ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಗಿರೀಶ್ ಕುಮಾರ್ (26) ತಂದೆ:ರಂಗಯ್ಯ ಬಿ.ಜೆ ವಾಸ:ಹೆಬ್ಬಾಗೋಡಿ ತೋಪಮ್ಮ ದೇವಸ್ಥಾನ ಬಳಿ ಗೊಲ್ಲಳ್ಳಿ ರಸ್ತೆ ಹೆಬ್ಬಗೋಡಿ ಆನೆಕಲ್ಲು ತಾಲೂಕು ಬೆಂಗಳೂರು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಗಿರೀಶ್ ಕುಮಾರ್ ಮತ್ತು ಸಂಬಂದಿ ಭರತ್ ಹಾಗೂ ಸುಮಂತ್  ಎಂಬವರು ಈ ದಿನಾಂಕ 02-08-2022  ರಂದು ಎರಡು  ಮೋಟಾರು  ಸೈಕಲ್  ನಲ್ಲಿ  ಬೆಂಗಳೂರುನಿಂದ  ಧರ್ಮಸ್ಥಳ  ದೇವಸ್ಥಾನಕ್ಕೆ  ಹೋರಟಿದ್ದು ಮೋಟಾರು ಸೈಕಲ್ ನಂಬ್ರ  KA.01.JL.1211 ನೇದರಲ್ಲಿ ಭರತ್ ಸವಾರನಾಗಿ ಪಿರ್ಯಾದಿ ಸಹಸವಾರನಾಗಿ  ಮತ್ತೋಂದು ಮೋಟಾರು ಸೈಕಲ್ ನಂಬ್ರ  KA.05.L J.4782 ನೇದರಲ್ಲಿ ಸುಮಂತ್ ಹೊರಟಿದ್ದು ಮಂಗಳೂರು –ಬೆಂಗಳೂರು  ರಾಷ್ಟ್ರೀಯ ಹೆದ್ದಾರಿ 75 ಯಲ್ಲಿ  ಬೆಂಗಳೂರು ಕಡೆಯಿಂದ  ಧರ್ಮಸ್ಥಳಕ್ಕೆ  ಬರುತ್ತಿರುವ ಸಮಯ  ಸುಮಾರು ಮದ್ಯಾಹ್ನ 2.00 ಗಂಟೆಗೆ ಕಡಬ ತಾಲೂಕು ಶಿರಾಡಿ ಗ್ರಾಮದ  ಅಡ್ಡಹೊಳೆ ತಿರುವು ರಸ್ತೆ ತಲುಪಿದಾಗ  ಎದುರು ಕಡೆಯಿಂದ ಅಂದರೆ ಮಂಗಳೂರು ಕಡೆಯಿಂದ ಚಾಲಕ ರಾಜೇಶ್  ಕಾರು ನಂಬ್ರ KA.02.MA.7850 ನೇದನ್ನು   ನಿರ್ಲಕ್ಷ  ಹಾಗೂ  ಅಜಾಗರೂಕತೆಯಿಂದ ರಸ್ತೆ ತೀರ ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸಹಸವಾರನಾಗಿ ಭರತ್ ಸವಾರನಾಗಿ ಹೋಗುತ್ತಿದ್ದ  ಮೋಟಾರು ಸೈಕಲ್ ನಂಬ್ರ  KA.01.JL.1211 ನೇದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಸಣ್ಣಪುಟ್ಟ ತರಚಿದ ಗಾಯ ಸವಾರ ಭರತ್ ರವರಿಗೆ  ಬಲ ಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ ಬಲ ಅಂಗೈ ಬಳಿ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 84/2022 ಕಲಂ:  279,338 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಧೀರನ್‌ ದಿಲೀಪ್‌ ಷಾ ಪ್ರಾಯ: 42 ವರ್ಷ, ತಂದೆ: ದಿಲೀಪ್‌ ಷಾ, ವಾಸ: ರಿದ್ದಿ ಸಿದ್ದಿ ಲಾಜಿಸ್ಟಿಕ್ಸ್, ಮುಕ್ರಂಪಾಡಿ ಇಂಡಸ್ಟ್ರೀಯಲ್‌‌ ಏರಿಯಾ, ಕೆಮ್ಮಿಂಜೆ ಗ್ರಾಮ, ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿದಾರರು ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಇಂಡಸ್ಟ್ರೀಯಲ್‌ ಏರಿಯಾದಲ್ಲಿ ರಿದ್ದಿ ಸಿದ್ದಿ ಲಾಜಿಸ್ಟಿಕ್‌ ಎಂಬ ಸಂಸ್ಥೆಯನ್ನು ಹೊಂದಿದ್ದು, ಸದ್ರಿ ಸಂಸ್ಥೆಯಿಂದ ಪುತ್ತೂರಿನ ವ್ಯಾಪಾರಿಗಳ ಅಡಿಕೆಯನ್ನು ಗುಜರಾತ್‌ ಹಾಗೂ ಇತರ ಕಡೆಗಳಿಗೆ ಸಾಗಾಣಿಕೆ ಮಾಡುತ್ತಿದ್ದು, ಸದ್ರಿ ಸಂಸ್ಥೆಯಲ್ಲಿ ಮಹೇಶ್ ಎಂಬವರು ಮೆನೇಜರ್‌ ಆಗಿರುತ್ತಾರೆ. ದಿನಾಂಕ 27.07.2022 ರಂದು ಸಂಜೆ 4.30 ಗಂಟೆಯಿಂದ ದಿನಾಂಕ 28.07.2022 ರ ಬೆಳಿಗ್ಗೆ 9.05 ಗಂಟೆಯ ಮಧ್ಯ ಅವಧಿಯಲ್ಲಿ ಸಂಸ್ಥೆಯ ಗೋಡೌನ್‌ನಿಂದ ತಲಾ 65 ಕೆಜಿ ತೂಕದ 4 ಚೀಲ ಅಡಿಕೆ ಕಾಣೆಯಾಗಿದ್ದು, ಹಾಗೂ ದಿನಾಂಕ 30.07.2022 ರ ರಾತ್ರಿ 11.30 ರಿಂದ ದಿನಾಂಕ 01.08.2022 ರ ಬೆಳಿಗ್ಗೆ 9.00 ಗಂಟೆಯ ಮಧ್ಯೆ ಪುನಃ ತಲಾ 65 ಕೆಜಿ ತೂಕದ 5 ಚೀಲ ಅಡಿಕೆ ಕಾಣೆಯಾಗಿರುವುದಾಗಿ ಮಹೇಶ್‌ರವರು ಪಿರ್ಯಾದಿದಾರರಿಗೆ ದೂರವಾಣಿ ಮುಖೇನ ತಿಳಿಸಿರುತ್ತಾರೆ. ಅಡಿಕೆ ಕಾಣೆಯಾಗುವ ಸಮಯ  ಗೋಡೌನ್‌ಗೆ  ಬೀಗ ಹಾಕಿದ್ದು , ಕಟ್ಟಡಕ್ಕೆ ಹಾನಿ ಯಾ ಬೀಗವನ್ನು ಒಡೆದಿರುವುದು ಕಂಡು ಬಂದಿರುವುದಿಲ್ಲ.ಕಳ್ಳತನವಾದ 9 ಚೀಲ ಅಡಿಕೆಯ ಅಂದಾಜು ಮೌಲ್ಯ ರೂ 2,00,000/- ಆಗಬಹುದು.

 

 

ಇತರೆ ಪ್ರಕರಣ: 1

  • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪ್ರಕರಣದ ಸಂತ್ರಸ್ಥ ಯುವತಿಯು ಬಾಡಿಗೆ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಾಗಿದ್ದು, ದಿನಾಂಕ: 20-05-2022 ರಂದು ಶನಿವಾರ ರಾತ್ರಿ 10:00 ಗಂಟೆಗೆ ಆರೋಪಿ ಪವನ್ ಎಂಬಾತನು ಮದ್ಯಪಾನ ಮಾಡಿಕೊಂಡು ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರನ್ನು ಅತ್ಯಾಚಾರ ಮಾಡಿದ್ದು, ಈ ವಿಷಯವನ್ನು ಪೊಲೀಸ್ ಠಾಣೆಗೆ ತಿಳಿಸುತ್ತೇನೆ ಎಂದು ಪಿರ್ಯಾದಿದಾರರು ಹೇಳಿದಾಗ ಪವನ್ ನು ನಿನ್ನನ್ನು ಮದುವೆಯಾಗುತ್ತೇನೆ ಕಂಪ್ಲೇಟ್ ಮಾಡಬೇಡ ಎಂದು ಹೇಳಿ ನಂತರ ಲಾಯರ್ ಮುಖಾಂತರ ವೀಲಿನಲ್ಲಿ ಒಪ್ಪಿಗೆ ನೀಡಿದ್ದು, ನಂತರ ಪಿರ್ಯಾದಿದಾರರಲ್ಲಿ 1,70,000/- ರೂ ವನ್ನು ಪಡೆದುಕೊಂಡಿದ್ದು, ಇದೀಗ ಪಿರ್ಯಾದಿದಾರರನ್ನು ಮದುವೆಯಾಗುವುದಿಲ್ಲ. ಎಂದು ಹೇಳಿ ವಂಚನೆ ಮಾಡಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ  ಪೊಲೀಸ್ ಠಾಣೆ  ಅ.ಕ್ರ ನಂಬ್ರ 80/2022 ಕಲಂ:376,417  IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕುಸುಮಾಧರ, ಪ್ರಾಯ 41  ವರ್ಷ,  ತಂದೆ: ಬೊಮ್ಮಣ್ಣ ಗೌಡ,  ವಾಸ: ಅಲ್ಪೆ ಕರಿಮಜಲು, ಐವತ್ತೊಕ್ಲು   ಗ್ರಾಮ, ಸುಳ್ಯ ಎಂಬವರ ದೂರಿನಂತೆ ದಿನಾಂಕ: 01-08-2022 ರಂದು ಪಿರ್ಯಾದಿದಾರರು ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ಎಂಬಲ್ಲಿ ಪಂಚಾಯತ್ ಕಟ್ಟಡವೊಂದರಲ್ಲಿ ಅಂಗಡಿ ಇಟ್ಟುಕೊಂಡಿದ್ದು, ಅಂಗಡಿಯಲ್ಲಿರುವಾಗ ಪಿರ್ಯಾದಿದಾರರಿಗೆ ಅವರ ಪತ್ನಿ ರೂಪಶ್ರೀ ದೂರವಾಣಿ ಕರೆಮಾಡಿ ಮಳೆಯು ಜೋರಾಗಿ ಸುರಿಯುತ್ತಿದ್ದುದರಿಂದ ಪರ್ವತಮುಖಿಯಲ್ಲಿರುವ, ಮನೆಯ ಹಿಂಬದಿಯಲ್ಲಿರುವ ಸುಮಾರು 25 ಅಡಿ ಎತ್ತರದ ಧರೆಯು ರಾತ್ರಿ 8-00 ಗಂಟೆಗೆ  ಮನೆಯ ಮೇಲೆ ಕುಸಿದು ಬಿದ್ದಿದ್ದು, ಆ ಸಮಯ ನಾನು, ಸಣ್ಣ ಮಗುವನ್ನು ಮತ್ತು ಅತ್ತೆಯು ಕೂಡಾ ಹೊರಗೆ ಓಡಿ ಬಂದಿದ್ದು, ಇಬ್ಬರು ಮಕ್ಕಳು ಮನೆಯೊಳಗಡೆಯೇ ಉಳಿದುಕೊಂಡಿದ್ದು, ಅವರು ಗುಡ್ಡ ಕುಸಿತದ ಮಣ್ಣಿನೊಳಗೆ ಸಿಲುಕಿಕೊಂಡಿರುವುದಾಗಿ ತಿಳಿಸಿದ್ದು, ಕೂಡಲೇ ಪಿರ್ಯಾದಿದಾರರು, ನೆರೆಕರೆಯವರು  ಹಾಗೂ ಎಲ್ಲಾ ಸಾರ್ವಜನಿಕರು ಓಡಿ ಬಂದು ಜೆಸಿಬಿಯನ್ನು ತರಿಸಿ ಮನೆಯ ಮೇಲೆ ಕುಸಿದು ಬಿದ್ದಿದ್ದ ಮಣ್ಣನ್ನು ತೆಗೆದು ನೋಡಲಾಗಿ ಇಬ್ಬರು ಮಕ್ಕಳು ಮಣ್ಣಿನೊಳಗಿದ್ದು, ಕೂಡಲೇ  ಅವರನ್ನು ಹೊರ ತೆಗೆದು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು, ಸುಬ್ರಹ್ಮಣ್ಯ ವೈದ್ಯಾಧಿಕಾರಿಯವರು ಪರೀಕ್ಷಿಸಿ ರಾತ್ರಿ 11:45 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಬ್ರಹ್ಮಣ್ಯ ಯುಡಿಆರ್   ನಂಬ್ರ  : 14/2022 ಕಲಂ  174 ಸಿಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿಜೇತ್ ಎಂ ಪ್ರಾಯ 18 ವರ್ಷ       ತಂದೆ:ರಾಮಚಂದ್ರ ನಾಯ್ಕ ವಾಸ:ಮಣಿಮುಂಡ ಮನೆ, ಕೇಪು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ತಾಯಿ ಶ್ರೀಮತಿ ಜಯಲಕ್ಷ್ಮೀ ಪ್ರಾಯ 39 ವರ್ಷ ರವರು ಅನಾರೋಗ್ಯದಿಂದ ಹಲವು ಸಮಯದಿಂದ ಬಳಲುತ್ತಿದ್ದವರು ಮದ್ದು ಮಾಡಿದರು ಕೂಡಾ ಗುಣಮುಖರಾಗದಿದ್ದು ದಿನಾಂಕ:02-08-2022 ರಂದು ಮದ್ಯಾಹ್ನ 12.30 ಗಂಟೆಯಿಂದ 3.30 ಗಂಟೆಯ ಮದ್ಯೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಮಣಿಮುಂಡ ಎಂಬಲ್ಲಿರುವ ಪಿರ್ಯಾಧಿಯ  ಮನೆಯ ಹತ್ತಿರದ ಸುಮಾರು 100 ಮೀಟರ್ ದೂರದ ಕಾಡಿನಲ್ಲಿ ಕುಂಟಾಳ ಮರಕ್ಕೆ ಕೆಂಪು ಬಣ್ಣದ ಸೀರೆಯೊಂದರ ಒಂದು ತುದಿಯನ್ನು ಮರಕ್ಕೆ ಬಿಗಿದು ಅದರ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 31/2022  ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 03-08-2022 11:11 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080