ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦1

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಶಶಿಕಾಂತ್‌ ನಾಯ್ಕ (28) ತಂದೆ: ದೇವಯ್ಯ ನಾಯ್ಕ ವಾಸ: ಅಶ್ವತಪಲ್ಕೆ ಮನೆ ತೆಂಕಕಾರಂದೂರು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 03-05-2022  ರಂದು KA 19 HB 4004 ನೇ ಮೋಟಾರ್‌ ಸೈಕಲ್‌ ನ್ನು ಅದರ ಸವಾರ ಶರತ್‌ ಎಂಬವರು ಬೆಳ್ತಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 6:15 ಗಂಟೆಗೆ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಸಂತೆಕಟ್ಟೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ವಿರುದ್ದ ದಿಕ್ಕಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ಬೆಳ್ತಂಗಡಿ ಕಡೆಗೆ KA 21 C 1002 ನೇ ಪಿಕ್‌ ಅಪ್‌ ವಾಹನವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೆ ಒಮ್ಮೆಲೆ ರಸ್ತೆಯ ಬಲಬದಿಗೆ ಅಂದರೆ ಕುತ್ಯಾರು ಕಡೆಗೆ ಹೋಗುವ ರಸ್ತೆ ಕಡೆ ಚಲಾಯಿಸಿ ಮೋಟಾರ್‌ ಸೈಕಲ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ಶರತ್‌ ರವರು ಮೋಟಾರ್‌ ಸೈಕಲ್‌ ನೊಂದಿಗೆ ರಸ್ತೆಗೆ ಬಿದ್ದು ಎಡಕಾಲಿನ ತೊಡೆಗೆ ಗುದ್ದಿದ ಗಾಯ, ಗಲ್ಲಕ್ಕೆ ತರಚಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ದೇರಳಕಟ್ಟೆ ಕೆ ಎಸ್‌ ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.  ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 67/2022 ಕಲಂ; 279,337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

  

ಇತರೆ ಪ್ರಕರಣ: ೦1

ಸಿ ಇ ಎನ್ ಪೊಲೀಸ್ ಠಾಣೆ : ಪಿರ್ಯಾದಿದಾರರಾದ  ಡಾ| ಬಿ ಆಶ್ವಿನ್ ಬಾಳಿಗಾ (44  ) ತಂದೆ: ಡಾ| ವಸಂತ ಬಾಳಿಗಾ ಕಿಡ್ಸ್ ಕೇರ್ ಸೆಂಟರ್, ಬಿ.ಸಿ ರೊಡ್ ಬಸ್ ನಿಲ್ದಾಣದ ಬಳಿ ಬಿಸಿ ರೋಡ್ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ; 29-04-2022 ರಂದು ಸಂಜೆ 5.30 ಗಂಟೆ ಸಮಯಕ್ಕೆ  ಅಪರಿಚಿತ ವ್ಯಕ್ತಿ ಕರೆ ಮಾಡಿ ಜಿಯೋ ನಂಬರ್ನ್ನು ಅಪ್ಡೇಟ್ ಮಾಡುವುದಾಗಿ ತಿಳಿಸಿ  ಗೂಗಲ್   ಪ್ಲೇ ಸ್ಟೋರ್ನಿಂದ QUICK EASY APP ನ್ನು ಡೌನ್ಲೋಡ್ ಮಾಡಿಸಿ ನಂತರ ಪಿರ್ಯಾದಿದಾರರ ಮೊಬೈಲ್ ನಲ್ಲಿ MY JIO APP ನಲ್ಲಿ 10 ರೂಪಾಯಿ ರಿಚಾರ್ಜ್ ಮಾಡಲು ತಿಳಿಸಿದಂತೆ ಪಿರ್ಯಾದಿದಾರರು  ಹೆಚ್ಡಿಎಫ್ಸಿ ಬ್ಯಾಂಕ್ ಎಸ್ಬಿ ಖಾತೆ ಯಿಂದ  ಡೆಬಿಟ್ ಕಾರ್ಡ್ ವಿವರಗಳನು MY JIO APPನಲ್ಲಿ ಹಾಕಿ 10 ರೂ ರಿಚಾರ್ಜ್ ಮಾಡಿರುತ್ತಾರೆ  ಕೂಡಲೇ ಪಿರ್ಯಾದಿದಾರರಿಗೆ ತಿಳಿಯದಂತೆ ಹೆಚ್ಡಿಎಫ್ಸಿ ಖಾತೆಯಿಂದ, ರೂ.10,000/-ದಂತೆ  3 ಬಾರಿ  ಮತ್ತು  ರೂ 45,000/- 3 ಬಾರಿ ಅಪರಿಚಿತನ ಖಾತೆಗೆ ಒಟ್ಟು ರೂ 1,65,000/- ಹಣ ವರ್ಗಾವಣೆಯಾಗಿರುವುದಾಗಿದೆ. ಈ ಬಗ್ಗೆ ಸಿ ಇ ಎನ್ ಪೊಲೀಸ್ ಠಾಣೆ  ಠಾಣಾ    ಅ.ಕ್ರ: 06/2022 ಕಲಂ:  66(ಸಿ)&(ಡಿ),419,420ಐಪಿಸಿ‌ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: ೦1

