ಅಪಘಾತ ಪ್ರಕರಣ: 05
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪ್ರಶಾಂತ್ ಹೆಬ್ಬಾರ್.ಪಿ ಪ್ರಾಯ 47 ವರ್ಷ ತಂದೆ:ಜಯಪ್ರಕಾಶ್ ಹೆಬ್ಬಾರ್ ವಾಸ: ಶ್ರೀ ಲಕ್ಷ್ಮಿ ನಿಲಯ ಬರಂಗಾಯ, ನಿಡ್ಲೆ ಗ್ರಾಮ& ಅಂಚೆ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 02-10-2022 ರಂದು ತನ್ನ ಬಾಬ್ತು ಕೆಎ 21 L 2083 ನೇ ಮೋಟರ್ ಸೈಕಲ್ ನ್ನು ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ಸಂಜೆ 6.15 ಗಂಟೆಗೆ ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾಮದ ಕಕ್ಕೇನ ಎಂಬಲ್ಲಿ ತಲುಪುತ್ತಿದ್ದಂತೆ ಅವರ ವಿರುದ್ಧ ದಿಕ್ಕಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಉಜಿರೆ ಕಡೆಗೆ ಕೆ ಎ 21 EC 6701 ನೇ ಮೋಟರ್ ಸೈಕಲ್ ನ್ನು ಅದರ ಸವಾರ ಸಹ ಸವಾರನನ್ನು ಕುಳ್ಳಿರಿಸಿಕೊಂಡು ಕೆ ಎ 11 M 3813 ನೇ ಕಾರನ್ನು ಹಿಂದಿಕ್ಕುವ ರಭಸದಲ್ಲಿ ಬೈಕ್‌ನ್ನು ದುಡುಕುತನದಿಂದ ಸವಾರಿ ಮಾಡಿ ಪಿರ್ಯಾದಿದಾರರ ಮೋಟರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟರ್ ಸೈಕಲ್ ಸಮೇತ ರಸ್ತೆಯ ಎಡಬದಿಗೆ ಬಿದ್ದು. ಡಿಕ್ಕಿ ಹೊಡೆದ ಮೋಟರ್ ಸೈಕಲ್ ಸವಾರ ಮತ್ತು ಸಹಸವಾರ ಅಲ್ಲಿಯೇ ಬರುತ್ತಿದ್ದ ಕೆ ಎ 11 M 3813 ನೇ ಕಾರಿನ ಮೇಲೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಎಡ ಹಣೆ , ತಲೆಯ ಮೇಲೆ ತರಚಿದ ಗಾಯ ಹಾಗೂ ಎಡ ಕಾಲಿನ ತೊಡೆಗೆ ಗುದ್ದಿದ ಗಾಯ,ಬಲ ಕಾಲಿನ ಪಾದ, ಬಲ ಕೈಯ ತೋರು ಬೆರಳು, ಉಂಗುರ ಬೆರಳಿಗೆ ತರಚಿದ ಗಾಯ ಹಾಗೂ ಅಪಘಾತ ನಡೆಸಿದ ಮೋಟರ್ ಸೈಕಲ್ ಸವಾರ ಲಿಖಿತ್ ರವರಿಗೆ ಬಲ ಕೈಗೆ,ಬಲಕಾಲಿನ ಹೆಬ್ಬೆರಳಿಗೆ ಗುದ್ದಿದ ಗಾಯವಾಗಿದ್ದು ಗಾಯಾಳುಗಳು ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಅಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 116/2022 ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸುಶೀಲ ಪ್ರಾಯ 35 ವರ್ಷ ಗಂಡ: ಮೋಹನ ವಾಸ: ಚಾಮುಂಡಿ ನಗರ ಒಡಲ ಅಂಚೆ ಮತ್ತು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 02-10-2022 ರಂದು ಅವರ ಸಂಬಂಧಿ ಶೇಷನ್ ರವರ ಅಟೋ ರಿಕ್ಷಾ ನಂ ಕೆಎ 70-1142 