿದ್ದ ಪರಿಣಾಮ ಪಿರ್ಯಾದುದಾರರ  ಎಡಕಾಲಿನ ತೊಡೆಯ ಭಾಗದಲ್ಲಿ ಮೂಳೆ ಮುರಿತವಾಗಿರುವಂತೆ  ಭಾಸವಾಗಿದ್ದು,  ನೋವಿನಲ್ಲಿ  ಕಿರುಚಿಕೊಂಡಾಗ ಅಲ್ಲೆ  ಹತ್ತಿರದ  ಮನೆಯಲ್ಲಿದ್ದ  ಪಿರ್ಯಾದುದಾರರ  ತಾಯಿ ಹಾಗೂ  ನೆರೆಯ ನಿವಾಸಿ  ಶಿವಪ್ಪ ರವರು   ಬಂದು  ಪಿರ್ಯದುದಾರರನ್ನು  ಉಪಚರಿಸಿ ನೋಡಲಾಗಿ  ಪಿರ್ಯಾದುದಾರರಿಗೆ ಎಡಕಾಲಿಗೆ  ತರಚಿದ ಗಾಯವಾಗಿರುತ್ತದೆ ಹಾಗೂ .ಸವಾರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ,  ನಂತರ  ನೋವಿನಿಂದ  ಬಳಲುತ್ತಿದ್ದ  ಪಿರ್ಯಾದುದಾರರನ್ನು  ಚಿಕಿತ್ಸೆಯ ಬಗ್ಗೆ  108 ಆ್ಯಂಬ್ಯುಲೆನ್ಸ್ ನಲ್ಲಿ  ಪುತ್ತೂರಿನ  ಹಿತಾ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯಾಧಿಕಾರಿಯವರು  ಪಿರ್ಯಾದುದಾರರನ್ನು  ಪರೀಕ್ಷಿಸಿ ಒಳರೋಗಿಯಾಗಿ  ದಾಖಲು  ಮಾಡಿಕೊಂಡು  ಚಿಕಿತ್ಸೆ ನೀಡಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 61/2021 . ಕಲಂ 279 337. 338  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುಧೀರ್ ಪೂಜಾರಿ  ಪ್ರಾಯ: 26 ವರ್ಷ ತಂದೆ: ಈಶ್ವರ ಪೂಜಾರಿವಾಸ: ಕೊಪ್ಪಳ ಮನೆ, ಕುರಿಯಾಳ  ಗ್ರಾಮ, ಬಂಟ್ವಾಳ ತಾಲೂಕುಎಂಬವರ ದೂರಿನಂತೆ ಪಿರ್ಯಾದಿದಾರರು  ದಿನಾಂಕ: 01-08-2021 ರಂದು ತನ್ನ   ಅಕ್ಕನ ಬಾಬ್ತು KA-19-EX-0604 ನೇ ಡಿಯೋ ಸ್ಕೂಟರ್ ನಲ್ಲಿ ಕೆಲಸ ನಿಮಿತ್ತ  ಮನೆಯಿಂದ   ಪೆದಮಲೆ ಕಡೆಗೆ ಸವಾರಿ ಮಾಡಿಕೊಂಡು   ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 10:00 ಗಂಟೆಗೆ ಬಂಟ್ವಾಳ ತಾಲೂಕು ಕುರಿಯಾಳ ಗ್ರಾಮದ ಕೊಪ್ಪಳ ಪದವು ಎಂಬಲ್ಲಿಗೆ ತಲುಪಿದಾಗ ಬಂಡಸಾಲೆ ಕಡೆಯಿಂದ KA-19-MJ-5895 ನೇ ಜೀಪನ್ನು ಅದರ ಚಾಲಕ ಜೈಸನ್ ಫೊನ್ಸೆಕಾ ರವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ  ಸ್ಕೂಟರ್ ಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಪಿರ್ಯಾದಿದಾರರು  ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲತೊಡೆಗೆ  ಗಾಯವಾಗಿದ್ದು ಗಾಯಾಳು  ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 72/2021  ಕಲಂ 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

 

ಅಸ್ವಾಭಾವಿಕ ಮರಣ ಪ್ರಕರಣ: 3

