ಅಪಘಾತ ಪ್ರಕರಣ: ೦3
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್ ಹನೀಫ್ , ಪ್ರಾಯ: 39 ತಂದೆ: ಎಚ್ ಬಿ ಮೊಹಮ್ಮದ್ ವಾಸ: ಜಯನಗರ ಮನೆ ಸುಳ್ಯ ಗ್ರಾಮ ಮತ್ತು ಅಂಛೆ ಸುಳ್ಯ ತಾಲೂಕು ದಕ್ಷಿಣಕನ್ನಡ ಜಿಲ್ಲೆ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 02-11-2022 ರಂದು KA-21-C-1122 ನೇ ಆಂಬುಲೆನ್ಸ್ ಚಾಲಕನಾಗಿ ಸುಳ್ಯ ಕೆ ವಿ ಜಿ ಆಸ್ಪತ್ರೆಯಿಂದ ಚಿಕಿತ್ಸೆಯ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಗೆ ಅಪಘಾತದಲ್ಲಿ ಗಾಯಗೊಂಡ ಮೋಹಿತ್ ಅಗರ್ವಾಲ್ ರವರನ್ನು ಮತ್ತು ಅವರ ಆರೈಕೆಯಲ್ಲಿದ್ದ ಅವರ ಪತ್ನಿ ಅರ್ಚನಾ ಹಾಗೂ ಇಬ್ಬರು ಮಕ್ಕಳನ್ನು ಆಂಬುಲೆನ್ಸ್ ವಾಹನದಲ್ಲಿ ಕರೆದುಕೊಂಡು ಹೋಗುತ್ತಾ ಸಮಯ ಸುಮಾರು ಸಂಜೆ 6:30 ಗಂಟೆಗೆ ಬಂಟ್ವಾಳ ತಾಲೂಕು ಪಾಣೆ ಮಂಗಳೂರು ಗ್ರಾಮದ ನರಹರಿ ಬಳಿ ತಲುಪುತ್ತಿದಂತೆ ರಸ್ತೆಯ ಬದಿಯ ಕಚ್ಚಾ ರಸ್ತೆಯಿಂದ KA-19-D-7301 ನೇ ಟಿಪ್ಪರ್ ಲಾರಿಯೊಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ದೂರದಿಂದ ನೋಡಿದರು ನಿದಾನಿಸದೆ ಒಮ್ಮೇಲೆ ರಸ್ತೆ ಕ್ರಾಸ್ ಮಾಡಲು ಚಲಾಯಿಸಿದ ಪರಿಣಾಮ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಆಂಬುಲೆನ್ಸ್‌ಗೆ ಡಿಕ್ಕಿ ಹೊಡೆದು ಅಪಘಾತವಾಗಿದ್ದು ಪರಿಣಾಮ ಆಂಬುಲೆನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮೋಹಿತ್ ಅಗರ್ವಾಲ್ ರವರ ಮಗ ದರ್ಶಿತ್ ಅಗರ್ವಾಲ್ (10) ರವರಿಗೆ ಮುಖಕ್ಕೆ ಗುದ್ದಿದ ಮತ್ತು ತರಚಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ..ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 134/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿಶ್ವನಾಥ (49) ತಂದೆ:ಸುಬ್ಬ ಬೈರ್ ವಾಸ:ಕಾಡುಮಠ ಮನೆ ,ಕೊಳ್ನಾಡು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ:31-10-2022 ರಂದು ಭಾಸ್ಕರವರ ಬಾಬ್ತು KA-19-HJ-1545ನೇ ದ್ವಿಚಕ್ರ ವಾಹನದಲ್ಲಿ ಪಿರ್ಯಾಧಿ ಹಿಂಬದಿ ಸವಾರರಾಗಿ ಭಾಸ್ಕರ ಸವಾರರಾಗಿ ಕಾಡುಮಠದಿಂದ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಹೊರಟು ಸಾಲೆತ್ತೂರು-ವಿಟ್ಲ ರಸ್ತೆಯಲ್ಲಿ ವಿಟ್ಲ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವ ಸಮಯ ಬೆಳಿಗ್ಗೆ 8.10 ಗಂಟೆಗೆ ಬಂಟ್ವಾಳ ತಾಲೂಕು ವಿಟ್ಲಪಡ್ನೂರು ಗ್ರಾಮದ ನೆತ್ತರಕೆರೆ ಎಂಬಲ್ಲಿಗೆ ತಲುಪಿದಾಗ ಸಾಲೆತ್ತೂರು ಕಡೆಯಿಂದ KA-19-EW-1115ನೇ ದ್ವಿಚಕ್ರ ವಾಹನವನ್ನು ಅದರ ಸವಾರ, ಸಹ ಸವಾರನನ್ನು ಕುಳಿರಿಸಿಕೊಂಡು ಅಜಾಗರೂಕತೆ ಹಾಗೂ ದುಡುಕುತನದಿಂದ ಸವಾರಿ ಮಾಡಿ ಪಿರ್ಯಾಧಿದಾರರು ಸಹ ಸವಾರರಾಗಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾಧಿ ಮತ್ತು ಬಾಸ್ಕರ್ ರವರು ಸ್ಕೂಟರ್ ಸಮೇತ್ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾಧಿಯ ಬಲಕಾಲಿನ ಪಾದಕ್ಕೆ ಮತ್ತು ಬಲ ಕೈಗೆ ತರಚಿದ ಗಾಯವಾಗಿದ್ದು ಭಾಸ್ಕರನ ಬಲ ಕೈಗೆ ತರಚಿದ ಗಾಯ, ಬಲಭುಜಕ್ಕೆ ಗುದ್ದಿದ ನೋವಾಗಿರುತ್ತದೆ. ಪಿರ್ಯಾಧಿ ಮತ್ತು ಬಾಸ್ಕರವರು ವಿಟ್ಲದ ಕ್ಲಿನಿಕ ಒಂದರಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೋಗಿದ್ದು.ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 167/2022 ಕಲಂ: 279,337 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಭರತ್ ಕುಮಾರ್ ಬಿ, ಪ್ರಾಯ 19 ವರ್ಷ, ತಂದೆ: ಮೋನಪ್ಪ ಗೌಡ ವಾಸ: ಬೆದ್ರೋಡಿ ಮನೆ, ಬಜತ್ತೂರು ಗ್ರಾಮ & ಅಂಚೆ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 02-11-2022 ರಂದು 09:30 ಗಂಟೆಗೆ ಆರೋಪಿ KSRTC ಬಸ್ಸು ಚಾಲಕ ನರಾಯಣ ಗೊಂದಾಳಿ ಎನ್.ಬಿ ಎಂಬವರು KA-19-F-3294 ನೇ ನೋಂದಣಿ ನಂಬ್ರದ ಬಸ್ಸನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಆದಿತ್ಯ ಹೊಟೇಲ್ ಬಳಿ ಕಾರೊಂದನ್ನು ಓವರ್ ಟೇಕ್ ಮಾಡಿ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಭರತ್ ಕುಮಾರ್ ಬಿ ರವರು ಸವಾರರಾಗಿ ಉಪ್ಪಿನಂಗಡಿ ಕಡೆಯಿಂದ ಪಂಜಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-51-EP-5917 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಬಸ್ ಅಪಘಾತವಾಗಿ, ಪಿರ್ಯಾದುದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಎಡಕಾಲಿನ ಕೋಲು ಕಾಲಿಗೆ, ಬಲಕಾಲಿನ ಕೋಲು ಕಾಲಿಗೆ, ಎಡಕಾಲಿನ ಪಾದಕ್ಕೆ, ಎಡಕೈ ಭುಜಕ್ಕೆ ಗುದ್ದಿದ ಹಾಗೂ ರಕ್ತಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು,ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಅದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 167/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಂದ್ಯಾ ಪ್ರಾಯ 42 ವರ್ಷ ಗಂಡ: ಸತೀಶ್. ವಾಸ: ಚಿಕ್ಕಯ್ಯನ ಮಠ ಮನೆ, ಬಿ ಮೂಡ ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ: 01.11.2022 ರಂದು ಫಿರ್ಯಾದಿದಾರರು ಟೈಲರ್ ಅಂಗಡಿಯಲ್ಲಿ ಟೈಲರ್ ವೃತ್ತಿ ಮಾಡಿಕೊಂಡಿದ್ದ ಸಮಯ ಸಂಜೆ 6:00 ಗಂಟೆಗೆ ಗಂಡ ಫಿರ್ಯಾದಿದಾರರಿಗೆ ಮೊಬೈಲ್ ಕರೆ ಮಾಡಿ “ನೀನು ಮನೆಗೆ ಬಂದಿದ್ದೀಯಾ” ಎಂದು ಕೇಳಿದರು. ಆಗ ಪಿರ್ಯಾಧಿರವರು ಇಲ್ಲ ಎಂದು ತಿಳಿಸಿದ್ದು. ಅದಕ್ಕೆ ಅವರು ಮನೆಯ ಬಾಗಿಲು ಬೀಗವನ್ನು ಮುರಿದು ಬಾಗಿಲು ತೆರೆದ ವಿಚಾರವನ್ನು ತಿಳಿಸಿದರು. ಕೂಡಲೇ ಫಿರ್ಯಾದಿದಾರರು ಬಿ.ಸಿರೋಡಿನಿಂದ ಹೊರಟು ಸಂಜೆ 6:30 ಗಂಟೆಗೆ ಬಂದು ಮನೆಯಲ್ಲಿ ಪರಿಶೀಲಿಸಲಾಗಿ ಮನೆಯ ಬಾಗಿಲಿನ ಬೀಗವನ್ನು ಮುರಿದು ಸುಮಾರು 100 ಗ್ರಾಂ ತೂಕದ ಅಂದಾಜು 4,50,000/- ರೂಪಾಯಿ ಮೌಲ್ಯದ ಚಿನ್ನಾಭರಣ, 500 ರೂಪಾಯಿ ಬೆಲೆಯ ಬೆಳ್ಳಿಯ ಸೊಂಟದ ಚೈನ್ ಹಾಗೂ 300 ರೂಪಾಯಿ ನಗದು ಹಣ ಇರುವ ಬ್ಯಾಗನ್ನು ಯಾರೋ ಕಳ್ಳರು ಕಳವು ಮಾಡಿದ್ದು,ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ: 102/2022 ಕಲಂ:454, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವ ಬೆದರಿಕೆ ಪ್ರಕರಣ: ೦2
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರವೀಣ ಕುಮಾರ ಪ್ರಾಯ 34 ತಂದೆ: ಜನಾರ್ಧನ ವಾಸ: ಪಲ್ಲತ್ತಿಲ ಮನೆ ನರಿಕೊಂಬು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಫಿರ್ಯಾಧಿದಾರರು ದಿನಾಂಕ 31-10-2022 ರಂದು ರಾತ್ರಿ 9.00 ಗಂಟೆಗೆ ನರಿಕೊಂಬು ಗ್ರಾಮದ ಮೊರ್ಗನಾಡು ಎಂಬಲ್ಲಿ ತರಕಾರಿ ಅಂಗಡಿಗೆ ಬಂದು ತರಕಾರಿ ತೆಗೆದುಕೊಂಡು ಹೋಗುವಾಗ 1 ರಿಂದ 5 ನೇ ಆರೋಪಿಗಳು ಒಟ್ಟು ಸೇರಿ ಫಿರ್ಯಾದಿಯನ್ನು ತೆಡೆದು ನಿಲ್ಲಿಸಿದ್ದು, ಆ ಸಮಯ 2 ರಿಂದ 5 ನೇ ಆರೋಪಿಗಳು ಇನ್ನೊಬ್ಬ ಆರೋಪಿತನಲ್ಲಿ ಪಿರ್ಯಾದಿದಾರನ್ನು ಉದ್ದೇಶಿಸಿ ಅವನಿಗೆ ಹೊಡೆದು ಕೈಕಾಲು ಮುರಿ ಎಂದು ಏರಿದ ದ್ವನಿಯಲ್ಲಿ ಹೇಳಿದಾಗ 1 ನೇ ಆರೋಪಿ ಬೀರ್ ಬಾಟಲಿಯಿಂದ ಪಿರ್ಯಾದಿದಾರರ ಕಾಲಿಗೆ ಹೊಡೆದು ಮುಖಕ್ಕೆ ಗಾಯ ಮಾಡಿರುತ್ತಾನೆ. ಉಳಿದ ಆರೋಪಿಗಲು ಪಿರ್ಯಾದಿದಾರರು ಆಚೆ ಈಚೆ ಹೋಗದಂತೆ ಅಡ್ಡಗಟ್ಟಿ ನಿಂತು ನೀನು ಭಾರಿ ಹಾರಾಡುತ್ತೀರ ನಿನ್ನ ಕೈಕಾಲು ಮುರಿಯುವುದಾಗಿ ನಿನ್ನನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಬಂಟ್ವಾಳನಗರ ಠಾಣಾ ಅ.ಕ್ರ: 103/2022 ಕಲಂ:341,143, 147, 506, 324, ಜೊತೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಲ್ಮಾನ್ ಫಾರೀಸ್ ಪ್ರಾಯ: 15 ವರ್ಷ ತಂದೆ: ಹಂಝ ಕೆ.ಎಸ್ ವಾಸ: ಅಮ್ಮಬ್ಬ ಕಂಪೌಂಡ್ ಕೂನಡ್ಕ ದರ್ಬೆ ಅಂಚೆ ಕೆಮ್ಮಿಂಜೆ ಗ್ರಾಮ ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಸಲ್ಮಾನ್ ಫಾರೀಸ್ ಪ್ರಾಯ: 15 ವರ್ಷ ತಂದೆ: ಹಂಝ ಕೆ.ಎಸ್ ವಾಸ: ಅಮ್ಮಬ್ಬ ಕಂಪೌಂಡ್ ಕೂನಡ್ಕ ದರ್ಬೆ ಅಂಚೆ ಕೆಮ್ಮಿಂಜೆ ಗ್ರಾಮ ಪುತ್ತೂರು ತಾಲೂಕು ಎಂಬವರು ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ದಿನಾಂಕ: 01-11-2022 ರಂದು ರಾತ್ರಿ 9:00 ಗಂಟೆಗೆ ಮನೆಯಲ್ಲಿರುವಾಗ ಪಿರ್ಯಾದಿದಾರರ ದೂರದ ಸಂಬಂಧಿ ಅಬ್ದುಲ್ ರವೂಫ್ ರವರು ದೂರವಾಣಿ ಕರೆ ಮಾಡಿ ಅವ್ಯಾಚವಾಗಿ ಬೈದು ನಿನ್ನ ತಂದೆ ಎಲ್ಲಿದ್ದಾನೆ ಧೈರ್ಯ ಇದ್ದರೆ ಸಂಜಯನಗರ ಶಾಲೆಯ ಬಳಿ ಬಾ ಎಂದು ಹೇಳಿದಾಗ ಪಿರ್ಯಾದಿದಾರರು ಪೋನ್ ಕಾಲ್ ಕಟ್ ಮಾಡಿರುತ್ತಾರೆ. ರಾತ್ರಿ ಸಮಯ ಸುಮಾರು 9:15 ಗಂಟೆಗೆ ಅಬ್ದುಲ್ ರವೂಫ್ ಮತ್ತು ಹಕೀಂ ರವರು ಪಿರ್ಯಾದಿದಾರರ ಮನೆಯ ಬಳಿ ಬಂದು , ಅಬ್ದುಲ್ ರವೂಫ್ ಪಿರ್ಯಾದಿದಾರರ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಏಕಾಏಕಿಯಾಗಿ ಕೈಯಿಂದ ಪಿರ್ಯಾದಿದಾರರ ಎದೆಯ ಎಡಭಾಗಕ್ಕೆ ಹಲ್ಲೆ ನಡೆಸಿರುತ್ತಾನೆ. ಹಾಗೂ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿರುತ್ತಾರೆ. ಪಿರ್ಯಾದಿದಾರರ ತಾಯಿ ಹತ್ತಿರ ಮನೆಯ ಚಿಕ್ಕಪ್ಪ ಸಿದ್ದೀಕ್ ರವರು ಬಂದಾಗ ಅವರನ್ನು ಕಂಡು ಅಬ್ದುಲ್ ರವೂಫ್ ಮತ್ತು ಹಕೀಂ ರವರು ಹೋಗಿರುತ್ತಾರೆ. ಪಿರ್ಯಾದಿದಾರರಿಗೆ ಹಲ್ಲೆಯಿಂದಾಗಿ ನೋವುಂಟಾಗಿದ್ದು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 88/2022 ಕಲಂ: 448, 504, 507, 323, 506 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಇತರೆ ಪ್ರಕರಣ: ೦2
ಬಂಟ್ವಾಳ ನಗರ ಪೊಲೀಸ್ ಠಾಣೆ : ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ. 15/2003 ಕಲಂ 457, 380 ಐಪಿಸಿ ರಲ್ಲಿ ತಲೆಮರೆಸಿಕೊಂಡಿದ್ದ ಶಿಕ್ಷಾರ್ಹ ಅಪರಾಧಿ ಗಿರೀಶ್ @ ಗಿರಿಧರ್ ಪ್ರಾಯ: 52 ವರ್ಷ ತಂದೆ: ತಿಮ್ಮಪ್ಪ ಬಂಗೇರ, ವಾಸ: ಪೆರಿಯೋಡು ಬೀಡು ಮನೆ, ಬ್ರಹ್ಮರಕೋಟ್ಲು ಕಳ್ಳಿಗೆ ಗ್ರಾಮ, ಬಂಟ್ವಾಳ ತಾಲೂಕು ಎಂಬಾತನನ್ನು ದಿನಾಂಕ: 02.11.2022 ರಂದು ಪತ್ತೆ ಹಚ್ಚಿ, ಬಳಿಕ ಆದೇಶದಂತೆ ಮಾನ್ಯ ನ್ಯಾಯಾಲಯಕ್ಕೆ ದೇವಪ್ಪ ಗೌಡ, ಎಎಸ್ಐ ಬಂಟ್ವಾಳ ನಗರ ಪೊಲೀಸ್ ಠಾಣೆ ಬಂಟ್ವಾಳ ಮತ್ತು ಸಿಪಿಸಿ ಉಸ್ಮಾನ್ ರವರು ಹಾಜರುಪಡಿಸಿ, ಸದ್ರಿ ಆರೋಪಿಯನ್ನು ಜಿಲ್ಲಾ ಕಾರಗೃಹಕ್ಕೆ ಒಪ್ಪಿಸುವ ಸಲುವಾಗಿ ಶಿಕ್ಷಾ ಕೈದಿಯನ್ನು ಪಿರ್ಯಾದಿದಾರರು ಭದ್ರಿಕೆಯಲ್ಲಿ ಸರ್ಕಾರಿ ಬಸ್ಸಿನಲ್ಲಿ ಬಿ.ಸಿ.ರೋಡಿನಿಂದ ಮಂಗಳೂರಿಗೆ ಕರೆದೊಯ್ಯತ್ತಿರುವಾಗ ಸಂಜೆ 6:30 ಗಂಟೆಯ ಸಮಯಕ್ಕೆ ಕಳ್ಳಿಗೆ ಗ್ರಾಮದ ಬ್ರಹ್ಮರಕೋಟ್ಲು ಟೋಲ್ ಗೇಟ್ ನಲ್ಲಿ ಬಸ್ಸು ನಿದಾನವಾಗುತ್ತಿದ್ದ ಸಮಯ ಫಿರ್ಯಾದಿದಾರರು ನಿರ್ವಾಹಕರಿಗೆ ಇಲಾಖಾ ಬಸ್ ವಾರಂಟುನ್ನು ನೀಡುತ್ತಿರುವಾಗ ಶಿಕ್ಷಾ ಕೈದಿ ಒಮ್ಮೆಲೇ ಫಿರ್ಯಾದಿದಾರರನ್ನು ಬಸ್ಸಿನೊಳಗೆ ದೂಡಿ ಏಕಾಏಕಿ ಬಸ್ಸಿನ ಬಾಗಿಲಿನ ಮೂಲಕ ಹೊರಗಡೆ ಹಾರಿ ತಪ್ಪಿಸಿಕೊಂಡನು. ತಕ್ಷಣ ಬಸ್ಸನ್ನು ನಿಲ್ಲಿಸಿ ಆರೋಪಿಯನ್ನು ಬೆನ್ನಟ್ಟಿ ಸಾರ್ವಜನಿಕರ ಸಹಾಯದಿಂದ ಆತನನ್ನು ಹಿಡಿದುಕೊಳ್ಳಲಾಯಿತು..ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ: 104/2022 ಕಲಂ: 224, 353 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ನಗರ ಪೊಲೀಸ್ ಠಾಣೆ : ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವರಿಗೆ, ದಿನಾಂಕ;- 01.11.2022 ರಂದು ರಾತ್ರಿ ಸುಮಾರು 07.30 ಗಂಟೆಗೆ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಅಶ್ವಿನಿ ಸರ್ಕಲ್ ಬಳಿ ಆರಾಧ್ಯ ಆರ್ಕೆಡ್ ಎಂಬ ವಾಣಿಜ್ಯ ಸಂಕೀರ್ಣದ ಕಟ್ಟಡದಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಪಟಾಕಿಗಳಿಗೆ ಯಾವುದೋ ಕಾರಣದಿಂದ ಬೆಂಕಿ ತಗಲಿ ಪಟಾಕಿಗಳು ಸಿಡಿದು ಅಗ್ನಿ ದುರಂತ ಸಂಭವಿಸಿರುವ ಬಗ್ಗೆ ತಿಳಿದು ಕೂಡಲೇ ಪಿರ್ಯಾಧಿದಾರರು ಸಿಬ್ಬಂದಿಗಳೊಂದಿಗೆ ಘಟನಾ ಸ್ಧಳದ ಬಳಿ ಹೋದಾಗ ಪುತ್ತೂರಿನ ಅಗ್ನಿಶಾಮಕ ದಳದ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದು, ತಮ್ಮಲ್ಲಿದ್ದ ಉಪಕರಣಗಳ ಸಹಾಯದಿಂದ ಬೆಂಕಿಯನ್ನು ನಂದಿಸಿರುತ್ತಾರೆ. ಸದ್ರಿ ಘಟನೆಯ ಕುರಿತಾಗಿ ಪಿರ್ಯಾದಿದಾರರು ಸ್ಧಳದಲ್ಲಿ ಪರಿಶೀಲಿಸಲಾಗಿ ಪಟಾಕಿಗಳು ಸಂಪೂರ್ಣವಾಗಿ ಸಿಡಿದು ಸುಟ್ಟು ಕರಕಲಾಗಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹಾಯಿಸಿದ ನೀರಿನಿಂದ ಸ್ದಳದಲೆಲ್ಲಾ ಹರಡಿ ತೊಳೆದು ಹೋಗಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಸ್ದಳದಲ್ಲಿಯೇ ಹಾಜರಿದ್ದ ಕಟ್ಟಡದ ಮಾಲಿಕರಾದ ಕರುಣಾಕರ ರೈಯವರನ್ನು ವಿಚಾರಿಸಲಾಗಿ ಸ್ವಂತ ಉಪಯೋಗಕ್ಕಾಗಿ ದಾಸ್ತಾನು ಇರಿಸಲಾಗಿದ್ದ ಪಟಾಕಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಮತ್ತಾವುದೋ ಕಾರಣದಿಂದಾಗಿ ಅಗ್ನಿ ಅವಘಡ ಸಂಭವಿಸಿರುವುದಾಗಿ ನುಡಿದಿರುತ್ತಾರೆ., ದಿನಾಂಕ;- 01.11.2022ರಂದು ಸಂಜೆ ಸುಮಾರು 6.30 ಗಂಟೆಯಿಂದ 7.00 ಗಂಟೆಯ ಮದ್ಯದಲ್ಲಿ ಪುತ್ತೂರು ತಾಲೂಕು, ಪುತ್ತೂರು ಕಸಬಾ ಗ್ರಾಮದ ಅಶ್ವಿನಿ ಸರ್ಕಲ್ ಬಳಿ ಎನ್. ಕರುಣಾಕರ ರೈ ಎಂಬವರ ಒಡೆತನಕ್ಕೆ ಸೇರಿದ ಆರಾಧ್ಯ ಆರ್ಕೆಡ್ ಕಟ್ಟಡದ ನೆಲ ಮಾಳಿಗೆಯಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಪಟಾಕಿಗೆ ಅಗ್ನಿ ಅವಘಡ ಸಂಭವಿಸಿರುತ್ತದೆ. ಮತ್ತು ಸದ್ರಿ ಅಗ್ನಿ ಅವಘಡದಿಂದಾಗಿ ಧರೇಶ್ ಹೊಳ್ಳ ಎಂಬಾತನಿಗೆ ಸುಟ್ಟ ಗಾಯಗಳು ಉಂಟಾಗಿರುತ್ತದೆ. ಆದುದರಿಂದಾಗಿ ಸದ್ರಿ ಅಗ್ನಿ ಅವಘಡಕ್ಕೆ ಕಾರಣಗಳನ್ನು ನೋಡಲಾಗಿ ಸದ್ರಿ ಘಟನೆ ಸಂಭವಿಸಿದ ಸ್ಧಳವು ಜನ ವಸತಿ ಪ್ರದೇಶವಾಗಿದ್ದು ಸದ್ರಿ ಸ್ದಳದಲ್ಲಿ ಪಟಾಕಿಯನ್ನು ದಾಸ್ತಾನು ಇರಿಸಲು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ಮಾನವ ಜೀವಕ್ಕೆ ಹಾನಿಯಾಗದಂತೆ ಯಾವುದೇ ಮುಂಜಾಗೃತೆಯನ್ನು ವಹಿಸದೇ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸುಡು ಮದ್ದುಗಳನ್ನು ದಾಸ್ತಾನು ಇರಿಸಿದ ಬಗ್ಗೆ ಕಂಡು ಬಂದಿದ್ದು, ಮತ್ತು ಇದರಿಂದಾಗಿ ಒರ್ವ ವ್ಯಕ್ತಿಗೆ ಗಾಯ ನೋವುಂಟಾಗಿರುವುದರಿಂದ ಇದು ಕಲಂ;- 9(B)(b)ಸ್ಟೋಟಕ ಕಾಯ್ದೆಯ ಅಡಿಯಲ್ಲಿ ಹಾಗೂ 337 ಐಪಿಸಿ ಅಡಿಯಲ್ಲಿ ಅಪರಾಧವಾಗಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 91/2022 ಕಲಂ: 9(B)(b) ಸ್ಪೋಟಕ ಕಾಯ್ದೆ ಮತ್ತು 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ
ಅಸ್ವಾಭಾವಿಕ ಮರಣ ಪ್ರಕರಣ: ೦3
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸವಂತ ಗೌಡ, ಪ್ರಾಯ: 53 ವರ್ಷ, ಬಿರ್ಮನೊಟ್ಟು ಮನೆ, ಮಿತ್ತ ಬಾಗಿಲು ಗ್ರಾಮ, ಬೆಳ್ತಂಗಡಿ ತಾಲೂಕು ರವರ ಮಗ ದಿನೇಶ್ ಗೌಡ (28) ಎಂಬವನು ಯಾವುದೋ ಕಾರಣದಿಂದ ಮನನೊಂದು ದಿನೇಶ್ ಗೌಡನು ದಿನಾಂಕ: 02-11-2022 ರಂದು ಬೆಳಿಗ್ಗೆ 08-00 ಗಂಟೆಯಿಂದ 09-00 ಗಂಟೆಯ ಮದ್ಯದ ಅವಧಿಯಲ್ಲಿ ಆತನ ಮನೆಯ ಸಮೀಪದ ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡು ಮರದ ಕೊಂಬೆಗೆ ಬಟ್ಟೆಯ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ UDR ನಂಬ್ರ: 47/2022 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಧನಂಜಯ (18) ತಂದೆ: ಜಯ, ವಾಸ: ಕರ್ಪೆ ಮಂದಿರ ಬಳಿ ಮನೆ ಗ್ರಾಮ, ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ಮೃತ ಜಯ ನಾಯ್ಕ್ ರವರು ಅಡಿಕೆ ತೋಟದ ಮಾಲಿಕರಿಂದ ವರ್ಷದ ಲೆಕ್ಕದಲ್ಲಿ ಲೀಸ್ ಗೆ ಪಡೆದುಕೊಂಡು ಅಡಿಕೆ ತೆಗೆಯುವ ಕೆಲಸ ಮಾಡಿಕೊಂಡಿದ್ದು ದಿನಾಂಕ ಬೆಳಿಗ್ಗೆ 08:00 ಗಂಟೆಗೆ ಮೃತ ಜಯ ನಾಯ್ಕ ರವರು ಸಂಗಬೆಟ್ಟು ಗ್ರಾಮದ ಕಣೆಯೂರು ಎಂಬಲ್ಲಿಯ ಶ್ರೀಮತಿ ವಸಂತಿರವರ ಅಡಿಕೆ ತೋಟದಲ್ಲಿ ಪಿರ್ಯಾದುದಾರರ ತಂದೆ ಮತ್ತು ಇತರರೊಂದಿಗೆ ಅಡಿಕೆ ಕೀಳುವ ಮತ್ತು ಹೆಕ್ಕುವ ಕೆಲಸ ಮಾಡಿಕೊಂಡಿದ್ದು ಪಿರ್ಯಾದುದಾರರ ತಂದೆ ಅಡಿಕೆ ಮರದ ಅರ್ಧ ಭಾಗಕ್ಕೆ ಹೋಗಿ ದೋಂಟಿಯಿಂದ ಅಡಿಕೆಯನ್ನು ಕೀಳುತಿದ್ದು ಕೇಳಗೆ ಬಿದ್ದ ಅಡಿಕೆಯನ್ನು ಪಿರ್ಯಾದುದಾರರು ಮತ್ತು ಇತರ ಕೆಲಸದವರು ಹೆಕ್ಕುತ್ತಿದ್ದ ಸಮಯ ಪಿರ್ಯಾದುದಾರರ ತಂದೆ ಸ್ವಲ್ಪ ದೂರಕ್ಕೆ ಹೋಗಿ ಅಡಿಕೆ ಕೀಳುತ್ತಿದ್ದ ಸಮಯ ಬೆಳಿಗ್ಗೆ 09.30 ಗಂಟೆಗೆ ಅಡಿಕೆ ಕೀಳುವ ಶಬ್ದ ಕೇಳದೆ ಇದ್ದುದ್ದರಿಂದ ನಾವು ಹೋಗಿ ನೋಡಿದಾಗ ಪಿರ್ಯಾದುದಾರರ ತಂದೆ ಒಂದು ಅಡಿಕೆ ಮರದ ಕೆಳಗೆ ಕೌಚಿ ಬಿದ್ದುದ್ದನ್ನು ಕಂಡು ಪಿರ್ಯಾದುದಾರರು ಮತ್ತು ಇತರರು ಎತ್ತಿ ಆರೈಕೆ ಮಾಡಿದಾಗ ಪಿರ್ಯಾದುದಾರರ ತಂದೆ ಮಾತಾಡದೆ ಇದ್ದು ಅಲ್ಲಿಯೇ ಪಕ್ಕದಲ್ಲಿ ಪಿರ್ಯಾದುದಾರರ ತಂದೆ ಅಡಿಕೆ ಮರ ಹತ್ತಲು ಬಳಸುವ ಕೈತಳೆ ಮತ್ತು ಕಾಲು ತಳೆ ಅಲ್ಲಿಯೇ ಬಿದ್ದಿದ್ದು ಪಿರ್ಯದುದಾರರ ತಂದೆಯನ್ನು ಕಾರಿನಲ್ಲಿ ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋದಲ್ಲಿ ಬೆಳಿಗ್ಗೆ 10.50 ಗಂಟೆಗೆ ವೈದ್ಯರು ಪರೀಕ್ಷಿಸಿ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದು ಪಿರ್ಯಾದುದಾರರ ತಂದೆ ಅಡಿಕೆ ಮರಕ್ಕೆ ಹತ್ತಿ ಅಡುಕೆಯನ್ನು ಕೀಳುತ್ತಿದ್ದ ಸಮಯ ಆಕಸ್ಮಿಕವಾಗಿ ಕೈ ತಳೆ ಅಥವಾ ಕಾಲು ತಳೆ ತಪ್ಪಿ ಕೆಳಗೆ ಬಿದ್ದು ಮೃತ ಪಟ್ಟಿರುವುದಾಗಿದೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 56-2022 ಕಲಂ 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶಾಹುಲ್ ಹಮೀದ್ ಪ್ರಾಯ(28) ತಂದೆ: ಮಹಮ್ಮದ್. ಬಿ.ಸ್ ವಾಸ: ಕೆಳಗಿನಪೇಟೆ ಬಂಟ್ವಾಳ ಮನೆ, ಬಿ.ಮೂಡ ಬಂಟ್ವಳ ಬಂಟ್ವಾಳ ತಾಲೂಕು ರವರ ಚಿಕ್ಕಪ್ಪ ಇಸ್ಮಾಯಿಲ್ ಪ್ರಾಯ (62) ಎಂಬವರು ದಿನಾಂಕ: 01.11.2022 ರಂದು ಬೆಳಿಗ್ಗೆ 11.20 ಗಂಟೆಗೆ ಬಂಟ್ವಾಳ ತಾಲೂಕು ಬೋಳಂತ್ತೂರು ಗ್ರಾಮದ ಕಲ್ಪಣೆ ಎಂಬಲ್ಲಿರುವ ತಮ್ಮ ಮನೆಯ ಅಂಗಳದಲ್ಲಿದ್ದ ಮರದ ಗೆಲ್ಲನ್ನು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಕೈಕಾಲು ಜಾರಿ ಮರದದಿಂದ ನೆಲಕ್ಕೆ ಬಿದ್ದು ಬಲ ಹಣೆಗೆ ಗುದ್ದಿದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಗ ಮುಸ್ತಪ ಮತ್ತು ಇತರರು ಒಂದು ವಾಹನದಲ್ಲಿ ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯಾಧಿಕಾರಿಗಳು ಪರಿಕ್ಷೀಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಕಳುಹಿಸಿದ್ದು ಇಸ್ಮಾಯಿಲ್‌ರವರನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಿಸಿದ್ದು ದಿನಾಂಕ:01.11.2022 ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಇಸ್ಮಾಯಿಲ್ ಮೃತಪಟ್ಟಿರುವುದಾಗಿದೆ ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 44/2022 ಕಲಂ 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿರುತ್ತದೆ