ಅಭಿಪ್ರಾಯ / ಸಲಹೆಗಳು

ಇತರೆ ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ 02.10.2022 ರಂದು ಸಮಯ ಸುಮಾರು 20.00 ಗಂಟೆ ಸಮಯಕ್ಕೆ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಸೀಟು ಎಂಬಲ್ಲಿ ಕಾಯರ್ತೋಡಿ ಮುಳ್ಳಾರು ರಸ್ತೆಯ ಸಮೀಪ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದಾಗ ಧಾಳಿ ನಡೆಸಲಾಗಿ ಓರ್ವ ವ್ಯಕ್ತಿ ತನ್ನ ಬೈಕ್‌ ಮತ್ತು ತನ್ನ ಕೈಯಲ್ಲಿದ್ದ ಗೋಣಿ ಚೀಲ ಬಿಟ್ಟು ಸಂಶಯಾಸ್ಪದ ರೀತಿಯಲ್ಲಿ ಪರಾರಿಯಾಗುತ್ತಿದ್ದವನನ್ನು ಸಿಬ್ಬಂದಿಯವರು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿದಾಗ ಆತನು ಕಾಡಿನೊಳಗೆ ಓಡಿ ತಲೆ ಮರೆಸಿಕೊಂಡಿರುತ್ತಾನೆ. ಆತನು ಮಾರಾಟಕ್ಕೆ ಪ್ರಯತ್ನಿಸಿದ ಗೋಣಿ ಚೀಲವನ್ನು ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್‌ ಗೋಣಿ ಚೀಲವಾಗಿದ್ದು ಅದರೊಳಗೆ ಸುಮಾರು 180 ಎಮ್‌ ಎಲ್‌ ನ  ಮದ್ಯ ತುಂಬಿದ ಪ್ಲಾಸ್ಟಿಕ್‌ ಬಾಟ್ಲಿಗಳು -26 ಇದ್ದು, ಅಂದಾಜು ಮೌಲ್ಯ 1820/- ಆಗಬಹುದು. ಮೋಟರ್‌ ಬೈಕ್‌ ಪರಿಶೀಲಿಸಲಾಗಿ ಇದರ ಅಂದಾಜು ಮೌಲ್ಯ 20000/- ಆಗಬಹುದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಅ.ಕ್ರ 69/2022 ಕಲಂ 32,34 ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೇಶವ ಎಮ್ (32) ತಮದೆ:ದಿ||ಚೆನ್ನಪ್ಪ ಗೌಡ ವಾಸ:ಮುದ್ದೇಮಾರು ಮನೆ ಇಳಂತಿಲ ಗ್ರಾಮ ಬೆಳ್ತಂಗಡಿ ತಾಲೂಕು  ಎಂಬವರ ದೂರಿನಂತೆ ಫಿರ್ಯಾದಿರವರ ತಾಯಿ ಹೊನ್ನಮ್ಮ (72)  ರವರು ಸುಮಾರು 06 ತಿಂಗಳಿನಿಂದ ತಮ್ಮ ಗಂಡ ತೀರಿಕೊಂಡ ಬಳಿಕ ಮಾನಸಿಕವಾಗಿ ನೊಂದಿದ್ದು, ದಿನಾಂಕ 02-10-2022 ರಂದು ಮದ್ಯಾಹ್ನ 2.30 ಗಂಟೆಯ ಸಮಯ ತಮ್ಮ ಜಾಗದ ಮುದ್ದೆಮಾರು ಎಂಬಲ್ಲಿ ತೋಟದ ಕೆರೆಯ ನೀರಿಗೆ ಹಾರಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 28/2022 ಕಲಂ:174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-10-2022 12:00 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080