ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನಿತಿನ್ (25) ತಂದೆ: ಜೋಸೆಫ್ ವಾಸ: ಪುತ್ತನ್‍ ಪುರೆಕ್ಕಿಲ್ ಮನೆ ಮಕ್ಯಾಡ್ ಅಂಚೆ ಕಾಂಞರಗಾಡ್ ಗ್ರಾಮ ಎಂಬವರ ದೂರಿನಂತೆ ಪಿರ್ಯಾದುದಾರರು  ಹಾಗೂ ಲಾರಿ ಚಾಲಕ ಶಿಬಿ ತೋಮಸ್‌ ರವರು  ಲಾರಿ ನಂಬ್ರ  KL-13-AG 5014ನೇಯದರಲ್ಲಿ ದಿನಾಂಕ 01.02.2023 ರಂದು ರಾತ್ರಿ 8.00 ಗಂಟೆಗೆ ಹುಣಸೂರಿನಿಂದ ಬಾಳೆಕಾಯಿಯನ್ನು ಲೋಡುಮಾಡಿಕೊಂಡು ಗಂಜಿಮಠದಲ್ಲಿರುವ  ACE Food Private Limited ಕಂಪೆನಿಗೆ ಮಡಿಕೇರಿ,ಪುತೂರು ರಸ್ತೆಯಿಂದಾಗಿ ಬಂದು ಬಿ.ಸಿ ರೋಡ್-‌ಕೈಕಂಬ ಸಾರ್ವಜನಿಕ ರಾಜ್ಯ ಹೆದ್ದಾರಿ ರಸ್ತೆಯಿಂದಾಗಿ ಹೋಗುತ್ತಿದ್ದು ದಿನಾಂಕ 02.02.2023ರಂದು ಸಮಯ ಸುಮಾರು ಬೆಳಿಗ್ಗೆ 04.00 ಗಂಟೆಗೆ ಬಂಟ್ವಾಳ ತಾಲೂಕು ತೆಂಕಬೆಳ್ಳೂರು ಗ್ರಾಮದ  ಕೊಪ್ಪಳ ತಿರುವು ಎಂಬಲ್ಲಿಗೆ ತಲುಪುತ್ತಿದ್ದಂತೆಯೇ  ಲಾರಿಯನ್ನುಅದರ ಚಾಲಕ  ಶಿಬಿ ತೋಮಸ್‌ ತಿರುವು ರಸ್ತೆಯಲ್ಲಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ  ಮಗುಚಿ ಬಿದ್ದ ಪರಿಣಾಮ ಪಿರ್ಯಾದುದಾರರು  ಹಾಗೂ ಚಾಲಕ ಶಿಬಿ ತೋಮಸ್‌ ಲಾರಿಯಿಂದ  ಎಸೆಯಲ್ಪಟ್ಟು ಪಿರ್ಯಾದುದಾರರಿಗೆ  ಎಡಕಾಲು ಮೊಣಗಂಟಿಗೆ ಹಾಗೂ ಬಲ ಕೋಲುಕಾಲಿಗೆ ಗುದ್ದಿದ ಹಾಗೂ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದಲ್ಲದೇ ಲಾರಿ ಚಾಲಕ ಶಿಬಿ ತೋಮಸ್‌ಗೆ ಎಡತೊಡೆಗೆ, ಗುದ್ದಿದ ಹಾಗೂ ಎದೆಗೆ ಗುದ್ದಿದ ಗಾಯವಾಗಿ  ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಲಾರಿ ಚಾಲಕ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿದ್ದು ಪಿರ್ಯಾದುದಾರರು ಹೊರ ರೋಗಿಯಾಗಿ ಚಿಕಿತ್ಸೆಪಡೆದಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 21/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶೀನಪ್ಪ ನಾಯ್ಕ್‌, ಪ್ರಾಯ 58 ವರ್ಷ ತಂದೆ: ದಿ| ನಾರಾಯಣ ನಾಯ್ಕ್‌ ವಾಸ: ಶ್ರೀ ವಿಕ್ರಮ ನಿಲಯ, ನೂಜಿ ಅರ್ತಿಲ ಮನೆ, ಉಪ್ಪಿನಂಗಡಿ ಗ್ರಾಮ ಮತ್ತು ಅಂಚೆ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 01-02-2023 ರಂದು 15-00 