ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್ ಜಬ್ಬಾರ್ ಪ್ರಾಯ: 32 ‍ರ್ಷ ತಂದೆ: ಹಸನಬ್ಬ ವಾಸ: 1-245 ಸುರಿಬೈಲು ಮನೆ  ಬೋಳಂತೂರು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ:02.09.2022 ರಂದು ಪಿರ್ಯಾದಿದಾರರು ತನ್ನ ಬಾಬ್ತು ಕಾರಿನಲ್ಲಿ ಕಲ್ಲಡ್ಕದಿಂದ ಬೋಳಂತೂರಿಗೆ  ಹೋಗುವರೇ  ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಕಾಡಂಗಡಿ ಎಂಬಲ್ಲಿಗೆ ಸಮಯ ಸುಮಾರು 16:15ಕ್ಕೆ ತಲುಪಿದಾಗ  ಬೋಳಂತೂರು ಕಡೆಯಿಂದ KA 70 M 2115 ನೇ ಇಕೋ ಕಾರನ್ನು ಅದರ ಚಾಲಕ ಸಿರಾಜುದ್ದೀನ್ ರವರು ಶಾಲಾ ಮಕ್ಕಳನ್ನು ಇಳಿಸಿ ರಸ್ತೆ ದಾಟುವ ಮೊದಲೇ ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿದ ಪರಿಣಾಮ ಕಾರು  ಪಿರ್ಯಾದಿದಾರರ  ತಮ್ಮನ ಮಗ ಮಹಮ್ಮದ್ ಅಬ್ದುಲ್ ಖಾದಿರಿ ಹಾದಿ ರವರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ  ಪಿರ್ಯಾದಿದಾರರ ತಮ್ಮನ ಮಗ ಮಹಮ್ಮದ್ ಅಬ್ದುಲ್ ಖಾದಿರಿ ಹಾದಿರವರಿಗೆ ತಲೆಗೆ  ಗುದ್ದಿದ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಮಗು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 98/2022 ಕಲಂ: 279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಮ್ಲ, ಪ್ರಾಯ: 62 ವರ್ಷ ತಂದೆ: ದಿ| ಫಕ್ರದ್ದೀನ್ @ ಪುತ್ತು ಬ್ಯಾರಿ ವಾಸ:ಅರಂತಬೈಲು ಮನೆ ಗೋಳಿತೊಟ್ಟು ಗ್ರಾಮ, ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ: 01-09-2022  ರಂದು ವಿಸಿಟಿಂಗ್  ವಿಸಾ ವಿದೇಶಕ್ಕೆ ಹೋಗಿದ್ದ ಮಗ ಅಬ್ದುಲ್ ಅಜೀಜ್ ವಾಪಾಸು ಮಂಗಳೂರು ಏರ್ ಪೋರ್ಟ್ ಬರುತ್ತಿದ್ದಕರೆದುಕೊಂಡು ಬರಲು ನಾನು ಮತ್ತು ಪತ್ನಿ ಸಂಬಂಧಿಕರಾದ ಆರೀಸ್ ಎಂಬವರ ಕಾರಿನಲ್ಲಿ ಸಂಜೆ 7.00 ಗಂಟೆಯ ಸಮಯಕ್ಕೆ ಮನೆಗೆ ಹಾಕಿ ವಿದ್ಯುತ್ ಲೈಟ್ ಹಾಕಿ  ಮನೆಯಿಂದ ಹೊರಟು ಹೋಗಿರುತ್ತೇವೆ. ಮಂಗಳೂರಿನಿಂದ ವಾಪಾಸು ದಿನಾಂಕ: 02-09-2022 ರಂದು 01.45 ಗಂಟೆಯ ಸಮಯಕ್ಕೆ ಮಗನನ್ನು ಕರೆದುಕೊಂಡು ಮನೆಗೆ ಬಂದಾಗ ಮನೆಯ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಬಾಗಿಲು ತೆರೆದಿರುವುದು ಕಂಡುಬಂದಿರುತ್ತದೆ. ಒಳಗೆ ಹೋಗಿ ನೋಡಲಾಗಿ ಎರಡು ಕಪಾಟುಗಳು ತೆರೆದುಕೊಂಡಿದ್ದು, ನೋಡಲಾಗಿ ಕಪಾಟಿನ ಒಳಗೆ ಪರ್ಸ್ ನಲ್ಲಿ  ಇರಿಸಿದ್ದ ಒಟ್ಟು ಸುಮಾರು 105 ಗ್ರಾಂ  ಮತ್ತು ಕಪಾಟಿನಲ್ಲಿದ್ದ  ನಗದು ಹಣ  ರೂ 8000/-  ಚಿನ್ನಾಭರಣಗಳು ಹಾಗೂ ನಗದು ಹಣ ಕಳವು ಆಗಿದ್ದು, ಇದರ ಒಟ್ಟು ಅಂದಾಜು ಮೌಲ್ಯ ರೂ. 5,33,000/- ಆಗಬಹುದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ  ಅ.ಕ್ರ 94/2022 ಕಲಂ:457 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನಾಗೇಶ ಜಿ ಪ್ರಾಯ 37 ವರ್ಷ, ತಂದೆ: ಸುಂದರ ನಾಯ್ಕ, ವಾಸ: ಗಂಡಿತ್ತಡ್ಕ ಮನೆ, ಎಡಮಂಗಲ ಗ್ರಾಮ ಮತ್ತು ಅಂಚೆ, ಕಡಬ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರಾದ ನಾಗೇಶ ಜಿ ರವರಿಗೂ ಮತ್ತು ಆರೋಪಿತ ಸುಂದರ ನಾಯ್ಕ ರವರಿಗೂ ಜಾಗದ ವಿಚಾರದಲ್ಲಿ ತಕರಾರು ಇದ್ದು, ಅದೇ ದ್ವೇಷದಿಂದ ಆರೋಪಿತರು ತಕ್ಷೀರು ಮಾಡುವ ಸಮಾನ ಉದ್ದೇಶ ಹೊಂದಿ ದಿನಾಂಕ 02.09.2022 ರಂದು ಮಧ್ಯಾಹ್ನ 12-45 ಗಂಟೆಗೆ ಕಡಬ ತಾಲೂಕು ಎಡಮಂಗಲ ಗ್ರಾಮದ ಗಂಡಿತ್ತಡ್ಕ ಎಂಬಲ್ಲಿ ಫಿರ್ಯಾದಿದಾರರ ದೊಡ್ಡಪ್ಪ ಶೂದ್ರಪ್ಪ ನಾಯ್ಕ ರವರಿಗೆ ಸೇರಿದ ಜಮೀನಿನಲ್ಲಿ ಫಿರ್ಯಾದಿದಾರರು ಹಾಗೂ ಇತರರು ಕೆಲಸ ಮಾಡುತ್ತಿದ್ದ ವೇಳೆ ಆರೋಪಿತರಾದ ಸುಂದರ ನಾಯ್ಕ ಮತ್ತು ಆತನ ಹೆಂಡತಿ ಸರಸ್ವತಿ ರವರು ಮತ್ತು ಇತರರು ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅವರ ಪೈಕಿ ಸರಸ್ವತಿ ರವರು ಕೊಡಲಿಯನ್ನು ಅಡಗಿಸಿಟ್ಟುಕೊಂಡು ತಂದಿರುವುದನ್ನು ಗಂಡ ಸುಂದರ ನಾಯ್ಕ ರವರಿಗೆ ನೀಡಿ ಅವರು ಅದೇ ಕೊಡಲಿಯಿಂದ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಫಿರ್ಯಾದಿದಾರರ ಪತ್ನಿ ರೇವತಿ ಮತ್ತು ದೊಡ್ಡಪ್ಪ ಶೂದ್ರಪ್ಪ ನಾಯ್ಕ ರವರ ತಲೆಗೆ ಕಡಿದು ಗಾಯಗೊಳಿಸಿದ್ದು ಆಗ  ಅಲ್ಲಿಗೆ ದೂರದಲ್ಲಿದ್ದ ಫಿರ್ಯಾದಿದಾರರು ಮತ್ತು ಮತ್ತಿತರರು ಬಂದಾಗ ಸುಂದರ ನಾಯ್ಕ ರವರು ಫಿರ್ಯಾದಿದಾರರನ್ನು ದೂಡಿ ಹಾಕಿ ಬಳಿಕ ಅವರನ್ನು ಉದ್ದೇಶಿಸಿ ನಿನ್ನನ್ನು ಕೊಂದು ಹಾಕಿದರೆ ಮಾತ್ರ ನಮಗೆ ನೆಮ್ಮದಿ ಎಂದು ಬೆದರಿಕೆ ಹಾಕಿದ್ದು ಗಾಯಾಳು ಶೂದ್ರಪ್ಪ ನಾಯ್ಕ, ನಾಗೇಶ, ರೇವತಿ ರವರನ್ನು ಚಿಕಿತ್ಸೆಯ ಬಗ್ಗೆ ಕಡಬ ಸರಕಾರಿ ಆಸ್ಪತ್ರೆಗೆ ಕೊಂಡು ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋಗಿ ಗಾಯಾಳುಗಳು ದಾಖಲಾಗಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. ಅಕ್ರ 70/2022 ಕಲಂ 447, 324, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-09-2022 10:43 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080