Feedback / Suggestions

ಅಪಘಾತ ಪ್ರಕರಣ: ೦3

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದಾಮೋದರ (50) ತಂದೆ: ದಿ|| ಕೂಸ ಪೂಜಾರಿ ವಾಸ: ಕಂಬಳದೋಡಿ ಮನೆ, ಮಾವಿನಕಟ್ಟೆ ಅಂಚೆ, ಕುಕ್ಕಿಪಾಡಿ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 01-06-2022 ರಂದು ಪಿರ್ಯಾದಿದಾರರ ಮಗಳಾದ ನಮ್ರತಾರವರು KA-19-EU-0153 ನೇ ಸ್ಕೂಟರಿನಲ್ಲಿ ಸಿದ್ದಕಟ್ಟೆ ಕಡೆಗೆ ಹೋಗುತ್ತಾ ಸಮಯ ಸುಮಾರು 19:30 ಗಂಟೆಗೆ ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಎಂಬಲ್ಲಿಗೆ ತಲುಪಿದಾಗ ಮೂಡಬಿದ್ರೆ ಕಡೆಯಿಂದ KA-19-ML-0498 ನೇ ಕಾರನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಬಂದು ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ನಮ್ರತಾಳು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲಭುಜ, ಬಲಕೈ, ಬಲತೊಡೆ, ಬಲಸೊಂಟಕ್ಕೆ ಗುದ್ದಿದ ಹಾಗೂ ರಕ್ತ ಗಾಯವಾಗಿದ್ದವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 64/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕು. ವೈಭವಿ ಎಮ್ ವಿ ಪ್ರಾಯ 12 ವರ್ಷ ತಂದೆ: ವಾಸುದೇವ ಪೈ ಎಮ್ ವಾಸ: ಟೆಲಿಪೋನು ಎಕ್ಸ್ಜಂಜ್ ಬಳಿ ಮನೆ ಮಾಣಿ ಗ್ರಾಮ ಬಂಟ್ವಾಳ ತಾಲೂಕು  ಎಂಬವರ ದೂರಿನಂತೆ ಪುತ್ತೂರಿನ ತೆಂಕಿಲ ವಿವೇಕಾನಂದ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ 8 ನೇ ತರಗತಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದು     ದಿನಾಂಕ: 01.06.2022 ರಂದು ಶಾಲೆ ಮುಗಿಸಿ ಮನೆಗೆ ಬರುವ ಸಮಯ ಸುಮಾರು 16.45 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಪೇಟೆಯಲ್ಲಿ ಶಾಲಾ ವಾಹನದಿಂದ ಇಳಿದು ರಸ್ತೆಯ ಬದಿಯಲ್ಲಿ ನೆಡೆದುಕೊಂಡು ಹೋಗುತ್ತಿರುವ ಸಮಯ ಮಂಗಳೂರು ಕಡೆಯಿಂದ ಪುತ್ತೂರು ಕಡೆಗೆ ಮಾಣಿ ಮೈಸೂರು ರಾ.