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಸರೋಜಾ  ಪ್ರಾಯ-46 ವರ್ಷ     ಗಂಡ- ಶೇಖರ ಕುಲಾಲ್  ವಾಸ- ಒಳತ್ತಡ್ಕ  ಮನೆ, ಆರ್ಯಾಪು  ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಶ್ರೀಮತಿ ಸರೋಜಾ  ಪ್ರಾಯ-46 ವರ್ಷ ಗಂಡ- ಶೇಖರ ಕುಲಾಲ್  ವಾಸ- ಒಳತ್ತಡ್ಕ ಮನೆ, ಆರ್ಯಾಪು ಗ್ರಾಮ ರವರ ಗಂಡ ಶೇಖರ ಕುಲಾಲ್ ರವರು ಅಡಿಕೆ ಗಾರ್ಬಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ:- 30.07.2021 ರಂದು ರಾತ್ರಿ ಸುಮಾರು 11.00 ಗಂಟೆಗೆ ಮನೆಯಲ್ಲಿದ್ದಾಗ ಶೇಖರ ಕುಲಾಲ್‌ರವರು ಏಕಾಏಕಿ ಅಸ್ವಸ್ಥನಾಗಿ ವಾಂತಿ ಮಾಡಲು ಪ್ರಾರಂಭಿಸಿದ್ದು, ವಾಂತಿ ಮಾಡುವ ವೇಳೆ ಯಾವುದೋ ವಿಷ ಪದಾರ್ಥದ ವಾಸನೆ ಕೂಡಾ ಬರುತ್ತಿದ್ದು  ಕೂಡಲೇ ಪಿರ್ಯಾದಿದಾರರು ಮತ್ತು ಮಗನಾದ ರೋಹಿತ್‌ ಶೇಖರ್ ರವರನ್ನು ಚಿಕಿತ್ಸೆ ಬಗ್ಗೆ ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯಾಧಿಕಾರಿಯವರು ಪ್ರಥಮ ಚಿಕಿತ್ಸೆ ನೀಡಿ ಬಳಿಕ  ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದಂತೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಶೇಖರ ಕುಲಾಲ್‌ರವರು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ:- 01.08.2021 ರಂದು  ಮಧ್ಯಾಹ್ನ 2.15 ಗಂಟೆಗೆ ಮೃತಪಟ್ಟಿರುವುದಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಯುಡಿಅರ್ ನಂಬ್ರ 28/21  ಕಲo: 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹರ್ಷಿತ್   ಪ್ರಾಯ :29 ವರ್ಷ, ತಂದೆ: ಸುಂದರ ಗೌಡ ವಾಸ: ಅನುರಾಗ  ಮನೆ, ಉರ್ನಡ್ಕ ರೆಖ್ಯಾ  ಗ್ರಾಮ, ,ಬೆಳ್ತಂಗಡಿ  ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು  ತನ್ನ ಸಂಸಾರದೊಂದಿಗೆ ವಾಸವಾಗಿದ್ದು ಪಿರ್ಯಾದುದಾರರ ತಾಯಿ ಮೃತ ಶಕುಂತಳಾ ಪ್ರಾಯ 52 ವರ್ಷ ಎಂಬುವರು  ಮನೆ ವಾರ್ತೆ ಕೆಲಸ ಹಾಗೂ ಕೃಷಿ ಕೆಲಸ ಮಾಡಿಕೊಂಡಿದ್ದು ತಾರೀಕು 31-07-2021 ರಂದು ಪಿರ್ಯಾದುದಾರರ ಮನೆಯ ಬಳಿ ಇರುವ ಗುಂಡ್ಯ ನದಿಯ ದಡದಲ್ಲಿ ಬೆಳಿಗ್ಗೆ ಸುಮಾರು 6-00 ಗಂಟೆಯ ಸಮಯಕ್ಕೆ ಕಷಾಯಕ್ಕೆ ಉಪಯೋಗಿಸುವ ನೆಲ ನೆಲ್ಲಿ ಗಿಡಗಳನ್ನು