ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್ ರಝೂಕ್ ಪ್ರಾಯ: 35 ವರ್ಷ ವಾಸ: ಸತ್ಯಡ್ಕ ಮನೆ, ಬಡಾಜೆ ಗ್ರಾಮ ಮತ್ತು ಅಂಚೆ, ಮಂಜೇಶ್ವರ  ತಾಲೂಕು, ಕಾಸರಗೋಡು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 01-07-2022 ರಂದು KL-14AA-3322 ನೇ ಇರ್ಟಿಗಾ ಕಾರಿನಲ್ಲಿ ಹಾಜಿರಾ, ಮೆಹಬೂಬ, ಮುಸ್ತಾಫ್, ಮನ್ಸೂರಿಯಾ, ಆಯಿಷತ್ ಅಪ್ಸೀನಾ, ಮಹಮ್ಮದ್ ಹನೀಫ್, ಅಝೀಮ್ ರವರೊಂದಿಗೆ ಕಾರ್ಯಕ್ರಮದ ಬಗ್ಗೆ ಹಾಸನಕ್ಕೆ ಹೋದವರು ಅಲ್ಲಿಂದ ಸಂಬಂಧಿಕರ ಮನೆಯಾದ ಮೂರ್ಜೆಗೆ ಬಂದು ವಾಪಾಸು ಮನೆ ಕಡೆಗೆ ಕಡೂರು-ಬಿ.ಸಿ.ರೋಡ್ ಹೆದ್ದಾರಿಯಲ್ಲಿ ಬರುತ್ತಾ ಸಮಯ ಸುಮಾರು  23:45 ಗಂಟೆಗೆ ಬಂಟ್ವಾಳ ತಾಲೂಕು ನಾವೂರು ಗ್ರಾಮದ ಪರ್ಲಾಪು ಎಂಬಲ್ಲಿಗೆ ತಲುಪಿದಾಗ ಬಂಟ್ವಾಳ ಕಡೆಯಿಂದ KA-18-P-4710 ನೇ ಕಾರನ್ನು ಅದರ ಚಾಲಕ ರಾಕ್ಲೀನ್ ಲೋಬೋ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರರು ಚಲಾಯಿಸಿಕೊಂಡು ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿ ಅಬ್ದುಲ್ ರಝಾಕ್, ಹಾಜಿರಾ, ಮೆಹಬೂಬ , ಮುಸ್ತಾಫ್, ಮನ್ಸೂರಿಯಾ, ಆಯಿಷತ್ ಅಪ್ಸೀನಾ, ಮಹಮ್ಮದ್ ಹನೀಫ್, ಅಝೀಮ್ ರವರು ಗಾಯಗೊಂಡು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿ ರುವುದಲ್ಲದೇ ಅಪಘಾತಪಡಿಸಿದ ಕಾರು ಚಾಲಕ ರಾಕ್ಲೀನ್ ಲೋಬೋರವರು ಗಾಯಗೊಂಡು ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 74/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜುಬೈದಾ (35 )ಗಂಡ ಪಕ್ರುದ್ದೀನ್ ವಾಸ ಮುಡಿಪು ಮನೆ , ಕೈರಂಗಳ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರ ತಂದೆ ಅಬ್ಬಾಸ್‌ ಎಂಬವರು ದಿನಾಂಕ:01-07-2022 ರಂದು ಬೆಳಗ್ಗೆ ಕರೋಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಗುಂಡ ಮಜುಲು ಎಂಬಲ್ಲಿಗೆ ಹೋಗಿ ನೀರು ಬಿಟ್ಟು ವಾಪಸ್ಸು ಮನೆಯ ಕಡೆಗೆ ಅಂದರೆ ಆನೇಕಲ್ ಕಡೆಗೆ ಕನ್ಯಾನ-ಆನೇಕಲ್ ಸಾರ್ಜನಿಕ ರಸ್ತೆಯ ಬದಿಯ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಸಮಯ ಸುಮಾರು ಸಂಜೆ 4.30 ಗಂಟೆಯ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ವಿಜಯಡ್ಕ ಎಂಬಲ್ಲಿಗೆ ತಲುಪಿದಾಗ ಕನ್ಯಾನ ಕಡೆಯಿಂದ ಆನೇಕಲ್ ಕಡೆಗೆ ಕೆಎ-18-ಬಿ-3584ನೇ ಪಿಕ್ಆಪ್ ವಾಹನವನ್ನು ಅದರ ಚಾಲಕ ಶಿವಪ್ರಸಾದ್ ಎಂಬಾತನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾಧಿಯ ತಂದೆ ಅಬ್ಬಾಸ್ ರವರಿಗೆ ಹಿಂದಿನಿಂದ ಡಿಕ್ಕಿಯನುಂಟು ಮಾಡಿದ ಪರಿಣಾಮ ಅಬ್ಬಾಸ್‌ ರವರು ಡಾಮಾರು ರಸ್ತೆಗೆ ಬಿದ್ದು ತಲೆಯ ಹಿಂಬದಿ  ರಕ್ತಗಾಯವಾಗಿರುತ್ತದೆ. ಗಾಯಾಳು ಮಂಗಳೂರಿನ ದೇರಳಕಟ್ಟೆ ಯೇನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ .ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 110/2022  ಕಲಂ: 279,337 ಬಾಧಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮನೋಹರಪ್ರಾಯ: 32 ವರ್ಷ ತಂದೆ: ಕೊರಗಪ್ಪ ಪೂಜಾರಿ ವಾಸ: ಕೊಯಿಲ ಮನೆ ಮತ್ತು ಅಂಚೆ, ಕೊಯಿಲ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 02-07-2022 ರಂದು ಕೊಯಿಲದಿಂದ ಸಿದ್ದಕಟ್ಟೆ ಕಡೆಗೆ ಮೋಟಾರ್ ಸೈಕಲಿನಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 11:15 ಗಂಟೆಗೆ ಬಂಟ್ವಾಳ ತಾಲೂಕು ರಾಯಿ ಗ್ರಾಮದ ರಾಯಿ ಎಂಬಲ್ಲಿಗೆ ತಲುಪುತ್ತಿದ್ದಂತೆ ತನ್ನ ಮುಂದಿನಿಂದ ಹೋಗುತ್ತಿದ್ದ KA-70-H-3746 ನೇ ಮೋಟಾರ್ ಸೈಕಲನ್ನು ಅದರ ಸವಾರ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸಮಯ ಇದರ ಮುಂದಿನಿಂದ ಹೋಗುತ್ತಿದ್ದ KA-09-N-8764 ನೇ ಕಾರನ್ನು ಅದರ ಚಾಲಕ ರಾಮಕೃಷ್ಣ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಸೂಚನೇ ನೀಡದೇ ಒಮ್ಮೆಲೇ ಬ್ರೇಕ್ ಹಾಕಿ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಬಲಕಾಲಿನ ಮೊಣಗಂಟಿಗೆ ಗುದ್ದಿದ ಹಾಗೂ ತರಚಿದ ಗಾಯಗೊಂಡವರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 75/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶರತ್ ಬಿ,ಎಸ್ (36) ತಂದೆ: ಸುಂದರ ಗೌಡ ವಾಸ: ಬೆಳ್ಳಿಪ್ಪಾಡಿ ಮನೆ, ಸಂಪಾಜೆ ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ: 02.07.2022 ರಂದು 17:30 ಗಂಟೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಪರಿವಾರಕಾನದಲ್ಲಿರುವ ಕಾವೇರಿ ಕಾರ್ ಸರ್ವಿಸ್ ಸೆಂಟರ್ ನಲ್ಲಿರುವಾಗ ಅದರ ಎದುರು ಹಾದು ಹೋಗುವ ಮಾಣಿ –ಮೈಸೂರು ಹೆದ್ದಾರಿಯಲ್ಲಿ ಕೆಎ 01 ಡ್ಬ್ಲೂ 1664 ನೇದರ ಸ್ಕೂಟರ್ ಸವಾರ ಚಂದ್ರಶೇಖರ ಎಂಬಾತನು ಸುಳ್ಯ ಕಡೆಯಿಂದ ಮಡಿಕೇರಿ ಕಡೆಗೆ ಸ್ಕೂಟರನ್ನು ಸವಾರಿ ಮಾಡಿಕೊಂಡು ಬಂದು ಆತನ ಎಡಬದಿಗೆ ನಿಲ್ಲಿಸಿ, ಬಲಬದಿಯಲ್ಲಿರುವ ಬ್ರದರ್ ಸರ್ವಿಸ್ ಸ್ಟೇಷನ್ ಕಡೆಗೆ ಸ್ಕೂಟರನ್ನು ತಿರುಗಿಸುತ್ತಿರುವರೇ, ಸ್ಕೂಟರ್ ಹಿಂಬದಿಯಿಂದ ಬಂದ ಕಾರ ನಂಬ್ರ ಕೆಎ 18 ಎಂಎ 0632 ನೇದರ ಚಾಲಕ ವಿದ್ವತ್ ಎಂಬಾತನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಬಂದು ಸ್ಕೂಟರ್ ಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಸ್ಕೂಟರ್ ಸವಾರ ಸ್ಕೂಟರ್ ಸಮೇತ ಎಡಬದಿಯಲ್ಲಿರುವ ನೀರು ಹೊಗುವ ಕಣಿಗೆ ಬಿದ್ದವನನ್ನು ಕಂಡು ಪಿರ್ಯಾದುದಾರರು ಹಾಗೂ ಅಲೇ ಇದ್ದ ಇತರರು ಸ್ಕೂಟರ್ ಸವಾರನನ್ನು ಉಪಚರಿಸಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 79/2022 ಕಲಂ: 279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಾಣೆ ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗಿರೀಶ್‌, ಪ್ರಾಯ: 35 