ನೇದರಲ್ಲಿ ಗಂಡ ಮೋಹನ ಮತ್ತು ಮಗು ಮನ್ವಿತ್ (ಪ್ರಾಯ 8 ತಿಂಗಳು) , ತಂಗಿ ಪುಷ್ಪಾ ಹಾಗೂ ಅವಳ ಮಗು ನಿಕಿಲ್ ಪ್ರಾಯ 5 ವರ್ಷ ರವರೊಂದಿಗೆ ಕೊಕ್ಕಡ ಎಂಬಲ್ಲಿಗೆ ಆಯುರ್ವೆದಿಕ್ ಹಳ್ಳಿ ಮದ್ದಿಗೆ ಧರ್ಮಸ್ಥಳ – ಕೊಕ್ಕಡ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬರುತ್ತಿರುವ ಸಮಯ ಸಂಜೆ 4.30 ಗಂಟೆಗೆ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಕಾಪಿನ ಬಾಗಿಲು ಜಂಕ್ಷನ್ ಬಳಿ ತಲುಪಿದಾಗ ಎದುರುಗಡೆಯಿಂದ ಅಂದರೆ ಕೊಕ್ಕಡ ಕಡೆಯಿಂದ ಕಾರು ನಂ ಕೆಎ 19 MJ-3116 ನೇದರ ಚಾಲಕ ಅದ್ವೈತ್ ಪೈ ರವರು ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಅಟೋ ರಿಕ್ಷಾಕ್ಕೆ ಢಿಕ್ಕಿಯಾದ ಪರಿಣಾಮ ಅಟೋ ರಿಕ್ಷಾ ಮಗುಚಿ ಬಿದ್ದು, ಫಿರ್ಯಾದಿ ಸುಶೀಲ ಎಂಬವರಿಗೆ ಬಲಕೈಗೆ ತೀವ್ರ ಸ್ವರೂಪದ ಗುದ್ದಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 106/2022 ಕಲಂ:279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕರುಣಾಕರ ಪ್ರಾಯ:39 ವರ್ಷ ತಂದೆ:ಚೆನ್ನಪ್ಪ ಪೂಜಾರಿ, ವಾಸ:ಮಡ್ಯಡ್ಕ ಮನೆ, ಕೋಡಿಂಬಾಳ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ:03.10.2022 ರಂದು ಕಡಬದಿಂದ ತನ್ನ ಬಾಬ್ತು ಆಟೋರಿಕ್ಷಾದಲ್ಲಿ ಕೆಮ್ಮಾರ ಎಂಬಲ್ಲಿಗೆ ಬಾಡಿಗೆಗೆ ಹೋಗಿ ಪ್ರಯಾಣಿಕರನ್ನು ಬಿಟ್ಟು ವಾಪಾಸ್ಸು ಕಡಬಕ್ಕೆ ಬರುತ್ತಾ ಸಮಯ ಸುಮಾರು ಬೆಳಗ್ಗೆ 10.00 ಗಂಟೆಗೆ ಕಡಬ ತಾಲೂಕು ಆತೂರು ಜುಮ್ಮಾ ಮಸೀದಿಯ ಬಳಿ ಬರುತಿದ್ದಂತೆ ಪಿರ್ಯಾದುದಾರರ ಎದುರು ಆರೋಪಿತನಾದ ಹರ್ಷಿತ್ ಎಂಬಾತನು KA-21 Q-9069 ಮೋಟಾರ್ ಸೈಕಲ್ ವಾಹನವನ್ನು ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬನಿಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಸದ್ರಿ ವ್ಯಕ್ತಿಯು ರಸ್ತೆಗೆ ಬಿದ್ದಿದ್ದು ಅಲ್ಲದೇ ಬೈಕ್ ಸವಾರನು ಸಹ ಬಿದ್ದಿರುತ್ತಾನೆ ಪಿರ್ಯಾದುದಾರರು ಕೂಡಲೇ ತನ್ನ ಆಟೋರಿಕ್ಷಾ ವಾಹನವನ್ನು ನಿಲ್ಲಿಸಿ ಹತ್ತಿರ ಹೋಗಿ ಪಿರ್ಯಾದುದಾರರು ಉಪಚರಿಸಿ ನೋಡಲಾಗಿ ರಸ್ತೆಗೆ ಬಿದ್ದ ವ್ಯಕ್ತಿಯು ರಾಮಪ್ಪ ಪೂಜಾರಿ ಎಂಬಾತನಾಗಿದ್ದು ಆತನ ತಲೆಗೆ ಮತ್ತು ಎಡಕೈ ಬೆರಳಿಗೆ ರಕ್ತಗಾಯವಾಗಿರುತ್ತದೆ ಅಲ್ಲದೇ ಮೊಟಾರ್ ಸೈಕಲ್ ಸವಾರನಿಗೆ ಸಣ್ಣ ಪುಟ್ಟಗಾಯವಾಗಿರುತ್ತದೆ ಗಾಯಗೊಂಡ ಗಾಯಾಳು ರಾಮಪ್ಪ ಪೂಜಾರಿ ರವರನ್ನು ಅಂಬ್ಯುಲೆನ್ಸ್ ವಾಹನದಲ್ಲಿ ಕಳುಹಿಸಿಕೊಟ್ಟಿದ್ದು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ 84/2022 ಕಲಂ: ಕಲಂ:279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಬೂಬಕ್ಕರ್ ಸಿದ್ದೀಕ್ ಡಿ(30) ತಂದೆ: ಅರಬಿ ಬ್ಯಾರಿ ವಾಸ: ಡಿಂಬ್ರಿ ಮನೆ, ಕುರಿಯ ಅಂಚೆ ಮತ್ತು ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ಇಂಟೀರಿಯರ್ ಡಿಸೈನ್ ವೃತ್ತಿಯಾಗಿದ್ದು, ದಿನಾಂಕ 03.10.2022 ರಂದು ಕೆಲಸದ ನಿಮಿತ್ತ ಸುಳ್ಯದ ಜಟ್ಟಿಪಳ್ಳದಲ್ಲಿರುವ ಕಲಂದರ್ ಪಿ,ಕೆ ಎಂಬವರ ಮನೆಗೆ ಬಂದು ಪುನ: ಮಹಮ್ಮದ್ ಸಮೀರ್ ಎಂಬವರ ಮನೆಗೆ ತೆರಳಿ ತಮ್ಮ ಬಾಬ್ತು ಕೆಎ 42 ಎಂ 9851 ನೇ ಕ್ರೇಟಾ ಕಾರನ್ನು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಮೊರ್ಗಪಣೆ ಸೇತುವೆ ಬಳಿಯಲ್ಲಿರುವ ನರ್ಸರಿಯ ಎದರು ರಸ್ತೆಯ ಎಡಬದಿಯಲ್ಲಿ ಕಾರನ್ನು ನಿಲ್ಲಿಸಿ ಮಹಮ್ಮದ್ ಸಮೀರ ಎಂಬರ ಮನೆಗೆ ಹೋಗಿರುವ ಸಮಯ ಸುಮಾರು ರಾತ್ರಿ 12:15 ಗಂಟೆಗೆ ಕಾರಿನ ಬಳಿ ದೊಡ್ಡ ಶಬ್ದ ಬಂದ ಕಾರಣ ಸಮೀರ್ ಮತ್ತು ಪಿರ್ಯಾದುದಾರರು ಕೂಡಲೇ ಕಾರಿನ ಬಳಿ ಬಂದು ನೋಡಿದಾಗ ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಒಂದು ಟ್ಯಾಂಕರ್ ಲಾರಿ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಲಾರಿಯನ್ನು ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಕಾರಿನ ಹಿಂಬದಿಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಕಾರು ಮುಂದಕ್ಕೆ ಚಲಿಸಿ ಸಂಪೂರ್ಣ ಜಖಂಗೊಂಡಿರುತ್ತದೆ. ಅಪಘಾತವುಂಟು ಮಾಡಿದ ಟ್ಯಾಂಕರ್ ಲಾರಿ ನಂಬ್ರ ಕೆಎ 51 ಎಎಫ್ 6239 ಆಗಿದ್ದು, ಅದರ ಚಾಲಕನ ಹೆಸರು ಚಂದ್ರಶೇಖರ ಎಂಬುದಾಗಿ ನಂತರ ತಿಳಿದು ಬಂದಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ: 113/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ. ರಾಧಾಕೃಷ್ಣ ಪ್ರಾಯ 45 ವರ್ಷ ತಂದೆ: ಮುದರ ವಾಸ: ಅಡ್ಪಂಗಾಯ ಮನೆ, ಅಜ್ಜಾವರ ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ರಾಧಾಕೃಷ್ಣ ರವರ ತಂದೆ ಮುದರ, ಪ್ರಾಯ: 