ಅಪಘಾತ ಪ್ರಕರಣ: 05
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಮೊಹಮ್ಮದ್ ಫಾರೂಕ್ (25) ವರ್ಷ, ತಂದೆ: ದಿ|| ಮಹಮ್ಮದ್ ಹನೀಫ್.ವಾಸ: # 16-116 ಪೆತ್ತಮುಗೇರು ಮನೆ,ಬಿ ಮೂಡ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 01.01.2023 ಪಿರ್ಯಾದಿದಾರ ಬಾಬ್ತು KA-19-HA-7046 ನೇ ಸ್ಕೂಟರಿನಲ್ಲಿ ಮೊಹಮ್ಮದ್ ನದೀಮ್ ಸವಾರನಾಗಿ ಹಾಗೂ ಪಿರ್ಯಾದಿದಾರರು ಸಹ ಸವಾರನಾಗಿ ಅಗತ್ಯ ಕೆಲಸದ ನಿಮಿತ್ತ ಬಿ ಸಿ ರೋಡಿಗೆ ಬಂದು ವಾಪಾಸು ಮನೆ ಕಡೆಗೆ ಹೋಗುತ್ತಾ ಸಮಯ ರಾತ್ರಿ 9:15 ಗಂಟೆಗೆ ಹಿಂದಿನಿಂದ ಬಿ ಸಿ ರೋಡು ಕಡೆಯಿಂದ KA-19-AD-6733 ನೇ ಆಟೋರಿಕ್ಷಾವನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಸ್ಕೂಟರಿನ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸ್ಕೂಟರ್ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಹಾಗೂ ಆಟೋರಿಕ್ಷಾ ಕೂಡ ಮಗುಚಿ ಬಿದ್ದು ಮೊಹಮ್ಮದ್ ನದೀಮ್ ರವರಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು ಪರ್ಲಿಯಾ ನರ್ಶಿಂಗ್ ಹೋಮ್ ನಲ್ಲಿ ಹೋರರೋಗಿಯಾಗಿ, ಆಟೋರಿಕ್ಷಾ ಚಾಲಕ ನಿಖಿಲ್ ರವರಿಗೆ ಬಲ ಕಾಲಿಗೆ ಗುದ್ದಿದ ಹಾಗೂ ಮೂಳೆ ಮುರಿತದ ನೋವಾಗಿದ್ದು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೋರ ರೋಗಿಯಾಗಿ ಹಾಗೂ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಯಜ್ಞೇಶ್ ಎಂಬವರಿಗೆ ಮುಖಕ್ಕೆ, ಮೂಗಿಗೆ ಗುದ್ದಿದ ರಕ್ತ ಗಾಯವಾಗಿದ್ದು ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 01/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಗಿರೀಶ್ ಎಂ ಪ್ರಾಯ 32 ವರ್ಷ ತಂದೆ: ಸೀತಾರಾಮ ಎಂ ಭಟ್ ವಾಸ:ಮುಳಿಯಾಲ ಮನೆ, ಅಡ್ಯನಡ್ಕ ಅಂಚೆ, ಎಣ್ಮಕಜೆ ಗ್ರಾಮ ಮಂಜೇಶ್ವರ ತಾಲೂಕು ಎಂಬವರ ದೂರಿನಂತೆ ದಿನಾಂಕ:01-01-2023 ರಂದು ತನ್ನ ಬಾಬ್ತು KA-21-Z-3338ನೇದರಲ್ಲಿ ಪತ್ನಿ ವೈದೆಹಿ, ಮಕ್ಕಳಾದ ಶಮಂತ್ (7ವರ್ಷ),ಶಿವಾನಿ (1 ವರ್ಷ) ರವರೊಂದಿಗೆ ತನ್ನ ಊರಿನಿಂದ ಪುತ್ತೂರಿನಲ್ಲಿರುವ ಅತ್ತೆ ಮನೆಗೆ ಹೋಗುವಾಗ 3.00 ಗಂಟೆಗೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಕುದ್ದುಪದವು ಪೆಟ್ರೋಲ್ ಪಂಪ್ ಬಳಿ ತಲುಪಿದಾಗ ಪೆಟ್ರೋಲ್ ಪಂಪಿನಿಂದ KA-19-ML-8924ನೇ ಕಾರನ್ನು ಅದರ ಚಾಲಕ ರಘುರಾಮ ಶೆಟ್ಟಿ ಯಾವುದೇ ಸೂಚನೆ ನೀಡದೆ ಏಕಾಏಕಿಯಾಗಿ ಅಜಾಗರೂಕತೆ ಹಾಗೂ ದುಡುಕುತನದಿಂದ ಮುಖ್ಯ ರಸ್ತೆಗೆ ಚಾಲಾಯಿಸಿ ಪಿರ್ಯಾಧಿದಾರರ ಕಾರಿಗೆ ಅಪಘಾತಪಡಿಸಿದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾಧಿಯ ಪತ್ನಿ ವೈದೆಹಿರವರ ಹಣೆಗೆ ರಕ್ತಗಾಯವಾಗಿರುತ್ತದೆ. ಮಗಳು ಶಿವಾನಿಯ ಹಣೆಯ ಎಡಭಾಗಕ್ಕೆ ಗುದ್ದಿದ ನೋವಾಗಿರುತ್ತದೆ. ಗಾಯಾಳುಗಳನ್ನು ಕಾರೊಂದರಲ್ಲಿ ಮಂಗಳೂರು ಯನಪೋಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯಾಧಿಕಾರಿಯವರು ವೈದೆಹಿಯನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 002/202 ಕಲಂ: 279 ,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಹರೀಶ್ ಎಸ್, ಪ್ರಾಯ 37 ವರ್ಷ, ತಂದೆ: ಲಿಂಗಪ್ಪ ಗೌಡ ವಾಸ: ಮಾಂತೂರು ಮನೆ, ಸವಣೂರು ಅಂಚೆ & ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ 01-01-2023 ರಂದು 20:00 ಗಂಟೆಗೆ ಆರೋಪಿ ಕಾರು ಚಾಲಕ ಸಾದಿಕ್ ಪಿ ಎಂಬವರು KA-09-M-3922 ನೇ ನೋಂದಣಿ ನಂಬ್ರದ ಕಾರನ್ನು ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿಅಜಯ್ ಮಾರ್ಬಲ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಹರೀಶ್ ಎಸ್ ರವರು ಮುಕ್ವೆ ಕಡೆಯಿಂದ ಸವಣೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-R-3024 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಕಾರು ಅಪಘಾತವಾಗಿ, ಪಿರ್ಯಾದುದಾರರು ರಸ್ತೆಗೆ ಬಿದ್ದು, ಬಲಕಾಲಿನ ಕೋಲು ಕಾಲಿಗೆ, ಪಾದಕ್ಕೆ, ತಲೆಗೆ, ಬಲಕೈ ಅಂಗೈಗೆ ಗುದ್ದಿದ ಹಾಗೂ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ 01/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಪದ್ಮನಾಭ, ಪ್ರಾಯ-32 ವರ್ಷ, ತಂದೆ-ಶ್ರೀಧರ ಆಚಾರಿ , ವಾಸ- ಹೊಸಗದ್ದೆ ಮನೆ, ಅರಿಯಡ್ಕ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 01-01-2023 ರಂದು ಕೆಲಸದ ನಿಮಿತ್ತ ಕೌಡಿಚ್ಚಾರ್ ಗೆ ಬಂದು ಕೆಲಸ ಮುಗಿಸಿ ಮನೆಗೆ ಹೋಗುವ ಸಮಯ ಸಂಜೆ 6.45 ಗಂಟೆಗೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಪ್ರಶಾಂತ್ ಬಾರ್ ಎದುರು ತಲುಪಿದಾಗ, ಕೌಡಿಚ್ಚಾರ್ ನಿಂದ ಪೆರಿಗೇರಿ ಕಡೆಗೆ ಹೋಗುವ ರಸ್ತೆಯ ಬಲಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಪೆರಿಗೇರಿ ಕಡೆಯಿಂದ KA.19.MB.5467 ಕಾರೊಂದನ್ನು ಅದರ ಚಾಲಕನು ಅಜಾಗರುಕತೆಯಿಂದ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬಲ ಬದಿಯಲ್ಲಿ ಫಿರ್ಯಾದುದಾರರ ಎದುರು ಕಡೆಯಿಂದ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ವ್ಯಕ್ತಿ ರಸ್ತೆಗೆ ಬಿದ್ದುದನ್ನು