ವರ್ಷ, ತಂದೆ; ಲಿಂಗಪ್ಪ ಪೂಜಾರಿ ವಾಸ; ಅಡ್ಯ ಮನೆ, ಪುದುವೆಟ್ಟು ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು  ಲಾಯಿಲ ಗ್ರಾಮದಲ್ಲಿರುವ ಅಪೂರ್ವ ಹೋಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಪಿರ್ಯಾದಿದಾರರು ದಿನಾಂಕ: 30.06.2022 ರಂದು ಕೆಲಸದಲ್ಲಿದ್ದ ಸಮಯ ಪಿರ್ಯಾದಿದಾರರ ಹೆಂಡತಿ ಗೀತಾರವರು ಪಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ ಮಾವ ಲಿಂಗಪ್ಪ ಪೂಜಾರಿ (ಪ್ರಾಯ:65 ವರ್ಷ), ಎಂಬವರು ಮದ್ಯಾಹ್ನ ಸಮಯ ಸುಮಾರು 3.00 ಗಂಟೆಯ ಹೊತ್ತಿಗೆ ನಮ್ಮ‌ ಮನೆಯಾದ ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ  ಅಡ್ಯ ಎಂಬಲ್ಲಿ  ಮನೆಯ ಹತ್ತಿರ ಇರುವ ತೋಟಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ರಾತ್ರಿ ಗಂಟೆ 9 ಗಂಟೆಯಾದರೂ ಮನೆಗೆ ಬಾರದೇ ಇರುವುದಾಗಿ ತಿಳಿಸಿದ್ದು, ನಂತರ ಪಿರ್ಯಾದಿದಾರರು ಮನೆಗೆ ಬಂದು ತೋಟದಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡುಕಲಾಗಿ ಪಿರ್ಯಾದಿದಾರರ ತಂದೆ ಮನೆಗೆ ಬಾರದೇ ಪತ್ತೆಯಾಗದೇ  ಇದ್ದು.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅಕ್ರ 48/2022 ಕಲಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ವಿಟ್ಲ ಪೊಲೀಸ್ ಠಾಣೆ : ದಿನಾಂಕ: 02-07-2022 ರಂದು ಬೆಳಿಗ್ಗೆ 11.15 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಬೊಳಪಾದೆ ಎಂಬಲ್ಲಿ ಸಾಲೆತ್ತೂರು ಬೊಳಪಾದೆ ಸಾರ್ವಜನಿಕ ಡಾಮಾರು ರಸ್ತೆಯ ಬದಿಯಲ್ಲಿ ಅಟೋರಿಕ್ಷಾ ಕೆಎ-19-ಎಸಿ-1267ನೇದನ್ನು ನಿಲ್ಲಿಸಿಕೊಂಡು ಅದರ ಬಳಿ ಇದ್ದ ಆರೋಪಿಗಳಾದ ರಹಿಮಾನ,ಜಲಾಲುದ್ದೀನ್‌,ಹಾಗೂ ಅಬೂಬಕ್ಕರ್‌ @ ಫೈಝಲ್‌ರವರು ಸಂಶಯಾಸ್ಪದ ರೀತಿಯಲ್ಲಿ ನಿಂತುಕೊಂಡಿದ್ದವರನ್ನು ಮಂಜುನಾಥ ಟಿ ಪೊಲೀಸ್‌ ಉಪನಿರೀಕ್ಷಕರು (ತನಿಖೆ1) ವಿಟ್ಲ ಪೊಲೀಸ್‌ ಠಾಣೆರವರು ಠಾಣಾ ಸಿಬ್ಬಂದಿಗಳೊಂದಿಗೆ ವಿಚಾರಿಸಲು ಅವರ ಬಳಿಗೆ ಹೋದಾಗ ಪರಾರಿಯಾಗಲು ಯತ್ನಿಸಿದಾಗ ತಡೆದು ನಿಲ್ಲಿಸಿ ಅಟೋರಿಕ್ಷಾವನ್ನು ಪರಿಶೀಲಿಸಲಾಗಿ ಸುಮಾರು 1000/- ರೂ ಮೌಲ್ಯದ 100 ಗ್ರಾಂ ಮಾದಕ ವಸ್ತುವಾದ ಗಾಂಜಾ, ಸುಮಾರು 6000/- ರೂ ಮೌಲ್ಯದ ಮಾದಕ ವಸ್ತುವಾದ ಎಂಡಿಎಂಎ , ಮಾಧಕ ವಸ್ತು ಮಾರಾಟದಿಂದ ಬಂದ 610/- ರೂ, 03 ಮೊಬೈಲ್‌ ಫೋನುಗಳು ಇವುಗಳ ಮೌಲ್ಯ 10,000/- ರೂ ಹಾಗೂ ಅಟೋರಿಕ್ಷಾ ಕೆಎ-19-ಎಸಿ-1267ನೇದರ ಅಂದಾಜು ಮೌಲ್ಯ 1,00,000/- ರೂ ಆಗಬಹುದು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆ ಅ,ಕ್ರ 111/2022 ಕಲಂ: 8(c),20(b) (ii) A), 21 (A) NARCOTIC DRUGS & PSYCHOTROPIC SUBSTANCES ACT, 1985  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-07-2022 10:39 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080