85 ವರ್ಷ ಎಂಬವರು ದಿನಾಂಕ: 15.09.2022 ರಂದು ಅಜ್ಜಾವರ ಪೇಟೆಗೆ ಬಂದಿದ್ದವರು ವಾಪಾಸು ಮನೆಗೆ ಬರುತ್ತಾ ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ನೀಲಗಿರಿ ಅಡ್ಕ ಬಳಿ ತಲುಪಿದಾಗ ಪಿರ್ಯಾದಿದಾರರು ಅವರ ಸಂಬಂಧಿ ಅಶ್ವಿನ್ ರವರೊಂದಿಗೆ ಆಟೋರಿಕ್ಷಾದಲ್ಲಿ ಅಜ್ಜಾವರ ಪೇಟೆಗೆ ಬರುತ್ತಿರುವ ಸಮಯ ಸುಮಾರು 11:15 ಗಂಟೆಗೆ ಅಜ್ಜಾವರ ಕಡೆಗೆ ಮೋಟಾರ್ ಸೈಕಲೊಂದನ್ನು ಅದರ ಬಾಬ್ತು ಸವಾರ ಜಿಗ್ ಜಾಗ್ ರೀತಿಯಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ಪಿರ್ಯಾದಿದಾರರ ತಂದೆಯವರಿಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಪಿರ್ಯಾದಿದಾರರ ತಂದೆಯವರು ರಸ್ತೆ ಬದಿ ಬಿದ್ದಿದ್ದು, ಕೂಡಲೇ ಪಿರ್ಯಾದಿದಾರರು ಮತ್ತು ಜೊತೆಯಲ್ಲಿದ್ದ ಅಶ್ವಿನ್ ರವರು ಹಾಗೂ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರ ಪಿರ್ಯಾದಿದಾರರ ತಂದೆಯವರನ್ನು ಉಪಚರಿಸಿ ನೋಡಲಾಗಿ ಅವರ ಎರಡು ಕಾಲಿಗೆ ತೀವ್ರ ಸ್ವರೂಪದ ಮತ್ತು ಹಣೆಗೆ ರಕ್ತ ಗಾಯವಾಗಿದ್ದು, ಅವರನ್ನು ಉಪಚರಿಸಿ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾದಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಅಪಘಾತ ಉಂಟು ಮಾಡಿದ ಮೋಟಾರ್ ಸೈಕಲ್ ನಂಬ್ರ KA19 EW5696 ಆಗಿದ್ದು, ಅದರ ಸವಾರನ ಹೆಸರು ಕೌಶಿಕ್ ಎಂಬುದಾಗಿ ತಿಳಿದಿದ್ದು, ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಅಪಘಾತದಲ್ಲಿ ಗಾಯಗೊಂಡಿದ್ದ ಮುದರ, ಪ್ರಾಯ: 85 ವರ್ಷ, ತಂದೆ: ಪೊಕ್ಕಡೆ ವಾಸ:ಅಡ್ಪಂಗಾಯ ಮನೆ, ಅಜ್ಜಾವರ ಗ್ರಾಮ,ಸುಳ್ಯ ತಾಲೂಕು ಎಂಬವರು ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರು, ಚಿಕಿತ್ಸೆ ಸ್ಪಂದಿಸದೇ ದಿನಾಂಕ 03.10.2022 ರಂದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ.ಕ್ರ 102/2022 ಕಲಂ 279, 304 (ಎ) ಐಪಿಸಿ ಪ್ರಕರಣ ದಾಖಲಾಗಿರುತ್ತದೆ
ಕಳವು ಯತ್ನ ಪ್ರಕರಣ: ೦1