ನೋಡಿ ಅಲ್ಲಿಗೆ ಹೋಗಿ ವಿಚಾರಿಸಲಾಗಿ ಫಿರ್ಯಾದುದಾರರ ಸಂಬಂಧಿ ಸರ್ವೇಶ ಪ್ರಾಯ 41 ವರ್ಷ, ತಂದೆ ರಾಜು ಆಚಾರ್ಯ ಎಂಬವರಾಗಿದ್ದು,ಅವರನ್ನು ಉಪಚರಿಸಿ ನೋಡಲಾಗಿ ಅವರ ಮುಖಕ್ಕೆ ,ತಲೆಗೆ ,ಕೈ ಕಾಲುಗಳಿಗೆ ರಕ್ತಸ್ಥಿತಿಯ ಗಾಯವಾಗಿದ್ದು,ನಂತರ ಗಾಯವಾದವರನ್ನು ದಯಾನಂದ ಎಂಬವರ ಆಟೋರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಕಳುಯಿಸಿದ್ದು, ಅವರನ್ನು ಫಸ್ಟ್ ನ್ಯೂರೋ ಆಸ್ಪತ್ರೆ ಮಂಗಳೂರಿಗೆ ಕರೆದುಕೊಂಡು ಹೋಗಿದ್ದು,ಅಲ್ಲಿ ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅ.ಕ್ರ 02-2023 ಕಲಂ:279,337 ಐಪಿಸಿ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ರಿತೇಶ್ ಪ್ರಾಯ 18 ವರ್ಷ ತಂದೆ: ಹರಿಶ್ಚಂದ್ರ ವಾಸ: ದೊಡ್ಡತೋಟ ಮನೆ, ಮುಂಡಕಜೆ ಅಮರ ಪಡ್ನೂರು ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 02.01.2023 ರಂದು ಬೆಳಿಗ್ಗೆ ಎಂದಿನಂತೆ ತನ್ನ ಬಾಬ್ತು ಸ್ಕೂಟರಿನಲ್ಲಿ ಮನೆಯಿಂದ ಕೆಲಸಕ್ಕೆ ಬರುತ್ತಿರುವ ಸಮಯ ಸುಮಾರು ಬೆಳಿಗ್ಗೆ 8.45 ಗಂಟೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಓಡಬಾಯಿ ಎಂಬಲ್ಲಿಗೆ ತಲುಪಿದಾಗ ಅವರ ಎದುರಿನಿಂದ ಸುಳ್ಯ ಕಡೆಯಿಂದ ಮಾಣಿ ಮೈಸೂರು ಹೆದ್ದಾರಿಯಲ್ಲಿ ಪಿರ್ಯಾದಿದಾರರ ತಂದೆ ಹರೀಶ್ಚಂದ್ರ ರವರು ತನ್ನ ಬಾಬ್ತು ಸ್ಕೂಟರ್ ನಂಬ್ರ ಕೆಎ-21-ಇಸಿ-8586 ನೇದನ್ನು ಸವಾರಿ ಮಾಡಿಕೊಂಡು ಬಂದು ಇಂಡಿಕೇಟರ್ ಹಾಕಿ ಅವರ ಬಲಬದಿಗೆ ಅಂದರೆ ಬೆಟ್ಟಂಪಾಡಿ ಕಡೆಗೆ ಹೋಗಲು ಸ್ಕೂಟರನ್ನು ಬೆಟ್ಟಂಪಾಡಿ ಕ್ರಾಸ್‌ಗೆ ತಿರುಗಿಸುತ್ತಿರುವ ಸಮಯ ಸ್ಕೂಟರಿನ ಹಿಂದಿನಿಂದ ಒಂದು ಕಾರನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬೆಟ್ಟಂಪಾಡಿ ಕಡೆಗೆ ತಿರುಗಿಸುತ್ತಿದ್ದ ಸ್ಕೂಟರಿನ ಹಿಂಬದಿಯ ಬಲಬದಿಗೆ ಡಿಕ್ಕಿ ಹೊಡೆದಿದುದರಿಂದ ಹರೀಶ್ಚಂದ್ರ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರು ಕೂಡಲೇ ಸ್ಥಳಕ್ಕೆ ಹೋಗಿ ರಸ್ತೆಗೆ ಬಿದ್ದಿದ್ದ ತಂದೆ ಹರೀಶ್ಚಂದ್ರ ರವರನ್ನು ಎಬ್ಬಿಸಿ ಉಪಚರಿಸಿ ನೋಡಿದಾಗ ಅವರ ತಲೆಗೆ, ಹಣೆಗೆ ಮುಖಕ್ಕೆ ಮತ್ತು ಎಡ ಕಿವಿಗೆ ಹಾಗೂ ಬಲ ಕಾಲಿನ ಮೊಣಗಂಟಿಗೆ ರಕ್ತ ಗಾಯವಾಗಿದ್ದು, ಕೂಡಲೇ ಪಿರ್ಯಾದಿದಾರರು ಮತ್ತು ಅಲ್ಲಿ ಸೇರಿದ ಇತರರು ಒಂದು ವಾಹನದಲ್ಲಿ ಚಿಕಿತ್ಸೆ ಬಗ್ಗೆ ಸುಳ್ಯ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಒಂದು ಅಂಬ್ಯುಲೆನ್ಸ್ ನಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿದ್ದು, ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಅ.ಕ್ರ 01-2023 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: 02