ಹೆದ್ದಾರಿಯಲ್ಲಿ ಒಂದು ಕಾರನ್ನು ಅದರ ಚಾಲಕ  ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಾಲಯಿಸಿಕೊಂಡು ರಸ್ತೆಯ ಬದಿಗೆ ಬಂದು ಪಿರ್ಯಾದಿದಾರರಿಗೆ ಅಪಘಾತ ಪಡಿಸಿದ ಪರಿಣಾಮ ಪಿರ್ಯಾದಿದಾರರು ಚರಂಡಿಗೆ ಎಸೆಯಲ್ಪಟ್ಟು ಪಿರ್ಯಾದಿದಾರರಿಗೆ ಎಡ ಕಣ್ಣಿನ ಬಳಿಯಲ್ಲಿ ತರಚಿದ ತರಹದ ಗಾಯವಾದವರನ್ನು  ಅಲ್ಲೇ ಇದ್ದವರು ಉಪಚರಿಸಿದ್ದು ವಿಷಯ ತಿಳಿದ ಪಿರ್ಯಾದಿದಾರರ ತಂದೆಯವರು ಬಂದು  ಒಂದು ಕಾರಿನಲ್ಲಿ ಪುತ್ತೂರು ಸಿಟಿ  ಆಸ್ಪತ್ರೆಗೆ ಕರೆದುಕೊಂಡು ಹೋಗಾದ ವೈಧ್ಯರು ಪರೀಕ್ಷೀಸಿ ಪಿರ್ಯಾದಿದಾರರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 86/2022  ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಸುಬ್ರಹ್ಮಣ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ  ಯತೀನ್.ಬಿ, ಪ್ರಾಯ: 22 ವರ್ಷ, .   ತಂದೆ: ತೀರ್ಥರಾಮ, ವಾಸ: ಬಾಳೆತೋಟ ಮನೆ, ನೆಲ್ಲೂರು ಕೆಮ್ರಾಜೆ ಅಂಚೆ, ದೇವಚಳ್ಳ  ಗ್ರಾಮ, ಸುಳ್ಯ ತಾಲೂಕು, ಎಂಬವರ ದೂರಿನಂತೆ ಸುಳ್ಯ ತಾಲೂಕು ದೇವಚಳ್ಳ ಗ್ರಾಮ ಬಾಳೆತೋಟ ಎಂಬಲ್ಲಿ ವಾಸವಾಗಿದ್ದು, ಲೋಡರ್ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ: 01-06-2022 ರಂದು ಗುತ್ತಿಗಾರಿನಲ್ಲಿ ಕೆಲಸ ಮುಗಿಸಿಕೊಂಡು ಚೇತನ್ ಎಂಬವರೊಂದಿಗೆ ದುರ್ಗೇಶ್ ಎಂಬವರ ಪಿಕ್ ಅಪ್ ನಲ್ಲಿ ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಮಾವಿನಕಟ್ಟೆ ಎಂಬಲ್ಲಿಗೆ ಬಂದು, ಬಳಿಕ ಅಲ್ಲಿಂದ ಮನೆ ಕಡೆಗೆ ಹೋಗುತ್ತಿರುವ ಸಮಯ ರಾತ್ರಿ ಸುಮಾರು 7:45 ಗಂಟೆಗೆ ಡಾಮಾರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ  ಹಿಂಬದಿಯಿಂದ ಅಂದರೆ ಗುತ್ತಿಗಾರು ಕಡೆಯಿಂದ ಯಾವುದೋ ಒಂದು ದ್ವಿಚಕ್ರ ವಾಹನವು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಡಾಮಾರು ರಸ್ತೆಗೆ ಬಿದ್ದು, ಪಿರ್ಯಾದಿದಾರರ ಕತ್ತಿನ ಹಿಂಭಾಗಕ್ಕೆ ಗುದ್ದಿದ ಗಾಯವಾಗಿದ್ದು, ಬಳಿಕ ಅಲ್ಲಿಯೇ ನಡೆದುಕೊಂಡು ಹೋಗುತ್ತಿದ್ದ ಚೇತನ್ ರವರು ಪಿರ್ಯಾದಿದಾರರನ್ನು ಉಪಚರಿಸಿ ಬಳಿಕ ದುರ್ಗೇಶ್ ಎಂಬವರನ್ನು ಕರೆಯಿಸಿ ಚಿಕಿತ್ಸೆ ಬಗ್ಗೆ ಅವರ ಕಾರಿನಲ್ಲಿ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪಿರ್ಯಾದಿದಾರರನ್ನು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಸುಬ್ರಹ್ಮಣ್ಯ ಠಾಣಾ ಅ.