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸೀತಾರಾಮ ಪ್ರಾಯ:38 ವರ್ಷ ತಂದೆ: ನಾರಾಯಣ ಪೂಜಾರಿ ವಾಸ: ಕರಾವಳಿ ಸೈಟ್ ಮನೆ, ಬೆಂಜನಪದವು ಕಳ್ಳಿಗೆ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ, ಹೋಲಿ ಫ್ಯಾಮಿಲಿ ಎಂಬ ಹೆಸರಿನ ಮಾಲೀಕತ್ವದ ಲಾರಿಗಳ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದು, ಸದ್ರಿ ಲಾರಿಗಳಲ್ಲಿ ಹಗಲು ಹೊತ್ತಿನಲ್ಲಿ ಸರಕು ಸಾಗಾಣಿಕೆ ಮಾಡಿ ರಾತ್ರಿ ಮನೆಯ ಸಮೀಪ ಹತ್ತಿರದ ಕಂಪೌಂಡ್ನ ಒಳಗೆ ನಿಲ್ಲಿಸಿ ಬೀಗ ಹಾಕಿ ಹೋಗುವುದಾಗಿದೆ. ಅದರಂತೆ ನಿನ್ನೆ ದಿನಾಂಕ:02-10-2022 ರಂದು ಸಂಜೆ 6.30 ಗಂಟೆಗೆ ಕೆಎ 19 ಸಿ 7990 ಮತ್ತು ಕೆಎ 19 ಎಎ 6067 ನಂಬರಿನ ಲಾರಿಯನ್ನು ಬೆಂಜನಪದವು ಕಲ್ಪನೆ ಎಂಬಲ್ಲಿ ಕಂಪೌಂಡ್ ಒಳಗೆ ನಿಲ್ಲಿಸಿ ಹೋಗಿದ್ದು, ದಿನಾಂಕ:03-10-2022 ರಂದು ಬೆಳಿಗ್ಗೆ 7.00 ಗಂಟೆಗೆ ಲಾರಿಯನ್ನು ತೆಗೆಯಲು ಹೋದ ಸಮಯ ಕೆಎ 19 ಸಿ 7990 ನಂಬ್ರದ ಲಾರಿಯ ಒಂದು ಬ್ಯಾಟರಿ ಮತ್ತು ಕೆಎ 19 ಎಎ 6067 ನಂಬ್ರದ ಲಾರಿಯ ಎರಡು ಬ್ಯಾಟರಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಚಾಲಕರು ತಿಳಿಸಿದಂತೆ ನೋಡಲಾಗಿ ಬ್ಯಾಟರಿ ಕಳವಾಗಿರುತ್ತದೆ. ಸದ್ರಿ ಕಳವಾದ ಬ್ಯಾಟರಿ ಮೌಲ್ಯ ರೂ.33,000/- ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ: 91/2022 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: 01
ಧರ್ಮಸ್ಥಳ ಪೊಲೀಸ್ ಠಾಣೆ : ಪೊಲೀಸ್ ಉಪ ನಿರೀಕ್ಷಕರು ಧರ್ಮಸ್ಥಳ ಪೊಲೀಸ್ ಠಾಣೆ ರವರು ದಿನಾಂಕ 02.10.2022 ರಂದು ಗಾಂಧಿ ಜಯಂತಿ ಪ್ರಯುಕ್ತ ಠಾಣಾ ವ್ಯಾಪ್ತಿಯಲ್ಲಿ ಅಮಲು ಪಧಾರ್ಥ ಮಾರಾಟ ನಿಷೇದದ ಬಗ್ಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಸಮಯ ಸುಮಾರು 19.00 ಗಂಟೆ ಸಮಯಕ್ಕೆ ಬಾತ್ಮಿದಾರರಿಂದ ಬಂದ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಹಾಗೂ ಪಂಚರನ್ನು ಕರೆದುಕೊಂಡು ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಸೀಟು ಎಂಬಲ್ಲಿ ಕಾಯರ್ತೋಡಿ ಮುಳ್ಳಾರು ರಸ್ತೆ ಎಂಬಲ್ಲಿಗೆ ಸುಮಾರು 20.00 ಗಂಟೆಗೆ ತಲುಪುತ್ತಿದ್ದಂತೆಯೇ ದೇಜಪ್ಪ ಎಂಬಾತನು ಬೈಕ್ ನಲ್ಲಿ ಕುಳಿತುಕೊಂಡು ಬೈಕ್ನ ಮೇಲೆ ಗೋಣಿ ಚೀಲವನ್ನು ಇಟ್ಟುಕೊಂಡಿದ್ದವನು ಪೊಲೀಸ್ ಜೀಪು ಹತ್ತಿರ ಬರುತ್ತಿದ್ದಂತೆ ಮೋಟಾರ್ ಸೈಕಲ್ ನಿಂದ ಇಳಿದು ಮೋಟಾರ್ ಸೈಕಲ್ ಮತ್ತು ಮೋಟಾರ್ ಸೈಕಲ್ ನ ಮೇಲೆ ಇಟ್ಟಿದ್ದ ಗೋಣಿ ಚೀಲದ ಕಟ್ಟನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಗೋಣಿ ಚೀಲದಲ್ಲಿ ಅದರೊಳಗೆ ಸುಮಾರು 180 ಎಮ್ ಎಲ್ ನ Prestige WHISKY ಎಂದು ಬರೆದಿರುವ ಮದ್ಯ ತುಂಬಿದ ಪ್ಲಾಸ್ಟಿಕ್ ಬಾಟ್ಲಿಗಳು -26 ಇದ್ದು, ಒಟ್ಟು 4.680 ಲೀಟರ್ ನ ಮದ್ಯ ಇದ್ದು, ಸ್ವಾಧೀನ ಪಡಿಸಿಕೊಂಡ 180 ಎಂ.