ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ: ೦2

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಮಹಮ್ಮದ್ ಶಾಕೀರ್ ಪ್ರಾಯ: 45 ವರ್ಷ, ತಂದೆ: ಹೆಚ್‍ ಪಿ ಇಸ್ಮಾಯಿಲ್ ವಾಸ: ಹಳೇ ರಸ್ತೆ ಫರಂಗಿಪೇಟೆ , ಪುದು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 02.01.2023 ಪಿರ್ಯಾದಿದಾರರು ಅವರ ಬಾಬ್ತು ಕಾರಿನಲ್ಲಿ ಅಡ್ಡೂರಿನಿಂದ ಫರಂಗಿಪೇಟೆಗೆ ಹೋಗುವರೇ ಅಡ್ಡೂರು ಕೈಕಂಬ.- ಬಿ.ಸಿ.ರೋಡ್ ರಾಜ್ಯ ಹೆದ್ದಾರಿಯಲ್ಲಿ   ಬಿ.ಸಿ ರೋಡ್ ಕಡೆಗೆ  ಹೋಗುತ್ತಾ ಸಮಯ ಸುಮಾರು ಮಧ್ಯಾಹ್ನ 2.30 ಗಂಟೆಗೆ ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿಗೆ ತಲುಪುವಾಗ ಅಡ್ಡೂರು ಕಡೆಯಿಂದ ಬಿ.ಸಿ ರೋಡ್  ಕಡೆಗೆ  KA-19-MG-4445 ನೇ ಸ್ಕೂಟರ್ ನ್ನು  ಅದರ  ಸವಾರ  ಸಹ ಸವಾರಿಣಿಯನ್ನು ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಸಹಸವಾರಿಣಿ ರವರು ಎಸೆಯಲ್ಪಟ್ಟು  ರಸ್ತೆಗೆ  ಬಿದ್ದು ಅಪಘಾತವಾಗಿದ್ದು , ಅಪಘಾತದಲ್ಲಿ ಸಹಸವಾರಿಣಿ ತಲೆಗೆ ಗುದ್ದಿದ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು ದಿನಾಂಕ 03.01.2023 ರಂದು ಬೆಳಿಗ್ಗೆ 9.20 ಗಂಟೆಗೆ ಚಿಕಿತ್ಸೆಯಲ್ಲಿದ್ದ ಗಾಯಾಳು ಜುಲೇಖಾ ಆಹಮದ್  ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 02/2023 ಕಲಂ: 279, 337,304 (ಎ)  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಉಮ್ಮರಬ್ಬ ಪಿ.ಕೆ, ಪ್ರಾಯ 67 ವರ್ಷ, ತಂದೆ: ಹುಸೈನಬ್ಬ ವಾಸ: ಸತ್ತೀಕಲ್ಲು ಮನೆ, ಕೆದಿಲ ಗ್ರಾಮ, ಪೇರಮೋಗ್ರು ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 03-01-2023 ರಂದು 9:00 ಗಂಟೆಗೆ ಆರೋಪಿ ಲಾರಿ  ಚಾಲಕ ಮಧುಸೂಧನ್‌ ಎನ್‌ ಎಂಬವರು KA-14-A-8751 ನೇ ನೋಂದಣಿ ನಂಬ್ರದ ಲಾರಿಯನ್ನು ಉಪ್ಪಿನಂಗಡಿ - ಗಾಂಧಿ ಪಾರ್ಕ್ ಸಾರ್ವಜನಿಕ ಒಳ ಡಾಮಾರು ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಉಪ್ಪಿನಂಗಡಿ  ಗ್ರಾಮದ ಉಪ್ಪಿನಂಗಡಿ ಸಿಟಿ ಲ್ಯಾಂಡ್‌ ಹೊಟೇಲ್‌ ಎದುರುಗಡೆ ಹಳೆ ಬಸ್‌ ನಿಲ್ದಾಣದ ಕಡೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಸೂಚನೆ ನೀಡದೇ ಒಮ್ಮೇಲೆ ಚಲಾಯಿಸಿದ ಪರಿಣಾಮ, ಮೊಯಿದಿನ್‌ ಕುಂಞ ರವರು ಹಳೆ ಬಸ್ಸ್‌ ನಿಲ್ದಾಣದ ಕಡೆಯಿಂದ  ಸವಾರಿ ಮಾಡಿಕೊಂಡು ಬರುತ್ತಿದ್ದ KA-21-EB-6809 ನೇ ನೋಂದಣಿ ನಂಬ್ರದ ಸ್ಕೂಟರ್‌ಗೆ  ಲಾರಿ ಅಪಘಾತವಾಗಿ, ಸ್ಕೂಟರ್‌ ಸವಾರ ಸ್ಕೂಟರ್‌ ನೊಂದಿಗೆ ರಸ್ತೆಗೆ ಬಿದ್ದು, ಎಡಕಾಲಿನ ತೋಡೆಬಳಿ ಮತ್ತು  ಸೊಂಟಕ್ಕೆ ಗುದ್ದಿದ ಹಾಗೂ ರಕ್ತಗಾಯವಾಗಿ  ಚಿಕಿತ್ಸೆ ಬಗ್ಗೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 02/2023 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: ೦1

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹಮ್ಮದ್ ನಿಸಾರ್ (21) ತಂದೆ ಅಬ್ದುಲ್ ಹಮೀದ್ , ಅಮ್ಮೆಮ್ಮಾರ್ ಮನೆ, ಪುದು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ತಾನು ಫರಂಗಿಪೇಟೆಯಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 02.01..2023 ರಂದು ರಿಕ್ಷಾದಲ್ಲಿ ಪರಂಗಿಪೇಟೆಗೆ ಹೋಗಿ ವಾಪಾಸು ಬರುತ್ತಿದ್ದ ಸಮಯ ರಾತ್ರಿ ಸುಮಾರು 11.30 ಗಂಟೆಗೆ ಅಮ್ಮೆಮ್ಮಾರ್ ಮಸೀದಿ ಬಳಿ ರಿಕ್ಷಾ ಟಯರ್ ಪಂಚರ್ ಆಗಿ ಪಿರ್ಯಾದುದಾರರು ಆಟೋವನ್ನು ಬದಿಗೆ ನಿಲ್ಲಿಸಿ ಸ್ಟೆಪಿನ್ ಹಾಕಲು ಟೂಲ್ಸ್ ರೆಡಿ ಮಾಡುತ್ತಿದ್ದ ಸಮಯ ಅಲ್ಲಿಗೆ ಬಂದ ಆರೋಪಿ ರಿಜ್ವಾನ್ ನನು ಊಟ ತರುವಂತೆ ಪಿರ್ಯಾದಿದರರಲ್ಲಿ ಹೇಳಿದಾಗ ಪಿರ್ಯಾದುದಾರರು ನನ್ನ ರಿಕ್ಷಾದ ಟಯರ್ ಪಂಕ್ಚರ್ ,ಆಗಿದೆ ನಾನು ಹೋಗುವುದಿಲ್ಲ ಎಂದು ಹೇಳಿ ರಿಕ್ಷಾ ಅಲ್ಲೇ ಬಿಟ್ಟು ಸ್ವಲ್ಪ ಮುಂದಕ್ಕೆ ಹೋಗಿ  ತನ್ನ ಸ್ನೀಹಿತರಾದ ಸರ್ಪುದ್ದೀನ್ ಹಾಗೂ ಸುಹೈಲ್ ಬಳಿ ನನ್ನ ರಿಕ್ಷಾ ಪಂಕ್ಚರ್ ಆಗಿದೆ ಬೇರೆ ಟಯರ್ ಹಾಕಲು ಸಹಾಯ ಮಾಡುವಂತೆ ಕೇಳುತ್ತಿದ್ದ ಸಮಯ ಅಲ್ಲಿಗೆ ಬಂದ ರಿಜ್ವಾನನು ನಾನು ನಿನ್ನಲ್ಲಿ ಊಟ ತಗೊಂಡು ಬಾ ಎಂದರೆ ಅರ್ಥ ಆಗುವುದಿಲ್ವಾ, ಎಂದು ಅವಾಚ್ಯ ಶಬ್ಧಗಳಿಂದ ಬೈದು ಏಕಾಏಕಿ ತನ್ನ ಕಿಸೆಯಲ್ಲಿದ್ದ ಚೂರಿಯನ್ನು ತೆಗೆದು ಪಿರ್ಯಾದುದಾರರ ಎಡ ಕೆನ್ನೆಗೆ ಗೀರಿದನು. ಇದನ್ನು ಕಂಡ ಸರ್ಪೂದ್ದೀನ್ ಮತ್ತು ಸೊಹೈಲ್ ಬಿಡಿಸಲು ಬಂದಾಗ ರಿಜ್ವಾನನ್ನು ಪಿರ್ಯಾದುದಾರರನ್ನು ಉದ್ದೇಶಿಸಿ ನಿನಗೆ ಊಟ ತಂದು ಕೊಡಲ್ಲ ಆಗಲ್ವ , ನೀನು ಅಲ್ಲೇ ಸಾಯಬೇಕು ಎಂದು ಹೇಳಿ ಚೂರಿಯನ್ನು ಬಿಸಾಡಿ ಹೋಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ  ಅ.ಕ್ರ  02/2023 ಕಲಂ 324,504,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: ೦2