ಕ್ರ   ನಂಬ್ರ  : 60/2022 ಕಲಂ:   279, 337 ಐಪಿಸಿ      ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: ೦1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಝರೀನಾ ಬಾನು ಪ್ರಾಯ 39 ವರ್ಷ ಗಂಡ: ಮೊಹಿದ್ದೀನ್ ಶರೀಫ ಬೆಂದೂರ ವೆಲ್ ಮಂಗಳೂರು ಎಂಬವರ ದೂರಿನಂತೆ ದಿನಾಂಕ: 02-06-2022 ರಂದು ಪಿರ್ಯಾಧಿದಾರರು ಗಂಡ, ಮಕ್ಕಳು ಹಾಗೂ ಅತ್ತೆ ಜೊತೆಯಲ್ಲಿ  ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನೆಹರೂ ನಗರ ಎಂಬಲ್ಲಿರುವ ಸಾಗರ ಆಡಿಟೋರಿಯಂಗೆ ಮದುವೆ ಕಾರ್ಯಕ್ರಮಕ್ಕೆ ಬೆಳಿಗ್ಗೆ 11.45 ಗಂಟೆಗೆ ಬಂದಿದ್ದು, ಪಿರ್ಯಾಧಿದಾರರು ಸದ್ರಿ ಆಡಿಟೋರಿಯಂನ ಒಂದನೇ ಮಹಡಿಯಲ್ಲಿರುವ ಮದುಮಗಳ ಡ್ರೆಸ್ಸಿಂಗ್ ರೂಮ್ ಗೆ ಹೋಗಿ ವ್ಯಾನಿಟಿ ಹ್ಯಾಂಡ್ ಬ್ಯಾಗನಲ್ಲಿ ತಂದಿರುವ ಬಂಗಾರದ ಒಡವೆಗಳನ್ನು ಧರಿಸಿಕೊಳ್ಳಲು ಸಿದ್ದತೆ ಮಾಡಿ. ವ್ಯಾನಿಟಿ ಹ್ಯಾಂಡ್ ಬ್ಯಾಗಿನಿಂದ ಬಾಚಣಿಕೆ ತಗೆದು ತಲೆ ಬಾಜಿಕೊಂಡು ನಂತರ ಸದ್ರಿ ಬ್ಯಾಗನಲ್ಲಿ ಇಟ್ಟುಕೊಂಡು ಬಂದಿದ್ದ ಕೆಂಪು ಮತ್ತು ಹಸಿರು ಕಲ್ಲು ಅಳವಡಿಸಿದ ಹಾಗೂ ಪದಕ ಇರುವ ಆಂಟ್ಯಿಕ್ ಬಂಗಾರ ನಕ್ಲೇಸ್ ತೆಗೆಯಲು ನೋಡಿದಾಗ ಅದು ಕಾಣೆಯಾಗಿದ್ದು, ಸದ್ರಿ ಡ್ರೆಸ್ಸಿಂಗ್ ರೂಮ್ ನಲ್ಲಿ ಮದುವೆಗೆ ಬಂದಿದ್ದ ಅಪರಿಚಿತ ಹೆಂಗಸು ಇದ್ದು, ತಕ್ಷಣ ಗಂಡನಿಗೆ ಮಾಹಿತಿ ನೀಡಿ ಹುಡುಕಾಡಿದಲ್ಲಿ ಬಂಗಾರ ಒಡವೆ ಸಿಕ್ಕಿರುವುದಿಲ್ಲ. ಕಾಣೆಯಾದ ಬಂಗಾರ ನಕ್ಲೇಸ್ ಸುಮಾರು 70 ಗ್ರಾಂ ಆಗಿದ್ದು, ಇದರ ಅಂದಾಜು ಬೆಲೆ 3,33,200 ರೂ (ಮೂರು ಲಕ್ಷದ ಮೂವತ್ತ ಮೂರು ಸಾವಿರದ ಎರಡು ನೂರು ರೂಪಾಯಿ) ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 58/2022  ಕಲಂ: 379  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: ೦1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಜಿತ್ ಕುಮಾರ ಕೆ, ನ್ಯೂಸ್ 18 ಕನ್ನಡ ಟಿವಿ ವರದಿಗಾರರು ಇವರ ದೂರಿನಂತೆ ದಿನಾಂಕ: 02-06-2022 ರಂದು 11.30 ಗಂಟೆಯ ಸಮಯಕ್ಕೆ ಪ್ರಕರಣದ ಪಿರ್ಯಾದಿದಾರರು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಸಂಘರ್ಷ ಉಂಟಾದ ಬಗ್ಗೆ ಮಾಹಿತಿ ಬಂದ ಮೇರೆಗೆ ಪ್ರಾಂಶುಪಾಲರನ್ನು ಬೇಟಿಯಾಗಿ ಮಾಹಿತಿ ಪಡೆದುಕೊಂಡು ಹಿಂತಿರುಗುವ ಸಮಯ ಸುಮಾರು 25 ವಿದ್ಯಾರ್ಥಿಗಳ ಗುಂಪು ಪಿರ್ಯಾದುದಾರರನ್ನು ಸುತ್ತುವರಿದು ತಲ್ಲಾಟ ನಡೆಸಿ ಹಲ್ಲೆ ನಡೆಸುತ್ತಾ ಕಾಲೇಜಿನ ಕ್ಯಾಂಪಸ್ ನಲ್ಲಿ ದಿಗ್ಬಂಧನ ವಿಧಿಸಿ, ಈ ವಿಚಾರವನ್ನು ಹೊರಗಡೆ ಯಾರಿಗಾದರೂ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ ಎಂಬುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 68/2022 ಕಲಂ: 143,323,342,506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: ೦3

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಶಾಂತ್ ಶೆಟ್ಟಿ ಪ್ರಭಾರ ಆಹಾರ ನಿರೀಕ್ಷಕರು ಹಾಗೂ ಪ್ರಬಾರ ಕಂದಾಯ ನಿರೀಕ್ಷಕರು ವಿಟ್ಲ ಕಸಬಾ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 02.06.2022 ರಂದು ಪೂರ್ವಾಹ್ನ 08.00 ಗಂಟೆಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ತಾಲೂಕು ವಿಟ್ಲ ಹೋಬಳಿಯ ಬೋಳಂತ್ತೂರು ಗ್ರಾಮದ ಎನ್ ಸಿ ರೋಡ್ ಎಂಬಲ್ಲಿ ನಾರ್ಶ ದಿಂದ ಬೋಳಂತ್ತೂರು ಕಡೆಗೆ ಹೋಗುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸರಕು ಹೇರಿಕೊಂಡು ಸಾಗುತ್ತಿದ್ದ ಲಾರಿ(TATA ALTRA T-16) ನಂಬ್ರ ಕೆಎ-12-ಸಿ-0101 ನೇ ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಸರಕಾರದಿಂದ ಸಾರ್ವಜನಿಕರಿಗೆ ವಿತರಿಸಲ್ಪಟ್ಟ ಉಚಿತ ಪಡಿತರ ಅಕ್ಕಿಗಳುಳ್ಳ 313 ಚೀಲಗಳನ್ನು ಅಕ್ರಮವಾಗಿ ಯಾವುದೇ ದಾಖಲಾತಿಗಳಿಲ್ಲದೇ ಸಾಗಾಟ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಲಾರಿಯ ಚಾಲಕರಾದ ಚಂದ್ರೇಶ್ ರವರಲ್ಲಿ ಈ ಬಗ್ಗೆ ವಿಚಾರಿಸಿದಾಗ ವಿಟ್ಲ ಹೋಬಳಿಯ ಬೋಳಂತ್ತೂರು ಗ್ರಾಮದ ನ್ಯಾಯಾಬೆಲೆ ಅಂಗಡಿ ಸಂಖ್ಯೆ 68 (ಅಬೂಬಕ್ಕರ್ ಬಿ ಕಲ್ಪನೆ ಮನೆ ಬೋಳಂತ್ತೂರು ಗ್ರಾಮ ) ರವರಿಂದ 235 ಅಕ್ಕಿ ಚೀಲಗಳನ್ನು ಹಾಗೂ ಅಂಗಡಿ ಸಂಖ್ಯೆ 105 (ಹಮೀದ್ ನಾರ್ಶ್‌ ಕೋಲ್ನಾಡು) ರವರಿಂದ 78 ಅಕ್ಕಿ ಚೀಲಗಳನ್ನು ಪಡೆದುಕೊಂಡು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದು ಎಲ್ಲಿಗೆ ಮಾರಾಟ ಮಾಡುತ್ತಿರುವುದಾಗಿ ಪಿರ್ಯಾದಿದಾರರು ಪ್ರಶ್ನಿಸಿದಾಗ ಸಮರ್ಪಕವಾದ ಉತ್ತರವನ್ನು ನೀಡಿರುವುದಿಲ್ಲ ಈ ಬಗ್ಗೆ ಯಾವುದೇ  ದಾಖಲೆಗಳು ಇಲ್ಲದಿರುವುದಾಗಿ ಆರೋಪಿ ಚಂದ್ರೇಶ್ ರವರು ತಿಳಿಸಿದ್ದು ಆದುದರಿಂದ ಅಕ್ರಮವಾಗಿ ಉಚಿತ ಪಡಿತರ ಅಕ್ಕಿ ಚೀಲಗಳನ್ನು ಅನ್ಯರಿಗೆ ಮಾರಾಟ ಮಾಡುತ್ತಿದ್ದ ಚಾಲಕ ಚಂದ್ರೇಶ್ ಹಾಗೂ ನ್ಯಾಯಾ ಬೆಲೆ ಅಂಗಡಿಯ ಮಾಲಿಕರಾದ 1} ಅಬೂಬಕ್ಕರ್ ಬಿ ಕಲ್ಪನೆ ಮನೆ ಬೋಳಂತ್ತೂರು ಗ್ರಾಮ ಬಂಟ್ವಾಳ ತಾಲೂಕು 2} ಹಮೀದ್ ನಾರ್ಶ್‌ ಕೋಲ್ನಾಡು ಎಂಬವರುಗಳ ವಿರುದ್ದ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 87/2022  ಕಲಂ: 3,7 ಅವಶ್ಯ ವಸ್ತುಗಳ ಕಾಯ್ದೆ -1955 ಮತ್ತು ಕಲಂ 34  ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

 

ಬೆಳ್ತಂಗಡಿ ಪೊಲೀಸ್ ಠಾಣೆ : ಬೆಳ್ತಂಗಡಿ ಪೊಲೀಸ್ ಠಾಣೆಯ ಎಎಸ್ಐ ರಾಮಯ್ಯ ಹೆಗ್ಡೆ ರವರು  ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುತ್ತಾ, ಸಮಯ ಸುಮಾರು 19.30 ಗಂಟೆಗೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆ ಬಂಟರ್ ಭವನ ಎಂಬಲ್ಲಿ ತಲುಪಿದಾಗ ರಸ್ತೆ ಬದಿಯಲ್ಲಿರುವ ಜೆ ಎಮ್ ಜೆ ಹೋಟೆಲ್ ಬದಿಯ ಸಾರ್ವಜನಿಕ ಸ್ಥಳದಲ್ಲಿ  2 ಜನ ಆರೋಪಿಗಳು ಸಂಬಂದ ಪಟ್ಟ ಇಲಾಖೆಯಿಂದ ಪರವಾಣಿಗೆ ಪಡೆಯದೇ ಮದ್ಯಪಾನ ಸೇವಿಸುತ್ತಿದ್ದದ್ದನ್ನು ಹಾಗೂ ಸೇವಿಸಲು ಅನುವು ಮಾಡಿ ಕೊಟ್ಟಿದ್ದನ್ನು ಪತ್ತೆ ಹಚ್ಚಿ ಸದರಿ ಅಮಲು ಪದಾರ್ಥ ಸಹಿತ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 36/2022 ಕಲಂ: 15(A), 32(3) KE Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ : ದಿನಾಂಕ: 02.06.2022  ರಂದು ಪುತ್ತೂರು ನಗರ ಪೊಲೀಸು ಠಾಣಾ, ಪೊಲೀಸ್ ಉಪ ನಿರೀಕ್ಷಕ ರಾಜೇಶ್  ಕೆ.