ಗಂಟೆಗೆ ಆರೋಪಿ ಅಟೋರಿಕ್ಷಾ ಚಾಲಕ ಅಬೂಬಕ್ಕರ್‌ ಸಿದ್ಧಿಕ್‌ ಎಂಬವರು KA-21-B-2502 ನೇ ನೋಂದಣಿ ನಂಬ್ರದ ಅಟೋರಿಕ್ಷಾವನ್ನು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ  ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಎಂಬಲ್ಲಿ ನ್ಯಾಯ ಬೆಲೆ ಅಂಗಡಿ ಬಳಿ ಯಾವುದೇ ಸೂಚನೆಯನ್ನು ನೀಡದೇ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ಎಡಬದಿಯಲ್ಲಿರುವ ಸರ್ವೀಸ್‌ ಸ್ಟೇಷನ್‌ ಕಡೆಗೆ ಒಮ್ಮೆಲೇ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಶೀನಪ್ಪ ನಾಯ್ಕ್‌ ರವರು ಸವಾರರಾಗಿ ನೆಕ್ಕಿಲಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-W-9857 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಅಟೋರಿಕ್ಷಾ ಅಪಘಾತವಾಗಿ, ಪಿರ್ಯಾದುದಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು,  ಕುತ್ತಿಗೆ, ಎಡಕೆನ್ನೆಗೆ, ತುಟಿಗೆ, ಎಡಕಾಲಿನ ಬೆರಳುಗಳಿಗೆ, ಎಡಕೈಯ ಭುಜಕ್ಕೆ ಗುದ್ದಿದ ಹಾಗೂ ರಕ್ತ ಗಾಯಗೊಂಡು, ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 23/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

 • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕಾವ್ಯ ಎ (26) ತಂದೆ: ದಿ. ಲಕ್ಷ್ಮಣ ನಾಯ್ಕ ವಾಸ: ಅರೆಮಂಗಿಲ ಮನೆ ಪೆರ್ಲ ಅಂಚೆ ಕಾಸರಗೋಡು ಜಿಲ್ಲೆ ಎಂಬವರ ದೂರಿನಂತೆ ಫಿರ್ಯಾದಿದಾರವರು ಪುತ್ತೂರು ತಾಲೂಕು ಕಬಕ ಗ್ರಾಮದ ಮುರದಲ್ಲಿರುವ ಧರಿತ್ರಿ ಸೌಹಾರ್ಧ ಸಹಕಾರಿ ನಿಯಮಿತ ಸಂಸ್ಥೆಯಲ್ಲಿ ಪ್ರಭಾರ ಕಾರ್ಯನಿರ್ವಾಹಣಾಧಿಕಾರಿಯಾಗಿ ಕೆಲಸ ಮಾಡಿಕೊಂಡಿರುವುದಾಗಿದೆ.  ದಿನಾಂಕ: 01.02.2023ರ ರಾತ್ರಿ 09.00 ಗಂಟೆಯಿಂದ ದಿನಾಂಕ: 02.02.203 ರ ಬೆಳಿಗ್ಗೆ 09.00 ಗಂಟೆಯ ಮಧ್ಯ ಕಾಲದಲ್ಲಿ ಪುತ್ತೂರು ತಾಲೂಕು ಕಬಕ ಗ್ರಾಮದ ಮುರ ಎಂಬಲ್ಲಿರುವ ಧರಿತ್ರಿ ಸೌಹಾರ್ಧ ಸಹಕಾರಿ ಸಂಸ್ಥೆ ಹಾಗೂ ಮಹಾಲಿಂಗೇಶ್ವರ ಎಲೆಕ್ಟ್ರಿಕಲ್ಸ್ ಅಂಗಡಿಗಳ ಶೆಟರ್ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದು ಅಂಗಡಿಗಳ ಒಳ ಪ್ರವೇಶಿಸಿ ಸಹಕಾರಿ ಸಂಘದ ಕಚೇರಿಯಲ್ಲಿದ್ದ 1) ಕಂಪ್ಯೂಟರ್ ಸೆಟ್ -1, 2) ಇನ್ವಾಟರ್ ಬ್ಯಾಟರಿ ಸಮೇತ -1, 3) ಲ್ಯಾಪ್ ಟಾಪ್-1, 4) ಸಿಸಿ ಕ್ಯಾಮರಾದ ಡಿವಿಆರ್-1, 5) ನಗದು ರೂಪಾಯಿ 34,720/-, 6)  ವೈಫೈ ಕನೆಕ್ಷನ್ ಬಾಕ್ಸ್ ಹಾಗೂ  ಮಹಾಲಿಂಗೇಶ್ವರ ಎಲೆಕ್ಟ್ರಿಕಲ್ಸ್ ನ 10 ಹಳೆಯ  ಸೀಲಿಂಗ್ ಫ್ಯಾನ್ ಮತ್ತು 4 ಹಳೆಯ ಮಿಕ್ಸಿ ಜಾರ್ ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಅಂದಾಜು ಮೌಲ್ಯ 1,26,220/- ಆಗಬಹುದು. ಈ ಬಗ್ಗೆ ಪುತ್ತೂರು ನಗರ ಪೊಲೀಸ್‌ ಠಾಣಾ  ಅ.ಕ್ರ:06/2023 ಕಲಂ: 454,457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶಾಂತಪ್ಪ ರೈ (46) ತಂದೆ: ಮಾಯಿಲಪ್ಪ ರೈ ವಾಸ: ಅಂಗಡಿಮಜಲು ಮನೆ, ಮರ್ಕಂಜ ಪೊಸ್ಟ್ ಮತ್ತು ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ದೇವಚಳ್ಳ ಗ್ರಾಮದ ಸೇವಾಜೆ ಶಾಲೆಯ ಎಸ್.ಡಿ.ಎಂ.ಸಿ ಅದ್ಯಕ್ಷರಾಗಿದ್ದು, ಪಿರ್ಯಾದುದಾರರು ದಿನಾಂಕ 01.02.2023 ರಂದು ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಅಂಗಡಿಮಜಲು ಎಂಬಲ್ಲಿರುವ ತಮ್ಮ ಮನೆಯ ಗೇಟಿನ ಬಳಿ ನಿಂತುಕೊಂಡಿರುವ ಸಮಯ ಸುಮಾರು 22:00 ಗಂಟೆಗೆ  ನಯನಕುಮಾರ್ ರೈ ಎಂಬಾತನು ಪಿರ್ಯಾದುದಾರರನ್ನು ಉದ್ದೇಶಿಸಿ ಅವ್ಯಾಚವಾಗಿ ಬೈದು ಅತನ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ಪಿರ್ಯಾದುದಾರರ ತಲೆಯ ಎಡಬದಿಗೆ ಹೊಡೆದು ನಂತರ ಬಿಯರ್ ಬಾಟಲಿಯನ್ನು ಅಲ್ಲೇ ಬಿಸಾಡಿ ಆತನ ಮನೆಗೆ ಹೋಗಿ ಕತ್ತಿಯೊಂದನ್ನು ಹಿಡಿದುಕೊಂಡು ಬಂದು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿದೆ. ಈ ಘಟನೆಯಿಂದ ಪಿರ್ಯಾದುದಾರರ ತಲೆಗೆ ಗಾಯಾವಾಗಿದ್ದುದರಿಂದ ಪಿರ್ಯಾದುದುದಾರರು ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಬಂದಾಗ ವೈದ್ಯರ ಪರೀಕ್ಷಿಸಿ ತಲೆಯ ಸ್ಕ್ಯಾನಿಂಗ್ ಮಾಡಿಸುವಂತೆ ತಿಳಿಸಿದ್ದು,  ಪುತ್ತೂರಿಗೆ ಹೋಗಿ ತಲೆ ಸ್ಕ್ಯಾನಿಂಗ್ ಮಾಡಿಸಿ ನಂತರ ಠಾಣೆಗೆ ಬಂದು ದೂರು ನೀಡಿದ್ದು. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ,ಕ್ರ ನಂ: 13/2023 ಕಲಂ: 324,504,506  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

 • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಮೆಶ್ ನಾಯ್ಜ , (47)ತಂದೆಲಿಂಗಪ್ಪ ನಾಯ್ಕ  ವಾಸ:  ಜ್ಯೋತಿ ನಗರ ಮಾಚರು ಮನೆ   ಮನೆ, ಉಜಿರೆ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರಾದ ಉಜಿರೆ ಗ್ರಾಮ ಪಂಚಾಯತು ಕಚೇರಿಯ ಗುಮಾಸ್ತರವರಿಗೆ ದಿನಾಂಕ: 02-02-2023 ರಂದು ಬೆಳಿಗ್ಗೆ 10-00 ಸುಮಾರಿಗೆ ಸಾರ್ವಜನಿಕರೊಬ್ಬರು ದೂರವಾಣಿ ಕರೆಮಾಡಿ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಚಾರ್ಮಾಡಿ ರಸ್ತೆಯ ಗುರಿಪಳ್ಳ ಕ್ರಾಸ್ ಬಸ್ಸು ತಂಗುದಾಣದಲ್ಲಿ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಗಂಡಸು ಮಲಗಿದ್ದಲ್ಲಿಯೇ ಮೃತಪಟ್ಟಿರುತ್ತಾರೆ ಎಂಬುದಾಗಿ ನೀಡಿದ ಮಾಹಿತಿಯಂತೆ ಪಿರ್ಯಾಧಿದಾರರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ನೋಡಿದ್ದಲ್ಲಿ ಅಪರಿಚಿತ ವ್ಯಕ್ತಿಯಾಗಿದ್ದು, ಮೃತನು ಯಾವುದೋ ಊರಿಂದ ಕೆಲಸ ಹುಡುತ್ತಾ ಬಂದು ಉಜಿರೆ ಪರಿಸರದಲ್ಲಿ ಬಿಕ್ಷೆ ಬೇಡುತ್ತಾ ಅದರಿಂದ ಬಂದ ಹಣದಿಂದ ಅಮಲು ಪದಾರ್ಥ ಸೇವನೆ ಮಾಡಿಕೊಂಡು ತಿರುಗಾಡುತ್ತಿದ್ದವನು ಯಾವುದೋ ಖಾಯಲೆ ಅಥವಾ ವಿಪರೀತ ಅಮಲು ಪದಾರ್ಥ ಸೇವನೆಯಿಂದ ದಿನಾಂಕ: 01-02-2023 ರಂದು ರಾತ್ರಿ 9-00 ಗಂಟೆಯಿಂದ ಈ ದಿನ ದಿನಾಂಕ: 02-02-2023 ರಂದು ಬೆಳಿಗ್ಗೆ 10-00 ಗಂಟೆಯ ಮಧ್ಯ ಸಮಯದಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟಿರಬಹುದಾಗಿದೆ.ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 08/2023 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಾಸುದೇವ ಪ್ರಾಯ 49 ವರ್ಷ ತಂದೆ: ಕುಂಞಿಕಣ್ಣ, ವಾಸ: ಅರ್ಭಡ್ಕ ಮನೆ, ಜಾಲ್ಸೂರು ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರ ತಮ್ಮ ನಾರಾಯಣ ಪ್ರಾಯ 39 ವರ್ಷ ಎಂಬವರು ಕಳೆದ 20 ವರ್ಷಗಳಿಂದ ವಿಪರೀತ ಮದ್ಯ ಸೇವನೆ ಚಟವನ್ನು ಹೊಂದಿದ್ದು, ಅಲ್ಲದೇ ಕಳೆದ ಏಳೆಂಟು ವರ್ಷಗಳಿಂದ ಮೂರ್ಛೆ ಖಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಔಷಧಿಯನ್ನು