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಶಾರದ ಪಂಡಿತ್ ಕರಡಿ  ಪ್ರಾಯ:60 ವರ್ಷ ಗಂಡ: ಪಂಡಿತ್ ಲಾಯಪ್ಪ ಕರಡ ವಾಸ: ಕಕಮರಿ ಮನೆ  ಕಕಮರಿ ಗ್ರಾಮ, ಅಥಣಿ ತಾಲೂಕು,ಬೆಳಗಾವಿ ಎಂಬವರ ದೂರಿನಂತೆ ಅವರ ಗಂಡ ಪಂಡಿತ್ ಲಾಯಪ್ಪ ಕರಡಿ ಎಂಬರೊಂದಿಗೆ ದಿನಾಂಕ 26-04-2022 ರಂದು ತಮ್ಮ ಊರಿನಿಂದ ಎನ್ ಡಬ್ಲೂ ಕೆ ಎಸ್ ಆರ್ ಟಿ ಸಿ ಬಸ್ ಮಾಡಿಕೊಂಡು ಯಾತ್ರೆಗೆಂದು ಸುಮಾರು 52 ಜನ ಸೇರಿಕೊಂಡು ಶ್ರೀ ಶೈಲ, ಮೈಸೂರು, ಕೊಡಗು, ಕುಕ್ಕೆ ಸುಬ್ರಹ್ಮಣ್ಯ ಮುಂತಾದ ಕಡೆ ಹೋಗಿ ದೇವರ ದರ್ಶನ ಪಡೆದು ದಿನಾಂಕ 02-05-2022 ರಂದು ಸಂಜೆ ಸಮಯ 05.30 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದಿದ್ದು, ಅದೇ ದಿನ ರಾತ್ರಿ ದೇವರ ದರ್ಶನ ಪಡೆದು ಗಂಗೋತ್ರಿ ವಸತಿ ಗೃಹದ ಹಾಲ್ ರೂಂ ನಂ 105 ರಲ್ಲಿ ರಾತ್ರಿ ಸಮಯ ತಂಗಿದ್ದು ದಿನಾಂಕ 03-05-2022ರಂದು  ಬೆಳಿಗ್ಗೆ 04.30 ಗಂಟೆಗೆ ಪಿರ್ಯಾದಿದಾರರ ಗಂಡ  ಪಂಡಿತ್ ಲಾಯಪ್ಪ ಕರಡಿ ಬೆಳಗಿನ ನಿತ್ಯ ಕರ್ಮ ಮುಗಿಸಿ ಹೊರನಾಡು ಕ್ಷೇತ್ರಕ್ಕೆ ಹೊರಡುವರೇ ತಯಾರಾಗುತ್ತಿದ್ದ ಸಮಯ ಸದ್ರಿ ಕೊಠಡಿಯ ಒಳಗೆ ಹಠತ್ತಾನೇ ಕುಸಿದು ಬಿದ್ದವರನ್ನು ಪಿರ್ಯಾದಿದಾರು ಹಾಗೂ ಒಟ್ಟಿಗೆ ಬಂದಿದ್ದ ಜನರು ಸ್ಥಳದಲ್ಲಿ ಆರೈಕೆಯನ್ನು ಮಾಡಿ ಪಿರ್ಯಾದಿದಾರರು ಬಂದಿದ್ದ  ಬಸ್ ನಲ್ಲಿ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋದ್ದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣಾ ಯು ಡಿ ಆರ್‌ 27/2022 ಕಲಂ: 174 ಸಿಆರ್‌ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 04-05-2022 11:55 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080