ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಅಬ್ದುಲ್ ರಹಿಮಾನ್ ಪ್ರಾಯ: 48 ವರ್ಷ ತಂದೆ: ದಿ || ಅಬ್ಬಾಸ್ ವಾಸ : ಪಲ್ಲಿಗುಡ್ಡೆ ಮನೆ,ನಾವೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ  ದಿನಾಂಕ: 02.02.2023 ರಂದು  ಪಿರ್ಯಾದಿದಾರರು ತನ್ನ ಚಿಕ್ಕಪ್ಪರಾದ ಹಮೀದ್ ರವರೊಂದಿಗೆ ಅಗ್ರಹಾರ ಮಸೀದಿಯಿಂದ ನಮಾಜ್ ಮುಗಿಸಿಕೊಂಡು ಅಗ್ರಹಾರದ ದರ್ಗಾದಲ್ಲಿ ನಡೆಯುತ್ತಿದ್ದ ಮತ ಪ್ರವಚನ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಅಗ್ರಹಾರ ದರ್ಗಾದ ಬಳಿ ನಡೆದುಕೊಂಡು ಹೋಗುತ್ತಿರುವ ಸಮಯ ಸುಮಾರು 19:30 ಗಂಟೆಗೆ  ನಾವೂರು ಕಡೆಯಿಂದ  KA 19 HE 5464 ನೇ ಸ್ಕೂಟರ್ ನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹಮೀದ್ ರವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ಹಮೀದ್ ರವರು ರಸ್ತೆಗೆ ಬಿದ್ದು ಸೊಂಟಕ್ಕೆ ಬಲವಾದ ಗುದ್ದಿದ ನೋವು, ಎಡಕಾಲಿಗೆ ಗುದ್ದಿದ ನೋವು ಮತ್ತು ಎಡಕಾಲಿನ ಬೆರಳುಗಳಿಗೆ ತರಚಿದ ಗಾಯವಾಗಿದ್ದು, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 22/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 3

 • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಶ್ರಫ್ ಪಟ್ಟೆ , ಪ್ರಾಯ: 36 ವರ್ಷ, ತಂದೆ: ಉಸ್ಮಾನ್ ಪಟ್ಟೆ , ವಾಸ: ಪಟ್ಟೆ ಮನೆ, ಮುಂಡೂರು ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 02.02.2023 ರಂದು ಸಂಜೆ ಸಮಯ ಸುಮಾರು 5.00 ಗಂಟೆಗೆ ಫಿರ್ಯಾದಿದಾರರಾದ ಅಶ್ರಫ್‌ ಪಟ್ಟೆ , ಪ್ರಾಯ: 36 ವರ್ಷ, ವಾಸ: ಪಟ್ಟೆ ಮನೆ, ಮುಂಡೂರು ಗ್ರಾಮ ಎಂಬವವರ ಜಾಗಕ್ಕೆ ಸದರಿ ಜಾಗದ ವಿಚಾರದಲ್ಲಿ ತಕರಾರು ಇರುವ ಹಿನ್ನೆಲೆಯಲ್ಲಿ ಇಬ್ರಾಹಿಂ ಸಂತೋಷ್‌, ಮತ್ತು ಮಕ್ಕಳಾದ ಉಸ್ಮಾನ್‌ ಸಂತೋಷ್‌, ಹಸೈನಾರ್‌ ಸಂತೋಷ್‌,ಮುಸ್ತಾಫ್‌ ಸಂತೋ಼ಷ್‌ ,ಇಬ್ರಾಹಿಂ ಮುಲಾರ, ಅಶ್ರಫ್‌ ಮುಲಾರ್‌ ,ಸುಲೈಮಾನ್‌ ಮುಲಾರ್‌, ಮುತ್ತಬ್ಬ ಯಾನೆ ಮುಸ್ತಪ್‌, ಅಶೀಫ್‌ ಅಜಲಾಡಿ,ರೌವುಫ್‌ ಅಜ್ಜಿಕಟ್ಟೆ ಎಂಬವರುಗಳು ಅಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರರು ಹಾಕಿದ ಬೇಲಿಯನ್ನು ತೆಗೆದು ನಾಶ ಮಾಡಿ, ಅವಾಚ್ಯ ಶಬ್ದಗಳಿಂದ  ಬೈಯ್ದು, ಹಲ್ಲೆ ನಡೆಸಿದ್ದು,  ಫಿರ್ಯಾದಿದಾರರನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ. ಹಲ್ಲೆಗೊಳಗಾದ ಫಿರ್ಯಾದಿದಾರರನ್ನು ಪತ್ನಿ ಮತ್ತು ಇತರರು ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ, ಅಲ್ಲಿನ ವೈಧ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಅಂಬುಲೇನ್ಸ್‌ ವಾಹನದಲ್ಲಿ ಮಂಗಳೂರು ಇಂಡಿಯನ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈಧ್ಯರು ಫಿರ್ಯಾದಿದಾರರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ CR.NO 11-2023 ಕಲಂ: 143,147,148,447,427,504,323,324,506,149  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ಳಾರೆ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸಾಹಿದಾ ಪ್ರಾಯ: 40 ವರ್ಷ, ಗಂಡ: ಮಹಮ್ಮದ್ ಹನೀಫ್, ವಾಸ: ವಿಷ್ಣುನಗರ ಮನೆ, ಕಳಂಜ   ಗ್ರಾಮ, ಸುಳ್ಯ   ಎಂಬವರ ದೂರಿನಂತೆ ದಿನಾಂಕ 02.02.2023 ರಂದು ಮದ್ಯಾಹ್ನ 1:30 ಗಂಟೆಗೆ ಪಿರ್ಯಾದಿದಾರರು  ಮತ್ತು ಅವರ ಗಂಡ ಮಹಮ್ಮದ್ ಹನೀಫ್  ರವರು ತಮ್ಮ  ಮನೆಯಾದ ಸುಳ್ಯ ತಾಲೂಕು ಕಳಂಜ ಗ್ರಾಮದ  ವಿಷ್ಣುನಗರ  ಎಂಬಲ್ಲಿ ಹೊಸ ಮನೆಯ ಕಾಮಗಾರಿ ನಡೆಯುತ್ತಿದ್ದಲ್ಲಿ  ಕೆಲಸ ಮಾಡುತ್ತಿರುವ  ಸಮಯ  ಪಿರ್ಯಾದಿದಾರರ ಪರಿಚಯದ ನಝೀರ್ ಎಂಬಾತನು ಮೋಟಾರ್ ಸೈಕಲಿನಲ್ಲಿ ಬಂದು ಪಿರ್ಯಾದಿದಾರರನ್ನುದ್ದೇಶಿಸಿ  “ನಿನ್ನ ಗಂಡ ಎಲ್ಲಿ” ಎಂದು ಹೇಳಿ ಅಲ್ಲಿಯೇ ಇದ್ದ ಹಾರೆಯೊಂದರಲ್ಲಿ ಪಿರ್ಯಾದಿದಾರರ ತಲೆಗೆ ಹೊಡೆದನು. ಆಗ ಅಲ್ಲಿಯೇ ಕೆಲಸ ಮಾಡುತ್ತಿದ್ದ ಪಿರ್ಯಾದಿದಾರರ ಗಂಡ ಪಿರ್ಯಾದಿದಾರರನ್ನು ಬಿಡಿಸಲು ಬಂದವರನ್ನು ನಝೀರನು ಹಿಡಿದುಕೊಂಡು ಅವರ ಕುತ್ತಿಗೆಯಲ್ಲಿ ಬಲವಾಗಿ ಹಿಡಿದು ಎಡಕೈಯನ್ನು ತಿರುಚಿ ನೋವುಂಟು ಮಾಡುತ್ತಿರುವ ಸಮಯ ಬಿಡಸಲು ಹತ್ತಿರ ಹೋದ ಪಿರ್ಯಾದಿದಾರರನ್ನು ನಝೀರ್ ರಸ್ತೆ ಬದಿಗೆ ದೂಡಿ ಹಾಕಿದ್ದು, ಹಲ್ಲೆಯ ಪರಿಣಾಮ  ಪಿರ್ಯಾದಿದಾರರ ತಲೆಗೆ ಮತ್ತು ಎಡಕೈಯಲ್ಲಿ  ಹಾಗೂ ಬಲಕಾಲಿನಲ್ಲಿ ಗಾಯಗಳಾಗಿರುತ್ತದೆ. ಪಿರ್ಯಾದಿದಾರರ ಗಂಡನನ್ನು  ನಝೀರ್ ಗಟ್ಟಿಯಾಗಿ ಹಿಡಿದ್ದು ಎಡಕೈಯನ್ನು ತಿರುಚಿ ನೋವುಂಟು ಮಾಡಿರುತ್ತಾನೆ. ಪಿರ್ಯಾದಿದಾರರ ಬೊಬ್ಬೆ ಕೇಳಿ ಅಕ್ಕಪಕ್ಕ ಮನೆಯವರು ಬರುವುದನ್ನು ನೋಡಿ ನಝೀರನು ಪಿರ್ಯಾದಿದಾರರನ್ನು ಮತ್ತು ಅವರ ಗಂಡನನ್ನು ಉದ್ದೇಶಿಸಿ “ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿರುತ್ತಾನೆ. ಆರೋಪಿ ನಝೀರ್ ನಡೆಸಿದ ಹಲ್ಲೆಯಿಂದ ಉಂಟಾದ ಗಾಯದ ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರು ಮತ್ತು ಅವರ ಗಂಡ ಆಟೋ ರಿಕ್ಷಾವೊಂದನ್ನು ಬರಹೇಳಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ..ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಅ.ಕ್ರ 04/2023   ಕಲಂ 447,324, 323, 506   ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಾರಿಜೆ ಗಂಡ: ದಿ: ಗಣೇಶ್ ನಾಯಕ್, ವಾಸ: ಮೋಂತಿಮಾಆರು ಮನೆ, ಮಂಚಿ ಗ್ರಾಮ , ಬಂಟ್ವಾಳ ತಾಲೂಕು  ಎಂಬವರ ದೂರಿನಂತೆ ಪಿರ್ಯಾಧಿರವರು ಮಗ ಹರಿಪ್ರಸಾದ್ ಮತ್ತು ಮಗಳೊಂದಿಗೆ ವಾಸವಾಗಿದ್ದು, ಪಿರ್ಯಾದಿದಾರರ ದೊಡ್ಡ ಮಗ ಪ್ರಶಾಂತ್  ಮತ್ತು ಸೊಸೆ  ಶಾಂತಿಯವರು ಮನೆಯ ಪಾಲು ಮತ್ತು ಜಾಗದ ಪಾಲು ಮಾಡಿಕೊಡಬೇಕೆಂದು ಪಿರ್ಯಾದಿದಾರರಲ್ಲಿ  ಪದೇ ಪದೇ ಗಲಾಟೆ ಮಾಡುತ್ತಿದ್ದು, ದಿನಾಂಕ 03-02-2023 ರಂದು ಬೆಳಿಗ್ಗೆ 5.45 ಗಂಟೆಗೆ ಫಿರ್ಯಾದಿರವರ ಸೊಸೆ  ಪಿರ್ಯಾದಿದಾರರನ್ನು ಉದ್ದೇಶಿಸಿ ಎ.ಸಿ ಕೋರ್ಟ್ ನಿಂದ ನೋಟೀಸ್ ಬಂದ ಹಿನ್ನೆಲೆಯಲ್ಲಿ ಅವ್ಯಾಚವಾಗಿ ಬೈದು ರಕ್ತಗಾಯವಾಗುವಂತೆ ಹಲ್ಲೆ ನಡೆಸಿರುತ್ತಾರೆ.  ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 8/2023ಕಲಂ : 504, 323, 324,504,506 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

 

ಅಸ್ವಾಭಾವಿಕ ಮರಣ ಪ್ರಕರಣ: 4

 • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ  ಕೇಶವ ಪ್ರಾಯ: 45 ವರ್ಷ ತಂದೆ: ದಿ| ಚಂದಪ್ಪ ನಾಯ್ಕ ವಾಸ: ಶ್ರೀರಾಮ ನಿಲಯ, ಕಲಾಯಿ ಕಾಮಾಜೆ ಮನೆ, ಅಮ್ಟಾಡಿ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ:03-02-2023 ರಂದು ಬೆಳಿಗ್ಗೆ 10.20 ಗಂಟೆಗೆ ಬಿಸಿರೋಡ್ ಪೇಟೆಯಿಂದ ಮನೆಯ ಕಡೆಗೆ ಎನ್ ಜಿ ಸರ್ಕಲ್ ಮೂಲಕ ಹೋಗುತ್ತಿದ್ದಾಗ ಬಿಸಿರೋಡ್ ರೈಲ್ವೇ ಸೇತುವೆಯನ್ನು ದಾಟಿದ ಕೂಡಲೇ ಎಡಬದಿಯಲ್ಲಿರುವ ಕಬ್ಬಿಣದ ತಡೆಗೋಡೆಯ ಬಳಿಯಲ್ಲಿ ಯಾರೋ ವ್ಯಕ್ತಿ ಮಲಗಿಕೊಂಡಂತೆ ಇರುವುನ್ನು ನೋಡಿ ವಾಹನ ನಿಲ್ಲಿಸಿ ಹತ್ತಿರ ಹೋಗಿ ನೋಡಿದಲ್ಲಿ ವ್ಯಕ್ತಿಯು ಮಲಗಿದಲ್ಲಿಯೇ ಮೃತಪಟ್ಟಿದ್ದು, ಮುಖ ಪರಿಚಯವಿರುವುದಿಲ್ಲ. ಮೃತವ್ಯಕ್ತಿಯು ಅಂದಾಜು 45 ರಿಂದ 50 ವರ್ಷದ ವ್ಯಕ್ತಿಯಾಗಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣಾ ಯುಡಿಆರ್ ನಂ:04/2023 ಕಲಂ: 174(3)(iv) ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ಪ್ರಫುಲ್ಲ (44 ವರ್ಷ) , ಗಂಡ: ಎಂ. ಮಹೇಶ್,  ವಾಸ: ಶ್ರೀನಿಲಯ ,ಪರ್ಲಡ್ಕ , ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ಮಹೇಶ್.ಎಂ.( 47 ವರ್ಷ) ರವರು ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 02.02.2023 ರಂದು ಎಂದಿನಂತೆ ಮನೆಯಿಂದ ಕಾಲೇಜಿಗೆ ಹೋಗಿ ಸಾಯಂಕಾಲ ಮನೆಗೆ ಬಂದಿರುತ್ತಾರೆ. ರಾತ್ರಿ ಎಲ್ಲರೂ ಊಟ ಮುಗಿಸಿ ಮಲಗಿದ್ದು, ದಿನಾಂಕ 03.02.2023 ರಂದು ಬೆಳಗ್ಗಿನ ಜಾವ ಸುಮಾರು 03.45 ಗಂಟೆಗೆ ಪಿರ್ಯಾದಿದಾರರ ಗಂಡನು ಎಚ್ಚರಗೊಂಡು ಎದೆ, ಬೆನ್ನು ನೋವು ಆಗುತ್ತಿರುವುದಾಗಿ ತಿಳಿಸಿದ್ದು, ಸ್ವಲ್ಪ ಹೊತ್ತಿನ ನಂತರ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಪಿರ್ಯಾದಿದಾರರು ಮನೆಯವರನ್ನು ಎಬ್ಬಿಸಿ ವಿಚಾರ ತಿಳಿಸಿ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯ ವೈದ್ಯರು ಪಿರ್ಯಾದಿದಾರರ ಗಂಡನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಯುಡಿಆರ್‌ ನಂ: 03/2023 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರಕಾಶ್ ಪ್ರಾಯ: 30 ವರ್ಷ, ತಂದೆ: ನಿಂಗಪ್ಪ ಅಗಸಿಮನಿ ಉಪವಲಯ ಅರಣ್ಯಾಧಿಕಾರಿ, ಸುಬ್ರಹ್ಮಣ್ಯ ಶಾಖೆ ರವರು ಸುಬ್ರಮಣ್ಯ ವಲಯದ ಸುಬ್ರಮಣ್ಯ ಉಪವಲಯ ಅರಣ್ಯಾಧಿಕಾರಿಯಾಗಿದ್ದು, ದಿನಾಂಕ: 03-02-2023 ರಂದು ಎಂದಿನಂತೆ ಗಸ್ತು ಕರ್ತವ್ಯದಲ್ಲಿರುವಾಗ ಸಮಯ ಸುಮಾರು ಬೆಳಿಗ್ಗೆ 11:00 ಗಂಟೆಗೆ ಕಡಬ ತಾಲೂಕು ಸುಬ್ರಮಣ್ಯ ಗ್ರಾಮದ ಕುಮಾರದಾರದಲ್ಲಿರುವ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್ ನ ಎದುರುಗಡೆ ಕಿದು ಮೀಸಲು ಅರಣ್ಯದಲ್ಲಿ ಓರ್ವ ವ್ಯಕ್ತಿಯು ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದು, ಕೊಳೆತ ಸ್ಥಿತಿಯಲ್ಲಿದ್ದು,  ಸುಮಾರು 60-70 ವರ್ಷ ಪ್ರಾಯದಂತೆ ಕಂಡು ಬಂದಿರುವುದಾಗಿದೆ.  .ಈ ಬಗ್ಗೆ ಸುಬ್ರಹ್ಮಣ್ಯ ಠಾಣೆ ಯುಡಿಆರ್‌ ನಂಬ್ರ  : 07-2023 ಕಲಂ:174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಕಡಬ ಪೊಲೀಸ್ ಠಾಣೆ : ಪಿರ್ಯಾದುದಾರರಾದ ಶ್ರೀಮತಿ ಲೀಲಾವತಿ ಪ್ರಾಯ:38 ವರ್ಷ ಗಂಡ; ಗುರುವ ವಾಸ: ಬೆದ್ರಾಜೆ ಮನೆ,ಕೋಡಿಂಬಾಳ ಗ್ರಾಮ ಎಂಬವರ ತಾಯಿಯವರಾದ ಶ್ರೀಮತಿ ಚೋಮು ಪ್ರಾಯ 50 ವರ್ಷ ಗಂಡ:ದಿಂ|| ಅಂಬೋಡಿ ಎಂಬುವರು ಮಗನಾದ ರಮೇಶ ಹಾಗೂ ಅವನ ಹೆಂಡತಿ ಮಕ್ಕಳೊಂದಿಗೆ  ವಾಸವಾಗಿದ್ದು ಪಿರ್ಯಾದುದಾರರ ತಾಯಿ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ ಶ್ರೀಮತಿ ಚೋಮು ರವರು ಬಿ.ಪಿ.ಖಾಯಿಲೆಯಿಂದ ಬಳಲುತ್ತಿದ್ದು ದಿನಾಂಕ: 29.01.2023 ರಂದು ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದು ದಿನಾಂಕ: 29.01.2023 ರಂದು ಸಮಯ ಮಧ್ಯಾಹ್ನ 12.00 ಗಂಟೆಗೆ ಪಿರ್ಯಾದುದಾರರ ತಾಯಿ ಶ್ರೀಮತಿ ಚೋಮು ರವರು ಮನೆಯಲ್ಲಿ ಬೆಳೆದ ಕಾಳು ಮೆಣಸನ್ನು ಒಣಗಿಸುವರೇ ಪಕ್ಕದ ಮನೆಯ ಆಲೀಸ್ ಎಂಬುವರ ಮನೆಯ ಟ್ಯಾರೀಸ್ ಮೇಲೆ ಹೋದಾಗ ಆಕಸ್ಮತಾಗಿ ಟ್ಯಾರೀಸ್ ನಿಂದ ಕೆಳಗೆ ಬಿದ್ದಿದ್ದು ಪಿರ್ಯಾದುದಾರರು ಶಬ್ದ ಕೇಳಿ ಅಲ್ಲಿಗೆ ಓಡಿ  ಹೋದಾಗ ಅಲ್ಲಿಗೆ ಪಿರ್ಯಾದುದಾರರ ತಮ್ಮ ಕೂಡ ಬಂದು ಪಿರ್ಯಾದುದಾರರ ತಾಯಿಯನ್ನು ಉಪಚರಿಸಿ ನೋಡಲಾಗಿ ತಲೆಗೆ  ನೆತ್ತಿಯ ಮೇಲೆ ಗಾಯವಾಗಿ ರಕ್ತ ಬರುತ್ತಿದ್ದು ಪಿರ್ಯಾದುದಾರರು ಕೂಡಲೇ ಒಂದು ಕಾರಿನಲ್ಲಿ ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದಕೊಂಡು ಹೋಗಿ ಅಲ್ಲಿಂದ ಹೆಚ್ಚಿನ  ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು  ಹೋಗಿ ಪಿರ್ಯಾದುದಾರರ ತಾಯಿಯನ್ನು  ಒಳರೋಗಿಯಾಗಿ ದಾಖಲಿಸಿರುತ್ತಾರೆ ದಿನಾಂಕ: 02.02.2023 ರಂದು ಸಮಯ ರಾತ್ರಿ 20.19 ಗಂಟೆಗೆ ಮೃತ ಪಟ್ಟಿರುವುದಾಗಿ ವೈದ್ಯರು ಧೃಡಪಡಿಸಿರುತ್ತಾರೆ.ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ 04/2023 ಕಲಂ:174  ಸಿ ಆರ್‌ ಪಿ ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-02-2023 11:46 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080