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜನಾರ್ಧನ ಎಸ್ ಪ್ರಾಯ 47 ವರ್ಷ ತಂದೆ: ದಿ|| ವೆಂಕಪ್ಪ ಗೌಡ ವಾಸ: ಶಾಂತಿಮಾರು ಮನೆ ಕೊಣಾಲು ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ಸದ್ರಿಯವರ ತಾಯಿ ಶ್ರೀಮತಿ ಚೆನ್ನಮ್ಮ ಪ್ರಾಯ ಅಂದಾಜು 72 ವರ್ಷ ಎಂಬವರು ತೋಟದ ಕೆಲಸ ಮಾಡಿಕೊಂಡಿದ್ದವರು, ದಿನಾಂಕ 03-01-2023ರಂದು ಶ್ರೀಮತಿ ಚೆನ್ನಮ್ಮ ರವರು ಎಂದಿನಂತೆ ಬೆಳಿಗ್ಗೆ 5.30 ಗಂಟೆಗೆ ಎದ್ದು, ಮನೆಯಿಂದ ಅಡಿಕೆ ತೋಟಕ್ಕೆ ಹೋಗಿ ಕರೆಯ ದಡದಲ್ಲಿ ಬಿದ್ದುಕೊಂಡ ಅಡಿಕೆ ಹಿಂಗಾರ ಹಾಳೆಗಳನ್ನು ಹೆಕ್ಕುತ್ತಿರುವಾಗ ಆಕಸ್ಮಿಕವಾಗಿ ಕೆರೆಯ ನೀರಿಗೆ ಜಾರಿ ಬಿದ್ದು, ಕೆರೆಯ ನೀರಿನಲ್ಲಿ ಮುಳುಗಿ ಈಜು ಬಾರದೇ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 02/2023 ಕಲಂ:174   ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಸುಳ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶಕುಂತಳಾ ಯು.ಎಂ (47) ಗಂಡ: ಮೋಹನ್ ಯು.ಕೆ ವಾಸ: ಕೊಳಲುಮೂಲೆ ಮನೆ, ಉಳುವಾರು, ತೊಡಿಕಾನ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 03.01.2023 ರಂದು ಪಿರ್ಯಾದುದಾರರು ಹುಲ್ಲು ತರಲೆಂದು  ಸಮಯ ಸುಮಾರು 16:15 ಗಂಟೆಗೆ ತೋಟಕ್ಕೆ ಹೋಗಿ 16:50 ಗಂಟೆಗೆ ವಾಪಾಸ್ ಮನೆಗೆ ಬಂದಾಗ  ಗೋಪಾಲ ಎ,ವಿ ರವರು ಅಸ್ವಸ್ಥಗೊಂಡು ಮನೆಯ ಅಂಗಳದಲ್ಲಿ ಮಲಗಿದವರ ಬಳಿ ಬಂದು ಪಿರ್ಯಾದುದಾರರು ನೋಡಿದಾಗ ಗೋಪಾಲ ಎ.ವಿ ರವರ ಬಾಯಿಯಿಂದ ಏನೋ ಘಾಟು ವಾಸನೆ ಬರುತ್ತಿದ್ದು, ಅವರ ಪಕ್ಕದಲ್ಲಿ ಒಂದು ಕ್ರಿಮಿ ನಾಶಕದ ಬಾಟಲಿ  ಕಂಡು ಪಿರ್ಯಾದುದಾರರು ಕೂಡಲೇ ಗೋಪಾಲ ರವರನ್ನು ಸುಳ್ಯ ಸರ್ಕಾರಿ ಆಸ್ಪತ್ರಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಗೋಪಾಲರವನ್ನು ದಾಖಲಿಸಿಕೊಂಡು ಸಮಯ ಸುಮಾರು 17:50 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ    ಯುಡಿಆರ್    ನಂ: 03/2023 ಕಲಂ: 174 ಸಿಆರ್ ಪಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-01-2023 12:15 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080