ತೊಳೆಯುತ್ತಿರುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ಹರಿಯುವ ನದಿಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದು ನೀರಿನಲ್ಲಿ ಮುಳುಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದ್ದು  ಈ ಬಗ್ಗೆ   ಪಿರ್ಯಾದುದಾರರು  ಹಾಗೂ ಗ್ರಾಮದ ಜನರು ಮತ್ತು ಅಗ್ನಿ ಶಾಮಕ ದಾಳದವರು  ಗುಂಡ್ಯ ನದಿ ನೀರಿನ ದಡದಲ್ಲಿ ಹುಡುಕಾಡುತ್ತಿದ್ದ ಸಮಯ ದಿನಾಂಕ 01-08-2021 ರಂದು ಬೆಳಿಗ್ಗೆ ಸುಮಾರು 10-30 ಗಂಟೆಗೆ ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಎಂಜಿರಾ ಎಂಬಲ್ಲಿ ಗುಂಡ್ಯ ನದಿಯ ದಡದ ಬದಿಯಲ್ಲಿ ಮೃತ ದೇಹವು ದೊರೆತಿರುತ್ತಾದೆ.ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 14/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪೂಜಾರಿ, ಪ್ರಾಯ: 46 ವರ್ಷ ತಂದೆ: ನಾಣ್ಯಪ್ಪ ಪೂಜಾರಿ ವಾಸ; ಕೋಡ್ಲಕ್ಕೆ ಮನೆ, ಪಾರೆಂಕಿ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರ ಅಣ್ಣ ಮೃತ ಶ್ರೀಧರ ಸಾಲ್ಯಾನ್ (65 ವರ್ಷ) ಎಂಬವರು ವಿಪರೀತ ಅಮಲು ಪದಾರ್ಥ ಸೇವನೆ ಮಾಡುವ ಚಟ ಹೊಂದಿದ್ದು, ದಿನಾಂಕ: 17.07.2021 ರಂದು ತನ್ನ ಮನೆಯಾದ ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ ಕೋಡ್ಲಕ್ಕೆ ಎಂಬಲ್ಲಿ ತನ್ನ ಹಳೆಯ ಮನೆಯಲ್ಲಿ ತಂದಿಟ್ಟಿದ್ದ ಅಮಲು ಪದಾರ್ಥ ಸೇವನೆ ಮಾಡಲು ರಾತ್ರಿ ಸಮಯ ಸುಮಾರು 11.30 ಗಂಟೆಗೆ ಹೋದವರು ಅಮಲು ಪದಾರ್ಥದ ಬದಲು ಕೈ ತಪ್ಪಿನಿಂದ ಕೃಷಿಗೆ ಬಳಸಲು ತಂದಿಟ್ಟಿದ್ದ ಯಾವುದೋ ಕ್ರಿಮಿ ನಾಶಕ ವಿಷಪದಾರ್ಥವನ್ನು ಸೇವಿಸಿ ವಾಪಾಸು ಮನೆಗೆ ಬಂದು ರಾತ್ರಿ ಮಲಗಿದ್ದವರು ದಿನಾಂಕ: 18.07.2021 ರಂದು ಬೆಳಿಗ್ಗೆ  ಅಸ್ವಸ್ಥ ಗೊಂಡಿದ್ದವರನ್ನು ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಸದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು ದಿನಾಂಕ: 01.08.2021 ರಂದು ಬೆಳಗಿನ ಜಾವ 01.30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ UDR NO: 11/2021ಕಲಂ: 174 ಸಿಆರ್‌ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-08-2021 06:18 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080