ವಿ.ರವರು ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ  ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಸುಮಾರು 18.00 ಗಂಟೆಗೆ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗುಡ್ಡಕೋಡಿಯಲ್ಲಿರುವ  “ಅನುಗ್ರಹ’ ಎಂಬ ಹೆಸರಿನ ಹೊಟೇಲ್‌ ಬಳಿ ಸಾರ್ವಜನಿಕ ಸ್ದಳದಲ್ಲಿ 4 ಜನರು  ಮದ್ಯಪಾನ ಸೇವಿಸುತ್ತಿದ್ದದ್ದನ್ನು  ಪತ್ತೆ ಹಚ್ಚಿ ಸದರಿ ಅಮಲು ಪದಾರ್ಥ ಸಹಿತ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ: 43/2022 ಕಲಂ: 15(A), 32(3) KE Act   . ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: ೦2

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಯಶವಂತ ಪೈ ಪ್ರಾಯ 68 ವರ್ಷ ತಂದೆ:ದಿ|| ಮಾದವ ಪೈ ವಾಸ:ವಸಂತ ಮಾಲ್ ರಥಬೀದಿ ಉಪ್ಪಿನಂಗಡಿ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರ ಮನೆಯಾದ  ಪುತ್ತೂರು ತಾಲೂಕು ಉಪ್ಪಿನಂಗಡಿ ಕಸ್ಬಾ ಗ್ರಾಮದ ರಥಬೀದಿ ರಸ್ತೆಯ ವಸಂತ ಮಾಲ್ ಮನೆಯ ಮುಂಭಾಗ ಜಗಲಿಯಲ್ಲಿ ದಿನಾಂಕ: 02-06-2022 ರಂದು ಬೆಳಿಗ್ಗೆ 10:00 ಗಂಟೆಯಿಂದ  ಮದ್ಯಾಹ್ನ 13.15 ಗಂಟೆಯ ಮಧ್ಯೆ ಓರ್ವ ಅಪರಿಚಿತ ವ್ಯಕ್ತಿ ಅಸ್ವಸ್ಥಗೊಂಡು ಮಲಗಿದ್ದವನನ್ನು  ಹೋಗಿ ನೋಡಲಾಗಿ. ಆತನು ಯಾವುದೋ ಕಾರಣದಿಂದ ಅಶ್ವಸ್ಥರಾದವರು ಮಲಗಿದಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 10/2022 ಕಲಂ:174  ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪಿರ್ಯಾದಿದಾರರಾದ ಕೆ.ಗಿರಿಯಪ್ಪ ಪೂಜಾರಿ ಪ್ರಾಯ 55ವರ್ಷ  ತಂದೆ;- ದಿ.