ಎಲ್ ಮದ್ಯದ ತುಂಬಿದ Prestige WHISKY ಪ್ಲಾಸ್ಟಿಕ್ ಬಾಟಲಿಯ ಒಂದರ ಬೆಲೆ 70.26 ರೂ ಆಗಿದ್ದು, ಒಟ್ಟು 26 ಮಧ್ಯದ ತುಂಬಿದ ಬಾಟ್ಲಿಗಳ ಒಟ್ಟು ಬೆಲೆ 1,826.76 ರೂ ಆಗಿದ್ದು, ಅಲ್ಲದೇ ತಕ್ಷೀರಿಗೆ ಉಪಯೋಗಿಸಿದ ಮೋಟಾರ್ ಸೈಕಲ್ ನ ಅಂದಾಜು ಮೌಲ್ಯ ರೂ 20,000/- ರೂ ಆಗಿರುತ್ತದೆ. ಆಪಾದಿತನು ಹಣ ಮಾಡುವ ಉದ್ದೇಶದಿಂದ ಎಲ್ಲಿಂದಲೋ ಮದ್ಯವನ್ನು ಕಡಿಮೆ ದರದಲ್ಲಿ ಖರೀದಿಸಿ ಸಾರ್ವಜನಿಕರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಗಾಂಧಿ ಜಯಂತಿ ದಿನದಂದು ಅನದಿಕೃತವಾಗಿ ಈ ಕೃತ್ಯವನ್ನು ನಡೆಸುತ್ತಿರುವುದನ್ನು ಪತ್ತೆ ಹಚ್ಚಿ ಆತನ ವಿರುದ್ದ ಕ್ರಮ ಜರಗಿಸಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಅ.ಕ್ರ 69/2022 ಕಲಂ 32,34 ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪೂವಪ್ಪ(50) ತಂದೆ: ಗೋಪಾಲ ಬೆಳ್ಚಡ ವಾಸ: ವಳವೂರು ಮನೆ, ತುಂಬೆ ಗ್ರಾಮ, ಬಂಟ್ವಾಳ ತಾಲೂಕುಎಂಬವರ ದೂರಿನಂತೆ, ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು ಪಿರ್ಯಾದುದಾರರ ತಮ್ಮ ಹರೀಶ್ ಮದುವೆಯಾಗಿ ಆತನ ಪತ್ನಿ ತುಳಸಿಯೊಂದಿಗೆ ಪ್ರತ್ಯೇಕ ಮನೆ ಮಾಡಿ ತುಂಬೆ ಗ್ರಾಮದ ವಳವೂರು ಎಂಬಲ್ಲಿ ವಾಸವಾಗಿದ್ದು, ದಿನಾಂಕ: 03.10.2022 ರಂದು ಸಂಜೆ 04.15 ಗಂಟೆಗೆ ಪಿರ್ಯಾದುದಾರರಿಗೆ ಕರೆ ಮಾಡಿ ಮನೆಯ ಹತ್ತಿರದ ಬಾವಿಯಲ್ಲಿ ಹರೀಶ್ ನ ಚಪ್ಪಲಿಗಳು ತೇಲುತ್ತಿದ್ದು ಹರೀಶ್ ಬಾವಿಗೆ ಬಿದ್ದಿರುವ ಬಗ್ಗೆ ಸಂಶಯವಿದ್ದು ಕೂಡಲೇ ಬನ್ನಿ ಎಂದು ತಿಳಿಸಿದ್ದುದರಿಂದ, ಪಿರ್ಯಾದುದಾರರು ಸ್ಥಳಕ್ಕೆ ಬಂದು ನೋಡಿದಾಗ ನೆರೆಹೊರೆಯವರೆಲ್ಲಾ ಸೇರಿದ್ದು ನೀರಿನಾಳದಿಂದ ಮೃತ ದೇಹವನ್ನು ಮೇಲಕ್ಕೆ ಎತ್ತಿ ನೋಡಿದಾಗ ಅದು ಪಿರ್ಯಾದುದಾರರ ತಮ್ಮ ಹರೀಶ್ ನದ್ದಾಗಿದ್ದು ಮೃತಪಟ್ಟಿರುವುದಾಗಿದೆ.. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 50-2022 ಕಲಂ 174 ಸಿ ಆರ್ ಪಿಸಿ ಪ್ರಕರಣ ದಾಖಲಾಗಿರುತ್ತದೆ.