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜಿತೇಂದ್ರ, (23)ತಂದೆ: ದಿ| ಪಕೀರ, ವಾಸ: ಪೊಂಜಿಲ ಮನೆ, ಗರ್ಡಾಡಿ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಅಣ್ಣ ದಿವಾಕರ(24) ಎಂಬುವವರು ಸುಮಾರು ನಾಲ್ಕು ವರ್ಷದಿಂದ ಮಾನಸಿಕ ಖಾಯಿಲೆಗೆ ತುತ್ತಾಗಿ ಖಾಸಗಿ ವೈಧ್ಯರಿಂದ ಔಷಧಿ ಪಡೆದುಕೊಂಡಿದ್ದವರು ಯಾವುದೇ ಕೆಲಸಕ್ಕೆ ಹೋಗದೇ ಮನೆಯಲ್ಲಿ ಇದ್ದು ಮಾನಸಿಕವಾಗಿ ನೊಂದುಕೊಂಡಿದ್ದವರು ದಿನಾಂಕ 02.01.2022 ರಂದು ಬೆಳಿಗ್ಗೆ 11.00 ಮನೆಯಲ್ಲಿ ಕಾಣದೆ ಇದ್ದವರನ್ನು 11.30 ಗಂಟೆ ಪಿರ್ಯಾದಿದಾರರು ಮತ್ತು ಅವರ ಅಕ್ಕ ಮಮತರವರು ಕೂಗಿ ಕರೆದರು ಪ್ರತಿಕ್ರಿಯಿಸದೆ ಇದ್ದುದರಿಂದ ಹುಡುಕಾಡಿದಾಗ ಅವರ ಬಾಬ್ತು ಗುಡ್ಡ ಜಾಗದಲ್ಲಿ ಕಾಟು ಮರದ ಕೊಂಬೆಗೆ ನೈಲಾಲ್ ಹಗ್ಗದಿಂದ ಕುತ್ತಿಗೆಗೆ ನೇಣುಬಿಗಿದುಕೊಂಡು ನೇತಾಡುತ್ತಿದ್ದವರನ್ನು ನೇಣಿನಿಂದ ಕೆಳಗಿಳಿಸಿ ಚಿಕಿತ್ಸೆಯ ಬಗ್ಗೆ ಅಂಬ್ಯೂಲೆನ್ಸ್ ಮೂಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು 12.15 ಗಂಟೆ ಸುಮಾರಿಗೆ ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 01/2023 ಕಲಂ: 174 ಸಿ.ಆರ್.ಪಿ.ಸಿ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಜುಲಿಯನ್ ಡಿ ಸೋಜ (51) ತಂದೆ: ದಿ| ತಿಮೋತಿ ಡಿ ಸೋಜಾ ವಾಸ: ಕೂಲಿಶೆಡ್ ಮನೆ, ಕಲ್ಲುಗುಂಡಿ ಸಂಪಾಜೆ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಮತ್ತು ಅವರ ಅಣ್ಣ ಗ್ರೇಗೋರಿ ಡಿ ಸೋಜಾ (53) ರವರು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತಮ್ಮ ತಾಯಿ ಮನೆಯಾದ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿ ಕೂಲಿಶೇಡ್ ಎಂಬಲ್ಲಿಗೆ ಬಂದಿದ್ದು, ಪಿರ್ಯಾದುದಾರರ ಅಣ್ಣ ವಿಪರೀತ ಮಧ್ಯಪಾನ ಮಾಡುವ ಚಟವನ್ನು ಹೊಂದಿದ್ದು, ಅದರಂತೆ ದಿನಾಂಕ 02.01.2023 ರಂದು ಮದ್ಯಪಾನ ಸೇವನೆ ಮಾಡಿ ತನ್ನಷ್ಟಕ್ಕೆ ತಾನು ಮಾತನಾಡುತ್ತಾ ಮನೆಯ ಮುಂದಿರುವ ಬಾವಿಗೆ ಸಮಯ ಸುಮಾರು 18:30 ಗಂಟೆಗೆ ಹಾರಿದ್ದು, ಪಿರ್ಯಾದುದಾರರು ಮತ್ತು ಅವರ ತಾಯಿ ಬೊಬ್ಬೆ ಹೊಡೆದಾಗ ನೆರೆಕೆರೆಯವರು ಬಂದು ಬಾವಿಯಿಂದ ಪಿರ್ಯಾದುದಾರರ ಅಣ್ಣ ಗ್ರೇಗೋರಿ ಡಿ ಸೋಜಾ ರವರನ್ನು ಮೇಲಕ್ಕೆ ಎತ್ತಿ ನೋಡಿದಾಗ ಉಸಿರುಗಟ್ಟಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ ನಂ: 02/2023 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.