ಕೊರಗಪ್ಪ ಪೂಜಾರಿ  ವಾಸ; ಕೆದಿಲ ಕುಕ್ಕಾಜೆ ಮನೆ, ಕೆದಿಲ ಗ್ರಾಮ ,ಕೆದಿಲ ಅಂಚೆ, ಬಂಟ್ವಾಳ ತಾಲೂಕುರವರ ದೂರಿನಂತೆ ಅವರ  ಹೆಂಡತಿ ಶ್ರೀಮತಿ ವಾರಿಜ ಪ್ರಾಯ 50ವರ್ಷ ರವರು ಮನೆವಾರ್ತೆ ಕೆಲಸ ಮಾಡಿಕೊಂಡು ಬೀಡಿ ಕಟ್ಟುತ್ತಿದ್ದು   ದಿನಾಂಕ;- 02.06.2022ರಂದು   ಮದ್ಯಾಹ್ನ   ಮನೆಯ ಹಿಂಬದಿಯಲ್ಲಿ  ತಾತ್ಕಾಲಿಕವಾಗಿ ನಿರ್ಮಿಸಿದ ಅಡುಗೆ ಮಾಡುವ ಶೇಡ್‌ಗೆ ಹೋಗುತ್ತಿರುವ ಸಮಯ ಮನೆಯ ಹಿಂಬದಿಯಲ್ಲಿ   ಗೋಡೆಗೆ ಎರಗಿಸಿ ಇಟಿದ್ದ  ತೆಂಗಿನ ಸಿಪ್ಪೆಗಳನ್ನು  ತುಂಬಿಸಿದ  ಗೋಣಿ  ಚೀಲಕ್ಕೆ ಕೈ ಇಟ್ಟಾಗ  ವಾರಿಜರವರ ಎಡ ಕೈಯ  ಅಂಗೈಯ ಹೆಬ್ಬೆರಳಿನ ಹತ್ತಿರ  ಯಾವುದೋ ಹಾವು ಕಚ್ಚಿತೆಂದು  ಜೋರಾಗಿ ಕಿರುಚಾಡಿದಾಗ ಮನೆಯಲ್ಲಿದ್ದ ಪಿರ್ಯಾದಿದಾರರು  ಕೂಡಲೇ ಅಲ್ಲಿಗೆ ಹೋಗಿ ನೋಡಿದಾಗ ಹೆಂಡತಿಯ ಎಡ ಕೈಯ  ಅಂಗೈಯ ಹೆಬ್ಬೆರಳಿನ ಹತ್ತಿರ  ರಕ್ತ  ಬರುತ್ತಿದ್ದು  ಯಾವುದೋ ಹಾವು ಕಚ್ಚಿದಂತೆ ಕಂಡು ಬಂದಿರುತ್ತದೆ, ನಂತರ ಆಕೆಗೆ ಪ್ರಥಮ ಚಿಕಿತ್ಸೆ ನೀಡಿ ಬಳಿಕ  ಆಕೆಯನ್ನು ಚಿಕಿತ್ಸೆಯ ಬಗ್ಗೆ ಪುತ್ತೂರಿನ ನಾಟಿ ವೈದ್ಯರಾದ ಐತಾಳರಲ್ಲಿಗೆ ಒಂದು ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋದಾಗ  ಅಲ್ಲಿ ವೈದ್ಯರು  ಇಲ್ಲದೇ ಇದ್ದುದರಿಂದ   ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ಅಲ್ಲಿ ವೈದ್ಯರು ಆಕೆಯನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿ  ಹೆಚ್ಚಿನ  ಚಿಕಿತ್ಸೆಯ ಬಗ್ಗೆ   ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆತಂದಿದ್ದು ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಿಸಿದ್ದು , ಚಿಕಿತ್ಸೆಯಲ್ಲಿದ್ದ  ಸಮಯ  ಚಿಕಿತ್ಸೆ ಪಲಕಾರಿಯಾಗದೇ   ದಿನಾಂಕ;- 02.06.2022ರಂದು  ಸಂಜೆ 4.45   ಗಂಟೆಗೆ  ಶ್ರೀಮತಿ ವಾರಿಜಾರವರು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣಾ  ಯುಡಿಆರ್‌:12/2022 ಕಲಂ: 174 ಸಿ.ಆರ್.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 03-06-2022 11:56 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080