ಮಾಡಿಸಿಕೊಂಡಿದ್ದರು. ನಾರಾಯಣರವರು ಕಳೆದ 4-5 ತಿಂಗಳಿಂದ ಮನೆಗೆ ಬಾರದೇ ಇದ್ದು ಸುಳ್ಯ ಪರಿಸರದಲ್ಲಿ ಕೆಲಸ ಮಾಡಿಕೊಂಡು ತಿರುಗಾಡಿಕೊಂಡಿದ್ದವರು, ದಿನಾಂಕ 02-02-2023 ರಂದು ಬೆಳಿಗ್ಗೆ ಸಮಯ ಪರಿಚಯದ ರುಕ್ಮಯ ಎಂಬವರು ಪಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ ನಾರಾಯಣನು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಹಳೆ ಬಸ್‌ ಸ್ಯಾಂಡ್‌ ಬದಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದುಕೊಂಡಿದ್ದವನನ್ನು ಚಿಕಿತ್ಸೆಯ ಬಗ್ಗೆ  ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಸುಳ್ಯ ಸರಕಾರಿ ಆಸ್ಪತ್ರೆಗೆ ಹೋದಲ್ಲಿ ವೈದ್ಯರು ನಾರಾಯಣನನ್ನು ಪರೀಕ್ಷಿಸಿ ಬೆಳಿಗ್ಗೆ 09-10 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಯುಡಿಆರ್‌ ನಂಬ್ರ 10/2023 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿನಯ ಪ್ರಾಯ 28 ವರ್ಷ, ತಂದೆ: ಕುಡ್ಪ ಮುಗೇರ,ವಾಸ:ಕಿನ್ಯಡ್ಕಮನೆ, ಗೋಳಿತ್ತೊಟ್ಟು ಗ್ರಾಮ  ಕಡಬ ಎಂಬವರ ದೂರಿನಂತೆ ಪಿರ್ಯಾದಿದಾರರಾದ ವಿನಯ ಎಂಬವರ ತಂದೆ ಕುಡ್ಪ ಮುಗೇರ  ಪ್ರಾಯ 70 ವರ್ಷ ತಂದೆ, ದಿ, ಕಾಳ ಮುಗೇರ ಎಂಬವರು ಕೂಲಿ ಕೆಲಸ ಮಾಡುತ್ತಿದ್ದು ದಿನಾಂಕ 02.02.2023 ರಂದು ಮಧ್ಯಾಹ್ನದ ಬಳಿಕ  ಅವರ  ಮನೆ ಸಮೀಪದ ಮುರಿಯೇಳ್ ಎಂಬಲ್ಲಿಯ ಯಾದವ ಎಂಬವರ ಮನೆಗೆ ಮರದ ಗೆಲ್ಲು ಕಡಿಯಿಲೆಂದು ಹೋಗಿದ್ದು ಅಲ್ಲಿ ಸಂಜೆ 4.30 ಗಂಟೆಯ ವೇಳೆಗೆ  ಮರ ಏರಿ  ಮರದ ಗೆಲ್ಲು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಕೈ ಜಾರಿ ಮರದಿಂದ ಕೆಳಗೆ ಬಿದ್ದು ತೀವೃ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ  ಕೊಂಡುಹೋದಲ್ಲಿ ವೈದ್ಯರು ಕುಡ್ಪ ಮುಗೇರರವರನ್ನು ಪರೀಕ್ಷಿಸಿ  ಮೃತ ಪಟ್ಟಿರುವುದಾಗಿ ತಿಳಿಸಿದ್ದು.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 10/2023 ಕಲಂ:174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-02-2023 10:15 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080